Tag: Tiktok

  • ಮಿಟ್ರಾನ್ ಆ್ಯಪ್ ಭಾರತದ್ದೋ? ಪಾಕಿಸ್ತಾನದ್ದೋ – ಇಲ್ಲಿದೆ ಉತ್ತರ

    ಮಿಟ್ರಾನ್ ಆ್ಯಪ್ ಭಾರತದ್ದೋ? ಪಾಕಿಸ್ತಾನದ್ದೋ – ಇಲ್ಲಿದೆ ಉತ್ತರ

    ಬೆಂಗಳೂರು: ಗಡಿಯಲ್ಲಿ ಚಿನಾ ಕಿರಿಕ್ ಮಾಡಿದ ಬೆನ್ನಲ್ಲೇ ಚೀನಾ ಉತ್ಪನ್ನಗಳ ಬಳಕೆಯನ್ನು ನಿಷೇಧಿಸುವಂತೆ ಭಾರತದಲ್ಲಿ ಭಾರೀ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದ ವೇಳೆ ಟಿಕ್‍ಟಾಕ್ ರೀತಿಯಲ್ಲಿರುವ ಮಿಟ್ರಾನ್ ಅಪ್ಲಿಕೇಶನ್ ಭಾರೀ ಸದ್ದು ಮಾಡುತ್ತಿದೆ.

    ಮಿಟ್ರಾನ್ ಆ್ಯಪ್ ಚರ್ಚೆ ಆಗುತ್ತಿದ್ದಂತೆ ಇದು ಪಾಕಿಸ್ತಾನ ಆ್ಯಪ್. ನಾವು ಯಾಕೆ ಡೌನ್‍ಲೋಡ್ ಮಾಡಬೇಕು ಟಿಕ್ ಟಾಕ್ ಬೇಡ, ಈ ಮಿಟ್ರಾನ್ ಆ್ಯಪ್ ಬೇಡ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಈ ಮಿಟ್ರಾನ್ ಆ್ಯಪ್ ಮೂಲತ: ಪಾಕಿಸ್ತಾನದ್ದಾಗಿದ್ದರೂ ಈಗ ಭಾರತದ್ದು.

    ಹೌದು. ಪಾಕಿಸ್ತಾನದ ಕ್ಯೂಬಾಕ್ಸಸ್ ಹೆಸರಿನ ಕಂಪನಿ ಅಪ್ಲಿಕೇಶನ್ ಸೋರ್ಸ್ ಕೋಡ್ ಅನ್ನು ಮಿಟ್ರಾನ್ ಕಂಪನಿಗೆ ಮಾರಾಟ ಮಾಡಿದೆ. ಈ ಸಂಬಂಧ ಕ್ಯೂಬಾಕ್ಸಸ್ ಕಂಪನಿಯ ಸಿಇಒ ಇರ್ಫಾನ್ ಶೇಖ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮಿಟ್ರಾನ್ ಪಾಲುದಾರರಿಗೆ 34 ಡಾಲರ್(2,600 ರೂ.) ಬೆಲೆಗೆ ಸೋರ್ಸ್ ಕೋಡ್ ಮಾರಾಟ ಮಾಡಿದ್ದೇವೆ. ಈಗ ಡೆವಲಪರ್ ಗಳು ಅದರ ಲೋಗೋ ಬದಲಾವಣೆ ಮಾಡಿ ಪ್ಲೇ ಸ್ಟೋರ್ ನಲ್ಲಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಮಾರಾಟದ ಮಾಡಿದ ಕಾರಣ ಈ ಆ್ಯಪ್ ಭಾರತದ್ದಾಗಿದೆ.

    ಮಿಟ್ರಾನ್ ಅಪ್ಲಿಕೇಶನ್ ಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.7 ರೇಟಿಂಗ್ ನೀಡಲಾಗಿದೆ. ಟಿಕ್ ಟಾಕ್ ಅಪ್ಲಿಕೇಶನ್ ಗೆ ಲಕ್ಷಾಂತರ ಮಂದಿ ಸಂಖ್ಯೆಯಲ್ಲಿ ನೆಗೆಟಿವ್ ರೇಟಿಂಗ್ ನೀಡಿದ ಪರಿಣಾಮ ಪ್ಲೇ ಸ್ಟೋರ್ ನಲ್ಲಿ 1.2ಕ್ಕೆ ಕುಸಿದಿತ್ತು. ಆದರೆ ಗೂಗಲ್ ಈ ನೆಗೆಟಿವ್ ರಿವ್ಯೂ ಡಿಲೀಟ್ ಮಾಡಿದ ಪರಿಣಾಮ ಈಗ 4.4 ರೇಟಿಂಗ್ ನೀಡಲಾಗಿದೆ.

    7.7 ಎಂಬಿ ಗಾತ್ರದ ಮಿಟ್ರಾನ್ ಅಪ್ಲಿಕೇಶನ್ ಅನ್ನು 50 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿದ್ದಾರೆ.

  • ಟಿಕ್‍ಟಾಕ್ ಬ್ಯಾನ್ ಮಾಡಿದ್ರೆ ಜನರ ಮನಸ್ಥಿತಿ ಬದಲಾಗಲ್ಲ: ಸಂಯುಕ್ತಾ ಹೆಗ್ಡೆ

    ಟಿಕ್‍ಟಾಕ್ ಬ್ಯಾನ್ ಮಾಡಿದ್ರೆ ಜನರ ಮನಸ್ಥಿತಿ ಬದಲಾಗಲ್ಲ: ಸಂಯುಕ್ತಾ ಹೆಗ್ಡೆ

    ಬೆಂಗಳೂರು: ಟಿಕ್‍ಟಾಕ್ ಬ್ಯಾನ್ ಮಾಡಿದರೆ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ನಟಿ ಸಂಯುಕ್ತಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ.

    ಸ್ವದೇಶಿ ವಸ್ತುಗಳನ್ನು ಬಳಸಿ ಚೀನಾದ ವಸ್ತುಗಳನ್ನು ಬಹಿಷ್ಕಾರ ಮಾಡಿ ಎಂಬ ಕೂಗು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳಿಬರುತ್ತಿದೆ. ಹೀಗಾಗಿ ಟಿಕ್‍ಟಾಕ್ ಆ್ಯಪ್ ಚೀನಾದ ದೇಶದ್ದು ಎಂಬ ಕಾರಣಕ್ಕೆ ಅದನ್ನು ಭಾರತದಲ್ಲಿ ಬ್ಯಾನ್ ಮಾಡಿ ಎಂದು ಕೆಲವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಈಗ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

    ಈಗ ಟಿಕ್‍ಟಾಕ್ ಬ್ಯಾನ್ ಮಾಡಬೇಡಿ ಎಂದು ಟ್ವೀಟ್ ಮಾಡಿರುವ ಸಂಯುಕ್ತಾ ಹೆಗ್ಡೆ, ಒಂದು ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡುವುದರಿಂದ ಅದರಲ್ಲಿ ಇರುವ ಜನರ ಮನಸ್ಥಿತಿ ಬದಲಾಗುವುದಿಲ್ಲ. ಈ ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡಿದರೆ ಜನ ಅವರ ಭಯಾನಕ ವಿಷಯಗಳನ್ನು ಆಪ್ಲೋಡ್ ಮಾಡಲು ಬೇರೆ ಇನ್ನೊಂದು ಆ್ಯಪ್ ಅನ್ನು ಹುಡುಕಿಕೊಳ್ಳುತ್ತಾರೆ. ಆದರೆ ಟಿಕ್‍ಟಾಕ್‍ಗೆ ಏನಾದರೂ ವೈಯಕ್ತಿಕವಾಗಿ ನನಗೆ ಏನೂ ಆಗಬೇಕಿಲ್ಲ ಎಂದು ಬರೆದುಕೊಂಡಿದ್ದಾರೆ.

    ಈಗಾಗಲೇ ಟಿಕ್‍ಟಾಕ್ ವಿಚಾರದಲ್ಲಿ ಭಾರೀ ಚೆರ್ಚೆ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಯೂಟ್ಯೂಬ್ ವರ್ಸಸ್ ಟಿಕ್‍ಟಾಕ್ ಎಂಬ ಸ್ಪರ್ಧೆ ಉಂಟಾಗಿದೆ. ಈ ನಡುವೆ ಕೆಲಸ ಜನರು ಟಿಕ್‍ಟಾಕ್‍ಗೆ ರೀಪೋರ್ಟ್ ಮಾಡಿ 4.6 ಇಂದ ಅದರ ರೇಟಿಂಗ್ ಅನ್ನು 1.6ಕ್ಕೆ ಇಳಿಸಿದ್ದಾರೆ. ಕರ್ನಾಟಕದಲ್ಲೂ ಟಿಕ್‍ಟಾಕ್ ಬ್ಯಾನ್ ಮಾಡಿ ಎಂಬ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಕೆಲ ಸೆಲೆಬ್ರಿಟಿಗಳೇ ಇದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ.

    ಟಿಕ್‍ಟಾಕ್‍ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದರು. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

    ಟಿಕ್‍ಟಾಕ್ ಅನ್ನು ಭಾರತದಲ್ಲಿ ಅತೀ ಹೆಚ್ಚು ಜನ ಬಳಸುತ್ತಿದ್ದಾರೆ. ಇದರಲ್ಲಿ ಜನಪ್ರಿಯತೆ ಪಡೆಯಬೇಕು ಎಂದು ಜನರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ಟಿಕ್‍ಟಾಕ್‍ನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಹೇಳಿದ್ದಾರೆ. ಜೊತೆಗೆ ಟಿಕ್‍ಟಾಕ್ ಚೀನಾ ಆ್ಯಪ್ ಆಗಿದ್ದು, ಇದನ್ನು ನಿಷೇಧ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

  • ಕೊಹ್ಲಿಯನ್ನು ಟಿಕ್‍ಟಾಕ್‍ನಲ್ಲಿ ಡ್ಯುಯೆಟ್ ಮಾಡಲು ಆಹ್ವಾನಿಸಿದ ವಾರ್ನರ್

    ಕೊಹ್ಲಿಯನ್ನು ಟಿಕ್‍ಟಾಕ್‍ನಲ್ಲಿ ಡ್ಯುಯೆಟ್ ಮಾಡಲು ಆಹ್ವಾನಿಸಿದ ವಾರ್ನರ್

    ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಟಿಕ್‍ಟಾಕ್‍ನಲ್ಲಿ ಡ್ಯುಯೆಟ್ ಮಾಡಲು ಆಹ್ವಾನಿಸಿದ್ದಾರೆ.

    ಡೇವಿಡ್ ವಾರ್ನರ್ ಅವರು ಲಾಕ್‍ಡೌನ್ ವೇಳೆ ತಮ್ಮ ಕುಟುಂಬದ ಜೊತೆ ಉತ್ತಮ ಕಾಲವನ್ನು ಕಳೆಯುತ್ತಿದ್ದಾರೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುವ ವಾರ್ನರ್ ಟಿಕ್‍ಟಾಕ್ ವಿಡಿಯೋಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಡದಿ ಮಕ್ಕಳ ಜೊತೆ ಫನ್ನಿ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ.

    https://www.instagram.com/p/CAfNQG9Jgbp/

    ಇತ್ತೀಚೆಗೆ ವಾರ್ನರ್ ಅವರು ಅಕ್ಷಯ್ ಕುಮಾರ್ ಅವರ ಬಹು ಜನಪ್ರಿಯ ಗೀತೆ ಬಾಲ ಹಾಡಿಗೆ ಟಿಕ್‍ಟಾಕ್‍ನಲ್ಲಿ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಟಿಕ್‍ಟಾಕ್ ವಿಡಿಯೋವನ್ನು ವಾರ್ನರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲೂ ಹಂಚಿಕೊಂಡಿದ್ದರು. ಇದನ್ನು ನೋಡಿ ಫಿದಾ ಆದ ಕೊಹ್ಲಿ ಈ ವಿಡಿಯೋಗೆ ವ್ಯಂಗ್ಯವಾಗಿ ನಗುತ್ತಿರುವ ಇಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.

    https://www.instagram.com/p/CAZmL8HJ4xR/

    ಇದಾದ ನಂತರ ಕೊಹ್ಲಿಯ ಕಮೆಂಟ್‍ಗೆ ಉತ್ತರ ನೀಡಿರುವ ವಾರ್ನರ್ ಅವರು, ನೀನು ಡ್ಯುಯೆಟ್ ಮಾಡು ಬಾ ಮ್ಯಾನ್. ನಿನ್ನ ಪತ್ನಿ ನಿನಗೆ ಹೇಳಿಕೊಡುತ್ತಾರೆ ಎಂದು ರಿಪ್ಲೈ ಮಾಡಿದ್ದಾರೆ. ವಾರ್ನರ್ ಅವರ ರಿಪ್ಲೈ ಕಂಡು ಬೆರಗಾದ ಅಭಿಮಾನಿಗಳು ಇಂದು ಭಾರತದಲ್ಲಿ ಟಿಕ್‍ಟಾಕ್ ಇನ್ನೂ ಜೀವಂತವಾಗಿದೆ ಎಂದರೆ ಅದು ವಾರ್ನರ್ ಅವರಗಾಗಿಯೇ ಎಂದು ಕಮೆಂಟ್ ಮಾಡಿದ್ದಾರೆ.

    https://www.instagram.com/p/B_mINrppW7d/

    ಸದ್ಯ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡುವುದರಲ್ಲಿ ಬ್ಯುಸಿ ಇರುವ ಡೇವಿಡ್ ವಾರ್ನರ್ ಇತ್ತೀಚೆಗೆ ಬ್ಯಾಟ್ ಹಿಡಿದು ಬಾಹುಬಲಿ ಡೈಲಾಗ್ ಹೇಳಿ ಮಿಂಚಿದ್ದರು. ಜೊತೆಗೆ ಮಡದಿ ಮಕ್ಕಳ ಜೊತೆಗೆ ಅಲ್ಲು ಅರ್ಜುನ್ ಅವರ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದರು. ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿರುವ ವಾರ್ನರ್ ತೆಲುಗು ಹಾಡುಗಳಿಗೆ ಟಿಕ್‍ಟಾಕ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

    ಟಿಕ್‍ಟಾಕ್ ಬ್ಯಾನ್ ಮಾಡಿ
    ಟಿಕ್‍ಟಾಕ್ ಅನ್ನು ಭಾರತದಲ್ಲಿ ಅತೀ ಹೆಚ್ಚು ಜನ ಬಳಸುತ್ತಿದ್ದಾರೆ. ಆದರೆ ಭಾರತದಲ್ಲಿ ಬ್ಯಾನ್ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿದೆ. ಇದರಲ್ಲಿ ಜನಪ್ರಿಯತೆ ಪಡೆಯಬೇಕು ಎಂದು ಜನರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ಟಿಕ್‍ಟಾಕ್‍ನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಕೆಲವರ ಆಗ್ರಹಿಸುತ್ತಿದ್ದಾರೆ. ಶರ್ಮಾ ಅವರು ಹೇಳಿದ್ದಾರೆ. ಜೊತೆಗೆ ಟಿಕ್‍ಟಾಕ್ ಚೀನಾ ಆ್ಯಪ್ ಆಗಿದ್ದು, ಇದನ್ನು ನಿಷೇಧ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

  • ಮೊಲವನ್ನು ಬೇಟೆಯಾಡಿ ಟಿಕ್‍ಟಾಕ್- ಯುವಕರಿಬ್ಬರು ಅರೆಸ್ಟ್

    ಮೊಲವನ್ನು ಬೇಟೆಯಾಡಿ ಟಿಕ್‍ಟಾಕ್- ಯುವಕರಿಬ್ಬರು ಅರೆಸ್ಟ್

    ರಾಯಚೂರು: ತಾಲೂಕಿನ ಸರ್ಜಾಪುರ ಗ್ರಾಮದ ಇಬ್ಬರು ಯುವಕರು ಮೊಲ ಬೇಟೆಯಾಗಿ ಟಿಕ್‍ಟಾಕ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರಿಂದ ಇಬ್ಬರನ್ನು ಬಂಧಿಸಲಾಗಿದೆ.

    ಮೇ 19ರಂದು ಮೊಲ ಬೇಟೆಯಾಡಿ, ಮೊಲದ ಚರ್ಮ ಸುಳಿದು ಟಿಕ್‍ಟಾಕ್ ಮಾಡಿದ್ದಾರೆ. ಸರ್ಜಾಪುರದ ಪವನ ನಾಯಕ್ ಹಾಗೂ ಸ್ವಾಮಿ ನಾಯಕ್ ಬಂಧಿತ ಆರೋಪಿಗಳು. ಮೊಲ ಬೇಟೆಯಾಡಿ, ಅದನ್ನು ಕೈಯಲ್ಲಿಡಿದ ವಿಡಿಯೋವನ್ನು ಅವರು ಟಿಕ್‍ಟಾಕ್‍ಗೆ ಅಪ್ಲೋಡ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದಂತೆ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾವೇ ಮೊಲಗಳನ್ನು ಬೇಟೆಯಾಡಿರುವುದಾಗಿ ಯುವಕರು ಬಾಯಿ ಬಿಟ್ಟಿದ್ದಾರೆ. ವಿಚಾರಣೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಟಿಕ್‍ಟಾಕ್ ನಿಷೇಧಿಸಲು ಕೇಂದ್ರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಪತ್ರ

    ಟಿಕ್‍ಟಾಕ್ ನಿಷೇಧಿಸಲು ಕೇಂದ್ರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಪತ್ರ

    ನವದೆಹಲಿ: ಯುವ ಜನತೆಯನ್ನು ಟಿಕ್‍ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

    ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೆಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.  ಇದನ್ನು ಓದಿ: ಟಿಕ್‍ಟಾಕ್ ಬಳಕೆಯಲ್ಲಿ ವಿಶ್ವದಲ್ಲೇ ಭಾರತ ನಂಬರ್ 1

    ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದಾರೆ.  

    ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ಆ್ಯಪ್‍ನಿಂದ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವ ಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.

    ಸದ್ಯ ಸಾಕಷ್ಟು ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮಾಡುವುದನ್ನು ವೈಭವಿಕರಿಸಲಾಗಿದೆ. ಅಲ್ಲದೇ ಅತ್ಯಾಚಾರಿಗಳನ್ನು ವೈಭವಿಕರಿಸಿ ತೋರಿಸಲಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ #BanTikToklnlndia ಹ್ಯಾಶ್ ಟ್ಯಾಗ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಭಾರತದಲ್ಲಿ ಟಿಕ್‍ಟಾಕ್ ನಿಷೇಧ ಮಾಡಬೇಕು ಎಂಬ ಆಗ್ರಹ ಮತ್ತೊಮ್ಮೆ ಜೋರಾಗಿದೆ.

  • ಟಿಕ್‍ಟಾಕ್ ಪ್ರೀತಿ – ಮದ್ವೆಯಾಗ್ತಿನೆಂದು ನಂಬಿಸಿ ಯುವತಿಯನ್ನು ರೇಪ್‍ಗೈದ 4 ಮಕ್ಕಳ ತಂದೆ

    ಟಿಕ್‍ಟಾಕ್ ಪ್ರೀತಿ – ಮದ್ವೆಯಾಗ್ತಿನೆಂದು ನಂಬಿಸಿ ಯುವತಿಯನ್ನು ರೇಪ್‍ಗೈದ 4 ಮಕ್ಕಳ ತಂದೆ

    – ಮದ್ವೆ ಆಗಿ ಮಕ್ಕಳಿದ್ದರೂ ಯುವತಿ ಜೊತೆ ಲವ್
    – ಯುವತಿ ಜೊತೆ ನಕಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಾಮುಕ

    ಹೈದರಾಬಾದ್: ಟಿಕ್‍ಟಾಕ್‍ನಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದ ಕಾಮುಕನೋರ್ವ ಆಕೆಯನ್ನು ಪ್ರೀತಿ ಮಾಡುವ ಹಾಗೆ ನಾಟಕವಾಡಿ, ಮದುವೆ ಆಗುತ್ತೇನೆ ಎಂದು ನಂಬಿಸಿ ಆಕೆ ಮೇಲೆ ಅತ್ಯಾಚಾರ ಮಾಡಿರುವ ನೀಚ ಕೃತ್ಯ ಹೈದರಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.

    ಹೈದರಾಬಾದ್‍ನ ಓಲ್ಡ್ ಸಿಟಿ ಮೂಲದ 27 ವರ್ಷ ಯುವತಿ ಮೇಲೆ ಆರೋಪಿ ಅಕ್ಬರ್ ಶಾ(34) ಅತ್ಯಾಚಾರ ಮಾಡಿದ್ದಾನೆ. ಅಕ್ಬರ್‍ಗೆ ಈಗಾಗಲೇ ಮದುವೆ ಆಗಿ ನಾಲ್ಕು ಮಕ್ಕಳಿದ್ದಾರೆ. ಆದರೂ ಮೋಸದ ಪ್ರೀತಿ ಜಾಲದಲ್ಲಿ ಯುವತಿಯನ್ನು ಬೀಳಿಸಿ ಈ ದುಷ್ಕೃತ್ಯವೆಸೆಗಿದ್ದಾನೆ. ಸಂತ್ರಸ್ತ ಯುವತಿ ಟಿಕ್‍ಟಾಕ್‍ನಲ್ಲಿ ಅನೇಕ ವಿಡಿಯೋಗಳನ್ನು ಹಾಕುತ್ತಿದ್ದಳು. ಇದನ್ನು ನೋಡಿಸ ಅಕ್ಬರ್ ವಿಡಿಯೋಗಳಿಗೆ ಲೈಕ್ ಮಾಡುತ್ತಿದ್ದ. ಹೀಗೆ ಟಿಕ್‍ಟಾಕ್‍ನಲ್ಲೇ ಇಬ್ಬರಿಗೂ ಪರಿಚಯವಾಗಿ ಸ್ನೇಹಿತರಾದರು.

    ಹೀಗೆ ಕೆಲ ದಿನಗಳ ಸ್ನೇಹ ಮುಂದುವರೆದು, ಅಕ್ಬರ್ ಯುವತಿಯ ಮೊಬೈಲ್ ನಂಬರ್ ಪಡೆದ ಗಂಟೆಗಟ್ಟಲೇ ಫೋನಿನ್ನಲ್ಲಿ ಮಾತಾಡಲು ಆರಂಭಿಸಿದ. ಬಳಿಕ ಸ್ನೇಹ, ಪ್ರೀತಿಗೆ ತಿರುಗಿ ತನ್ನ ಮೋಸದ ಜಾಲದಲ್ಲಿ ಅಕ್ಬರ್ ಯುವತಿಯನ್ನು ಬೀಳಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ. ಅಷ್ಟೇ ಅಲ್ಲದೆ ಯುವತಿಯ ಕುಟುಂಬದ ಸಮ್ಮುಖದಲ್ಲೇ ಆಕೆ ಜೊತೆ ನಕಲಿ ನಿಶ್ಚಿತಾರ್ಥ ಕೂಡ ಮಾಡಿಕೊಂಡದ್ದ. ಹೀಗಾಗಿ ಯುವತಿ ಅಕ್ಬರ್ ನನ್ನು ಹೆಚ್ಚು ನಂಬಿದಳು.

    ಇದೇ ನಂಬಿಕೆಯನ್ನು ದುರಪಯೋಗ ಪಡೆಸಿಕೊಂಡ ಅಕ್ಬರ್, ಒಂದು ದಿನ ತನ್ನ ತಂಗಿ ಮನೆಗೆ ಯುವತಿಯನ್ನು ಕರೆದೊಯ್ದಿದ್ದನು. ಆಗ ಮಹಿಳೆ ಅತ್ಯಾಚಾರ ಎಸೆಗಿದನು. ಅಷ್ಟೇ ಅಲ್ಲದೆ ನಿಶ್ಚಿತಾರ್ಥವಾದ ಮೇಲೆ ಇನ್ನೊಮ್ಮೆ ಆಕೆ ಮೇಲೆ ಅತ್ಯಾಚಾರ ಮಾಡಿದನು. ಹೀಗಾಗಿ ತಾನು ಮೋಸ ಹೋಗಿದ್ದೇನೆ ಎಂದು ವಿಚಾರ ಗೊತ್ತಾದ ಮೇಲೆ ಸಂತ್ರಸ್ತೆ ಆರೋಪಿ ವಿರುದ್ಧ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಆರೋಪಿ ವಿರುದ್ಧ ವಂಚನೆ ಹಾಗೂ ಅತ್ಯಾಚಾರದ ಪ್ರಕರಣ ಹಾಕಿದ್ದು, ತನಿಖೆ ಆರಂಭಗೊಂಡಿದೆ ಎಂದು ಪೊಲೀಸರು ಹೇಳಿದರು.

  • ಕ್ವಾರಂಟೈನ್‍ನಲ್ಲಿ ಟಿಕ್‍ಟಾಕ್ ಮಾಡಿದವರಿಗೆ ಡಿಸಿ ಖಡಕ್ ಎಚ್ಚರಿಕೆ

    ಕ್ವಾರಂಟೈನ್‍ನಲ್ಲಿ ಟಿಕ್‍ಟಾಕ್ ಮಾಡಿದವರಿಗೆ ಡಿಸಿ ಖಡಕ್ ಎಚ್ಚರಿಕೆ

    ಹಾಸನ: ಕ್ವಾರಂಟೈನ್‍ನಲ್ಲಿ  ಟಿಕ್‍ಟಾಕ್ ಮಾಡಿದವರಿಗೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಮುಂಬೈನಿಂದ ಬಂದು ಚನ್ನರಾಯಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ನಿಯಮ ಪಾಲಿಸದೆ ಟಿಕ್‍ಟಾಕ್ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಜಿಲ್ಲಾಧಿಕಾರಿ ಆರ್.ಗಿರೀಶ್ ಗಮನಕ್ಕೆ ಬಂದಿದ್ದು, ಟಿಕ್‍ಟಾಕ್ ಮಾಡುತ್ತಿರುವವರಿಗೆ ನಿಯಮ ಪಾಲಿಸುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

    ಮುಂಬೈನಿಂದ ಹಾಸನಕ್ಕೆ ಬಂದ 12 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇದರಿಂದ ಹಾಸನ ಗ್ರೀನ್ ಜೋನ್ ಪಟ್ಟ ಕಳೆದುಕೊಂಡಂತಾಗಿದೆ. ಆದರೆ ಮುಂಬೈನಿಂದ ಬಂದ ಕೆಲವರು ಕ್ವಾರಂಟೈನ್ ಕೇಂದ್ರದಲ್ಲಿ ನಿಯಮ ಪಾಲಿಸದೆ ಟಿಕ್‍ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.ಗಿರೀಶ್ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ಈ ಬಗ್ಗೆ ತಿಳಿದುಕೊಂಡು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

  • ಟಿಕ್‍ಟಾಕ್ ಮಾಡಿ ಮುಜುಗರಕ್ಕೊಳಗಾದ ನಗರಸಭೆ ಸಿಬ್ಬಂದಿ

    ಟಿಕ್‍ಟಾಕ್ ಮಾಡಿ ಮುಜುಗರಕ್ಕೊಳಗಾದ ನಗರಸಭೆ ಸಿಬ್ಬಂದಿ

    – ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಶಾಸಕ ಶಿವಲಿಂಗೇಗೌಡ

    ಹಾಸನ: ಇಡೀ ಪ್ರಪಂಚವೇ ಕೊರೊನ ವಿರುದ್ಧ ಹೋರಾಟಕ್ಕೆ ನಿಂತಿದೆ. ಆದರೆ ಹಾಸನದ ಅರಸೀಕೆರೆ ನಗರಸಭೆಯ ಕೆಲ ಸಿಬ್ಬಂದಿಗಳು ಮಾತ್ರ ಸರ್ಕಾರಿ ಕಚೇರಿಯೊಳಗೆ ಟಿಕ್‍ಟಾಕ್ ಮಾಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

    ನಗರಸಭೆಯ ಕೆಲ ಸಿಬ್ಬಂದಿಗಳು ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳನ್ನು ಮರೆತು ಭಿನ್ನ, ವಿಭಿನ್ನವಾಗಿ ಕಚೇರಿಯೊಳಗೆ ಟಿಕಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅರಸೀಕೆರೆ ನಗರಸಭೆಯ ವ್ಯಾಪ್ತಿಯ ಸ್ವಚ್ಛತೆಯ ಬಗ್ಗೆ ನಿಮಗೆ ಅರಿವಿಲ್ಲ. ಕೊರೊನ ವಿರುದ್ಧ ಹೋರಾಡುವ ಕೆಲಸ ಬಿಟ್ಟು ಕಚೇರಿಯೊಳಗೆ ಟಿಕ್‍ಟಾಕ್ ಮಾಡಲು ನಿಮಗೆ ಅನುಮತಿ ಕೊಟ್ಟವರಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಿಬ್ಬಂದಿಯ ವಿಡಿಯೋಗಳು ವೈರಲ್ ಆಗಿದೆ. ಸಾರ್ವಜನಿಕರ ವಲಯದಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ ಘಟನೆ ಬಗ್ಗೆ ಅಸಮಾಧಾನ ಹೊರಹಾಕಿರುವ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರು, ಟಿಕ್‍ಟಾಕ್ ವಿಡಿಯೋ ಮಾಡಿರುವ ನಗರಸಭೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    – ನಿಜ ನೀನು ತುಂಬ ಕಿರಿಕಿರಿ ಮಾಡ್ತಿಯಾ

    ನವದೆಹಲಿ: ನೀನು ತುಂಬ ಕಿರಿಕಿರಿ ಮಾಡುತ್ತೀಯಾ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಟೀಕಿಸಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿರುವ ಚಹಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುತ್ತಾರೆ. ಎಲ್ಲರನ್ನೂ ಕಾಲೆಳೆಯುವ ಕೆಲಸ ಮಾಡುತ್ತಾರೆ. ಹೀಗಾಗಿ ಗೇಲ್ ನೀನು ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ ಮಾಡುತ್ತಿದ್ದೀಯ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ಚಹಲ್‍ಗೆ ವ್ಯಂಗ್ಯವಾಡಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಕುಳಿತಿರುವ ಕ್ರಿಕೆಟ್ ಆಟಗಾರರು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಒಂದು ಕಾಲದ ಆರ್.ಸಿ.ಬಿ ಸಹ ಆಟಗಾರರಾದ ಚಹಲ್ ಮತ್ತು ಗೇಲ್ ಲೈವ್ ಬಂದು ಮಾತನಾಡಿದ್ದಾರೆ.

    https://www.instagram.com/p/B_HyhuGhfbn/

    ಈ ವೇಳೆ ಗೇಲ್, ನಾನು ಟಿಕ್‍ಟಾಕ್ ಕಂಪನಿಯವರಿಗೆ ನಿನ್ನನ್ನು ಬ್ಲಾಕ್ ಮಾಡಲು ಮನವಿ ಮಾಡುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ನೀನು ಸಖತ್ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದೀಯಾ. ನೀನು ಈಗಲೇ ಸಾಮಾಜಿಕ ಜಾಲತಾಣದಿಂದ ಹೊರಗೆ ಹೋಗಬೇಕು. ನಮಗೆ ಸಾಕಾಗಿದೆ ಚಹಲ್ ಮತ್ತೆ ನಿನ್ನನ್ನು ನನ್ನ ಜೀವನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೋಡಲು ಇಷ್ಟವಿಲ್ಲ. ನಾನು ನಿನ್ನನ್ನು ಬ್ಲಾಕ್ ಮಾಡುತ್ತೇನೆ ಎಂದು ಚಹಲ್ ಅವರನ್ನು ಟೀಕಿಸಿದ್ದಾರೆ.

    ಕ್ರಿಸ್ ಗೇಲ್ ಮತ್ತು ಚಹಲ್ ಅವರು ಒಂದು ಕಾಲದಲ್ಲಿ ಆರ್.ಸಿ.ಬಿ ಸಹ ಆಟಗಾರಗಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ಮತ್ತು ಮೈದಾನದಿಂದ ಆಚೆಗೆ ಫನ್ನಿಯಾಗಿ ಆಡುತ್ತಿದ್ದ ಗೇಲ್ ಮತ್ತು ಚಹಲ್ ಜೋಡಿ ನೋಡುಗರಿಗೆ ಉತ್ತಮ ಮನರಂಜನೆ ನೀಡುತ್ತಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸದಾ ಸಕ್ರಿಯವಾಗಿ ಇರುತ್ತಿದ್ದರು.

  • ರಾತ್ರೋರಾತ್ರಿ ನಮ್ಮ ಮನೆಗೆ ಔಷಧಿ ತಲುಪಿಸಿದ್ರು – ಮಹಿಳೆಯ ಮಗಳಿಂದ ಕೃತಜ್ಞತೆ

    ರಾತ್ರೋರಾತ್ರಿ ನಮ್ಮ ಮನೆಗೆ ಔಷಧಿ ತಲುಪಿಸಿದ್ರು – ಮಹಿಳೆಯ ಮಗಳಿಂದ ಕೃತಜ್ಞತೆ

    – ಟಿಕ್‍ಟಾಕ್ ಮೂಲಕ ಧನ್ಯವಾದ

    ಬೆಂಗಳೂರು: ತಾಯಿಗೆ ಸಕಾಲಕ್ಕೆ ಔಷಧಿ ದೊರಕಿಸಿದ್ದಕ್ಕೆ ಸಿಎಂ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ಮತ್ತು ರಾಮದುರ್ಗ ತಹಶೀಲ್ದಾರ್ ಅವರಿಗೆ ಮಗಳು ಪವಿತ್ರ ಅರಭಾವಿ ಕೃತಜ್ಞತೆ ಸಲ್ಲಿದ್ದಾರೆ.

    ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿ ಕಸಿ ಮಾಡಿದರೂ, ಸೂಕ್ತ ಔಷಧಿ ಇಲ್ಲದೆ ನರಳಾಡುತ್ತಿದ್ದರು. ನಂತರ ಮಗಳು ಪವಿತ್ರಾ ಅರಭಾವಿ ಟಿಕ್‍ಟಾಕ್ ಮೂಲಕವೇ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣವೇ ಸ್ಪಂದಿಸಿದ್ದು, ಮಹಿಳೆಗೆ ಒಂದು ತಿಂಗಳ ಔಷಧಿ ವ್ಯವಸ್ಥೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

    ಈ ಹಿನ್ನೆಲೆಯಲ್ಲಿ ಪವಿತ್ರಾ ಅರಭಾವಿ ಕುಟುಂಬಕ್ಕೆ ಸಕಾಲಕ್ಕೆ ಔಷಧಿ ದೊರಕಿಸಿದ್ದಕ್ಕೆ ಅದೇ ಟಿಕ್‍ಟಾಕ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಿಗೆ, ಅವರ ಪುತ್ರ ವಿಜಯೇಂದ್ರ ಅವರಿಗೂ ತುಂಬಾ ಧನ್ಯವಾದಗಳು. ಯಾಕೆಂದರೆ ನಮ್ಮ ಕುಟುಂಬಕ್ಕೆ ಇದ್ದ ಕಷ್ಟವನ್ನು ತಮ್ಮ ಕುಟುಂಬದ ಕಷ್ಟ ಅಂದುಕೊಂಡು ರಾತ್ರೋರಾತ್ರಿ ನಮ್ಮ ಮನೆವರೆಗೂ ಮಾತ್ರೆ ತಲುಪಿಸಿದ್ದಾರೆ. ಅಲ್ಲದೇ ರಾಮದುರ್ಗ ತಹಶೀಲ್ದಾರ್ ನಮಗೆ ಬಂದು ಔಷಧಿ ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಟಿಕ್‍ಟಾಕ್ ಮೂಲಕ ಮನವಿ:
    ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಂಭಾವಿ ಅವರು ಕಿಡ್ನಿ ವೈಫಲ್ಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಘೋಷಣೆಯಾದ ಕಾರಣ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

    ಏನು ಮಾಡುವುದು ಎಂದು ತೋಚದೇ ಅವರ ಕುಟುಂಬ ತೀವ್ರ ನೋವಿನಲ್ಲಿತ್ತು. ಆಗ ಶೇಖವ್ವ ಅವರ ಮಗಳು ಪವಿತ್ರ ಹೊಳಿದಿದ್ದೇ ಟಿಕ್‍ಟಾಕ್. ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿ, ತನ್ನ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕುರಿತು ಪವಿತ್ರ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ಈ ಕುರಿತು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ವಿಡಿಯೋ ಸಿಎಂ ಗಮನಕ್ಕೆ ಬಂದಿದ್ದು, ತಕ್ಷಣವೇ ಎಚ್ಚೆತ್ತ ಬಿಎಸ್‍ವೈ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಹಾರಕ್ಕೆ ಸೂಚಿಸಿದ್ದಾರೆ.

    ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದ್ದರು. ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಂಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದರು.