Tag: Tina Dabi

  • ಪತಿ ಜೊತೆಗಿನ ಫೋಟೋ ಹಂಚಿಕೊಂಡ ಐಎಎಸ್ ಟಾಪರ್ ಟೀನಾ ದಾಬಿ

    ಪತಿ ಜೊತೆಗಿನ ಫೋಟೋ ಹಂಚಿಕೊಂಡ ಐಎಎಸ್ ಟಾಪರ್ ಟೀನಾ ದಾಬಿ

    ನವದೆಹಲಿ: ವಿವಾಹದ ಬಳಿಕ ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ತಮ್ಮ ಟ್ಟಿಟ್ಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದು, ಪತಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನವದಂಪತಿ ವೈಟ್ ಆ್ಯಂಡ್ ವೈಟ್ ಉಡುಪು ಧರಿದಿ ಸೋಫಾ ಮೇಲೆ ಕುಳಿತು ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದಾಗಿದೆ.

    2016ರ ಬ್ಯಾಚ್‍ನ ಯುಪಿಎಸ್‍ಸಿ ಟಾಪರ್ ಮತ್ತು ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ಶುಕ್ರವಾರ ರಾಜಸ್ಥಾನದ ಜೈಪುರದಲ್ಲಿ ಸರಳವಾಗಿ ಪ್ರದೀಪ್ ಗವಾಂಡೆ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಮರಾಠಿ ಸಂಪ್ರದಾಯಂತೆ ದಂಪತಿಗಳು ಹಾರವನ್ನು ವಿನಿಮಯ ಮಾಡಿಕೊಂಡರು. ಮದುವೆ ವೇಳೆ ಟೀನಾ ಬಿಳಿ ಮತ್ತು ಗೋಲ್ಡನ್ ಸೀರೆಯನ್ನು ಧರಿಸಿದ್ದು, ಕೂದಲಿನಲ್ಲಿ ಗಜ್ರಾವನ್ನು ಧರಿಸಿದ್ದು, ಪ್ರದೀಪ್ ಕೂಡ ಬಿಳಿ ಕುರ್ತಾ-ಪೈಜಾಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ತಯಾರಾದ ಐಎಎಸ್ ಟಾಪರ್ ಟೀನಾ

    2015 ರಲ್ಲಿ, ಟೀನಾ ದಾಬಿ ದಲಿತ ಸಮುದಾಯದಿಂದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ವ್ಯಕ್ತಿಯಾದರು. ಟೀನಾ ದಾಬಿ ಮತ್ತು ಅಥರ್ ಅಮೀರ್ ಉಲ್‍ಶಫಿ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ಅವರಿಬ್ಬರ ವಿವಾಹವೂ ಬಹಳಷ್ಟು ಸುದ್ದಿ ಮಾಡಿತ್ತು. ಟೀನಾ 2020ರ ನವೆಂಬರ್‍ನಲ್ಲಿ ಮೊದಲ ಪತಿ ಅಮೀರ್ ಉಲ್‍ಶಫಿ ಖಾನ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು. ಇದನ್ನೂ ಓದಿ: ಐಎಎಸ್‌ ಟಾಪರ್‌ ಟೀನಾ ಡಾಬಿ, ಅಥರ್‌ ಖಾನ್‌ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ

  • 2ನೇ ಮದುವೆಗೆ ತಯಾರಾದ ಐಎಎಸ್ ಟಾಪರ್ ಟೀನಾ

    2ನೇ ಮದುವೆಗೆ ತಯಾರಾದ ಐಎಎಸ್ ಟಾಪರ್ ಟೀನಾ

    ನವದೆಹಲಿ: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಟೀನಾ ದಾಬಿ, ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರ ಜೊತೆಗೆ 2ನೇ ಮದುವೆಯಾಗುತ್ತಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಮ್‍ನಲ್ಲಿ ಟೀನಾ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭಾವಿ ಪತಿ ಪ್ರದೀಪ್ ಗಾವಂಡೆ ಅವರಿಗೂ ಇದು ಎರಡನೇ ಮದುವೆ. ಐಎಎಸ್ ಆಗುವ ಮೊದಲು ಅವರು ವೈದ್ಯರಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಐಎಎಸ್‌ ಟಾಪರ್‌ ಟೀನಾ ಡಾಬಿ, ಅಥರ್‌ ಖಾನ್‌ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ

     

    View this post on Instagram

     

    A post shared by Tina Dabi (@dabi_tina)

     

    2015 ರಲ್ಲಿ, ಟೀನಾ ದಾಬಿ ದಲಿತ ಸಮುದಾಯದಿಂದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ವ್ಯಕ್ತಿಯಾದರು. ಟೀನಾ ದಾಬಿ ಮತ್ತು ಅಥರ್ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ಅವರಿಬ್ಬರ ವಿವಾಹವು ಬಹಳಷ್ಟು ಸುದ್ದಿ ಮಾಡಿತ್ತು. ಟೀನಾ 2020ರ ನವೆಂಬರ್‍ನಲ್ಲಿ ಮೊದಲ ಪತಿ ಅಮೀರ್ ಉಲ್‍ಶಫಿ ಖಾನ್ ಅವರಿಂದ ವಿಚ್ಚೇದನ ಪಡೆದಿದ್ದಾರೆ. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು. ಇದನ್ನೂ ಓದಿ:  ಅತ್ತೆ-ಸೊಸೆ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ ಶಂಕರಣ್ಣ..?

    ಅಥರ್ ಖಾನ್ ಮೊದಲು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ವಿಚ್ಛೇದನದ ನಂತರ ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್‍ನೊಂದಿಗೆ ತಮ್ಮ ರಾಜ್ಯಕ್ಕೆ ಹೋದರು. ಟೀನಾ ದಾಬಿ ಮೂಲತಃ ದೆಹಲಿಯವರು. ಕಳೆದ ವರ್ಷ ಅವರ ಸಹೋದರಿ ರಿಯಾ ದಾಬಿ ಕೂಡ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದರು. ಇದೀಗ ಟೀನಾ ಮತ್ತೆ 2ನೇ ಮದುವೆಗೆ ಸಿದ್ಧರಾಗಿದ್ದು, ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ: ಡಿಕೆಶಿ

  • ಐಎಎಸ್‌ ಟಾಪರ್‌ ಟೀನಾ ಡಾಬಿ, ಅಥರ್‌ ಖಾನ್‌ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ

    ಐಎಎಸ್‌ ಟಾಪರ್‌ ಟೀನಾ ಡಾಬಿ, ಅಥರ್‌ ಖಾನ್‌ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ

    ಜೈಪುರ: 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್‌ ಖಾನ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ಪ್ರೇಮಿಗಳಾಗಿದ್ದ ಇಬ್ಬರು 2018ರಲ್ಲಿ ಮದುವೆಯಾಗಿದ್ದರು. ಈಗ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

     

    ಕೆಲ ದಿನಗಳ ಹಿಂದೆ ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ʼಖಾನ್‌ʼ ಸರ್‌ ನೇಮ್‌ ತೆಗೆದು ಹಾಕಿದ್ದರು. ಅಥರ್‌ ಖಾನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಟಿನಾ ಅವರನ್ನು ಅನ್‌ಫಾಲೋ ಮಾಡಿದ್ದರು.

    ಕಾಶ್ಮೀರ ಮೂಲದವರಾದ ಅಥರ್‌ ಖಾನ್‌ ಐಎಎಸ್‌ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಟೀನಾ ಮತ್ತು ಅಥರ್‌ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದ್ದು, ಸದ್ಯ ಇಬ್ಬರೂ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಐಎಎಸ್‌ ಟಾಪರ್ಸ್ ಅಂತರ ಧರ್ಮೀಯ ವಿವಾಹವಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ಹಿಂದೂ ಮಹಾಸಭಾ ಈ ಮದುವೆಯನ್ನು ಲವ್‌ ಜಿಹಾದ್‌ಗೆ ಹೋಲಿಸಿ ಟೀಕಿಸಿತ್ತು.