ಮಂಡ್ಯ: ಟಿಪ್ಪು (Tippu) ಹೊಡೆದಾಕಿದ ಹಾಗೆ ಸಿದ್ದರಾಮಯ್ಯರನ್ನು (Siddaramaiah) ಹೊಡೆದು ಹಾಕಬೇಕೆಂದು ಹೇಳಿದ್ದ ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ವಿರುದ್ಧ ಮೈಸೂರಿನ (Mysuru) ದೇವರಾಜ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ದೇವರಾಜ ಪೊಲೀಸರು ಸ್ಥಳ ಮಹಜರ್ ಬಳಿಕ ಈ ಕೇಸ್ ಅನ್ನು ಮಂಡ್ಯಗೆ (Mandya) ವರ್ಗಾವಣೆ ಮಾಡಿದ್ದಾರೆ.
ಮಂಡ್ಯದ ಸಾತನೂರಿನ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಶ್ವಥ್ ನಾರಾಯಣ್ ಹೀಗೆ ಹೇಳಿದ್ದರು. ಈ ಕಾರಣ ನಿನ್ನೆ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ ಬಳಿಕ ಮಂಡ್ಯ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ.
ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ ಮೈಸೂರಿನ ದೇವರಾಜ ಠಾಣೆಗೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ದೂರು ನೀಡಿದ್ದರು. ದೂರಿನ ಆಧಾರ ಎಫ್‌ಐಆರ್ ದಾಖಲು ಮಾಡಿದ್ದ ದೇವರಾಜ ಠಾಣೆ ಪೊಲೀಸರು ಸ್ಥಳ ಮಹಜರ್ ಮಾಡಿ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯನವರಿಗೆ ಅವಮಾನ ಮಾಡಬೇಡಿ: ಅಶೋಕ್
ಮಂಗಳೂರು: ಬಿಜೆಪಿ (BJP) ಸರ್ಕಾರ ಕೊನೆಯುಸಿರೆಳೆಯುತ್ತಿದೆ. ಆಕ್ಸಿಜನ್ ಆಗಿ ಟಿಪ್ಪು (Tippu), ಭಯೋತ್ಪಾದನೆ ಮತ್ತು ಎಸ್‍ಡಿಪಿಐ (SDPI) ವಿಚಾರಗಳನ್ನು ಬಳಕೆ ಮಾಡುತ್ತಿದೆ ಎಂದು ಮಂಗಳೂರಿನಲ್ಲಿ ಶಾಸಕ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಸಂಸದರ ಮೌನ, ರಾಜ್ಯ ಸರ್ಕಾರದ ಅಸಹಾಯಕತೆಯಿಂದ ಕೇಂದ್ರದ ಬಜೆಟ್‍ನಲ್ಲಿ ಮಲತಾಯಿ ಧೋರಣೆ ನಡೆದಿದೆ. ಇದರಿಂದ ರಾಜ್ಯ ಸಾಲದಿಂದ ಮುಳುಗಿದೆ ಎಂದಿದ್ದಾರೆ.
ರಾಜ್ಯ ಬಜೆಟ್ ಜನರನ್ನು ಸುಲಿಗೆ ಮಾಡುವ ಸಾಲದ ಬಜೆಟ್ ಆಗಿದೆ. ಕೊನೆಯುಸಿರೆಳೆಯುವ ಸರ್ಕಾರ ಯಾವುದೇ ಮಹತ್ವ ಇಲ್ಲದ ಬಜೆಟ್ ಮಂಡನೆ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
1947 ರಿಂದ 2018ರ ತನಕ ರಾಜ್ಯದ ಸಾಲ 2,42,000 ಕೋಟಿ ರೂ.ಗಳಾಗಿತ್ತು. ಆದರೆ 2018-2023ರ ಅವಧಿಯಲ್ಲಿ 5,64,814 ಕೋಟಿ ರೂ. ಆಗಿದೆ. ಇದರಿಂದ ಜನ ಸಾಲದ ಭಾರವನ್ನು ಹೋರುವಂತಾಗಿದೆ. ಬಿಜೆಪಿ ನಾಲ್ಕು ವರ್ಷದಲ್ಲಿ 2,80,000 ಕೋಟಿ ರೂ.ಗಳನ್ನು ಸಾಲ ಪಡೆದುಕೊಂಡಿದೆ. ಮತ್ತು 78,000 ಕೋಟಿ ಸಾಲ ಮಾಡುವುದಾಗಿ ಹೇಳಿಕೊಂಡಿದೆ ಎಂದಿದ್ದಾರೆ.
3 ಲಕ್ಷ ಸಾವಿರ ಕೋಟಿಯ ಬಜೆಟ್‍ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕ ಅಂಶಗಳು ಇಲ್ಲ. ಪ್ರತಿ ತಿಂಗಳು 14 ಸಾವಿರ ಕೋಟಿ ಅಸಲು ಮತ್ತು 34 ಸಾವಿರ ಕೋಟಿ ಬಡ್ಡಿಯನ್ನು ರಾಜ್ಯ ಕಟ್ಟ ಬೇಕಿದೆ. ಜಾತ್ರೆಯಲ್ಲಿ ಬ್ಯಾಂಡ್ ಬಾರಿಸುವಂತೆ ಸರ್ಕಾರ ಬಜೆಟ್ ಮಂಡನೆ ಮಾಡಿದೆ ಎಂದಿದ್ದಾರೆ.
ಮೀನುಗಾರರಿಗೆ ಈ ಹಿಂದಿನ ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳನ್ನೇ ಜಾರಿಗೆ ತಂದಿಲ್ಲ. ಕಳೆದ ವರ್ಷ ಘೋಷಿಸಿದ್ದ ಮನೆಗಳು ಇನ್ನೂ ನಿರ್ಮಾಣ ಆಗಿಲ್ಲ. ಸಮುದ್ರ ತೀರದ ಕೊಂಡಿ ರಸ್ತೆ ಮತ್ತು ಕಡಲ್ಕೊರೆತಕ್ಕೆ ಇನ್ನೂ ಶಾಶ್ವತ ಪರಿಹಾರ ಕೊಟ್ಟಿಲ್ಲ. ಕರಾವಳಿ ಪ್ರದೇಶದ ಜನರಿಗೆ ಮೋಸ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ತಾವು ನಿಡಿದ್ದ ಹೇಳಿಕೆಗೆ ಇಂದು (ಗುರುವಾರ) ಸಚಿವ ಅಶ್ವಥ್ ನಾರಾಯಣ್ (Ashwath Narayan) ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಚಿವರು, ಮಂಡ್ಯದಲ್ಲಿ ಟಿಪ್ಪು-ಸಿದ್ದರಾಮಯ್ಯ (Siddaramaiah) ಹೋಲಿಸಿ ತಾನು ಮಾತಾಡಿದ್ದು, ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ಟಿಪ್ಪು -ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ.
ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗವಾಗಿದೆ. ನಾನು ಆಡಿರುವ ಮಾತುಗಳನ್ನು ಆ ಚೌಕಟ್ಟಿನಲ್ಲೇ ನೋಡಬೇಕು. ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯವಾಗಿದೆ.
ಟ್ವೀಟ್‍ನಲ್ಲೇನಿದೆ..?: ಮಂಡ್ಯ (mandya) ದಲ್ಲಿ ಟಿಪ್ಪು (Tippu) -ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ. ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗವಾಗಿದೆ. ನಾನು ಆಡಿರುವ ಮಾತುಗಳನ್ನು ಆ ಚೌಕಟ್ಟಿನಲ್ಲೇ ನೋಡಬೇಕು. ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯವಾಗಿದೆ.
ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ (ಗ್ರಾಮೀಣ!) ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ.
ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ.
ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ (ಗ್ರಾಮೀಣ!) ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ. ಇದನ್ನೂ ಓದಿ: ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕ್ಬೇಕು: ಅಶ್ವಥ್ ನಾರಾಯಣ್
ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ. ಪ್ರಧಾನಿಯವರನ್ನು ನರ ಹಂತಕ ಎನ್ನುವುದು, ಮುಖ್ಯಮಂತ್ರಿ ಅವರಿಗೆ ಮನೆ ಹಾಳಾಗ ಎನ್ನುವುದು ಸಿದ್ದರಾಮಯ್ಯ ಅವರ ಸಂಸ್ಕೃತಿ ಆಗಿರಬಹುದು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತನ್ನಾಡಿದ್ದೇನೆ. ಅದರಿಂದ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ ಎಂದು ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿಯವರನ್ನು ನರ ಹಂತಕ ಎನ್ನುವುದು, ಮುಖ್ಯಮಂತ್ರಿ ಅವರಿಗೆ ಮನೆ ಹಾಳಾಗ ಎನ್ನುವುದು @siddaramaiah ಅವರ ಸಂಸ್ಕೃತಿ ಆಗಿರಬಹುದು.
ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತನ್ನಾಡಿದ್ದೇನೆ. ಅದರಿಂದ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ.
ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದಿದ್ದರು.
Live Tv
[brid partner=56869869 player=32851 video=960834 autoplay=true]
ಮಡಿಕೇರಿ: ಮೈಸೂರು (Mysuru) ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು (Tippu) ಪ್ರತಿಮೆ ಚರ್ಚೆ ಹಿನ್ನೆಲೆ, ಟಿಪ್ಪುವಿಗೂ ಮೈಸೂರಿಗೂ ಸಂಬಂಧವಿಲ್ಲ. ಮೈಸೂರಿನಲ್ಲಿ ಮಹಾರಾಜರು ಮಾತ್ರವೇ ಇರಬೇಕು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿಕೆ ನೀಡಿದ್ದಾರೆ.
ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ಬೆಂಗಳೂರು ಕೆಂಪೇಗೌಡರ ದೂರದೃಷ್ಟಿಯ ಫಲ ಅವರಿಂದ ಬೆಂಗಳೂರು ಸ್ಥಾಪನೆಯಾಗಿದೆ. ಟಿಪ್ಪು ಸುಲ್ತಾನ್ ಪ್ರತಿಮೆ ಮಾಡಿದರೆ ಏನು ನೆನಪಾಗುತ್ತೆ? ಜನರಿಗೆ ಅವರ ಬಗ್ಗೆ ಏನು ಹೇಳಬೇಕು? ಟಿಪ್ಪು ಕೊಡವರ ಹತ್ಯಾಕಾಂಡ ಮಾಡಿದರ ಬಗ್ಗೆ ಹೇಳಬೇಕಾ? ಅಲ್ಲದೆ ಕನ್ನಡವನ್ನು ಕಗ್ಗೊಲೆ ಮಾಡಿದ ವ್ಯಕ್ತಿಯ ಪ್ರತಿಮೆ ಮಾಡುತ್ತೀರಾ? ಎಂದು ಆಕ್ರೋಶ ಹೊರಹಾಕಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಟಿಪ್ಪು ಜಯಂತಿ ಮಾಡಿಸಿದ್ದರು. ಇದು ಅರಣ್ಯ ಇಲಾಖೆಯು ವೀರಪ್ಪನ್ ಜಯಂತಿ ಮಾಡಿದಂತಾಗುತ್ತದೆ. ಟಿಪ್ಪು ಕ್ರೌರ್ಯಕ್ಕೆ ದ್ಯೋತಕವಾಗಿದ್ದಾನೆ. ಟಿಪ್ಪು ರಾಕೆಟ್ ಹಾರಿಸಲೇ ಇಲ್ಲ. ಯುದ್ಧದಲ್ಲಿ ಟಿಪ್ಪು ರಾಕೆಟ್ ಬಳಕೆ ಮಾಡಿದ ಉದಾಹರಣೆಯೇ ಇಲ್ಲ. ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ಟಿಪ್ಪು ವೈಭವೀಕರಣ ಮಾಡಬೇಡಿ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್ ಕಿಡಿ
ಟಿಪ್ಪು ಯಾವ ಹುಲಿ ಜತೆ ಹೋರಾಟ ಮಾಡಿದ್ದಾನೆ? ಮನುಷ್ಯ ಹುಲಿ ಜತೆ ಹೋರಾಟ ಮಾಡಲು ಸಾಧ್ಯವೇ? ಹೈದರಾಲಿ ಯುದ್ಧ ಮಾಡಿದ ಉದಾಹರಣೆಯಿದೆ. ಟಿಪ್ಪು ಯಾವ ಯುದ್ಧದಲ್ಲಿ ಹೋರಾಡಿದ್ದಾನೆ? ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮನೆಯಿಂದ ಹೊರಗಡೆಯೇ ಬರಲಿಲ್ಲ. ಕಟ್ಟು ಕಥೆಗಳ ಮೂಲಕ ಟಿಪ್ಪುನನ್ನು ಕನ್ನಡದ ಹೋರಾಟಗಾರ ಎಂದು ಹೇಳುವುದನ್ನು ನಿಲ್ಲಿಸಿ. ತನ್ವೀರ್ ಸೇಠ್ ಅವರು ಟಿಪ್ಪು ಪ್ರತಿಮೆ ಮಾಡುವ ಬದಲು ಅಬ್ದುಲ್ ಕಲಾಂ ಅವರ ಪ್ರತಿಮೆ ಮಾಡಿ. ಇದನ್ನು ಜನರು ಒಪ್ಪುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದರು. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ
Live Tv
[brid partner=56869869 player=32851 video=960834 autoplay=true]
ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನವರು ಇದ್ದ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಯಾಕೆ ಹೋಗ್ತಿದ್ದಾರೆ ಅಂತಾ ನಮಗೆ ಅರ್ಥವಾಗುತ್ತಿಲ್ಲ. ಅಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ, ಮುಂದೆ ಗೆಲ್ತೀನಿ ಅನ್ನೋ ವಿಶ್ವಾಸ ಇಲ್ಲದೇನೆ ಬೇರೆ ಜಾಗ ಹುಡುಕುತ್ತಿದ್ದಾರೆ. ನಾನು ಅದಕ್ಕೆ ಟೀಕೆ ಟಿಪ್ಪಣಿ ಮಾಡಲು ಇಷ್ಟ ಪಡಲ್ಲ. ಜನ ಅದನ್ನ ನಿರ್ಧರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa) ವ್ಯಂಗ್ಯವಾಡಿದ್ದಾರೆ.
ಪತ್ನಿಯ ಹೆಸರಿನ ಕಲ್ಯಾಣ ಮಂಟಪ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮೈತ್ರಾದೇವಿಯವರ ಹೆಸರಿನಲ್ಲಿ ಎಡೆಯೂರಿನಲ್ಲಿ ಬಡವರಿಗೆ, ಕಲ್ಯಾಣ ಮಂಟಪ ಕಟ್ಟಿಸಿಕೊಡಬೇಕು ಅನ್ನೋದು ಬಹಳ ದಿನದ ಕನಸಾಗಿತ್ತು. ಸಾಂಕೇತಿಕವಾಗಿ ಹಣಕೊಟ್ಟು ಬಡವರು ಮದುವೆ (Marriage Hall) ಮಾಡಿಕೊಳ್ಳಲು, ಸಾಮೂಹಿಕ ಕಲ್ಯಾಣವಾಗಲು ಈ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ. ಬಡವರಿಗಾಗಿ ಕಟ್ಟಿದ ಈ ಕಲ್ಯಾಣ ಭವನ ವರ್ಷದ 365 ದಿನವೂ ಮದುವೆ ಸಮಾರಂಭ ನಡೆದರೆ ನಮ್ಮ ಸೇವೆ ಸಾರ್ಥಕವಾಗುತ್ತೆ. ಇದರ ಹಿಂಭಾಗದಲ್ಲಿ ಗೆಸ್ಟ್ ಹೌಸ್ ಕಟ್ಟಲು ತೀರ್ಮಾನ ಮಾಡಿದ್ದೇವೆ. ಅದರ ಕಾಮಗಾರಿಯನ್ನ ಕೂಡ ಶ್ರೀಘ್ರವಾಗಿ ಆರಂಭಿಸುತ್ತೇವೆ ಎಂದರು.
ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡ (HD Devegowda) ರಿಗೆ ಆಹ್ವಾನ ನೀಡಿಲ್ಲ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿರೋ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರಿಗೆ ಪತ್ರ ಬರೆದು ಸಿಎಂ ಆಹ್ವಾನಿಸಿದ್ದಾರೆ. ಎಸ್.ಎಂ. ಕೃಷ್ಣ ಸೇರಿದಂತೆ ಉಳಿದೆಲ್ಲ ನಾಯಕರು ಬಂದಿದ್ರು. ದೇವೆಗೌಡರಿಗೂ ಪತ್ರ ಬರೆದು ಸಿಎಂ ದೂರವಾಣಿ ಕರೆ ಮಾಡಿಯೂ ಆಹ್ವಾನಿಸಿದ್ದಾರೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆಯಾಗ್ತಾ ಇದೆ. ದೇವೇಗೌಡರು ಈ ವಿಚಾರವನ್ನ ವೈಯಕ್ತಿಕವಾಗಿ ತೆಗೆದುಕೊಳ್ಳಲ್ಲ ಅನ್ನೋ ವಿಶ್ವಾಸ ನನಗಿದೆ. ಯಾವುದೋ ಕಾರಣಕ್ಕೆ ಅವರಿಗೆ ಬರಲಿಕ್ಕೆ ಆಗಿಲ್ವೇನೋ. ಅದನ್ನ ದೊಡ್ಡದು ಮಾಡೋ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಟಿಪ್ಪು ಪ್ರತಿಮೆ, ಬಸವಣ್ಣ ಪ್ರತಿಮೆ ನಿರ್ಮಾಣ ವಿಚಾರದ ಕುರಿತು ಮಾತನಾಡಿ, ಟಿಪ್ಪು ಪ್ರತಿಮೆ ನಿರ್ಮಿಸುವುದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಏನು ತೀರ್ಮಾನ ಮಾಡುತ್ತೆ ನೋಡೋಣ. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಮುಂದೆ ಮುಖ್ಯಮಂತ್ರಿಗಳು ಅದನ್ನ ಮಾಡ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಯಡಿಯೂರಪ್ಪ ಹಿಂದೂ ಅಲ್ಲ ಅನ್ನೋ ಬಗ್ಗೆ ಪ್ರತಿಕ್ರಿಯಿಸಿ, ಆ ಹೇಳಿಕೆಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ. ಹಿಂದೂ ಸಮಾಜ ಬಹಳ ದೊಡ್ಡ ಸಮಾಜ. ಮೊದಲು ನಾವೆಲ್ಲರೂ ಹಿಂದೂ, ಆಮೇಲೆ ಜಾತಿ, ಉಪಪಂಗಡಗಳು. ಅನಗತ್ಯವಾಗಿ ಇದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಅನ್ನುವಂತದ್ದು ಒಂದು ದೊಡ್ಡ ಸಮೂಹಕ್ಕೆ ಇರುವಂತಹ ಹೆಸರು. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದು ಬೇಡ. ಮುದ್ದಹನುಮೇಗೌಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ ಟಿಕೆಟ್ ಕೊಡ್ತೀವಿ ಅಂತಾ ನಾವು ಯಾರಿಗೂ ಭರವಸೆ ನೀಡಿಲ್ಲ. ಪಕ್ಷ ಆ ಬಗ್ಗೆ ತೀರ್ಮಾನ ಮಾಡುತ್ತೆ ಎಂದರು.
ಹಿಂದೂ ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿಕೆ ಬಗ್ಗೆ ಉತ್ತರಿಸಿದ ಬಿಎಸ್‍ವೈ, ಅದರ ಬಗ್ಗೆ ನಾನು ಏನನ್ನೂ ಹೇಳಲೂ ಇಷ್ಟಪಡಲ್ಲ. ಕಾಂಗ್ರೆಸ್ ನ 90% ನಾಯಕರು ಕೂಡ ನಾವು ಮೊದಲು ಹಿಂದೂಗಳು ಅನ್ನೋದನ್ನ ಒಪ್ಪಿಕೊಳ್ತಾರೆ. ಇದನ್ನ ಅರ್ಥ ಮಾಡಿಕೊಂಡು ಎಲ್ಲರೂ ಮುಂದೆ ಹೋಗಬೇಕು ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
ಮೈಸೂರು: ಮೈಸೂರು (Mysuru) ಅಥವಾ ಶ್ರೀರಂಗಪಟ್ಟಣದಲ್ಲಿ (Srirangapattana) 100 ಅಡಿ ಎತ್ತರದ ಟಿಪ್ಪು ಪ್ರತಿಮೆ (Tippu Statue) ನಿರ್ಮಾಣ ಖಚಿತ ಎಂದು ಶಾಸಕ ತನ್ವೀರ್ ಸೇಠ್ (Tanveer Sait) ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಿಸುವುದು ಖಚಿತ. ಕಂಚಿನ ಪ್ರತಿಮೆನಾ ಅಥವಾ ಪಂಚಲೋಹದ ಪ್ರತಿಮೆನಾ ಎನ್ನುವ ತೀರ್ಮಾನ ಸದ್ಯದಲ್ಲಿಯೇ ಮಾಡುತ್ತೇವೆ. ಪ್ರತಿಮೆ ಸ್ಥಾಪನೆ ಮುಸ್ಲಿಂ ಧರ್ಮದಲ್ಲಿ ನಿಷೇಧ ಇದ್ದರೂ, ಇಂದಿನ ಪರಿಸ್ಥಿತಿಗಾಗಿ ಪ್ರತಿಮೆ ನಿರ್ಮಾಣ ಮಾಡುವುದು ಅನಿವಾರ್ಯವಿದೆ ಎಂದು ತಿಳಿಸಿದ್ದಾರೆ.
ಟಿಪ್ಪು ವಿರೋಧಿಸಿದರೆ ತಮಗೆ ಲಾಭ ಎಂದು ಟಿಪ್ಪು ಹೆಸರನ್ನು ಬಿಜೆಪಿ (BJP) ಬಳಸುತ್ತಿದೆ. ಅದು ಬಿಜೆಪಿಯ ಭ್ರಮೆಯಷ್ಟೇ. ಸರ್ಕಾರದ ಕುಮ್ಮಕ್ಕಿನಿಂದ ಮೈಸೂರಿನ ರಂಗಾಯಣದಲ್ಲಿ ಟಿಪ್ಪು ವಿರುದ್ಧದ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ. ಇದಕ್ಕೆ ನನ್ನ ವಿರೋಧವಿದ್ದು ಇದನ್ನು ತಡೆಯಲು ಕೋರ್ಟ್ ಮೊರೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ತೆಗೆಯಲು ನಿಖಿಲ್‍ರನ್ನು ಬಲಿ ಕೊಟ್ರು: ಎಲ್.ಆರ್.ಶಿವರಾಮೇಗೌಡ
Live Tv
[brid partner=56869869 player=32851 video=960834 autoplay=true]
ರಾಯಚೂರು: ಬಿಜೆಪಿ (BJP) ಆಡಳಿತದಲ್ಲಿ ಬಸ್, ಟ್ರೈನ್ ಸೇರಿದಂತೆ ಯಾವುದಕ್ಕೂ ಟಿಪ್ಪು (Tippu) ಹೆಸರನ್ನು ಇಡುವುದಿಲ್ಲ. ಟಿಪ್ಪು ಒಬ್ಬ ದೇವಸ್ಥಾನಗಳನ್ನು ನಾಶ ಮಾಡಿದಂತಹ ಧರ್ಮಾಂಧ ಎಂದು ಎಂಎಲ್‌ಸಿ ಎನ್.ರವಿಕುಮಾರ್ (N Ravikumar) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಮಾತನಾಡಿದ ರವಿಕುಮಾರ್, ಟಿಪ್ಪು ಎಕ್ಸ್‌ಪ್ರೆಸ್ ಬದಲು ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಆಡಳಿತದ ಅವಧಿಯಲ್ಲಿ ಟಿಪ್ಪು ಹೆಸರು ಯಾವುದಕ್ಕೂ ಬಳಕೆ ಮಾಡುವುದಿಲ್ಲ. ಟಿಪ್ಪು ದಬ್ಬಾಳಿಕೆಯಿಂದ ಮಂಡ್ಯ ಜಿಲ್ಲೆಯ ಕೆಂಪು ಕೋಟೆಯಲ್ಲಿ ಇಂದಿಗೂ ದೀಪಾವಳಿ ಆಚರಣೆ ಮಾಡಲ್ಲ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಯಚೂರಿನಿಂದ ಸಂಕಲ್ಪ ಯಾತ್ರೆ ಶುರುವಾಗಲಿದೆ. ಜನ ಸಂಕಲ್ಪ ಯಾತ್ರೆ ಗಿಲ್ಲೇಸೂಗೂರು ಗ್ರಾಮದಿಂದ ಶುರುವಾಗಲಿದೆ. ಈ ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ
ಯಡಿಯೂರಪ್ಪ ಹೋದಲ್ಲಿ ಸೋಲಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿಕುಮಾರ್, ಅವರು ಈ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ. ಜನರಿಗೆ ಎಲ್ಲಾ ಗೊತ್ತಿದೆ. ಒಂದು ಸೀಟು ಬರಲ್ಲ ಎನ್ನುವ ಪರಿಸ್ಥಿತಿಯಿಂದ ಇಲ್ಲಿಯವರೆಗೆ ಬಿಜೆಪಿ ಬರಲು ಯಡಿಯೂರಪ್ಪ ಕಾರಣ. ಯತ್ನಾಳ್ ಬಗ್ಗೆ ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಯಾವ ಸರ್ಕಾರವೂ ಮಾಡದೇ ಇರುವುದನ್ನು ಬಿಜೆಪಿ ಮಾಡಿ ಬದ್ಧತೆ ತೋರಿದೆ. ಶಾಸಕರನ್ನು ನೋಡಿ ಮೀಸಲಾತಿ ಹೆಚ್ಚಳ ಮಾಡಿಲ್ಲ. ಬಸವಣ್ಣ, ಅಂಬೇಡ್ಕರ್ ವಿಚಾರ ಇಟ್ಟು ನಮ್ಮ ಸಿಎಂ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಮೀಸಲಾತಿ ಹೆಚ್ಚಳದ ಬಳಿಕ ಮೊದಲ ಕಾರ್ಯಕ್ರಮ ಗಿಲ್ಲೇಸೂಗೂರು ಗ್ರಾಮದಲ್ಲಿ ನಡೆಯುತ್ತದೆ. ಈ ವೇಳೆ ಸಿಎಂ ಬೊಮ್ಮಾಯಿಗೆ ಅದ್ಧೂರಿಯಾಗಿ ಸನ್ಮಾನ ಮಾಡುವ ಯೋಜನೆ ಮಾಡಲಾಗಿದೆ ಎಂದು ರವಿಕುಮಾರ್ ಹೇಳಿದರು. ಇದನ್ನೂ ಓದಿ: ಮಿನಿ ಪಾಕಿಸ್ತಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನ ಬಂಧನ
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಟಿಪ್ಪು ಸುಲ್ತಾನ್ ಕುರಿತು ಮಾಜಿ ಸಚಿವ ವಿಶ್ವನಾಥ್ ಅವರದ್ದು ವೈಯಕ್ತಿಕ ಅಭಿಪ್ರಾಯವೇ ಹೊರತು ಬಿಜೆಪಿಯ ಅಭಿಪ್ರಾಯವಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ, ಆದರೆ ಬಿಜೆಪಿಯ ನಾಯಕರಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಮಾತನಾಡುವ ಮುನ್ನ ಪಕ್ಷ ನಿಲುವೇನು ಎಂಬುದನ್ನು ಯೋಚಿಸಬೇಕು ಅವರು ಎಂಎಲ್ ಸಿ ಹೆಚ್.ವಿಶ್ವನಾಥ್ ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.
ಒಂದು ಬಾರಿ ಪಕ್ಷಕ್ಕೆ ಸೇರಿದ ಮೇಲೆ ಇಲ್ಲಿನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು. ಹೆಚ್.ವಿಶ್ವನಾಥ್ ಪ್ರಬುದ್ಧರಿದ್ದಾರೆ. ಈ ರೀತಿ ಮಾತನಾಡುವಾಗ ಯಾವ ಪಕ್ಷದಲ್ಲಿದ್ದೇನೆ ಅನ್ನುವುದನ್ನು ಯೋಚನೆ ಮಾಡಿ ಮಾತನಾಡಿದರೆ ಒಳಿತು ಎಂದು ಪರೋಕ್ಷವಾಗಿ ವಿಶ್ವನಾಥ್‍ಗೆ ಎಚ್ಚರಿಕೆ ಕೊಟ್ಟರು. ವಿಶ್ವನಾಥ್ ಅವರ ಸ್ವಭಾವವೇ ಹಾಗೇ ಯಾವುದಾದರೂ ವಿಚಾರ ಬಂದರೆ ಮುನ್ನುಗ್ಗಿ ಮಾತನಾಡುತ್ತಾರೆ. ಅವರ ಯಾವುದೋ ಒಂದು ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದಿಲ್ಲ ಎಂದರು.
ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ವಿಶ್ಚನಾಥ್ ಅವರಿಗೆ ಅನುಭವವಿದೆ. ಆದರೆ ಅವರು ಸಚಿವರಾಗುವುದು ಕಾನೂನಿಗೆ ಬಿಟ್ಟ ವಿಚಾರ. ಕಾನೂನು ಪಂಡಿತರು ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಮೂಲಕ ಸಚಿವ ವಿಶ್ವನಾಥ್ ಗೆ ಮಂತ್ರಿಗಿರಿ ಸಿಗುವುದಕ್ಕೆ ಕಾನೂನು ತೊಡಕಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಯಾದಗಿರಿ: ಟಿಪ್ಪುವಿನ ಕಾಲದಲ್ಲಿದ್ದ ಮತಾಂತರ ದೌರ್ಜನ್ಯ, ಕಗ್ಗೊಲೆ ಜೊತೆಗೆ ಕೊಡಗಿನಲ್ಲಿ ಮತಾಂತರ ಮಾಡಿದ್ದು ಇನ್ನೂ ನಮ್ಮ ಕಣ್ಮುಂದೆ ಇದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಇದೇ ವೇಳೆ ಟಿಪ್ಪು ಬಗ್ಗೆ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪುವಿಗೆ ಯಾವಾಗಲೂ ನಮ್ಮ ವಿರೋಧವಿದೆ. ನಮ್ಮ ನಿಲುವಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಪಕ್ಷ ಹಿಂದೆ ಏನ್ ಹೇಳಿದೆ ಅದಕ್ಕೆ ಈಗಲೂ ಬದ್ಧವಾಗಿದೆ. ವಿಶ್ವನಾಥ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದರು.
ಜೊತೆಗೆ ಸಿಎಂ ಪುತ್ರ ವಿಜಯೇಂದ್ರ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಆ ರೀತಿ ಏನೂ ನಡೆದಿಲ್ಲ. ಸುಮ್ಮನೆ ಮನಸ್ಸಿಗೆ ಬಂದ ಹಾಗೆ ಹೇಳಿಕೆ ಕೊಡೋದು ಸರಿಯಲ್ಲ. ಸಾಕ್ಷ್ಯಾಧಾರ ಇಲ್ಲದೆ ಮಾತಾಡೋದು ತಪ್ಪು ಎಂದು ಹೇಳಿದರು.
ಕೊಪ್ಪಳ: ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದ್ರೆ, ಅಂತವರನ್ನ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ರಾಜಕೀಯ ದುಷ್ಟತನ ಮಾಡಬೇಡಿ. ಒಂದು ವೇಳೆ ರಾಜಕೀಯ ದುಷ್ಟತನ ಮಾಡಿದರೆ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ. ಈ ಹಿಂದೆ ಅನಂತ್ ಕುಮಾರ್ ಹೆಗಡೆ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿದ್ರು. ಹಿಂದೆ ಕತ್ತಿ ನಾನೇ ಮುಖ್ಯಮಂತ್ರಿ ಎಂದರು. ಇದೆಲ್ಲ ಸುಳ್ಳು, ಅನಾವಶ್ಯಕ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮುತಾಲಿಕ್ ಮನವಿ ಮಾಡಿದರು.
ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಕೈ ಬಿಟ್ಟ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ನಾನು ಇದನ್ನು ಸ್ವಾಗತ ಮಾಡ್ತೀನಿ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಈತನನ್ನು ಪಠ್ಯಪುಸ್ತಕದಿಂದ ತೆಗೆದಿರುವ ವಿಚಾರವನ್ನು ಸ್ವಾಗತಿಸುತ್ತೇನೆ ಎಂದರು.
ಇದೇ ವೇಳೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮೋದಿ ಭಾಗಿಯಾಗಬಾರದು ಎಂದು ಓವೈಸಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿ ಆನೆ ಇದ್ದಂಗೆ. ಓವೈಸಿ ನಾಯಿ ಇದ್ದಂಗೆ, ಅದೊಂದು ಕಸದ ತುಂಡು. ಹೀಗಾಗಿ ಅಂತವರು ಬೊಗಳಿದ್ರೆ ಏನೂ ಆಗಲ್ಲ ಎನ್ನುವ ಮೂಲಕ ಓವೈಸಿಯನ್ನು ನಾಯಿಗೆ ಹೋಲಿಸಿದರು.
ಯಾವುದೇ ಗದ್ದಲ ಗಲಭೆ ಇಲ್ಲದೆ ರಾಮಮಂದಿರ ನಿರ್ಮಾಣ ಕಾರ್ಯ ಆಗತ್ತೆ ಎಂದು ಪ್ರಮೋದ್ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು.