Tag: Tiktok

  • ಟಿಕ್‌ಟಾಕ್ ವೀಡಿಯೋ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ 15 ವರ್ಷದ ಪುತ್ರಿಯನ್ನೇ ಗುಂಡಿಕ್ಕಿ ಕೊಂದ ಅಪ್ಪ

    ಟಿಕ್‌ಟಾಕ್ ವೀಡಿಯೋ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ 15 ವರ್ಷದ ಪುತ್ರಿಯನ್ನೇ ಗುಂಡಿಕ್ಕಿ ಕೊಂದ ಅಪ್ಪ

    ಇಸ್ಲಾಮಾಬಾದ್‌: ತನ್ನ ಎಚ್ಚರಿಕೆ ಮೀರಿಯೂ ಟಿಕ್‌ಟಾಕ್‌ನಲ್ಲಿ ವೀಡಿಯೋ (TikTok Video) ಪೋಸ್ಟ್‌ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳನ್ನೇ ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    28 ವರ್ಷಗಳ ಹಿಂದೆ ಅಮೆರಿಕದಲ್ಲಿ (America) ನೆಲೆಸಿದ್ದ ವ್ಯಕ್ತಿ ಇತ್ತೀಚೆಗಷ್ಟೇ ತನ್ನ ಕುಟುಂಬವನ್ನು ಪಾಕಿಸ್ತಾನಕ್ಕೆ (Pakistan) ಕರೆತಂದಿದ್ದ. ತನ್ನ ಎಚ್ಚರಿಕೆ ಹೊರತಾಗಿಯೂ ಮಗಳು ವಿಡಿಯೋ ಪೋಸ್ಟ್‌ ಮಾಡುವುದನ್ನು ಮುಂದುವರಿಸಿದ್ದಳು. ಇದರಿಂದ ಗುಂಡಿಕ್ಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ

    ಟಿಕ್‌ ಟಾಕ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಕ್ಕಾಗಿ ಆಕೆಯ ಅಪ್ಪ, ಚಿಕ್ಕಪ್ಪ ಸೇರಿ ಗುಂಡಿಕ್ಕಿ ಕೊಂದಿದ್ದಾರೆ. ಸದ್ಯ ಆರೋಪಿಯನ್ನು ಮರ್ಯಾದಾ ಹತ್ಯೆ ಆರೋಪದ ಅಡಿಯಲ್ಲಿ ಪೊಲೀಸರು ಬಂದಿಸಿದ್ದು, 10 ದಿನ ಕಸ್ಟಡಿಗೆ ಪಡೆದಿದ್ದಾರೆ. ಇದನ್ನೂ ಓದಿ: U-19 Women’s T20 World Cup: ಇಂಗ್ಲೆಂಡ್‌ಗೆ ಮಣ್ಣು ಮುಕ್ಕಿಸಿ ಫೈನಲ್‌ಗೆ ಟೀಂ ಇಂಡಿಯಾ ಲಗ್ಗೆ

    ಈಗಾಗಲೇ ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತ ಬಾಲಕಿಯ ಕಿರಿಯ ಸಹೋದರನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಅಮೆರಿಕದಲ್ಲಿ ಕಠಿಣ ಕಾನೂನುಗಳು ಇರುವ ಹಿನ್ನೆಲೆ ಹುಡುಗಿಯನ್ನು ಕೊಲ್ಲುವುದಕ್ಕಾಗಿಯೇ ಆರೋಪಿ ತಂದೆ ಪಾಕಿಸ್ತಾನಕ್ಕೆ ಕರೆದುಕೊಂಡು ಬಂದಿದ್ದನೇ ಅನ್ನೋ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಟಿಕ್‌ಟಾಕ್ ಬ್ಯಾನ್ ಮಾಡಿದ ನ್ಯೂಯಾರ್ಕ್ ಆಡಳಿತ

    ಟಿಕ್‌ಟಾಕ್ ಬ್ಯಾನ್ ಮಾಡಿದ ನ್ಯೂಯಾರ್ಕ್ ಆಡಳಿತ

    ವಾಷಿಂಗ್ಟನ್: ಭದ್ರತಾ ಕಾಳಜಿಯ ಕಾರಣದಿಂದ ನ್ಯೂಯಾರ್ಕ್ ಸಿಟಿಯ (New York City) ಸರ್ಕಾರಿ ಸಾಧನಗಳಲ್ಲಿ ಚೀನಾ (China) ಮೂಲದ ವೀಡಿಯೋ ಹಂಚಿಕೆ ಪ್ಲಾಟ್‌ಪಾರ್ಮ್ ಟಿಕ್‌ಟಾಕ್ (Tiktok) ಅನ್ನು ಬ್ಯಾನ್ ಮಾಡಲಾಗಿದೆ.

    ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಆಡಮ್ಸ್ ಆಡಳಿತ, ಟಿಕ್‌ಟಾಕ್ ನಗರದ ತಾಂತ್ರಿಕ ಜಾಲಗಳಿಗೆ ಭದ್ರತಾ ಬೆದರಿಕೆಗಳನ್ನು ಒಡ್ಡಿದೆ ಎಂದು ತಿಳಿಸಿದೆ. ಈ ಮೂಲಕ ಟಿಕ್‌ಟಾಕ್ ಅನ್ನು ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ನ್ಯೂಯಾರ್ಕ್ ಕೂಡಾ ಸೇರಿಕೊಳ್ಳುತ್ತದೆ ಎಂದು ವರದಿಗಳು ತಿಳಿಸಿವೆ.

    ಇಲ್ಲಿನ ಎಲ್ಲ ಏಜೆನ್ಸಿಗಳು 30 ದಿನಗಳ ಒಳಗೆ ಅಪ್ಲಿಕೇಶನ್ ಅನ್ನು ಅನ್‌ಇನ್ಸ್ಟಾಲ್ ಮಾಡಬೇಕಾಗುತ್ತದೆ. ಸರ್ಕಾರ ಒದಗಿಸಿದ ಮೊಬೈಲ್ ಸಾಧನಗಳು ಹಾಗೂ ನೆಟ್‌ವರ್ಕ್ಗಳಲ್ಲಿ ಇನ್ನು ಮುಂದೆ ಟಿಕ್‌ಟಾಕ್ ಹಾಗೂ ಅದರ ವೆಬ್‌ಸೈಟ್‌ಗೆ ಪ್ರವೇಶ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ನ್ಯೂಯಾರ್ಕ್ ರಾಜ್ಯಾಡಳಿತ ಕೆಲವು ವಿನಾಯಿತಿಗಳೊಂದಿಗೆ 3 ವರ್ಷಗಳಿಗೂ ಹೆಚ್ಚು ಕಾಲ ಟಿಕ್‌ಟಾಕ್ ನಿಷೇಧಿಸಿ ಆದೇಶಿಸಿದೆ. ಇದನ್ನೂ ಓದಿ: ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧಿಸಿದ ರಷ್ಯಾ

    ಟಿಕ್‌ಟಾಕ್ ಅನ್ನು 15 ಕೋಟಿಗೂ ಹೆಚ್ಚು ಅಮೆರಿಕನ್ನರು ಬಳಸುತ್ತಿದ್ದಾರೆ. ಇದು ಭದ್ರತೆಗೆ ಅಪಾಯ ಉಂಟುಮಾಡುತ್ತಿರುವುದರಿಂದ ಸರ್ಕಾರಿ ಸಾಧನಗಳಲ್ಲಿ ಬ್ಯಾನ್ ಮಾಡಲಾಗುತ್ತಿದೆ. ಭಾರತದಲ್ಲಿ ಟಿಕ್‌ಟಾಕ್ ಅನ್ನು 2020ರ ಜೂನ್‌ನಲ್ಲಿಯೇ ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೈತ್ಯ ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್‌ ಪ್ಲ್ಯಾನ್‌!

    ದೈತ್ಯ ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್‌ ಪ್ಲ್ಯಾನ್‌!

    ಬೀಜಿಂಗ್‌: ಯುವಜನರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿರುವ ಟಿಕ್‌ಟಾಕ್‌ (TikTok) ಇದೀಗ ಎಲೋನ್‌ ಮಸ್ಕ್‌ ನೇತೃತ್ವದ ಟ್ವಿಟ್ಟರ್‌ (Twitter) ಹಾಗೂ ಇನ್ಸ್ಟಾಗ್ರಾಮ್‌ (Instagram) ಅಪ್ಲಿಕೇಷನ್‌ಗಳಿಗೆ ಸೆಡ್ಡು ಹೊಡೆಯಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಅದಕ್ಕಾಗಿಯೇ ಇನ್ಮುಂದೆ ಟಿಕ್‌ಟಾಕ್‌ನಲ್ಲಿ ವೀಡಿಯೋ ರೀಲ್ಸ್‌ ಮಾತ್ರವಲ್ಲದೇ ಪಠ್ಯ ಸಂದೇಶಗಳನ್ನೂ ಪೋಸ್ಟ್‌ ಮಾಡುವ ಅವಕಾಶವನ್ನ ಬಳಕೆದಾರರಿಗೆ ನೀಡುವುದಾಗಿ ಘೋಷಿಸಿದೆ.

    ಇನ್ಸ್ಟಾಗ್ರಾಮ್‌ (Instagram) ಖಾತೆಗೆ ಲಿಂಕ್‌ ಹೊಂದಿರುವ ಥ್ರೆಡ್ಸ್‌ ಈ ತಿಂಗಳ ಆರಂಭದಲ್ಲಿ ಚಾಲ್ತಿಗೆ ಬಂದಿತು. ಟ್ವಿಟ್ಟರ್‌ ಆಯ್ಕೆಗಳನ್ನ ಒಳಗೊಂಡ ಹಾಗೂ ಇನ್ಸ್ಟಾಗ್ರಾಮ್‌ ರೀತಿಯನ್ನೇ ಹೋಲುವ ಥ್ರೆಡ್ಸ್‌ ಅನ್ನು ಟಿಟ್ಟರ್‌ಗೆ ಪರ್ಯಾಯವಾಗಿ ಬಳಸಲು ಜಾರಿಗೆ ತರಲಾಯಿತು. ಇನ್ನೂ ಈ ಹಿಂದೆ ಟ್ವಿಟ್ಟರ್‌ ಲೋಗೋವನ್ನ ನಾಯಿ ಮರಿಯಾಗಿ ಬದಲಾಯಿಸಿದ್ದ ಮಸ್ಕ್‌ ಇದೀಗ ನೀಲಿ ಹಕ್ಕಿಗೆ ಗುಡ್‌ಬೈ ಹೇಳಿ ʻX’ ಎಂದು ಮರುನಾಮಕರಣ ಮಾಡಿದ್ದಾರೆ.

    ಈ ನಡುವೆ ಮೆಟಾ ಮಾಲೀಕತ್ವದ ಥ್ರೆಡ್ಸ್‌ ಹಾಗೂ ಟ್ವಿಟ್ಟರ್‌ ನಂತೆಯೇ 1.4 ಶತಕೋಟಿ ಬಳಕೆದಾರರನ್ನ ಒಳಗೊಂಡಿರುವ ಟಿಕ್‌ ಟಾಕ್‌ ಪಠ್ಯಸಂದೇಶ ಪೋಸ್ಟ್‌ ಹಂಚಿಕೊಳ್ಳುವ ಆಯ್ಕೆ ಕಲ್ಪಿಸಲು ಮುಂದಾಗಿದೆ. ಆದ್ರೆ ಥ್ರೆಡ್ಸ್‌ನಂತೆ ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧ ಮಾಡುವ ಬದಲಿಗೆ ಅದೇ ಆ್ಯಪ್ನಲ್ಲಿ ಪಠ್ಯ ವೈಶಿಷ್ಟ್ಯವನ್ನು ಒಳಗೊಳ್ಳುವ ಆಯ್ಕೆ ಸಂಯೋಜಿಸಲಿದೆ. ಇದು ಟ್ವಿಟ್ಟರ್‌ ಮತ್ತು ಥ್ರೆಡ್ಸ್‌ ಗಿಂತಲೂ ಭಿನ್ನವಾಗಿ ಕಾಣುತ್ತದೆ. ಜೊತೆಗೆ ಬಳಕೆದಾರರು ಬರಹದ ಹಿನ್ನೆಲೆಗೆ ಕಲರ್‌ ಮತ್ತು ಮ್ಯೂಸಿಕ್‌ ಅನ್ನು ಸೇರಿಸಿ ಸಂದೇಶವನ್ನ ಹಂಚಿಕೊಳ್ಳಬಹುದು ಎಂದು ಚೀನಾ-ಮಾಲೀಕತ್ವದ ಕಂಪನಿ ಹೇಳಿದೆ.

    ಸದ್ಯ ಚೀನಾ ಮಾಲೀಕತ್ವದ ಟಿಕ್‌ಟಾಕ್‌ ಆ್ಯಪ್ ಅನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿದೆ. ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ವರ್ಷಗಳ ಐಕಾನಿಕ್ ನೀಲಿ ಬಣ್ಣದ ಹಕ್ಕಿ ಮಾಯವಾಗಿದ್ದು, ಎಕ್ಸ್ ಲೋಗೋ ಇದೀಗ ಕಾಣಿಸಿಕೊಳ್ಳುತ್ತಿದೆ. ಈ ನಡುವೆ ವೆರಿಫೈಡ್‌ ಟ್ವಿಟ್ಟರ್‌ ಖಾತೆಗಳನ್ನು ಹೊಂದಿರುವ ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಜಾಹೀರಾತು ಆದಾಯದಲ್ಲಿ ಹಣ ನೀಡುವುದಾಗಿ ಟ್ವಿಟ್ಟರ್‌ ಸಂಸ್ಥೆ ಘೋಷಣೆ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಲಂಡನ್: ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ ಸೇರಿದಂತೆ ಹಲವಾರು ಡೇಟಾ ರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಚೀನಾ (China) ಒಡೆತನದ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ಗೆ (TikTok) ಬ್ರಿಟನ್ (Britain) ಸುಮಾರು 16 ಮಿಲಿಯನ್ ಡಾಲರ್ (ಸುಮಾರು 130 ಕೋಟಿ ರೂ.) ದಂಡವನ್ನು ವಿಧಿಸಿದೆ.

    ವರದಿಗಳ ಪ್ರಕಾರ ಟಿಕ್‌ಟಾಕ್ ನಿಯಮಗಳನ್ನು ಉಲ್ಲಂಘಿಸಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 10 ಲಕ್ಷ ಮಕ್ಕಳಿಗೆ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಅವಕಾಶ ನೀಡಿದೆ.

    ಮಂಗಳವಾರ ಮಾಹಿತಿ ಆಯುಕ್ತರ ಕಚೇರಿ (ಐಸಿಒ), ಟಿಕ್‌ಟಾಕ್ ಯಾರು, ಯಾವ ವಯಸ್ಸಿನಲ್ಲಿ ತನ್ನ ಪ್ಲಾಟ್‌ಫಾರ್ಮ್ಅನ್ನು ಬಳಸುತ್ತಾರೆ ಎಂಬುದರ ಬಗ್ಗೆ ಸರಿಯಾಗಿ ಗಮನಹರಿಸಿಲ್ಲ. ಮಾತ್ರವಲ್ಲದೇ ಅಪ್ರಾಪ್ತ ಮಕ್ಕಳನ್ನು ನಿರ್ಬಂಧಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಅದು ವಿಫಲವಾಗಿದೆ. ಬಳಕೆದಾರರ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಹಾಗೂ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಒದಗಿಸಿಲ್ಲ. ಇದೀಗ ದಂಡವನ್ನು 2018ರ ಮೇ ಯಿಂದ 2020ರ ಜುಲೈ ನಡುವಿನ ನಿಯಮ ಉಲ್ಲಂಘನೆಗೆ ವಿಧಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ಮಕ್ಕಳು ಭೌತಿಕ ಜಗತ್ತಿನಲ್ಲಿರುವಂತೆಯೇ ಡಿಜಿಟಲ್ ಜಗತ್ತಿನಲ್ಲಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಾನೂನುಗಳಿವೆ. ಆದರೆ ಟಿಕ್‌ಟಾಕ್ ಆ ಕಾನೂನುಗಳಿಗೆ ಬದ್ಧವಾಗಿಲ್ಲ. ಟಿಕ್‌ಟಾಕ್ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ, ಉತ್ತಮವಾಗಿ ಕಾರ್ಯನಿರ್ವಹಿಸಬೇಕಿತ್ತು ಎಂದು ಬ್ರಿಟನ್‌ನ ಮಾಹಿತಿ ಆಯುಕ್ತ ಜಾನ್ ಎಡ್ವರ್ಡ್ಸ್ ಹೇಳಿದ್ದಾರೆ.

    ಈಗಾಗಲೇ ಟಿಕ್‌ಟಾಕ್ ಅನ್ನು ಭದ್ರತಾ ದೃಷ್ಟಿಯಿಂದ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಅವುಗಳಲ್ಲಿ ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್, ಬ್ರಿಟನ್, ಕೆನಡಾ, ನ್ಯೂಜಿಲೆಂಡ್ ದೇಶಗಳು ಸೇರಿವೆ. ಇದನ್ನೂ ಓದಿ: Twitter logo: ಟ್ವಿಟ್ಟರ್‌ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!

  • ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

    ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

    ಲಂಡನ್: ಚೀನಾದ (China) ವೀಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ (TikTok) ಅನ್ನು ಬ್ರಿಟನ್ ಸಂಸತ್ತು (British Parliament) ನಿಷೇಧಿಸಿದೆ.

    ಭದ್ರತಾ ಕಾಳಜಿಯ ಹಿನ್ನೆಲೆ ಬ್ರಿಟನ್ ಸಂಸತ್ತು ತನ್ನ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಸಾಧನಗಳಿಂದಲೂ ಟಿಕ್‌ಟಾಕ್ ಅನ್ನು ನಿರ್ಬಂಧಿಸಿದೆ. ಈ ಹಿಂದೆಯೇ ಭಾರತ ಇಡೀ ದೇಶದಲ್ಲಿ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಿದೆ. ಇದೀಗ ಬ್ರಿಟನ್ ಸಂಸತ್ತು ಭದ್ರತಾ ಕಾರಣಕ್ಕೆ ಟಿಕ್‌ಟಾಕ್ ಅನ್ನು ನಿಷೇಧಿಸಿದೆ.

    ಹೌಸ್ ಆಫ್ ಕಾಮನ್ಸ್ ಹಾಗೂ ಲಾರ್ಡ್ಸ್ ಎರಡೂ ಆಯೋಗಗಳು ಟಿಕ್‌ಟಾಕ್ ಅನ್ನು ಎಲ್ಲಾ ಸಂಸದೀಯ ಸಾಧನಗಳು ಹಾಗೂ ಸಂಸದೀಯ ನೆಟ್‌ವರ್ಕ್‌ಗಳಿಂದ ನಿರ್ಬಂಧಿಸಲು ನಿರ್ಧರಿಸಿವೆ ಎಂದು ಸಂಸತ್ತಿನ ವಕ್ತಾರರು ತಿಳಿಸಿದ್ದಾರೆ. ಆದರೆ ಈ ಕ್ರಮವನ್ನು ಟಿಕ್‌ಟಾಕ್ ವಕ್ತಾರರು ವಿರೋಧಿಸಿದ್ದು, ಇದು ಕಂಪನಿಗೆ ಕೆಟ್ಟ ಹೆಸರು ತಂದುಕೊಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ

    ಬ್ರಿಟನ್ ಕಳೆದ ವಾರ ಸರ್ಕಾರಿ ಫೋನ್‌ಗಳಲ್ಲಿ ಚೀನಾದ ಒಡೆತನದ ವೀಡಿಯೊ ಅಪ್ಲಿಕೇಶನ್ ಅನ್ನು ನಿಷೇಧಿಸಿತ್ತು. ಸೈಬರ್ ಭದ್ರತೆಯು ಸಂಸತ್ತಿನ ಪ್ರಮುಖ ಆದ್ಯತೆಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಅಮೆರಿಕ, ಕೆನಡಾ, ಬೆಲ್ಜಿಯಂ ಹಾಗೂ ಯುರೋಪಿಯನ್ ಕಮಿಷನ್ ಈಗಾಗಲೇ ಸರ್ಕಾರಿ ಸಾಧನಗಳಿಂದ ಈ ಅಪ್ಲಿಕೇಶನ್ ಅನ್ನು ನಿಷೇಧಿಸಿವೆ. ಇದನ್ನೂ ಓದಿ: 2 ವರ್ಷ ಬ್ಯಾನ್ ಬಳಿಕ ಫೇಸ್‌ಬುಕ್, ಯೂಟ್ಯೂಬ್‌ಗೆ ಮರಳಿದ ಟ್ರಂಪ್

  • ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

    ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

    ವಾಷಿಂಗ್ಟನ್: ಅಮೆರಿಕದ (USA) ಫೈಟರ್ ಜೆಟ್‌ಗಳು ತಮ್ಮ ವಾಯುನೆಲೆಯ ಮೇಲೆ ಹಾರಾಡುತ್ತಿದ್ದ ಚೀನಾ (China) ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ನಂತರ ಎರಡು ದೈತ್ಯ ಮಿಲಿಟರಿ ರಾಷ್ಟ್ರಗಳ ನಡುವೆ ಶೀತಲ ಸಮರ ಶುರುವಾಗಿದೆ.

    ಈ ನಡುವೆ ಎಲ್ಲಾ ಸರ್ಕಾರಿ ಡಿವೈಸ್‌ಗಳಿಂದ ಟಿಕ್‌ಟಾಕ್ (TikTok) ಅನ್ನು ಡಿಲೀಟ್ ಮಾಡುವಂತೆ ಅಮೆರಿಕ ವೈಟ್‌ಹೌಸ್ 30 ದಿನಗಳ ಗಡುವು ನೀಡಿದೆ. ಅಮೆರಿಕದ ರಕ್ಷಣಾ ಇಲಾಖೆಗಳು ಈಗಾಗಲೇ ಟಿಕ್‌ಟಾಕ್ ನಿರ್ಬಂಧಿಸಿವೆ. ಇದೀಗ ರಾಷ್ಟ್ರವ್ಯಾಪಿ ನಿಷೇಧಕ್ಕೆ ಮುಂದಾಗಿದ್ದು, ಇದು ಸರ್ಕಾರಿ ದತ್ತಾಂಶಗಳನ್ನು ರಕ್ಷಿಸುವಲ್ಲಿ ಮತ್ವದ ಹೆಜ್ಜೆ ಎಂದು ಹೇಳಲಾಗಿದೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    joe biden 1

    ಜೋ ಬೈಡನ್ (Joe Biden) ಹಾಗೂ ಕಮಲಾ ಹ್ಯಾರಿಸ್ (Kamala Harris) ನೇತೃತ್ವದ ಆಡಳಿತವು ಡಿಜಿಟಲ್ ಮೂಲ ಸೌಕರ್ಯಗಳ ರಕ್ಷಣೆಗೆ ಮಹತ್ವದ ಹೆಜ್ಜೆಯನ್ನಿರಿಸಿದೆ. ಜೊತೆಗೆ ಅಮೆರಿಕದ ಜನರ ಸುರಕ್ಷತೆ ಹಾಗೂ ಗೌಪ್ಯತೆ ರಕ್ಷಿಸಲು ವಿದೇಶಿ ಆಪ್‌ಗಳ ಪ್ರವೇಶ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫೆಡರಲ್ ಏಜೆನ್ಸಿಯ (Federal Agencies) ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕ್ರಿಸ್ ಡೆರುಶಾ ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ಚೀನಾ ಮೂಲದ ಟಿಕ್‌ಟಾಕ್ ಆಪ್ ರಾಷ್ಟ್ರವ್ಯಾಪಿ ನಿಷೇಧಿಸಲು ಯುಎಸ್ ವಿದೇಶಾಂಗ ವ್ಯವಹಾರಗಳ ಸಮಿತಿಯು ಅಧ್ಯಕ್ಷ ಜೋ ಬೈಡನ್ ಅವರಿಗೆ ಅಧಿಕಾರ ನೀಡಲು ಒಮ್ಮತದ ನಿರ್ಧಾರ ಕೈಗೊಂಡು ಮತ ಹಾಕಿದೆ. ಈಗಾಗಲೇ ಮಸೂದೆ ಮಂಡಿಸಿದ್ದು, ಈ ಮಸೂದೆ ಅಂಗೀಕಾರವಾದರೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಆಡಳಿತಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ವಿದೇಶಾಂಗ ಸಮಿತಿ ಅಧ್ಯಕ್ಷ ಮೆಕ್‌ಕಾಲ್ ಹೇಳಿದ್ದಾರೆ.

    Joe Biden

    ಸುಮಾರು 10 ಕೋಟಿ ಜನರು ಬೈಟ್‌ಡ್ಯಾನ್ಸ್ ಲಿ. (Byte Dance LT.) ಒಡೆತನದ ಟಿಕ್‌ಟಾಕ್ ಬಳಕೆದಾರರಿದ್ದಾರೆ. ಜೊತೆಗೆ ಹದಿಹರೆಯದ ವಯಸ್ಸಿನ 3ನೇ ಎರಡು ಭಾಗದಷ್ಟು ಮಂದಿ ಟಿಕ್‌ಟಾಕ್ ಬಳಸುತ್ತಿದ್ದು, ಇದರಿಂದ ಡೇಟಾ ಬಳಕೆಯ ಮೇಲೆ ನಿಯಂತ್ರಣ ಪಡೆಯಬಹುದಾಗಿದೆ. ಟಿಕ್‌ಟಾಕ್ ಡೌನ್‌ಲೋಡ್ ಮಾಡಿದರೆ, ಚೀನಾವು ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಹಿಂಬಾಗಿಲು ತೆರೆದಂತಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಭದ್ರತಾ ಪರಿಶೀಲನೆಯ ಭಾಗವಾಗಿ ಡೇಟಾ ಗೌಪ್ಯತಾ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವೈಟ್‌ಹೌಸ್ ತಿಳಿಸಿದೆ.

  • ಯುವಕನಿಗೆ ಬೆದರಿಕೆ ಹಾಕಲು ಗ್ಯಾಂಗ್ ಕಟ್ಟಿಕೊಂಡು 450 ಕಿಮೀ ಬಂದ ಟಿಕ್‌ಟಾಕ್ ತಾರೆ

    ಯುವಕನಿಗೆ ಬೆದರಿಕೆ ಹಾಕಲು ಗ್ಯಾಂಗ್ ಕಟ್ಟಿಕೊಂಡು 450 ಕಿಮೀ ಬಂದ ಟಿಕ್‌ಟಾಕ್ ತಾರೆ

    ಗಾಂಧಿನಗರ: ಆಕೆ ಸ್ಪುರದ್ರೂಪಿ ಯುವತಿ. ಯಾವ ಚಲನಚಿತ್ರದ ನಟಿಗೂ ಕಮ್ಮಿ ಇರ್ಲಿಲ್ಲ. ಒಮ್ಮೆ ಯಾರಾದ್ರೂ ಆಕೆಯನ್ನು ನೋಡಿದ್ರೆ ನೋಡ್ತಾನೆ ಇರ್ಬೇಕು ಅನ್ನುವಷ್ಟು ಸುಂದರಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಟಿಕ್‌ಟಾಕ್‌ಗಳಿಗೆ (TikTok) ಕಾಮೆಂಟ್ ಮಾಡುವ ಸಂದರ್ಭದಲ್ಲಿ ಯುವಕ-ಯುವತಿಯರ ನಡುವೆ ಜಗಳಗಳು ನಡೆಯುವುದು ಸಹಜ.

    ಆದ್ರೆ ಇಲ್ಲೊಬ್ಬಳು ಟಿಕ್‌ಟಾಕ್ (TikTok) ತಾರೆ ತನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಜಗಳವಾಡಿದ್ದ ಯುವಕನಿಗೆ ಬೆದರಿಕೆ ಹಾಕಲೆಂದೇ 450 ಕಿಮೀ ಪ್ರಯಾಣ ಬೆಳೆಸಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಸೀದಿ, ದೇವಸ್ಥಾನ ಕೆಡವೋದು ನೋವಿನ ಸಂಗತಿ.. ಆದ್ರೆ ಅನಿವಾರ್ಯ – ಸಿಎಂ

    ಸೂರತ್‌ನ ಟಿಕ್‌ಟಾಕ್ ತಾರೆ ಕೀರ್ತಿ ಪಟೇಲ್ (Kirti Patel) ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಬೆದರಿಕೆ ಹಾಕಲು 450 ಕಿಮೀ ತೆರಳಿದ್ದಾಳೆ. ಆದ್ರೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕಾಗಮಿಸಿದ ಪೊಲೀಸರು (Bhesan Police Station) ಪರಿಸ್ಥಿತಿ ಕೈಮೀರುವ ಮುನ್ನವೇ ಕೀರ್ತಿ ಪಟೇಲ್ ಹಾಗೂ ಇತರ 9 ಮಂದಿ ಸಹಚರರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಕಾನೂನುಬಾಹಿರ ಸಭೆ, ಅಪರಾಧ ಕೃತ್ಯದ ಸಾಮಾನ್ಯ ಉದ್ದೇಶ, ಅವಮಾನ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳ ಅಡಿಯಲ್ಲಿ ಟಿಕ್‌ಟಾಕ್ ತಾರೆಯನ್ನ ಬಂಧಿಸಲಾಗಿತ್ತು. ಆದ್ರೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಭೇಸನ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

    ಕೀರ್ತಿ ಪಟೇಲ್ ಸೋಷಿಯಲ್ ಮೀಡಿಯಾದಲ್ಲಿ ತನಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಳು. ಹಾಗಾಗಿ ಸೂರತ್‌ನಿಂದ ಭೇಸನ್‌ವರೆಗೆ ಬಂದಿದ್ದಳು ಎಂದು ಯುವಕ ಜಮನ್ ಭಯಾನಿ ಹೇಳಿದ್ದಾನೆ.

    ಕೀರ್ತಿ ಪಟೇಲ್ ಕಿರಿಕ್ ಇದೇ ಮೊದಲೇನಲ್ಲ. ಈ ಹಿಂದೆಯೂ ವಸ್ತಾçಪುರ ಪ್ರದೇಶದಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಕ್ಕಾಗಿ ಅಹಮದಾಬಾದ್ ಪೊಲೀಸರು ಆಕೆಯನ್ನ ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • 8 ಗಂಡಂದಿರಿಂದ 11 ಮಕ್ಕಳು, ಇನ್ನೂ 19 ಮಕ್ಕಳಿಗಾಗಿ ಪ್ಲ್ಯಾನಿಂಗ್‌ ಮಾಡಿದ್ದಾಳೆ ಈ ಮಹಿಳೆ

    8 ಗಂಡಂದಿರಿಂದ 11 ಮಕ್ಕಳು, ಇನ್ನೂ 19 ಮಕ್ಕಳಿಗಾಗಿ ಪ್ಲ್ಯಾನಿಂಗ್‌ ಮಾಡಿದ್ದಾಳೆ ಈ ಮಹಿಳೆ

    ವಾಷಿಂಗ್ಟನ್: ವಿದೇಶಗಳಲ್ಲಿ ವಿಚ್ಛೇದನ ಪಡೆಯೋದು, ಒಬ್ಬ ಮಹಿಳೆ (US Women) ಹೆಚ್ಚು ಪುರುಷರನ್ನ ವಿವಾಹವಾಗೋದು (Marriage) ಎಲ್ಲವೂ ಕಾಮನ್. ಇಂತಹ ಘಟನೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಲೇ ಇರುತ್ತವೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ ಒಬ್ಬರಲ್ಲ, ಇಬ್ಬರಲ್ಲ 8 ಗಂಡಂದಿರನ್ನು ಹೊಂದಿದ್ದು, 11 ಮಕ್ಕಳನ್ನು ಹೊಂದಿದ್ದಾಳೆ. ಇನ್ನೂ 19 ಮಕ್ಕಳನ್ನು ಮಾಡಿಕೊಳ್ಳುವ ಯೋಜನೆಯಲ್ಲಿದ್ದಾಳೆ.

    ಈ ಕುರಿತು ಸ್ವತಃ ಅಮೆರಿಕದ (America) ಮಹಿಳೆಯೇ ಹೇಳಿಕೊಂಡಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 1 ಲಕ್ಷಕ್ಕೂ ಹೆಚ್ಚು ಜನರು ವೀಡಿಯೋವನ್ನು (Video) ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ತನ್ನ ನಡೆಗೆ ಕಾರಣ ಏನೆಂಬುದನ್ನೂ ಹೇಳಿಕೊಂಡಿದ್ದಾಳೆ. ಒಟ್ಟಿನಲ್ಲಿ ಮಹಿಳೆಯ ಈ ವೀಡಿಯೋ ಟ್ರೋಲ್‌ಗಳಿಗೆ ಆಹಾರವಾಗಿದೆ. ಇದನ್ನೂ ಓದಿ: BJP ಸೇರಲು ಕಂಗನಾಗೆ ಗ್ರೀನ್ ಸಿಗ್ನಲ್ ಕೊಟ್ಟು ಆದರೆ.. ಎಂದ ನಡ್ಡಾ

    ಟಿಕ್‌ಟಾಕ್‌ನಲ್ಲಿ ಫೈ ಎಂದು ಕರೆಯಲ್ಪಡುವ ಈ ಮಹಿಳೆ ಅಮೆರಿಕದ ನಿವಾಸಿಯಾಗಿದ್ದಾಳೆ. ಇದೇ ಟಿಕ್‌ಟಾಕ್ ವೇದಿಕೆಯ ತನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಹೆಡ್ ಬುಷ್ ಚಿತ್ರದ ಪ್ರಚಾರ – ತೊಂದರೆ ಕೊಡ್ತಿದ್ದಾರೆಂದು ಐವರ ವಿರುದ್ಧ FIR

    ವೀಡಿಯೋನಲ್ಲಿ ಮಹಿಳೆ ಹೇಳಿದ್ದೇನು?
    ತನ್ನ 8 ಗಂಡಂದಿರನ್ನು ಉಲ್ಲೇಖಿಸಿ, ಇದನ್ನು ಸರಳ ಗಣಿತ ಎನ್ನುತ್ತಾರೆ. 8 ಜನ ಗಂಡಂದಿರ ಮಕ್ಕಳಿಗೆ ಜನ್ಮ ನೀಡುವುದರ ಹಿಂದೆ ರಹಸ್ಯ ಕಾರಣವಿದೆ. ನನ್ನ ಮಕ್ಕಳಿಗೆ ಒಬ್ಬನೆ ತಂದೆಯಿದ್ದರೆ, ನಾನು ಸತ್ತ ನಂತರ ಅವರು ಒಂಟಿಯಾಗುತ್ತಿದ್ದರು. ಈಗ 8 ಜನ ಗಂಡಂದಿರಲ್ಲಿ ಮೂವರು ಅಗಲಿದರೂ ಅಥವಾ ಬಿಟ್ಟುಹೋದರೂ ಇನ್ನೂ ಐವರು ತಂದೆಯರು ಇರುತ್ತಾರೆ ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೇಕಿಲ್ಲ ಗೌರವ – ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

    ಅಲ್ಲದೇ ಮಕ್ಕಳು ಹೆರುವುದನ್ನು ಇದೇ ರೀತಿ ಮುಂದುವರಿಸುತ್ತೇನೆ. ಇನ್ನೂ 19 ಮಕ್ಕಳನ್ನು ಹೊಂದುವ ಮೂಲಕ 30 ಮಕ್ಕಳಿಗೆ ಜನ್ಮ ನೀಡಲು ಬಯಸುತ್ತೇನೆ. ಅದಕ್ಕಾಗಿ ಇನ್ನೂ ಹೆಚ್ಚಿನ ಗಂಡಂದಿರನ್ನು ಹೊಂದಿರಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಕೆಲವರು ಮಹಿಳೆಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಬೆಂಬಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

    ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

    ನವದೆಹಲಿ: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲಕ ಟಿಕ್‍ಟಾಕ್ ಆ್ಯಪ್ ಮತ್ತೆ ಕೆಲ ತಿಂಗಳಲ್ಲಿ ಆರಂಭವಾಗುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.

    ಟಿಕ್‍ಟಾಕ್ ಮಾಲೀಕತ್ವದ ಕಂಪನಿ ಬೈಟ್‍ಡಾನ್ಸ್ ಭಾರತದಲ್ಲಿ ಟಿಕ್‍ಟಾಕ್ ಅನ್ನು ಮತ್ತೆ ಆರಂಭಿಸಲು ಮುಂಬೈ ಮೂಲದ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳಿಂದ ವರದಿಯಾಗಿದೆ. ಅಲ್ಲದೆ ಕೆಲ ತಿಂಗಳಲ್ಲಿ ಟಿಕ್‍ಟಾಕ್ ಆ್ಯಪ್ ಮತ್ತೆ ಕಾಣಸಿಗಲಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಐಟಿ ನಿಯಮ – ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರದಿಂದ 105 ಆದೇಶ

    ಈ ಹಿಂದೆ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಟಿಕ್‍ಟಾಕ್ ಆ್ಯಪ್‍ನ್ನು ಭಾರತ ಸರ್ಕಾರ 2020ರಲ್ಲಿ ನಿಷೇಧಿಸಿತ್ತು. ಚೀನಾ ಅಪ್ಲಿಕೇಶನ್‍ಗಳ ಮೂಲಕ ಭಾರತದ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‍ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‍ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‍ಟಾಕ್ ಸೇರಿದಂತೆ 58 ಚೀನಾದ ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು. ಇದನ್ನೂ ಓದಿ: Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    ಆ ಬಳಿಕ ಇದೀಗ ಮತ್ತೆ ದೇಶದಲ್ಲಿ ಟಿಕ್‍ಟಾಕ್ ಮತ್ತು ಬಿಜಿಎಮ್‍ಐ ಆ್ಯಪ್‍ಗಳನ್ನು ಆರಂಭಿಸಲು ಚರ್ಚೆ ನಡೆದಿದೆ. 5 ತಿಂಗಳ ಅಂತರದ ಒಳಗಾಗಿ ಆ್ಯಪ್‍ಗಳು ಪ್ಲೇಸ್ಟೋರ್‌ನಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಈ ಹಿಂದೆ ಬ್ಯಾನ್ ಆದ ಅಪ್ಲಿಕೇಶನ್‍ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ ಮರಳಲಿದೆಯಾ ಟಿಕ್‌ಟಾಕ್? – ಪಾಲುದಾರರನ್ನು ಹುಡುಕ್ತಿದೆ ಕಂಪನಿ

    ಭಾರತಕ್ಕೆ ಮರಳಲಿದೆಯಾ ಟಿಕ್‌ಟಾಕ್? – ಪಾಲುದಾರರನ್ನು ಹುಡುಕ್ತಿದೆ ಕಂಪನಿ

    ನವದೆಹಲಿ: ಬೈಟೆಡಾನ್ಸ್ ಮಾಲೀಕತ್ವದ ವೀಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ 2 ವರ್ಷಗಳ ಹಿಂದೆ ಭಾರತದಲ್ಲಿ ಬ್ಯಾನ್ ಆಗಿತ್ತು. ಸಾವಿರಾರು ಬಳಕೆದಾರರನ್ನು ಹೊಂದಿದ್ದ ಟಿಕ್‌ಟಾಕ್ ಅನ್ನು ಭಾರತ ಸರ್ಕಾರ ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ನಿಷೆಧಿಸಿತ್ತು. ಇದೀಗ ಟಿಕ್‌ಟಾಕ್ ಮತ್ತೆ ಭಾರತಕ್ಕೆ ಮರಳಲು ಪ್ರಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

    ಟಿಕ್‌ಟಾಕ್ ಭಾರತದಲ್ಲಿ ಹೊಸ ಪಾಲುದಾರರನ್ನು ಹುಡುಕುತ್ತಿರುವುದಾಗಿ ವರದಿಯಾಗಿದೆ. ಪ್ರಸ್ತುತ ಬೈಟೆಡಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಅನ್ನು ಮರಳಿ ತರಲು ಮುಂಬೈ ಮೂಲದ ಹಿರನಂದಾನಿ ಗ್ರೂಪ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಇದನ್ನೂ ಓದಿ: ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ಹಿರನಂದಾನಿ ಗ್ರೂಪ್ ಮುಂಬೈ, ಬೆಂಗಳೂರು ಹಾಗೂ ಚೆನ್ನೈನಾದ್ಯಂತ ಯೋಜನೆಗಳನ್ನು ಹೊಂದಿದ್ದು, ಇದು ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದೆ. ಇದು ರಿಯಲ್ ಎಸ್ಟೇಟ್ ದೈತ್ಯ ಯೊಟ್ಟಾ ಇನ್ಫ್ರಾಸ್ಟ್ರಕ್ಚರ್ ಸೊಲ್ಯೂಷನ್ಸ್ ಅಡಿಯಲ್ಲಿ ಡೇಟಾ ಸೆಂಟರ್ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ತಂತ್ರಜ್ಞಾನ ನೇತೃತ್ವದ ಗ್ರಾಹಕ ಸೇವೆ ಆರ್ಮ್ ಟೆಜ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ.

    ವರದಿಗಳ ಪ್ರಕಾರ ಎರಡೂ ಕಂಪನಿಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಇದರ ಯೋಜನೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಮ್ಮೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆದಿಲ್ಲ. ಆದರೆ ಯೋಜನೆಗಳ ಬಗ್ಗೆ ತಿಳಿಸಲಾಗಿದೆ. ಇದರ ಬಗ್ಗೆ ಕಂಪನಿ ಅನುಮೋದನೆಗೆ ಬಂದಾಗ ಅವರ ವಿನಂತಿಯನ್ನು ಪರಿಶೀಲಿಸಲಿದ್ದೇವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ಚೀನಾದೊಂದಿಗಿನ ಭಾರತದ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲದಿದ್ದರೂ ಚೀನಾ ಮೂಲದ ಅಪ್ಲಿಕೇಶನ್ ಮತ್ತೆ ಭಾರತದಲ್ಲಿ ಮರುಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಆದರೆ ಭಾರತ ಇದಕ್ಕೆ ಅವಕಾಶ ನೀಡುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.