Tag: Tipu Sultan Throne

  • ಟಿಪ್ಪು ಸಿಂಹಾಸನ ಕಳಸ 15 ಕೋಟಿಗೆ ಹರಾಜು

    ಟಿಪ್ಪು ಸಿಂಹಾಸನ ಕಳಸ 15 ಕೋಟಿಗೆ ಹರಾಜು

    ಲಂಡನ್: ದಶಕಗಳ ಹಿಂದೆ ಭಾರತದಿಂದ ಲೂಟಿ ಹೊಡೆಯಲಾಗಿದ್ದ ಟಿಪ್ಪು ಸುಲ್ತಾನ್ ಸಿಂಹಾಸನನದ ಕಳಸವೊಂದನ್ನು ಬ್ರಿಟನ್ ಸರ್ಕಾರ ಹರಾಜಿಗೆ ಇಟ್ಟಿದೆ.

    ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸಿಂಹಾಸನದಲ್ಲಿ ಅಳವಡಿಸಿದ್ದ, ದಶಕಗಳ ಹಿಂದೆ ಭಾರತದಿಂದ ಲೂಟಿ ಹೊಡೆಯಲಾಗಿದ್ದ ಸಿಂಹಾಸನದ ಕಳಸವೊಂದನ್ನು ಬ್ರಿಟನ್ ಸರ್ಕಾರ ಹರಾಜಿಗೆ ಇಟ್ಟಿದೆ.

    ಹುಲಿಯ ತಲೆಯುಳ್ಳ ಈ ಐತಿಹಾಸಿಕ ಕಳಸಕ್ಕೆ 15 ಕೋಟಿ ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ. ಬ್ರಿಟನ್ ಸಂಸ್ಕೃತಿ ಇಲಾಖೆ ಇದನ್ನು ಹರಾಜಿಗೆ ಇಟ್ಟಿದೆಯಾದರೂ ಇದರ ರಫ್ತಿಗೆ ತಾತ್ಕಾಲಿಕ ನಿಷೇಧ ಇರುವುದರಿಂದ ಬ್ರಿಟನ್ ಖರೀದಿದಾರರನ್ನೇ ಹುಡುಕಲಾಗಿದೆ. ಈ ಮೂಲಕವಾಗಿ ಕಳಸವನ್ನು ಬ್ರಿಟನ್‍ನಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಸರ್ಕಾರ ಮಾಡಿದೆ. ಇದನ್ನೂ ಓದಿ: ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    1.5 ಮಿಲಿಯನ್ ಪೌಂಡ್ ಎಂದರೆ ಭಾರತದಲ್ಲಿ ಬರೋಬ್ಬರಿ 14,98,64,994 ರೂಪಾಯಿ ಆಗಿದೆ. ಇಷ್ಟೊಂದು ದೊಡ್ಡ ಮೊತ್ತಕ್ಕೆ ಹರಾಜು ಮಾಡಲಾಗುತ್ತಿದೆ. 18ನೇ ಶತಮಾನದಲ್ಲಿ ಮೈಸೂರು ರಾಜ್ಯ ಆಳುತ್ತಿದ್ದ ವೇಳೆ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು. ಆ ಪೈಕಿ ಇದು ಕೂಡಾ ಒಂದು ಆಗಿದೆ. ಇದನ್ನೂ ಓದಿ: ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಸ್ವಾತಂತ್ರ್ಯವಲ್ಲ, ಭಿಕ್ಷೆ: ಕಂಗನಾ