Tag: Tilak Nagar

  • ಸ್ನೇಹಿತನೊಂದಿಗೆ ಸಲುಗೆ ಕಂಡು 4 ಮಕ್ಕಳ ತಾಯಿಯ ಹತ್ಯೆ – ಕೊಂದು ಅದೇ ಗೆಳೆಯನ ಜೊತೆ ಎಸ್ಕೇಪ್ ಆಗಿದ್ದ ಲವ್ವರ್‌ ಅರೆಸ್ಟ್

    ಸ್ನೇಹಿತನೊಂದಿಗೆ ಸಲುಗೆ ಕಂಡು 4 ಮಕ್ಕಳ ತಾಯಿಯ ಹತ್ಯೆ – ಕೊಂದು ಅದೇ ಗೆಳೆಯನ ಜೊತೆ ಎಸ್ಕೇಪ್ ಆಗಿದ್ದ ಲವ್ವರ್‌ ಅರೆಸ್ಟ್

    – ರಾಗಿ ಮುದ್ದೆ ತಿರುಗಿಸುವ ಕೋಲಿನಿಂದ ಕೊಲೆ ಮಾಡಿದ್ದ ಪಾಪಿ ಪ್ರಿಯಕರ
    – ಕೊಲೆಗೆ ಮುನ್ನ ಕುಡಿದು ಮಜಾ ಮಾಡಿದ್ದ ಮೂವರು

    ಬೆಂಗಳೂರು: ತಿಲಕ್ ನಗರದ (Tilak Nagar) ಆಟೋ ಒಂದರಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ನೇಹಿತನೊಂದಿಗೆ ಸಲುಗೆಯಿಂದ ಇರುವುದನ್ನು ಕಂಡು ಮಹಿಳೆಯನ್ನು ಮುದ್ದೆ ತಿರುಗಿಸುವ ಕೋಲಿನಿಂದ ಹತ್ಯೆ ಮಾಡಿ, ಬಳಿಕ ಅದೇ ಗೆಳೆಯನ ಜೊತೆ ಲವ್ವರ್ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

    ಮೃತ ಮಹಿಳೆಯನ್ನು ಸಲ್ಮಾ (35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ಸುಬ್ಬುಮಣಿ ಹಾಗೂ ಸೆಂಥಿಲ್ ಎನ್ನಲಾಗಿದೆ.ಇದನ್ನೂ ಓದಿ:ಜಗಳವಾಡಿ ನಾಲ್ಕು ಮಕ್ಕಳ ತಾಯಿಯ ಹತ್ಯೆಗೈದ ಲವ್ವರ್ – ಕೆಟ್ಟು ನಿಂತಿರೋ ಆಟೋದಲ್ಲಿ ಹೆಣ ಬಿಸಾಕಿ ಎಸ್ಕೇಪ್

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮೃತ ಸಲ್ಮಾಗೆ ಮದುವೆಯಾಗಿ, ನಾಲ್ವರು ಮಕ್ಕಳಿದ್ದರು. ಗಂಡ ಮೃತಪಟ್ಟ ಬಳಿಕ ಆರೋಪಿ ಸುಬ್ಬುಮಣಿ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಆದರೆ ಸುಬ್ಬಮಣಿ ಗೆಳೆಯ ಸೆಂಥಿಲ್ ಮೃತ ಸಲ್ಮಾ ಜೊತೆಗೆ ಸಲುಗೆಯಿಂದಿದ್ದ. ಇದನ್ನು ಕಂಡ ಸುಬ್ಬಮಣಿ ಕೋಪಗೊಂಡು, ರಾಗಿಮುದ್ದೆ ತಿರುಗಿಸುವ ಕೋಲಿನಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಆದರೆ ಕೊಲೆಗೆ ಮುನ್ನ ಮೂವರು ಸೇರಿಕೊಂಡು ಕುಡಿದು ಮಜಾ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಸಲ್ಮಾ ಮೃತದೇಹವನ್ನು ಕೆಟ್ಟು ನಿಂತಿದ್ದ ಆಟೋ ಒಂದರಲ್ಲಿ ಹಾಕಿ, ಬಳಿಕ ಸೆಂಥಿಲ್ ಹಾಗೂ ಸುಬ್ಬುಮಣಿ ಸೇರಿಕೊಂಡು ನಡೆದುಕೊಂಡು ಮೆಜೆಸ್ಟಿಕ್‌ಗೆ ಹೋಗಿ ಅಲ್ಲಿಂದ ತುಮಕೂರಿಗೆ (Tumakuru) ಎಸ್ಕೇಪ್ ಆಗಿದ್ದರು. ಬಳಿಕ ಪಾಂಡಿಚೇರಿ ಹೋಗುವ ಪ್ಲ್ಯಾನ್‌ ಮಾಡಿಕೊಂಡಿದ್ದರು. ಪೊಲೀಸರು ಆರೋಪಿಗಳ ಪತ್ತೆಗಿಳಿದಾಗ ಮೊಬೈಲ್ ಲೊಕೇಶನ್ ತುಮಕೂರಿನಲ್ಲಿ ಪತ್ತೆಯಾಗಿತ್ತು. ಕೂಡಲೇ ಡಿಸಿಪಿ ಸಾರಾ ಫಾತಿಮಾ ತುಮಕೂರಿನ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದರು.

    ಇತ್ತ ತುಮಕೂರು ಪೊಲೀಸರು ಆರೋಪಿಗಳಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಮೃತ ಸಲ್ಮಾ ಉಗುರು ಹಾಗೂ ಬಟ್ಟೆಯಲ್ಲಿ ರಕ್ತ ಪತ್ತೆಯಾಗಿತ್ತು. ಇದನ್ನು ಪರಿಶೀಲನೆ ನಡೆಸಿದಾಗ ಇವರೇ ಆರೋಪಿಗಳು ಎನ್ನುವುದು ತಿಳಿದುಬಂದಿದೆ.

    ಕೂಡಲೇ ತಿಲಕ ನಗರ ಪೊಲೀಸರು ತುಮಕೂರಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಪತಿಯ ಚಿತ್ರಹಿಂಸೆ ತಾಳಲಾರದೇ 3ನೇ ಮಹಡಿಯಿಂದ ಜಿಗಿದ ಮಹಿಳೆ

  • ಉಗ್ರರ ಸುರಕ್ಷಿತ ಅಡಗುದಾಣವಾಗ್ತಿದ್ಯಾ ಬೆಂಗಳೂರು? – ಶಂಕಿತ ಲಷ್ಕರ್ ಉಗ್ರನ ವಶ

    ಉಗ್ರರ ಸುರಕ್ಷಿತ ಅಡಗುದಾಣವಾಗ್ತಿದ್ಯಾ ಬೆಂಗಳೂರು? – ಶಂಕಿತ ಲಷ್ಕರ್ ಉಗ್ರನ ವಶ

    ಬೆಂಗಳೂರು: ಬೆಂಗಳೂರು ಸ್ಲೀಪರ್ ಸೆಲ್, ಉಗ್ರರ ಅಡಗುದಾಣವಾಗಿ ಮುಂದುವರಿದಿದೆಯಾ ಎಂಬ ಆತಂಕ ಮುಂದುವರಿದಿದೆ.

    ಲಷ್ಕರ್ ಉಗ್ರ ಸಂಘಟನೆಯ ಅಸ್ಸಾಂ ಮೂಲದ ಶಂಕಿತ ಅಖ್ತರ್ ಹುಸೇನ್‍ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡವೊಂದರ 3ನೇ ಮಹಡಿಯ ಕೋಣೆಯಲ್ಲಿ ವಾಸವಾಗಿದ್ದ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ರಾತ್ರಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ

    ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕೆಲ ಯುವಕರೊಂದಿಗೆ ಶಂಕಿತ ಉಗ್ರ ಅಖ್ತರ್ ಹುಸೇನ್ ವಾಸ್ತವ್ಯ ಹೂಡಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿಯ 30ಕ್ಕೂ ಹೆಚ್ಚು ಪೊಲೀಸರು ರೇಡ್ ಮಾಡಿ ಲಷ್ಕರ್ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಗಡಿ ಬಳಿ ಯುದ್ಧ ವಿಮಾನ ಹಾರಿಸಿ ಭಾರತವನ್ನು ಕೆಣಕುತ್ತಿದೆ ಚೀನಾ

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆ ಒಳಗೆ ಹೋಗಲು ಬಿಟ್ಟಿಲ್ಲವೆಂದು ವೈದ್ಯರ ಮೇಲೆ ಹಲ್ಲೆ

    ಆಸ್ಪತ್ರೆ ಒಳಗೆ ಹೋಗಲು ಬಿಟ್ಟಿಲ್ಲವೆಂದು ವೈದ್ಯರ ಮೇಲೆ ಹಲ್ಲೆ

    ಬೆಂಗಳೂರು: ಆಸ್ಪತ್ರೆ ಒಳಗೆ ಹೋಗಲು ಬಿಟ್ಟಿಲ್ಲವೆಂದು ವ್ಯಕ್ತಿಯೊಬ್ಬ ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಜಯದೇವ ಆಸ್ಪತ್ರೆಯಲ್ಲಿ ನಡೆದಿದೆ.

    ಮೊಹಮ್ಮದ್ ಸುಹೇಲ್ ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪಿ. ಜಯದೇವ ಆಸ್ಪತ್ರೆಯ ವೈದ್ಯ ಗೌತಂ ಹಲ್ಲೆಗೊಳಗಾದವರು.

    ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯನ್ನು ನೋಡಲು ಮೊಹಮ್ಮದ್ ಸುಹೇಲ್ ಬಂದಿದ್ದ. ಆದರೆ ಇದು ರೋಗಿಯ ಭೇಟಿ ಮಾಡುವ ಸಮಯವಲ್ಲ. ಹೀಗಾಗಿ ಒಬ್ಬೊಬ್ಬರೇ ಹೋಗಿ ಎಂದು ವೈದ್ಯ ಗೌತಂ ತಿಳಿಸಿದ್ದರು. ಈ ವಿಚಾರವಾಗಿ ಗಲಾಟೆ ಆರಂಭಿಸಿದ ಮೊಹಮ್ಮದ್ ಸುಹೇಲ್ ಐಸಿಯು ಒಳಗೆ ನುಗ್ಗಿ ಹಲ್ಲೆ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾನೆ.

    ಈ ಸಂಬಂಧ ವೈದ್ಯರು ಆರೋಪಿ ಮೊಹಮ್ಮದ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಹಮ್ಮದ್ ಸುಹೇಲ್‍ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.