Tag: Tik Tok

  • ಟಿಕ್‍ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್‍ಟಾಪ್ ಕದ್ದ ವಿದ್ಯಾರ್ಥಿಗಳು

    ಟಿಕ್‍ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್‍ಟಾಪ್ ಕದ್ದ ವಿದ್ಯಾರ್ಥಿಗಳು

    ಬೆಳಗಾವಿ: ಟಿಕ್‍ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್ ಟಾಪ್, ಶೋಕಿಗಾಗಿ ಬೈಕ್ ಕಳ್ಳತನ ಮಾಡಿದ್ದ ಮೂವರು ವಿದ್ಯಾರ್ಥಿಗಳು ಅಂದರ್ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಪದವಿ ಓದುತ್ತಿರುವ ವಿದ್ಯಾರ್ಥಿಗಳಾದ ಸಂತೋಷ್, ಸಂಪತ್, ಮತ್ತೊಬ್ಬ ವಿದ್ಯಾರ್ಥಿ ಪ್ರತಿದಿನವೂ ಮೊಬೈಲ್‍ನಲ್ಲಿ ಟಿಕ್‍ಟಾಕ್ ಮಾಡಿ ಅಪ್‍ಲೋಡ್ ಮಾಡುತ್ತಿದ್ದರು. ಅಂದುಕೊಂಡ ಮಟ್ಟಿಗೆ ಲೈಕ್ ಕಮೆಂಟ್ ಬಾರದ್ದಕ್ಕೆ ತಮ್ಮ ವರಸೆ ಬದಲಿಸಿದ ಮೂವರು ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಲು, ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ಲಾನ್ ಮಾಡಿದ್ದರು. ಫೋಟೋ ಸ್ಟುಡಿಯೋ ಒಂದಕ್ಕೆ ನುಗ್ಗಿ ಅಲ್ಲಿದ್ದ ಹೈಕ್ವಾಲಿಟಿ ಕ್ಯಾಮೆರಾ, ಲ್ಯಾಪ್ ಟಾಪ್ ಕದ್ರು. ಬಳಿಕ ಶೋಕಿ ಮಾಡಬೇಕೆಂದು 7 ಮನೆಗಳಲ್ಲಿ ಕಳ್ಳತನ ಮಾಡಿದ್ದರು. ಇದನ್ನೂ ಓದಿ: ಮೋರಿ ನೀರಿನಲ್ಲಿ ಶತ್ರುವನ್ನು ಹುಡುಕಿದ ಪಬ್‍ಜಿ ವೀರ

    ವಿದ್ಯಾರ್ಥಿಗಳು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು, ಈ ದೃಶ್ಯ ಆಧರಿಸಿ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಬಂಧಿಸಿ ಒಂದು ಲ್ಯಾಪ್ ಟಾಪ್ ಮೂರು ಕ್ಯಾಮೆರಾ, ಕಿಬೋರ್ಡ್, ಮೆಮೋರಿ ಕಾರ್ಡ್, ಒಂದು ಬೈಕ್ ಹಾಗೂ ಕಾಸ್ಟ್ಯೂಮ್ ಮತ್ತು 1.16 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    ಬೆಳಗಾವಿ ನಗರದಲ್ಲಿ ಕೆಲವು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ ಪ್ರಕರಣ ಬೇಧಿಸಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಅಪ್ರಾಪ್ತ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂವರ ಬಂಧನದಿಂದಾಗಿ ಏಳು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಯುವಕರು ಮೊಬೈಲ್ ಬಳಕೆಯ ಬಗ್ಗೆ ಎಚ್ಚರಿಕೆಯಿಂದಿರಬೇಕು. ಪಬ್ ಜಿ ಮತ್ತು ಟಿಕ್ ಟಾಕ್ ಆಟಗಳಿಗೆ ಬಲಿಯಾಗಬಾರದು. ಸೋಶಿಯಲ್ ಮೀಡಿಯಾದಲ್ಲಿ ಆಟಗಳಿಗೆ ದಾಸರಾದ್ರೆ ಹಣಕ್ಕಾಗಿ ಕಳ್ಳತನಕ್ಕೆ ಇಳಿಯುತ್ತಾರೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಚಲನವಲನಗಳನ್ನು ಗಮನಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ಲೋಕೇಶ್ ಕುಮಾರ್ ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಪಬ್‍ಜಿ ಆಡಲು ನೆಟ್ ಪ್ಯಾಕ್‍ಗೆ ಹಣ ನೀಡದ್ದಕ್ಕೆ ತಂದೆಯನ್ನೇ ಕತ್ತರಿಸಿ ಕೊಂದ ಮಗ

  • ಟಿಕ್‍ಟಾಕ್ ವಿಡಿಯೋ ಮಾಡೋ ವೇಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ

    ಟಿಕ್‍ಟಾಕ್ ವಿಡಿಯೋ ಮಾಡೋ ವೇಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ

    ಹೈದರಾಬಾದ್: ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಯುವ ಜನತೆ ಸಾವಿನ ದವಡೆಗೆ ಸಿಲುಕುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರು ಕೂಡ ದುರಂತಗಳು ನಡೆಯುತ್ತಿದೆ. ಸದ್ಯ ತೆಲಂಗಾಣದ ನಿಜಾಮಬಾದ್ ಜಿಲ್ಲೆಯ ಭೀಮ್‍ಗಲ್‍ನಲ್ಲಿ ಯುವಕ ಟಿಕ್‍ಟಾಕ್ ವಿಡಿಯೋ ಮಾಡಲು ಯತ್ನಿಸಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

    ಇಂದ್ರಪುರಂ ದಿನೇಶ್ (22) ನೀರಿನಲ್ಲಿ ಕೊಚ್ಚಿ ಹೋದ ಯುವಕರಾನಾಗಿದ್ದು, ಸ್ನೇಹಿತರೊಂದಿಗೆ ತುಂಬಿ ಹರಿಯುತ್ತಿದ್ದ ಚೆಕ್ ಡ್ಯಾಂ ನೋಡಲು ತೆರಳಿದ್ದ ವೇಳೆ ಘಟನೆ ನಡೆದಿದೆ.

    ಮೂವರು ಸ್ನೇಹಿತರೊಂದಿಗೆ ತೆರಳಿದ್ದ ದಿನೇಶ್ ನೀರಿನಲ್ಲಿ ಇಳಿದು ಟಿಕ್‍ಟಾಕ್‍ಗಾಗಿ ವಿಡಿಯೋ ಮಾಡಲು ಯತ್ನಿಸಿದ್ದರು. ಈ ವೇಳೆ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಸ್ನೇಹಿತರ ಎದುರೇ ದಿನೇಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಘಟನೆ ನಡೆದ ಸ್ಥಳದಲ್ಲಿದ್ದ ಕೆಲವರು ದಿನೇಶ್‍ರ ಮತ್ತಿಬ್ಬರು ಸ್ನೇಹಿತರಾದ ದಿನೇಶ್ ಹಾಗೂ ಮನೋಜ್‍ರನ್ನು ರಕ್ಷಣೆ ಮಾಡಿದ್ದರು. ಆದರೆ ಹೊಳೆಯ ಮಧ್ಯಕ್ಕೆ ತೆರಳಿದ್ದ ದಿನೇಶ್‍ನನ್ನು ರಕ್ಷಣೆ ಮಾಡಲು ಯತ್ನಿಸಿದರು ಸಾಧ್ಯವಾಗಿರಲಿಲ್ಲ. ಮೃತ ದಿನೇಶ್ ಪೋಷಕರಿಗೆ ಮೊದಲ ಮಗನಾಗಿದ್ದು, ದುಬೈನಲ್ಲಿ ಕೆಲಸ ಮಾಡುತ್ತಿದ್ದ. ದಿನೇಶ್ 3 ತಿಂಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಆಗಮಿಸಿದ್ದ. ಮುಂದಿನ ತಿಂಗಳು ಮತ್ತೆ ದುಬೈಗೆ ವಾಪಸ್ ತೆರಳಬೇಕಿತ್ತು ಎಂಬ ಮಾಹಿತಿ ಲಭಿಸಿದೆ. ನೀರಿನಲ್ಲಿ ಕೊಚ್ಚಿ ಹೋದ ದಿನೇಶ್‍ರ ಮೃತ ದೇಹ ಹೊರ ತೆಗೆಯಲು ಸತತ 24 ಗಂಟೆ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಕೊನೆಗೂ ಮೃತ ದೇಹವನ್ನು ಪತ್ತೆ ಮಾಡಿದೆ.

  • ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಉಡುಪಿ: ಗುರುವಾಯೂರಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆಯ ಹಾಡನ್ನು ಬಿಯರ್ ಬಾಟಲಿ ಹಿಡ್ಕೊಂಡು ಟಿಕ್ ಟಾಕ್ ಮಾಡಿದ ಯುವಕರ ಚಳಿ ಬಿಡಿಸಲಾಗಿದೆ.

    ಮೊಸರು ಕುಡಿಕೆಯ ಉತ್ಸವದಲ್ಲಿ ಕುಣಿದ ಕೇರಳದ ಯುವತಿಯ ವೀಡಿಯೋ ಅಷ್ಟಮಿ ಸಂದರ್ಭ ಸಿಕ್ಕಾಪಟ್ಟೆ ವೈರಲಾಗಿತ್ತು. ಆ ನಂತರ ಬಂದ ವೈಷ್ಣವಿಯ ಫೋಟೋಗಳು ಭಾರೀ ಜನಮನ್ನಣೆ ಪಡೆದಿತ್ತು. ಫೇಸ್ ಬುಕ್, ವಾಟ್ಸಾಪ್ ನಲ್ಲಿ ಗುರುವಾಯೂರು ಕೃಷ್ಣೆ ಆವರಿಸಿದ್ದಳು.

    ಇದನ್ನು ಟಿಕ್ ಟಾಕ್ ಕಿಡಿಗೇಡಿಗಳು ಅದೇ ಹಾಡಿಗೆ ವೈಷ್ಣವಿಯನ್ನು ಹೋಲುತ್ತಾ ಕುಣಿದಿದ್ದರು. ಮೊಸರು ಕುಡಿಕೆಯ ಬದಲು ಬಿಯರ್ ಬಾಟಲಿ ನೇತು ಹಾಕಿದ್ದರು. ಚಿಕ್ಕಮಗಳೂರಿನ ಈ ಯುವಕರಿಗೆ ಉಡುಪಿ ಜಿಲ್ಲೆ ಕಾರ್ಕಳದ ಹಿಂದೂ ಸಂಘಟನೆಯವರು ಚಳಿ ಬಿಡಿಸಿದ್ದಾರೆ. ಕಾರ್ಕಳ ತಾಲೂಕು ಬಜರಂಗದಳದ ಕಾರ್ಯಕರ್ತರು ಟಿಕ್ ಟಾಕ್ ಶೂರರ ವಿಳಾಸ ಪತ್ತೆ ಮಾಡಿದ್ದಾರೆ. ಇದನ್ನು ಓದಿ:ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಇದರಿಂದ ಭಯಗೊಂಡ ಮೂರು ಟಿಕ್ ಟಾಕ್ ಕಲಾವಿದರು ಕ್ಷಮೆ ಕೇಳಿದ್ದಾರೆ. ವೀಡಿಯೋ ಮಾಡಿ ತಮ್ಮ ತಪ್ಪಾಗಿದೆ ಎಂದು ಕೇಳಿಕೊಂಡಿದ್ದಾರೆ.

    ಭಜರಂಗದಳದ ನಾಯಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಟಿಕ್ ಟಾಕ್ ಅವಾಂತರ ಮಿತಿ ಮೀರಿದೆ. ಅದರಲ್ಲೂ ದೇವರ ವಿಚಾರದಲ್ಲಿ ಟಿಕ್ ಟಾಕ್ ಮಾಡಿದ್ದು ನೋವಿನ ಸಂಗತಿ. ಕಲೆ, ಸಂಸ್ಕೃತಿ, ನಂಬಿಕೆ ವಿಚಾರವನ್ನು ವಿಡಂಬನೆ ಮಾಡುವುದು ಎಷ್ಟು ಸರಿ? ಯುವಕರನ್ನು ಫೋನ್  ಮೂಲಕ ಪತ್ತೆಹಚ್ಚಿ ಕ್ಷಮೆ ಕೇಳಿಸಿದ್ದೇವೆ. ಇನ್ನು ಈ ತರಹ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ಘಟನೆ ಮುಂದುವರೆಯಬಾರದು ಎಂದು ಹೇಳಿದರು.

  • ಪ್ರಿಯತಮೆ ಜೊತೆ ಟಿಕ್-ಟಾಕ್ ಮಾಡಿದ್ದ ಯುವಕನಿಗೆ ಥಳಿತ

    ಪ್ರಿಯತಮೆ ಜೊತೆ ಟಿಕ್-ಟಾಕ್ ಮಾಡಿದ್ದ ಯುವಕನಿಗೆ ಥಳಿತ

    ಯಾದಗಿರಿ: ಪ್ರಿಯತಮೆ ಜೊತೆ ಟಿಕ್-ಟಾಕ್ ವಿಡಿಯೋ ಮಾಡಿ, ಅದನ್ನು ವೈರಲ್ ಮಾಡಿದ ಯುವಕನಿಗೆ ಥಳಿಸಿರುವ ಘಟನೆ ಯಾದಗಿರಿ ತಾಲೂಕಿನ ಹಳಿಗೇರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಬುಗ್ಗಪ್ಪ ಪೂಜಾರಿ ಹಲ್ಲೆಗೊಳಗಾದ ಯುವಕ. ಬುಗ್ಗಪ್ಪ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಒಂದು ದಿನ ಪ್ರಿಯತಮೆ ಜೊತೆಯಲ್ಲಿದ್ದಾಗ ಬುಗ್ಗಪ್ಪ ಟಿಕ್-ಟಾಕ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದನು. ವಿಡಿಯೋ ಬಳಿಕ ರಹಸ್ಯವಾಗಿದ್ದ ಇಬ್ಬರ ಪ್ರೇಮ ಕಥನ ಗ್ರಾಮಕ್ಕೆ ಗೊತ್ತಾಗಿದೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಬುಗ್ಗಪ್ಪನ ಪ್ರಿಯತಮೆ ಸಹ ಆತನಿಂದ ದೂರವಾಗಿದ್ದಾಳೆ. ಇದರಿಂದ ಕೋಪಗೊಂಡ ಯುವತಿ ಕುಟುಂಬಸ್ಥರು ಬುಗ್ಗಪ್ಪನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಇತ್ತ ಪ್ರಿಯತಮೆ ಸಹ ಯುವಕನಿಗ ಚಪ್ಪಲಿಯಿಂದ ಹೊಡೆದಿದ್ದಾಳೆ.

  • ಲಾಕಪ್ ಮುಂದೆ ಸೊಂಟ ಬಳುಕಿಸಿ ಟಿಕ್‍ಟಾಕ್ ಡ್ಯಾನ್ಸ್ – ಮಹಿಳಾ ಪೇದೆ ಅಮಾನತು

    ಲಾಕಪ್ ಮುಂದೆ ಸೊಂಟ ಬಳುಕಿಸಿ ಟಿಕ್‍ಟಾಕ್ ಡ್ಯಾನ್ಸ್ – ಮಹಿಳಾ ಪೇದೆ ಅಮಾನತು

    ಗಾಂಧಿನಗರ: ಮಹಿಳಾ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಡ್ಯಾನ್ಸ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

    ಅರ್ಪಿತಾ ಚೌಧರಿ ಅಮಾನತಾದ ಮಹಿಳಾ ಪೊಲೀಸ್ ಪೇದೆ. ಮೆಹ್ಸಾನಾ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯಲ್ಲಿ ಲಾಪಕ್ ಮುಂದೆ ನಿಂತು ಅರ್ಪಿತಾ ಚೌಧರಿ ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು. ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಅವರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.

    ಅರ್ಪಿತಾ ಚೌಧರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕರ್ತವ್ಯದಲ್ಲಿದ್ದಾಗ ಅವರು ಸಮವಸ್ತ್ರ ಧರಿಸದೆ ಲಂಗ್ನಾಜ್ ಗ್ರಾಮ ಪೊಲೀಸ್ ಠಾಣೆಯೊಳಗೆ ಡ್ಯಾನ್ಸ್ ಮಾಡಿದ್ದು, ಟಿಕ್‍ಟಾಕ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯಾದವರು ಶಿಸ್ತನ್ನು ಅನುಸರಿಸಬೇಕು. ಆದರೆ ಅರ್ಪಿತಾ ಅವರು ಶಿಸ್ತನ್ನು ಪಾಲಿಸಲಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಅಧೀಕ್ಷಕ ಪೊಲೀಸ್ ಮಂಜಿತಾ ವಂಜಾರಾ ತಿಳಿಸಿದ್ದಾರೆ.

    ಅರ್ಪಿತಾ ಚೌಧರಿ ಜುಲೈ 20 ರಂದು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು. ನಂತರ ಅದನ್ನು ವಾಟ್ಸಪ್‍ನಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ. ಚೌಧರಿ 2016ರಲ್ಲಿ ಪೊಲೀಸರ ಲೋಕ ರಕ್ಷಕ ದಳಕ್ಕೆ ನೇಮಕಗೊಂಡಿದ್ದರು. ನಂತರ 2018ರಲ್ಲಿ ಮೆಹ್ಸಾನಾ ಜಿಲ್ಲೆಗೆ ವರ್ಗಾಯಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

  • ಟಿಕ್‍ಟಾಕ್ ಹುಚ್ಚಾಟ – ಯುವಕರಿಬ್ಬರು ಪೊಲೀಸ್ ವಶಕ್ಕೆ

    ಟಿಕ್‍ಟಾಕ್ ಹುಚ್ಚಾಟ – ಯುವಕರಿಬ್ಬರು ಪೊಲೀಸ್ ವಶಕ್ಕೆ

    ಬಾಗಲಕೋಟೆ: ಟಿಕ್‍ಟಾಕ್ ಹುಚ್ಚಾಟದಿಂದ ಧಾರ್ಮಿಕ ದಾರ್ಶನಿಕರಿಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ.

    ಯಲ್ಲಪ್ಪ ಹಳಬರ(19) ಹಾಗೂ ಭೀರಪ್ಪ ಜಕ್ಕಲಿ(21) ಪೊಲೀಸರ ವಶದಲ್ಲಿದ್ದಾರೆ. ಯುವಕರಿಬ್ಬರು ನಾಗರಾಳ ಎಸ್‍ಪಿ ಗ್ರಾಮ ನಿವಾಸಿಗಳಾಗಿದ್ದು, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿದ ರೀತಿಯಲ್ಲಿ ಟಿಕ್‍ಟಾಕ್ ಮಾಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ವಿದ್ಯಾರ್ಥಿನಿ ಸಾವು

    ಅಷ್ಟೇ ಅಲ್ಲದೇ ಯಲ್ಲಪ್ಪ ಒಂದು ಸಮುದಾಯದ ಭಾವನೆ ಕೆರಳಿಸುವ ತರಹ ಟಿಕ್‍ಟಾಕ್ ಮಾಡಿ ಅದನ್ನು ವಾಟ್ಸಪ್ ಸ್ಟೇಟಸ್‍ಗೆ ಇಟ್ಟುಕೊಂಡಿದ್ದನು. ಧಾರ್ಮಿಕ ಮುಖಂಡರಿಗೆ ಅವಮಾನ ಆಗುವ ಸ್ಟೇಟಸ್ ಹಾಕಬೇಡಿ ಎಂದು ಸ್ಥಳೀಯರು ತಿಳಿ ಹೇಳಿದ್ದರು. ಆದರೂ ಇಬ್ಬರು ಹಿರಿಯರ ಮಾತನ್ನು ಕೇಳಿರಲಿಲ್ಲ. ಕೊನೆಗೆ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಬಗ್ಗೆ ಗುಳೇದಗುಡ್ಡ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

  • ಮಾರಕಾಸ್ತ್ರ ಹಿಡಿದು ಟಿಕ್‍ಟಾಕ್ ವಿಡಿಯೋ – ಇಬ್ಬರು ಯುವಕರು ಪೊಲೀಸ್ ವಶಕ್ಕೆ

    ಮಾರಕಾಸ್ತ್ರ ಹಿಡಿದು ಟಿಕ್‍ಟಾಕ್ ವಿಡಿಯೋ – ಇಬ್ಬರು ಯುವಕರು ಪೊಲೀಸ್ ವಶಕ್ಕೆ

    ಮುಂಬೈ: ಟಿಕ್ ಟಾಕ್ ಆ್ಯಪ್ ಸಮಾಜವನ್ನು ಹಾಳು ಮಾಡುತ್ತಿದ್ದು, ಈ ಆ್ಯಪನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಪ್ರಕರಣ ಸುಪ್ರೀಂ ಅಂಗಳಕ್ಕೆ ತಲುಪಿತ್ತು. ಇದೀಗ ಮಾರಕಾಸ್ತ್ರ ಹಿಡಿದು ಟಿಕ್ ಟಾಕ್ ವಿಡಿಯೋ ಮಾಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಹಾರಾಷ್ಟ್ರದ ಪುಣೆ ಸಮೀಪದ ಪಿಂಪರಿ ಚಿಂಚವಾಡ ಪ್ರದೇಶದ ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಓರ್ವ ಅಪ್ರಾಪ್ತ, ಅಭಿಜಿತ್ ಸತ್ಕಾರ್ (22) ಮತ್ತು ಶಂಕರ್ ಬಿರಾಜದಾರ (19) ಒಟ್ಟು ನಾಲ್ವರು ಸೇರಿ ಟಿಕ್ ಟಾಕ್ ವಿಡಿಯೋ ಮಾಡಿದ್ದರು.

    ಕೈಯಲ್ಲಿ ಲಾಂಗ್ ಹಿಡಿದು ನಟ ಸಂಜಯ್ ದತ್ ಸಿನಿಮಾದ ‘ಅಪುನ ಕೋ ಕೋಯಿ ಟಚ್ ನಹಿ ಕರ್ ಸಕತಾ’ (ನಮ್ಮನ್ನು ಯಾರು ಟಚ್ ಮಾಡಲು ಸಾಧ್ಯವಿಲ್ಲ) ಡೈಲಾಗ್ ಗೆ ಟಿಕ್ ಟಾಕ್ ಮಾಡಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ದೇಶದಲ್ಲಿ ಬ್ಯಾನ್ ಆಗುತ್ತಾ ಟಿಕ್ ಟಾಕ್?

    ದೇಶದಲ್ಲಿ ಬ್ಯಾನ್ ಆಗುತ್ತಾ ಟಿಕ್ ಟಾಕ್?

    ಚೆನ್ನೈ: ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಚೀನಾದ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಲು ತಮಿಳುನಾಡು ಸರ್ಕಾರ ಚಿಂತನೆ ನಡೆಸುತ್ತಿದೆ.

    ಮಂಗಳವಾರ ನಡೆದ ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ನಾಗಪಟ್ಟಣದ ಶಾಸಕ ತಮೀಮ್ ಅನ್ಸಾರಿ ಈ ಅಪ್ಲಿಕೇಶನ್ ಅನ್ನು ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ಅಪ್ಲಿಕೇಶನ್ ನಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು.

    ಈ ಮನವಿ ಸಂಬಂಧ ಮಾಹಿತಿ ತಂತ್ರಜ್ಞಾನ ಸಚಿವ ಎಂ. ಮಣಿಕಂಠನ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಹೇಗೆ ಬ್ಲೂ ವೇಲ್ ಮಕ್ಕಳನ್ನು ಹಾಳು ಮಾಡುತ್ತಿದೆಯೋ ಅದೇ ರೀತಿ ಟಿಕ್ ಟಾಕ್‍ನಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ತಮಿಳುನಾಡಿನ ಸಂಸ್ಕೃತಿ ಇದರಿಂದಾಗಿ ಹಾಳಾಗುತ್ತಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವವರೇ ಎಚ್ಚರ

    ಟಿಕ್ ಟಾಕ್ ಆ್ಯಪ್ ಭಾರತದಲ್ಲಿ 16ರಿಂದ 24 ವಯಸ್ಸಿನವರು ಹೆಚ್ಚಾಗಿ ಬಳಸುತ್ತಾರೆ. ಜನವರಿ ತಿಂಗಳಿನಲ್ಲಿ ವಿರುದುನಗರದ ಜಿಲ್ಲೆಯಲ್ಲಿ ನಾಲ್ಕು ಜನರು ತಮಾಷೆಗಾಗಿ ಪೊಲೀಸ್ ಠಾಣೆಯಲ್ಲೇ ಪೊಲೀಸರ ಟಿಕ್ ಟಾಕ್ ವಿಡಿಯೋವನ್ನು ಮಾಡಿದ್ದರು. ಆಗ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.

    ಕೆಲ ದಿನಗಳ ಹಿಂದೆ ಹುಡುಗಿಯರ ಟಿಕ್ ಟಾಕ್ ವಿಡಿಯೋವನ್ನು ಡೌನ್ ಲೋಡ್ ಮಾಡಿ ಅದನ್ನು ತಿರುಚಿ ಮಾಂಸದಂಧೆಗೆ ಗ್ರಾಹಕರನ್ನು ಸೆಳೆಯುತ್ತಿದ್ದ ಜಾಲವನ್ನು ತಮಿಳುನಾಡು ಪೊಲೀಸರು ಬೇಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವವರೇ ಎಚ್ಚರ

    ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವವರೇ ಎಚ್ಚರ

    ಬೆಂಗಳೂರು: ಟಿಕ್ ಟಾಕ್ ಮಾಡುವುದು ಈಗಿನ ಫ್ಯಾಶನ್ ಆಗಿದೆ. ದೊಡ್ಡವರಿಂದ ಚಿಕ್ಕವರತನಕ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡಿ ಎಂಜಾಯ್ ಮಾಡುತ್ತಾರೆ. ಅದನ್ನು ಮಾಡುವ ಮುನ್ನ ಎಚ್ಚರವಾಗಿರಿ ಏಕೆಂದರೆ ಕೆಲ ಕಿರಾತಕರು ಟಿಕ್ ಟಾಕ್ ವಿಡಿಯೋ ಬಳಸಿ ತಮಗೆ ಬೇಕಾದ ರೀತಿಯಲ್ಲಿ ಅದನ್ನು ಟ್ರೋಲ್ ಮಾಡುತ್ತಿದ್ದಾರೆ.

    ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ನಿವಾಸಿ ರಮ್ಯಾಗೆ ಟಿಕ್ ಟಾಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡುವುದು ಎಂದರೆ ತುಂಬಾನೇ ಇಷ್ಟ. ಕಳೆದ 1 ತಿಂಗಳಿನಿಂದ ರಮ್ಯಾ ಮಾಡಿರುವ ಟಿಕ್ ಟಾಕ್ ವಿಡಿಯೋಗಳಿಗೆ ತುಂಬಾನೇ ಲೈಕ್ಸ್ ಬರುತ್ತಿತ್ತು. ಇದನ್ನು ನೋಡಿದ ಕೆಲ ಪುಂಡ ಹುಡುಗರ ಗುಂಪು, ರಮ್ಯಾ ವಿಡಿಯೋ ಬಳಸಿ ಅಶ್ಲೀಲ ಆಡಿಯೋ ಸೇರಿಸಿ ಮತ್ತೊಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಬಳಿಕ ಟಿಕ್ ಟಾಕ್‍ನಲ್ಲಿ ಕ್ಷಮೆ ಕೇಳುವಂತೆ ಕಿಡಿಗೇಡಿಗಳು ವಾರ್ನ್ ಮಾಡಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ರಮ್ಯಾಳ ಕಾಲೇಜ್ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಇನ್ನು ಮುಂದೆ ಹಿಂಗೆಲ್ಲ ಮಾಡಿದ್ರೆ ಸರಿ ಇರಲ್ಲ, ಮೊದಲು ವಿಡಿಯೋ ಡಿಲೀಟ್ ಮಾಡು ಎಂದು ಧಮ್ಕಿ ಹಾಕಿ ಹೋಗಿದ್ದಾರೆ ಎನ್ನಲಾಗಿದೆ.

    ಯುವತಿ ವಿಡಿಯೋ ಬಳಸಿಕೊಳ್ಳಿ ಆದರೆ ಟ್ರೋಲ್ ಮಾಡಬೇಡಿ ಎಂದರೂ ಅವರು ಕೇಳುತ್ತಿಲ್ಲ. ಇದರಿಂದ ನೊಂದ ಯುವತಿ ರಮ್ಯಾ ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv