Tag: Tik Tok

  • ಅಮೆರಿಕದ 16 ವಯಸ್ಸಿನ ಟಿಕ್‌ಟಾಕ್‌ ಸ್ಟಾರ್‌ ಸಾವು

    ಅಮೆರಿಕದ 16 ವಯಸ್ಸಿನ ಟಿಕ್‌ಟಾಕ್‌ ಸ್ಟಾರ್‌ ಸಾವು

    ವಾಷಿಂಗ್ಟನ್‌: ಕಾರುಗಳಲ್ಲಿ ಓಡಾಡಿಕೊಂಡು ಟಿಕ್‌ ಟಾಕ್‌ ಮಾಡುತ್ತಾ ಹೆಸರುವಾಸಿಯಾಗಿದ್ದ 16 ವಯಸ್ಸಿನ ಅಮೆರಿಕದ ಟಿಕ್‌ಟಾಕ್‌ ಸ್ಟಾರ್‌ ಸಾವಿಗೀಡಾಗಿದ್ದಾರೆ.

    ಉತ್ತರ ಕೆರೊಲಿನಾದ ಜೋಶುವಾ ಬ್ಲಾಕ್‌ಲೆಡ್ಜ್ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ. ಅವನ ಸಾವಿಗೆ ಕಾರಣ ತಿಳಿದು ಬಂದಿಲ್ಲ. 16 ವರ್ಷದ ಬಾಲಕ ವೆಸ್ಟ್ ಕಾರ್ಟೆರೆಟ್ ಹೈಸ್ಕೂಲ್‌ನಲ್ಲಿ ಜೂನಿಯರ್ ಆಗಿದ್ದ.

    ಶಾಲೆಯಲ್ಲಿ ಕುಸ್ತಿ ಮತ್ತು ಟ್ರ್ಯಾಕ್‌ನಲ್ಲಿ ತೊಡಗಿಸಿಕೊಂಡಿದ್ದ. ಟಿಕ್‌ಟಾಕ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೊವರ್ಸ್‌ ಹೊಂದಿದ್ದ. ಆತನ ಹೆಚ್ಚಿನ ವೀಡಿಯೊಗಳು ಅವನ ಯುವ ಜೀವನ ಮತ್ತು ಅವನ ಸ್ನೇಹಿತರು, ಗೆಳತಿಯೊಂದಿಗೆ ಕಳೆದ ಸಮಯದ ಬಗ್ಗೆ ಇದ್ದವು.

    ಬ್ಲ್ಯಾಕ್‌ಲೆಡ್ಜ್ ತನ್ನ ಪೋಷಕರು, ಜೊನಾಥನ್ ಮತ್ತು ಜಾಕಿ ಬ್ಲ್ಯಾಕ್‌ಲೆಡ್ಜ್ ಮತ್ತು ಸಹೋದರ ಜೋಸಿಯಾ ಬ್ಲ್ಯಾಕ್‌ಲೆಡ್ಜ್ ಅವರನ್ನು ಅಗಲಿದ್ದಾರೆ.

    ಆತನ ಗರ್ಲ್‌ಫ್ರೆಂಡ್ ಎಮ್ಮಿ ತನ್ನ ಪ್ರಿಯಕರ ಕುರಿತು ಪೋಸ್ಟ್‌ ಹಾಕಿದ್ದಾರೆ. ಮುದ್ದಾದ ಹುಡುಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನಿಲ್ಲದೆ ನಾನು ಇಲ್ಲಿ ಇರುತ್ತಿದ್ದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಾನು ತುಂಬಾ ಚಿಕ್ಕವಳಾಗಿದ್ದರೂ (ಜೋಶ್) ಪ್ರೀತಿ ನಿಜವಾಗಿಯೂ ಏನೆಂದು ನನಗೆ ತಿಳಿದಿದೆ. ನಾನು ಅವನ ಮೇಲೆ ಎಷ್ಟೇ ಕೋಪಗೊಂಡಿದ್ದರೂ ಅವನು ನನ್ನ ಮುಖದಲ್ಲಿ ನಗು ಮೂಡಿಸುತ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ.

  • ಬಿಕಿನಿ ಫೋಟೋಶೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಸೋನು ಗೌಡ

    ಬಿಕಿನಿ ಫೋಟೋಶೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಸೋನು ಗೌಡ

    ಬಿಗ್ ಬಾಸ್ (Bigg Boss) ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಮಾಲ್ಡೀವ್ಸ್ (Maldives) ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಒಳ ಉಡುಪಿನ ಫೋಟೋ ಶೇರ್ ಮಾಡಿ ವಿಚಿತ್ರ ಪೋಸ್ ಕೊಟ್ಟಿದ್ದ ನಟಿ ಈಗ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.

    ಕಪ್ಪು ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಗಳ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಸೋನು ಅವತಾರಕ್ಕೆ ಒಂದಿಷ್ಟು ಜನ ಮೆಚ್ಚುಗೆ ಸೂಚಿಸಿದ್ರೆ, ಮತ್ತೊಂದಿಷ್ಟು ಜನ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಇದನ್ನೂ ಓದಿ:Bigg Boss Kannada 10 ಪ್ರೋಮೋ ಔಟ್- ಈ ಬಾರಿ ಸಮ್‌ಥಿಂಗ್ ಸ್ಪೆಷಲ್

    ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

    ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.

    ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

    ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ(Roopesh Shetty), ಸಾನ್ಯ ಅಯ್ಯರ್(Saanya Iyer) ಜೊತೆ ಸೋನು ಮಿಂಚಿದ್ದರು. ದೊಡ್ಮನೆ ಆಟ ಮುಗಿದ ಮೇಲೆ ತಮ್ಮ ಯುಟ್ಯೂಬ್‌ನಲ್ಲಿ ಒಂದಲ್ಲಾ ಒಂದು ವಿಚಾರದೊಂದಿಗೆ ಚರ್ಚೆ ಮಾಡುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿ ಸೋನಾಲಿ ಹೃದಯಾಘಾತದಿಂದ ನಿಧನ

    ಬಿಗ್ ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿ ಸೋನಾಲಿ ಹೃದಯಾಘಾತದಿಂದ ನಿಧನ

    ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಮೂಲಕ ಸಖತ್ ಫೇಮಸ್ ಆಗಿದ್ದ, ಭಾರತೀಯ ಜನತಾ ಪಾರ್ಟಿಯಿಂದ 2019ರಲ್ಲಿ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅದಂಪುರದಿಂದ ಸ್ಪರ್ಧಿಸಿದ್ದ ಸೋನಾಲಿ ಪೋಗಟ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 42ರ ವಯಸ್ಸಿನ ಸೋನಾಲಿ ಬಿಜೆಪಿ ನಾಯಕಿಯೂ ಆಗಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 14 ರ ಸ್ಪರ್ಧಿಯಾಗಿಯೂ ಅವರು ದೊಡ್ಮನೆ ಪ್ರವೇಶ ಮಾಡಿ ನೋಡುಗರನ್ನು ರಂಜಿಸಿದ್ದರು.

    ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿ ಇರುತ್ತಿದ್ದ ಸೋನಾಲಿ ಪೋಗಟ್, ಹೃದಯಾಘಾತ ಆಗುವುದಕ್ಕೂ ಮುನ್ನ ವಿಡಿಯೋವೊಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಟ್ವಿಟರ್ ಅಕೌಂಟ್ ನಲ್ಲಿ ಅವರು ಪ್ರೊಫೈಲ್ ಚಿತ್ರವನ್ನೂ ಬದಲಿ ಮಾಡಿದ್ದರು. ಇಷ್ಟೆಲ್ಲ ಆಕ್ಟಿವ್ ಆಗಿದ್ದವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರು ಹಲವು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದರು. ಪತಿ ನಿಧನಾನಂತರ ತಮ್ಮ ಬಾಳಿನಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದರು. ಆದರೆ, ಆ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ರವಿವಾರ ಅವರು ಗೋವಾಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಗೋವಾದಲ್ಲೇ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ

    ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ

    ಕೊಪ್ಪಳ: ಬ್ಯಾನ್ ಆಗುವುದಕ್ಕೂ ಮುನ್ನ ಟಿಕ್‍ಟಾಕ್ ನಲ್ಲಿ ಪರಿಚಯವಾಗಿ, ಬಳಿಕ ಫೇಸ್ಬುಕ್, ವಾಟ್ಸಪ್‍ನಲ್ಲಿ ಮಾತುಕತೆ, ಸಲಿಗೆ ಬೆಳೆದಿದ್ದು, ಪ್ರೀತಿಗೆ ತಿರುಗಿದೆ. 7 ತಿಂಗಳ ಹಿಂದಷ್ಟೇ ಜೋಡಿ ವಿವಾಹವಾಗಿತ್ತು. ಇದೀಗ ಯುವತಿಯ ಬದುಕು ದುರಂತ ಅಂತ್ಯವಾಗಿದೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾದ ಕೇವಲ 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯವಾಗಿದೆ. ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಯುವತಿ ಶಿಲ್ಪಾ ವಿಕ್ರಂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ಹಾಗೂ ಗಂಗಾವತಿ ತಾಲೂಕಿನ ಸಾಣಾಪುರದ ವಿಕ್ರಂ ಕಳೆದ ಒಂದೂವರೆ ವರ್ಷದ ಹಿಂದೆ ಟಿಕ್‍ಟಾಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮದಲ್ಲಿ ಬಿದ್ದಿದ್ದಾರೆ. ನಂತರ ಕಳೆದ ಡಿಸೆಂಬರ್ ನಲ್ಲಿ ಇಬ್ಬರೂ ಮದುವೆಯಾಗಿದ್ದರು. ಆದರೆ ಬೇರೆ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ವಿಕ್ರಂ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಶಿಲ್ಪಾಳ ಸಾವಿಗೆ ಗಂಡ ವಿಕ್ರಂ, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ನೀಡಿರುವ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಗಂಗಾವತಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.

  • ಪಾಕಿಸ್ತಾನದಲ್ಲೂ ಟಿಕ್ ಟಾಕ್ ಬ್ಯಾನ್

    ಪಾಕಿಸ್ತಾನದಲ್ಲೂ ಟಿಕ್ ಟಾಕ್ ಬ್ಯಾನ್

    ಇಸ್ಲಾಮಾಬಾದ್: ಅಚ್ಚರಿಯ ಬೆಳವಣಿಗೆ ಎಂಬಂತೆ ಭಾರತ, ಅಮೆರಿಕ ಬಳಿಕ ಇದೀಗ ಪಾಕಿಸ್ತಾನದಲ್ಲೂ ಚೀನಿ ಮೂಲದ ಟಿಕ್ ಟಾಕ್ ಆ್ಯಪ್ ಬ್ಯಾನ್ ಮಾಡಲಾಗಿದೆ.

    ಈ ಕುರಿತು ಪಾಕ್ ಮಾಧ್ಯಮಗಳು ವರದಿ ಮಾಡಿದ್ದು, ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ(ಪಿಟಿಎ) ಚೀನಿ ಆ್ಯಪ್ ಟಿಕ್ ಟಾಕ್ ನಿಷೇಧಿಸಲಾಗಿದೆ ಎಂದು ತಿಳಿಸಿವೆ. ಕಾನೂನು ಬಾಹಿರ, ಅಶ್ಲೀಲತೆ ಮತ್ತು ಅನೈತಿಕ ವಿಡಿಯೋಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಬ್ಯಾನ್ ಮಾಡಿರುವುದಾಗಿ ಪಾಕಿಸ್ತಾನ ತಿಳಿಸಿದೆ.

    ಟಿಕ್ ಟಾಕ್ ನಿಷೇಧಕ್ಕೆ ಕಾರಣ ನೀಡಿರುವ ಪಿಟಿಎ, ಕಾನೂನು ಬಾಹಿರ, ಅಶ್ಲೀಲತೆ ಮತ್ತು ಅನೈತಿಕ ವಿಡಿಯೋಗಳ ಕುರಿತು ಅಸಂಖ್ಯ ದೂರುಗಳು ಬಂದಿವೆ. ಹಲವು ಬಾರಿ ಈ ಕುರಿತು ನೋಟಿಸ್ ನೀಡಿದರೂ ಸಹ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಟಿಕ್ ಟಾಕ್ ನಿಷೇಧ ಮಾಡಲಾಗಿದೆ. ಅಸಂಖ್ಯ ದೂರುಗಳು ಬಂದ ಹಿನ್ನೆಲೆ ಹಾಗೂ ವಿಡಿಯೋ ಕಂಟೆಂಟ್‍ಗಳನ್ನು ಆಧರಿಸಿ ಪಾಕಿಸ್ತಾನ ಹಲವು ಬಾರಿ ನೋಟಿಸ್ ನೀಡತ್ತು. ಅಲ್ಲದೆ ಈ ಹಿಂದೆ ಅಂತಿಮ ನೋಟಿಸ್ ಸಹ ಜಾರಿ ಮಾಡಿತ್ತು. ಆದರೆ ಟಿಕ್ ಟಾಕ್ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಎಂಬ ಕಾರಣವನ್ನು ಪಾಕಿಸ್ತಾನ ನೀಡಿದೆ.

    ಟಿಕ್‍ಟಾಕ್ ದೇಶದ ಭದ್ರತೆಗೆ ಸಮಸ್ಯೆ ತರಬಹುದು ಎಂಬ ವಿಚಾರ ಪಾಕಿಸ್ತಾನಕ್ಕೆ ಗೊತ್ತಾಗಿದೆ. ಹೀಗಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡದೇ ಹಿಂಬಾಗಿಲಿನ ಮೂಲಕ ಟಿಕ್‍ಟಾಕ್ ನಿಷೇಧ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

    ಟಿಕ್‍ಟಾಕ್ ಅಶ್ಲೀಲ ವಿಡಿಯೋಗಳನ್ನು ನಿಯಂತ್ರಣ ಮಾಡಬೇಕು. ಈ ಕುರಿತು ಸೂಕ್ತ ಕಾರ್ಯತಂತ್ರ ರೂಪಿಸಬೇಕು ಎಂದು ಈ ಹಿಂದೆ ಹಲವು ಬಾರಿ ಪಿಟಿಎ ನೋಟಿಸ್ ನೀಡಿತ್ತು. ಅಲ್ಲದೆ ಕೊನೇಯದಾಗಿ ಜುಲೈನಲ್ಲಿ ಮತ್ತೆ ಅಂತಿಮ ನೋಟಿಸ್ ನೀಡಿ ಎಚ್ಚರಿಸಿತ್ತು. ಆದರೂ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಇದೀಗ ಪಾಕಿಸ್ತಾನ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.

    ಪಾಕಿಸ್ತಾನದಲ್ಲಿ ಟಿಕ್‍ಟಾಕ್ ಜನಪ್ರಿಯವಾಗಿದ್ದು 2.5 ಕೋಟಿ ಜನ ಕಳೆದ ವರ್ಷ ಈ ಅಪ್ಲಿಕೇಶನ್‍ನ್ನು ಡೌನ್‍ಲೋಡ್ ಮಾಡಿದ್ದಾರೆ. ಈ ಹಿಂದೆ ಟಿಕ್‍ಟಾಕ್ ವಿಡಿಯೋಕ್ಕಾಗಿ ಯುವಕನೊಬ್ಬ ಶೂಟ್ ಮಾಡಿಕೊಂಡಿದ್ದ. 10 ದಿನಗಳ ಹಿಂದೆ ಟಿಕ್‍ಟಾಕ್ ಮೂಲಕ ಪರಿಚಯಗೊಂಡಿದ್ದ ವ್ಯಕ್ತಿ ಮತ್ತು ಆತನ ಸ್ನೇಹಿತರಿಂದ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಅಪರಾಧಗಳಿಗೆ ಪ್ರೇರಣೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಶಾಸನಸಭೆ ಜುಲೈ 6 ರಂದು ಟಿಕ್‍ಟಾಕ್ ನಿಷೇಧ ನಿರ್ಣಯವನ್ನು ಪಾಸ್ ಮಾಡಿತ್ತು. ಇದೀಗ ಪಾಕಿಸ್ತಾನ ಟಿಕ್ ಆ್ಯಪ್‍ನ್ನು ನಿಷೇಧ ಮಾಡಿದೆ.

    ಎಲೆಕ್ಟ್ರಾನಿಕ್ ಅಪರಾಧಗಳ ತಡೆಗಟ್ಟುವಿಕೆ ಕಾಯ್ದೆಯಡಿ ಲೈವ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಬಿಗೋವನ್ನು ಸಹ ಈ ಹಿಂದೆ ಪಾಕಿಸ್ತಾನ ನಿರ್ಬಂಧಿಸಿತ್ತು. ಇದಾದ ಬಳಿಕ ಇದೀಗ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಟಿಕ್ ಟಾಕ್ ಬ್ಯಾನ್ ಮಾಡಿದೆ.

  • ಮೈಕ್ರೋಸಾಫ್ಟ್‌ ತೆಕ್ಕೆಗೆ ಟಿಕ್‌ಟಾಕ್‌ – ಖರೀದಿ ಮಾತುಕತೆ ಆರಂಭ

    ಮೈಕ್ರೋಸಾಫ್ಟ್‌ ತೆಕ್ಕೆಗೆ ಟಿಕ್‌ಟಾಕ್‌ – ಖರೀದಿ ಮಾತುಕತೆ ಆರಂಭ

    ವಾಷಿಂಗ್ಟನ್‌: ಮಾಹಿತಿ ತಂತ್ರಜ್ಞಾನ ಕಂಪನಿ ಮೈಕ್ರೋಸಾಫ್ಟ್‌ ಚೀನಿ ಟಿಕ್‌ಟಾಕ್‌ ಅಪ್ಲಿಕೇಶನ್‌ ಖರೀದಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಬೈಟ್‌ಡ್ಯಾನ್ಸ್‌ ಕಂಪನಿಯ ಟಿಕ್‌ಟಾಕ್‌ ಅಪ್ಲಿಕೇಶನ್‌ ಖರೀದಿ ಸಂಬಂಧ ಮಾತುಕತೆ ಆರಂಭವಾಗಿದೆ. ಸೋಮವಾರ ಈ ವಿಚಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

    ಮೈಕ್ರೋಸಾಫ್ಟ್‌ ಇಲ್ಲಿಯವರೆಗೂ ಸಾಮಾಜಿಕ ಜಾಲತಾಣಕ್ಕೆ ಮಾರುಕಟ್ಟೆಯ ಮೇಲೆ ಕಾಲಿಟ್ಟಿಲ್ಲ. ಈ ನಿಟ್ಟಿನಲ್ಲಿ ವಿಡಿಯೋ ಶೇರಿಂಗ್‌ ಖರೀದಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಖರೀದಿ ವಿಚಾರವಾಗಿ ಮೈಕ್ರೋಸಾಫ್ಟ್‌ ಮತ್ತು ಬೈಡ್‌ ಡ್ಯಾನ್ಸ್‌ ಕಂಪನಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ವಿದೇಶಿ ಹೂಡಿಕೆ ಇರುವ ಕಂಪನಿಯನ್ನು ಖರೀದಿಸಬೇಕಾದರೆ ಅಮೆರಿಕ ಸರ್ಕಾರದ ಅನುಮತಿ ಅಗತ್ಯವಾಗಿದೆ. ಅಮೆರಿಕ ಮತ್ತು ಚೀನಾ ಸಂಬಂಧ ಮೊದಲೇ ವ್ಯಾಪಾರ ಸಮರದಿಂದ ಹಳಸಿತ್ತು. ಈಗ ಕೋವಿಡ್‌ 19ನಿಂದಾಗಿ ಸಂಬಂಧ ಮತ್ತಷ್ಟು ಹಳಸಿದೆ. ಹೀಗಿರುವಾಗ ಸರ್ಕಾರ ಈ ಖರೀದಿ ಮಾತುಕತೆಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಎದ್ದಿದೆ.

    ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಜುಲೈ ಮೊದಲ ವಾರದಲ್ಲಿ, ಟಿಕ್‌ಟಾಕ್‌ ಸೇರಿದಂತೆ ಚೀನಾದ ಹಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದರು.

    ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಟಿಕ್‌ಟಾಕ್‌ ಅಪ್ಲಿಕೇಶನ್‌ ಭದ್ರತೆ ಮತ್ತು ದೇಶ ಪ್ರಜೆಗಳ ಖಾಸಗಿತನವನ್ನು ರಕ್ಷಿಸುವ ಸಂಬಂಧ ಟಿಕ್‌ಟಾಕ್‌ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಮೂಲಕ ಡಿಜಿಟಲ್‌ ಸ್ಟ್ರೈಕ್‌ ಮಾಡಿತ್ತು.

  • ಡಿಜಿಟಲ್ ಸ್ಟ್ರೈಕ್ ಸಹ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

    ಡಿಜಿಟಲ್ ಸ್ಟ್ರೈಕ್ ಸಹ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

    ನವದೆಹಲಿ: ಚೀನಾದ 59 ಆ್ಯಪ್‍ಗಳನ್ನು ನಿಷೇಧಿಸುವ ಮೂಲಕ ಭಾರತ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಭಾರತೀಯ ಪ್ರಜೆಗಳ ವೈಯಕ್ತಿಕ ಡಾಟಾ ರಕ್ಷಿಸುವ ಉದ್ದೇಶದಿಂದ ಆ್ಯಪ್‍ಗಳನ್ನು ಬ್ಯಾನ್ ಮಾಡಿದ್ದೇವೆ. ಭಾರತದ ಸಾರ್ವಭೌಮತ್ವ, ಭದ್ರತೆ ಕಾಪಾಡುವುದು ಹಾಗೂ ದೇಶದ ಜನತೆಯ ಡಿಜಿಟಲ್ ಸೆಕ್ಯೂರಿಟಿ, ಪ್ರೈವೆಸಿ ಉದ್ದೇಶದಿಂದ ಟಿಕ್ ಟಾಕ್ ಸೇರಿ 59 ಆ್ಯಪ್‍ಗಳನ್ನು ನಿಷೇಧಿಸಿದ್ದೇವೆ ಎಂದು ತಿಳಿಸಿದ್ದಾರೆ.

    ನಮ್ಮ ಸೈನಿಕರು ಹಾಗೂ ದೇಶದ ಜನತೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಭಾರತಕ್ಕೆ ತಿಳಿದಿದೆ. ಹೀಗಾಗಿ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಭಾರತ ಶಾಂತಿ ಬಯಸುತ್ತದೆ. ಆದರೆ ಯಾರಾದರೂ ಕೆಟ್ಟ ಕಣ್ಣು ಹಾಕಿದರೆ, ಕೆಣಕಿದರೆ ತಕ್ಕ ಉತ್ತರ ಕೊಡದೆ ಬಿಡುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ.

    ಕೇಂದ್ರ ಸರ್ಕಾರ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‍ಗಳನ್ನು ಇತ್ತೀಚೆಗೆ ನಿಷೇಧಿಸಿದೆ. ಭಾರತದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಆ್ಯಪ್‍ಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ. 59 ಆ್ಯಪ್‍ಗಳ ಪಟ್ಟಿಯಲ್ಲಿ ಹೆಲೋ, ಲೈಕೀ, ಕ್ಯಾಮ್ ಸ್ಕ್ಯಾನರ್, ವಿಗೋ ವಿಡಿಯೋ, ಎಂಐ ವಿಡಿಯೋ ಕಾಲ್ ಕ್ಸಿಯೋಮಿ, ಕ್ಲ್ಯಾಶ್ ಆಫ್ ಕಿಂಗ್ಸ್, ಕ್ಲಬ್ ಫ್ಯಾಕ್ಟರಿ ಸೇರಿದಂತೆ ಒಟ್ಟು 59 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

    ಗಾಲ್ವಾನ್ ವ್ಯಾಲಿಯಲ್ಲಿ ಕುದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಚೀನಾ ಹಾಗೂ ಭಾರತದ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತ ಚೀನಿ ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

  • ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್

    ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್

    ನವದೆಹಲಿ : ಕೇಂದ್ರ ಸರ್ಕಾರದ ಬಳಿಕ ಚೀನಾ ಕಂಪನಿಗಳಿಗೆ ಭಾರತದ ವಕೀಲರಿಂದ ಬಿಗ್ ಶಾಕ್ ಎದುರಾಗಿದೆ. ಟಿಕ್ ಟಾಕ್ ಪರ ವಾದ ಮಂಡಿಸಲು‌ ಭಾರತದ ಪ್ರಮುಖ ವಕೀಲರು ನಿರಾಕರಿಸಿದ್ದಾರೆ‌.

    ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಭದ್ರತೆ ಕಾರಣ ನೀಡಿ ಟಿಕ್ ಟಾಕ್ ಸೇರಿ ಭಾರತದಲ್ಲಿ 59 ಚೀನಾ ನಿರ್ಮಿತ ಮೊಬೈಲ್ ಆ್ಯಪ್ ಗಳನ್ನು ನಿರ್ಬಂಧಿಸಿರುವುದನ್ನು  ಟಿಕ್ ಟಾಕ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ತನ್ನ ಪರ ವಾದ ಮಂಡಿಸಲು ಭಾರತದ ಪ್ರಖ್ಯಾತ ವಕೀರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ.

    ಈ ಪೈಕಿ ಕೇಂದ್ರ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರನ್ನ ಭೇಟಿ ಮಾಡಿ ಟಿಕ್ ಟಾಕ್ ಪ್ರತಿನಿಧಿಸಲು ಮನವಿ ಮಾಡಿದ್ದು ರೊಹ್ಟಗಿ ಮನವಿ ತಿರಸ್ಕರಿಸಿದ್ದಾರೆ. ಸರ್ಕಾರ ತೆಗೆದುಕೊಂಡ ನಿರ್ಧಾರದ ವಿರುದ್ಧವಾಗಿ ಯಾವುದೇ ಚೀನಾ ಕಂಪನಿಗಳ ಪರ ವಾದ ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವ ಪ್ಲ್ಯಾನ್ ಗೆ ಹಿನ್ನಡೆಯಾಗಿದೆ.

    ಮಂಗಳವಾರ ಟಿಕ್ ಟಾಕ್ ಬಗ್ಗೆ ನಿರ್ಬಂಧ ಬಗ್ಗೆ ಸ್ಪಷ್ಟನೆ ನೀಡಿದ್ದ ಸಂಸ್ಥೆ, ಭಾರತದ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ ಬಳಕೆದಾರರು ಯಾವ ಮಾಹಿತಿಯನ್ನು ಚೀನಾ ಸೇರಿದಂತೆ ಇತರೆ ದೇಶಗಳೊಂದಿಗೆ ಹಂಚಿಕೊಂಡಿಲ್ಲ‌. ಭಾರತದ ಸಮಗ್ರತೆ ಧಕ್ಕೆ ತರುವ ಕೆಲಸ ಸಂಸ್ಥೆ ಮಾಡುವುದಿಲ್ಲ ಎಂದಿತ್ತು. ಬಗ್ಗೆ ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡುವ ಪ್ರಯತ್ನ ಮಾಡುವುದಾಗಿ ಟಿಕ್ ಟಾಕ್ ಹೇಳಿತ್ತು.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಭಯ ಯಾಕೆ?
    ಅಪ್ಲಿಕೇಶನ್‌ಗಳಿಂದ ಚೀನಾ ಏನು ಮಾಡಬಹುದು ಎಂದು ಪ್ರಶ್ನೆ ಏಳುವುದು ಸಹಜ. ಸದ್ಯ ಮೊಬೈಲ್‌ ಕ್ಷೇತ್ರದಲ್ಲಿ ಚೀನಾ ಕಂಪನಿಗಳೇ ಟಾಪ್‌ ಸ್ಥಾನದಲ್ಲಿವೆ. ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಒಂದು ಬಿಟ್ಟರೆ ಫೋನಿನ ಹಾರ್ಡ್‌ ವೇರ್‌ ಮತ್ತು ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳ ಸಂಪೂರ್ಣ ಹಿಡಿತ ಚೀನಾಕ್ಕಿದೆ. ಹೀಗಾಗಿ ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಇಡಿ ದೇಶದ ಪ್ರಜೆಗಳ ಸಂವಹನ ವ್ಯವಸ್ಥೆಯನ್ನು ತನ್ನತ್ತ ತೆಗೆದುಕೊಳ್ಳಬಹುದು ಎಂಬ ಆರೋಪ ಈ ಹಿಂದಿನಿಂದಲೂ ಇದೆ. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಸಂವಹನ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ಪಡೆದರೆ ಯಾವ ಸರ್ಕಾರಕ್ಕೂ ಏನು ಮಾಡಲು ಸಾಧ್ಯವಿಲ್ಲ.

  • ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್

    ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್

    ಬಾಗಲಕೋಟೆ: ಕಾಡು ಮೊಲ ಹಾಗೂ ನವಿಲು ಹಿಡಿದು ಟಿಕ್ ಟಾಕ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆ ನಡೆದಿದೆ.

    ಹುನಗುಂದ ತಾಲೂಕಿನ ಅಮೀನಗಡ ಬಳಿಯ ಮದಾಪುರ ಗ್ರಾಮದ ವಿಠ್ಠಲ್ ವಾಲಿಕಾರ ಬಂಧಿತ ಆರೋಪಿ. ವಿಠ್ಠಲ್ ರಾಷ್ಟ್ರಪಕ್ಷಿಯಾದ ನವಿಲು ಹಾಗೂ ಕಾಡು ಮೊಲವನ್ನು ಬೇಟೆಯಾಡುತ್ತಿದ್ದ. ಅಷ್ಟೇ ಅಲ್ಲದೆ ಅದನ್ನು ಹಿಡಿದು ವಿಡಿಯೋ ಮಾಡಿ ಟಿಕ್ ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಹುನಗುಂದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಆರೋಪಿ ವಿಠ್ಠಲ್‍ಗೆ ಬಲೆ ಬೀಸಿ ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಆರೋಪಿಯನ್ನ ಬಂಧಿಸಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಟಿಕ್‍ಟಾಕ್‍ನಲ್ಲೂ ಕೆಜಿಎಫ್ ದಾಖಲೆ

    ಟಿಕ್‍ಟಾಕ್‍ನಲ್ಲೂ ಕೆಜಿಎಫ್ ದಾಖಲೆ

    ಬೆಂಗಳೂರು: ಎಲ್ಲಿ ನೋಡಿದರೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ್ದೇ ಮಾತು. ಚಾಪ್ಟರ್-1 ಹಿಟ್ ಆದ ಬಳಿಕ ಚಾಪ್ಟರ್-2 ಹೇಗೆ ಮೂಡಿ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಈ ಸಿನಿಮಾ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದ್ದು, ಈ ಮಧ್ಯೆ ಟಿಕ್ ಟಾಕ್‍ನಲ್ಲಿ ಕೆಜಿಎಫ್ ದಾಖಲೆ ನಿರ್ಮಸಿದೆ ಎಂಬ ಸುದ್ದಿಯನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ.

    ಕೆಜಿಎಫ್-2 ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಚಿತ್ರ ತಂಡ ಸಹ ಅಷ್ಟೇ ಬೇಗ ಸಿನಿಮಾ ಚಿತ್ರೀಕರಣ ಮುಗಿಸಿದೆ. ಈಗಾಗಲೇ ಶೂಟಿಂಗ್ ಕೊನೆಯ ಹಂತಕ್ಕೆ ತಲುಪಿದ್ದು, ಚಿತ್ರ ತಂಡ ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ಕೆಜಿಎಫ್ ಚಾಪ್ಟರ್ 1 ಗಿಂತ ಚಾಪ್ಟರ್-2 ಕುರಿತು ಹೆಚ್ಚು ನಿರೀಕ್ಷೆ ಇದೆ. ಇದನ್ನು ಗಮನದಲ್ಲಿರಿಸಿಕೊಂಡೇ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರೀಕರಣ ನಡೆಸಿದ್ದು, ಚಾಪ್ಟರ್-1ಗಿಂತ ರಿಚ್ ಆಗಿ ಮೂಡಿ ಬರಲಿದೆ ಎನ್ನಲಾಗಿದೆ.

    ಸದ್ಯ ಕೊರೊನಾ ಹಿನ್ನೆಲೆ ಫೈನಲ್ ಹಂತದ ಶೂಟಿಂಗ್ ಬಾಕಿ ಉಳಿದಿದ್ದು, ಬಹುತೇಕ ಚಿತ್ರೀಕರಣ ಫೈನಲ್ ಹಂತ ತಲುಪಿದೆ. ಹೀಗಾಗಿ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿದ್ದು, ಅಕ್ಟೋಬರ್ 23ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ ಕೊರೊನಾ ಮಾಹಾರಿಯಿಂದ ಹೇಗೋ ಏನೋ ಎಂಬ ಭಯ ಅಭಿಮಾನಿಗಳಲ್ಲಿ ಮನೆ ಮಾಡಿದೆ.

    ಇದೀಗ ಕೆಜಿಎಫ್ ಸಿನಿಮಾ ಕುರಿತು ಅಭಿಮಾನಿಗಳು ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಕ್ಸ್ ಆಫೀಸ್, ಯೂಟ್ಯೂಬ್, ಟ್ವಿಟ್ಟರ್ ಹಾಗೂ ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಬರೆದಿದ್ದ ಕೆಜಿಎಫ್, ಟಿಕ್ ಟಾಕ್‍ನಲ್ಲಿಯೂ ದಾಖಲೆ ನಿರ್ಮಿಸಿದೆಯಂತೆ. ಕೆಜಿಎಫ್ ಚಿತ್ರದ ಹ್ಯಾಶ್ ಟ್ಯಾಗ್‍ನ್ನು ಬರೋಬ್ಬರಿ 3.4 ಬಿಲಿಯನ್‍ನಷ್ಟು ಜನ ಬಳಸಿದ್ದಾರಂತೆ. ಈ ಮೂಲಕ ಭಾರತದ ಸಿನಿಮಾಗಳಲ್ಲಿ ಅತೀ ಹೆಚ್ಚು ಹ್ಯಾಶ್‍ಟ್ಯಾಗ್ ಬಳಕೆಯಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

    ಕೆಜಿಎಫ್-2 ಸಿನಿಮಾ ಸಹ ಒಟ್ಟು ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ದಕ್ಷಿಣ ಭಾರತದ ಚಿತ್ರರಂಗವನ್ನೇ ತಿರುಗಿ ನೋಡುವಂತೆ ಮಾಡಿದೆ. ಅಲ್ಲದೆ ಸಿನಿಮಾ ತಂಡಕ್ಕೆ ಬಾಲಿವುಡ್ ಖ್ಯಾತ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಸೇರ್ಪಡೆಯಾಗಿರುವುದು ಇನ್ನೂ ಕುತುಹಲ ಮೂಡಿಸಿದೆ. ಸಿನಿಮಾದಲ್ಲಿ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವೀನಾ ಟಂಡನ್ ಪ್ರಧಾನಿಯ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಮೇಲೂ ಸಹ ನಿರೀಕ್ಷೆ ಹೆಚ್ಚಿದೆ.