– ಸೈಯದ್ ಕಿರ್ಮಾನಿ, ತಮ್ಹಾನೆ ದಾಖಲೆ ಸರಿಗಟ್ಟಿದ ಪಂತ್
ಮೆಲ್ಬರ್ನ್: ಆಸೀಸ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಇತ್ತಂಡಗಳ ನಡುವಿನ ಆಟಗಾರರ ನಡುವಿನ ಸ್ಲೆಡ್ಜಿಂಗ್ ಮುಂದುವರೆದಿದ್ದು, 3ನೇ ದಿನದಾಟದ ವೇಳೆ ನನ್ನ ಮಕ್ಕಳನ್ನು ನೀಡ್ಕೊ ಎಂದು ಕಾಲೆಳೆದಿದ್ದ ಆಸೀಸ್ ನಾಯಕ ಟಿಮ್ ಪೈನೆರನ್ನು ತಾತ್ಕಾಲಿಕ ಕ್ಯಾಪ್ಟನ್ ಎಂದು ಕರೆಯುವ ಮೂಲಕ ಪಂತ್ ತಿರುಗೇಟು ನೀಡಿದ್ದಾರೆ.
ಪಂದ್ಯದ 4ನೇ ದಿನದಾಟದ ವೇಳೆ ಬ್ಯಾಟಿಂಗ್ ಮಾಡಲು ಪೈನೆ ಆಗಮಿಸುತ್ತಿದಂತೆ ಮಯಾಂಕ್‍ರೊಂದಿಗೆ ಸಂಭಾಷಣೆ ಆರಂಭಿಸಿ ಕಾಲೆಳೆಯಲು ಮುಂದಾದ ಪಂತ್, ಇಂದು ನಮಗೇ ವಿಶೇಷ ದಿನವಾಗಿದ್ದು, ಆಸೀಸ್ ತಾತ್ಕಾಲಿಕ ಕ್ಯಾಪ್ಟನ್ ಬ್ಯಾಟಿಂಗ್‍ಗೆ ಆಗಮಿಸಿದ್ದಾರೆ. ಜವಾಬ್ದಾರಿ ರಹಿತ ನಾಯಕ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.
ಸತತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಚೇತರಿಕೆ ನೀಡಲು ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಪೈನೆ ರನ್ನು ನಿರಂತರವಾಗಿ ಕಾಲೆಳೆಯುವುದನ್ನು ಮುಂದುವರೆಸಿದ ಪಂತ್, ತಾತ್ಕಾಲಿಕ ಕ್ಯಾಪ್ಟನ್ ಎಂಬುದನ್ನ ಕೇಳಿದ್ದೀರಾ? ತಾತ್ಕಾಲಿಕ ಕ್ಯಾಪ್ಟನ್ ಬಗ್ಗೆ ತಿಳಿದಿದ್ದೆಯಾ ಎಂದು ನಿರಂತರವಾಗಿ ಪ್ರಶ್ನೆ ಮಾಡುತ್ತಿದ್ದರು. ತಾತ್ಕಾಲಿಕ ಕ್ಯಾಪ್ಟನ್ ಕೇವಲ ಮಾತನಾಡಲು ಮಾತ್ರ ಬಯಸುತ್ತಾನೆ. ಅದನ್ನ ಮಾತ್ರ ಆತ ಮಾಡಲ್ಲ. ಕೇವಲ ಮಾತು ಮಾತು ಅಷ್ಟೇ ಎಂದು ಕಿಚಾಯಿಸಿದರು. ಪಂತ್ ನಿರಂತರ ಮಾತನ್ನು ಕಂಡ ಅಂಪೈರ್ ಓವರ್ ಮುಕ್ತಾಯದ ಬಳಿಕ ಪಂತ್ ರೊಂದಿಗೆ ಚರ್ಚೆ ನಡೆಸಿದರು.
ಪಂದ್ಯದ 3ನೇ ದಿನದಾಟದ ವೇಳೆ ಧೋನಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವುದನ್ನು ಪ್ರಸ್ತಾಪಿಸಿ ಕಾಲೆಳೆದಿದ್ದ ಪೈನೆ, ಬಿಗ್ ಬ್ಯಾಸ್ ಲೀಗ್ ಆಡುವಂತೆ ಸಲಹೆ ನೀಡಿದ್ದರು. ಅಲ್ಲದೇ ನಾನು ಪತ್ನಿಯೊಂದಿಗೆ ಸಿನಿಮಾಗೆ ತೆರಳಿದ ವೇಳೆ ತನ್ನ ಮಕ್ಕಳನ್ನು ನೋಡಿಕೋ ಎಂದು ಹೇಳಿದ್ದರು. ಇತ್ತ ಪಂತ್ ಮಾತುಗಳನ್ನೇ ಕೇಳುತ್ತಾ ಕುಳಿತಿದ್ದ ಪಂದ್ಯದ ವೀಕ್ಷಕ ವಿವರಣೆಗಾರರು ಏನು ಮಾತನಾಡದೆ ಸುಮ್ಮನೆ ಸಂಭಾಷಣೆಯನ್ನು ಕೇಳುತ್ತಿದ್ದರು. ಟೂರ್ನಿಯ ಆರಂಭಕ್ಕೂ ಮುನ್ನ ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಇತ್ತಂಡಗಳ ಆಟಗಾರರು ಸದ್ಯ ಪರಸ್ಪರ ಸ್ಲೆಡ್ಜಿಂಗ್ ಮಾಡುವುದಲ್ಲಿ ನಿರತರಾಗಿದ್ದಾರೆ.
https://twitter.com/Karen_noronha09/status/1078892674462015488
ಕಿರ್ಮಾನಿ, ನರೇನ್ ತಮ್ಹಾನೆ ದಾಖಲೆ: ಇತ್ತ ಪಂದ್ಯದಲ್ಲಿ ಪೈನೆ ಕ್ಯಾಚ್ ಪಡೆದ ರಿಷಬ್ ಪಂತ್ ಮತ್ತಷ್ಟು ಸಂಭ್ರಮ ಪಟ್ಟರು. ಒಟ್ಟಾರೆ ಟೂರ್ನಿಯಲ್ಲಿ ಇದುವರೆಗೂ 19 ಕ್ಯಾಚ್‍ಗಳನ್ನು ಪಡೆದಿರುವ ರಿಷಬ್ ಪಂತ್ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮನಿ ಹಾಗೂ ನರೇನ್ ತಮ್ಹಾನೆ ದಾಖಲೆಯನ್ನು ಸರಿಗಟ್ಟಿದರು. ಈ ಹಿಂದೆ ಕಿರ್ಮಾನಿ, ತಮ್ಹಾನೆ ಅವರು ಟೆಸ್ಟ್ ಸರಣಿಯೊಂದರಲ್ಲಿ 19 ಕ್ಯಾಚ್ ಪಡೆದು ದಾಖಲೆ ಬರೆದಿದ್ದರು. ಇದರೊಂದಿಗೆ ಪಂತ್ 6 ಇನ್ನಿಂಗ್ಸ್ ಗಳಿಂದ 191 ರನ್ ಗಳಿಸಿದ್ದು, ಟೀಂ ಇಂಡಿಯಾದಲ್ಲಿ ಧೋನಿ ಬಳಿಕ ವಿಕೆಟ್ ಕೀಪರ್ ಸ್ಥಾನವನ್ನು ತುಂಬುವ ಸಮರ್ಥ ಆಟಗಾರ ಎಂಬ ಭರವಸೆಯನ್ನು ಮೂಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv