Tag: Tiger Zinda Hai

  • ಸಲ್ಮಾನ್ ವರ್ಸಸ್ ಸಲ್ಮಾನ್: ದಾಖಲೆ ಬರೆದ ‘ಟೈಗರ್ ಜಿಂದಾ ಹೈ’

    ಸಲ್ಮಾನ್ ವರ್ಸಸ್ ಸಲ್ಮಾನ್: ದಾಖಲೆ ಬರೆದ ‘ಟೈಗರ್ ಜಿಂದಾ ಹೈ’

    ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ಟೈಗರ್ ಜಿಂದಾ ಹೈ’ ಚಿತ್ರ ಕಳೆದ ಶುಕ್ರವಾರ ತೆರೆಕಂಡಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದೆ. ಅಭಿಮಾನಿ ಪ್ರಭುಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುವ ಜೊತೆಗೆ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಳ್ಳುತ್ತಿದೆ.

    ಈಗಾಗಲೇ ಬಿಡುಗಡೆಗೊಂಡಿರುವ ಸಲ್ಮಾನ್ ನಟನೆಯ ಎಲ್ಲ ಚಿತ್ರಗಳ ದಾಖಲೆಗಳನ್ನು ಟೈಗರ್ ಜಿಂದಾ ಹೈ ಅಳಿಸಿ ಹಾಕಿದೆ. ಈ ಹಿಂದೆ ತೆರೆಕಂಡಿದ್ದ ‘ಸುಲ್ತಾನ್’ ಮೂರು ದಿನಗಳಲ್ಲಿ 105 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಆದ್ರೆ ಇದೀಗ ಟೈಗರ್ ಜಿಂದಾ ಹೈ ಸಿನಿಮಾ ಮೂರೇ ದಿನಗಳಲ್ಲಿ 114 ಕೋಟಿಗೂ ಅಧಿಕ ಹಣವನ್ನು ದೋಚಿದೆ. ಈ ಸಿನಿಮಾ ಸಲ್ಮಾನ್ ಖಾನ್ ಅಭಿನಯದ 100 ಕೋಟಿ ಗಳಿಸಿರುವ ಚಿತ್ರಗಳ ಪಟ್ಟಿಯಲ್ಲಿ ಸೇರಿರುವ 12ನೇ ಫಿಲ್ಮ್ ಆಗಿದೆ.

    ಅಭೂತಪೂರ್ವ ಯಶಸ್ಸು ಕಂಡಿದ್ದ ‘ಭಜರಂಗಿ ಭಾಯಿಜಾನ್’ ಮೂರು ದಿನಗಳಲ್ಲಿ 102 ಕೋಟಿ ರೂ. ಮತ್ತು ಟ್ಯೂಬ್‍ಲೈಟ್ 64 ಕೋಟಿ ರೂ. ಯನ್ನು ಕೊಳ್ಳೆ ಹೊಡೆದಿತ್ತು. ಹಾಗಾಗಿ ಸಲ್ಮಾನ್ ತಮ್ಮ ದಾಖಲೆಯನ್ನು ತಾವೇ ಬ್ರೇಕ್ ಮಾಡಿದ್ದಾರೆ. ಇನ್ನೂ ಭಜರಂಗಿ ಭಾಯಿಜಾನ್ ಮತ್ತು ಸುಲ್ತಾನ್ 300 ಕೋಟಿ ಕ್ಲಬ್ ನ್ನು ಸೇರಿದ್ದು, ಟೈಗರ್ ಜಿಂದಾ ಹೈ ಕೂಡ 300 ಕೋಟಿ ಕ್ಲಬ್ ಸೇರಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಇದನ್ನೂ ಓದಿ: ಬಾಹುಬಲಿಯ ಈ ದಾಖಲೆಯನ್ನು ಮುರಿದ `ಟೈಗರ್ ಜಿಂದಾ ಹೈ`

    ಐಸಿಸ್ ಉಗ್ರರಿಂದ ಸೆರೆಯಾಗಿರುವ ಭಾರತ ಮತ್ತು ಪಾಕಿಸ್ತಾನಿ ನರ್ಸ್ ಗಳನ್ನು ರಕ್ಷಿಸುವ ಕಥಾ ಹಂದರವನ್ನು ಸಿನಿಮಾ ಹೊಂದಿದೆ. ಸಲ್ಮಾನ್ ಮತ್ತು ಕತ್ರೀನಾ ಇಬ್ಬರೂ ಮಿಷನ್ ನಲ್ಲಿ ಭಾಗಿಯಾಗಿ ನರ್ಸ್ ಗಳನ್ನು ರಕ್ಷಿಸುವಾಗಿನ ಆ್ಯಕ್ಷನ್ ಸೀನ್ ಗಳು ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 2012ರಲ್ಲಿ ತೆರೆಕಂಡಿದ್ದ ಬ್ಲಾಕ್ ಬಾಸ್ಟರ್ ‘ಏಕ್ ಥಾ ಟೈಗರ್’ ಸಿನಿಮಾದ ಮುಂದುವರೆದ ಭಾಗವೇ ‘ಟೈಗರ್ ಜಿಂದಾ ಹೈ. ಎರಡು ದೇಶಗಳ ಗೂಢಾಚಾರಿಗಳಾಗಿರುವ ಸಲ್ಮಾನ್(ಭಾರತ) ಮತ್ತು ಕತ್ರೀನಾ (ಪಾಕಿಸ್ತಾನ) ಮಧ್ಯೆ ಪ್ರೇಮಾಂಕುರವಾಗುತ್ತದೆ. ನಂತರ ತಮ್ಮ ದೇಶಗಳಿಂದ ವಿರೋಧ ವ್ಯಕ್ತವಾದಾಗ ಇಬ್ಬರೂ ಸ್ವದೇಶವನ್ನು ತೊರೆದು ಪಲಾಯಣಗೊಳ್ಳುವ ಕಥೆಯನ್ನು ಮೊದಲ ಭಾಗ ಹೊಂದಿತ್ತು. ಎರಡನೇ ಭಾಗದಲ್ಲಿ ಎರಡು ದೇಶಗಳ ಗೂಢಾಚಾರಿಗಳು ಒಟ್ಟಾಗಿ ಮಿಷನ್ ಆಪರೇಷನ್ ಕಥೆಯನ್ನು ನೋಡಬಹುದು.

    ಸಿನಿಮಾದಲ್ಲಿ ಸಲ್ಮಾನ್, ಕತ್ರೀನಾ ಮುಖ್ಯ ಭೂಮಿಕೆಯಲ್ಲಿ ಮಿಂಚಿದರೆ, ಕನ್ನಡಿಗ ಗಿರೀಶ್ ಕಾರ್ನಾಡ್ ವಿಶೇಷ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಸಿನಿಮಾಗೆ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಯಶಸ್ಸಿನ ಬಳಿಕ ಚಿತ್ರತಂಡ ಕ್ರಿಸ್‍ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದೆ.

  • ಬಾಹುಬಲಿಯ ಈ ದಾಖಲೆಯನ್ನು ಮುರಿದ `ಟೈಗರ್ ಜಿಂದಾ ಹೈ`

    ಬಾಹುಬಲಿಯ ಈ ದಾಖಲೆಯನ್ನು ಮುರಿದ `ಟೈಗರ್ ಜಿಂದಾ ಹೈ`

    ಮುಂಬೈ: ದಾಖಲೆಗಳು ಇರೋದೇ ಅವುಗಳನ್ನು ಮುರಿಯೋದಕ್ಕೆ ಎಂಬ ಮಾತಿದೆ. ಭಾರತೀಯ ಸಿನಿ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಬಾಹುಬಲಿ-2 ಸಿನಿಮಾದ ದಾಖಲೆಯೊಂದನ್ನು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ `ಟೈಗರ್ ಜಿಂದಾ ಹೈ’ ಸಿನಿಮಾ ಬ್ರೇಕ್ ಮಾಡಿದೆ.

    ಹೌದು. ನವೆಂಬರ್ 6, ಸೋಮವಾರದಂದು ಟೈಗರ್ ಜಿಂದಾ ಹೈ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡು ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಕೇವಲ ಐದು ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಲೈಕ್ ಪಡೆದಿದೆ. ಬಾಹುಬಲಿ-2 ಸಿನಿಮಾದ ಹಿಂದಿ ಅವತರಣಿಕೆಯ ಟ್ರೇಲರ್ ಇದೂವರೆಗೂ 5 ಲಕ್ಷ 41 ಸಾವಿರ ಲೈಕ್ ಪಡೆದಿದೆ. ಮಾರ್ಚ್ 15ರಂದು ರಿಲೀಸ್ ಆಗಿದ್ದ ಬಾಹುಬಲಿ ಅಂದಿನಿಂದ ಇಂದಿನವರೆಗೂ 541K ಲೈಕ್ಸ್ ಪಡೆದಿದೆ.

    ಯೂಟ್ಯೂಬ್ ನಲ್ಲಿ ಟೈಗರ್ ಜಿಂದಾ ಹೈ ಸಿನಿಮಾದ ಟ್ರೇಲರ್ ನಂಬರ್ 2 ಟ್ರೆಂಡಿಂಗ್ ನಲ್ಲಿದೆ. ಆ್ಯಕ್ಷನ್ ಮತ್ತು ಥ್ರಿಲ್ಲರ್ ಗಳಿಂದ ಕೂಡಿರುವ ಟ್ರೇಲರ್ ಸಖತ್ ಥ್ರಿಲ್ ನೀಡುತ್ತದೆ. 2012ರಲ್ಲಿ ತೆರೆಕಂಡಿದ್ದ ಬ್ಲಾಕ್ ಬಾಸ್ಟರ್ ಸಿನಿಮಾ `ಏಕ್ ಥಾ ಟೈಗರ್’ ಚಿತ್ರದ ಮುಂದುವರಿದ ಭಾಗವೇ ಈ ಸಿನಿಮಾ. ಉಗ್ರರು ಭಾರತದ 25 ಮಹಿಳಾ ನರ್ಸ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಉಗ್ರರ ಬಂಧನದಲ್ಲಿರುವ ಭಾರತೀಯ ಮಹಿಳಾ ನರ್ಸ್ ಗಳನ್ನು ಸ್ವದೇಶಕ್ಕೆ ಕರೆತರಲು ಭಾರತ ದೇಶ ಸಲ್ಮಾನ್ ಖಾನ್ (ಟೈಗರ್)ರನ್ನು ನೇಮಿಸುತ್ತದೆ. ಸಲ್ಮಾನ್ ಹೊಸ ಮಿಷನ್ ಗೆ ಕತ್ರೀನಾ (ಸೋಯಾ) ಕೂಡ ಸಾಥ್ ನೀಡುತ್ತಾರೆ. ಈ ಮಿಷನ್ ಬೇಧಿಸುವ ಕಥೆಯನ್ನು ಟೈಗರ್ ಜಿಂದಾ ಹೈ ಹೊಂದಿದೆ.

    ಸಿನಿಮಾದಲ್ಲಿ ಕನ್ನಡಿಗ ಗಿರೀಶ್ ಕಾರ್ನಾಡ್ ಸಹ ಕಾಣಿಸಿಕೊಂಡಿದ್ದಾರೆ. ಇತ್ತ ಟ್ರೇಲರ್ ನಲ್ಲಿ ಸಲ್ಮಾನ್ ಮತ್ತು ಕತ್ರಿನಾ ಆ್ಯಕ್ಷನ್ ಸೀನ್ ಗಳಲ್ಲಿ ಕಾಣಿಸುವುದರ ಜೊತೆಗೆ ರೊಮ್ಯಾಂಟಿಕ್ ಆಗಿಯೂ ಮಿಂಚಿದ್ದಾರೆ. ಟೈಗರ್ ಜಿಂದಾ ಹೈ ಚಿತ್ರಕ್ಕೆ ಅಲಿ ಅಬ್ಬಾಸ್ ಜಫರ್ ನಿರ್ದೇಶನವಿದೆ. ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ.

     

  • ಐಸಿಸ್ ಉಗ್ರರ ವಿರುದ್ಧ ಸಲ್ಮಾನ್ ಸೆಣಸಾಟ

    ಐಸಿಸ್ ಉಗ್ರರ ವಿರುದ್ಧ ಸಲ್ಮಾನ್ ಸೆಣಸಾಟ

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ` ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್‍ನಲ್ಲಿ ಆ್ಯಕ್ಷನ್ ಗಳಿಗೇನೂ ಕಡಿಮೆಯಿಲ್ಲ. ಆ್ಯಕ್ಷನ್ ಪ್ರಿಯರಿಗೆ ಈ ಸಿನಿಮಾ ಬಾಲಿವುಡ್‍ನ ಫೇವರೇಟ್ ಫಿಲ್ಮ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

    `ಏಕ್ ಥಾ ಟೈಗರ್’ ಸಿನಿಮಾ ನೋಡಿರುವ ಅಭಿಮಾನಿಗಳಿಗೆ `ಟೈಗರ್ ಜಿಂದಾ ಹೈ’ ಟ್ರೇಲರ್ ನಲ್ಲಿ ಕಥೆ ಅರ್ಥವಾಗುತ್ತದೆ. ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಇಬ್ಬರೂ ಭಾರತ ಹಾಗು ಪಾಕಿಸ್ತಾನ ರಾಷ್ಟ್ರಗಳ ಸಿಕ್ರೇಟ್ ಏಜೆಂಟ್ ಗಳಾಗಿರುತ್ತಾರೆ. ಒಂದು ಟಾಸ್ಕ್ ನಲ್ಲಿ ಇಬ್ಬರಿಗೂ ಲವ್ ಆಗುತ್ತದೆ. ಎರಡು ದೇಶಗಳ ವಿರೋಧದ ನಡುವೆಯೂ ಇಬ್ಬರೂ ತಮ್ಮ ತಮ್ಮ ದೇಶಗಳನ್ನು ತೊರೆದು ಬೇರೆ ದೇಶಗಳತ್ತ ಸಾಗುತ್ತಾರೆ. ನಂತರ ಭಾರತ ಮತ್ತು ಪಾಕಿಸ್ತಾನ ದೇಶಗಳ ಏಜೆಂಟ್‍ಗಳು ಇವರಿಬ್ಬರ ಬಂಧನಕ್ಕಾಗಿ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ ಇದೆಲ್ಲಾ ಏಕ್ ಥಾ ಟೈಗರ್ ಕಥೆ. ಈ ಸಿನಿಮಾದ ಮುಂದುವರೆದ ಭಾಗವೇ ಟೈಗರ್ ಜಿಂದಾ ಹೈ.

    ಹೊಸ ಟ್ರೇಲರ್ ಸಾಕಷ್ಟು ಹೊಸತನವನ್ನು ಹೊಂದಿದ್ದು, ಪ್ರಚಲಿತ ವಿದ್ಯಮಾನಗಳೊಂದಿಗೆ ತುಳುಕು ಹಾಕಿಕೊಂಡಿದೆ. ಐಸಿಸ್ ಉಗ್ರರು ಭಾರತದ 25 ಮಹಿಳಾ ನರ್ಸ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಆದರೆ ಇಂತಹ ಕ್ರೂರತ್ವದ ವ್ಯಕ್ತಿಗಳಿಂದ ನಮ್ಮವರನ್ನು ಅವರಿಂದ ಕರೆತರಲು ಭಾರತ ದೇಶ ಸಲ್ಮಾನ್ ಖಾನ್ (ಟೈಗರ್)ರನ್ನು ನೇಮಿಸುತ್ತದೆ. ಸಲ್ಮಾನ್ ಹೊಸ ಮಿಷನ್ ಗೆ ಕತ್ರೀನಾ (ಸೋಯಾ) ಕೂಡ ಸಾಥ್ ನೀಡುತ್ತಾಳೆ. ಈ ಮಿಷನ್ ಬೇಧಿಸುವ ಕಥೆಯನ್ನು ಟೈಗರ್ ಜಿಂದಾ ಹೈ ಹೊಂದಿದೆ.

    ಟ್ರೇಲರ್ ನಲ್ಲಿ ಮಧ್ಯೆ ಮಧ್ಯೆ ಪಂಚಿಂಗ್ ಡೈಲಾಗ್ ಗಳಿದ್ದು, ನೋಡುಗರಲ್ಲಿ ರೋಮಾಂಚನವನ್ನು ಉಂಟು ಮಾಡುತ್ತವೆ. ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್ ಸಹ ಕಾಣಿಸಿಕೊಂಡಿದ್ದಾರೆ. ಇತ್ತ ಟ್ರೇಲರ್ ನಲ್ಲಿ ಸಲ್ಮಾನ್ ಮತ್ತು ಕತ್ರಿನಾ ಆ್ಯಕ್ಷನ್ ಸೀನ್ ಗಳಲ್ಲಿ ಕಾಣಿಸುವುದರ ಜೊತೆಗೆ ರೊಮ್ಯಾಂಟಿಕ್ ಆಗಿಯೂ ಮಿಂಚಿದ್ದಾರೆ.

    ಟೈಗರ್ ಜಿಂದಾ ಹೈ ಚಿತ್ರದ ಮೊದಲ ಲುಕ್ ನಲ್ಲಿ, `ನೋ ಒನ್ ಹಂಟ್ಸ್ ಉಡೆಂಡ್ ಟೈಗರ್’ (ಗಾಯವಾದ ಹುಲಿಯನ್ನು ಯಾರು ಬೇಟೆ ಆಡೋಕೆ ಆಗಲ್ಲ) ಎಂದು ಬರೆಯಲಾಗಿತ್ತು. ಅಲಿ ಅಬ್ಬಾಸ್ ಜಫರ್ ಟೈಗರ್ ಜಿಂದಾ ಹೈ ಚಿತ್ರಕ್ಕೆ ನಿರ್ದೇಶನವಿದೆ. ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ.

     

  • ದೀಪಾವಳಿಗೆ ಚಿತ್ರದ ಫಸ್ಟ್ ಲುಕ್ ಅನ್ನು ಉಡುಗೊರೆಯಾಗಿ ನೀಡಿದ ಸಲ್ಮಾನ್!

    ದೀಪಾವಳಿಗೆ ಚಿತ್ರದ ಫಸ್ಟ್ ಲುಕ್ ಅನ್ನು ಉಡುಗೊರೆಯಾಗಿ ನೀಡಿದ ಸಲ್ಮಾನ್!

    ಮುಂಬೈ: ಈ ವರ್ಷದ ಬಹು ನಿರೀಕ್ಷಿತ ‘ಟೈಗರ್ ಜಿಂದಾ ಹೈ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ದೀಪಾವಳಿ ಹಬ್ಬದಂದು ಸಲ್ಮಾನ್ ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದ್ದಾರೆ.

    ಟೈಗರ್ ಜಿಂದಾ ಹೈ ಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದ್ದು, `ನೋ ಒನ್ ಹಂಟ್ಸ್ ಉಡೆಂಡ್ ಟೈಗರ್’ (ಗಾಯವಾದ ಹುಲಿಯನ್ನು ಯಾರು ಬೇಟೆ ಆಡೋಕೆ ಆಗಲ್ಲ) ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಯಶ್ ರಾಜ್ ಫಿಲ್ಮಂನಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಸೀನ್ ಹಾಗೂ ಸ್ಟಂಟ್ ಗಳಿದ್ದು, ಹಾಲಿವುಡ್ ನ ಸ್ಟಂಟ್ ಮಾಸ್ಟರ್ ಟಾಮ್ ಸ್ತೂತರ್ಸ್ ಆಕ್ಷನ್ ಸೀನ್ ಮಾಡಿಸಲಿದ್ದಾರೆ. ಈ ಚಿತ್ರದಲ್ಲಿ ನಾಯಕ-ನಾಯಕಿ ಇಬ್ಬರು ಸರಿಸಮಾನವಾಗಿ ಸ್ಟಂಟ್ ಮಾಡಲಿದ್ದಾರೆ.

    ಟೈಗರ್ ಜಿಂದಾ ಹೈ ಚಿತ್ರಕ್ಕಾಗಿ ಕತ್ರಿನಾ ಹೊಸ ಡ್ಯಾನ್ಸ್ ಫಾರ್ಮ್ ಕಲಿತಿದ್ದು, ಈ ಚಿತ್ರದಲ್ಲಿ ಪ್ರಮೋಶನಲ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಅಲಿ ಅಬ್ಬಾಸ್ ಜಫರ್ ಟೈಗರ್ ಜಿಂದಾ ಹೈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, 2012ರ ಏಕ್ ಥಾ ಟೈಗರ್ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಕತ್ರಿನಾ ಅವರ ಚಿತ್ರದ ಫಸ್ಟ್ ಲುಕ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಸಲ್ಮಾನ್ ಜೊತೆ ನಟಿಸಿದ್ದಕ್ಕೆ ಸುದೀಪ್‍ಗೆ ಭಾರೀ ಸಂಭಾವನೆ?

    ಸಲ್ಮಾನ್ ಜೊತೆ ನಟಿಸಿದ್ದಕ್ಕೆ ಸುದೀಪ್‍ಗೆ ಭಾರೀ ಸಂಭಾವನೆ?

    ಮುಂಬೈ: ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೈ’ ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಸುದ್ದಿ ಮಾಡುತ್ತಿದೆ. ಆದರೆ ಈ ಚಿತ್ರದ ಖಳನಟನ ಪಾತ್ರಕ್ಕೆ ಸೌತ್‍ನ ಸೂಪರ್ ಸ್ಟಾರ್ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಅದು ಬೇರೆ ಯಾರೂ ಅಲ್ಲ ಕಿಚ್ಚ ಸುದೀಪ್.

    ಹೌದು. ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸುದೀಪ್ ಖಳನಟನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ರೂ. 6 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಚಿತ್ರದಲ್ಲಿ ಪ್ರಕಾಶ್ ರೈ ಕೂಡ ಖಳನಟರಾಗಿ ಕಾಣಿಸಿಕೊಳ್ಳಲಿದ್ದು, ಅವರು ರೂ. 2 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿಸಿದೆ.

    ಸಂಭಾವನೆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್ಸ್ ಗಳಿದ್ದು, ಹಾಲಿವುಡ್ ನ ಸ್ಟಂಟ್ ಮಾಸ್ಟರ್ ಆದ ಟಾಮ್ ಸ್ಟ್ರೂಟ್ಟರ್ಸ್ ಸ್ಟಂಟ್ಸ್ ಮಾಡಿಸಲಿದ್ದಾರೆ.

    ‘ಟೈಗರ್ ಜಿಂದಾ ಹೈ’ ಚಿತ್ರ 2012ರಲ್ಲಿ ಬಿಡುಗಡೆಯಾದ ‘ಏಕ್ ಥಾ ಟೈಗರ್’ ಚಿತ್ರದ ಸೀಕ್ವೇಲ್ ಆಗಿದ್ದು, ಕತ್ರಿನಾ ಕೈಫ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಕ್ರಿಸ್ ಮಸ್ ಹಬ್ಬದಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

  • ಅಬುದಾಬಿಯಲ್ಲಿ ಸಲ್ಮಾನ್ ಖಾನ್‍ಗೆ ಗಾಯ!

    ಅಬುದಾಬಿಯಲ್ಲಿ ಸಲ್ಮಾನ್ ಖಾನ್‍ಗೆ ಗಾಯ!

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೇ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೊನೆಯ ಭಾಗವನ್ನು ಅಬು ದಾಬಿಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್‍ಗಳಿದ್ದು ಜನರಿಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

    ಹಾಲಿವುಡ್‍ನ ಸಾಹಸ ನಿರ್ದೇಶಕ ಟಾಮ್ ಸ್ಟ್ಯೂಟರ್ಸ್ ಈ ಚಿತ್ರಕ್ಕೆ ಆಕ್ಷನ್ ಸೀನ್ ಗಳನ್ನು ಮಾಡಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಹಾಗೂ ಕತ್ರಿನಾ ಇಬ್ಬರೂ ಆಶ್ಚರ್ಯಪಡುವಂತೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಏಕ್ ಥಾ ಟೈಗರ್ ನಲ್ಲಿ ಈ ಹಾಟ್ ಜೋಡಿ ಜೊತೆಯಾಗಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದರು.

    ಚಿತ್ರದ ಚಿತೀಕರಣ ಮಾಡುವಾಗ ಸಲ್ಮಾನ್ ಖಾನ್‍ನ ಗಾಯಗೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಆತಂಕಗೊಂಡಿದ್ದಾರೆ. ಸಲ್ಲುವಿಗೆ ನಿಜವಾಗಿ ಗಾಯಗೊಂಡಿದ್ದಾರಾ ಅಥವಾ ಸಿನಿಮಾದ ಒಂದು ಭಾಗ ಎನ್ನುವುದು ಸರಿಯಾದ ಮಾಹಿತಿ ತಿಳಿದು ಬಂದಿಲ್ಲ.

    ‘ಟೈಗರ್ ಜಿಂದಾ ಹೈ’ ಸಿನಿಮಾ 2012 ರ ಚಿತ್ರ ‘ಏಕ್ ಥಾ ಟೈಗರ್’ ಸಿಕ್ವೇಲ್ ಆಗಿದೆ. ಈ ಸಿನಿಮಾವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶಿಸಿದ್ದಾರೆ ಹಾಗೂ ‘ಏಕ್ ಥಾ ಟೈಗರ್’ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದರು.

  • ಮತ್ತೆ ಲವ್‍ನಲ್ಲಿ ಬಿದ್ದ ಸಲ್ಮಾನ್, ಕತ್ರಿನಾ: ಹೇಗಂತೀರಾ ಈ ಸ್ಟೋರಿ ಓದಿ

    ಮತ್ತೆ ಲವ್‍ನಲ್ಲಿ ಬಿದ್ದ ಸಲ್ಮಾನ್, ಕತ್ರಿನಾ: ಹೇಗಂತೀರಾ ಈ ಸ್ಟೋರಿ ಓದಿ

    ಮುಂಬೈ: ಬಾಲಿವುಡ್ ನಟ-ನಟಿಯರ ನಡುವೆ ಅಫೆರ್ ಗಳು ಶುರುವಾಗುತ್ತೆ. ನಂತರ ಅವರ ಮಧ್ಯೆ ಬ್ರೇಕ್ ಅಪ್ ಕೂಡ ಆಗುತ್ತದೆ. ಕೆಲವು ಸ್ಟಾರ್‍ಗಳ ಬ್ರೇಕ್ ಅಪ್ ಆದರೂ ಮತ್ತೆ ಗೆಳೆಯರಾಗಿ ಮುಂದುವರೆಯುತ್ತಾರೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ ಮತ್ತೆ ಪ್ರೀತಿ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಈಗ ಕೇಳಿಬಂದಿದೆ.

    ಹೌದು. ಸಲ್ಮಾನ್ ಖಾನ್ ಜೊತೆ ಈ ಹಿಂದೆ ನಟಿಸಿದ ಚಿತ್ರದಲ್ಲಿ ಕತ್ರಿನಾ ಗೀಟಾರ್ ಹಿಡಿದುಕೊಂಡು ಪ್ರೀತಿಯ ಹಾಡು ಹಾಡಿದ್ದರು. ಈಗ ಈ ಸಂಗತಿ ಮತ್ತೆ ಮರುಕಳಿಸಿದೆ. ರಣ್‍ಬೀರ್ ಕಪೂರ್ ಗಾಗಿ ಸಲ್ಮಾನ್ ನನ್ನು ಬಿಟ್ಟು ಹೋದ ಕತ್ರಿನಾ ಈಗ ಸಲ್ಮಾನ್ ಜೀವನದಲ್ಲಿ ಮತ್ತೇ ಎಂಟ್ರಿ ಕೊಟ್ಟಿದ್ದಾರೆ. ರಣ್‍ಬೀರ್ ಜೊತೆ ಬ್ರೇಕ್ ಅಪ್ ನಂತರ ಕತ್ರಿನಾ ಮತ್ತೇ ಸಲ್ಮಾನ್‍ನ ವಿಶೇಷ ಗೆಳತಿಯಾಗಿದ್ದಾರೆ. ಈಗ ಇವರಿಬ್ಬರು ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.

    ಸಲ್ಮಾನ್ ಹಾಗೂ ಲೂಲಿಯಾ ನಡುವೆ ಭಿನ್ನಭಿಪ್ರಾಯ ಬಂದಿದ್ದು, ಅದಕ್ಕೆ ಕಾರಣ ಕತ್ರಿನಾ ಕೈಫ್ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ನಟಿ ಕತ್ರಿನಾ ಹಾಗೂ ಅವರ ಎಕ್ಸ್-ಬಾಯ್‍ಫ್ರೆಂಡ್ ಸಲ್ಮಾನ್ ಜೊತೆ ಲಿವ್-ಇನ್-ರಿಲೇಶನ್‍ಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

    ಈ ನಡುವೆ ಸಲ್ಮಾನ್‍ನ ಗರ್ಲ್ ಫ್ರೆಂಡ್ ಲೂಲಿಯಾ ತನ್ನ ಬಾಯ್ ಫ್ರೆಂಡ್ ಕತ್ರಿನಾ ಜೊತೆ ಹತ್ತಿರವಾಗುತ್ತಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ನನ್ನ ಜೊತೆ ಹೆಚ್ಚು ಸಮಯ ಕಳೆಯುತ್ತಿಲ್ಲ ಎಂದು ಲೂಲಿಯಾ ತಿಳಿಸಿದ್ದಾರೆ ಎನ್ನಲಾಗಿದೆ.

    ಲೂಲಿಯಾ ಮೊದಲು ಸಲ್ಮಾನ್ ನಟಿಸುತ್ತಿದ್ದ ಎಲ್ಲಾ ಸಿನಿಮಾ ಸೆಟ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಲೂಲಿಯಾ ಸಲ್ಮಾನ್ ಚಿತ್ರದ ಯಾವುದೇ ಸಿನಿಮಾ ಸೆಟ್‍ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸಲ್ಮಾನ್ ಈಗ ಕತ್ರಿನಾ ಕಡೆ ತುಂಬಾ ಗಮನ ಕೊಡುತ್ತಿದ್ದು ಅವರ ನಡುವೆ ಮತ್ತೆ ಪ್ರೀತಿ-ಪ್ರೇಮ ಶುರುವಾಗಿದೆ ಎನ್ನುವ ಮಾತು ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.

     

    ಸದ್ಯಕ್ಕೆ ಸಲ್ಮಾನ್ ಹಾಗೂ ಕತ್ರಿನಾ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ವರ್ಷದ ಕೊನೆಯಲ್ಲಿ ಬಿಡುಗಡೆ ಆಗಲಿದೆ.