Tag: tiku weds sheru

  • ಬಾಲಿವುಡ್ ‘ಮೂವೀ ಮಾಫಿಯಾ’ ವಿರುದ್ಧ ಮತ್ತೆ ಗುಡುಗಿದ ಕಂಗನಾ ರಣಾವತ್

    ಬಾಲಿವುಡ್ ‘ಮೂವೀ ಮಾಫಿಯಾ’ ವಿರುದ್ಧ ಮತ್ತೆ ಗುಡುಗಿದ ಕಂಗನಾ ರಣಾವತ್

    ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ನಿರ್ಮಾಣದ ‘ಟೀಕು ವೆಡ್ಸ್ ಶೇರು’ ಸಿನಿಮಾ ಇಂದಿನಿಂದ ಓಟಿಟಿಯಲ್ಲಿ ಲಭ್ಯವಿದೆ. ಸಿನಿಮಾವನ್ನೂ ನೋಡದೇ ಕೆಲವರು ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಯನ್ನು ಬರೆಯುತ್ತಿದ್ದಾರಂತೆ. ಅಲ್ಲದೇ, ರೇಟಿಂಗ್ ಕೊಡುವ ವಿಚಾರದಲ್ಲೂ ಸಿನಿಮಾ ಸೋಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರಂತೆ. ಇದೆಲ್ಲವನ್ನೂ ಬಾಲಿವುಡ್ ಮೂವೀ ಮಾಫಿಯಾ (Movie Mafia) ಮಾಡಿಸುತ್ತಿದೆ ಎಂದು ಕಂಗನಾ ಗುಡುಗಿದ್ದಾರೆ.

    ಬಾಲಿವುಡ್ (Bollywood) ನಲ್ಲಿ ಮೂವೀ ಮಾಫಿಯಾ ಇದೆ. ಅದು ಬೇರೆ ಚಿತ್ರಗಳನ್ನು ಬೆಳೆಯುವುದಕ್ಕೆ ಬಿಡುವುದಿಲ್ಲ ಎಂದು ಈ ಹಿಂದೆ ಇದೇ ಕಂಗನಾ ಆರೋಪಿಸಿದ್ದರು. ಕರಣ್ ಜೋಹಾರ್ ಸೇರಿದಂತೆ ಹಲವರ ಬಗ್ಗೆ ಈ ಕುರಿತು ನಿರಂತರ ಆರೋಪವನ್ನು ಮಾಡುತ್ತಲೇ ಬರುತ್ತಿದ್ದಾರೆ. ಈ ಬಾರಿಯೂ ಮೂವೀ ಮಾಫಿಯಾ ಬಗ್ಗೆ ಮತ್ತೆ ಮಾತನಾಡಿದ್ದಾರೆ. ನೀವು ನನ್ನನ್ನು ಎಷ್ಟೇ ತುಳಿದರು ಮತ್ತೆ ನಾನು ಎದ್ದು ನಿಲ್ಲುತ್ತೇನೆ ಎಂದಿದ್ದಾರೆ ಕಂಗನಾ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

    ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರು ಸಾಕಷ್ಟು ವಿಭಿನ್ನ ಪಾತ್ರಗಳ ನಟಿಸಿ ಸೈ ಎನಿಸಿಕೊಂಡವರು. ಅವರ ಮನೋಜ್ಞ ನಟನೆಗೆ ಬಿಟೌನ್ ಭೇಷ್ ಎಂದಿದ್ದೂ ಇದೆ. ಈಗ ‘ಟೀಕು ವೆಡ್ಸ್ ಶೇರು’ (Tiku Weds Sheru) ಚಿತ್ರದ ಮೂಲಕ ಸದ್ದು ಮಾಡ್ತಿರೋ ನವಾಜುದ್ದೀನ್ ಮೇಲೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್ ಮತ್ತು ಲಿಪ್‌ಲಾಕ್ ಮಾಡಿರೋ ನವಾಜುದ್ದೀನ್‌ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

    ಈ ಚಿತ್ರದಲ್ಲಿ ನವಾಜುದ್ದೀನ್ ಅವರು ಶೇರು ಎಂಬ ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಸೆಟ್ಲ್ ಆಗಬೇಕು ಎಂಬುದು ಶೇರು ಕನಸಾಗಿರುತ್ತದೆ. ಟೀಕು (ಅವ್ನೀತ್) ಕೂಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡವಳು. ಶೇರುನ ಮದುವೆ ಆದರೆ ಭೋಪಾಲ್ ಬಿಟ್ಟು ಮುಂಬೈ ಸೇರಬಹುದು, ಸಿನಿಮಾ ಆಫರ್ ಪಡೆಯಬಹುದು ಎಂಬುದು ಟೀಕು ಆಲೋಚನೆ. ಈ ಕಾರಣಕ್ಕೆ ಆಕೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇದು ಟ್ರೈಲರ್‌ನಲ್ಲಿ ತೋರಿಸಿರುವ ಅಂಶವಾಗಿದೆ.

     

    ನವಾಜುದ್ದೀನ್, ಅವ್ನೀತ್ ಕೌರ್ ಲಿಪ್ ಲಾಕ್ ದೃಶ್ಯ ಇದೆ. ನವಾಜುದ್ದೀನ್ ವಯಸ್ಸು 49. ಅವ್ನೀತ್‌ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ. 21 ವರ್ಷದ ಯುವತಿ ಜೊತೆ ರೊಮ್ಯಾನ್ಸ್ ಮಾಡೋ ಅವಶ್ಯಕತೆ ಇದ್ಯಾ.? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ ಅಂತಾ ಸಿನಿಮಾ ತಂಡಕ್ಕೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಟೀಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಮಗಳ ವಯಸ್ಸಿನ ನಟಿ ಜೊತೆ ಲಿಪ್‌ಲಾಕ್ ಮಾಡಿದ ನವಾಜುದ್ದೀನ್‌ಗೆ ನೆಟ್ಟಿಗರಿಂದ ತರಾಟೆ

    ಮಗಳ ವಯಸ್ಸಿನ ನಟಿ ಜೊತೆ ಲಿಪ್‌ಲಾಕ್ ಮಾಡಿದ ನವಾಜುದ್ದೀನ್‌ಗೆ ನೆಟ್ಟಿಗರಿಂದ ತರಾಟೆ

    ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರು ಸಾಕಷ್ಟು ವಿಭಿನ್ನ ಪಾತ್ರಗಳ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಮನೋಜ್ಞ ನಟನೆಗೆ ಬಿಟೌನ್ ಭೇಷ್ ಎಂದಿದ್ದು ಇದೆ. ಈಗ ‘ಟೀಕು ವೆಡ್ಸ್ ಶೇರು’ (Tiku Weds Sheru) ಚಿತ್ರದ ಮೂಲಕ ಸದ್ದು ಮಾಡ್ತಿರೋ ನವಾಜುದ್ದೀನ್ ಮೇಲೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್, ಮತ್ತು ಲಿಪ್‌ಲಾಕ್ ಮಾಡಿರೋ ನವಾಜುದ್ದೀನ್‌ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

    ನವಾಜುದ್ದೀನ್ ಸಿದ್ಧಿಕಿ ಅವರು ಇತ್ತೀಚಿಗೆ ತಮ್ಮ ವೈಯಕ್ತಿಕ ವಿಷ್ಯವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಕುಟುಂಬಿಕ ಕಲಹ ಬೀದಿಯಲ್ಲಿ ರಂಪಾಟ ಆಗುತ್ತಿದೆ. ಇದರ ನಡುವೆ ಅವರ ನಟನೆಯ ಸಿನಿಮಾದ ಟ್ರೈಲರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ‘ಟೀಕು ವೆಡ್ಸ್ ಶೇರು’ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಅವರು ಶೇರು ಎಂಬ ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಸೆಟ್ಲ್ ಆಗಬೇಕು ಎಂಬುದು ಶೇರು ಕನಸಾಗಿರುತ್ತದೆ. ಟೀಕು (ಅವ್ನೀತ್) ಕೂಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡವಳು. ಶೇರುನ ಮದುವೆ ಆದರೆ ಭೋಪಾಲ್ ಬಿಟ್ಟು ಮುಂಬೈ ಸೇರಬಹುದು, ಸಿನಿಮಾ ಆಫರ್ ಪಡೆಯಬಹುದು ಎಂಬುದು ಟೀಕು ಆಲೋಚನೆ. ಈ ಕಾರಣಕ್ಕೆ ಆಕೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇದು ಟ್ರೈಲರ್‌ನಲ್ಲಿ ತೋರಿಸಿರುವ ಅಂಶವಾಗಿದೆ. ಇದನ್ನೂ ಓದಿ:ಮಾಡ್ರನ್ ಅವತಾರ ಬದಿಗಿಟ್ಟು ಲೆಹೆಂಗಾದಲ್ಲಿ ಮಿಂಚಿದ ‘ಪುಟ್ಟಗೌರಿ’- ಸೊಂಟ ಸೂಪರ್ ಎಂದ ನೆಟ್ಟಿಗರು

    ನವಾಜುದ್ದೀನ್, ಅವ್ನೀತ್ ಕೌರ್ ಲಿಪ್ ಲಾಕ್ ದೃಶ್ಯ ಇದೆ. ನವಾಜುದ್ದೀನ್ ವಯಸ್ಸು 49. ಅವ್ನೀತ್‌ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ. 21 ವರ್ಷದ ಯುವತಿ ಜೊತೆ ರೊಮ್ಯಾನ್ಸ್ ಮಾಡೋ ಅವಶ್ಯಕತೆ ಇದ್ಯಾ.? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ ಅಂತಾ ಸಿನಿಮಾ ತಂಡಕ್ಕೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಟೀಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಓಟಿಟಿ ಮೂಲಕ ಈ ಸಿನಿಮಾ ಜೂನ್ 23ರಂದು ರಿಲೀಸ್ ಆಗಲಿದೆ.

    ನಟ ನವಾಜುದ್ದೀನ್ ಬಾಲಿವುಡ್‌ನ ಖ್ಯಾತ ನಟ, ವಿಭಿನ್ನ ಪಾತ್ರ, ಕಥೆಯ ಮೂಲಕ ಬಿಟೌನ್‌ನಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ರಿಲೀಸ್‌ಗಿರೋ ‘ಟೀಕು ವೆಡ್ಸ್ ಶೇರು’ ಅದೆಷ್ಟರ ಮಟ್ಟಿಗೆ ಸಿನಿಮಾ ಸೌಂಡ್ ಮಾಡುತ್ತೆ ಅಂತಾ ಕಾದುನೋಡಬೇಕಿದೆ.