Tag: Timarpur

  • ಪತ್ನಿ-ನಾದಿನಿಯನ್ನ ಚಾಕು, ಸ್ಕ್ರೂ ಡ್ರೈವರ್‍ನಿಂದ ಇರಿದು ಕೊಂದ

    ಪತ್ನಿ-ನಾದಿನಿಯನ್ನ ಚಾಕು, ಸ್ಕ್ರೂ ಡ್ರೈವರ್‍ನಿಂದ ಇರಿದು ಕೊಂದ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ನಾದಿನಿಯ ಮೇಲೆ ಚಾಕು ಮತ್ತು ಸ್ಕ್ರೂಡ್ರೈವರ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ದೆಹಲಿಯ ತಿಮಾರ್ಪುರ್‍ನಲ್ಲಿ ನಡೆದಿದೆ.

    ಸೋನಿಯಾ (24) ಮತ್ತು ಪ್ರೇಮಲತಾ (22) ಕೊಲೆಯಾದ ದುರ್ದೈವಿಗಳು. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಕೊಲೆ ಆರೋಪಿ ಮೋಹಿತ್ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದಾನೆ.

    ಸೋನಿಯಾ ಪತಿ ಮೋಹಿತ್ ಅಡುಗೆ ಮನೆಯಲ್ಲಿದ್ದ ಚಾಕು ಮತ್ತು ಸ್ಕ್ರೂ ಡ್ರೈವರ್‍ನಿಂದು ಇರಿದು ಹತ್ಯೆ ಮಾಡಿದ್ದಾನೆ.

    ಆರೋಪಿ ಮೋಹಿತ್ ಕುಮಾರ್ ವಿಪರೀತ ಕುಡಿಯುವ ಚಟ ಹೊಂದಿದ್ದು, ಇದೇ ವಿಚಾರಕ್ಕೆ ಮೋಹಿತ್ ಮತ್ತು ಪತ್ನಿ ಸೋನಿಯಾ ನಡುವೆ ಭಾನುವಾರದಂದು ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು, ಮೋಹಿತ್ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಸೋನಿಯಾರನ್ನ ಇರಿದಿದ್ದಾನೆ. ಈ ವೇಳೆ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ ಎಂದು ತಿಮಾರ್ಪುರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವೇಳೆ ಪ್ರೇಮಲತಾ ತನ್ನ ಸಹೋದರಿ ಸೋನಿಯಾ ರಕ್ಷಣೆಗೆಂದು ಬಂದಿದ್ದು, ಆಕೆಯ ಮೇಲೂ ಮೋಹಿತ್ ಚಾಕು ಮತ್ತು ಸ್ಕ್ರೂ ಡ್ರೈವರ್‍ನಿಂದ ಇರಿದು ಕೊಲೆ ಮಾಡಿದ್ದಾನೆ.

    ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆರೋಪಿ ಮೋಹಿತ್ ಕುಮಾರ್‍ಗಾಗಿ ಬಲೆ ಬೀಸಿದ್ದಾರೆ.