Tag: tipper

  • ರಸ್ತೆ ದಾಟುವಾಗ ಮರಳಿನ ಟಿಪ್ಪರ್ ಡಿಕ್ಕಿ- ಬಾಲಕ ಸಾವು

    ರಸ್ತೆ ದಾಟುವಾಗ ಮರಳಿನ ಟಿಪ್ಪರ್ ಡಿಕ್ಕಿ- ಬಾಲಕ ಸಾವು

    ಕಲಬುರಗಿ: ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಮರಳಿನ ಟಿಪ್ಪರ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳಿಯರು ಟಿಪ್ಪರ್‌ಗೆ ಬೆಂಕಿ ಹಚ್ಚಿದ ಘಟನೆ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ನಡೆದಿದೆ.

    ಮನೀಷ್ ಮಲ್ಲಿಕಾರ್ಜುನ (10) ಮೃತ ಬಾಲಕ. ಪೋಷಕರ ಜೊತೆ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಟೀಪರ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಬಾಲಕ ಸ್ಥಳದಲ್ಲೇ ಸಾವುಗೀಡಾಗಿದ್ದಾನೆ. ಟಿಪ್ಪರ್ ಮೇಲೆ ಹರಿದ ಪರಿಣಾಮ ಬಾಲಕ ದೇಹ ಛಿದ್ರ ಛಿದ್ರಗೊಂಡಿದೆ.

    ಈ ವೇಳೆ ಉದ್ರೇಕಗೊಂಡ ಸ್ಥಳೀಯರು ಟಿಪ್ಪರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಟಿಪ್ಪರ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನೆ ಸಂಬಂಧ ಸ್ಥಳಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಇದನ್ನೂ ಓದಿ: ಹಿಜಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಣೆ – ಭಾರತೀಯ ಮೂಲದ ರೆಸ್ಟೋರೆಂಟ್ ಬಂದ್

    ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಾಗಿದ್ದು, ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಘಟನೆ ಸಂಬಂಧಿಸಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ

  • ಟಿಪ್ಪರ್ ಡಿಕ್ಕಿ – ಬೈಕಲ್ಲಿ ಹೋಗ್ತಿದ್ದ ತಾಯಿ, ಮಗು ಸಾವು

    ಟಿಪ್ಪರ್ ಡಿಕ್ಕಿ – ಬೈಕಲ್ಲಿ ಹೋಗ್ತಿದ್ದ ತಾಯಿ, ಮಗು ಸಾವು

    ಬೆಂಗಳೂರು: ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದುಹೋಗಿದೆ. ಮಾರತ್ ಹಳ್ಳಿಯ ರಿಂಗ್‍ರೋಡ್‍ನಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಬೈಕಲ್ಲಿ ಹೋಗ್ತಿದ್ದ ತಾಯಿ ಮತ್ತು 1 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಬೈಕ್‍ನಲ್ಲಿ ಕೆಆರ್ ಪುರಂನ ಶಿವಕುಮಾರ್ ಕುಟುಂಬ ಸಮೇತರಾಗಿ ಸಂಚರಿಸುತ್ತಿದ್ದರು ಮಾರತ್ ಹಳ್ಳಿಯ ರಿಂಗ್‍ರೋಡ್ ಬಳಿ ಬರುತ್ತಿದ್ದಂತೆ ಟಿಪ್ಪರ್ ಒಂದು ಬಂದು ಶಿವಕುಮಾರ್ ಬೈಕ್‍ಗೆ ಗುದ್ದಿದೆ. ಪರಿಣಾಮ ಸಂಚರಿಸುತ್ತಿದ್ದ ಬೈಕ್‍ನಿಂದ ಎಡಕ್ಕೆ ಬಿದ್ದ ಬೈಕ್ ಸವಾರ ಶಿವಕುಮಾರ್ ಪ್ರಾಣಾಪಾಯದಿಂದ ಬಚಾವ್ ಆದರೆ, ಬಲಕ್ಕೆ ಬಿದ್ದ ತಾಯಿ ಮತ್ತು ಮಗುವಿನ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಬ್ಯಾಂಕ್ ನಲ್ಲಿ ಕಲೆಕ್ಷನ್ ಕೆಲಸ ಮಾಡಿಕೊಂಡು ಶಿವಕುಮಾರ್ ಜೀವನದ ಬಂಡಿ ಸಾಗಿಸುತ್ತಿದ್ದರು. ಇವತ್ತು ತಮಿಳುನಾಡಿನ ಧರ್ಮಪುರಿಯಲ್ಲಿ ಶಿವಕುಮಾರ್ ತಮ್ಮನ ನಿಶ್ಚಿತಾರ್ಥವಿತ್ತು. ಹೀಗಾಗಿ ಬೆಳಗ್ಗೆನೇ ಗಂಡ ಹೆಂಡ್ತಿ ಇಬ್ಬರೂ ಮಗುವನ್ನು ಕರೆದುಕೊಂಡು ಎನ್ ಫೀಲ್ಡ್ ಬೈಕ್ ಏರಿ ಲಗೇಜ್ ಸಮೇತ ಹೊರಟಿದ್ರು. ಆದ್ರೆ ವಿಧಿಯಾಟ ಮಾರತ್ ಹಳ್ಳಿಯ ಮಲ್ಟಿಪ್ಲೆಕ್ಸ್ ರಿಂಗ್ ರೋಡಲ್ಲಿ ಹೋಗ್ತಿದ್ದಾಗ ಹಿಂಬದಿಯಿಂದ ಯಮಧೂತನಂತೆ ಬಂದ ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ತಾಯಿ ಮತ್ತು ಮಗು ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸ್ನೇಹಿತ ಬಿಎಂಟಿಸಿ ಬಸ್ ಡ್ರೈವರ್​​​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ರಜನಿಕಾಂತ್

    21 ವರ್ಷದ ಶ್ರೀದೇವಿ ಮತ್ತು ಅವರ ಒಂದು ವರ್ಷದ ಮಗು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೆ, ವಿಪರ್ಯಾಸ ಎಂಬಂತೆ ಸ್ಥಳೀಯರು ಯಾರು ನೆರವಿಗೆ ಬಂದಿಲ್ಲ. ಕೊನೆಗೆ ಯಾರೋ ಸಹಾಯ ಮಾಡುವ ನೆಪದಲ್ಲಿ ಮೃತರ ಬಳಿಯಿದ್ದ ಮೊಬೈಲ್ ದೋಚಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಮೂರು ದಿನಗಳ ಹಿಂದಷ್ಟೇ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಆಚರಿಸಲಾಗಿತ್ತು. ಸದ್ಯ ಎಚ್.ಎ.ಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಪತಿಗಾಗಿ ವ್ರತ ಮಾಡಿದ ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ಮಿಸ್ಸಿಂಗ್

  • ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

    ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

    ಮಡಿಕೇರಿ: ಮೈಸೂರಿನಿಂದ ತನ್ನ ಸಂಬಂಧಿಕರ ಮನೆಗೆ ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಹಸೆಮಣೆ ಏರುವ ಮುನ್ನವೇ ಮಸಣ ಸೇರಿದ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ.

    Madikeri accident

    ಸೋಮವಾರ ರಾತ್ರಿ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮೈಸೂರಿನ ವಿಶ್ವನಾಥ್ (32), ಅತ್ತಿಗೋಡಿನ ದಿನೇಶ್(23) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು

    Madikeri accident

    ಇದೇ ಸೆಪ್ಟೆಂಬರ್ 19 ರಂದು ವಿವಾಹ ಇದ್ದಿದ್ದರಿಂದ ಆಹ್ವಾನ ಪತ್ರಿಕೆ ನೀಡಲು ಮಡಿಕೇರಿಗೆ ವಿಶ್ವನಾಥ್ ಹಾಗೂ ದಿನೇಶ್ ಇಬ್ಬರು ಬೈಕ್ ನಲ್ಲಿ ಬಂದಿದ್ದಾರೆ. ಇತ್ತೀಚೆಗೆ ಎಲ್‍ಎಲ್‍ಬಿ ಮುಗಿಸಿ ಪ್ರಾಕ್ಟೀಸ್ ಆರಂಭಿಸಿದ್ದ ವಿಶ್ವನಾಥ್, ಪದವಿ ಓದುತ್ತಿದ್ದ ದಿನೇಶ್ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇದೀಗ ಮಡಿಕೇರಿ ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ನಿಯಮ ಮೀರಿ ವೈರಸ್ ಹರಡಿದ ವ್ಯಕ್ತಿ – 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

  • ವಿದ್ಯುತ್ ತಂತಿ ತಗುಲಿ  ಟಿಪ್ಪರ್‌ಗೆ ಬೆಂಕಿ – ರಾತ್ರಿ ವೇಳೆ ಅಕ್ರಮ ಮರಳು ಸಾಗಾಟ

    ವಿದ್ಯುತ್ ತಂತಿ ತಗುಲಿ ಟಿಪ್ಪರ್‌ಗೆ ಬೆಂಕಿ – ರಾತ್ರಿ ವೇಳೆ ಅಕ್ರಮ ಮರಳು ಸಾಗಾಟ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ನಗರಗುಂಡ ಬಳಿ ಮಧ್ಯರಾತ್ರಿ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ಟಿಪ್ಪರ್ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

    ಕೃಷ್ಣಾ ನದಿಯಿಂದ ದೇವದುರ್ಗಕ್ಕೆ ಅಕ್ರಮ ಮರಳು ಸಾಗಿಸುತ್ತಿದ್ದ ವೇಳೆ ಬೆಂಕಿ ಅವಘಡ ನಡೆದಿದೆ. ರಸ್ತೆ ಬದಿಯ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ:  ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ

    ರಾತ್ರಿವೇಳೆ ಮರಳುಗಾರಿಕೆ ನಿಷೇಧ ಇದ್ದರೂ ಅಕ್ರಮ ದಂಧೆ ಮಾತ್ರ ನಿರಂತರವಾಗಿ ಸಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆದಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ದೇವದುರ್ಗ ತಾಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮ ದಂಧೆ ನಡೆದಿದ್ದರೂ ಯಾವುದೇ ಕ್ರಮಗಳು ಜರುಗುತ್ತಿಲ್ಲ.

    ರಾತ್ರಿ ವೇಳೆ ಕೃಷ್ಣಾ ನದಿಯಿಂದ ಮರಳು ಸಾಗಣೆ ಮಾಡುತ್ತಿರುವುದಲ್ಲದೆ, ಅತೀ ವೇಗವಾಗಿ ಟಿಪ್ಪರ್ ಚಾಲನೆ ಮಾಡಿಕೊಂಡು ಬಂದ ಹಿನ್ನೆಲೆ ರಸ್ತೆ ಬದಿಯ ವಿದ್ಯುತ್ ತಂತಿ ಟಿಪ್ಪರ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪತ್ನಿ ಕಣ್ಣೇದುರೇ  ಪತಿ ಸಾವು

    ಪತ್ನಿ ಕಣ್ಣೇದುರೇ  ಪತಿ ಸಾವು

    ಚಿಕ್ಕಬಳ್ಳಾಪುರ: ಸ್ಕೂಟಿ ಮೇಲೆ ಟಿಪ್ಪರ್ ಹರಿದು ಪತ್ನಿ ಕಣ್ಣೇದುರೇ ಪತಿ ಸಾವನ್ನಪ್ಪಿದ ಭೀಕರ ಅಪಘಾತ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇದನ್ನೂ ಓದಿ:  ಬಿಗ್‍ಬಾಸ್‍ಗೆ ದಾರಿ ತೋರಿಸಿದ ಶುಭಾ

    ಜಯಚಂದ್ರಪ್ಪ (62) ಮೃತರಾಗಿದ್ದಾರೆ. ಸ್ಕೂಟಿ ಮೇಲೆ ಟಿಪ್ಪರ್ ಹರಿದ ಪರಿಣಾಮ ಪತ್ನಿಯ ಕಣ್ಣೆದುರಲ್ಲೇ ಪತಿ ಪ್ರಾಣ ಬಿಟ್ಟಿದ್ದಾರೆ. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ವಾಪಸಂದ್ರ ಸೇತುವೆ ಬಳಿಯ ಸಿಎಸ್‍ಎನ್ ಪೆಟ್ರೋಲ್ ಬಂಕ್ ಬಳಿ ಅಪಘಾತ ನಡೆದಿದೆ.

    ಹಾರೋಬಂಡೆ ಗ್ರಾಮದ ಜಯಚಂದ್ರಪ್ಪ ಹಾಗೂ ಪತ್ನಿ ಆಂಜಿನಮ್ಮ ಇಬ್ಬರು ಸ್ಕೂಟಿಯಲ್ಲಿ ಬ್ಯಾಂಕ್‍ಗೆ ಹಣ ಕಟ್ಟೋಕೆ ಅಂತ ಚಿಕ್ಕಬಳ್ಳಾಪುರ ನಗರಕ್ಕೆ ಬರುತ್ತಿದ್ದರು. ಆದರೆ ಅತಿ ವೇಗವಾಗಿ ಹಿಂಬದಿಯಿಂದ ಬರ್ತಿದ್ದ ಟಿಪ್ಪರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯಲಿದ್ದ ಜಯಚಂದ್ರಪ್ಪಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಆಂಜಿನಮ್ಮ ಡಿವೈಡರ್ ಮೇಲೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಸ್ಥಳೀಯರು ಅತಿ ವೇಗದಿಂದ ಸಂಚರಿಸೋ ಟಿಪ್ಪರ್‍ಗಳ ವಿರುದ್ಧ ಏನೂ ಕ್ರಮ ಕೈಗೊಳ್ಳಲ್ಲ ಅಂತ ಗರಂ ಆಗಿದ್ದಾರೆ.

  • ಚಾಲಕನ ನಿರ್ಲಕ್ಷ್ಯ- ಟಿಪ್ಪರ್ ಡಿಕ್ಕಿಯಾಗಿ ಯುವಕ ಸಾವು

    ಚಾಲಕನ ನಿರ್ಲಕ್ಷ್ಯ- ಟಿಪ್ಪರ್ ಡಿಕ್ಕಿಯಾಗಿ ಯುವಕ ಸಾವು

    ವಿಜಯಪುರ: ಚಾಲಕನ ನಿರ್ಲಕ್ಷ್ಯದಿಂದ ಟಿಪ್ಪರ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಇಂಡಿ ರಸ್ತೆಯ ಹೊರವಲಯದಲ್ಲಿ ನಡೆದಿದೆ.

    ನಗರ ನಿವಾಸಿ ರೆಹಮಾನ್ ಮೃತ ದುರ್ದೈವಿಯಾಗಿದ್ದು, ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಲಾರಿ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಅಸುನೀಗಿದ್ದಾನೆ. ಲಾರಿ ಮುಂಭಾಗದ ಚಕ್ರಕ್ಕೆ ಸಿಲುಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಘಟಕನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಟಿಪ್ಪರ್, ಬಸ್ ಮುಖಾಮುಖಿ ಡಿಕ್ಕಿ- ಬಸ್ ಚಾಲಕ ದುರ್ಮರಣ

    ಟಿಪ್ಪರ್, ಬಸ್ ಮುಖಾಮುಖಿ ಡಿಕ್ಕಿ- ಬಸ್ ಚಾಲಕ ದುರ್ಮರಣ

    ಬೆಂಗಳೂರು: ಟಿಪ್ಪರ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕೆಎಸ್‍ಆರ್‍ಟಿಸಿ ಬಸ್ ಚಾಲಕ ದಾರಣವಾಗಿ ಸಾವನ್ನಪ್ಪಿದ್ದಾರೆ.

    ಆನೇಕಲ್ ಸಮೀಪದ ತಟ್ಟೆಕೆರೆ ಗ್ರಾಮದ ಬಳಿ ಘಟನೆ ನಡೆದಿದ್ದು, ಹಾರೋಹಳ್ಳಿಯಿಂದ ಆನೇಕಲ್ ಗೆ ಬರುತ್ತಿದ್ದ ವೇಳೆ ಬಸ್ ಹಾಗೂ ಟಿಪ್ಪರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ತೀವ್ರ ಗಾಯಗೊಂಡಿದ್ದ ಬಸ್ ಚಾಲಕ ಅಭಿಬ್ ಜಾನ್(55) ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗುರುವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಬಸ್ ಚಾಲಕನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಬಸ್ ನಲ್ಲಿದ್ದ ಐದಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟಿಪ್ಪರ್, ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ದುರ್ಮರಣ

    ಟಿಪ್ಪರ್, ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ದುರ್ಮರಣ

    -ಅಪಘಾತದ ರಭಸಕ್ಕೆ ಟಿಪ್ಪರ್ ಮುಂಭಾಗ ನಜ್ಜುಗುಜ್ಜು

    ಮಡಿಕೇರಿ : ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

    ವಿರಾಜಪೇಟೆಯ ನಿವಾಸಿ ಭರತ್ ಮತ್ತು ಕುಶಾಲನಗರದ ನಿವಾಸಿ ಕುಟ್ಟನ್ ಅಪಘಾತದಲ್ಲಿ ಸಾವನ್ನಪ್ಪಿದವರು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ರಾಮನಗರದಲ್ಲಿ ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಭರತ್ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಕುಟ್ಟನ್ ಎಂಬವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ನೀಡುವ ಮೊದಲೇ ಕುಟ್ಟನ್ ಸಾವನ್ನಪ್ಪಿದ್ದಾರೆ.

    ಮುಖಾಮುಖಿ ಡಿಕ್ಕಿಯ ರಭಸಕ್ಕೆ ಬೈಕ್ ಮುಂಭಾಗದ ಚಕ್ರವೇ ಮುರಿದು ಬಿದ್ದಿದ್ದರೆ, ಟಿಪ್ಪರ್ ನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    – ಮೂರೇ ದಿನ ಬಾಕಿ ಇದ್ದ ಮದ್ವೆ, ಕೈಕಾಲು ಛಿಧ್ರ ಛಿಧ್ರ

    ಚಿಕ್ಕಬಳ್ಳಾಪುರ: ಸಂಬಂಧಿಕರು ಮತ್ತು ಸ್ನೇಹಿತರಿಗೆ ವಿವಾಹ ಆಮಂತ್ರಣ ಪತ್ರಿಕೆ ಹಂಚಲು ಹೋಗಿದ್ದ ಮದುಮಗನೊರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ತಡರಾತ್ರಿ ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ, ರಾಷ್ಟ್ರೀಯ ಹೆದ್ದಾರಿ ನಾಗಾರ್ಜುನ ಕಾಲೇಜು ಬಳಿಯ ಸೇತುವೆ ಬಳಿ ಅಪಘಾತ ನಡೆದಿದೆ. ಟಿಪ್ಪರ್ ಹಾಗೂ ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದೇವನಹಳ್ಳಿ ತಾಲೂಕು ಸೋಮತನಹಳ್ಳಿ ಗ್ರಾಮದ ಹನುಮಂತೇಗೌಡ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಮದುವೆಗೆ ಮೂರೇ ದಿನ ಬಾಕಿ ಇತ್ತು.

    ಹಿಂಬದಿ ಕಿಶೋರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ನಂತರ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ನಂದಿಗಿರಿಧಾಮ ಪೊಲೀಸರು ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಈಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

  • ಟಿಪ್ಪರ್ ಹರಿದು ತಾತ-ಮೊಮ್ಮಗ ಅಪ್ಪಚ್ಚಿ- ಬೈಕ್ ಪೀಸ್ ಪೀಸ್

    ಟಿಪ್ಪರ್ ಹರಿದು ತಾತ-ಮೊಮ್ಮಗ ಅಪ್ಪಚ್ಚಿ- ಬೈಕ್ ಪೀಸ್ ಪೀಸ್

    – ಮರಕ್ಕೆ ಡಿಕ್ಕಿಹೊಡೆದು ಟಿಪ್ಪರ್ ನಜ್ಜುಗುಜ್ಜು

    ಚಿಕ್ಕಮಗಳೂರು: ಬೈಕ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತಾತ, ಮೊಮ್ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಬೀರೂರು ಬಳಿ ನಡೆದಿದೆ.

    ಬೀರೂರು ಸಮೀಪದ ಬಳಿಗನೂರು ಗ್ರಾಮದ ಮಲ್ಲಪ್ಪ (57) ಹಾಗೂ ಉತ್ಸವ್ (12) ಮೃತ ದುರ್ದೈವಿಗಳು. ಕಡೂರು-ಬೀರೂರು ಮಧ್ಯದ ಪರ್ಲ್ಸ್ ಕ್ಲಬ್ ಸಮೀಪದ ರಂಗನಾಥ್ ಶೋಂ ರೂಂ ಬಳಿ ಈ ಅಪಘಾತ ಸಂಭವಿಸಿದೆ.

    ಬೀರೂರಿನಿಂದ ಕಡೂರು ಕಡೆ ವೇಗವಾಗಿ ಬರುತ್ತಿದ್ದ ಟಿಪ್ಪರ್ ಕಡೂರಿನಿಂದ ಬೀರೂರು ಕಡೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ವೇಗವಾಗಿದ್ದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿದ್ದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆಯ ಬದಿಯ ಮರಕ್ಕೆ ಟಿಪ್ಪರ್ ಅದೇ ವೇಗದಲ್ಲಿ ಅಪ್ಪಳಿಸಿದೆ.

    ಲಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಬೀರೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.