Tag: Tigress

  • ಕಮಲಾಪುರದ ಅಟಲ್‌ಜೀ ಮೃಗಾಲಯದ ಹೆಣ್ಣು ಹುಲಿ ದೇವಿ ಸಾವು

    ಕಮಲಾಪುರದ ಅಟಲ್‌ಜೀ ಮೃಗಾಲಯದ ಹೆಣ್ಣು ಹುಲಿ ದೇವಿ ಸಾವು

    ಬಳ್ಳಾರಿ: ಜಿಲ್ಲೆಯ ಕಮಲಾಪುರದ (Kamalapura) ಅಟಲ್‌ಜೀ ಮೃಗಾಲಯದಲ್ಲಿದ್ದ ಹೆಣ್ಣು ಹುಲಿ ದೇವಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದೆ.

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ (Atal Bihari Vajpaye Zoological Park) ಮೃಗಾಲಯದಲ್ಲಿದ್ದ ದೇವಿ ಎಂಬ ಹೆಸರಿನ ಹೆಣ್ಣು ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ.ಇದನ್ನೂ ಓದಿ: ಬಿಹಾರದಲ್ಲಿ ಇಂದು 5,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ಅಂದಾಜು 18 ರಿಂದ 19 ವರ್ಷದ ದೇವಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡು ನಿತ್ರಾಣವಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು.

    ಕಳೆದ ಎರಡು ವರ್ಷಗಳಿಂದ ಮೃಗಾಲಯದಲ್ಲಿರುವ ರಕ್ಷಣಾ ಕೇಂದ್ರದಲ್ಲಿ ವೈದ್ಯೋಪಚಾರ ನೀಡಲಾಗಿತ್ತು. ಆರೋಗ್ಯದಲ್ಲಿಯೂ ಸುಧಾರಣೆ ಕಂಡು ಬಂದಿತ್ತು. ಆದರೆ ಇದೀಗ ವಯೋಸಹಜವಾಗಿ ಮೃತಪಟ್ಟಿದೆ.ಇದನ್ನೂ ಓದಿ: ಮರದ ಕೊಂಬೆ ಬಿದ್ದು ಯುವಕ ಸಾವು – ಮೂವರು ಬಿಬಿಎಂಪಿ ಅರಣ್ಯಾಧಿಕಾರಿಗಳ ವಿರುದ್ಧ FIR

  • 9 ಜನರ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿಯನ್ನು ಹೊಡೆದು ಕೊಂದ ಗ್ರಾಮಸ್ಥರು

    9 ಜನರ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿಯನ್ನು ಹೊಡೆದು ಕೊಂದ ಗ್ರಾಮಸ್ಥರು

    ಲಕ್ನೋ: 9 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಹೆಣ್ಣು ಹುಲಿಯನ್ನು ಗ್ರಾಮಸ್ಥರು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶ ಫಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

    ಹತ್ಯೆಯಾದ ಹೆಣ್ಣು ಹುಲಿ ಸುಮಾರು 5ರಿಂದ 6 ವರ್ಷದ್ದಾಗಿದೆ. ಈ ಹುಲಿ ಫಿಲಿಭಿತ್ ಜಿಲ್ಲೆಯ ಮಟೈನಾ ಗ್ರಾಮದಲ್ಲಿ ಕಳೆದ ಬುಧವಾರ 9 ಜನರ ಮೇಲೆ ದಾಳಿ ಮಾಡಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೆ ಗುರುವಾರವೂ 19 ವರ್ಷ ಶ್ಯಾಮ ಮೊಹನ್ ಮೇಲೆ ದಾಳಿ ಮಾಡಿತ್ತು.

    ಹುಲಿಯ ನಿರಂತರ ದಾಳಿಯಿಂದ ಬೇಸತ್ತ ಗ್ರಾಮಸ್ಥರು ಅದನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಗುರುವಾರ ಅರಣ್ಯ ಪ್ರದೇಶವನ್ನು ಸುತ್ತುವರಿದ ಗ್ರಾಮಸ್ಥರು ಹುಲಿಗಾಗಿ ಹುಡುಕಾಟ ನಡೆಸಿದ್ದರು. ದುರಾದೃಷ್ಟವಶಾತ್ ಹುಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಹುಲಿ ಪ್ರಾಣ ಬಿಟ್ಟಿತ್ತು.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿ ರಾಜಮೋಹನ್ ಅವರು, ಗ್ರಾಮಸ್ಥರು ಈಟಿಗಳಿಂದ ತಿವಿದಿದ್ದರಿಂದ ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಜೊತೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಪಕ್ಕೆಲುಬು ಮುರಿದಿದ್ದವು. ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಹುಲಿ ಸಾವನ್ನಪ್ಪಿತ್ತು. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.