Tag: Time table

  • ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ?

    ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ?

    ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯ (Exam) ಅಂತಿಮ ವೇಳಾಪಟ್ಟಿ (Time Table) ಪ್ರಕಟವಾಗಿದ್ದು, 2023 ಮಾರ್ಚ್ 9 ರಿಂದ ಮಾರ್ಚ್‌ 29 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಈ ಬಗ್ಗೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದನ್ನೂ ಓದಿ: ತರಗತಿಯಲ್ಲಿ ವಿದ್ಯಾರ್ಥಿಯನ್ನ `ಟೆರರಿಸ್ಟ್’ ಎಂದ ಪ್ರೊಫೆಸರ್ ಅಮಾನತು

    ವೇಳಾಪಟ್ಟಿ ಹೀಗಿದೆ:
    ಮಾರ್ಚ್ 9- ಕನ್ನಡ, ಅರೇಬಿಕ್
    ಮಾರ್ಚ್ 11- ಗಣಿತಶಾಸ್ತ್ರ, ಶಿಕ್ಷಣ
    ಮಾರ್ಚ್ 13- ಅರ್ಥಶಾಸ್ತ್ರ
    ಮಾರ್ಚ್ 14- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
    ಮಾರ್ಚ್ 15- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು,ಸಂಸ್ಕೃತ, ಫ್ರೆಂಚ್
    ಮಾರ್ಚ್ 16- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
    ಮಾರ್ಚ್ 17-ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
    ಮಾರ್ಚ್‌ 18- ಭೂಗೋಳಶಾಸ್ತ್ರ, ಜೀವಶಾಸ್ತ್ರ
    ಮಾರ್ಚ್ 20- ಇತಿಹಾಸ ಭೌತಶಾಸ್ತ್ರ
    ಮಾರ್ಚ್ 21- ಹಿಂದಿ
    ಮಾರ್ಚ್‌ 23- ಇಂಗ್ಲಿಷ್
    ಮಾರ್ಚ್ 25- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
    ಮಾರ್ಚ್ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ,ಗೃಹ ವಿಜ್ಞಾನ
    ಮಾರ್ಚ್ 29- ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ

    Live Tv
    [brid partner=56869869 player=32851 video=960834 autoplay=true]

  • ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

    ಆಗಸ್ಟ್‌ 12ರಿಂದ 25ರ ವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು https://pue.karnataka.gov.in ಅಂತರ್ಜಾಲದಲ್ಲಿ ವೀಕ್ಷಿಸಬಹುದು. ಇದನ್ನೂ ಓದಿ: ಬಡವರ ಉದ್ಧಾರಕ್ಕಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯೋತ್ಸವ: ಹಾಲಪ್ಪ ಕಿಡಿ

    ಪರೀಕ್ಷಾ ವೇಳಾಪಟ್ಟಿ ಹೀಗಿದೆ..
    ಕನ್ನಡ, ಅರೇಬಿಕ್ – ಆ.12
    ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ – ಆ.13
    ಹಿಂದಿ – ಆ.16
    ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ – ಆ.17
    ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ – ಆ.18
    ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ – ಆ.19
    ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ – ಆ.20
    ಇಂಗ್ಲಿಷ್‌ – ಆ.22
    ಅರ್ಥಶಾಸ್ತ್ರ, ಜೀವಶಾಸ್ತ್ರ – ಆ.23
    ಇತಿಹಾಸ, ಸಂಖ್ಯಾಶಾಸ್ತ್ರ – ಆ.24
    ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ – ಆ.25

    Live Tv
    [brid partner=56869869 player=32851 video=960834 autoplay=true]

  • ಪದವಿ, ಸ್ನಾತಕೋತ್ತರ ಕೋರ್ಸ್‌ಗೆ ರಾಜ್ಯಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ: ಅಶ್ವಥ್ ನಾರಾಯಣ

    ಪದವಿ, ಸ್ನಾತಕೋತ್ತರ ಕೋರ್ಸ್‌ಗೆ ರಾಜ್ಯಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ: ಅಶ್ವಥ್ ನಾರಾಯಣ

    ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಇಡೀ ರಾಜ್ಯಕ್ಕೆ ಅನ್ವಯಿಸುವ ಹಾಗೆ ಏಕರೂಪದ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ. ರಾಜ್ಯದ ಎಲ್ಲಾ ವಿ.ವಿ.ಗಳು ಮತ್ತು ಕಾಲೇಜುಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಏಕರೂಪದ ಕಾರ್ಯಕ್ರಮ ಪಟ್ಟಿಯಂತೆ, ರಾಜ್ಯದ ಉದ್ದಗಲಕ್ಕೂ ಪದವಿ ತರಗತಿಗಳಿಗೆ ಜುಲೈ 11ರಿಂದ ಪ್ರವೇಶಾತಿ ಆರಂಭವಾಗಲಿದ್ದು, ಆಗಸ್ಟ್ 17ರಿಂದ 22ರ ನಡುವೆ ತರಗತಿಗಳು ಆರಂಭವಾಗಲಿವೆ. ಇದೇ ರೀತಿಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅಕ್ಟೋಬರ್ 15ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 2ರಿಂದ 14ರ ನಡುವೆ ತರಗತಿಗಳಿಗೆ ಚಾಲನೆ ಸಿಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಪರಿಸರ ಸಂರಕ್ಷಣೆಗೆ ಯುವಪೀಳಿಗೆಯನ್ನು ಜಾಗೃತಗೊಳಿಸಲು ರಾಜ್ಯಪಾಲರ ಕರೆ

    EDUCATION
    ಸಾಂದರ್ಭಿಕ ಚಿತ್ರ

    ಇದುವರೆಗೂ ರಾಜ್ಯದಲ್ಲಿ ಒಂದೊಂದು ವಿ.ವಿ.ಯೂ ತಮ್ಮ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿಕೊಳ್ಳುತ್ತಿದ್ದವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಅನನುಕೂಲ ಆಗುತ್ತಿತ್ತು. ಇದನ್ನು ಗಮನಿಸಿ ಈ ಏಕರೂಪದ ವೇಳಾಪಟ್ಟಿಯನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ.

    ಈ ವೇಳಾಪಟ್ಟಿಯಲ್ಲಿ ಪ್ರತೀ ಸೆಮಿಸ್ಟರುಗಳ ಆರಂಭ, ದಂಡರಹಿತ ಮತ್ತು ದಂಡ ಸಹಿತ ಪ್ರವೇಶಾತಿ ಅವಧಿ, ಪ್ರತಿ ಸೆಮಿಸ್ಟರುಗಳಿಗೆ ಬೋಧನಾ ತರಗತಿಗಳು ಆರಂಭವಾಗುವ ಮತ್ತು ಮುಗಿಯುವ ದಿನ, ಪರೀಕ್ಷೆ ಆರಂಭವಾಗುವ ದಿನ, ಮೌಲ್ಯಮಾಪನ ಆರಂಭ ಮತ್ತು ಫಲಿತಾಂಶ ಪ್ರಕಟಣೆಯ ದಿನ, ರಜೆ ಆರಂಭದ ದಿನಗಳನ್ನೆಲ್ಲ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

    ಈ ಪಟ್ಟಿಯಲ್ಲಿ ಪದವಿಯ 6, ಸ್ನಾತಕೋತ್ತರ ಮಟ್ಟದ 4 ಮತ್ತು ವೃತ್ತಿಪರ ಕೋರ್ಸುಗಳ 8 ಸೆಮಿಸ್ಟರುಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಸೆಮಿಸ್ಟರ್ ಮುಗಿದ ನಂತರದ ರಜೆ ಅವಧಿಯಲ್ಲಿ ಪರೀಕ್ಷಾ ಕರ್ತವ್ಯ ಬಂದರೆ, ಉಪನ್ಯಾಸಕರು ಆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಅಮರನಾಥಕ್ಕೆ ರಾಜ್ಯದಿಂದ 100ಕ್ಕೂ ಹೆಚ್ಚು ಯಾತ್ರಿಕರು ಭೇಟಿ: ಎಲ್ಲ ಕನ್ನಡಿಗರ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ

    ಉನ್ನತ ಶಿಕ್ಷಣ ಪರಿಷತ್ ಮುಖ್ಯಸ್ಥರಾದ ಬಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇದೇ 7ರಂದು ಎಲ್ಲಾ ವಿ.ವಿ.ಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್ಸ್ ಜತೆ ವರ್ಚುಯಲ್ ಸಭೆ ನಡೆಸಿ, ಸಮಾಲೋಚನೆ ನಡೆಸಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ

    ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ

    ಬೆಂಗಳೂರು: 2020-21ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ 24 ರಿಂದ ಜೂನ್ 16ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ.

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮ ಹೇಳಿಕೆ ಮೂಲಕ ವೇಳಾಪಟ್ಟಿ ಪ್ರಕಟ ಮಾಡಿದ್ದಾರೆ. ಇತ್ತೀಚೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಒಂದು ವಾರ ಅವಕಾಶ ಕೊಡಲಾಗಿತ್ತು. ಆಕ್ಷೇಪಣೆ ಪರಿಶೀಲನೆ ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ರಚನೆ ಮಾಡಲಾಗಿದೆ. ಮೇ 24 ರಿಂದ ಜೂನ್ 16ರ ವರೆಗೆ ದ್ವೀತಿಯ ಪಿಯಸಿ ಪರೀಕ್ಷೆಗಳು ನಡೆಯಲಿವೆ.

    ವೇಳಾಪಟ್ಟಿ ಹೀಗಿದೆ
    ಮೇ 24- ಇತಿಹಾಸ
    ಮೇ 25- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
    ಮೇ 26- ಭೂಗೋಳ ಶಾಸ್ತ್ರ
    ಮೇ 27- ಮನಃಶಾಸ್ತ್ರ, ಬೇಸಿಕ್ ಗಣಿತ
    ಮೇ 28- ತರ್ಕಶಾಸ್ತ್ರ
    ಮೇ 29- ಹಿಂದಿ
    ಮೇ 31- ಇಂಗ್ಲಿಷ್
    ಜೂನ್ 01- ಮಾಹಿತಿ ತಂತ್ರಜ್ಞಾನ, ಹೆಲ್ತ್‍ಕೇರ್, ವೆಲ್‍ನೆಸ್ ಬ್ಯೂಟಿ
    ಜೂನ್ 02- ರಾಜ್ಯಶಾಸ್ತ್ರ, ಗಣಕ ವಿಜ್ಞಾನ
    ಜೂನ್ 03- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
    ಜೂನ್ 04- ಅರ್ಥಶಾಸ್ತ್ರ
    ಜೂನ್ 05- ಗೃಹ ವಿಜ್ಞಾನ
    ಜೂನ್ 07- ವ್ಯವಹಾರ ಅಧ್ಯಯನ, ಭೌತಶಾಸ್ತ್ರ
    ಜೂನ್ 08- ಐಚ್ಛಿಕ ಕನ್ನಡ
    ಜೂನ್ 09- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
    ಜೂನ್ 10- ಸಮಾಜ ಶಾಸ್ತ್ರ, ರಸಾಯನಶಾಸ್ತ್ರ
    ಜೂನ್ 11- ಉರ್ದು, ಸಂಸ್ಕೃತ
    ಜೂನ್ 12- ಸಂಖ್ಯಾಶಾಸ್ತ್ರ
    ಜೂನ್ 14- ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ
    ಜೂನ್ 15- ಭೂಗರ್ಭಶಾಸ್ತ್ರ
    ಜೂನ್ 16- ಕನ್ನಡ

  • ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟ – ಯಾವ ದಿನ ಯಾವ ಪರೀಕ್ಷೆ

    ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟ – ಯಾವ ದಿನ ಯಾವ ಪರೀಕ್ಷೆ

    ಬೆಂಗಳೂರು: 2020-2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಮೇ 24 ರಿಂದ ಜೂನ್ 10 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿವೆ.

    ವೇಳಾ ಪಟ್ಟಿ ಹೇಗಿದೆ:
    ಮೇ 24 – ಭೌತಶಾಸ್ತ್ರ, ಇತಿಹಾಸ
    ಮೇ 25 – ಮೈನಾರಿಟಿ ವಿಷಯಗಳು,
    ಮೇ 26 – ಭೂಗರ್ಭ ಶಾಸ್ತ್ರ, ಲಾಜಿಕ್, ಬೇಸಿಕ್ ಗಣಿತ, ಹೋಂ ಸೈನ್ಸ್
    ಮೇ 27 – ಆಪ್ಶನಲ್ ಕನ್ನಡ, ಅಕೌಂಟೆನ್ಸಿ, ಗಣಿತ
    ಮೇ 28 – ಉರ್ದು, ಸಂಸ್ಕೃತ
    ಮೇ 29 – ರಾಜ್ಯಶಾಸ್ತ್ರ,
    ಜೂನ್ 2 – ಸೈಕಲಾಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
    ಜೂ3- ಹಿಂದಿ
    ಜೂನ್ 4 – ಎಕನಾಮಿಕ್ಸ್, ಜೂನ್ 5- ಕನ್ನಡ
    ಜೂನ್ 7 – ಇಂಗ್ಲೀಷ್, ಜೂನ್ 8- ಬ್ಯುಟಿ ಹೆಲ್ತ್ ಕೇರ್, ರಿಟೇಲ್ ಅಟೋ ಮೊಬೈಲ್
    ಜೂನ್ 9 – ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ,
    ಜೂನ್ 10 – ಜಿಯೋಗ್ರಫಿ

  • ಎಸ್‍ಎಸ್‍ಎಲ್‍ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

    ಎಸ್‍ಎಸ್‍ಎಲ್‍ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ಜೂನ್ 25 ರಿಂದ ಜುಲೈ 4ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಟೈಂ ಟೇಬಲ್ ಪ್ರಕಟವಾಗಿದೆ.

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಪರೀಕ್ಷೆ ನಡೆಸಲು ಅನುಮತಿ ನೀಡಿದ್ದಾರೆ. ಒಟ್ಟು 2,879 ಕೇಂದ್ರದಲ್ಲಿನ 43,720 ಕೊಠಡಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದರು.

    ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಇದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ. ಪರೀಕ್ಷೆ ಪ್ರಾರಂಭಕ್ಕೂ ಮುಂಚೆ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಹೇಳಿದ್ದರು.

    ಕಂಟೈನ್ಮೆಂಟ್ ಝೋನ್ ನಲ್ಲಿ ಪರೀಕ್ಷೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಇಂದಿಗೆ 126 ಕಂಟೈನ್ಮೆಂಟ್ ವಲಯಗಳಿವೆ. ಕಂಟೈನ್ಮೆಂಟ್ ವಲಯದಲ್ಲಿ ಪರೀಕ್ಷೆ ಇಲ್ಲ. ಈ ವಲಯದಲ್ಲಿನ ಕೇಂದ್ರಗಳಿಗೆ ವರ್ಗಾವಣೆ ಮಾಡಿದ್ದೇವೆ. ಪರೀಕ್ಷೆ ಪ್ರಾರಂಭ ಮಾಡೋಕೆ ಮೂರು ದಿನ ಮೊದಲು ಕಂಟೈನ್ಮೆಂಟ್ ಝೋನ್ ಆದರೂ ಬೇರೆ ಕೇಂದ್ರಕ್ಕೆ ಶಿಫ್ಟ್ ಮಾಡ್ತೀವಿ. ಪರೀಕ್ಷೆ ಬರೆಯೋ ದಿನ ಕಂಟೈನ್ಮೆಂಟ್ ವಲಯಕ್ಕೆ ಸೇರ್ಪಡೆಯಾದ್ರೂ ಆ ಮಕ್ಕಳಿಗೆ ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದರು.

    ಯಾವ ದಿನ ಯಾವ ಪರೀಕ್ಷೆ?
    ಜೂನ್ 25- ದ್ವಿತೀಯ ಭಾಷೆ(ಇಂಗ್ಲೀಷ್, ಕನ್ನಡ)
    ಜೂನ್ 26- ಕೋರ್ ಸಬ್ಜೆಕ್ಟ್
    ಜೂನ್ 27- ಗಣಿತ
    ಜೂನ್ 29- ವಿಜ್ಞಾನ

    ಜುಲೈ 1- ಸಮಾಜ ವಿಜ್ಞಾನ
    ಜುಲೈ 2- ಪ್ರಥಮ ಭಾಷೆ
    ಜುಲೈ 3- ತೃತೀಯ ಭಾಷೆ ಪರೀಕ್ಷೆ
    ಜುಲೈ 4- ಜೆಟಿಎಸ್ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆ

  • ಹೊಸ ಸಚಿವರಿಗೆ ನಯಾ ‘ಟೈಂ ಟೇಬಲ್’ ಕೊಟ್ಟ ಕಟೀಲ್

    ಹೊಸ ಸಚಿವರಿಗೆ ನಯಾ ‘ಟೈಂ ಟೇಬಲ್’ ಕೊಟ್ಟ ಕಟೀಲ್

    ಬೆಂಗಳೂರು: ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ.

    ಈ ಟೈಂ ಟೇಬಲ್‍ನೊಂದಿಗೆ ಮೌಖಿಕ ಆದೇಶ ಹೊರಡಿಸಿರುವ ನಳಿನ್, ವಾರಕ್ಕೊಂದು ಬಾರಿ ಎರಡು ಗಂಟೆ ಟೈಂ ಪಕ್ಷದ ಕಚೇರಿಗೆ ಬರಲೇಬೇಕು. ಜೊತೆಗೆ ಕಾರ್ಯಕರ್ತರ ಸಮಸ್ಯೆ ಆಲಿಸಲೇಬೇಕು ಎಂದು ಹೊಸ ಸಚಿವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

    ಕಚೇರಿಗೆ ಬಂದು ಮುಕ್ತವಾಗಿ ಸಭೆಯಲ್ಲಿ ಭಾಗಿಯಾಗಬೇಕು. ವರಿಷ್ಠರ ಜೊತೆಗೆ ಹೊಸ ಸಚಿವರು ಸಹ ಕಾರ್ಯಕರ್ತರ ಸಮಸ್ಯೆ, ಅಹವಾಲು ಆಲಿಸಬೇಕು ಎಂದು ಆದೇಶ ಮಾಡಿದ್ದಾರಂತೆ. ಇಂದು ನಾರಾಯಣಗೌಡ ಕಚೇರಿಗೆ ಬರುತ್ತಿದ್ದ ಹಾಗೆ ಈ ಸೂಚನೆಯ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನಾರಾಯಣ ಗೌಡ, ಪಕ್ಷದ ವರಿಷ್ಠರು ಈ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ. ಈ ಬಗ್ಗೆ ನಮಗೂ ಮೌಖಿಕ ಆದೇಶ ಬಂದಿದೆ. ಇದನ್ನು ಪಾಲನೆ ಮಾಡುತ್ತೇವೆ ಎಂದರು.

  • SSLC ಪರೀಕ್ಷೆ ಮಾರ್ಚ್ 21ರಿಂದ ಆರಂಭ- ಯಾವ ದಿನ ಯಾವ ಪರೀಕ್ಷೆ?

    SSLC ಪರೀಕ್ಷೆ ಮಾರ್ಚ್ 21ರಿಂದ ಆರಂಭ- ಯಾವ ದಿನ ಯಾವ ಪರೀಕ್ಷೆ?

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಅಂತಿಮ ಪರೀಕ್ಷೆಯ ವೇಳಾಪಟ್ಟಿಯನ್ನು ಎಸ್‍ಎಸ್‍ಎಲ್‍ಸಿ ಬೋರ್ಡ್ ಬಿಡುಗಡೆ ಮಾಡಿದೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು 2019ರ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿವೆ. ಪ್ರತಿ ಪರೀಕ್ಷೆಯ ನಡುವೆ ಒಂದು ದಿನ ಬಿಡುವು ನೀಡಲಾಗಿದೆ.

    ವೇಳಾಪಟ್ಟಿ ಹೀಗಿದೆ:
    ಮಾರ್ಚ್ 21ರಂದು ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ. ಮಾರ್ಚ್ 23ರಂದು ಕೋರ್ ಸಬ್ಜೆಕ್ಟ್, ಮಾರ್ಚ್ 25ರಂದು ಗಣಿತ, ಮಾರ್ಚ್ 27ರಂದು ದ್ವಿತೀಯ ಭಾಷೆ, 29ರಂದು ಸಮಾಜ ವಿಜ್ಞಾನ, ಏಪ್ರಿಲ್ 2ರಂದು ವಿಜ್ಞಾನ ಮತ್ತು ಏಪ್ರಿಲ್ 4ರಂದು ತೃತೀಯ ಭಾಷೆ ಪರೀಕ್ಷೆ ನಡೆಯಲಿವೆ ಎಂದು ಎಸ್‍ಎಸ್‍ಎಲ್‍ಸಿ ಬೋರ್ಡ್ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಸ್‍ಎಸ್‍ಎಲ್‍ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಮಾರ್ಚ್ 21 ರಿಂದ ಪರೀಕ್ಷೆ ಆರಂಭ

    ಎಸ್‍ಎಸ್‍ಎಲ್‍ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಮಾರ್ಚ್ 21 ರಿಂದ ಪರೀಕ್ಷೆ ಆರಂಭ

    ಬೆಂಗಳುರು: 2018-19 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.

    2019ರ ಮಾರ್ಚ್ 21 ರಿಂದ ಪ್ರಾರಂಭವಾಗಿ ಏಪ್ರಿಲ್ 4ಕ್ಕೆ ಎಲ್ಲಾ ವಿಷಯಗಳ ಪರೀಕ್ಷೆ ಪೂರ್ಣಗೊಳ್ಳಲಿದೆ. ಅಲ್ಲದೇ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸುವವರು ಇದೇ ನವೆಂಬರ್ 26ರ ಒಳಗಡೆ ಸಲ್ಲಿಸಬೇಕು ಎಂದು ಹೇಳಿದೆ. ವಿದ್ಯಾರ್ಥಿಗಳು ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಬಹುದು.

    ತಾತ್ಕಾಲಿಕ ವೇಳಾಪಟ್ಟಿಯ ವಿವರ:
    ಮಾರ್ಚ್ 21 – ಪ್ರಥಮ ಭಾಷೆ, ಮಾರ್ಚ್ 23 – ಕೋರ್ ಸಬ್ಜೆಕ್ಟ್, ಮಾರ್ಚ್ 25 – ಗಣಿತ, ಮಾರ್ಚ್ 27 – ದ್ವಿತೀಯ ಭಾಷೆ, ಮಾರ್ಚ್ 29 – ವಿಜ್ಞಾನ, ಏಪ್ರಿಲ್ 2 – ಸಮಾಜ ವಿಜ್ಞಾನ ಹಾಗೂ ಏಪ್ರಿಲ್ 4 – ತೃತೀಯ ಭಾಷೆ.

    ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಮಾರ್ಚ್ 1 ರಿಂದ 18ರ ವರೆಗೆ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿಯಲ್ಲಿ ತಕರಾರು ಇದ್ದರೆ, ಮನವಿ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಸಹ ಮಂಡಳಿ ನೀಡಿದೆ. ಅಲ್ಲದೇ ನವೆಂಬರ್ 28ರ ಒಳಗೆ ತಕರಾರು ಅರ್ಜಿ ಸಲ್ಲಿಸಲು ಸಮಯ ನೀಡಿದೆ. ತಕರಾರು ಪಟ್ಟಿ ಪರಿಶೀಲನೆ ಬಳಿಕ ಅಂತಿಮ ವೇಳಾಪಟ್ಟಿಯನ್ನು ಪಿಯು ಬೋರ್ಡ್ ಪ್ರಕಟ ಮಾಡಲಿದೆ.

    ತಾತ್ಕಾಲಿಕ ವೇಳಾಪಟ್ಟಿ ವಿವರ
    ಮಾರ್ಚ್ 1 – ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್, ಮಾರ್ಚ್ 2 – ಇತರೆ ವಿಷಯಗಳು, ಮಾರ್ಚ್ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್, ಮಾರ್ಚ್ 6 – ಲಾಜಿಕ್, ಪ್ರಾಣಿಶಾಸ್ತ್ರ, ಎಜುಕೇಷನ್, ಹೋಂ ಸೈನ್ಸ್, ಮಾರ್ಚ್ 7 – ಐಚ್ಛಿಕ ಕನ್ನಡ, ಅಕೌಂಟ್ಸ್, ಗಣಿತ, ಮಾರ್ಚ್ 8 – ಉರ್ದು, ಸಂಸ್ಕೃತ,

    ಮಾರ್ಚ್ 9 – ರಾಜ್ಯಶಾಸ್ತ್ರ, ಲೆಕ್ಕಶಾಸ್ತ್ರ, ಮಾರ್ಚ್ 11 – ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಮಾರ್ಚ್ 12 – ಭೂಗೋಳ, ಕರ್ನಾಟಕ ಮ್ಯೂಸಿಕ್, ಹಿಂದುಸ್ಥಾನಿ ಮ್ಯೂಸಿಕ್‍, ಮಾರ್ಚ್ 13 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕಶಾಸ್ತ್ರ, ಮಾರ್ಚ್ 14 – ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 15 – ಹಿಂದಿ, ಮಾರ್ಚ್ 16 – ಕನ್ನಡ, ಮಾರ್ಚ್ 18 – ಇಂಗ್ಲೀಷ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv