Tag: Tiktok

  • ಯುವಕನ ಆತ್ಮಹತ್ಯೆಗೆ ಟ್ವಿಸ್ಟ್- ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಸೂಸೈಡ್

    ಯುವಕನ ಆತ್ಮಹತ್ಯೆಗೆ ಟ್ವಿಸ್ಟ್- ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಸೂಸೈಡ್

    ಬೆಂಗಳೂರು: ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಟಿಕ್ ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಯುವಕನಿಗೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

    ಕಿರಣ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಹೀರೋ ಆಗಬೇಕು ಎಂದು ಕನಸು ಕಂಡಿದ್ದನು. ಅಲ್ಲದೆ ಜೊತೆಗೆ ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆಸಿದ್ದನು. ಈ ಬಾರಿ ನನಗೂ ಒಂದು ಚಾನ್ಸ್ ಸಿಕ್ಕಿಯೇ ಸಿಗುತ್ತದೆ ಎಂದು ಮಧ್ಯವರ್ತಿಗಳ ಸಹಾಯದಿಂದ ಕಾದು ಕುಳಿತಿದ್ದನು. ಆದರೆ ಕೊನೆ ಕ್ಷಣದಲ್ಲಿ ಚಾನ್ಸ್ ಸಿಗಲಿಲ್ಲ ಎಂದು ಮಧ್ಯವರ್ತಿಗಳು ಕೈ ಎತ್ತಿದ್ದರು. ಇದರಿಂದ ಮನನೊಂದ ಯುವಕ, ಬುಧವಾರ ರಾತ್ರಿ ಹೊಸಕೋಟೆಗೆ ಬಂದು ಲಾಡ್ಜ್ ನಲ್ಲಿ ರೂಂ ಬಾಡಿಗೆಗೆ ಪಡೆದು ಟಿಕ್‍ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ರಿಯಾಲಿಟಿ ಶೋ ನಲ್ಲಿ ಏನಾದರೂ ಮಾಡಿ ಚಾನ್ಸ್ ತಗೆದುಕೊಳ್ಳಬೇಕು ಎಂದು ಕಿರಣ್ ಅಂದುಕೊಂಡಿದ್ದನು. ಇದೇ ವೇಳೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ವಂಚಕರು ಹೇಳಿದ ಮಾತು ನಂಬಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದಾನೆ. ಆದರೆ ಕಿರಣ್‍ನಿಂದ ಚಾನ್ಸ್ ಕೊಡಿಸುವುದಾಗಿ ಹಣ ಪಡೆದವರು ಕೊನೆ ಕ್ಷಣದವರೆಗೂ ಚಾನ್ಸ್ ಸಿಕ್ಕಿದೆ ಎಂದು ಹೇಳಿದ್ದರು. ಬಳಿಕ ಈ ಬಾರಿ ನಿನಗೆ ಚಾನ್ಸ್ ಸಿಕ್ಕಿಲ್ಲ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು. ಇದರಿಂದ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆತನ ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ಸಹ ಕಂಬನಿ ಮಿಡಿದಿದ್ದು, ಇಂತಹ ಮೋಸದ ಜಾಲದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ವಿಡಿಯೋದಲ್ಲಿ ಕಿರಣ್ ಹೇಳಿದ್ದೇನು?
    ಹಾಯ್ ಫ್ರೆಂಡ್ಸ್ ನಾನು ಕಿರಣ್ ಯಾದವ್. ಈ ವಿಡಿಯೋ ಮಾಡಿದ ಉದ್ದೇಶ ಏನೆಂದರೆ ಕಮೆಂಟ್ಸ್ ನಲ್ಲಿ ನನ್ನ ನಿಮ್ಮ ಸಂಬಂಧ ತುಂಬಾ ಇದೆ. ಅಣ್ಣ ಆಗಿರಬಹುದು, ತಮ್ಮ ಆಗಿರಬಹುದು, ಅಕ್ಕ-ತಂಗಿ ಎಂದು ಜಾಸ್ತಿ ಕರೆದುಕೊಳ್ಳುತ್ತೇವೆ. ನನ್ನ ಒಂದು ಮನವಿ ಇದೆ. ನನ್ನ ತಾಯಿಗೆ ನಾನೊಬ್ಬನೇ ಮಗ. ನನ್ನ ಅಮ್ಮನ ನಿಮ್ಮ ಅಮ್ಮ ಎಂದು ನೋಡಿಕೊಳ್ಳಿ. ಇನ್ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಎಂದು ನಾನು ಹೇಳುವುದಿಲ್ಲ. ಇದು ನನ್ನ ಕೊನೆಯ ಟಿಕ್‍ಟಾಕ್ ವಿಡಿಯೋ. ಹಾಗಾಗಿ ನಾನು ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದನು.

  • ನನ್ನ ತಾಯಿಯನ್ನು ನಿಮ್ಮ ತಾಯಿ ಥರ ನೋಡ್ಕೊಳ್ಳಿ- ಟಿಕ್ ಟಾಕ್ ಮಾಡಿ ಯುವಕ ಆತ್ಮಹತ್ಯೆ

    ನನ್ನ ತಾಯಿಯನ್ನು ನಿಮ್ಮ ತಾಯಿ ಥರ ನೋಡ್ಕೊಳ್ಳಿ- ಟಿಕ್ ಟಾಕ್ ಮಾಡಿ ಯುವಕ ಆತ್ಮಹತ್ಯೆ

    ಬೆಂಗಳೂರು: ನನ್ನ ತಾಯಿಯನ್ನು ನಿಮ್ಮ ತಾಯಿ ಎಂದು ನೋಡಿಕೊಳ್ಳಿ ಎಂದು ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶ್ರೀನಿವಾಸ ಲಾಡ್ಜ್ ನಲ್ಲಿ ನಡೆದಿದೆ.

    ಕಿರಣ್ ಯಾದವ್ (22) ನೇಣಿಗೆ ಶರಣಾದ ಯುವಕ. ಕಿರಣ್ ಕಂಬ್ಳಿಪುರದ ನಿವಾಸಿಯಾಗಿದ್ದು, ಪೊಲೀಸ್ ಠಾಣೆ ಪಕ್ಕದಲ್ಲಿರುವ ಶ್ರೀನಿವಾಸ್ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕಿರಣ್ ಸೆಲ್ಫಿ ವಿಡಿಯೋ ಮಾಡಿದ್ದಾನೆ.

    ವಿಡಿಯೋದಲ್ಲಿ ಏನಿದೆ?
    ಹಾಯ್ ಫ್ರೆಂಡ್ಸ್ ನಾನು ಕಿರಣ್ ಯಾದವ್. ಈ ವಿಡಿಯೋ ಮಾಡಿದ ಉದ್ದೇಶ ಏನೆಂದರೆ ಕಮೆಂಟ್ಸ್ ನಲ್ಲಿ ನನ್ನ ನಿಮ್ಮ ಸಂಬಂಧ ತುಂಬಾ ಇದೆ. ಅಣ್ಣ ಆಗಿರಬಹುದು, ತಮ್ಮ ಆಗಿರಬಹುದು, ಅಕ್ಕ-ತಂಗಿ ಎಂದು ಜಾಸ್ತಿ ಕರೆದುಕೊಳ್ಳುತ್ತೇವೆ. ನನ್ನ ಒಂದು ಮನವಿ ಇದೆ. ನನ್ನ ತಾಯಿಗೆ ನಾನೊಬ್ಬನೇ ಮಗ. ನನ್ನ ಅಮ್ಮನ ನಿಮ್ಮ ಅಮ್ಮ ಎಂದು ನೋಡಿಕೊಳ್ಳಿ. ಇನ್ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಎಂದು ನಾನು ಹೇಳುವುದಿಲ್ಲ. ಇದು ನನ್ನ ಕೊನೆಯ ಟಿಕ್‍ಟಾಕ್ ವಿಡಿಯೋ. ಹಾಗಾಗಿ ನಾನು ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದಾನೆ.

    ಈ ವಿಡಿಯೋದಲ್ಲಿ ಕಿರಣ್ ತನ್ನ ಸಾವಿಗೆ ಕಾರಣ ಏನೂ ಎಂಬುದನ್ನು ಹೇಳಿಲಿಲ್ಲ. ಸದ್ಯ ಈ ವಿಷಯ ತಿಳಿದು ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಗಾಂಧಿನಗರ: ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಗುಜರಾತ್ ಎಸಿಪಿ ಈಗ ಖುದ್ದು ಟಿಕ್‍ಟಾಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಸಿಪಿ ಮಂಜಿತ ವಂಜಾರ ಸ್ಪಷ್ಟನೆ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೇದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದು ವಿವಾದ ಆಗುತ್ತಿದ್ದಂತೆ ಎಸಿಪಿ ಮಂಜಿತ ವಂಜಾರ ಅವರನ್ನು ಸಸ್ಪೆಂಡ್ ಮಾಡಿದ್ದರು. ಈಗ ಎಸಿಪಿ ಮಂಜಿತ ವಂಜಾರ ಅವರ ಟಿಕ್‍ಟಾಕ್ ವಿಡಿಯೋ ವೈರಲ್ ಆಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಡಿಯೋ ನನ್ನ ಸ್ನೇಹಿತರ ಖಾತೆಯಿಂದ ಒಂದು ವರ್ಷದ ಹಿಂದೆ ಅಪ್ಲೋಡ್ ಆಗಿದೆ. ಇಬ್ಬರು ಮಹಿಳಾ ಪೇದೆ ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಅಲ್ಲದೆ ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರನ್ನು ಅಮಾನತುಗೊಳಿಸಿಲ್ಲ. ಬದಲಾಗಿ ಕೆಲಸದ ಸಮಯದಲ್ಲಿ ಅವರು ಯೂನಿಫಾರಂ ಧರಿಸದ್ದಕ್ಕೆ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋ ವೈರಲ್ ಆಗಿದ್ದಕ್ಕೆ ಎಸಿಪಿ ಮಂಜಿತ ವಂಜಾರ ಅವರು, ನಾನು ಒಬ್ಬ ಯುವ ಮಹಿಳಾ ಪೊಲೀಸ್ ಅಧಿಕಾರಿಯಾಗಿ ನನಗೆ ಸಾಮಾಜಿಕ ಜಾಲತಾಣ ಉಪಯೋಗಿಸಲು ನನಗೆ ಹಕ್ಕಿದೆ. ಅಲ್ಲದೆ ನಾನು ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ, ಸ್ನ್ಯಾಪ್‍ಚಾಟ್ ಹಾಗೂ ಟಿಕ್‍ಟಾಕ್ ಬಳಸುತ್ತೇನೆ. ಸಾಮಾಜಿಕ ಜಾಲತಾಣದಿಂದ ನನಗೆ ಅಪರಾಧಗಳನ್ನು ಕಂಡು ಹಿಡಿಯಲು ಸಹಾಯವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

  • 60 ಲಕ್ಷ ಟಿಕ್‍ಟಾಕ್ ವಿಡಿಯೋ ಡಿಲೀಟ್

    60 ಲಕ್ಷ ಟಿಕ್‍ಟಾಕ್ ವಿಡಿಯೋ ಡಿಲೀಟ್

    ನವದೆಹಲಿ: ಟಿಕ್ ಟಾಕ್ ತನ್ನ ಆ್ಯಪ್‍ನಲ್ಲಿದ್ದ ಬರೋಬ್ಬರಿ 60 ಲಕ್ಷ ವಿಡಿಯೋಗಳನ್ನು ಡಿಲೀಟ್ ಮಾಡಿದೆ.

    ಕಂಪನಿ ಸಾಮಾಜಿಕವಾಗಿ ಬಲಿಷ್ಠಗೊಳಿಸಿಕೊಳ್ಳಲು ಅಪರಾಧ, ಅಶ್ಲೀಲ, ಕೋಮುಭಾವನೆ ಪ್ರಚೋದನೆ ಸೇರಿದಂತಹ 60 ಲಕ್ಷ ವಿಡಿಯೋಗಳನ್ನು ಡಿಲೀಟ್ ಮಾಡಿಕೊಂಡಿದೆ.

    ಭಾರತದಲ್ಲಿ ಟಿಕ್‍ಟಾಕ್ ವಿಡಿಯೋಗಳಿಗೆ ಸಂಬಂಧಿಸಿದಂತೆ ವಿರೋಧಗಳು ವ್ಯಕ್ತವಾಗಿವೆ. ಈ ಸಂಬಂಧ ಭಾರತ ಸರ್ಕಾರ ಸಹ ಟಿಕ್‍ಟಾಕ್ ಕಂಪನಿಗೆ ನೋಟಿಸ್ ನೀಡಿ ಕೆಲವು ವಿಷಯಗಳ ಕುರಿತು ಸ್ಪಷ್ಟನೆ ಕೇಳಿತ್ತು. ಅಪರಾಧ, ಅಶ್ಲೀಲ, ಕೋಮುಭಾವನೆ ಪ್ರಚೋದನೆ ಮತ್ತು ದೇಶ ದ್ರೋಹಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಮಾಹಿತಿ ನೀಡುವಂತೆ ನೋಟಿಸಿನಲ್ಲಿ ತಿಳಿಸಿತ್ತು.

    ಈ ಕುರಿತು ಪ್ರತಿಕ್ರಿಯಿಸಿರುವ ಟಿಕ್‍ಟಾಕ್ ಇಂಡಿಯಾ ಸೇಲ್ಸ್ ಆ್ಯಂಡ್ ಪಾಟರ್ನರ್ ಶಿಪ್ ನಿರ್ದೇಶಕ ಸಚಿನ್ ಶರ್ಮಾ, ಬಳಕೆದಾರರ ಟ್ಯಾಲೆಂಟ್ ಮತ್ತು ಕ್ರಿಯೇಟಿವಿಟಿ ತೋರಿಸುವ ವೇದಿಕೆಯನ್ನು ಟಿಕ್‍ಟಾಕ್ ನಿರ್ಮಿಸಿದೆ. ಹಾಗಾಗಿ ಸುರಕ್ಷಿತ ಮತ್ತು ಸಕಾರತ್ಮಕ ಅಂಶದ ಅವಕಾಶಗಳನ್ನು ಒದಗಿಸಲು ಟಿಕ್‍ಟಾಕ್ ವೇದಿಕೆ ಸಿದ್ಧವಿದೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡಲ್ಲ. ಟಿಕ್‍ಟಾಕ್ ಆ್ಯಪ್ ಅಭಿವೃದ್ಧಿ ಪಡಿಸಿದ ಬೈಟ್‍ಡ್ಯಾನ್ಸ್ ಪ್ರಕಾರ ಭಾರತದಲ್ಲಿ 20 ಕೋಟಿಗೂ ಅಧಿಕ ಬಾರಿ ಆ್ಯಪ್ ಡೌನ್‍ಲೋಡ್ ಆಗಿದ್ದು, ಹೊಸ ಬಳಕೆದಾರರು ಸಹ ನಮ್ಮ ವೇದಿಕೆಯತ್ತ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಟೆಂಟ್ ಟ್ರಾಫಿಕ್ ಸಹ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.

    ಭಾರತದ 10 ಭಾಷೆಗಳಲ್ಲಿ ಟಿಕ್‍ಟಾಕ್ ಆ್ಯಪ್ ಲಭ್ಯವಿದೆ. ಟಿಕ್‍ಟಾಕ್ ಆ್ಯಪ್ ತಪ್ಪು ರೀತಿಯಲ್ಲಿ ಬಳಕೆಯಾಗುತ್ತಿರೋದನ್ನು ಗಮನಕ್ಕೆ ಬಂದಿದ್ದು, ನಿಯಂತ್ರಣ ಕಾರ್ಯ ಸಹ ನಡೆದಿದೆ. ಸುರಕ್ಷಿತ ಮತ್ತು ಸಕಾರತ್ಮಕ ವಿಚಾರಗಳನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ಜುಲೈ 2018ರಿಂದ ಇಂದಿನವರೆಗಿನ 60 ಲಕ್ಷ ವಿಡಿಯೋಗಳನ್ನು ತೆಗೆಯಲಾಗಿದೆ ಎಂದು ಸಚಿನ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

  • ಪತ್ನಿ ಬಿಟ್ಟು ಮಂಗಳಮುಖಿ ಜೊತೆ ಸ್ನೇಹ- 3 ವರ್ಷದ ಬಳಿಕ ಟಿಕ್‍ಟಾಕ್‍ನಲ್ಲಿ ಸಿಕ್ಕ

    ಪತ್ನಿ ಬಿಟ್ಟು ಮಂಗಳಮುಖಿ ಜೊತೆ ಸ್ನೇಹ- 3 ವರ್ಷದ ಬಳಿಕ ಟಿಕ್‍ಟಾಕ್‍ನಲ್ಲಿ ಸಿಕ್ಕ

    ಚೆನ್ನೈ: ನಾಪತ್ತೆಯಾದ ವ್ಯಕ್ತಿಯೊಬ್ಬ ಟಿಕ್‍ಟಾಕ್ ಮೂಲಕ ಪತ್ತೆಯಾಗಿದ್ದು, ಇದೀಗ ಒತ್ತಾಯಪೂರ್ವಕವಾಗಿ ಆತ ಮತ್ತೆ ತನ್ನ ಮನೆ ಸೇರಿದ ಘಟನೆಯೊಂದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.

    ಕೃಷ್ಣಗಿರಿ ನಿವಾಸಿ ಸುರೇಶ್ ಎಂಬಾತ ಜಯಪ್ರದಾ ಎಂಬಾಕೆಯನ್ನು ವಿವಾಹವಾಗಿದ್ದನು. ಬಳಿಕ ದಂಪತಿಗೆ ಇಬ್ಬರು ಮಕ್ಕಳೂ ಹುಟ್ಟಿದವು. ಆದರೆ 2016ರಂದು ಏಕಾಏಕಿ ಕಾಣೆಯಾಗಿದ್ದ ಸುರೇಶ್, ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ. ಇದರಿಂದ ನೊಂದ ಪತ್ನಿ ಜಯಪ್ರದಾ ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಅಲ್ಲದೆ ಸುರೇಶ್ ಗೆಳೆಯರು, ಸಂಬಂಧಿಕರಲ್ಲಿ ಪತಿಯನ್ನು ಹುಡುಕಿ ಕೊಡುವಂತೆ ಕೇಳಿಕೊಂಡಿದ್ದರು.

    ಇತ್ತ ಪತ್ನಿಯ ದೂರು ಸ್ವೀಕರಿಸಿದ ಪೊಲೀಸರು ಸುರೇಶ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು.

    ಕೆಲ ವಾರಗಳ ಹಿಂದೆ ಜಯಪ್ರದಾ ಸಂಬಂಧಿಕರೊಬ್ಬರು, ಟಿಕ್ ಟಾಕ್ ವಿಡಿಯೋದಲ್ಲಿ ಸುರೇಶ್ ನನ್ನು ನೋಡಿದ್ದರು. ಹೀಗಾಗಿ ಅದು ಸುರೇಶನೇ ಎಂದು ತಿಳಿಯಲು ಜಯಪ್ರದಾ ಅವರನ್ನು ಸಂಪರ್ಕಿಸಿದರು. ಹಾಗೆಯೇ ವಿಡಿಯೋದಲ್ಲಿ ಪತಿಯನ್ನು ಗುರುತಿಸಿದ ಜಯಪ್ರದಾ ಕೂಡಲೇ ಪೊಲೀಸರಿಗೆ ಮಾಹಿತಿ ನಿಡಿದರು. ತಕ್ಷಣವೇ ಎಚ್ಚೆತ್ತ ಪೊಲೀಸರು ಸುರೇಶ್ ನನ್ನು ಟ್ರ್ಯಾಕ್ ಮಾಡಿದಾಗ ಆತ ಹೊಸೂರಿನಲ್ಲಿರುವುದು ಬೆಳಕಿಗೆ ಬಂದಿದೆ.

    ಕೌಟುಂಬಿಕ ಸಮಸ್ಯೆಯಿಂದಾಗಿ ಸುರೇಶ್ ತನ್ನ ಕುಟುಂಬಸ್ಥರನ್ನು ತೊರೆದಿದ್ದನು. ಬಳಿಕ ಹೊಸೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಇದೇ ಸಂದರ್ಭದಲ್ಲಿ ಆತನಿಗೆ ಟಿಕ್ ಟಾಕ್ ಮೂಲಕ ಮಂಗಳಮುಖಿಯೊಬ್ಬರ ಪರಿಚಯವಾಗುತ್ತದೆ. ಹಾಗೆಯೇ ಇಬ್ಬರೂ ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವಿಡಿಯೋವನ್ನು ಜಯಪ್ರದಾ ಸಂಬಂಧಿಕರೊಬ್ಬರು ನೋಡಿದ್ದು, ಈ ವೇಳೆ ಸುರೇಶ್ ಪತ್ತೆಯಾಗಿದ್ದಾನೆ. ಸದ್ಯ ಪೊಲೀಸರು ಸುರೇಶನನ್ನು ಪತ್ತೆ ಹಚ್ಚಿ ಪತ್ನಿ ಜಯಪ್ರದಾ ಜೊತೆ ಕಳುಹಿಸಿಕೊಟ್ಟಿದ್ದಾರೆ.

  • ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ಮಂಗಳಸೂತ್ರ, ಬಳೆ ಧರಿಸಿ ನೇಣು ಹಾಕಿಕೊಂಡ 12ರ ಪೋರ

    ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ಮಂಗಳಸೂತ್ರ, ಬಳೆ ಧರಿಸಿ ನೇಣು ಹಾಕಿಕೊಂಡ 12ರ ಪೋರ

    – ಟಿಕ್‍ಟಾಕ್ ಇಲ್ಲದಿದ್ದರೆ ಮಗ ಜೀವಂತವಾಗಿರುತ್ತಿದ್ದ

    ಜೈಪುರ: ಇತ್ತೀಚಿನ ದಿನಗಳಲ್ಲಿ ಮನರಜಂನೆಗೆ ಬಳಕೆಯಾಗಬೇಕಿದ್ದ ಸಾಮಾಜಿಕ ಜಾಲತಾಣ ಮನುಷ್ಯರ ಜೀವವನ್ನು ಬಲಿ ಪಡೆದುಕೊಳ್ಳುತ್ತಿದೆ. ಇದಕ್ಕೆ ಪೂರಕ ಎಂಬಂತೆ 12 ವರ್ಷದ ಬಾಲಕನೊಬ್ಬ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನೇಣು ಹಾಕಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ತಾನದ ಕೋಟಾ ಎಂಬಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, 12 ವರ್ಷದ ಬಾಲಕನೊಬ್ಬ ಟಿಕ್‍ಟಾಕ್‍ನಲ್ಲಿ ಬರುವ ವಿಡಿಯೋವನ್ನು ಸವಾಲಾಗಿ ತೆಗೆದುಕೊಂಡು ತಾನು ಅದೇ ರೀತಿ ಮಾಡಲು ಹೋಗಿ ಬಾತ್‍ರೂಮ್‍ನಲ್ಲಿ ನೇಣು ಹಾಕಿಕೊಂಡಿದ್ದಾನೆ.

    ನೇಣು ಹಾಕಿಕೊಳ್ಳುವ ಮೊದಲು, ಹುಡುಗ ಮಂಗಳಸೂತ್ರ ಮತ್ತು ಬಳೆಯನ್ನು ಧರಿಸಿದ್ದಾನೆ. ನಂತರ ಅವನು ತನ್ನ ಕುತ್ತಿಗೆಗೆ ದಪ್ಪವಾದ ಲೋಹದ ಸರಪಳಿಯನ್ನು ಸುತ್ತಿಕೊಂಡು ಬಾತ್‍ರೂಮ್‍ನಲ್ಲಿ ನೇಣುಹಾಕಿಕೊಂಡಿದ್ದಾನೆ. ಪ್ರತಿದಿನ ತುಂಬ ಟಿಕ್‍ಟಾಕ್ ವಿಡಿಯೋ ನೋಡುತ್ತಿದ್ದ ಬಾಲಕ ಟಿಕ್‍ಟಾಕ್‍ನಲ್ಲಿ ಬರುವ ಹಾಗೇ ತಾನು ಮಾಡಲು ಹೋಗಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ.

    ನನ್ನ ಮಗ ಇಡೀ ರಾತ್ರಿ ಟಿಕ್‍ಟಾಕ್ ಬಳಸುತ್ತಿದ್ದನು. ಅವನು ನಮಗೆ ಟಿಕ್‍ಟಾಕ್‍ನಲ್ಲಿ ಒಂದು ಸಾವಲಿನ ಬಗ್ಗೆ ಹೇಳುತ್ತಿದ್ದ. ಅದೇ ರೀತಿ ಮಂಗಳಸೂತ್ರ ಮತ್ತು ಬಳೆ ಧರಿಸಿ ಕಬ್ಬಿಣದ ಸರಪಳಿಯಿಂದ ನೇಣು ಹಾಕಿಕೊಂಡಿದ್ದಾನೆ. ಟಿಕ್‍ಟಾಕ್ ಇಲ್ಲದಿದ್ದರೆ ನನ್ನ ಮಗ ಜೀವಂತವಾಗಿ ಇರುತ್ತಿದ್ದ ಎಂದು ಬಾಲಕನ ತಂದೆ ದುಃಖ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ತಡರಾತ್ರಿ ನಡೆದಿದ್ದು, ಬೆಳಗ್ಗೆ ಬಾಲಕ ಕಾಣುತ್ತಿಲ್ಲ ಎಂದು ಮನೆಯವರು ಹುಡುಕಿದಾಗ ಅವನು ಅವರ ಮನೆಯ ಬಾತ್‍ರೂಮಿನಲ್ಲೇ ನೇಣು ಹಾಕಿಕೊಂಡಿದ್ದಾನೆ. ತಕ್ಷಣ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಗಲೇ ಬಾಲಕ ಸಾವನ್ನಪ್ಪಿದ್ದಾನೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭರತ್ ಸಿಂಗ್ ಹೇಳಿದ್ದಾರೆ.

    ಕೆಳೆದ ವಾರವಷ್ಟೇ ತಮಿಳುನಾಡಿನ ಚೆನ್ನೈನಲ್ಲಿ ಟಿಕ್‍ಟಾಕ್ ಮಾಡುವುದನ್ನು ಬಿಟ್ಟು ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಪತಿ ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸ್ಕೂಲ್ ಅಡ್ಮಿಶನ್ ಮಾಡಿಲ್ಲವೆಂದು ಮಹಿಳೆಯಿಂದ ಟಿಕ್‍ಟಾಕ್ ವಿಡಿಯೋ

    ಸ್ಕೂಲ್ ಅಡ್ಮಿಶನ್ ಮಾಡಿಲ್ಲವೆಂದು ಮಹಿಳೆಯಿಂದ ಟಿಕ್‍ಟಾಕ್ ವಿಡಿಯೋ

    – ಕ್ಷಮೆ ಕೇಳಿದ ಪ್ರಿನ್ಸಿಪಾಲ್

    ಮುಂಬೈ: ಶಾಲೆಯಲ್ಲಿ ಮಗನಿಗೆ ಅಡ್ಮಿಶನ್ ಕೊಡಿಸಿಲ್ಲ ಎಂದು ತಾಯಿಯೊಬ್ಬರು ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲರು ಕ್ಷಮೆ ಕೇಳಿದ್ದಾರೆ.

    ಸುಜಾತ ಎಂಬವರು ತಮ್ಮ 7 ವರ್ಷದ ಮಗನಿಗೆ ಶಾಲೆಯಲ್ಲಿ ಅಡ್ಮಿಶನ್ ಮಾಡಿಸಲು ಕರೆದುಕೊಂಡು ಹೋಗಿದ್ದರು. ಸುಜಾತ ಸಿಂಗಲ್ ಪೆರೆಂಟ್ ಆಗಿದ್ದು, ಇದನ್ನು ತಿಳಿದ ಶಾಲೆಯ ಮುಖ್ಯಶಿಕ್ಷಕರು ಬಾಲಕನಿಗೆ ಅಡ್ಮಿಶನ್ ಕೊಡಲು ನಿರಾಕರಿಸಿದ್ದರು. ಹಾಗಾಗಿ ಸುಜಾತ ಈ ಘಟನೆ ಬಗ್ಗೆ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿದ್ದಾರೆ.

    ಸುಜಾತ ಮಾಡಿದ ಈ ವಿಡಿಯೋ ಜೂನ್ 13ರಿಂದ ವೈರಲ್ ಆಗಲು ಶುರುವಾಯಿತು. ಇದಾದ ಬಳಿಕ ಕೆಲವು ಮಂದಿ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಸ್ಮೃತಿ ಇರಾನಿ, ಡೇವಿಡ್ ಫರ್ನಾಂಡಿಸ್ ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

    https://twitter.com/KUNALPA25129276/status/1139239103667437568?ref_src=twsrc%5Etfw%7Ctwcamp%5Etweetembed%7Ctwterm%5E1139239103667437568&ref_url=https%3A%2F%2Fwww.amarujala.com%2Fphoto-gallery%2Feducation%2Fschool-denied-admission-of-child-for-having-single-parent-mother-viral-tiktok-video-helped

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಚಾರ ಶಿಕ್ಷಣ ಇಲಾಖೆವರೆಗೂ ತಲುಪಿತು. ಬಳಿಕ ಮುಂಬೈ ಶಿಕ್ಷಣ ಇಲಾಖೆ ಶಾಲೆಗೆ ನೋಟಿಸ್ ನೀಡಿ ಉತ್ತರ ಕೇಳಿತ್ತು. ನೋಟಿಸ್ ಬಂದ ನಂತರ ಪ್ರಾಂಶುಪಾಲರು ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ. ಅಲ್ಲದೆ ಬಾಲಕನಿಗೆ ಅಡ್ಮಿಶನ್ ನೀಡಲು ಒಪ್ಪಿಕೊಂಡಿದ್ದಾರೆ.

    ಪ್ರಿನ್ಸಿಪಾಲ್ ಮೊದಲು ಅಡ್ಮಿಶನ್ ಮಾಡಿಸಲು ಒಪ್ಪಿಕೊಂಡಿದ್ದರು. ಬಳಿಕ ನಾನು ಸಿಂಗಲ್ ಪೆರೆಂಟ್ ಎಂಬ ವಿಷಯ ಅವರಿಗೆ ತಿಳಿಯಿತು. ಆಗ ಅವರು ಅಡ್ಮಿಶನ್ ನೀಡಲು ನಿರಾಕರಿಸಿದ್ದರು. ಅಲ್ಲದೆ ಸಿಂಗಲ್ ಪೆರೆಂಟ್ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರು ಎಂದು ಸುಜಾತ ದೂರಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಇದು ಟಿಕ್‍ಟಾಕ್ ಸ್ಟಂಟ್ ಅಲ್ಲಾ: ಯುವಕನ ತಂದೆ ಸ್ಪಷ್ಟನೆ

    ಇದು ಟಿಕ್‍ಟಾಕ್ ಸ್ಟಂಟ್ ಅಲ್ಲಾ: ಯುವಕನ ತಂದೆ ಸ್ಪಷ್ಟನೆ

    ತುಮಕೂರು: ಸ್ಟಂಟ್ ವೇಳೆ ಯುವಕನ ಕತ್ತು ಮೂಳೆ ಮುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಟಿಕ್‍ಟಾಕ್ ಸ್ಟಂಟ್ ಅಲ್ಲಾ ಎಂದು ಕುಮಾರ್ ತಂದೆ ಶಿವಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವಸ್ವಾಮಿ, ಇದು ಟಿಕ್‍ಟಾಕ್ ಸ್ಟಂಟ್ ಅಲ್ಲ. ಕುಮಾರ್ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಲು ಹೋಗಿ ಹೀಗೆ ಮಾಡಿಕೊಂಡಿದ್ದಾನೆ. ಕುಮಾರ್ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ. ಹಾಗಾಗಿ ಹುಡುಗರಿಗೆ ಡ್ಯಾನ್ಸ್ ಕಲಿಸಿಕೊಡುತ್ತಿದ್ದ. ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಲು ಹೋಗಿ ಹೀಗೆ ಮಾಡಿಕೊಂಡಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕುಮಾರ್ ರಾಮು ಮೆಲೋಡಿಸ್ ಆರ್ಕೇಸ್ಟ್ರಾದಲ್ಲಿ ಡ್ಯಾನ್ಸರ್ ಕಮ್ ಸಿಂಗರ್ ಆಗಿ ಕಳೆದ ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದನು. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ. ಸದ್ಯ ಕುಮಾರ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮನೆಯಲ್ಲಿ ಬಡತನ ಇರುವುದರಿಂದ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

    ಆಗಿದ್ದೇನು?
    ಕುಮಾರ್ ವಿಡಿಯೋ ಮಾಡುವಾಗ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಕುಮಾರ್ ಸ್ನೇಹಿತನ ಜೊತೆ ಸಾಹಸ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾನೆ. ಕುಮಾರ್ ಸ್ನೇಹಿತನ ಜೊತೆಯಲ್ಲಿ ವಿಡಿಯೋ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್ ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್‍ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಿದ್ದ ಫೋರ್ಸ್ ಗೆ ತಲೆ ಮೂಳೆ ಮತ್ತು ಬೆನ್ನು ಮೂಳೆ ಗಳು ಪುಡಿ ಪುಡಿಯಾಗಿವೆ. ತಕ್ಷಣವೇ ಅವನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.

    https://www.youtube.com/watch?v=NuuQgX-flcQ

  • ಟಿಕ್‍ಟಾಕ್ ಮಾಡೋ ಯುವಕ, ಯುವತಿಯರೇ ಹುಷಾರ್ -ಸ್ಪೈನಲ್ ಕಾರ್ಡ್ ಮುರಿದ್ಕೊಂಡ ಹುಡುಗ

    ಟಿಕ್‍ಟಾಕ್ ಮಾಡೋ ಯುವಕ, ಯುವತಿಯರೇ ಹುಷಾರ್ -ಸ್ಪೈನಲ್ ಕಾರ್ಡ್ ಮುರಿದ್ಕೊಂಡ ಹುಡುಗ

    ತುಮಕೂರು: ಟಿಕ್‍ಟಾಕ್ ಮಾಡುವ ಯುವಕ ಯುವತಿಯರೆ ಸ್ವಲ್ಪ ಎಚ್ಚರವಾಗಿರಿ. ಯಾಕೆಂದರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ಯುವಕನೊಬ್ಬ ಟಿಕ್‍ಟಾಕ್ ಮಾಡಲು ಹೋಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

    ಕುಮಾರ್ ಟಿಕ್‍ಟಾಕ್ ಮಾಡುವಾಗ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಾಳು ಕುಮಾರ್ ಸ್ನೇಹಿತನ ಜೊತೆ ಟಿಕ್‍ಟಾಕ್ ನಲ್ಲಿ ಸಾಹಸ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾನೆ.

    ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‍ಟಾಕ್ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಿದ್ದ ಫೋರ್ಸ್ ಗೆ ತಲೆ ಮೂಳೆ ಮತ್ತು ಬೆನ್ನು ಮೂಳೆ ಗಳು ಪುಡಿ ಪುಡಿಯಾಗಿವೆ. ತಕ್ಷಣವೇ ಅವನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇತ್ತೀಚೆಗೆ ಟಿಕ್‍ಟಾಕ್ ಹುಚ್ಚಿನಿಂದ ದುರಂತಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಟಿಕ್‍ಟಾಕ್ ಮಾಡುವಾಗ ಶೂಟ್ ಮಾಡಿಕೊಂಡು ಬಾಲಕನೊಬ್ಬ ಮೃತಪಟ್ಟಿದ್ದನು. ಇನ್ನೂ ಟಿಕ್‍ಟಾಕ್ ಮಾಡೋದು ಬಿಟ್ಟು ಮಕ್ಕಳನ್ನು ನೋಡಿಕೋ ಎಂದು ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇ ಗೃಹಿಣಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ರೀತಿ ಟಿಕ್‍ಟಾಕ್ ನಿಂದ ಅನೇಕ ಘಟನೆಗಳು ನಡೆಯುತ್ತಿದೆ.

  • ಟಿಕ್‍ಟಾಕ್ ಮಾಡುವಾಗ ಗುಂಡು ತಗುಲಿ ಯುವಕ ಸಾವು

    ಟಿಕ್‍ಟಾಕ್ ಮಾಡುವಾಗ ಗುಂಡು ತಗುಲಿ ಯುವಕ ಸಾವು

    ಮುಂಬೈ: ಟಿಕ್‍ಟಾಕ್ ಮಾಡುವಾಗ ಗುಂಡು ತಗುಲಿ ಯುವಕ ಮೃತಪಟ್ಟ ಘಟನೆ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದಿದೆ.

    ಪ್ರತೀಕ್ ಸಂತೋಷ್ ವಾಡೆಕರ್(19) ಮೃತಪಟ್ಟ ಯುವಕ. ಪ್ರತೀಕ್ ತನ್ನ ಸ್ನೇಹಿತರಾದ ಸನ್ನಿ ಪವಾರ್ ಹಾಗೂ ನಿತಿನ್ ಅಶೋಕ್ ವಾಡೆಕರ್ ಜೊತೆ ತನ್ನ ಅಂಕಲ್ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತೀಕ್ ಹತ್ತಿರದಲ್ಲಿಯೇ ಹೋಟೆಲ್ ಬುಕ್ ಮಾಡಿದ್ದನು. ಇದನ್ನೂ ಓದಿ: ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದ ಗೃಹಿಣಿ

    ಹೋಟೆಲ್ ಬುಕ್ ಮಾಡಿ ರೂಮಿನಲ್ಲಿಯೇ ತನ್ನ ಸ್ನೇಹಿತರ ಜೊತೆ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದನು. ವಿಡಿಯೋ ಮಾಡುವಾಗ ಅವನ ಕೈಯಲ್ಲಿ ದೇಸಿ ಪಿಸ್ತೂಲ್ ಕೂಡ ಇತ್ತು. ಹೀಗಾಗಿ ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಪ್ರತೀಕ್ ಮೇಲೆ ಗುಂಡು ಹಾರಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪೋಷಕರಿಗೆ ಪತ್ರ ಬರೆದು, ಟಿಕ್‍ಟಾಕ್ ಗೆಳೆಯನ ಭೇಟಿಗೆ ಮನೆ ಬಿಟ್ಟ 14ರ ಪೋರಿ

    ವಿಡಿಯೋ ಮಾಡುವಾಗ ಪ್ರತೀಕ್ ಸ್ನೇಹಿತ ಸನ್ನಿ ಕೈಯಲ್ಲಿ ಪಿಸ್ತೂಲ್ ಇತ್ತು. ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಸನ್ನಿ ಕೈಯಲ್ಲಿದ್ದ ಪಿಸ್ತೂಲ್‍ನಿಂದ ಆಕಸ್ಮಿಕವಾಗಿ ಬುಲೆಟ್ ಹೊರ ಬಂದು ಪ್ರತೀಕ್ ಎದೆಗೆ ತಾಗಿದೆ. ಪರಿಣಾಮ ಆತ ಅಲ್ಲಿಯೇ ಮೃತಪಟ್ಟಿದ್ದಾನೆ. ಪ್ರತೀಕ್ ಮೃತಪಟ್ಟಿದ್ದನ್ನು ನೋಡಿ ಸನ್ನಿ ಹಾಗೂ ನಿತಿನ್ ಸ್ಥಳದಿಂದ ಪರಾರಿಯಾಗಿದ್ದಾರೆ.

    ಗುಂಡಿನ ಸದ್ದು ಕೇಳಿ ಹೋಟೆಲ್ ಸಿಬ್ಬಂದಿ ರೂಮಿಗೆ ತಲುಪಿದ್ದಾಗ ಪ್ರತೀಕ್ ಮೃತದೇಹ ಪತ್ತೆಯಾಗಿತ್ತು. ಬಳಿಕ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ನಿತಿನ್ ಹಾಗೂ ಸನ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.