Tag: Tiger nail

  • 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ

    2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ

    ಚಿಕ್ಕಮಗಳೂರು: ಹುಲಿ ಉಗುರುಗೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ಸಂತೋಷ್ (Bigg Boss Santhosh) ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ ಬೆನ್ನಲ್ಲೇ ಇದೀಗ ಲಾಕೆಟ್, ಚರ್ಮ ಬಳಕೆ ಮಾಡಿದ ಆರೋಪದ ಮೇಲೆ ಎಲ್ಲರ ಫೋಟೋ ವೀಡಿಯೋಗಳು ಒಂದೊಂದಾಗಿಯೇ ಹೊರಗೆ ಬರುತ್ತಿವೆ. ಅಂತೆಯೇ ವಿನಯ್ ಗುರೂಜಿ (Vinay Guruji) ಅವರು ಕೂಡ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ವಿನಯ್ ಗುರೂಜಿ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಆಶ್ರಮದಿಂದ ಸ್ಪಷ್ಟನೆ ಕೊಡಲಾಗಿದೆ. 2 ವರ್ಷದ ಹಿಂದೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎಂಬವರು ವಿನಯ್ ಗುರೂಜಿಗೆ ಉಡುಗೊರೆ ನೀಡಿದ್ದರು. ಕಿರೀಟಿಯವರು ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಉಡುಗೊರೆ ನೀಡಿದ್ದರು. ಅಮರೇಂದ್ರ ಅವರ ತಂದೆ ಕಾಲದಿಂದಲೂ ಹುಲಿ ಚರ್ಮ ಮನೆಯಲ್ಲಿತ್ತು. ಆ ಹುಲಿ ಚರ್ಮವನ್ನ ವಿನಯ್ ಗುರೂಜಿಗೆ ನೀಡಿದ್ದರು. ಇದನ್ನೂ ಓದಿ: ಹುಲಿ ಉಗುರು ಕಂಟಕ: ದರ್ಶನ್, ಜಗ್ಗೇಶ್, ನಿಖಿಲ್ ಕ್ರಮಕ್ಕೆ ಒತ್ತಾಯ

    ಈ ಹಿಂದೆಯೂ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ವೈರಲ್ ಆಗಿತ್ತು. ಹೀಗಾಗಿ 2022 ರಲ್ಲಿ ಅದನ್ನ ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ ಎನ್ನುವ ಮೂಲಕ ಹುಲಿ ಚರ್ಮದ ಬಗ್ಗೆ ಸ್ಪಷ್ಟನೆ ಕೊಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ಲಕ್ಷ ಮೌಲ್ಯದ ಹುಲಿ ಉಗುರು, ಹಲ್ಲು, ಮೂಳೆ ವಶ – ಇಬ್ಬರ ಬಂಧನ

    10 ಲಕ್ಷ ಮೌಲ್ಯದ ಹುಲಿ ಉಗುರು, ಹಲ್ಲು, ಮೂಳೆ ವಶ – ಇಬ್ಬರ ಬಂಧನ

    – ಲೈಂಗಿಕ ಶಕ್ತಿ ವೃದ್ಧಿಗೆ ಔಷಧಿಯಾಗಿ ಬಳಕೆ
    – ವಿದೇಶದಲ್ಲಿ ಭಾರೀ ಬೇಡಿಕೆ

    ಚಿಕ್ಕಮಗಳೂರು: ನಗರದ ರೈಲ್ವೇ ನಿಲ್ದಾಣದ ಬಳಿ ಸ್ವಿಫ್ಟ್ ಕಾರಿನಲ್ಲಿ ಹುಲಿಯ ಉಗುರು, ಹಲ್ಲು ಹಾಗು ಮೂಳೆಗಳನ್ನ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನ ಹಾಸನ ಜಿಲ್ಲೆ ಅಂಬುಗ ಗ್ರಾಮದ ಲೋಕೇಶ್ ಹಾಗೂ ಚಿಕ್ಕಮಗಳೂರು ತಾಲೂಕಿನ ಅರಿಶಿನಗುಪ್ಪೆ ಗ್ರಾಮದ ಸಾಗರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 10 ಲಕ್ಷ ಮೌಲ್ಯದ ಎಂಟು ಹುಲಿ ಉಗುರು, ಒಂದು ಹುಲಿ ಚರ್ಮ, ಒಂದು ದೊಡ್ಡ ಕೋರೆ ಹಲ್ಲು ಹಾಗೂ ಹದಿನಾಲ್ಕು ಹಲ್ಲಿನ ಮೂಳೆಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರು ಹಾಗೂ ಬಂಧಿತರಿಂದ ವಶಪಡಿಕೊಂಡ ವಸ್ತುಗಳನ್ನ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.

    ಬಂಧಿತರನ್ನ ವಿಚಾರಣೆಗೆ ಒಳಪಡಿಸಿರೋ ಅಧಿಕಾರಿಗಳು ಈ ದಂಧೆಯಲ್ಲಿ ಇವರಿಬ್ಬರೇ ಇದ್ದಾರೋ ಅಥವಾ ಇದೊಂದು ತಂಡವೋ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾಕೆಂದರೆ ಇದು ಒಬ್ಬಿಬ್ಬರ ಕೈನಲ್ಲಿ ಆಗುವ ಕೆಲಸವಲ್ಲ ಎಂಬ ಅನುಮಾನ ಪೊಲೀಸರದ್ದು. ಹುಲಿಯ ಹಲ್ಲು, ಉಗುರು, ಚರ್ಮವನ್ನ ಎಲ್ಲಿಂದ ತಂದಿದ್ದಾರೆ. ಇವರೇ ಹುಲಿಯನ್ನ ಕೊಂದಿದ್ದಾರಾ ಅಥವ ಬೇರೆಯವರು ಕೊಂದು ಇವರಿಗೆ ಈ ವಸ್ತುಗಳನ್ನ ಕೊಟ್ಟಿದ್ದಾರಾ ಎಂಬ ಎಲ್ಲಾ ರೀತಿಯ ತನಿಖೆ ಕೈಗೊಂಡಿದ್ದಾರೆ.

    ಹುಲಿ ಸೇರಿದಂತೆ ಕಾಡುಪ್ರಾಣಿಗಳ ಮೂಳೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಹುಲಿ, ಜಿಂಕೆ ಸೇರಿದಂತೆ ಕಾಡುಪ್ರಾಣಿಗಳ ಮೂಳೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಸೌಂದರ್ಯವರ್ಧಕ, ಇಂಟಿರಿಯಲ್ ಡಿಸೈನ್‍ಗಳಿಗೂ ಇವುಗಳನ್ನ ಬಳಸುತ್ತಾರೆ. ಅದಕ್ಕಿಂತ ಮಿಗಿಲಾಗಿ ಲೈಂಗಿಕ ಶಕ್ತಿ ವೃದ್ಧಿಯಾಗಲು ಬಳಸುವ ಔಷಧಿಗಳಿಗೂ ಕಾಡುಪ್ರಾಣಿಗಳ ಮೂಳೆಗಳನ್ನ ಬಳಸುವುದರಿಂದ ಮಲೆನಾಡಲ್ಲಿ ಕಾಡುಪ್ರಾಣಿಗಳ ಭೇಟಿ ತಂಡ ಸಕ್ರಿಯವಾಗಿದ್ಯಾ ಎಂಬ ಅನುಮಾನ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳದ್ದು. ಹಾಗಾಗಿ ಇಷ್ಟು ದೊಡ್ಡ ಪ್ರಮಾಣದ ಹುಲಿಯ ವಸ್ತುಗಳನ್ನ ತಂದು ಮಾರಾಟ ಮಾಡಲು ಯತ್ನಿಸುತ್ತಿರುವ ಇವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.