Tag: Tippu Jayanti

  • ಮಂಡ್ಯ| ನಿಷೇಧಾಜ್ಞೆ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ

    ಮಂಡ್ಯ| ನಿಷೇಧಾಜ್ಞೆ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ

    – ಶ್ರೀರಂಗಪಟ್ಟಣದ ಟಿಪ್ಪು ಸಮಾಧಿಗೆ ಶಾಸಕ ತನ್ವೀರ್ ಸೇಠ್ ನಮನ

    ಮಂಡ್ಯ: ಇಂದು ಟಿಪ್ಪು ಜಯಂತಿ (Tippu Jayanti) ಆಚರಣೆಗೆ ಸಿದ್ಧತೆ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ನಡುವೆಯೂ ವಿವಿಧ ಸಂಘಟನೆಗಳಿಂದ ಟಿಪ್ಪು ಜಯಂತಿ ನಡೆಸಲು ನಿರ್ಧಾರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಆಸ್ತಿ ಪಾಸ್ತಿ, ಪ್ರಾಣ ರಕ್ಷಣೆಗಾಗಿ 144 ಸೆಕ್ಷನ್ ಜಾರಿ ಮಾಡಿದ್ದು, ಶ್ರೀರಂಗಪಟ್ಟಣ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶ ನೀಡಿದ್ದಾರೆ.

    ಮೈಸೂರು (Mysuru) ಸೇರಿದಂತೆ ಹಲವೆಡೆಯಿಂದ ಜನ ಸೇರುವ ಸಾಧ್ಯತೆ ಇದ್ದು, ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೂಡಲಾಗಿದೆ. ಜಾಮಿಯಾ ಮಸೀದಿ, ಟಿಪ್ಪು ಮಡಿದ ಸ್ಥಳ, ಟಿಪ್ಪು ಸಮಾಧಿ ಸ್ಥಳ ಸೇರಿ ಪಟ್ಟಣಾದ್ಯಂದ ಪೊಲೀಸ್ ಸರ್ಪಗಾವಲಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮೆರವಣಿಗೆ, ಪ್ರತಿಭಟನೆ, ರ‍್ಯಾಲಿಗಳಿಗೆ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ

    ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ, ಪಟಾಕಿ, ಡಿಜೆ ಬಳಕೆಗೂ ನಿಷೇಧಿಸಲಾಗಿದೆ. ಘೋಷಣೆ ಕೂಗದಂತೆ, ಪ್ರಜೋಧನಕಾರಿ ಚಿತ್ರವಿರುವ ಟೀ ಶರ್ಟ್ ಧರಿಸದಂತೆಯೂ ಆದೇಶ ಮಾಡಲಾಗಿದೆ. ಟಿಪ್ಪು ಸಮಾಧಿ ಸ್ಥಳ ಗುಂಬಜ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಿ ಗೇಟ್ ಬಳಿ ಬ್ಯಾರಿಕೇಟ್ ಹಾಕಿ ನಿಗಾ ವಹಿಸಲಾಗಿದೆ. ಮಂಡ್ಯ, ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆ ಇದ್ದು, ಟಿಪ್ಪು ಸಮಾಧಿಗೆ ನಮನ ಸಲ್ಲಿಸಲು ಮುಸ್ಲಿಂ ಸಮುದಾಯದ ಜನರು ಬರುವ ಸಾಧ್ಯತೆ ಇದೆ. ಯಾವುದೇ ಗಲಾಟೆ, ಅಹಿತಕರ ಘಟನೆ ನಡೆಯದಂತೆ ಹಾಗೂ ಪ್ರವಾಸಿಗರ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತಿಗೆ ಟವೆಲ್ ಬಿಗಿದು ಹತ್ಯೆಗೈದ ಪಾಪಿ ಪತಿ

    ಟಿಪ್ಪು ಜಯಂತಿ ಹಿನ್ನೆಲೆ ಕಾಂಗ್ರೆಸ್ (Congress) ಶಾಸಕ ತನ್ವೀರ್ ಸೇಠ್ ಶ್ರೀರಂಗಪಟ್ಟಣದ ಗುಂಬಜ್‌ನಲ್ಲಿರುವ ಟಿಪ್ಪು ಸಮಾಧಿಗೆ ಬಂದು ನಮನ ಸಲ್ಲಿಸಿದರು. ಟಿಪ್ಪು, ಹೈದರಾಲಿ, ಹೈದರಾಲಿ ಪತ್ನಿ ಫಾತಿಮಾ ಅವರ ಸಮಾಧಿಗೆ ಹೂವಿನ ಚಾದರ್ ಹೊದಿಸಿ, ಸುಗಂಧ ದ್ರವ್ಯ ಹಾಕಿ ಪ್ರಾರ್ಥನೆ ಮಾಡಿದರು. ಶಾಸಕರಿಗೆ ಮುಸ್ಲಿಂ ಸಮುದಾಯದ ಮುಖಂಡರು ಸಾಥ್ ಕೊಟ್ಟರು. ಇದನ್ನೂ ಓದಿ: ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ `ಗಡ್ಡ’ ಗಲಾಟೆ – ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸುವಂತೆ ತಾಕೀತು ಆರೋಪ

  • ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಶ್ರೀರಂಗಪಟ್ಟಣದಲ್ಲಿ ನಿರ್ಬಂಧ – ನಿಷೇಧಾಜ್ಞೆ ಜಾರಿ

    ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಶ್ರೀರಂಗಪಟ್ಟಣದಲ್ಲಿ ನಿರ್ಬಂಧ – ನಿಷೇಧಾಜ್ಞೆ ಜಾರಿ

    ಮಂಡ್ಯ: ಟಿಪ್ಪು ಜಯಂತಿ (Tippu Jayanti) ಆಚರಣೆಗೆ ಚಿಂತನೆ ನಡೆಸಿರುವ ಹಿನ್ನೆಲೆ ಮಂಡ್ಯದ (Mandya) ಶ್ರೀರಂಗಪಟ್ಟಣದಲ್ಲಿ (Srirangapatna) ಇಂದು (ಶುಕ್ರವಾರ) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಟಿಪ್ಪು ವಕ್ಫ್ ಎಸ್ಟೇಟ್‌ನಿಂದ ಟಿಪ್ಪು ಜಯಂತಿ ನಡೆಸಲು ಚಿಂತನೆ ನಡೆಸಲಾಗಿದೆ. ಮೈಸೂರು ಸೇರಿದಂತೆ ಹಲವೆಡೆಯಿಂದ ಜನ ಸೇರುವ ಸಾಧ್ಯತೆಯಿದ್ದು, ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿಗೊಳಿಸಿ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶಿಸಿದ್ದಾರೆ.

    ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಮೆರವಣಿಗೆ, ಪ್ರತಿಭಟನೆ, ರ‍್ಯಾಲಿಗಳಿಗೆ ನಿರ್ಬಂಧಿಸಲಾಗಿದೆ. ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ, ಪಟಾಕಿ, ಡಿಜೆ ಬಳಕೆಗೂ ನಿಷೇಧ ಹೇರಲಾಗಿದೆ. ಘೋಷಣೆ ಕೂಗದಂತೆ, ಪ್ರಚೋದನಕಾರಿ ಚಿತ್ರವಿರುವ ಟೀ ಶರ್ಟ್ ಧರಿಸದಂತೆಯೂ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ವ್ಯಕ್ತಿ ಬಲಿ

    ಸಾರ್ವಜನಿಕರ ಆಸ್ತಿ-ಪಾಸ್ತಿ, ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ಸಾರ್ವಜನಿಕರು ಹಾಗೂ ಪ್ರವಾಸಿಗರ ಮೇಲೆ ನಿಗಾವಹಿಸಲಾಗುತ್ತಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪುಂಡರ ಹುಚ್ಚಾಟ – ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂ

  • ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ (Idgah Maidan) ಕೊನೆಗೂ ಟಿಪ್ಪು ಜಯಂತಿ (Tippu Jayanti) ಆಚರಣೆಯಾಗಿದೆ. ಶ್ರೀರಾಮ ಸೇನೆ ಮತ್ತು ತಮ್ಮ ಪಕ್ಷದ ಜಿಲ್ಲಾಧ್ಯಕ್ಷರ ತೀವ್ರ ವಿರೋಧದ ನಡುವೆಯೂ ಪಾಲಿಕೆಯಿಂದ ಅಧಿಕೃತ ಅನುಮತಿ ಪಡೆದ ಎಎಂಐಎಂ (AMIM) ಪಕ್ಷದ ಮುಖಂಡರು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಂತೆ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ.

    ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹು-ಧಾ ಮಹಾನಗರ ಪಾಲಿಕೆ ಅಧಿಕೃತ ಘೋಷಣೆ ಹೊರಡಿಸುತ್ತಿದ್ದಂತೆ ಪರ ವಿರೋಧ ಚರ್ಚೆ ಆರಂಭವಾಗಿದ್ದವು. ಅನುಮತಿ ಕೇಳಿದ್ದ ಸ್ವತಃ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷರೇ ಮೈದಾನದಲ್ಲಿ ಜಯಂತಿ ಬೇಡ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಶ್ರೀರಾಮಸೇನೆ ಮತ್ತು ವಿಪಕ್ಷ ಕಾಂಗ್ರೆಸ್ ಸಹ ಪಾಲಿಕೆ ನಿರ್ಣಯದ ವಿರುದ್ಧ ಕೆಂಡಾಮಂಡಲವಾಗಿದ್ದವು. ಹೀಗಾಗಿ ಇಂದು ಎಲ್ಲರ ಚಿತ್ತ ಈದ್ಗಾ ಮೈದಾನದತ್ತ ಎಂಬುವಂತಾಗಿತ್ತು.

    ಇಂದು ನಿರೀಕ್ಷೆಯಂತೆ ಎಐಎಂಐಎಂ ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಮತ್ತು ಇತರ ಸದಸ್ಯರು ಈದ್ಗಾ ಮೈದಾನದಲ್ಲಿ ಟಿಪ್ಪು ಭಾವ ಚಿತ್ರವಿಟ್ಟು, ಪುಷ್ಪಾಪರ್ಣೆ ಮಾಡಿ, ಟಿಪ್ಪು ಪರ ಜಯಘೋಷ ಹಾಕುವ ಮೂಲಕ ಜಯಂತಿ ಆಚರಣೆ ಮಾಡಿದರು. ಈ ಮೂಲಕ ಈದ್ಗಾ ಮೈದಾನ ಈಗ ಸಾರ್ವಜನಿಕವಾಗಿದ್ದು, ಪಾಲಿಕೆ ಅನುಮತಿ ಪಡೆದು ಯಾವ ಸಮುದಾಯವಾದರೂ ಮಹಾನಾಯಕರ ಜಯಂತಿ ಆಚರಣೆಗೆ ಮುಕ್ತವಾಗಿದೆ. ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ: ಮುತಾಲಿಕ್

    ಇಷ್ಟು ದಿನ ವಿವಾದದ ಕೇಂದ್ರ ಬಿಂದುವಾಗಿದ್ದ ಈದ್ಗಾ ಮೈದಾನ ಈಗ ಸಾರ್ವಜನಿಕವಾಗಿದೆ. ಕೇವಲ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಸಮುದಾಯಗಳ ಜಯಂತಿ ಆಚರಣೆಗೆ ಮುಕ್ತವಾಗಿದೆ. ಸರ್ವ ಧರ್ಮಗಳ ಹಿತಕ್ಕಾಗಿ ಪಾಲಿಕೆ ತೆಗೆದುಕೊಂಡ ಐತಿಹಾಸಿಕ ನಿರ್ಣಯ ಪರಿಣಾಮ ಇದಾಗಿದ್ದು, ಇನ್ನು ಮುಂದೆಯಾದರೂ ಈದ್ಗಾ ಮೈದಾನಕ್ಕಿರುವ ರಕ್ತಸಿಕ್ತ ಇತಿಹಾಸದ ಕಳಂಕ ದೂರವಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಲಿ ಎನ್ನುವುದು ಹು-ಧಾ ಜನರ ಆಶಯ. ಇದನ್ನೂ ಓದಿ: ಪಕ್ಷಕ್ಕೆ ಡ್ಯಾಮೇಜ್‌ ತಡೆಯಲು ಹೇಳಿಕೆ ವಾಪಸ್‌ – ಸತೀಶ್‌ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯಗೆ ದೇವಸ್ಥಾನದ ಮೇಲೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಆಚರಿಸುತ್ತಿರಲಿಲ್ಲ: ಪ್ರತಾಪ್ ಸಿಂಹ

    ಸಿದ್ದರಾಮಯ್ಯಗೆ ದೇವಸ್ಥಾನದ ಮೇಲೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಆಚರಿಸುತ್ತಿರಲಿಲ್ಲ: ಪ್ರತಾಪ್ ಸಿಂಹ

    ಮೈಸೂರು: ಸಿದ್ದರಾಮಯ್ಯ ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನು ತಮ್ಮ ಆಡಳಿತದಲ್ಲಿ ಮಾಡಲಿಲ್ಲ. ದೇವಸ್ಥಾನದ ಮೇಲೆ ಸಿದ್ದರಾಮಯ್ಯನವರಿಗೆ ಪ್ರೀತಿಯಿದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

    ಬಿಜೆಪಿ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದರು.  ಇದನ್ನೂ ಓದಿ: ಹಟ್ಟಿ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರನ ಗುಂಡಾಗಿರಿ, ಎಫ್‍ಐಆರ್ ದಾಖಲು

    ಸಿದ್ದರಾಮಯ್ಯನವರಿಗೆ ಹಿಂದೂ ದೇವಸ್ಥಾನಗಳ ಮೇಲೆ ಪ್ರೀತಿಯಿದ್ದಿದ್ದರೆ ಅವರ ಆಡಳಿತದಲ್ಲಿ ಈ ತಪ್ಪು ಆದೇಶವನ್ನು ತಿದ್ದಬಹುದಿತ್ತು. ಸಿದ್ದರಾಮಯ್ಯ ಅವರು ಆಡಳಿತವಾಧಿಯಲ್ಲಿ ಕೋರ್ಟ್ ಗೆ ವರದಿ ಕೊಡಬೇಕಿತ್ತು. 8 ವಾರದಲ್ಲಿ ವರದಿ ನೀಡಲು ಕೋರ್ಟ್ ಗಡುವು ನೀಡಿತ್ತು. ಆದರೆ ಅವರು ಆ ಕೆಲಸ ಮಾಡಿರಲಿಲ್ಲ ಎಂದು ದೂರಿದರು.

    2018ರ ಫೆಬ್ರವರಿ 6ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ ಆದೇಶ ಕೊಟ್ಟಿದೆ. ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ತಪ್ಪು ಮಾಡಿದರು. ನಿಮ್ಮ ಆಡಳಿತದಲ್ಲಿ ಆ ತಪ್ಪು ಮುಂದುವರೆಯಿತು. ಐಎಎಸ್ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ವಿವರಣೆಯನ್ನು ಕೊಡುತ್ತಿಲ್ಲ. ಇದು ಅಧಿಕಾರಿಗಳು ಮಾಡಿರುವ ತಪ್ಪು. ಇದನ್ನು ಸುಮ್ಮನೆ ರಾಜಕಾರಣಿಗಳು ತಮ್ಮ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದರು. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್

    ಎರಡು ಸರ್ಕಾರದಿಂದಲೂ ತಪ್ಪಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪನ್ನು ಸರಿಯಾಗಿ ಯಾವ ಸರ್ಕಾರವು ಗಮನಿಸಿಲ್ಲ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಗಮನಿಸಿ ಸರಿಪಡಿಸಬಹುದಿತ್ತು. ಅವರು ಕೂಡ ಆ ಕೆಲಸವನ್ನು ಮಾಡಲಿಲ್ಲ. ಈಗ ದೇವಸ್ಥಾನದ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. ಹಿಂದೂಗಳು ಹಾಗೂ ದೇವಸ್ಥಾನಗಳ ಮೇಲೆ ಅವರಿಗೆ ಪ್ರೀತಿಯಿದ್ದರೆ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ. ರಾಜಕೀಯ ಲಾಭಕ್ಕಾಗಿ, ವೋಟಿಗಾಗಿ ವೀರಶೈವ ಲಿಂಗಾಯತ ಜಾತಿ ಒಡೆಯುವ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ನಾನು ಯಾರ ಮೇಲು ಗೂಬೆ ಕೂರಿಸಲು ಬಂದಿಲ್ಲ. ಅಧಿಕಾರಿಗಳು ಮಾಡುವ ಲೋಪಗಳಿಗೆ ಜನಪ್ರತಿನಿಧಿಗಳು ಹೊಡೆದಾಡುವುದು ಸರಿಯಲ್ಲ. ಧರ್ಮದ ಮೇಲೆ ಯಾರಿಗೆ ಎಷ್ಟು ಪ್ರೀತಿ ಎನ್ನುವುದು ಎಲ್ಲರಿಗೂ ಗೊತ್ತು. ಆಗಿರುವ ಲೋಪಗಳನ್ನು ಸರ್ಕಾರ ಹೊಸ ಆದೇಶ ಹೊರಡಿಸಿ ಸರಿಮಾಡಬೇಕು ಎಲ್ಲಾ ಧರ್ಮಗಳ ಜಾತಿಗಳ ಹಿತ ಕಾಯುವ ಕೆಲಸವಾಗಬೇಕು ಅದನ್ನು ಬಿಟ್ಟು ಈ ರೀತಿ ರಾಜಕಾರಣ ಸರಿಯಲ್ಲ ಎಂದು ಹೇಳಿದರು.

  • ಟಿಪ್ಪು ಜಯಂತಿ ರದ್ದು – ಮಡಿಕೇರಿಯಲ್ಲಿ ಸಹಜ ಸ್ಥಿತಿ

    ಟಿಪ್ಪು ಜಯಂತಿ ರದ್ದು – ಮಡಿಕೇರಿಯಲ್ಲಿ ಸಹಜ ಸ್ಥಿತಿ

    ಮಡಿಕೇರಿ: ವಿವಾದಾತ್ಮಕ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ನಿಷೇಧ ಮಾಡುತ್ತಿದ್ದಂತೆ ಕೊಡಗಿನಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ.

    ಕಳೆದ ನಾಲ್ಕು ವರ್ಷಗಳಿಂದ ನವೆಂಬರ್ 10 ಎಂದರೆ ಒಂದು ರೀತಿಯ ಆತಂಕ, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುತಿತ್ತು. ಆದರೆ ಈ ಬಾರಿ ಸರ್ಕಾರ ಟಿಪ್ಪು ಜಯಂತಿಯನ್ನು ಸರ್ಕಾರ ನಿಷೇಧಿಸಿದ್ದರಿಂದ ಕೊಡಗಿನಲ್ಲಿ ಖಾಸಗಿಯಾಗಿಯೂ ಟಿಪ್ಪು ಜಯಂತಿಯನ್ನು ಆಚರಿಸದಂತೆ ಜಿಲ್ಲಾಡಳಿತ ನಿಷೇಧ ಮಾಡಿದೆ.

    ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ಸಂಪೂರ್ಣ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಆಯಕಟ್ಟಿನ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದು, ಮಡಿಕೇರಿ ನಗರಾದ್ಯಂತ ಖಾಕಿ ಕಣ್ಗಾವಲು ಇದೆ. ಹೀಗಾಗಿ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಿದ್ದು, ಸಹಜ ಸ್ಥಿತಿಯಲ್ಲಿದೆ.

    ಮತ್ತೊಂದೆಡೆ 2015 ರಲ್ಲಿ ಟಿಪ್ಪುಜಯಂತಿ ಸಂದರ್ಭ ಮೃತಪಟ್ಟ ಹಿಂದೂ ಸಂಘಟನೆ ಕಾರ್ಯಕರ್ತ ಕುಟ್ಟಪ್ಪ ಅವರ ಸ್ಮರಣಾರ್ಥ ಮಡಿಕೇರಿಯಲ್ಲಿ ವಿಶೇಷ ಪೂಜೆ ನಡೆಯಿತು. ಮಡಿಕೇರಿಯ ಓಂಕಾರೇಶ್ವರ ದೇವಾಯಲಕ್ಕೆ ತೆರಳಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಿಶೇಷ ಪೂಜೆ, ಅರ್ಚನೆ ಮಾಡಿಸಿ ಪ್ರಸಾದ ಹಂಚಿದರು. ಈ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ನರಸಿಂಹ ಟಿಪ್ಪು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಕೋಲಾರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಿಗೆ ಬಿಜೆಪಿ ದೇಶದ್ರೋಹ ಪಟ್ಟ ಕಟ್ಟಿದೆ. ಅದು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತ. ಅವರ ಕೈಯಲ್ಲಿ ಅಧಿಕಾರಿವಿದೆ ಹಾಗಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ಆರೋಪಿಸಿದ್ದಾರೆ.

    ಕೋಲಾರದ ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಯಾರ ಪರ ಇದ್ದವರು, ಅಂತಹವರ ವಿರುದ್ಧ ಹೋರಾಟ ಮಾಡಿದವರಿಗೆ ದೇಶ ದ್ರೋಹದ ಪಟ್ಟಿ ಕಟ್ಟಿದವರು ಬಿಜೆಪಿಯವರು ಎಂದು ವಾಗ್ದಾಳಿ ಮಾಡಿದರು.

    ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡವರು ಟಿಪ್ಪು ಸುಲ್ತಾನ್. ಬಿಜೆಪಿ ಅವರು ಇತಿಹಾಸ ತಿರುಚಲು ಹೊರಟಿದ್ದಾರೆ. ಅವರ ಕೈಯಲ್ಲಿ ಅಧಿಕಾರವಿದೆ ಅವರು ಮಾತನಾಡುತ್ತಾ ಇದ್ದರೆ. ವೈಯಕ್ತಿಕ ಆರೋಪಗಳು ಮಾಡುವುದು ಸರಿಯಲ್ಲ, ನಮಗೆ ಈ ವಿಚಾರವಾಗಿ ಸಹಮತ ಇಲ್ಲ. ಆದರೆ ಕೆಲವರು ಅವರೇನೇ ಮಾಡಿದರು ಸರಿ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಬಿಜೆಪಿ ಸರ್ಕಾರ ನೂರು ದಿನ ಪೂರೈಸಿರುವುದು ಸಮಾಧಾನ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಸಮಾಧಾನ ಅವರಿಗೂ ಇಲ್ಲ, ನಮಗೂ ಇಲ್ಲ. ಇದೇ ವೇಳೆ ಸಿಎಂ ಯಡಿಯೂರಪ್ಪ ಆಡಿಯೋ ವಿಚಾರವಾಗಿ ಮಾತನಾಡಲು ನಿರಾಕರಿಸಿದ ಅವರು, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಅಜೆಂಡಾ ಜಾತ್ಯತೀತವಾಗಿದ್ದು ಅದನ್ನು ಸ್ವಾಗತಿಸುತ್ತೇನೆ. ಪವನ್ ಕಲ್ಯಾಣ್ ಒಳ್ಳೆಯ ಆದರ್ಶಗಳನ್ನು ಹೊಂದಿರುವ ವ್ಯಕ್ತಿ, ವಯಸ್ಸಿನಲ್ಲಿ ದೊಡ್ಡವನಾದ ಕಾರಣ ಆಶೀರ್ವಾದ ಮಾಡಿದ್ದೇನೆ ಎಂದು ತಿಳಿಸಿದರು.

  • ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ – ಚಿತ್ರದುರ್ಗ ಕೋರ್ಟಿನಿಂದ ಮೇವಾನಿಗೆ ಜಾಮೀನು

    ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ – ಚಿತ್ರದುರ್ಗ ಕೋರ್ಟಿನಿಂದ ಮೇವಾನಿಗೆ ಜಾಮೀನು

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ 1ನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ಆರೋಪಿಗಳಿಗೆ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಇಂದು ಚಿತ್ರದುರ್ಗದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೇವಾನಿ ಅವರಿಗೆ 25 ಸಾವಿರದ ಬಾಂಡ್ ಹಾಗೂ ವ್ಯಕ್ತಿಯೊಬ್ಬರು ನೀಡಿದ ಶ್ಯೂರಿಟಿ ಮೇರೆಗೆ ನ್ಯಾಯಾಧೀಶರಾದ ಶಂಕರಪ್ಪ.ಬಿ.ಮಾಲಾಶೆಟ್ಟಿ ಜಾಮೀನು ಮಂಜೂರು ಮಾಡಿದರು. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 2ಕ್ಕೆ ಮುಂದೂಡಿಕೆಯಾಗಿದೆ.

    ಏನಿದು ಪ್ರಕರಣ?
    ಕಳೆದ ವಿಧಾನಸಭೆ ಚುನಾವಣೆ ವೇಳೆ ಏಪ್ರಿಲ್ 6, 2018 ರಂದು ಚಿತ್ರದುರ್ಗದಲ್ಲಿ ನಡೆದ ಸಂವಾದದಲ್ಲಿ ಮತನಾಡುವಾಗ ಮೋದಿ ಸಮಾವೇಶಕ್ಕೆ ತೆರಳಿ, ಅವರ ಮೇಲೆ ಕುರ್ಚಿ ಎಸೆದು ಗಲಾಟೆ ಮಾಡಿ ಎಂದು ಮೇವಾನಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಹೀಗಾಗಿ ಕಾರ್ಯಕ್ರಮ ಸಂಘಟಕ ಟಿ.ಶಫಿವುಲ್ಲಾ ಹಾಗೂ ಜಿಗ್ನೆಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ನಗರ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಈ ಸಂಬಂಧ ಚಿತ್ರದುರ್ಗ ನ್ಯಾಯಾಲಯಕ್ಕೆ ಜಿಗ್ನೇಶ್ ಮೇವಾನಿ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಅವರು, ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ನಾನು ಆ ರೀತಿ ಹೇಳಿಲ್ಲ, ಅಸಲಿಗೆ ನನಗೆ ಮೋದಿ ಯಾರು ಎನ್ನುವುದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಬಿಜೆಪಿ ವಿರುದ್ಧ ಕಿಡಿ:
    ಹಿಂದೂ ತುಷ್ಠೀಕರಣಕ್ಕಾಗಿ ಟಿಪ್ಪು ಹೆಸರು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ. ಆರೆಸ್ಸೆಸ್, ಬಿಜೆಪಿಯವರ ಹಿಡನ್ ಅಜೆಂಡಾ ಇದಾಗಿದ್ದು, ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವ ಮೂಲಕ ಮುಸ್ಲಿಂ ಸಮುದಾಯವನ್ನು ದಮನ ಮಾಡುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಹಿಂದೂ ಮುಸ್ಲಿಂ ಸಮುದಾಯಗಳನ್ನು ವಿಭಜಿಸಲಾಗುತ್ತಿದ್ದು, ಆರೆಸ್ಸೆಸ್ ಕೋಮುವಾದಿ ಮನಸ್ಥಿತಿಯಿಂದ ಕೆಲಸ ಮಾಡುತ್ತಿದೆ. ವೈವಿಧ್ಯತೆಯಲ್ಲೂ ಏಕತೆಯಿಂದಿರುವುದೇ ದೇಶದ ಸೌಂದರ್ಯವಾಗಿದೆ. ಏಕತೆಯನ್ನು ನಾವು ಪಾಲಿಸಬೇಕಿದೆ ಎಂದರು.

    ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವಾಡುತ್ತಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಬಳಿ ಯಾವುದೇ ಉತ್ತರವಿಲ್ಲ. ಹೀಗಾಗಿ ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಇಂಥ ತಂತ್ರ ಹೂಡುತ್ತಿದ್ದಾರೆ. ಪ್ರಧಾನಿ ಮೋದಿ ಚಹಾ ಮಾರಿದ ಮಾತು ಚೈಲ್ಡಿಶ್, ಜೋಕ್ ಆಫ್ ದಿ ಸೆಂಚೂರಿ. ಚಹಾ ಮರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗ ದೇಶ ಮಾರುತ್ತಿದ್ದಾರೆ. ಆರೆಸ್ಸೆಸ್, ಬಿಜೆಪಿಗೆ ದಲಿತರು, ಮುಸ್ಲಿನರು 2ನೇ ದರ್ಜೆ ನಾಗರೀಕರು. ಕೆಲಸಕ್ಕೆ ಮಾತ್ರ ಬಳಸಿಕೊಳ್ಳುವುದು ಅವರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.

  • ಬಿಜೆಪಿಗೆ ಟಿಪ್ಪು ಬೇಡ, ಬಿಎಸ್‍ವೈ ಜೈಲಿಗೆ ಹೋದ ವಿಚಾರವನ್ನು ಮಕ್ಕಳು ಓದಬೇಕಿದೆ – ತನ್ವೀರ್ ಸೇಠ್

    ಬಿಜೆಪಿಗೆ ಟಿಪ್ಪು ಬೇಡ, ಬಿಎಸ್‍ವೈ ಜೈಲಿಗೆ ಹೋದ ವಿಚಾರವನ್ನು ಮಕ್ಕಳು ಓದಬೇಕಿದೆ – ತನ್ವೀರ್ ಸೇಠ್

    ಮೈಸೂರು: ಬಿಜೆಪಿಯವರಿಗೆ ಟಿಪ್ಪು ಸಾಧನೆಯನ್ನು ಮಕ್ಕಳು ಓದುವುದು ಬೇಕಾಗಿಲ್ಲ, ಬದಲಿಗೆ ಯಡಿಯೂರಪ್ಪ ಜೈಲಿಗೆ ಹೋದ ವಿಚಾರವನ್ನು ಮುಂದಿನ ಪೀಳಿಗೆಯ ಮಕ್ಕಳು ಓದಬೇಕಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

    ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಪಠ್ಯವನ್ನು ತೆಗೆಯುವ ಕುರಿತ ಸಿಎಂ ಹೇಳಿಕೆ ಕುರಿತು ಮಾತನಾಡಿದ ಅವರು, ಆಪರೇಷನ್ ಕಮಲ, ಗಣಿ ಲೂಟಿ ಮಾಡಿರುವುದು ಇವರಿಗೆ ನಿಜವಾದ ಇತಿಹಾಸ. ಇದನ್ನೇ ಮುಂದಿನ ಪೀಳಿಗೆಯ ಮಕ್ಕಳು ಓದಲಿ ಎಂದು ಬಯಸಿದ್ದಾರೆ. ಬಿಜೆಪಿಯವರು ಬ್ರಿಟಿಷರ ಪರ ನಿಂತವರು, ಗಾಂಧೀಜಿಯನ್ನು ಕೊಂದವರು. ಬಿಜೆಪಿಯವರ ಇತಿಹಾಸ ಸ್ವಾತಂತ್ರ್ಯ ಪುಟದಲ್ಲಿ ಇಲ್ಲ. ಬಿಜೆಪಿಯದು ಹಿಟ್ಲರ್ ಸಾಮ್ರಾಜ್ಯಕ್ಕಿಂತ ಕೀಳು ಎಂದು ವಾಗ್ದಾಳಿ ನಡೆಸಿದರು.

    ಅಲ್ಪಸಂಖ್ಯಾತ ಸಮುದಾಯ ಟಿಪ್ಪು ಜಯಂತಿ ಮಾಡಿ ಪಠ್ಯದಲ್ಲಿ ಸೇರಿಸಲು ಕೇಳಿರಲಿಲ್ಲ. ಟಿಪ್ಪುವಿನದು ದೊಡ್ಡ ಇತಿಹಾಸ. ಅದನ್ನು ವ್ಯವಸ್ಥಿತವಾಗಿ ತಿರುಚಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಹಾಗೂ ಅವರ ಪರ ಮಾತನಾಡುವವರನ್ನು ಘಾತಕುಶಕ್ತಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

  • ಟಿಪ್ಪು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ- ಎಚ್.ಕೆ.ಪಾಟೀಲ್

    ಟಿಪ್ಪು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ- ಎಚ್.ಕೆ.ಪಾಟೀಲ್

    ಧಾರವಾಡ: ಟಿಪ್ಪು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ.

    ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಪಠ್ಯವನ್ನು ತೆಗೆಯುವ ಕುರಿತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂತ್ರಜ್ಞಾನ, ವಿಜ್ಞಾನವನ್ನು ಅಂದಿನ ಸಂದರ್ಭದಲ್ಲೇ ಹೆಚ್ಚು ಅರಿತವರು. ಟಿಪ್ಪು ಇತಿಹಾಸ ಬಹುದೊಡ್ಡದು. ತನ್ನದೆಯಾದ ನಾಡು ಕಟ್ಟಿ ಬೆಳೆಸುವಾಗ ಕೆಲ ವಿವಾದಗಳು ಆಗಿರಬಹುದು. ಆದರೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಟಿಪ್ಪು ಬಗ್ಗೆ ತೆಗೆದುಕೊಂಡ ನಿರ್ಣಯ ಖಂಡನಾರ್ಹ. ಬಿಜೆಪಿ ಸರ್ಕಾರ ವಿವಾದಾತ್ಮಕ ನಿರ್ಣಯ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಕೇವಲ ರಾಜಕೀಯಕ್ಕೆ ಮಾತ್ರ ಇವರ ಚಿಂತನೆ ಆಗಬಾರದು. ಟಿಪ್ಪು ಬಗ್ಗೆ ಓದಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಚಿನ್ನದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸ್ವಾಗತಾರ್ಹ ನಿರ್ಧಾರ. ಚಿನ್ನ-ಬೆಳ್ಳಿ ಯಾವುದೇ ಇರಲಿ ಅಕ್ರಮವಾಗಿ ಹೊಂದಲೇಬಾರದು. ಆದರೆ ಕಾನೂನುಗಳನ್ನು ಮಾಡಿದ ನಂತರ ತಪ್ಪು ಬಳಕೆ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಉಪಚುನಾವಣೆಯಲ್ಲಿ ಮಹಾರಾಷ್ಟ್ರ, ಹರ್ಯಾಣ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಆಶ್ಚರ್ಯಕರ ಫಲಿತಾಂಶ ಬರುತ್ತದೆ. ಪ್ರವಾಹ ಪೀಡಿತ ಪ್ರದೇಶದ ಜನ ಬಿಜೆಪಿ ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ. ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.

    ರಾಜ್ಯೋತ್ಸವ ಪ್ರಶಸ್ತಿಯನ್ನು ಹೊರನಾಡು, ಗಡಿನಾಡು ಕನ್ನಡಿಗರ ಹೆಸರಿನಲ್ಲಿ ತಮಗೆ ಯಾರು ಬೇಕೋ ಅವರಿಗೆ ಕೊಟ್ಟಿದ್ದಾರೆ. ಅವರದೇ ಪಕ್ಷದವರು ಇದನ್ನು ಎತ್ತಿ ತೋರಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಇದ್ದವರೇ ನಾನು ಐದು ಕೊಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಐವರು ಯಾರು ಎನ್ನುವುದನ್ನು ಸಂಸ್ಕೃತಿ ಇಲಾಖೆ ಸಚಿವರು ಸಾರ್ವಜನಿಕವಾಗಿ ಹೇಳಬೇಕು. ಇಲ್ಲದಿದ್ದರೆ ಎಲ್ಲ 60 ಜನ ಪುರಸ್ಕೃತರಿಗೆ ನೋವು ಮಾಡಿದಂತಾಗುತ್ತದೆ. ಪ್ರಶಸ್ತಿ ಪಡೆದವರ ಬಗ್ಗೆ ನಮ್ಮ ಅಗೌರವ ಇಲ್ಲ. ಈ ಕುರಿತು ಸ್ಪಷ್ಟವಾದ ವಿವರಣೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಪ್ರಶಸ್ತಿ ಬರಬೇಕಿತ್ತು ಎಂದರು.

  • ಮುಂದಿನ ಪೀಳಿಗೆಗೆ ಟಿಪ್ಪುವಿನ ಮೋಸದ ಇತಿಹಾಸ ಹೇಳಿಕೊಡಬಾರದು – ಪ್ರತಾಪ್ ಸಿಂಹ

    ಮುಂದಿನ ಪೀಳಿಗೆಗೆ ಟಿಪ್ಪುವಿನ ಮೋಸದ ಇತಿಹಾಸ ಹೇಳಿಕೊಡಬಾರದು – ಪ್ರತಾಪ್ ಸಿಂಹ

    ಮೈಸೂರು: ನಮ್ಮ ಮುಂದಿನ ಪೀಳಿಗೆಗೆ ಟಿಪ್ಪುವಿನ ಮೋಸದ ಇತಿಹಾಸ ಹೇಳಿಕೊಡಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರ ಸ್ವಾಗತಾರ್ಹ ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳ ಪಠ್ಯಪುಸ್ತಕದಲ್ಲಿನ ಟಿಪ್ಪು ಪಠ್ಯ ತೆಗೆದುಹಾಕುವ ಕುರಿತ ಯಡಿಯೂರಪ್ಪನವರ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮದಕರಿ ನಾಯಕನನ್ನು ಮೋಸದಿಂದ ಕೊಂದ, ಯದುವಂಶದ ಆಡಳಿತ ಕಿತ್ತುಕೊಂಡ, ಒನಕೆ ಓಬವ್ವಳನ್ನು ಸಂಚು ಮಾಡಿ ಕೊಂದ. ಹೀಗೆ ಮೋಸದಿಂದ ವಿವಿಧ ರಾಜರುಗಳನ್ನು ಕೊಂದ ಅಪ್ಪ ಮಕ್ಕಳ ಇತಿಹಾಸ ನಮ್ಮ ಮುಂದಿನ ಪೀಳಿಗೆಗೆ ಕಲಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

    ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡಿರುವ ಬಿಎಸ್‍ವೈ ಅವರಿಗೆ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕನ್ನಡವನ್ನು ಪ್ರೀತಿಸುವ ಎಲ್ಲರೂ ಈ ವಿಚಾರಕ್ಕೆ ಬೆಂಬಲ ಕೊಡುತ್ತಾರೆ ಎಂದರು.

    ಟಿಪ್ಪು ವಿಚಾರದಲ್ಲಿ ವಿಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಿರಿಯರು ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮೈಸೂರು ಮಹಾರಾಜರು ಕಟ್ಟಿದ ಕಾಲೇಜಿನಲ್ಲಿ ಅವರು ಓದಿದ್ದಾರೆ. ಅವರು ಕಟ್ಟಿದ ಜಲಾಶಯದ ನೀರು ಕುಡಿದವರು. ಅದೆ ಮಹಾರಾಜರನ್ನು ನಾಶ ಮಾಡಿದ ಅಪ್ಪ ಮಕ್ಕಳ ಜಯಂತಿ ಆಚರಿಸುವ ನಿರ್ಧಾರ ಮಾಡುತ್ತಾರೆ. ಅಂತಹವರಿಂದ ಬೇರೆ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

    ಬಚ್ಚೆಗೌಡ ಪುತ್ರನ ಟಿಪ್ಪು ಜಯಂತಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಸಂಸದನಾಗಿ ಮೈಸೂರು ಕೊಡಗು ಜನರ ಭಾವನೆಯನ್ನು ಹೇಳಿದ್ದೇನೆ ಅಷ್ಟೇ. ಬೇರೆಯವರ ಹೇಳಿಕೆ ಕುರಿತು ನನಗೆ ತಿಳಿದಿಲ್ಲ ಎಂದರು.