Tag: Timetable

  • SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ‌ಪ್ರಕಟ

    SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ‌ಪ್ರಕಟ

    ಬೆಂಗಳೂರು: ಪ್ರಸಕ್ತ ವರ್ಷದ SSLC ವಾರ್ಷಿಕ ಪರೀಕ್ಷೆಯ (SSLC Exam) ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination And Assessment Board) ಪ್ರಕಟ ಮಾಡಿದೆ.

    ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ವೇಳಾಪಟ್ಟಿ ಹೀಗಿದೆ. ಇದನ್ನೂ ಓದಿ: PFI ಸೇರಿ ಪೋಸ್ಟರ್ – ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ: ಬೊಮ್ಮಾಯಿ

    SSLC ವೇಳಾಪಟ್ಟಿ
    ಮಾರ್ಚ್ 31- ಪ್ರಥಮ ಭಾಷೆ, ಮಾರ್ಚ್ 4- ಗಣಿತ, ಮಾರ್ಚ್ 6- ದ್ವಿತೀಯ ಭಾಷೆ ವಿಷಯ, ಮಾರ್ಚ್ 10- ವಿಜ್ಞಾನ, ಮಾರ್ಚ್ 12- ತೃತೀಯ ಭಾಷೆ ವಿಷಯ, ಮಾರ್ಚ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಯುಪಿಯಲ್ಲಿ ಮದರಸಾಗಳಿಗೆ ಹೊಸ ವೇಳಾಪಟ್ಟಿ ಜಾರಿ – ನಮಾಜ್‍ಗೂ ಸಮಯಾವಕಾಶಕ್ಕೆ ಮನವಿ

    ಯುಪಿಯಲ್ಲಿ ಮದರಸಾಗಳಿಗೆ ಹೊಸ ವೇಳಾಪಟ್ಟಿ ಜಾರಿ – ನಮಾಜ್‍ಗೂ ಸಮಯಾವಕಾಶಕ್ಕೆ ಮನವಿ

    ಲಕ್ನೋ: ಉತ್ತರ ಪ್ರದೇಶ ಸರ್ಕಾರವು (Uttar Pradesh government) ರಾಜ್ಯದಲ್ಲಿನ ಮದರಸಾಗಳ (Madrassas) ಸಮಯವನ್ನು ಒಂದು ಗಂಟೆ ವಿಸ್ತರಿಸಿದೆ ಮತ್ತು ಇದರ ಪರಿಷ್ಕೃತ ಸಮಯವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಆರು ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಮದರಸಾಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಆದರೆ ನಮಾಜ್ (Namaz) ಮಾಡುವ ಸಮಯ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿವೆ.

    ರಾಜ್ಯ ಮದರಸಾ ಶಿಕ್ಷಣ ಮಂಡಳಿಯು ಅನುದಾನಿತ ಮದರಸಾಗಳಿಗೆ ಹೊಸ ವೇಳಾಪಟ್ಟಿಯನ್ನು (New Timetable) ಹೊರಡಿಸಿದ್ದು, ಅದರ ಪ್ರಕಾರ ತರಗತಿಗಳು ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ ಮತ್ತು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗುತ್ತದೆ. ತರಗತಿಗಳು ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿವೆ. 30 ನಿಮಿಷಗಳ ಊಟದ ವಿರಾಮದ ನಂತರ, ತರಗತಿಗಳು 12:30 ಕ್ಕೆ ಪುನರಾರಂಭಗೊಳ್ಳುತ್ತವೆ ಮತ್ತು 3 ಗಂಟೆಯವರೆಗೆ ಇರುತ್ತದೆ. ಇದನ್ನೂ ಓದಿ: ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ಮಾಡಿ ಪರಾರಿಯಾದ ಉದ್ಯಮಿ ಮಗ

    ವಿದ್ಯಾರ್ಥಿಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾದ ಹೊಸ ವೇಳಾಪಟ್ಟಿಯು ರಾಜ್ಯದ ಎಲ್ಲಾ 14,513 ಮಾನ್ಯತೆ ಪಡೆದ ಮದರಸಾಗಳಿಗೆ ಅನ್ವಯಿಸುತ್ತದೆ. ಮದರಸಾಗಳಲ್ಲಿ ಮಧ್ಯಾಹ್ನದ ಪ್ರಾರ್ಥನೆಯೂ ಪ್ರಮುಖ ಭಾಗವಾಗಿದ್ದು, ಅದಕ್ಕಾಗಿ ಸಮಯಾವಕಾಶ ನೀಡುವಂತೆ ಲಕ್ನೋದ ಶಕುಲ್ ಆಲಂ ಸಬಾರಿಯಾ ಹಾಗೂ ಮದರಸಾದ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು

    ಈ ಕುರಿತಂತೆ ಪ್ರತಿಕ್ರಿಯಿಸಿದ ಮುಸ್ಲಿಂ ವಿದ್ವಾಂಸ ಮೌಲಾನಾ ಇಶ್ತಿಯಾಕ್ ಖಾದ್ರಿ, ಮದರಸಾ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳನ್ನು ಎಲ್ಲಾ ಮದರಸಾಗಳು ಒಪ್ಪಿಕೊಂಡಿದೆ. ಆದರೆ ಪ್ರತಿ ಮದರಸಾದಲ್ಲಿ ತಮ್ಮ ಪದ್ಧತಿಗಳನ್ನು ಅನುಸರಿಸುವಂತೆ ಮದರಸಾ ಮಂಡಳಿಯು ಕಾಳಜಿ ವಹಿಸಬೇಕು. ನಮಾಜ್ ಮದರಸಾ ಶಿಕ್ಷಣದ ಪ್ರಮುಖ ಅಂಗವಾಗಿದ್ದು, ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    ನವದೆಹಲಿ: ಬಹಳಷ್ಟು ಪೋಷಕರು ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಬೇಕು, ರ‍್ಯಾಂಕ್ ಪಡೆದುಕೊಳ್ಳಬೇಕು ಎಂದು ಅನೇಕ ಶಿಸ್ತುಬದ್ಧ ನಿಯಮಗಳನ್ನು ವಿಧಿಸುತ್ತಾರೆ. ಆದರೆ, ಇಲ್ಲೊಬ್ಬರು ತನ್ನ 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಮಗನಿಗೆ ಶಿಸ್ತು ರೂಢಿಸಲು ಮುಂದಾಗಿದ್ದಾರೆ.

    ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ 6 ವರ್ಷದ ಮಗನಿಗೆ ವೇಳಾಪಟ್ಟಿ ರಚಿಸಿಕೊಟ್ಟಿದ್ದು, ಇದನ್ನು ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಕೆದಾರರು ಅವರು ತಮ್ಮ ಮಗ ಅಬೀರ್ ಅವರೊಂದಿಗೆ ಸಹಿ ಮಾಡಿದ ಕೈಬರಹದ ವೇಳಾಪಟ್ಟಿ ಒಪ್ಪಂದದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

    ಏನಿದು ವೇಳಾಪಟ್ಟಿ ಒಪ್ಪಂದ?- ಈ ಒಪ್ಪಂದವು ಮಗು ದಿನನಿತ್ಯದ ಚಟುವಟಿಕೆಗಳನ್ನು ಒಳಗೊಂಡಿದೆ. ಬೆಳಿಗ್ಗೆ ಎದ್ದು ಶುಚಿಯಾಗುವುದು, ಹಾಲು ಕುಡಿಯುವುದು ಮತ್ತು ಹೋಂ ವರ್ಕ್ ಮಾಡುವುದು, ಅಳದೇ, ಕೂಗಾಡದೇ, ಗೊಣಗದೇ ಅಥವಾ ಜಗಳವಾಡದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೀಗೆ ಮಾಡಿದರೆ, ತಂದೆ ಮಗನಿಗೆ ಪ್ರತಿದಿನ 10 ರೂ. ನೀಡುವುದಾಗಿ ಪಟ್ಟಿಯಲ್ಲಿ ಬರೆದಿದ್ದಾರೆ. ಅಲ್ಲದೆ, ಮಗು ಒಂದು ವಾರ ಪೂರ್ತಿ ಒಳ್ಳೆಯ ನಡತೆಯೊಂದಿಗೆ ಮುಂದುವರಿದರೆ, ಅವನಿಗೆ ಬೋನಸ್ ಆಗಿ 100 ರೂ. ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.

    ಇದೀಗ ಜಾಲತಾಣದಲ್ಲಿ ಈ ಒಪ್ಪಂದಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. 32 ಸಾವಿರಕ್ಕೂ ಹೆಚ್ಚು ಮಂದಿ ಇದಕ್ಕೆ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ನನ್ನ ಮಗು ಸುಮಾರು 2 ಸಾವಿರ ರೂ. ಸಂಪಾದಿಸಿದ್ದಾನೆ. ಶಾಲೆಗಳು ಪ್ರಾರಂಭವಾದ ಬಳಿಕ ವೇಳಾಪಟ್ಟಿ ಬದಲಾಯಿಸಲಾಯಿತು ಎಂದು ಹೇಳಿದ್ದಾರೆ.

  • ಶಾಲಾ ಮಕ್ಕಳಿಗೆ ಪೂರ್ಣ ಪ್ರಮಾಣದ ತರಗತಿ – ದಸರಾಗೆ 14 ದಿನ ರಜೆ

    ಶಾಲಾ ಮಕ್ಕಳಿಗೆ ಪೂರ್ಣ ಪ್ರಮಾಣದ ತರಗತಿ – ದಸರಾಗೆ 14 ದಿನ ರಜೆ

    ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕೊರೊನಾದಿಂದ ಎರಡು ವರ್ಷ ಸಂಪೂರ್ಣ ತರಗತಿಗಳು ನಡೆದಿರಲಿಲ್ಲ. ಆದರೆ ಈ ವರ್ಷ ಪೂರ್ಣ ಪ್ರಮಾಣದ ತರಗತಿಗಳು ನಡೆಸಲು ವೇಳಾಪಟ್ಟಿ ಪ್ರಕಟ ಮಾಡಲಾಗಿದೆ.

    ಈ ಶೈಕ್ಷಣಿಕ ವರ್ಷದಲ್ಲಿ 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲು ಇಡಲಾಗಿದೆ. ಈ ವರ್ಷದ ದಸರಾಗೆ 14 ದಿನ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಇಲಾಖೆ ಈ ಬಾರಿ ಹಮ್ಮಿಕೊಂಡಿದೆ. ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆ, ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ, ಕನಕದಾಸರ ಜಯಂತಿ, ಸಂವಿಧಾನ ದಿನ, ಸಾವಿತ್ರ ಬಾಯಿ ಫುಲೆ, ವಿವೇಕಾನಂದರು ಸೇರಿದಂತೆ ಹಲವು ದಿನಾಚರಣೆ ಮತ್ತು ದಾರ್ಶನಿಕರ ಜಯಂತಿ ಆಚರಣೆಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

    ಶಿಕ್ಷಣ ಇಲಾಖೆ ಶೈಕ್ಷಣಿಕ ವೇಳಾಪಟ್ಟಿಗೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ. ಖಾಸಗಿ ಶಾಲೆಗಳ ಸಂಘಟನೆ ಕ್ಯಾಮ್ಸ್ ನಿಂದ ವೇಳಾಪಟ್ಟಿ ವಿರೋಧ ಮಾಡಿದ್ದು, ವೇಳಾಪಟ್ಟಿಯಲ್ಲಿ ಕೆಲವು ಗೊಂದಲಗಳಿವೆ, ಅದನ್ನು ಸರಿ ಮಾಡುವಂತೆ ಒತ್ತಾಯಿಸಿದ್ದಾರೆ.

    ಅಕ್ಟೋಬರ್ ತಿಂಗಳಿನಲ್ಲಿ 22 ದಿನ ಶೈಕ್ಷಣಿಕ ಚಟುವಟಿಕೆ ಮಾಡುವಂತೆ ನಿಗಧಿ ಮಾಡಲಾಗಿದೆ. ಆದರೆ ಅಕ್ಟೋಬರ್ ತಿಂಗಳಿನಲ್ಲಿ ದಸರಾಗೆ 14 ದಿನ ರಜೆ ನೀಡಲಾಗಿದೆ. ದೀಪಾವಳಿ ರಜೆ ಸೇರಿ 14-16 ದಿನ ಅಕ್ಟೋಬರ್ ತಿಂಗಳಲ್ಲಿ ಕಡಿಮೆ ಆಗಲಿದೆ. 14 ದಿನ ರಜೆ ಕೊಟ್ಟು 22 ದಿನ ಚಟುವಟಿಕೆಗಳನ್ನು ನಡೆಸಿ ಎನ್ನುವುದು ಸರಿಯಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯ ಮಾಡಿದ್ದಾರೆ. 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಹೀಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಬಾರುಕೋಲು ಬೀಸುತ್ತೇನೆ: ಸಿದ್ದರಾಮಯ್ಯ


    ಯಾವ ದಿನ ಏನು?

    ಮೇ 16 – ಶಾಲೆಗಳು ಪ್ರಾರಂಭ
    ಮೇ 16 ರಿಂದ 20 – ಶಾಲಾ ದಾಖಲಾತಿ ಪ್ರಕ್ರಿಯೆ
    ಮೇ 17 ರಿಂದ 31 – ಕಲಿಕಾ ಚೇತರಿಕೆ ಕಾರ್ಯಕ್ರಮ
    ಮೇ 28 – ಪೋಷಕರು, ತಾಯಂದಿರ ಸಭೆ
    ಜೂನ್ 1 – ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ
    ಅಕ್ಟೋಬರ್ 3 ರಿಂದ 16 – ದಸರಾ ರಜೆ
    ಅಕ್ಟೋಬರ್ 17 ರಿಂದ 25 – ಅರ್ಧ ವಾರ್ಷಿಕ ಪರೀಕ್ಷೆಗಳು
    2023 ಫೆಬ್ರವರಿ 20 ರಿಂದ 25 – ಪೂರ್ಣ ಸಿದ್ದತಾ ಪರೀಕ್ಷೆ
    2023 ಮಾರ್ಚ್ 23 ರಿಂದ 31 – ವಾರ್ಷಿಕ ಪರೀಕ್ಷೆ

  • ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

    ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಮತ್ತೆ ಪರಿಷ್ಕರಣೆಗೊಂಡಿದೆ. ಇದೀಗ ಅಂತಿಮ ವೇಳಾಪಟ್ಟಿಯನ್ನು ಪಿಯುಸಿ ಬೋರ್ಡ್ ಪ್ರಕಟಿಸಿದೆ.

    ಈಗಾಗಲೇ ಪಿಯುಸಿ ಬೋರ್ಡ್ ತಾಂತ್ರಿಕ ಕಾರಣ ನೀಡಿ 3-4 ಬಾರಿ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 22 ರಿಂದ ಮೇ 18ರ ವರೆಗೆ ಪರೀಕ್ಷೆಗಳು ನಡೆಯಲಿದೆ. ಇದನ್ನೂ ಓದಿ:  ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ

    ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
    ಏಪ್ರಿಲ್ 22- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
    ಏಪ್ರಿಲ್ 23- ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
    ಏಪ್ರಿಲ್ 25- ಅರ್ಥಶಾಸ್ತ್ರ
    ಏಪ್ರಿಲ್ 26- ರಸಾಯನಶಾಸ್ತ್ರ, ಹಿಂದುಸ್ಥಾನಿ ಸಂಗೀತ, ಮನಃಶಾಸ್ತ್ರ, ಮೂಲ ಗಣಿತ
    ಏಪ್ರಿಲ್ 27- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
    ಏಪ್ರಿಲ್ 28- ಕನ್ನಡ, ಅರೇಬಿಕ್
    ಮೇ 4- ಭೂಗೋಳಶಾಸ್ತ್ರ, ಜೀವಶಾಸ್ತ್ರ
    ಮೇ 5- ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
    ಮೇ 6- ಇಂಗ್ಲಿಷ್
    ಮೇ 10- ಇತಿಹಾಸ, ಭೌತಶಾಸ್ತ್ರ
    ಮೇ 12- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
    ಮೇ 14- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
    ಮೇ 17- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
    ಮೇ 18- ಹಿಂದಿ ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ: 3 ವಾರಗಳಲ್ಲಿ ವರದಿ ಸಲ್ಲಿಸುವಂತೆ `ಹೈ’ ಸೂಚನೆ

     

  • ಏಪ್ರಿಲ್ 16ರಿಂದ ಸೆಕೆಂಡ್ ಪಿಯು ಎಕ್ಸಾಂ- ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಏಪ್ರಿಲ್ 16ರಿಂದ ಸೆಕೆಂಡ್ ಪಿಯು ಎಕ್ಸಾಂ- ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ದ್ವಿತೀಯ ಪಿಯುಸಿ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ.

    ಏಪ್ರಿಲ್ 16 ರಿಂದ ಮೇ 4 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಪಿಯು ಬೋರ್ಡ್ ನಿಂದ ವೇಳಾಪಟ್ಟಿ ಪ್ರಕಟವಾಗಿದ್ದು, ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 1 ವರೆಗೆ ಅವಕಾಶ ನೀಡಲಾಗಿದೆ. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಫೆಬ್ರವರಿ 17 ರಿಂದ ಮಾರ್ಚ್ 25 ವರೆಗೆ ನಡೆಸಲು ದಿನಾಂಕ ನಿಗದಿಯಾಗಿದೆ.

    ದ್ವಿತೀಯ ಪಿಯುಸಿ ಪರೀಕ್ಷೆಗೆ ಶೇ.70ರಷ್ಟು ಪಠ್ಯಕ್ಕೆ ಮಾತ್ರ ಪರೀಕ್ಷೆ ನಡೆಯಲಿದೆ. ಭಾಷಾ ವಿಷಯಕ್ಕೆ ಶೇ.70ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದ್ದು, ಐಚ್ಛಿಕ ವಿಷಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಶೇ.100ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪಿಯು ಬೋರ್ಡ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ಕನ್ನಡಕ್ಕೆ ಬಂದಿದೆ ಹೊಸ ಫಾಂಟ್ ಬಂಡೀಪುರ!

    ಇತ್ತ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೂ ದಿನಾಂಕ ನಿಗದಿ ಮಾಡಲಾಗಿದೆ. ಮಾರ್ಚ್ 28 ರಿಂದ ಏಪ್ರಿಲ್ 13 ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಥಮ ಪಿಯುಸಿ ಪರೀಕ್ಷೆಗೆ ಶೇ.70 ಪಠ್ಯಕ್ಕೆ ಮಾತ್ರ ಪರೀಕ್ಷೆ ನಡೆಯಲಿದ್ದು, ಭಾಷಾ ವಿಷಯಕ್ಕೆ ಶೇ.70ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದೆ. ಇಲ್ಲಿಯೂ ಐಚ್ಛಿಕ ವಿಷಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಶೇ.100ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದೆ.

    ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಇಂತಿದೆ:
    ಏ.16- ಗಣಿತ, ಶಿಕ್ಷಣ, ಬೇಸಿಕ್ ಗಣಿತ.
    ಏ.18- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
    ಏ.19– ಹೆಲ್ತ್ ಕೇರ್, ರೀಟೇಲ್, ಇನ್ಫಾರ್ಮೇಶನ್ ಟೆಕ್ನಾಲಜಿ.
    ಏ.20- ಇತಿಹಾಸ, ಭೌತಶಾಸ್ತ್ರ
    ಏ.21– ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್.
    ಏ.22– ಲಾಜಿಕ್, ಬ್ಯುಸಿನೆಸ್ ಸ್ಟಡೀಸ್.
    ಏ.23- ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ.
    ಏ.25- ಅರ್ಥಶಾಸ್ತ್ರ
    ಏ.26- ಹಿಂದಿ.
    ಏ.28- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ.
    ಏ.29- ಕನ್ನಡ.
    ಏ.30– ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
    ಮೇ.2-ಭೂಗೋಳಶಾಸ್ತ್ರ, ಜೀವಶಾಸ್ತ್ರ
    ಮೇ.4- ಇಂಗ್ಲಿಷ್

  • ಹಾಸನದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಟೈಂಟೇಬಲ್ – ಯಾವ ವಾರ ಏನು ಸಿಗುತ್ತೆ?

    ಹಾಸನದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಟೈಂಟೇಬಲ್ – ಯಾವ ವಾರ ಏನು ಸಿಗುತ್ತೆ?

    ಹಾಸನ: ನಾವು ಅಗತ್ಯ ವಸ್ತುಗಳನ್ನು ಕೊಳ್ಳಲು ಹೊರಗೆ ಬಂದಿದ್ದೇವೆ ಎಂದು ಸಬೂಬು ಹೇಳುತ್ತಾ ದಿನಪೂರ್ತಿ ಸುತ್ತಾಡುತ್ತಿದ್ದವರಿಗೆ ಕಡಿವಾಣ ಹಾಕಲು ಹಾಸನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಹೊಸ ಟೈಂಟೇಬಲ್ ಸಿದ್ಧಪಡಿಸಿದೆ.

    ಸಾರ್ವಜನಿಕರ ಹಿತದೃಷ್ಟಿಗೆ ಈ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರಗೆ ದಿನಸಿ ಅಂಗಡಿಗಳು, ತರಕಾರಿ, ಪೇಪರ್, ಹಾಲು, ಪೆಟ್ರೋಲ್ ಬಂಕ್‍ಗಳ ಸೌಲಭ್ಯ ಪಡೆಯಬಹುದಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ 8 ರವರಗೆ ಹಾಲು ಮತ್ತು ಪೇಪರ್ ಮಾತ್ರ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೆ ಮೆಡಿಕಲ್ ಸ್ಟೋರ್ ಮತ್ತು ಕ್ಲಿನಿಕ್‍ಗಳು ಓಪನ್ ಇರುತ್ತವೆ. ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ 2 ಪೆಟ್ರೋಲ್ ಬಂಕ್‍ಗಳು ಬೆಳಗ್ಗೆಯಿಂದ ರಾತ್ರಿಯವರಗೆ ಮಾತ್ರ ತೆರೆದಿರುತ್ತವೆ. ಹೋಟೆಲ್‍ಗಳ ಹೋಂ ಡೆಲಿವರಿ ಮಾತ್ರ ಅವಕಾಶ ನೀಡಲಾಗಿದೆ. ಕೆಲವರು ವಸ್ತುಗಳ ಖರೀದಿ ನೆಪದಲ್ಲಿ ಮೋಜು ಮಸ್ತಿಗಳನ್ನು ಮಾಡುತ್ತಿದ್ದು, ಅಂತವರ ಮೇಲೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಟೈಂಟೇಬಲ್ ಹಾಕಲಾಗಿದೆ.

  • ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ – ವೇಳಾ ಪಟ್ಟಿ ಬಿಡುಗಡೆ

    ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ – ವೇಳಾ ಪಟ್ಟಿ ಬಿಡುಗಡೆ

    ನವದೆಹಲಿ: ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಆಗಸ್ಟ್ 3 ರಿಂದ ಮೂರು ಮಾದರಿಯ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‍ಗೆ ಟೀಂ ಇಂಡಿಯಾ ತೆರೆಳಲಿದೆ. ಈ ಹಿನ್ನೆಲೆಯಲ್ಲಿ ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಆಟಗಾರರನ್ನು ಆಯ್ಕೆ ಮಾಡಿದೆ.

    ಆಗಸ್ಟ್ 3 ರಿಂದ ಮೂರು ಪಂದ್ಯಗಳ ಟಿ-20 ಸರಣಿಯೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸವು ಪ್ರಾರಂಭವಾಗುತ್ತದೆ. ನಂತರ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಆಗಸ್ಟ್ 8 ರಿಂದ ಸೆಪ್ಟಂಬರ್ 3ರ ತನಕ 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಲ್ಲಿ ನಡೆಯುವ ಎರಡು ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಉದ್ಘಾಟನಾ ಆವೃತ್ತಿಯ ಭಾಗವಾಗಲಿವೆ.

    ಇಂಡಿಯಾ ಟೂರ್ ವೆಸ್ಟ್ ಇಂಡೀಸ್‍ನ ಸಂಪೂರ್ಣ ವೇಳಾ ಪಟ್ಟಿ

    1. ಟಿ-20 ಸರಣಿ
    * ಆಗಸ್ಟ್ 3 (ಶನಿವಾರ) ಮೊದಲ ಟಿ-20 ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 4 (ಭಾನುವಾರ) ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ, ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 6 (ಮಂಗಳವಾರ) ಗಯಾನಾದ ಪ್ರಾವಿಡೆನ್ಸ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

    2. ಏಕದಿನ ಸರಣಿ
    * ಆಗಸ್ಟ್ 8 (ಗುರುವಾರ) ಮೊದಲನೇ ಏಕದಿನ- ಗಯಾನಾದ ಪ್ರಾವಿಡೆನ್ಸ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 11 (ಭಾನುವಾರ) ಎರಡನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 14 (ಬುಧವಾರ) ಮೂರನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    3. ಟೆಸ್ಟ್ ಸರಣಿ
    * ಆಗಸ್ಟ್ 22 ಗುರುವಾರ ದಿಂದ ಆಗಸ್ಟ್ 26 ಸೋಮವಾರದ ವರಗೆ 1 ನೇ ಟೆಸ್ಟ್ ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಮೈದಾನದಲ್ಲಿ
    * ಆಗಸ್ಟ್ 30 ಶುಕ್ರವಾರದಿಂದ ಸೆಪ್ಟೆಂಬರ್ 03 ಮಂಗಳವಾರದ ವರೆಗೆ 2 ನೇ ಟೆಸ್ಟ್ ಜಮೈಕಾದ ಸಬಿನಾ ಪಾರ್ಕ್ ಮೈದಾನದಲ್ಲಿ

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್.