Tag: Tiktok

  • ಟಿಕ್‍ಟಾಕ್ ವಿಡಿಯೋದಿಂದ 10 ಮಂದಿ ಆಸ್ಪತ್ರೆಗೆ ದಾಖಲು

    ಟಿಕ್‍ಟಾಕ್ ವಿಡಿಯೋದಿಂದ 10 ಮಂದಿ ಆಸ್ಪತ್ರೆಗೆ ದಾಖಲು

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್‍ಗೆ ಇನ್ನೂ ಸೂಕ್ತವಾದ ಔಷಧಿಯನ್ನು ಕಂಡುಹಿಡಿದಿಲ್ಲ. ಆದರೂ ಕೊರೊನಾದಿಂದ ನಿಮ್ಮನ್ನ ರಕ್ಷಣೆ ಮಾಡಿಕೊಳ್ಳಲು ‘ಮನೆಮದ್ದು’ ಎಂಬ ಟಿಕ್‍ಟಾಕ್ ವಿಡಿಯೋ ನೋಡಿ 10 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರಿ ಜಿಲ್ಲೆಯಲ್ಲಿ ನಡೆದಿದೆ.

    ಕೋವಿಡ್-19 ವೈರಸ್‍ಗೆ ನಿಖರವಾದ ಔಷಧಿ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಮನೆಮದ್ದು, ಔಷಧಿಗಳ ವದಂತಿಯನ್ನು ಯಾರೂ ನಂಬಬೇಡಿ ಎಂದು ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಸಾರ್ವಜನಿಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಗ್ರಾಮೀಣ ಪ್ರದೇಶದ ಕೆಲ ಜನರು ಸೋಶಿಯಲ್ ಮೀಡಿಯಾದಲ್ಲಿ ಹೇಳುವ ಔಷಧಿಯನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಜಿಲ್ಲೆಯ ಅಲಿಪಲ್ಲಿ ಗ್ರಾಮದಲ್ಲಿ ಎರಡು ಕುಟುಂಬಗಳು ಟಿಕ್‍ಟಾಕ್ ವಿಡಿಯೋವೊಂದರಲ್ಲಿ ದತ್ತೂರಿ ಬೀಜ (ದತ್ತೂರಿ ಬೀಜ ಹಳ್ಳಿಗಳಲ್ಲಿ ಸುಲಭವಾಗಿ ಸಿಗುತ್ತದೆ) ದಿಂದ ಮಾಡಿದ ರಸವನ್ನು ಸೇವಿಸಿದರೆ ಕೊರೊನಾ ವೈರಸ್ ಬರದಂತೆ ತಡೆಯಬಹುದು ಎಂಬುದನ್ನು ನೋಡಿದೆ. ಅದರಂತೆಯೇ ವಿಡಿಯೋ ನಂಬಿಕೊಂಡು ದತ್ತೂರಿ ಬೀಜದಿಂದ ರಸವನ್ನು ತಯಾರಿಸಿದ್ದಾರೆ. ಬಳಿಕ ಅದನ್ನು ಎರಡು ಕುಟುಂಬದ 10 ಮಂದಿ ಕುಡಿದಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಮುನಿಸ್ವಾಮಿ ತಿಳಿಸಿದರು.

    ರಸವನ್ನು ಕುಡಿದ ನಂತರ ಎಲ್ಲರೂ ಹೊಟ್ಟೆನೋವಿನಿಂದ ನರಳಿದ್ದಾರೆ. ಅಲ್ಲದೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ತಕ್ಷಣ ನೆರೆಹೊರೆಯವರು ಅವರನ್ನು ನೋಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್‍ಗೆ ಲಸಿಕೆ ಇಲ್ಲ. ಇನ್ನೂ ಪ್ರಯೋಗಗಳು ನಡೆಯುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಔಷಧಿಯ ವದಂತಿಯನ್ನು ನಂಬಬೇಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಜೊತೆಗೆ ಆರೋಗ್ಯ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಅನುಸರಿಸಿ ಎಂದು ಆರೋಗ್ಯ ಅಧಿಕಾರಿ ಡಾ.ಎಂ.ಪಂಚಲಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

  • ಟಿಕ್‍ಟಾಕ್ ಹುಚ್ಚಾಟ – ಟಾಯ್ಲೆಟ್ ನೆಕ್ಕಿ ‘ಕೊರೊನಾ ವೈರಸ್ ಚಾಲೆಂಜ್’ ಎಂದ ಮಾಡೆಲ್

    ಟಿಕ್‍ಟಾಕ್ ಹುಚ್ಚಾಟ – ಟಾಯ್ಲೆಟ್ ನೆಕ್ಕಿ ‘ಕೊರೊನಾ ವೈರಸ್ ಚಾಲೆಂಜ್’ ಎಂದ ಮಾಡೆಲ್

    ವಾಷಿಂಗ್ಟನ್: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ವಿಚಿತ್ರವಾಗಿ ತನ್ನ ಅಭಿಪ್ರಾಯ ಹಂಚಿಕೊಂಡು ಮಾಡೆಲ್ ಓರ್ವಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ‘ಕೊರೊನಾ ವೈರಸ್ ಚಾಲೆಂಜ್’ ಎಂದು ಮಾಡೆಲ್ ವಿಮಾನದ ಟಾಯ್ಲೆಟ್ ನೆಕ್ಕಿದ ಟಿಕ್‍ಟಾಕ್ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಅಮೆರಿಕ ಮೂಲದ ಮಾಡೆಲ್ ಅವಾ ಲೌಸಿ(21) ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಳು. ‘ಇಟ್ಸ್ ಕೊರೊನಾ ಟೈಮ್’ ಎಂಬ ಹಾಡಿಗೆ ಲೌಸಿ ಟಾಯ್ಲೆಟ್ ನೆಕ್ಕುತ್ತಾ ಟಿಕ್‍ಟಾಕ್ ಮಾಡಿದ್ದಾಳೆ. ದಯವಿಟ್ಟು ಇದನ್ನು ತಿಳಿದುಕೊಳ್ಳಿ. ವಿಮಾನದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ ಎಂದು ವಿಡಿಯೋಗೆ ಕ್ಯಾಪ್ಷನ್ ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಳು. ಇದನ್ನು ನೋಡಿದ ನೆಟ್ಟಿಗರು ಆಕೆಯ ವಿರುದ್ಧ ಗರಂ ಆಗಿದ್ದು, ವಿಡಿಯೋ ಸಖತ್ ವೈರಲ್ ಆಗಿತ್ತು. ಅತ್ತ ನೆಟ್ಟಿಗರು ಮಾಡೆಲ್ ವಿರುದ್ಧ ಕೆಂಡ ಕಾರುತ್ತಿದ್ದಂತೆ ಇತ್ತ ಆಕೆ ವಿಡಿಯೋವನ್ನೇ ಡಿಲೀಟ್ ಮಾಡಿದ್ದಾಳೆ.

    https://twitter.com/realavalouiise/status/1238915362470625292

    ಇನ್‍ಸ್ಟಾಗ್ರಾಮ್‍ನಲ್ಲಿ ಸುಮಾರು 1 ಲಕ್ಷದ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಲೌಸಿ ಈ ಹಿಂದೆ ಹಲವು ಟೆಲಿವಿಷನ್ ಟಾಕ್ ಶೋಗಳಲ್ಲಿ ಕಾಣಿಸಿಕೊಂಡಿದ್ದಳು. ಕೊರೊನಾ ವೈರಸ್ ಚಾಲೆಂಜ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಲೌಸಿ ಹೀಗೆ ಮಾಡಿದ್ದಾಳೆ ಎಂಬ ಆರೋಪ ಮಾಡುತ್ತಿದ್ದಂತೆ ವಿಡಿಯೋವನ್ನು ಆಕೆ ಡಿಲೀಟ್ ಮಾಡಿ ಸುಮ್ಮನಾಗಿದ್ದಾಳೆ.

    ಲೌಸಿ ಆರಂಭಿಸಿದ ಕೊರೊನಾ ವೈರಸ್ ಚಾಲೆಂಜ್ ಅನ್ನು ಅನೇಕರು ಸ್ವಿಕರಿಸಿದ್ದು, ಲೌಸಿಯಂತೆ ವಿಮಾನಗಳಲ್ಲಿ ಟಾಯ್ಲೆಟ್ ನೆಕ್ಕುತ್ತಿರುವ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕೊರೊನಾ ವೈರಸ್ ಚಾಲೆಂಜ್ ಮಾಡುತ್ತಿರುವವರನ್ನು ಟ್ರೋಲ್ ಮಾಡುತ್ತಿದ್ದಾರೆ.

  • ಹಣ ಕೊಡದಕ್ಕೆ ಟಿಕ್‍ಟಾಕ್ ಸ್ನೇಹಿತೆಯನ್ನು ಕೊಂದ ಯುವಕ

    ಹಣ ಕೊಡದಕ್ಕೆ ಟಿಕ್‍ಟಾಕ್ ಸ್ನೇಹಿತೆಯನ್ನು ಕೊಂದ ಯುವಕ

    – 25 ವರ್ಷದ ಯುವಕನಿಂದ 50 ವರ್ಷದ ಗೃಹಿಣಿ ಕೊಲೆ

    ಲಕ್ನೋ: ಕೇಳಿದಾಗ ಹಣ ಕೊಡಲಿಲ್ಲ ಎಂದು ಯುವಕನೋರ್ವ ತನ್ನ ಟಿಕ್‍ಟಾಕ್‍ನಲ್ಲಿ ಸ್ನೇಹಿತೆಯಾಗಿದ್ದ ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    29 ವರ್ಷದ ರಾಘವ್ ಕುಮಾರ್ ತನ್ನ ಟಿಕ್‍ಟಾಕ್ ಸ್ನೇಹಿತೆ 50 ವರ್ಷದ ನೀರ್ಜಾ ಚೌಹಾನ್ ಅವರನ್ನು ಆಕೆಯ ನಿವಾಸದಲ್ಲೇ ಕೊಲೆ ಮಾಡಿದ್ದಾನೆ. ಗೃಹಿಣಿಯಾಗಿರುವ ನೀರ್ಜಾ ಅವರು ಟಿಕ್‍ಟಾಕ್ ಮತ್ತು ಲೈಕಿ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದರು. ಜೊತೆಗೆ ಹಲವಾರು ಜನ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದರು.

    ರಾಘವ್ ಕೂಡ ಟಿಕ್‍ಟಾಕ್‍ನಲ್ಲಿ ನೀರ್ಜಾ ಅವರನ್ನು ಫಾಲೋ ಮಾಡಿ ಪರಿಚಯ ಮಾಡಿಕೊಂಡು, ಗೃಹಿಣಿಯ ಜೊತೆ ಸ್ನೇಹ ಬೆಳಸಿಕೊಂಡಿದ್ದ. ನೀರ್ಜಾ ಅವರ ಪತಿ ಬೇರೆ ರಾಜ್ಯದಲ್ಲಿ ಉದ್ಯೋಗಿ ಆಗಿದ್ದು, ನೀರ್ಜಾ ತನ್ನ ಮಗನ ಜೊತೆ ವಾಸವಿದ್ದರು. ಹೀಗೆ ಸ್ನೇಹಿತನಾಗಿದ್ದ ರಾಘವ್ ಒಂದು ದಿನ ನೀರ್ಜಾ ಅವರ ಮನೆಗೆ ಬಂದು ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಟ್ಟಿಲ್ಲ. ಈ ಕಾರಣಕ್ಕೆ ಅವರನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

    ರಾಘವ್ ಬೆಳಗ್ಗೆ 11.30 ಸುಮಾರಿಗೆ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಂತರ ನೀರ್ಜಾ ಅವರ ಮಗ ತಾಯಿ ಊಟ ಮಾಡಿದ್ದರಾ ಎಂದು ವಿಚಾರಿಸಲು ಫೋನ್ ಮಾಡಿದ್ದಾರೆ. ಆದರೆ ತಾಯಿ ಫೋನ್ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಮಗ ಸಂಜೆ 5 ಗಂಟೆಗೆ ಮನೆಗೆ ಬಂದು ಬಾಗಿಲನ್ನು ಬಡಿದಾಗ ಡೋರ್ ಓಪನ್ ಮಾಡಿಲ್ಲ. ಬಾಗಿಲು ಮುರಿದು ಒಳಗೆ ಹೊಗಿ ನೋಡಿದಾಗ ತಾಯಿ ಸಾವನ್ನಪ್ಪಿರುವ ಗೊತ್ತಾಗಿದೆ.

    ನೀರ್ಜಾ ಅವರ ಪುತ್ರ ತಕ್ಷಣ ಇದನ್ನು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಹತ್ತಿರದಲ್ಲಿ ಇದ್ದ ಸಿಸಿಟಿವಿಯನ್ನು ಚೆಕ್ ಮಾಡಿದಾಗ ರಾಘವ್ ಮನೆಗೆ ಬಂದು ಹೋಗಿರುವುದು ತಿಳಿದುಬಂದಿದೆ. ಆಗ ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ, ಆತನೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿ ರಾಘವ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಬನ್ನಿ ಜೊತೆಯಲ್ಲಿ ಸೇರಿ ಸಿಲ್ಲಿ ಕೆಲಸ ಮಾಡೋಣ: ಐಂದ್ರಿತಾ ರೇ

    ಬನ್ನಿ ಜೊತೆಯಲ್ಲಿ ಸೇರಿ ಸಿಲ್ಲಿ ಕೆಲಸ ಮಾಡೋಣ: ಐಂದ್ರಿತಾ ರೇ

    ಬೆಂಗಳೂರು: ಬನ್ನಿ ಜೊತೆಯಲ್ಲಿ ಸಿಲ್ಲಿ ಕೆಲಸ ಮಾಡೋಣ ಎಂದು ಚಂದನವನದ ಹಾಟ್ ಬೆಡಗಿ ಐಂದ್ರಿತಾ ರೇ ಅವರು ಹೇಳಿದ್ದಾರೆ.

    ಇತ್ತೀಚೆಗೆ ನಟ-ನಟಿಯರು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುತ್ತಾರೆ. ಅಂತೆಯೇ ನಟಿ ಐಂದ್ರಿತಾ ರೇ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಸಖತ್ ಆ್ಯಕ್ಟಿವ್ ಆಗಿ ಇರುತ್ತಾರೆ. ಈಗ ಈ ಚೆಲುವೆ ಅಭಿಮಾನಿಗಳನ್ನು ರಂಜಿಸಲು ಟಿಕ್‍ಟಾಕ್‍ಗೆ ಬಂದಿದ್ದು, ಬನ್ನಿ ಜೊತೆಯಲ್ಲಿ ಸಿಲ್ಲಿ ಸೇರಿ ಕೆಲಸ ಮಾಡೋಣ ಎಂದಿದ್ದಾರೆ.

    https://www.instagram.com/p/B9UjytJFR7U/

    ತಮ್ಮ ಮೊದಲ ಟಿಕ್‍ಟಾಕ್ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಐಂದ್ರಿತಾ ರೇ, ಕೊನೆಗೂ ನಾನು ಟಿಕ್‍ಟಾಕ್‍ಗೆ ಬಂದಿದ್ದೇನೆ. ನೀವು ಕೂಡ ಟಿಕ್‍ಟಾಕ್‍ಗೆ ಬಂದು ನನ್ನ ಜೊತೆ ಸೇರಿಕೊಳ್ಳಿ. ಟಿಕ್‍ಟಾಕ್‍ನಲ್ಲಿ ನಾವೆಲ್ಲ ಸೇರಿಕೊಂಡು ಸಿಲ್ಲಿ ಕೆಲಸ ಮಾಡೋಣ. ಟಿಕ್‍ಟಾಕ್‍ನಲ್ಲಿ ನನ್ನ ಫಾಲೋ ಮಾಡಿ ಎಂದು ಬರೆದುಕೊಂಡಿದ್ದಾರೆ. ಐಂದ್ರಿತಾ ರೇ ಅವರ ಟಿಕ್‍ಟಾಕ್ ನೋಡಿದ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    https://www.instagram.com/p/B9R0tSql6Xp/

    ಐಂದ್ರಿತಾ ರೇ ಅವರು ತಾನು ಮಾಡಿರುವ ಮೊದಲ ಟಿಕ್‍ಟಾಕ್ ವಿಡಿಯೋದಲ್ಲಿ ಇಂಗ್ಲಿಷ್ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿದ್ದು, ಅವರ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಆಸ್ಟ್ರೇಲಿಯಾದ ಗಾಯಕಿ ಟೋನ್ಸ್ ಆಂಡ್ ಐ ಹಾಡಿರುವ ಮಂಕಿ ಡ್ಯಾನ್ಸ್ ಹಾಡಿಗೆ ರೇ ಅವರು ಡ್ಯಾನ್ಸ್ ಮಾಡಿದ್ದು, ತಮ್ಮ ಮೊದಲ ಟಿಕ್‍ಟಾಕ್ ಅನ್ನು ತಮ್ಮ ಇನ್‍ಸ್ಟಾದಲ್ಲಿ ಹಾಕಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

    ನಟ ದಿಂಗತ್ ಅವರನ್ನು ಮದುವೆಯಾದ ನಂತರ ಸ್ವಲ್ಪ ಸಿನಿಮಾಗಳಿಂದ ದೂರವಿರುವ ಐಂದ್ರಿತಾ ರೇ, ಸದ್ಯಕ್ಕೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಾಸರವಾಗಲಿರುವ ದಿ ಕ್ಯಾಸಿನೋ ಎಂಬ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. ಬಣ್ಣ ಬಣ್ಣದ ಸೆಟ್‍ನಲ್ಲಿ ಹೊಳಿ ಹಚ್ಚಿಕೊಂಡು ಐಂದ್ರಿತಾ ರೇ ಅವರು ಈ ಕಾರ್ಯಕ್ರಮದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

    https://www.instagram.com/p/B84GWBKF5mY/

    ಇದಕ್ಕೂ ಮುನ್ನ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಪತಿ ದಿಂಗತ್ ಅವರು, ಐಂದ್ರಿತಾ ರೇ ಸೀರೆ ನೆರಿಗೆಯನ್ನು ಸರಿ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡು, ಪಂಚರಂಗಿ ಚಿತ್ರದಲ್ಲಿ ಯಾರಿಗೆ ಸೀರೆ ಉಡಿಸುವ ದೃಶ್ಯ ಇಷ್ಟವಾಗಿತ್ತೋ ಅವರೆಲ್ಲರೂ ನೋಡಿ ಯಾರು ನನಗೆ ಸೀರೆ ಉಡಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.

  • ಕೊರೊನಾ ವೈರಸ್ ಟಿಕ್‍ಟಾಕ್-ಕ್ಷಮೆ ಕೇಳಿದ ನಟಿ

    ಕೊರೊನಾ ವೈರಸ್ ಟಿಕ್‍ಟಾಕ್-ಕ್ಷಮೆ ಕೇಳಿದ ನಟಿ

    ಮುಂಬೈ: ಭಯಾನಕ ಕೊರೊನಾ ವೈರಸ್ ಭಾರತಕ್ಕೆ ಕಾಲಿಟಿದ್ದು, ಜನ ಆತಂಕದಲ್ಲಿದ್ದಾರೆ. ಈ ಸಮಯದಲ್ಲಿ ದಕ್ಷಿಣ ಭಾರತದ ನಟಿ, ನಿರ್ಮಾಪಕಿಯಾಗಿರುವ ಚಾರ್ಮಿ ಕೌರ್ ಸೋಮವಾರ ಕೊರೊನಾ ವೈರಸ್ ಕುರಿತು ಸಂತೋಷದ ಟಿಕ್‍ಟಾಕ್ ಮಾಡಿ ಕ್ಷಮೆ ಕೇಳಿದ್ದಾರೆ.

    ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಿರುವ ವಿಷಯವನ್ನು ತಿಳಿಸಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಜನರು ಕೊರೊನಾ ವೈರಸ್ ಆತಂಕದಲ್ಲಿದ್ದು, ನಟಿಯ ಟಿಕ್‍ಟಾಕ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಕೊರೊನಾ ವೈರಸ್ ದೆಹಲಿ ಮತ್ತು ತೆಲಂಗಾಣಕ್ಕೆ ಬಂದಿದೆ ಎಂದು ನ್ಯೂಸ್ ಗಳಲ್ಲಿ ನೋಡಿದ್ದೇನೆ. ಕೊರೊನಾ ಎಂಟ್ರಿಗೆ ಸಂತೋಷ ವ್ಯಕ್ತಪಡಿಸಿ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

    ಕ್ಷಮೆ ಕೇಳಿದ ಚಾರ್ಮಿ: ಟಿಕ್‍ಟಾಕ್ ವಿಡಿಯೋಗೆ ನೆಟ್ಟಿಗರು ಕಿಡಿಕಾರುತ್ತಿದ್ದಂತೆ ಎಚ್ಚೆತ್ತ ಚಾರ್ಮಿ, ನಾನು ನಿಮ್ಮೆಲ್ಲರ ಕಮೆಂಟ್‍ಗಳನ್ನು ಓದಿದ್ದೇನೆ. ಹಾಗಾಗಿ ನನ್ನ ಈ ವಿಡಿಯೋಗಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹುಡುಗಾಟಿಕೆ ರೀತಿ ಟಿಕ್‍ಟಾಕ್ ಮಾಡಬಾರದಿತ್ತು. ಇನ್ಮುಂದೆ ಯಾವುದೇ ವಿಡಿಯೋ ಮಾಡುವಾಗ ಎಚ್ಚರಿಕೆಯಿಂದ ಇರುತ್ತೇನೆ. ನನಗೆ ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಚಾರ್ಮಿ ಕೌರ್ ಹೆಚ್ಚು ತೆಲಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಮುಜಸೇ ದೋಸ್ತಿ ಕರೋಗಿ, ಬುಡ್ಡಾ ಹೋಗಾ ತೇರಾ ಬಾಪ್ ಮತ್ತು ಆರ್.ರಾಜ್‍ಕುಮಾರ್ ಮುಂತಾದ ಸಿನಿಮಾಗಳಲ್ಲಿ ಚಾರ್ಮಿ ನಟಿಸಿದ್ದಾರೆ.

  • ಯುವತಿ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ

    ಯುವತಿ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ

    – ಅಪ್ರಾಪ್ತನನ್ನು ನಗ್ನವಾಗಿ ಮೆರವಣಿಗೆ ಮಾಡಿದ ಗ್ರಾಮಸ್ಥರು
    – ಇಬ್ಬರು ಆರೋಪಿಗಳು ಅರೆಸ್ಟ್

    ಜೈಪುರ: ಯುವತಿ ಜೊತೆ ಟಿಕ್‍ಟಾಕ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಗ್ರಾಮಸ್ಥರು ಅಪ್ರಾಪ್ತನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ತನ್ನ ಸಹೋದರಿ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಮೂವರು ಆರೋಪಿಗಳು ಅಪ್ರಾಪ್ತನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ ಬಾಲಕನ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾಲಕನ ವಿಡಿಯೋ ಕೂಡ ಸೆರೆ ಹಿಡಿಯಲಾಗಿದ್ದು, ಅದರಲ್ಲಿ ಆರೋಪಿಗಳು ಅಪ್ರಾಪ್ತನನ್ನು ಬಲವಂತವಾಗಿ ಮೆರವಣಿಗೆ ಮಾಡಿಸಿರುವುದು ಕಂಡು ಬಂದಿದೆ.

    ಅಪ್ರಾಪ್ತ ಕ್ಷಮೆ ಕೇಳುತ್ತಿದ್ದರೂ ಆರೋಪಿಗಳು ಆತನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಈಗ ನೀನು ಬುದ್ಧ ಕಲಿಯುತ್ತಿದ್ದೀಯಾ ಎಂದು ವಿಡಿಯೋದಲ್ಲಿ ಆರೋಪಿಗಳು ಬಾಲಕನಿಗೆ ಹೇಳುತ್ತಿದ್ದಾರೆ.

    ಈ ಬಗ್ಗೆ ಅಪ್ರಾಪ್ತನ ಪೋಷಕರು ಪ್ರತಿಕ್ರಿಯಿಸಿ, ಈ ಘಟನೆಯಿಂದ ನಮ್ಮ ಮಗ ತುಂಬಾ ಹೆದರಿಕೊಂಡು ಮನೆಗೆ ಓಡಿ ಬಂದಿದ್ದಾನೆ. ಮೂವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪೊಲೀಸರು ಆರೋಪಿಗಳ ವಿರುದ್ಧ ಐಟಿ ಆ್ಯಕ್ಟ್ ಹಾಗೂ ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು ಹೇಳಿದ್ದಾರೆ.

    ಅಪ್ರಾಪ್ತನ ಪೋಷಕರು ದೂರು ದಾಖಲಿಸಿದ ನಂತರ ಯುವತಿಯ ಪೋಷಕರು ಕೂಡ ಮೂವರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಅಪ್ರಾಪ್ತನನ್ನು ನಗ್ನವಾಗಿ ಮೆರವಣಿಗೆ ಮಾಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ವಿಡಿಯೋ ಮಾಡಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಡೆಮೋ ಮಾಡಿ ಟಿಕ್‍ಟಾಕ್‍ಗೆ ವಿಡಿಯೋ ಅಪ್ಲೋಡ್- ವ್ಯಕ್ತಿ ನೇಣಿಗೆ ಶರಣು

    ಡೆಮೋ ಮಾಡಿ ಟಿಕ್‍ಟಾಕ್‍ಗೆ ವಿಡಿಯೋ ಅಪ್ಲೋಡ್- ವ್ಯಕ್ತಿ ನೇಣಿಗೆ ಶರಣು

    – ವೈರಲಾಯ್ತು ವಿಡಿಯೋ

    ದಾವಣಗೆರೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿಕೊಂಡು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಾಗರಾಜು ಅಲಿಯಾಸ್ ರಾಜು (34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಾಗರಾಜ್ ಯಾವಾಗಲೂ ಟಿಕ್‍ಟಾಕ್‍ನಲ್ಲಿಯೇ ಕಾಲ ಕಳೆಯುತ್ತಿದ್ದನು. ಇತ್ತೀಚೆಗೆ ಪತ್ನಿಯ ಜೊತೆ ಜಗಳ ಮಾಡಿಕೊಂಡು ಇಬ್ಬರೂ ದೂರವಾಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ನಾಗರಾಜು ಮದ್ಯಪಾನ ವ್ಯಸನಿಯಾಗಿದ್ದನು.

    ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡಂತೆ ವಿಡಿಯೋವನ್ನು ಮಾಡಿ ಅದನ್ನು ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಬಿಗಿದುಕೊಂಡ ವಿಡಿಯೋ ಟಿಕ್‍ಟಾಕ್‍ನಲ್ಲಿ ಈಗ ಸಾಕಷ್ಟು ವೈರಲ್ ಆಗಿದೆ.

    ನೇಣು ಬಿಗಿದುಕೊಂಡ ನಾಗರಾಜ್ ಎರಡು ಮದುವೆ ಮಾಡಿಕೊಂಡಿದ್ದು, ಮೂರು ಜನ ಹೆಣ್ಣು ಮಕ್ಕಳಿದ್ದರು. ಮೊದಲನೆಯ ಪತ್ನಿಯನ್ನು ಬಿಟ್ಟು ಹೋಗಿ, ಮತ್ತೊಂದು ಮದುವೆ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಆದರೆ ಕೆಲ ದಿನಗಳ ಹಿಂದೆ ಎರಡನೆಯ ಪತ್ನಿಯ ಜೊತೆಯೂ ಕೂಡ ಜಗಳ ಮಾಡಿಕೊಂಡಿದ್ದಾನೆ. ಇದಕ್ಕೆ ಮನನೊಂದ ನಾಗರಾಜು ನೇಣಿಗೆ ಶರಣಾಗಿದ್ದಾರೆ.

    ಈತನಿಗೆ ಮೂವರು ಮಕ್ಕಳಿದ್ದು, ಇವನನ್ನೇ ನಂಬಿಕೊಂಡ ಕುಟುಂಬ ಈಗ ಕಂಗಾಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯ ಟಿಕ್‍ಟಾಕ್ ವಿಚಾರ ಕೇಳಿ ವಿದೇಶದಿಂದ ಓಡಿ ಬಂದ ಪತಿ

    ಪತ್ನಿಯ ಟಿಕ್‍ಟಾಕ್ ವಿಚಾರ ಕೇಳಿ ವಿದೇಶದಿಂದ ಓಡಿ ಬಂದ ಪತಿ

    ಬೆಂಗಳೂರು: ಕೆಲಸಕ್ಕಾಗಿ ಪತಿ ವಿದೇಶಕ್ಕೆ ಹೋದರೆ, ಇತ್ತ ಮನೆಯಲ್ಲಿದ್ದ ಪತ್ನಿ ಟಿಕ್‍ಟಾಕ್ ವಿಡಿಯೋ ಗೀಳಿಗೆ ಬಿದ್ದಿದ್ದಳು.

    ಬೆಂಗಳೂರಿನಲ್ಲಿ ವಾಸವಾಗಿದ್ದ 35 ವರ್ಷದ ಪತಿ ಕೆಲಸ ಅರಿಸಿ ದುಬೈಗೆ ಹೋಗಿದ್ದರು. ಪತಿ ವಿದೇಶಕ್ಕೆ ಹೋಗಿದ್ದೆ ತಡ ಪತ್ನಿ ಟಿಕ್‍ಟಾಕ್ ಹುಚ್ಚಿಗೆ ಬಿದ್ದು ವಿಡಿಯೋ ಮಾಡುವುದ್ದಕ್ಕೆ ಶುರು ಮಾಡಿದ್ದಳು. ಯಾವಾಗ ಲೈಕ್ಸ್, ಕಮೆಂಟ್ಸ್, ಫಾಲೋವರ್ಸ್ ಹೆಚ್ಚಾದರೋ, ಪತ್ನಿ ಫುಲ್ ಖುಷ್ ಆಗಿದ್ದಳು.

    ಇದೇ ಖುಷಿಯಲ್ಲಿ ಅರೆಬರೆ ಬಟ್ಟೆ ಹಾಕಿಕೊಂಡು ಟಿಕ್‍ಟಾಕ್ ಮಾಡಿದ ಮಹಿಳೆಯ ವಿಡಿಯೋಗಳಿಗೆ ಭರ್ಜರಿ ರೆಸ್ಪಾನ್ಸ್ ಬಂದಿದ್ದವು. ಅದು ಯಾವ ಲೆವೆಲ್‍ಗೆ ಎಂದರೆ ದುಬೈನಲ್ಲಿ ಕೆಲಸ ಮಾಡುವ ಪತಿಯ ಮೊಬೈಲ್‍ಗೆ ಪತ್ನಿ ಹಸಿಬಿಸಿ ಟಿಕ್‍ಟಾಕ್ ವಿಡಿಯೋಗಳು ತಲುಪಿತ್ತು.

    ತನ್ನ ಪತ್ನಿಯ ಟಿಕ್‍ಟಾಕ್ ವಿಡಿಯೋ ನೋಡಿದ್ದ ಪತಿ ಫುಲ್ ಶಾಕ್ ಆಗಿ ದುಬೈನಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಓಡೋಡಿ ಬಂದಿದ್ದಾರೆ. ಮನೆಗೆ ಬಂದ ಪತಿ ತನ್ನ ಪತ್ನಿಗೆ ಎಷ್ಟೇ ಬುದ್ದಿವಾದ ಹೇಳಿದರೂ ಪತ್ನಿ ಮಾತ್ರ ಟಿಕ್‍ಟಾಕ್‍ನಿಂದ ಹೊರಬರುವುದಕ್ಕೆ ಸಿದ್ಧವಿರಲಿಲ್ಲ.

    ಪತ್ನಿಯ ವರ್ತನೆಯಿಂದ ಬೇಸತ್ತ ಪತಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ. ವನಿತಾ ಸಹಾಯವಾಣಿಗೆ ಬಂದ ಪತಿ ಸಾಮಾಜಿಕ ಜಾಲತಾಣಗಳಿಂದ ಏನೆಲ್ಲಾ ಎಡವಟ್ಟುಗಳು ಆಗುತ್ತವೆ ಎಂದು ಪತ್ನಿಗೆ ಕೌನ್ಸ್ ಲಿಂಗ್ ಮಾಡುತ್ತಿದ್ದಾರೆ.

  • ಟಿಕ್‍ಟಾಕ್ ಮೂಲಕ ಹಂಗಿಸ್ತಿದ್ದ ಪತ್ನಿಗೆ ಚಾಕುವಿನಿಂದ ಇರಿದ ಪತಿ

    ಟಿಕ್‍ಟಾಕ್ ಮೂಲಕ ಹಂಗಿಸ್ತಿದ್ದ ಪತ್ನಿಗೆ ಚಾಕುವಿನಿಂದ ಇರಿದ ಪತಿ

    – ಪತಿ, ಮಕ್ಕಳನ್ನ ಬಿಟ್ಟು ಬೇರೊಬ್ಬನ ಜೊತೆ ವಾಸ

    ಮೈಸೂರು: ಟಿಕ್‍ಟಾಕ್ ಮಾಡಿ ನಿರಂತರವಾಗಿ ಹಂಗಿಸುತ್ತಿದ್ದ ಪತ್ನಿಗೆ ಪತಿ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾನಸಾ ವಿದ್ಯಾಸಂಸ್ಥೆಯ ಬಳಿ ನಡೆದಿದೆ.

    ಪತ್ನಿ ಸವಿತಾ ಚಾಕು ಇರಿತದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪತ್ನಿಗೆ ಚಾಕು ಇರಿದ ಪತಿ ಶ್ರೀನಿವಾಸ್ ಪೊಲೀಸರಿಗೆ ಶರಣಾಗಿದ್ದಾನೆ. ಶ್ರೀನಿವಾಸ್ ಮತ್ತು ಸವಿತಾ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಒಟ್ಟಾಗಿ ಸಂಸಾರ ನಡೆಸುತ್ತಿದ್ದರು. ಆಗಾಗ ಸವಿತಾ ಮತ್ತು ಶ್ರೀನಿವಾಸ್ ಮಧ್ಯೆ ಜಗಳ ನಡೆಯುತ್ತಿತ್ತು. ಹೀಗಾಗಿ ಸವಿತಾ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯೊಂದಿಗೆ ಜೀವನ ಸಾಗಿಸುತ್ತಿದ್ದಳು.

    ಸವಿತಾ ಪ್ರತಿದಿನ ಟಿಕ್‍ಟಾಕ್ ಮಾಡುವ ಮೂಲಕ ಪತಿ ಶ್ರೀನಿವಾಸ್‍ನನ್ನು ಹಂಗಿಸುತ್ತಿದ್ದಳು. ಇದರಿಂದ ಪತಿ ತುಂಬಾ ಕೋಪಗೊಂಡಿದ್ದನು. ಶುಕ್ರವಾರ ಮಕ್ಕಳ ಹುಟ್ಟುಹಬ್ಬಕ್ಕೆಂದು ಸವಿತಾ ಪತಿಯ ಮನೆಗೆ ಬಂದಿದ್ದಳು. ಈ ವೇಳೆ ಶ್ರೀನಿವಾಸ್ ಚಾಕುವಿನಿಂದ ಸವಿತಾಗೆ ಇರಿದಿದ್ದಾನೆ. ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಇತ್ತ ಚಾಕು ಇರಿತದಿಂದ ಗಾಯಗೊಂಡ ಪತ್ನಿ ಸವಿತಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀನಿವಾಸ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮೊದ್ಲು ಲಾಂಗು, ಮಚ್ಚು ಹಿಡಿದು ಟಿಕ್‍ಟಾಕ್ – ಆಮೇಲೆ ಸ್ಕೆಚ್ ಹಾಕಿ ಅಟ್ಯಾಕ್

    ಮೊದ್ಲು ಲಾಂಗು, ಮಚ್ಚು ಹಿಡಿದು ಟಿಕ್‍ಟಾಕ್ – ಆಮೇಲೆ ಸ್ಕೆಚ್ ಹಾಕಿ ಅಟ್ಯಾಕ್

    ಚಿಕ್ಕಬಳ್ಳಾಪುರ: ಟಿಕ್‍ಟಾಕ್‍ನಲ್ಲಿ ಲಾಂಗು, ಮಚ್ಚು ಹಿಡಿದು ಟಗರು ಸಿನಿಮಾದ ಹಾಡಿಗೆ ರಿಹರ್ಸಲ್ ಮಾಡಿ, ಮರ್ಡರ್ ಮಾಡೇ ಮಾಡ್ತೀನಿ ಎಂದು ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್ ಬಳಿ ಆರೋಪಿಗಳು ಕೃತ್ಯವೆಸೆಗಿದ್ದರು. ಹೊಸಕೋಟೆ ತಾಲೂಕಿನ ತರಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ತ್ಯಾಗರಾಜು ಮೇಲೆ ಮೂವರು ಯುವಕರು ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ತ್ಯಾಗರಾಜು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಆರೋಪಿಗಳಾದ ಗಂಭೀರನಹಳ್ಳಿ ಗ್ರಾಮದ ಸೋಮು ಅಲಿಯಾಸ್ ಸೋಮಶೇಖರ್, ಪಾಂಡು ಅಲಿಯಾಸ್ ಮಂಜು ಹಾಗೂ ನಂದನ್ ಅಲಿಯಾಸ್ ನಂದಕುಮಾರ್ ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೂ ಮುನ್ನ ಪಾಂಡು ಹಾಗೂ ನಂದಕುಮಾರ್ ಪ್ರಕರಣದಲ್ಲಿ ಭಾಗಿಯಾಗದ ತನ್ನ ಮತ್ತೋರ್ವ ಸ್ನೇಹಿತ ಮಂಜುನಾಥ್ ಜೊತೆ ಮಾಡಿರುವ ಟಿಕ್‍ಟಾಕ್ ರಿಹರ್ಸಲ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಹಳೆ ವೈಷಮ್ಯದ ಹಿನ್ನಲೆ ಕೊಲೆಗೆ ಪ್ಲಾನ್:
    ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ತ್ಯಾಗರಾಜು ಹಾಗೂ ಆರೋಪಿ ಸೋಮು ನಡುವೆ ಜಗಳ ನಡೆದಿತ್ತು. ಈ ವೇಳೆ ಸೋಮು ಮನೆಗೆ ನುಗ್ಗಿದ್ದ ತ್ಯಾಗರಾಜು ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಹಳೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎನ್ನುವುದು ತಿಳಿದುಬಂದಿದೆ.

    ಹಳೆ ಪ್ರಕರಣದ ದ್ವೇಷ ಇಟ್ಟುಕೊಂಡಿದ್ದ ಸೋಮು ಸ್ನೇಹಿತರೊಂದಿಗೆ ಸೇರಿ ಈ ಕೃತ್ಯವೆಸೆಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಸೋಮು ಜೊತೆ ಗುರುತಿಸಿಕೊಂಡಿದ್ದ ಪಾಂಡು ಹೆಸರನ್ನ ಗಾಯಗೊಂಡಿದ್ದ ತ್ಯಾಗರಾಜು ಪೊಲೀಸರು ವಿಚಾರಣೆ ನಡೆಸಿದ ವೇಳೆ ಹೇಳಿದ್ದರು. ಈ ಆಧಾರದ ಮೇಲೆ ಮೂವರನ್ನ ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.