Tag: tipper lorry

  • ಇಂಡ್ಲವಾಡಿಯಲ್ಲಿ ಭೀಕರ ಅಪಘಾತ – ಬೈಕ್ ಮೇಲೆಯೇ ಹರಿದ ಟಿಪ್ಪರ್ ಲಾರಿ

    ಇಂಡ್ಲವಾಡಿಯಲ್ಲಿ ಭೀಕರ ಅಪಘಾತ – ಬೈಕ್ ಮೇಲೆಯೇ ಹರಿದ ಟಿಪ್ಪರ್ ಲಾರಿ

    ಆನೇಕಲ್ (ಬೆಂಗಳೂರು): ಟಿಪ್ಪರ್ ಲಾರಿ (Lorry) ಅತಿ ವೇಗಕ್ಕೆ ಮಹಿಳೆ ಬಲಿಯಾಗಿರುವ ಘಟನೆಯೊಂದು ಬೆಂಗಳೂರು ಹೊರವಲಯದ ಆನೇಕಲ್ (Anekal Accident) ತಾಲೂಕಿನ ಇಂಡ್ಲವಾಡಿಯಲ್ಲಿ ನಡೆದಿದೆ.

    ಟಿಪ್ಪರ್ ಲಾರಿಯು ಜಿಗಣಿ ಭಾಗದಿಂದ ಆನೇಕಲ್ ಕಡೆಗೆ ವೇಗವಾಗಿ ಬರುತ್ತಿತ್ತು. ಇತ್ತ ದ್ವಿಚಕ್ರ ವಾಹನವು ಇಂಡ್ಲವಾಡಿ ಗ್ರಾಮದಿಂದ ಆನೇಕಲ್ ಪಟ್ಟಣಕ್ಕೆ ಬರುತಿತ್ತು. ಇಂಡ್ಲವಾಡಿ ಸರ್ಕಲ್ ಬಳಿ ಲಾರಿಯು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದವರ ಮೇಲೆ ಏಕಾಏಕಿ ಹರಿದಿದೆ. ಪರಿಣಾಮ ಪಲ್ಸರ್ ಬೈಕ್ ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಹಾಗೂ ಇನ್ನೊಬ್ಬ ಮಹಿಳೆಗೆ ಗಂಭೀರ ಗಾಯಗಳಾಗಿದೆ. ಅಪಘಾತ ಮಾಡಿ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಎಲ್ಲಾ ಕಾಲಕ್ಕೂ ಸಮೀಕ್ಷೆಗಳು ನಿಜವಾಗಲ್ಲ: ಜಿ. ಪರಮೇಶ್ವರ್

  • ಜಲಾಶಯ ನೋಡಲು ಗೆಳೆಯನೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿ

    ಜಲಾಶಯ ನೋಡಲು ಗೆಳೆಯನೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿ

    ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ನೋಡಲು ಬೆಂಗಳೂರಿನಿಂದ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬಳು (Student) ಅಪಘಾತಕ್ಕೆ (Accident) ಬಲಿಯಾಗಿರುವ ರ್ದುಘಟನೆ ಚಿಕ್ಕಬಳ್ಳಾಪುರ (Chikkaballapura) ನಗರದ ವಾಪಸಂದ್ರ ಸೇತುವೆಯ ಕೆಳ ಭಾಗದಲ್ಲಿ ನಡೆದಿದೆ.

    ಬೆಂಗಳೂರಿನ ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ (Seshadripuram College) ಪ್ರಥಮ ವರ್ಷದ ಬಿಕಾಂ (B’com Student) ವಿದ್ಯಾರ್ಥಿನಿ ಚೈತ್ರಾ (18) (Chitra) ಮೃತ ದುರ್ದೈವಿ. ಅಂದಹಾಗೆ ಎಂಇಎಸ್ ಕಾಲೇಜಿನ(MES Collage) ತನ್ನ ಸ್ನೇಹಿತ ಲಿಖಿತ್ ಗೌಡನೊಂದಿಗೆ ಹೊಂಡಾ ಆಕ್ಸೆಸ್ ಗಾಡಿಯೊಂದಿಗೆ ಆಗಮಿಸಿದ್ದ ಚೈತ್ರಾ, ಶ್ರೀನಿವಾಸ ಸಾಗರ ಜಲಾಶಯ (Srinivasa Sagara Dam) ನೋಡಿಕೊಂಡು ಬೆಂಗಳೂರಿನತ್ತ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ತಿಂಗಳಾದ್ರೂ ಶಾಲಾ ಆವರಣದ ನೀರು ಹೊರಹಾಕದೇ ನಿರ್ಲಕ್ಷ್ಯ- ಇದು ಹೆಚ್‍ಡಿಕೆ ಸ್ವಕ್ಷೇತ್ರದ ದುಸ್ಥಿತಿ

     

    ಚಿಕ್ಕಬಳ್ಳಾಪುರ ನಗರದ ಮೂಲಕ ವಾಪಸಂದ್ರದ ಸೇತುವೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ (National Highway) ಕಡೆ ಬರುವಾಗ ಬಾಗೇಪಲ್ಲಿ (Bagepalli) ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ (Tipper Lorry) ಆಕ್ಸೆಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಕ್ಸೆಸ್ ಚಾಲನೆ ಮಾಡುತ್ತಿದ್ದ ಲಿಖಿತ್ ಗೌಡನ ಕಾಲಿಗೆ ಗಾಯವಾಗಿ ಕೆಳಗೆ ಬಿದ್ದಿದ್ದಾನೆ. ಮತ್ತೊಂದೆಡೆ ರಸ್ತೆಯಲ್ಲಿ ಬಿದ್ದ ಚೈತ್ರಾ ಮೇಲೆ ಟಿಪ್ಪರ್ ಲಾರಿ ಹರಿದಿದೆ. ಟಿಪ್ಪರ್ ಹರಿದ ಪರಿಣಾಮ ಚೈತ್ರಾ ದೇಹ ನಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

    ಕಾಲಿಗೆ ಗಾಯವಾಗಿರುವ ಕಾರಣ ಲಿಖಿತ್ ಗೌಡನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚೈತ್ರಾ ಬೆಂಗಳೂರಿನ ಕೆ.ಆರ್. ಪುರಂ (K.R. Puram) ನಿವಾಸಿ ಅಂತ ತಿಳಿದುಬಂದಿದ್ದು, ಲಿಖಿತ್ ಗೌಡ ಮಲ್ಲೇಶ್ವರಂನ(Malleshwaram) ಎಂಇಎಸ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿಯಾಗಿದ್ದಾನೆ. ಘಟನೆ ನಂತರ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್

    Live Tv
    [brid partner=56869869 player=32851 video=960834 autoplay=true]

  • ಲಾರಿಗೆ ವ್ಯಾನ್ ಡಿಕ್ಕಿ – 4  ಮೀನುಗಾರರು ಸಾವು

    ಲಾರಿಗೆ ವ್ಯಾನ್ ಡಿಕ್ಕಿ – 4 ಮೀನುಗಾರರು ಸಾವು

    ತಿರುವನಂತಪುರಂ: ಮಂಗಳವಾರ ಮುಂಜಾನೆ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ಸಂಭವಿಸಿದೆ.

    ಕರುಣಾಂಬರಂ (56) ಮತ್ತು ಬಾರ್ಕುಮಾನ್ಸ್ (45), ಜಸ್ಟಿನ್ (56) ಮತ್ತು ತಮಿಳುನಾಡು ಮೂಲದ ಬಿಜು (35) ಮೃತ ದುರ್ದೈವಿಗಳು. ಮೀನುಗಾರರು ಮೀನುಗಾರಿಕೆಗಾಗಿ ವಿಝಿಂಜಂನಿಂದ ಬೇಪೂರ್‍ಗೆ ತೆರಳುತ್ತಿದ್ದ ವ್ಯಾನ್ ನಿಂದಕರ್ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

    ವ್ಯಾನ್‍ನಲ್ಲಿ 34 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನು ಕರುನಾಗಪಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕನಿಷ್ಠ 12 ಮಂದಿ ತಮಿಳುನಾಡು ಮೂಲದವರಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಗಾಯಗೊಂಡ ಇಬ್ಬರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

  • ನಿಂತಿದ್ದ ನಾಲ್ಕು ಕಾರುಗಳಿಗೆ ಲಾರಿ ಡಿಕ್ಕಿ

    ನಿಂತಿದ್ದ ನಾಲ್ಕು ಕಾರುಗಳಿಗೆ ಲಾರಿ ಡಿಕ್ಕಿ

    ಧಾರವಾಡ: ಇಂದು ನಗರದಲ್ಲಿ ಬೆಳ್ಳಂಬೆಳಗ್ಗೆ ಟಿಪ್ಪರ್ ಲಾರಿಯೊಂದರ ಬ್ರೇಕ್ ಫೇಲ್ ಆದ ಪರಿಣಾಮ ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

    ಇಂದು ಮುಂಜಾನೆ ಹುಬ್ಬಳ್ಳಿಯಿಂದ ಬೆಳಗಾವಿ ಕಡೆ ಹೊರಟಿದ್ದ ಟಿಪ್ಪರ್ ಲಾರಿ ಬ್ರೇಕ್ ಫೇಲ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸರತಿ ಸಾಲಿನಲ್ಲಿ ನಿಲ್ಲಿಸಿದ್ದ ಒಟ್ಟು ನಾಲ್ಕು ಕಾರುಗಳು ಒಂದರ ಹಿಂದೊಂದು ಡಿಕ್ಕಿ ಹೊಡೆದುಕೊಂಡಿದೆ. ನಾಲ್ಕು ಕಾರುಗಳ ಹಿಂಬದಿ ಲಾರಿ ಗುದ್ದಿದ ಹೊಡೆತಕ್ಕೆ ಜಖಂಗೊಂಡಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

    ಕಾರುಗಳಿಗೆ ಡಿಕ್ಕಿ ಹೊಡೆದ ಬಳಿಕ ಟಿಪ್ಪರ್ ಲಾರಿ ಫುಟ್‍ಪಾತ್ ಏರಿ ನಿಂತಿದೆ. ನಗರದ ಧಾರವಾಡ ಹೊಟೇಲ್ ಎದುರಿನ ರಸ್ತೆಯಲ್ಲಿ ಈ ಅಪಘಾತ ನಡೆದಿದ್ದು, ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅವೈಜ್ಞಾನಿಕ ಡೈವರ್ಷನ್‍ಗೆ ಸವಾರ ಬಲಿ..!

    ಅವೈಜ್ಞಾನಿಕ ಡೈವರ್ಷನ್‍ಗೆ ಸವಾರ ಬಲಿ..!

    ಕಾರವಾರ: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಕಡೇಕೋಡಿ ಗ್ರಾಮದ ಬಳಿ ನಡೆದಿದೆ.

    ತುಕಾರಾಂ ಪಟಗಾರ್ (30) ಮೃತಪಟ್ಟ ಬೈಕ್ ಸವಾರ. ಕಡೇಕೋಡಿ ಗ್ರಾಮದ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿಪ್ಪರ್ ಲಾರಿಗೆ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ತುಕರಾಂ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಬೈಕ್ ಸವಾರನನ್ನು ಆಸ್ಪತೆಗೆ ದಾಖಲಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಟಿಪ್ಪರ್ ಲಾರಿ ಹೆದ್ದಾರಿ ಅಗಲೀಕರಣ ನಡೆಸುತ್ತಿರುವ ಐಆರ್‌ಬಿ ಕಂಪನಿಗೆ ಸೇರಿದ್ದಾಗಿದೆ. ಹೆದ್ದಾರಿ ಅಗಲೀಕರಣವನ್ನು ಪಡೆದಿದ್ದ ಐಆರ್‌ಬಿ ಕಂಪನಿ ಅವೈಜ್ಞಾನಿಕವಾಗಿ ಡೈವರ್ಷನ್ ಹಾಕಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿಬಂದಿದೆ.

    ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕುಮುಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೈಕಿಗೆ ಡಿಕ್ಕಿ ಹೊಡೆದು ಸವಾರನ ತಲೆಯ ಮೇಲೆ ಹರಿದ ಟಿಪ್ಪರ್ ಲಾರಿ

    ಬೈಕಿಗೆ ಡಿಕ್ಕಿ ಹೊಡೆದು ಸವಾರನ ತಲೆಯ ಮೇಲೆ ಹರಿದ ಟಿಪ್ಪರ್ ಲಾರಿ

    ರಾಮನಗರ: ಬೈಕಿಗೆ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರನ ತಲೆಯ ಮೇಲೆ ಟಿಪ್ಪರ್ ಲಾರಿ ಹರಿದು ಹೋದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ.

    ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿ ಸಾಗರ್ ಮೃತ ದುರ್ದೈವಿ. ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವಾಗ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಕನಕಪುರದ ವಾಣಿ ಥಿಯೇಟರ್ ಬಳಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಿಂದ ಕೆಳಗೆ ಬಿದ್ದ ಸಾಗರ್ ನ ತಲೆಯ ಮೇಲೆ ಲಾರಿಯ ಚಕ್ರ ಹರಿದಿದೆ. ಪರಿಣಾಮ ಸಾಗರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

     

    ಅಪಘಾತದ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿ ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಘಟನೆ ಸಂಬಂಧ ಕನಕಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲಾರಿಯಡಿ ಸಿಲುಕಿ ವೃದ್ಧೆ ಒದ್ದಾಟ- ತುಮಕೂರಿನಲ್ಲೊಂದು ಮನಕಲಕುವ ಘಟನೆ

    ಲಾರಿಯಡಿ ಸಿಲುಕಿ ವೃದ್ಧೆ ಒದ್ದಾಟ- ತುಮಕೂರಿನಲ್ಲೊಂದು ಮನಕಲಕುವ ಘಟನೆ

    ತುಮಕೂರು: ವೃದ್ಧೆಯೊಬ್ಬರು ಲಾರಿ ಅಡಿಗೆ ಸಿಲುಕಿ ವಿಲವಿಲನೆ ಒದ್ದಾಡಿದ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಈ ಮನಕಲಕುವ ದುರಂತ ಸಂಭವಿಸಿದೆ. ಚಾಲಕ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬಂದ ಹಿನ್ನೆಲೆ ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಸರ್ಕಾರಿ ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಾಚಾರಿ ವೃದ್ಧೆಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಟಿಪ್ಪರ್ ಲಾರಿ ಅಡಿ ಬಿದ್ದ ವೃದ್ಧೆ ಚಕ್ರಕ್ಕೆ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ವೃದ್ಧೆಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

    ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ಬ್ರೇಕ್ ವೈಫಲ್ಯದಿಂದ ಶೆಡ್‍ಗೆ ನುಗ್ಗಿದ ಟಿಪ್ಪರ್ ಲಾರಿ- ಒಂದೇ ಕುಟುಂಬದ ಇಬ್ಬರು ಸಾವು

    ಬ್ರೇಕ್ ವೈಫಲ್ಯದಿಂದ ಶೆಡ್‍ಗೆ ನುಗ್ಗಿದ ಟಿಪ್ಪರ್ ಲಾರಿ- ಒಂದೇ ಕುಟುಂಬದ ಇಬ್ಬರು ಸಾವು

    ಬೆಂಗಳೂರು: ಬ್ರೇಕ್ ವೈಫಲ್ಯದಿಂದ ಟಿಪ್ಪರ್ ಲಾರಿ ಶೆಡ್‍ಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವ ಘಟನೆ ಕಮಲಾ ನಗರದ ವೀರಭದ್ರೇಶ್ವರ ಥಿಯೇಟರ್ ಬಳಿ ನಡೆದಿದೆ.

    ಲಾರಿ ಮಾಲೀಕ ನಟರಾಜ್ ಮತ್ತು ಅವರ ಬಾಮೈದ ವಿನಯ್ ಮೃತ ದುರ್ದೈವಿಗಳು. ಇವರು ದೇವನಹಳ್ಳಿಯ ಕೋಡಿಮಂಜೇನಹಳ್ಳಿಯ ಮೂಲದವರಾಗಿದ್ದಾರೆ.

    ಬುಧವಾರ ಮಧ್ಯರಾತ್ರಿ 11.30 ರ ಸಮಯಕ್ಕೆ ಬಸವೇಶ್ವರನಗರದ ಕಟ್ಟಡವೊಂದರ ನಿರ್ಮಾಣಕ್ಕೆ ಮರಳು ಸರಬರಾಜು ಮಾಡಲು ಲಾರಿ ಬಂದಿದ್ದು, ಬ್ರೇಕ್ ವೈಫಲ್ಯದಿಂದಾಗಿ ಲಾರಿ ಶೆಡ್‍ಗೆ ನುಗ್ಗಿದೆ. ಸಿಕ್ಕಿ ಹಾಕಿಕೊಂಡಿದ್ದ ಲಾರಿಯನ್ನು ಕ್ರೈನ್ ಮತ್ತು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.

    ಘಟನೆ ಬಗ್ಗೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.