Tag: Ticketless travel

  • ಟಿಕೆಟ್ ರಹಿತ ಪ್ರಯಾಣ: ಒಂದೇ ತಿಂಗಳಿನಲ್ಲಿ 8.67 ಲಕ್ಷ ರೂ. ದಂಡ ವಸೂಲಿ

    ಟಿಕೆಟ್ ರಹಿತ ಪ್ರಯಾಣ: ಒಂದೇ ತಿಂಗಳಿನಲ್ಲಿ 8.67 ಲಕ್ಷ ರೂ. ದಂಡ ವಸೂಲಿ

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ)ಯು ನವೆಂಬರ್ ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದ 6,522 ಮಂದಿ ಪ್ರಯಾಣಿಕರಿಂದ 8,67,425 ರೂ. ದಂಡ ವಸೂಲಿ ಮಾಡಲಾಗಿದೆ.

    ನಿಗಮದ ತನಿಖಾ ತಂಡಗಳು ನವೆಂಬರ್ ತಿಂಗಳಲ್ಲಿ ಬಸ್‍ಗಳ ಸುಮಾರು 47,476 ವಾಹನಗಳ ಟ್ರಿಪ್ ಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ ನಿಗಮ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 1,11,257 ರೂಪಾಯಿಯನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

    ಪ್ರಯಾಣಿಕರು ಟಿಕೆಟ್ ಅಥವಾ ಪಾಸ್ ಪಡೆದು ಬಸ್‍ನಲ್ಲಿ ಪ್ರಯಾಣಿಸಬೇಕು. ಒಂದು ವೇಳೆ ಟಿಕೆಟ್ ರಹಿತ ಪ್ರಯಾಣಿಸಿದರೆ ಟಿಕೆಟ್ ದರಕ್ಕಿಂತ 10 ಪಟ್ಟು ದಂಡ ವಿಧಿಸಲಾಗುತ್ತದೆ. ದಂಡದ ಗರಿಷ್ಠ ಮೊತ್ತವು 500 ಆಗಿರುತ್ತದೆ. ಹೀಗಾಗಿ ಟಿಕೆಟ್ ಪಡೆದು ಬಸ್‍ನಲ್ಲಿ ಪ್ರಯಾಣಿಸಿ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.