Tag: tippu express

  • ನಮ್ಮ ಆಡಳಿತದಲ್ಲಿ ಟಿಪ್ಪು ಹೆಸರನ್ನು ಯಾವುದಕ್ಕೂ ಬಳಕೆ ಮಾಡುವುದಿಲ್ಲ: ಎನ್.ರವಿಕುಮಾರ್

    ನಮ್ಮ ಆಡಳಿತದಲ್ಲಿ ಟಿಪ್ಪು ಹೆಸರನ್ನು ಯಾವುದಕ್ಕೂ ಬಳಕೆ ಮಾಡುವುದಿಲ್ಲ: ಎನ್.ರವಿಕುಮಾರ್

    ರಾಯಚೂರು: ಬಿಜೆಪಿ (BJP) ಆಡಳಿತದಲ್ಲಿ ಬಸ್, ಟ್ರೈನ್ ಸೇರಿದಂತೆ ಯಾವುದಕ್ಕೂ ಟಿಪ್ಪು (Tippu) ಹೆಸರನ್ನು ಇಡುವುದಿಲ್ಲ. ಟಿಪ್ಪು ಒಬ್ಬ ದೇವಸ್ಥಾನಗಳನ್ನು ನಾಶ ಮಾಡಿದಂತಹ ಧರ್ಮಾಂಧ ಎಂದು ಎಂಎಲ್‌ಸಿ ಎನ್.ರವಿಕುಮಾರ್ (N Ravikumar) ಹೇಳಿದ್ದಾರೆ.

    ರಾಯಚೂರಿನಲ್ಲಿ (Raichur) ಮಾತನಾಡಿದ ರವಿಕುಮಾರ್, ಟಿಪ್ಪು ಎಕ್ಸ್‌ಪ್ರೆಸ್ ಬದಲು ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಆಡಳಿತದ ಅವಧಿಯಲ್ಲಿ ಟಿಪ್ಪು ಹೆಸರು ಯಾವುದಕ್ಕೂ ಬಳಕೆ ಮಾಡುವುದಿಲ್ಲ. ಟಿಪ್ಪು ದಬ್ಬಾಳಿಕೆಯಿಂದ ಮಂಡ್ಯ ಜಿಲ್ಲೆಯ ಕೆಂಪು ಕೋಟೆಯಲ್ಲಿ ಇಂದಿಗೂ ದೀಪಾವಳಿ ಆಚರಣೆ ಮಾಡಲ್ಲ ಎಂದರು.

    ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಯಚೂರಿನಿಂದ ಸಂಕಲ್ಪ ಯಾತ್ರೆ ಶುರುವಾಗಲಿದೆ. ಜನ ಸಂಕಲ್ಪ ಯಾತ್ರೆ ಗಿಲ್ಲೇಸೂಗೂರು ಗ್ರಾಮದಿಂದ ಶುರುವಾಗಲಿದೆ. ಈ ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    ಯಡಿಯೂರಪ್ಪ ಹೋದಲ್ಲಿ ಸೋಲಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿಕುಮಾರ್, ಅವರು ಈ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ. ಜನರಿಗೆ ಎಲ್ಲಾ ಗೊತ್ತಿದೆ. ಒಂದು ಸೀಟು ಬರಲ್ಲ ಎನ್ನುವ ಪರಿಸ್ಥಿತಿಯಿಂದ ಇಲ್ಲಿಯವರೆಗೆ ಬಿಜೆಪಿ ಬರಲು ಯಡಿಯೂರಪ್ಪ ಕಾರಣ. ಯತ್ನಾಳ್ ಬಗ್ಗೆ ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

    ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಯಾವ ಸರ್ಕಾರವೂ ಮಾಡದೇ ಇರುವುದನ್ನು ಬಿಜೆಪಿ ಮಾಡಿ ಬದ್ಧತೆ ತೋರಿದೆ. ಶಾಸಕರನ್ನು ನೋಡಿ ಮೀಸಲಾತಿ ಹೆಚ್ಚಳ ಮಾಡಿಲ್ಲ. ಬಸವಣ್ಣ, ಅಂಬೇಡ್ಕರ್ ವಿಚಾರ ಇಟ್ಟು ನಮ್ಮ ಸಿಎಂ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಮೀಸಲಾತಿ ಹೆಚ್ಚಳದ ಬಳಿಕ ಮೊದಲ ಕಾರ್ಯಕ್ರಮ ಗಿಲ್ಲೇಸೂಗೂರು ಗ್ರಾಮದಲ್ಲಿ ನಡೆಯುತ್ತದೆ. ಈ ವೇಳೆ ಸಿಎಂ ಬೊಮ್ಮಾಯಿಗೆ ಅದ್ಧೂರಿಯಾಗಿ ಸನ್ಮಾನ ಮಾಡುವ ಯೋಜನೆ ಮಾಡಲಾಗಿದೆ ಎಂದು ರವಿಕುಮಾರ್ ಹೇಳಿದರು. ಇದನ್ನೂ ಓದಿ: ಮಿನಿ ಪಾಕಿಸ್ತಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನ ಬಂಧನ

    Live Tv
    [brid partner=56869869 player=32851 video=960834 autoplay=true]

  • BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    ನವದೆಹಲಿ: ಬಿಜೆಪಿಯಿಂದ (BJP) ಟಿಪ್ಪು ಪರಂಪರೆಯನ್ನು ಅಳಿಸಲು ಸಾಧ್ಯವೇ ಇಲ್ಲ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಎಚ್ಚರಿಸಿದ್ದಾರೆ.

    ಬೆಂಗಳೂರು – ಮೈಸೂರು ಸಂಪರ್ಕ ಕಲ್ಪಿಸುವ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ (Tippu Express) ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ಬ್ರಿಟಿಷರ ವಿರುದ್ಧ ಟಿಪ್ಪು ಮಾಡಿದ್ದ ಮೂರು ಯುದ್ಧಗಳು (War) ಬಿಜೆಪಿಯನ್ನು ಕೆರಳಿಸಿದೆ. ಅವರು ಬೇಕಿದ್ದರೆ ಇನ್ನೊಂದು ರೈಲಿಗೆ ಒಡೆಯರ್ ಹೆಸರಿಡಬಹುದಿತ್ತು. ಏನೇ ಮಾಡಿದರೂ ಟಿಪ್ಪು ಪರಂಪರೆಯನ್ನು (Tippu Legancy) ಅಳಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಟಿಪ್ಪು ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದ್ದರು. ಈಗ ಬ್ರಿಟಿಷ್ ಗುಲಾಮರನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

    ಓವೈಸಿ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ (Amit Malviya), ಟಿಪ್ಪು ಪರಂಪರೆ ಅಳಿಸುವುದು ಬಿಜೆಪಿ ಉದ್ದೇಶವಲ್ಲ. ಟಿಪ್ಪು ಒಬ್ಬ ಅನಾಗರಿಕ, ಕೂರ್ಗ್‌ನಲ್ಲಿ ಕೊಡವರಿಗೆ, ಮಂಗಳೂರಿನಲ್ಲಿ ಸಿರಿಯನ್ ಕ್ರಿಶ್ಚಿಯನ್ನರಿಗೆ, ಕ್ಯಾಥೋಲಿಕರಿಗೆ, ಕೊಂಕಣಿಗಳಿಗೆ, ಮಲಬಾರ್‌ನ ನಾಯರ್‌ಗಳಿಗೆ ಅನೇಕ ರೀತಿಯಲ್ಲಿ ಕಷ್ಟ ಕೊಟ್ಟಿದ್ದಾನೆ. ಟಿಪ್ಪುವಿನ ನಿಜವಾದ ಪರಂಪರೆಯ ಬಗ್ಗೆ ಜನರಿಗೆ ತಿಳಿಸಲು ನಾವು ಬಯಸುತ್ತೇವೆ ಎಂದು ಉತ್ತರಿಸಿದ್ದಾರೆ.

    1980ರಲ್ಲಿ ಮೈಸೂರು -ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಸೂಪರ್ ಫಾಸ್ಟ್ ರೈಲು ಎಂದು ಪರಿಚಯಿಸಲಾದ ಟಿಪ್ಪು ಎಕ್ಸ್‌ಪ್ರೆಸ್‌ಗೆ ಈಚೆಗಷ್ಟೇ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಮರುನಾಮಕರಣ ಮಾಡಲಾಯಿತು. ಈ ಕುರಿತು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಕಳೆದ ಜುಲೈ ತಿಂಗಳಿನಲ್ಲೇ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ಎಕ್ಸ್‌ಪ್ರೆಸ್ ಇನ್ನುಮುಂದೆ ಒಡೆಯರ್ ಎಕ್ಸ್‌ಪ್ರೆಸ್ – ಶಿವಮೊಗ್ಗಕ್ಕೆ ಕುವೆಂಪು ಎಕ್ಸ್‌ಪ್ರೆಸ್

    ಟಿಪ್ಪು ಎಕ್ಸ್‌ಪ್ರೆಸ್ ಇನ್ನುಮುಂದೆ ಒಡೆಯರ್ ಎಕ್ಸ್‌ಪ್ರೆಸ್ – ಶಿವಮೊಗ್ಗಕ್ಕೆ ಕುವೆಂಪು ಎಕ್ಸ್‌ಪ್ರೆಸ್

    ಬೆಂಗಳೂರು: ಮೈಸೂರು-ಬೆಂಗಳೂರಿನ(Mysuru-bengaluru) ನಡುವೆ ಸಂಚರಿಸುತ್ತಿದ ಟಿಪ್ಪು ಎಕ್ಸ್‌ಪ್ರೆಸ್ (Tippu Express) ರೈಲಿನ (Train) ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ (Wadiyar Express) ಎಂದು ಮರುನಾಮಕರಣ ಮಾಡಲಾಗಿದೆ.

    ಟಿಪ್ಪು ಎಕ್ಸ್‌ಪ್ರೆಸ್ ರೈಲಿನೊಂದಿಗೆ ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೂ ಹೆಸರು ಬದಲಾವಣೆ ಮಾಡಿ, ಕುವೆಂಪು ಎಕ್ಸ್‌ಪ್ರೆಸ್ (Kuvempu Express) ಎಂದು ಹೆಸರು ಬದಲಾವಣೆ ಮಾಡಿರುವುದಾಗಿ ಶುಕ್ರವಾರ ರೈಲ್ವೇ ಇಲಾಖೆ ಆದೇಶ ನೀಡಿದೆ. ಇದನ್ನೂ ಓದಿ: ನಾಗ್ಪುರ- ಮುಂಬೈ ಎಕ್ಸ್‌ಪ್ರೆಸ್‌ವೇ ಶೀಘ್ರವೇ ಸಂಚಾರಕ್ಕೆ ಮುಕ್ತ – ವಾಹನಗಳಿಗೆ 120 kmph ವೇಗದ ಮಿತಿ ನಿಗದಿ

    ಈ ಬಗ್ಗೆ ಮೈಸೂರು ಸಂಸದ ಪ್ರತಿಕ್ರಿಯಿಸಿ, ಶುಕ್ರವಾರದ ಶುಭ ಸುದ್ದಿ. ಇನ್ನು ಮುಂದೆ ಟಿಪ್ಪು ಎಕ್ಸ್‌ಪ್ರೆಸ್ ಬದಲು ಒಡೆಯರ್ ಎಕ್ಸ್‌ಪ್ರೆಸ್ ನಿಮಗೆ ಸೇವೆ ನೀಡಲಿದೆ. ಮೈಸೂರು-ತಾಳಗುಪ್ಪ ರೈಲು ಕುವೆಂಪು ಎಕ್ಸ್‌ಪ್ರೆಸ್ ಆಗಲಿದೆ. ಇದಕ್ಕಾಗಿ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಹಾಗೂ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್‌ಬಿಐನಿಂದ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

    ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

    ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್‌ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆಯ ಪ್ರತೀಕವಾಗಿ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಹೆಸರಿಡುವಂತೆ ಮನವಿ ಮಾಡಿದ್ದೇನೆಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ಒಡೆಯರ್ ಕೊಡುಗೆಯನ್ನು ಅರಿತು ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆ ವಿಚಾರವಾಗಿ ಸಾಕಷ್ಟು ಜನ ಮನವಿ ಮಾಡಿದ್ದರು. ಒಡೆಯರ್ ಕೊಡುಗೆ ಅಪಾರವಾಗಿದೆ. ಮೈಸೂರಿಗೆ ರೈಲು ತಂದಿದ್ದು ಮೈಸೂರು ಮಹಾರಾಜರು ಅವರ ಹೆಸರಿನಲ್ಲಿ ಒಂದು ರೈಲು ಇಲ್ಲ. ಆ ವಂಶವನ್ನು ನಾಶ ಮಾಡಲು ಹೋದವನ ಹೆಸರು ರೈಲಿಗೆ ಯಾಕೆ?. ಟಿಪ್ಪು ಸುಲ್ತಾನ್ ಒಂದು ರೈಲು ಹಳಿ ಹಾಕಿಲ್ಲ. ಅಂತಹ ಟಿಪ್ಪು ಹೆಸರು ಯಾಕೆ ಬೇಕು. ಈ ಹೆಸರನ್ನು ಬದಲಾಯಿಸಿಯೇ ತೀರುತ್ತೇವೆ. ಟಿಪ್ಪು ಸುಲ್ತಾನ್ ಹೆಸರು ಇರಬಾರದು. ಕ್ರೆಡಿಟ್ ಕೂಡ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದಿದ್ದಾರೆ.

    ರಾಜ್ಯ, ಜಿಲ್ಲೆಯನ್ನು ಮೆಚ್ಚಿಸಲು ಬಜೆಟ್ ಮಂಡಿಸಿಲ್ಲ. ಬದಲಾಗಿ ಇಡೀ ದೇಶವನ್ನು ಮೆಚ್ಚಿಸಲು ಬಜೆಟ್ ಮಂಡಿಸಿದ್ದಾರೆ. ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ಬಜೆಟ್ ಮಂಡಿಸಲಾಗಿದೆ. ಎಲೆಕ್ಟ್ರಿಕ್ ರೈಲುಗಳ ಸಂಚಾರ ವ್ಯವಸ್ಥೆ ದೇಶದಲ್ಲಿ ಸಂಚಲನ ಹುಟ್ಟಿಸಲಿದೆ. ಈ ವರ್ಷ ಎಲೆಕ್ಟ್ರಿಕ್ ಟ್ರೈನ್‍ಗಳು ಸಂಚಾರ ಆರಂಭಿಸಲಿವೆ ಎಂದಿದ್ದಾರೆ.

    ಕೇಂದ್ರ ಬಜೆಟ್‌ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರೇ ತಮ್ಮ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿ ಆಡಳಿತ ಮಾಡಿದ್ದಾರೆ. ರಾಜ್ಯದ ಯಾವ ಸಿಎಂ ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅವರಿಗೆ ಅರ್ಥ ವ್ಯವಸ್ಥೆಯೆ ಗೊತ್ತಿಲ್ಲ. ಬಜೆಟ್ ಬಂದರೆ ಸಾಕು ಲಾಪಾಸ್ ಮಾಡಿರುವವರು ಬಿಎ ಪಾಸ್ ಮಾಡಿರುವವರೆಲ್ಲಾ ಆರ್ಥಿಕ ತಜ್ಞರಾಗುತ್ತಾರೆ. ಅವರಿಗೆ ಆರ್ಥಿಕ ವ್ಯವಸ್ಥೆಯೇ ಅರ್ಥವಾಗಲ್ಲ. ಹೀಗಾಗಿ, ಅವರು ಸುಮ್ಮನೆ ಸಾಲದ ಬಜೆಟ್ ಅಂತ ಟೀಕೆ ಮಾಡುತ್ತಾರೆ.