Tag: time

  • ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆ? – ಶುಕ್ರವಾರ ಮಹತ್ವದ ಸಭೆ

    ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆ? – ಶುಕ್ರವಾರ ಮಹತ್ವದ ಸಭೆ

    ಬೆಂಗಳೂರು: ನಗರದಲ್ಲಿ ಶಾಲೆಗಳ (School Time) ಸಮಯ ಬದಲಾವಣೆ ಮಾಡುವ ಪ್ರಕ್ರಿಯೆಯನ್ನ ಶಿಕ್ಷಣ ಇಲಾಖೆ ಶುರು ಮಾಡಿದೆ. ಈ ಸಂಬಂಧ ಶುಕ್ರವಾರ ಶಿಕ್ಷಣ ಇಲಾಖೆ (Education Department) ಮಹತ್ವದ ಸಭೆ ಕರೆದಿದ್ದು, ಸಭೆಯಲ್ಲಿ ಸ್ಕೂಲ್ ಟೈಂ ಬದಲಾವಣೆ ನಿರ್ಧಾರ ಮಾಡೋ ಸಾಧ್ಯತೆ ಇದೆ.

    ಬೆಂಗಳೂರು ಟ್ರಾಫಿಕ್ ಸಮಸ್ಯೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆ ಆಗುತ್ತಿದೆ ಎನ್ನುವ ಕಾರಣ ಹೈಕೋರ್ಟ್ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಶಾಲಾ ಶಿಕ್ಷಣ ಇಲಾಖೆ ಸಮಯ ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಮಯ ಬದಲಾವಣೆ ಕುರಿತು ಅಕ್ಟೋಬರ್ 5 ರಂದು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸಭೆ ಕರೆದಿದ್ದು, ಅಂದೇ ಸಮಯ ಬದಲಾವಣೆಗೆ ತೀರ್ಮಾನ ಮಾಡೋ ಸಾಧ್ಯತೆ ಇದೆ.

    ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಸಾರಿಗೆ ಇಲಾಖೆ, ಸಂಚಾರಿ ಪೊಲೀಸ್ ಇಲಾಖೆ, ಪೋಷಕರ ಸಂಘ, ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಾಲಾ ವಾಹನ ಅಸೋಸಿಯೇಷನ್ ಸದಸ್ಯರು, ಶಿಕ್ಷಕರ ಸಂಘದ ಸದಸ್ಯರನ್ನ ಸಭೆಗೆ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಸಮಯ ಬದಲಾವಣೆ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: Big Boss Kannada 10: ಜಿಯೋ ಸಿನಿಮಾದಲ್ಲೂ ನೋಡಿ ಬಿಗ್ ಬಾಸ್ ಸೀಸನ್ 10

    ಈಗ ಶಾಲಾ ಸಮಯ ಬೆಳಗ್ಗೆ 9.30 ರಿಂದ ಸಂಜೆ 4.30ಕ್ಕೆ ಇದೆ. ಈ ಸಮಯವನ್ನ ಅರ್ಧ ಗಂಟೆ ಅಥವಾ ಒಂದು ಗಂಟೆ ಮುಂಚೆ ಪ್ರಾರಂಭ ಮಾಡುವ ಪ್ರಸ್ತಾವನೆ ಶಿಕ್ಷಣ ಇಲಾಖೆ ಮುಂದೆ ಇದೆ. ಬೆಳಗ್ಗೆ 8.30 ರಿಂದ 3.30 ಅಥವಾ ಬೆಳಗ್ಗೆ 9 ರಿಂದ ಸಂಜೆ 3.30ವರೆಗೆ ಶಾಲೆ ತೆರೆಯೋ ಪ್ರಸ್ತಾಪ ಇದ್ದು, ಯಾವ ಸಮಯ ಅಂತ ಸಭೆಯಲ್ಲಿ ತೀರ್ಮಾನ ಆಗಲಿದೆ.

    ಒಟ್ಟಿನಲ್ಲಿ ಬೆಂಗಳೂರಿಗೆ ಸೀಮಿತ ಆಗುವಂತೆ ಶಾಲಾ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದ್ದು, ಆದಷ್ಟು ಬೇಗ ಶಾಲಾ ಸಮಯ ಬದಲಾವಣೆ ಆಗುವ ಸಂಭವವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಮನಿಸಿ: ಶನಿವಾರ ರಾತ್ರಿ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ

    ಗಮನಿಸಿ: ಶನಿವಾರ ರಾತ್ರಿ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ

    ಬೆಂಗಳೂರು: ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಮೆಟ್ರೋ (Namma Metro) ನೇರಳೆ ಮಾರ್ಗದ ಸಂಚಾರದಲ್ಲಿ ನಾಳೆ ರಾತ್ರಿ ವ್ಯತ್ಯಯವಾಗಲಿದೆ.

    ಹೌದು. ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 9 ಗಂಟೆ ಬಳಿಕ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಈ ಬಗ್ಗೆ Bengaluru Metro Rail Corporation (BMRCL) ಮಾಹಿತಿ ನೀಡಿದೆ.

    ಎಂಜಿ ರೋಡ್ ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗಿನ ವಾಣಿಜ್ಯ ಸೇವೆ ರಾತ್ರಿ 9. 30ಕ್ಕೆ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಎಂಜಿ ರಸ್ತೆಯಿಂದ ಕೆಂಗೇರಿ ಮಾರ್ಗಕ್ಕೆ ಮಾತ್ರ ಸಂಚಾರ ಲಭ್ಯವಾಗಿರುತ್ತದೆ. ಕೆಂಗೇರಿ ಮತ್ತು ಬೈಯಪ್ಪನ ಹಳ್ಳಿ ನಿಲ್ದಾಣದಿಂದ ರಾತ್ರಿ 9 ಗಂಟೆಗೆ ಕೊನೆಯ ಮೆಟ್ರೋ ರೈಲು ಸಂಚಾರ ಮಾಡಲಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿ ಕಡೆಗೆ 9.30ಕ್ಕೆ ಕಡೇಯ ರೈಲು ಇದ್ದು, ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ವೇಳಾಪಟ್ಟಿ ಪ್ರಕಾರ ಮೆಟ್ರೋ ಸಂಚಾರ ಪುನರಾರಂಭವಾಗಲಿದೆ. ಇದನ್ನೂ ಓದಿ: ನಮ್ಮ-ನಿಮ್ಮೆಲ್ಲರ ರಕ್ತ ಒಂದೇ ಬಣ್ಣದ್ದು, ಮೂರು ದಿನಗಳ ಬಾಳಲ್ಲಿ ಏಕೆ ಕಿತ್ತಾಟ?: ಹ್ಯಾರೀಸ್

    ಹಸಿರು ಮಾರ್ಗದ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದೆ.

  • ನೈಟ್ ಕರ್ಫ್ಯೂ- ಮೆಟ್ರೋ ಓಡಾಟ ಸಮಯದಲ್ಲಿ ಬದಲಾವಣೆ

    ನೈಟ್ ಕರ್ಫ್ಯೂ- ಮೆಟ್ರೋ ಓಡಾಟ ಸಮಯದಲ್ಲಿ ಬದಲಾವಣೆ

    ಬೆಂಗಳೂರು: ಕೊರೊನಾ ನಿಯಂತ್ರಣ ಹಿನ್ನೆಲೆ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ನಗರದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೆ 8 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್‍ಡೌನ್ ಘೋಷಿಸಿದೆ. ಸಿಲಿಕಾನ್ ಸಿಟಿಯಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೆಟ್ರೋ ಓಡಾಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

    ಆಗಸ್ಟ್ 7 ರಿಂದ 16ರ ವರೆಗೆ ರಾಜ್ಯದಲ್ಲಿ ರಾತ್ರಿ 9.00 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಕೊನೆಯ ಮೆಟ್ರೋ ರೈಲು ಸೇವೆಯೂ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 9 ಗಂಟೆಯ ಬದಲು ರಾತ್ರಿ 8 ಗಂಟೆಗೆ ಹೊರಡಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ. ನಾಳೆಯಿಂದಲೇ ಈ ಸಮಯ ಬದಲಾವಣೆ ಅನ್ವಯವಾಗಲಿದೆ. ಇದನ್ನೂ ಓದಿ: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದಲೇ ವೀಕೆಂಡ್ ಕರ್ಫ್ಯೂ ಜಾರಿ

    ಬೆಂಗಳೂರಿನಲ್ಲಿ ಇಂದು 441 ಕೊರೊನಾ ಕೇಸ್ ದಾಖಲಾಗಿದ್ದು, 7 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 434 ಮಂದಿ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಗರದಲ್ಲಿ ಇನ್ನೂ 8,560 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ನಿಧಾನವಾಗಿ ಏರುತ್ತಿದೆ ಕೊರೊನಾ ಪಾಸಿಟಿವಿಟಿ ರೇಟ್, ಇಂದು ಶೇ.1.11- 1,805 ಹೊಸ ಕೇಸ್, 36 ಸಾವು

  • ನೈಟ್ ಕರ್ಫ್ಯೂ: ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ

    ನೈಟ್ ಕರ್ಫ್ಯೂ: ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ

    ಮಂಗಳೂರು: ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ.

    ಕಟೀಲು‌ ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿಸೆಂಬರ್ ‌24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ‌ ಕೊನೆಗೊಳ್ಳಲಿದೆ.

    ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ. ನಾಳೆಯಿಂದ ಕರ್ಫ್ಯೂ ಮುಗಿಯುವ ತನಕ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಈ ದಿನದಲ್ಲಿ‌ ಯಕ್ಷಗಾನ ಬುಕ್ ಮಾಡಿದವರು ಕಾಲಮಿತಿ ಯಕ್ಷಗಾನಕ್ಕೆ‌ ಸಹಕಾರ ನೀಡಬೇಕೆಂದು ಕ್ಷೇತ್ರದ ಆಡಳಿತ‌ ಮಂಡಳಿ ವಿನಂತಿ ಮಾಡಿಕೊಂಡಿದೆ.

    ಕಟೀಲು ಯಕ್ಷಗಾನ ಮೇಳ‌ ಮಾಮೂಲಿಯಾಗಿ ರಾತ್ರಿ 9 ಗಂಟೆಗೆ ಪ್ರಸಂಗ ಆರಂಭಿಸಿ ಬೆಳಗ್ಗಿನ‌ ಜಾವ 6 ಗಂಟೆಯವರೆಗೂ ನಡೆಯುತ್ತದೆ. ಆದರೆ ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

  • ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ

    ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ

    ಬೆಂಗಳೂರು: ನೈಟ್ ಕರ್ಫ್ಯೂ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಬಿಎಂಟಿಸಿ ಬಸ್ ಸಂಚಾರದ ಅವಧಿಯಲ್ಲಿ ಬದಲಾವಣೆಯಾಗಿದೆ.

    ಇದುವರೆಗೂ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಇತ್ತು. ಇಂದಿನಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್‍ಗಳು ಓಟಾಟ ಮಾಡಲಿವೆ. ಈ ಹಿಂದೆಯೇ ಎಂಡಿ ಶಿಖಾ ಅವರು ಬಸ್ ಸಂಚಾರ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ.

    ಇಂದಿನಿಂದ ನೈಟ್ ಕರ್ಫ್ಯೂ ಸಮಯ ಕೂಡ ಬದಲಾವಣೆಯಾಗಿದೆ. ರಾತ್ರಿ 9 ಗಂಟೆಯಿಂದ ರಾತ್ರಿ 5 ಗಂಟೆಯವರಗೆ ಮಾತ್ರ ಕರ್ಫ್ಯೂ ಜಾರಿಯಾಗಿದೆ. ಹೀಗಾಗಿ ಬಿಎಂಟಿಸಿ ಬಸ್‍ಗಳ ಸಂಚಾರ ಅವಧಿ ಕೂಡ ಬದಲಾವಣೆಯಾಗಿದೆ. ಈ ಮೂಲಕ ಪ್ರಯಾಣಿಕರು ಹೆಚ್ಚಿನ ಸಂಖ್ಯೆ ಓಡಾಡಬಹುದು.

    ಈ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ, “ಭಾನುವಾರ ಬಿಎಂಟಿಸಿಗೆ ಗೈಡ್ ಲೈನ್ಸ್ ಬಂದಿದೆ. ಹೀಗಾಗಿ ಎಂಚ್‍ಎ ನಿರ್ದೇಶನದಂತೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬಸ್‍ಗಳನ್ನು ಓಡಿಸುತ್ತೇವೆ” ಎಂದು ಪಬ್ಲಿಕ್ ಟಿವಿ ಸ್ಪಷ್ಟಪಡಿಸಿದ್ದಾರೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಬಸ್‍ಗಳ ಓಡಾಟಕ್ಕೆ ಇನ್ನೂ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ಕಂಟೈನ್ಮೆಂಟ್ ಝೋನ್ ಏರಿಯಾಗಳಲ್ಲಿ ಬಸ್ ಓಡಾಟವಿಲ್ಲ.

  • ಲಾಕ್‍ಡೌನ್ ವೇಳೆ ಟೈಮ್ ಪಾಸ್ ಮಾಡೋದು ಹೇಗೆ? – ಇಲ್ಲಿದೆ ಕೆಲವು ಟಿಪ್ಸ್

    ಲಾಕ್‍ಡೌನ್ ವೇಳೆ ಟೈಮ್ ಪಾಸ್ ಮಾಡೋದು ಹೇಗೆ? – ಇಲ್ಲಿದೆ ಕೆಲವು ಟಿಪ್ಸ್

    ಹಾಮಾರಿ ಕೊರೊನಾವನ್ನು ತಡೆಗಟ್ಟಲು ದೇಶವನ್ನೇ ಲಾಕ್ ಮಾಡಲಾಗಿದೆ. ಮನೆಯಿಂದ ಯಾರೂ ಹೊರಬರಬೇಡಿ ಎಂದು ಪ್ರಧಾನಿ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಲಾಕ್‍ಡೌನ್ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸಬೇಕಿದೆ. ಅಗತ್ಯ ವಸ್ತುಗಳ ಖರೀದಿಗೆ ಹೋದಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಕೊರೊನಾ ನಿಯಂತ್ರಣದಲ್ಲಿಡಲು ಐಟಿ ಬಿಟಿ, ಗಾರ್ಮೆಂಟ್ಸ್, ಕಾರ್ಖಾನೆ ಇನ್ನಿತರ ಸಣ್ಣ -ಪುಟ್ಟ ವ್ಯಾಪಾರಸ್ಥರು ಎಲ್ಲರೂ ಬಂದ್ ಮಾಡಿದ್ದಾರೆ. ಇದರಿಂದ ಮನೆಯಲ್ಲೇ ಹೇಗಪ್ಪ ಕಾಲ ಕಳೆಯೋದು ಅಂತ ನೀವು ಚಿಂತಿತರಾಗಿದ್ದೀರಾ? ಆದರೆ ಚಿಂತೆ ಬೇಡ. ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಲಾಕ್‍ಡೌನ್ ವೇಳೆ ಕೊರೊನಾ ವಿರುದ್ಧ ಯುದ್ಧದ ಜೊತೆಗೆ ಜೀವಮಾನವಾಗಿ ಸ್ಮರಿಸುವ ಕ್ಷಣಗಳನ್ನು ಕಾಯ್ಡಿಡಬಹುದು.

    ಲಾಕ್‍ಡೌನ್ ವೇಳೆ ಮನೆಯಲ್ಲಿ ಹೇಗೆ ಟೈಮ್ ಪಾಸ್ ಮಾಡೋದು:
    * ಈಗೆಲ್ಲಾ ಗಂಡ, ಮನೆ, ಮಕ್ಕಳು, ಕುಟುಂಬಸ್ಥರು ಅಂತ ಕಾಲ ಕಳೆಯೋದೇ ಅಪರೂಪವಾಗಿ ಬಿಟ್ಟಿದೆ. ಅದರಲ್ಲೂ ಹಬ್ಬ, ಹರಿದಿನಗಳಲ್ಲಿ ಒಟ್ಟಿಗೆ ಇರೋಕು ಕೆಲವೊಂದು ಬಾರಿ ಆಗುವುದಿಲ್ಲ. ಆದರೆ ಈಗ ಕೊರೊನಾದಿಂದ ಎಲ್ಲರೂ ಮನೆಯಲ್ಲೇ ಇರುವಾಗಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ, ಎಲ್ಲರೊಟ್ಟಿಗೆ ಕೂಡಿ ಕಾಲ ಕಳೆಯಿರಿ.
    * ಬೆಳಗ್ಗೆ ವೇಳೆ ಬೇಗ ಕಚೇರಿಗೆ, ಕೆಲಸಕ್ಕೆ, ಶಾಲೆ-ಕಾಲೇಜಿಗೆ ಹೋಗಬೇಕಾಗಿರುತ್ತೆ. ಆದರೆ ಹೊರಗೆ ಹೋಗುವವರಿಗಾಗಿ ಅಡುಗೆ ಮಾಡಲು ಬೆಳಗ್ಗೆ 5, 6 ಗಂಟೆಗೆ ಎದ್ದರೂ ಸಹ ಇಷ್ಟವಾದ ಅಡುಗೆ ಮಾಡಲಾಗುವುದಿಲ್ಲ. ಯಾವುದೋ ಒಂದು ಅಡುಗೆ ಮಾಡಿದರೆ ಸಾಕು ಅನ್ನಿಸಿರುತ್ತದೆ.

    * ಬೇಗ ಮನೆಯಿಂದ ಹೊರಡುವ ವೇಳೆಯಲ್ಲಿ ಅಕ್ಕಿರೊಟ್ಟಿ, ವೆರೈಟಿ ವೆರೈಟಿ ದೋಸೆ, ಪಡ್ಡು, ಪರೋಟ, ಕಡುಬು ಇತ್ಯಾದಿ ಹೆಚ್ಚು ಸಮಯ ಹಿಡಿಯುವ ರುಚಿ ರುಚಿಯಾದ ಅಡುಗೆ ಮಾಡಲು ಸಾಧ್ಯವಾಗಿರಲ್ಲ. ಈಗ ಸಮಯವೇ ನಿಮ್ಮ ಕೈಯಲ್ಲಿದೆ. ಬೇಕಾದ ಬೇಕಾದ ಅಡುಗೆ ಮಾಡಿಕೊಂಡು. ಎಲ್ಲರೊಟ್ಟಿಗೆ ಕೂತು ಊಟ ಮಾಡಿ.
    * ಬೆಳಗ್ಗೆ ಎದ್ದು ಕೆಲಸಕ್ಕೆ ಯಾವುದೋ ಒಂದು ಬಟ್ಟೆಯನ್ನು ಹಾಕಿಕೊಂಡು ಹೋದರಾಯ್ತು ಅನ್ನಿಸಿರುತ್ತೆ. ಆದರೆ ಅದನ್ನು ಜೋಡಿಸಿಡಲು ಸಹ ಸಮಯ ಸಿಕ್ಕಿರುವುದಿಲ್ಲ. ಇದರಿಂದ ನಮ್ಮ ಬಳಿ ಇರುವ ಬಟ್ಟೆಗಳೇ ಮರೆತು ಹೋಗಿರುತ್ತೆ. ಇಂತಹದೊಂದು ಡ್ರೆಸ್, ಟಾಪ್, ಪ್ಯಾಂಟ್ ನನ್ನ ಹತ್ತಿರ ಇತ್ತಾ ಎನ್ನಿಸಿಬಿಡುತ್ತೆ. ಹೀಗಾಗಿ ಈಗ ನಿಮ್ಮ ಬಳಿ ಬೇಕಾದಷ್ಟು ಸಮಯ ಇದೆ. ವಾರ್ಡ್ ರೋಬ್‍ನಲ್ಲಿರುವ ಬಟ್ಟೆಗಳನ್ನೆಲ್ಲಾವನ್ನು ಸ್ವಚ್ಛ ಮಾಡಿ ಜೋಡಿಸಿಡಿ. ಬೇಕಾದ್ದನ್ನು, ಬೇಡವಾದ್ದನ್ನು ಬೇರ್ಪಡಿಸಿ. ಟೈಲರಿಂಗ್ ಮೆಷಿನ್ ಇದ್ದರೆ ಅದನ್ನು ಹೊರತೆಗೆದು ನಿಮ್ಮ ಟೈಲರ್ ಕೆಲಸವನ್ನು ಮುಂದುವರಿಸಿ.

    * ಕೆಲವೊಮ್ಮೆ ಕರಕುಶಲ ಕಲೆಗಳನ್ನು ನಮ್ಮೊಳಗೆ ಇದ್ದರೂ ಅದನ್ನು ಪೂರೈಸಲು ನಮ್ಮ ಬಳಿ ಟೈಮ್ ಇರುವುದಿಲ್ಲ. ನೆಟ್ಟಿಂಗ್, ಸೀರೆಯಲ್ಲಿ ಮ್ಯಾಟ್ ಹಾಕುವುದು, ಸೀರೆಗೆ ಕುಚ್ಚು ಕಟ್ಟುವುದು, ದುಪ್ಪಟ್ಟ, ಸೀರೆಗೆ ಡಿಸೈನ್ ಮಾಡುವುದು, ಹಳೆಯ ಸೀರೆಯನ್ನು ಹೊಸತು ಮಾಡುವುದು, ವಾಶ್ ಮಾಡುವುದು, ಗೃಹಲಂಕಾರ ಹೆಚ್ಚಿಸುವುದು, ಪೇಪರ್ ಆರ್ಟ್, ಕಲರಿಂಗ್, ಡ್ರಾಯಿಂಗ್, ಓಲೆ ಮಾಡುವುದು ಹೀಗೆ ಇತ್ಯಾದಿ ಕಲೆಗಳನ್ನು ಸಮಯ ಇಲ್ಲದೇ ನಮ್ಮೊಳಗೆ ಹುದುಗಿ ಹೋಗಿರುತ್ತೆ. ಇದಕ್ಕೆಲ್ಲಾ ಈಗ ಸದಾವಕಾಶ ನಿಮ್ಮ ಬಳಿ ಇದೆ. ಇರುವ ಸಮಯದಲ್ಲಿ ಇದಕ್ಕೆಲ್ಲಾ ಕಾಲಾವಕಾಶ ಕೊಡಿ. ನಿಮ್ಮ ನೆಚ್ಚಿನ ಕಲೆಯನ್ನು ಹೊರಹೊಮ್ಮಿಸಿ.

    * ಕೆಲವು ಮನೆಗಳಲ್ಲಿ ಮನೆಯ ಅಟ್ಟದ ಮೇಲೆ ಹಾಕಿರುವ ವಸ್ತುಗಳನ್ನು ಮರೆತೇ ಹೋಗಿರುತ್ತಾರೆ. ಹಳೆಯ ವಸ್ತು, ಬೇಡದ ವಸ್ತು, ಸ್ಟೀಲ್ ಸಾಮಾನು, ಚೇರ್ ಹೀಗೆ ಎಲ್ಲದಕ್ಕೂ ಅಟ್ಟದ ಮೇಲೆ ಸ್ಥಳ ಕೊಟ್ಟಿರುತ್ತಾರೆ. ಅದನ್ನು ಕ್ಲೀನ್ ಮಾಡಲು ಸಮಯ ಇರುವುದಿಲ್ಲ. ಈಗ ನಿಮ್ಮ ಬಳಿ ಇರುವ ಸಮಯವನ್ನು ಅಟ್ಟ ಕ್ಲೀನ್ ಮಾಡಲು ಬಳಸಿ. ಬೇಡದ್ದನ್ನು ಬೇರ್ಪಡಿಸಿ.
    * ಈ ಬ್ಯುಸಿ ಶೆಡ್ಯೂಲ್‍ನಲ್ಲಿ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬೇಕು ಅಂದರೂ ಆಗಿರಲ್ಲ. ಎಣ್ಣೆಯನ್ನು ತಿಕ್ಕುವವ್ಯಾರು ಎಂದು ಸುಮ್ಮನೆ ಶಾಂಪೂ ಹಾಕಿ ನೀರಾಕಿಕೊಂಡು ಬಂದಿರುತ್ತಾರೆ. ಈಗಿರುವ 24*7 ಟೈಮ್‍ನಲ್ಲಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ತಲೆಗೆ ಹರಳೆಣ್ಣೆ, ಕೊಬ್ಬರಿ ಎಣ್ಣೆ ನಿಮಗೆ ಅನುಕೂಲವಾದ ಎಣ್ಣೆ ಹಾಕಿಕೊಂಡು ಸ್ನಾನ ಮಾಡಿ.

    * ನಮ್ಮ ಹಿರಿಯರ ಕಾಲದಲ್ಲಿ ವಾರದಲ್ಲಿ ಒಮ್ಮೆ ಎಣ್ಣೆ ಸ್ನಾನ ಮಾಡಲೇಬೇಕಿತ್ತು. ಅಯ್ಯೋ ಈಗ ಅದಕ್ಕೆಲ್ಲಾ ಟೈಮ್ ಎಲ್ಲಿದೆ ಅನ್ನೋರು ಹೆಚ್ಚಾಗಿದ್ದರು. ಆದರೆ ಈಗ ತುಂಬಾ ಸಮಯವಿದೆ. ಹೀಗಾಗಿ ಎಣ್ಣೆ ಸ್ನಾನ ಮಾಡಿ. ನಿಮ್ಮ ಮನೆಯಲ್ಲಿರುವ ಮಕ್ಕಳಿಗೂ ಎಣ್ಣೆ ಸ್ನಾನ ಮಾಡಿಸಿ. ಆರೋಗ್ಯ ಕಾಪಾಡಿಕೊಳ್ಳಿ.
    * ಮಕ್ಕಳೊಂದಿಗೆ ಸೇರಿ ಆಟವಾಡಿ, ಚೌಕಾಬಾರ, ಪಗಡೆ, 3 ಸಾಲಿನಾಟ, ಅಳಕುಳಿ ಮನೆಯಾಟ ಅಂದರೇನು ಎಂದು ಈಗಿನ ಮಕ್ಕಳಿಗೆ ಗೊತ್ತಿರಲ್ಲ. ಬರೀ ಮೊಬೈಲ್ ಆ್ಯಪ್‍ನಲ್ಲಿ ಗೇಮ್‍ನಲ್ಲೇ ಕಾಲ ಕಳೆದುಹೋಗಿರುತ್ತಾರೆ. ಈಗ ನಿಮ್ಮ ಮಕ್ಕಳಿಗೆ ಈ ಎಲ್ಲಾವನ್ನು ಆಟವನ್ನು ತಿಳಿಸಿ ಕೊಡಿ. ಇದೆಲ್ಲಾ ಇಂಡೋರ್ ಗೇಮ್ ಆಗಿರುವುದರಿಂದ ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಇದರಿಂದ ಮಾನಸಿಕವಾಗಿ ಮಕ್ಕಳು ಚಾಲಾಕಿಗಳಾಗುತ್ತಾರೆ.

  • ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್‍ಡಿಕೆ ಭೇಟಿ ಅವಕಾಶಕ್ಕೆ ಸಮಯ ನಿಗದಿ!

    ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್‍ಡಿಕೆ ಭೇಟಿ ಅವಕಾಶಕ್ಕೆ ಸಮಯ ನಿಗದಿ!

    ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಇರುವ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು, ಗಣ್ಯರ ಭೇಟಿಗೆ ಲಭ್ಯರಿರುತ್ತಾರೆ.

    ಅವರ ಜೆಪಿ ನಗರದ ಖಾಸಗಿ ನಿವಾಸದಲ್ಲಿ ಜನದಟ್ಟಣಿಯಿಂದ ಬಡಾವಣೆಯ ಇತರ ನಿವಾಸಿಗಳಿಗೆ ಅಡಚಣಿಯಾಗುವುದರಿಂದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಇಚ್ಚಿಸುವವರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗುವಂತೆ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

    ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನವನ್ನು ಆರಂಭಿಸಿದ್ದರು. ಈಗ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇದನ್ನು ಮುಂದುವರಿಸಿದ್ದಾರೆ.

    ರಾಜ್ಯದಲ್ಲಿ ಕುಮಾರಪರ್ವ ಆರಂಭ ಆಗಿದೆ. ಈ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮುಂದಿರೋ ಸವಾಲು ಶುಕ್ರವಾರ ಸದನದಲ್ಲಿ ವಿಶ್ವಾಸಮತ ಗೆಲ್ಲೋದು. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ಮುಂದುವರೆಸಿದ್ದಾರೆ. ಜೆಡಿಎಸ್ ಶಾಸಕರು ಇರೋ ರೆಸಾರ್ಟ್‍ಗೆ ತೆರಳಿದ ಕುಮಾರಸ್ವಾಮಿ ಅಲ್ಲೇ ರಾತ್ರಿ ಕಳೆದಿದ್ದಾರೆ.

    ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಅಂತಾ ಕಿವಿ ಮಾತು ಹೇಳಿದ್ದಾರೆ. ಅತ್ತ ಕಾಂಗ್ರೆಸ್ ಶಾಸಕರಿಗೂ ಇದೇ ರೀತಿಯ ಕಿವಿ ಮಾತನ್ನು ನಾಯಕರು ಹೇಳ್ತಿದ್ದಾರೆ. ನಿನ್ನೆ ಸೋನಿಯಾ ಮತ್ತು ರಾಹುಲ್ ಖುದ್ದು ಶಾಸಕರನ್ನು ಭೇಟಿ ಮಾಡಿ ನಮ್ಮೊಂದಿಗೆ ಇರಿ ಎಂದಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖ ನಾಯಕರು ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

    ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಅನುರಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇನ್ನು ಸ್ಪೀಕರ್ ಆಯ್ಕೆಗೆ ವಿಧಾನಸಭೆ ಸಚಿವಾಲಯದಿಂದ ಅಧಿಸೂಚನೆ ಪ್ರಕಟವಾಗಿದೆ. ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ನಾಳೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ.

  • ಡಿಗ್ರಿ ಕಾಲೇಜ್ ಪ್ರಾರಂಭ ಸಮಯ ಬದಲಾವಣೆ ಮಾಡಿದ ಇಲಾಖೆ

    ಡಿಗ್ರಿ ಕಾಲೇಜ್ ಪ್ರಾರಂಭ ಸಮಯ ಬದಲಾವಣೆ ಮಾಡಿದ ಇಲಾಖೆ

    ಬೆಂಗಳೂರು: ಪದವಿ ತರಗತಿಗಳು 8 ಗಂಟೆಯ ಬದಲು 9 ಗಂಟೆಯಿಂದ ಪ್ರಾರಂಭವಾಗಬೇಕು ಎಂದು ಇದೀಗ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ನಿಯಮ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.

    ಕಳೆದ ಕೆಲವು ದಿನಗಳ ಹಿಂದೆ ಪದವಿ ತರಗತಿಗಳು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಬೇಕು ಎಂದು ಇಲಾಖೆ ಅದೇಶ ಹೊರಡಿಸಿತ್ತು. ಆದ್ರೆ ಇಲಾಖೆಯ ಆದೇಶಕ್ಕೆ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ತೀವ್ರ ವಿರೋಧ ವ್ಯಕ್ತವಾಗಿತ್ತು.

    ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಯ ಬದಲಾಗಿ ಒಂದು ಗಂಟೆ ತಡವಾಗಿ ಅಂದರೆ ಬೆಳಗ್ಗೆ 9 ಗಂಟೆಗೆ ಕಾಲೇಜ್ ಓಪನ್ ಮಾಡಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಅಜಯ್ ನಾಗ್ ಭೂಷಣ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ಆದೇಶವನ್ನು ಆಗಸ್ಟ್ 1 ರಿಂದ ಹೊಸ ಆದೇಶ ಪಾಲನೆ ಮಾಡಲು ಸೂಚಿಸಿದ್ದಾರೆ.