Tag: ticket rate

  • ಮೆಟ್ರೋ ದರ ಏರಿಕೆಯಿಂದ BMTCಗೆ ಬಂಪರ್ – ಆದಾಯ 7.25 ಕೋಟಿಗೆ ಏರಿಕೆ

    ಮೆಟ್ರೋ ದರ ಏರಿಕೆಯಿಂದ BMTCಗೆ ಬಂಪರ್ – ಆದಾಯ 7.25 ಕೋಟಿಗೆ ಏರಿಕೆ

    -ಪ್ರತಿನಿತ್ಯ 2 ಲಕ್ಷ ಪ್ರಯಾಣಿಕರ ಹೆಚ್ಚಳ, 35 ಲಕ್ಷ ರೂ. ಹೆಚ್ಚುವರಿ ಆದಾಯ

    ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ದರ ಏರಿಕೆ ಮಾಡಿದ್ದು, ನಮ್ಮ ಮೆಟ್ರೋಗೆ (Namma Matro) ಅನೂಕೂಲವಾಗುವುದಕ್ಕಿಂತ ಹೆಚ್ಚಾಗಿ ಬಿಎಂಟಿಸಿಗೆ (BMTC) ಭಾರಿ ಉಪಯೋಗ ಆಗಿದೆ. ಈ ಮೂಲಕ ಆದಾಯ 7.25 ಕೋಟಿ ರೂ.ಗೆ ಏರಿಕೆಯಾಗಿದೆ.

    ಹೌದು, ಮೆಟ್ರೋ, ಬಿಎಂಟಿಸಿ ಎರಡು ಕೂಡ ಬೆಂಗಳೂರಿನ (Bengaluru) ಸಂಚಾರ ಜೀವನಾಡಿ. ನಿತ್ಯ ನಗರದ ಲಕ್ಷಾಂತರ ಜನ ಬಳಕೆ ಮಾಡುವ ಸಾರಿಗೆ ಸಂಪರ್ಕ. ದಿನನಿತ್ಯ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ಸಾರಿಗೆಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಸಾರಿಗೆ ನಡುವೆ ನಗರದ ಹಲವು ಕಡೆ ಸಾಮಾನ್ಯವಾಗಿ ಪೈಪೋಟಿ ಇದೆ. ಆದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ನಮ್ಮ ಮೆಟ್ರೋ ಟಿಕೆಟ್ ದರ (Metro Ticket Fare) ಏರಿಕೆ ಮಾಡಿತ್ತು. ಇದ್ರಿಂದ ಕೊಂಚ ಹಿನ್ನಡೆ ಉಂಟಾಗಿದ್ದು, ಬಿಎಂಟಿಸಿಗೆ ಭಾರಿ ಲಾಭ ಬಂದಿದೆ.ಇದನ್ನೂ ಓದಿ: ನಂದಿಬೆಟ್ಟದಲ್ಲಿಂದು ಸಚಿವ ಸಂಪುಟ ಸಭೆ – ಬಯಲು ಸೀಮೆ ಜಿಲ್ಲೆಗಳಿಗೆ ಸಿಗುತ್ತಾ ಭರಪೂರ ಕೊಡುಗೆ?

    ಕಳೆದ ಫೆಬ್ರವರಿಯಲ್ಲಿ ದರ ಪರಿಷ್ಕರಣೆಯಾಗಿ ಮೆಟ್ರೋ ದರ ಹೆಚ್ಚಳವಾಗಿತ್ತು. ಇದರಿಂದ ಬಿಎಂಆರ್‌ಸಿಎಲ್‌ಗೆ ಆದಾಯ ಹೆಚ್ಚಳವಾಗಿದ್ದರೂ ಕೂಡ ರೈಡರ್ ಶಿಪ್‌ನಲ್ಲಿ ಇಳಿಮುಖ ಉಂಟಾಗಿದೆ. ಹೀಗಾಗಿ ಮೆಟ್ರೋ ಬಿಟ್ಟ ಪ್ರಯಾಣಿಕರು ಬಿಎಂಟಿಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಜೊತೆಗೆ ಕನೆಕ್ಟಿವಿಟಿ ವಿಚಾರದಲ್ಲಿ ಕೂಡ ಬಿಎಂಟಿಸಿ ಮುಂದೆ ಇದ್ದ ಕಾರಣ ಅನೇಕರು ಮತ್ತೆ ಬಿಎಂಟಿಸಿಯತ್ತ ಮುಖ ಮಾಡಿದ್ದರು. ಪರಿಣಾಮ ನಿತ್ಯ ಸಂಚಾರ ಮಾಡುತ್ತಿದ್ದ ಪ್ರಯಾಣಿಕರಿಗಿಂತ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಎಂಟಿಸಿಗೆ ನಿತ್ಯ 2 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

    ಇನ್ನೂ ಈ ಹಿಂದೆ ನಿತ್ಯ ಬಿಎಂಟಿಸಿಯಲ್ಲಿ ಸರಾಸರಿ 40 ಲಕ್ಷ ಪ್ರಯಾಣಿಕರ ಓಡಾಟ ಇತ್ತು. ನಿತ್ಯದ ಆದಾಯ 6.90 ಕೋಟಿ ರೂ. ಇತ್ತು. ಆದರೆ ಮೆಟ್ರೋ ದರ ಏರಿಕೆ ಬಳಿಕ ನಿತ್ಯ ಸರಾಸರಿ 42 ಲಕ್ಷ ಪ್ರಯಾಣಿಕರು ಹಾಗೂ ಆದಾಯದಲ್ಲಿ 7.25 ಕೋಟಿ ರೂ.ಗೆ ಏರಿಕೆ ಆಗಿದೆ. ಅಷ್ಟೇ ಅಲ್ಲ ಈ ಹಿಂದೆ ನಿತ್ಯ ನಗರದಲ್ಲಿ 6,900 ಬಸ್‌ಗಳಿಂದ 54 ಸಾವಿರ ಟ್ರಿಪ್ ಮಾಡಲಾಗುತ್ತಿತ್ತು. ಸದ್ಯ ಹೆಚ್ಚುವರಿ 2 ಸಾವಿರ ಡಿಪೋದಲ್ಲಿದ್ದ ಬಸ್‌ಗಳನ್ನ ಕೂಡ ರಸ್ತೆಗಿಳಿಸುವ ಮೂಲಕ 54 ಸಾವಿರ ಇದ್ದ ಟ್ರಿಪ್‌ಗಳನ್ನ 8 ಸಾವಿರ ಹೆಚ್ಚಳ ಮಾಡಿ, 62 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾದ ಕಾರಣ ಸದ್ಯ ಬಿಎಂಟಿಸಿ ಈ ನಿರ್ಧಾರಕ್ಕೆ ಬಂದಿದ್ದು, ಇದು ಮತ್ತಷ್ಟು ಲಾಭ ಹೆಚ್ಚಳಕ್ಕೂ ಕಾರಣವಾಗಿದೆ.

    ಒಟ್ಟಾರೆ ಬಿಎಂಟಿಸಿ ಮೆಟ್ರೋ ದರ ಏರಿಕೆಯ ಲಾಭ ಪಡೆದು ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಮೆಟ್ರೋದ ಉಳಿದ ಮಾರ್ಗಗಳು ಓಪನ್ ಆದ ಬಳಿಕವೂ ಹೀಗೆ ಪರಿಸ್ಥಿತಿ ಮುಂದುವರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಮಂಗಳೂರಿನ ಸಹಕಾರಿ ಬ್ಯಾಂಕ್‌ನಲ್ಲಿ `ಗೋಲ್ಡ್’ ಗೋಲ್‌ಮಾಲ್ – ಗ್ರಾಹಕರು ಅಡವಿಟ್ಟ ಚಿನ್ನವನ್ನೇ ಎಗರಿಸಿದ ಕ್ಯಾಷಿಯರ್

  • ಮಲ್ಟಿಪ್ಲೆಕ್ಸ್ ಟಿಕೆಟ್ ದರ 200 ರೂ ಫಿಕ್ಸ್‌  – ಕನ್ನಡ ಸಿನಿಮಾಗಳಿಗೆ OTT

    ಮಲ್ಟಿಪ್ಲೆಕ್ಸ್ ಟಿಕೆಟ್ ದರ 200 ರೂ ಫಿಕ್ಸ್‌ – ಕನ್ನಡ ಸಿನಿಮಾಗಳಿಗೆ OTT

    ಬೆಂಗಳೂರು: ಮಲ್ಟಿಪ್ಲೆಕ್ಸ್‌ಗಳ ಬೇಕಾಬಿಟ್ಟಿ ಟಿಕೆಟ್‌ ದರ ಏರಿಕೆಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ರಾಜ್ಯ ಸರ್ಕಾರ ನುಡಿದಂತೆ ನಡೆದರೆ ಇನ್ನು ಮುಂದೆ ಮಲ್ಟಿಪ್ಲೆಕ್ಸ್‌ನಲ್ಲಿ ನೀವು 200 ರೂಪಾಯಿಗೆ ಸಿನೆಮಾ ನೋಡಬಹುದು. ರಾಜ್ಯದಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಸ್ (Multiplex) ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಟಿಕೆಟ್ ದರ 200 ರೂ.ಗಳಿಗೆ ಸೀಮಿತಗೊಳಿಸಲಾಗುವುದು ಎಂದು 2025-26ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

    ಈ ಹಿಂದಿನಿಂದಲೂ ಟಿಕೆಟ್ ದರ ನಿಗದಿ ಪಡಿಸಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಅನ್ಯ ಭಾಷೆಗಳ ಚಿತ್ರ ರಿಲೀಸ್‌ ಆದಾಗಂತೂ ಬೇಕಾಬಿಟ್ಟಿಯಾಗಿ ಟಿಕೆಟ್‌ ದರ ಏರಿಕೆ ಮಾಡುತ್ತಿದ್ದರು. ಈಗ ಕರ್ನಾಟಕ ಸರ್ಕಾರ 200 ರೂ. ದರ ನಿಗದಿ ಮಾಡಲು ಮುಂದಾಗಿದೆ.   ಇದನ್ನೂ ಓದಿ: Karnataka Budget 2025 LIVE: ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ

    ಚಲನಚಿತ್ರ ಭಂಡಾರ: ದಾಖಲೆಯ 16ನೇ ಬಜೆಟ್ ಮಂಡಿಸುತ್ತಿರುವ ಸಿಎಂ, ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಕೈಗಾರಿಕಾ ನೀತಿಯಡಿ ಒದಗಿಸಲಾಗುವ ಸೌಲಭ್ಯಗಳನ್ನು ಸಿನಿಮಾ ಕ್ಷೇತ್ರಕ್ಕೆ ಸರ್ಕಾರ ಒದಗಿಸಲಿದೆ. ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್-ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು 3 ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

    ಇನ್ನೂ ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ OTT ವೇದಿಕೆಯನ್ನು ಸೃಷ್ಟಿಸಲು ಕ್ರಮಕೈಗೊಳ್ಳಲಾಗುವುದು. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು 150 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ. ಜೊತೆಗೆ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಲನಚಿತ್ರ ಅಕಾಡೆಮಿಯು ಹೊಂದಿರುವ 2.5 ಎಕರೆ ನಿವೇಶನದಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಛಯವನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.

    ಪತ್ರಕರ್ತರಿಗೆ ಸಿಎಂ ಮಾಧ್ಯಮ ಸಂಜೀವಿನಿ: ಸಂಷ್ಟದಲ್ಲಿರುವ ಪತ್ರಕರ್ತರಿಗೆ ಪ್ರಸ್ತುತ ನೀಡುತ್ತಿರುವ 12,000 ರೂ. ಸಂಬಳವನ್ನು 15,000 ರೂ.ಗಳಿಗೆ ಹಾಗೂ ಕುಟುಂಬಕ್ಕೆ ನೀಡುವ ಸಂಬಳವನ್ನು 6,000 ರೂ.ಗಳಿಂದ 7,500 ಹೆಚ್ಚಿಸಲಾಗುವುದು. ಮಾಧ್ಯಮ ಮಾನ್ಯತೆ ಹೊಂದಿರುವ ರಾಜ್ಯದ ಒಟ್ಟು 2,500 ಪತ್ರಕರ್ತರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆಗಾಗಿ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ಅನುದಾನ ಘೋಷಣೆಯಾಗಿದ್ದರೂ ಬಿಡುಗಡೆಯಾಗಿಲ್ಲ: ಬಜೆಟ್ ಭಾಷಣದಲ್ಲಿ ಕೇಂದ್ರಕ್ಕೆ ಸಿದ್ದು ಗುದ್ದು

  • ಹಳೇ ಚಾಳಿಯನ್ನೇ ಮುಂದುವರಿಸಿದ ಖಾಸಗಿ ಬಸ್‍ಗಳು- ಫ್ಲೈಟ್ ದರಕ್ಕಿಂತಲೂ ದುಬಾರಿ ಟಿಕೆಟ್

    ಹಳೇ ಚಾಳಿಯನ್ನೇ ಮುಂದುವರಿಸಿದ ಖಾಸಗಿ ಬಸ್‍ಗಳು- ಫ್ಲೈಟ್ ದರಕ್ಕಿಂತಲೂ ದುಬಾರಿ ಟಿಕೆಟ್

    ಬೆಂಗಳೂರು: ಖಾಸಗಿ ಬಸ್‍ (Private Bus) ಗಳು ತಮ್ಮ ಹಳೆ ಚಾಳಿಯನ್ನ ಮತ್ತೆ ಮುಂದುವರಿಸಿವೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫ್ಲೈಟ್ ಟಿಕೆಟ್ (Flight Ticket) ದರಕ್ಕಿಂತಲೂ ಹೆಚ್ಚು ದರವನ್ನ ನಿಗದಿಪಡಿಸಿವೆ.

    ದೀಪಾವಳಿ (Deepavali) ಹಬ್ಬಕ್ಕೆ ಖಾಸಗಿ ಬಸ್‍ಗಳು ತಮ್ಮ ಆಟಾಟೋಪ ಶುರುಮಾಡಿದ್ದು, ಲೂಟಿಕೋರ ಬಸ್‍ಗಳನ್ನ ಸೀಸ್ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಇಂದಿನಿಂದ ದುಪ್ಪಟ್ಟು ಹಣ ಪೀಕುವ ಬಸ್‍ಗಳನ್ನ ಹಾಗೂ ಟ್ರಾವೆಲ್ ಏಜೆನ್ಸಿ (Travel Agency) ಗಳ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ಕೋರ್ಟ್‌ ನೋಟಿಸ್‌ಗೆ ಥಂಡಾ – ಕರೆ ಮಾಡಿ ಹೆಚ್ಚುವರಿ ಅಂಕ ನೀಡ್ತೀವಿ ಎಂದ ಪಿಯು ಬೋರ್ಡ್‌

    ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಲ ಬಸ್‍ಗಳಲ್ಲಿ ಒಂದು ಸೀಟಿಗೆ ಬರೋಬ್ಬರಿ 5 ಸಾವಿರದಿಂದ, 6 ಸಾವಿರ ಹಣ ನಿಗದಿ ಮಾಡಲಾಗಿದೆ. ಫ್ಲೈಟ್ ಟಿಕೆಟ್ ದರ 4,849 ರೂ. ಇದೆ. ಬೆಂಗಳೂರಿನಿಂದ ಮಂಗಳೂರಿಗೆ 3 ಸಾವಿರದ 600 ರೂ. ಬಸ್ ಟಿಕೆಟ್ (Bus Ticket) ದರ ಇದ್ರೆ, ಫ್ಲೈಟ್ ಟಿಕೆಟ್ ದರ 3 ಸಾವಿರದ 700 ರೂ. ಇದೆ. ಇಷ್ಟೊಂದು ದುಬಾರಿ ಹಣ ಪೀಕುವ, ಖಾಸಗಿ ಬಸ್ ಮಾಲೀಕರ ಜೊತೆ ಒಂದು ಸುತ್ತಿನ ಮಾತುಕತೆಗೂ ಸಾರಿಗೆ ಇಲಾಖೆ ಮುಂದಾಗಿದೆ.

    ಇಲಾಖೆಯ ಎಚ್ಚರಿಗೂ ಬಗ್ಗದಿದ್ರೆ, ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. 22 ರಂದು 4ನೇ ಶನಿವಾರ ಸೇರಿ, ದೀಪಾವಳಿಗೆ ನಿರಂತರ 5 ದಿನ ರಜೆಯಿದೆ. ಶುಕ್ರವಾರ ಸಂಜೆಯಿಂದಲೇ ಸಾಕಷ್ಟು ಜನ, ತಮ್ಮೂರುಗಳಿಗೆ ತೆರಳುತ್ತಾರೆ. ಖಾಸಗಿ ಬಸ್ ಗಳಿಗೆ ಇಂತಿಷ್ಟೆ ದರ ತೆಗೆದುಕೊಳ್ಳಬೇಕು ಎಂಬ ಒಪ್ಪಂದ ಸಾರಿಗೆ ಇಲಾಖೆಯೊಂದಿಗೆ ಆಗಿಲ್ಲ. ಇದೇ ಕಾರಣಕ್ಕೂ ಯದ್ವಾತದ್ವ ಟಿಕೆಟ್ ದರ ಏರಿಕೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ದರ ಇಳಿಕೆ – ಪ್ರಯಾಣದ ವೇಳೆ ಸಿಗುತ್ತೆ ಊಟ

    ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ದರ ಇಳಿಕೆ – ಪ್ರಯಾಣದ ವೇಳೆ ಸಿಗುತ್ತೆ ಊಟ

    ನವದೆಹಲಿ: ಭಾರತೀಯ ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ದರವನ್ನು ಇಳಿಕೆ ಮಾಡಿದ್ದು ಕೊರೊನಾ ಪೂರ್ವ ನಿಯಮಗಳಂತೆ 10 ರೂಪಾಯಿಗೆ ನಿಗದಿಪಡಿಸಿದೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಪ್ಲಾಟ್‍ಫಾರ್ಮ್ ಟಿಕೆಟ್ ಅನ್ನು 30 ರೂಪಾಯಿಗೆ ಏರಿಸಿತ್ತು.

    ಎರಡನೇ ಅಲೆ ಬಹುತೇಕ ಅಂತ್ಯವಾಗಿದ್ದು ಭಾರತದಲ್ಲಿ ಮೂರನೇ ಅಲೆಯ ಭೀತಿಯೂ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಜನ ಜೀವನ ಸಾಮಾನ್ಯಗೊಳ್ಳುತ್ತಿದ್ದು ಹಂತ ಹಂತವಾಗಿ ರೈಲುಗಳ ಸಂಚಾರವನ್ನು ಹೆಚ್ಚು ಮಾಡಲಾಗುತ್ತಿದೆ. ಈ ಹಿನ್ನಲೆ ರೈಲ್ವೆ ಇಲಾಖೆ ಈಗ ಪ್ಲಾಟ್‍ಫಾರ್ಮ್ ಟಿಕೆಟ್ ದರ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಇದನ್ನೂ ಓದಿ:  “ಆಂಧ್ರ-ತೆಲಗು ರಾಜ್ಯಕ್ಕೆ ಕೇಡು” – ಮತ್ತೆ ನಿಜವಾಯ್ತು ಬಬಲಾದಿ ಮಠದ ಭವಿಷ್ಯ

    ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‍ಫಾರ್ಮ್ ಟಿಕೆಟ್‍ಗಳ ಬೆಲೆಯನ್ನು ಗುರುವಾರದಿಂದ 50 ರಿಂದ 10 ರೂಪಾಯಿಗೆ ಇಳಿಕೆ ಮಾಡಿದ ಬಳಿಕ ದೇಶದ ಎಲ್ಲ ನಿಲ್ದಾಣಗಳಲ್ಲೂ 10 ರೂ.ಗೆ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ:  ಬೆಂಗಳೂರಿನ ಶಾಲೆಯಲ್ಲಿ ಕೊರೊನಾ ಸ್ಫೋಟ – 33 ವಿದ್ಯಾಥಿಗಳಿಗೆ ಸೋಂಕು

    ಇನ್ನು ರೈಲುಗಳಲ್ಲಿ ಬೇಯಿಸಿಸ ಊಟವನ್ನು ನೀಡಲು ಕೂಡಾ ಅನುಮತಿ ನೀಡಲಾಗಿದ್ದು, ಇನ್ಮುಂದೆ ಪ್ರಯಾಣದ ವೇಳೆ ರೈಲಿನಲ್ಲಿ ಊಟವೂ ಸಿಗಲಿದೆ. ಕೊರೊನಾ ಹಿನ್ನಲೆ ರೈಲಿನಲ್ಲಿ ಬೇಯಿಸಿದ ಊಟಕ್ಕೆ ಬ್ರೇಕ್ ಹಾಕಿದ್ದ ಇಲಾಖೆ ಕೇವಲ ರೆಡಿ ಟು ಈಟ್ ಫುಡ್‍ಗಳಿಗೆ ಮಾತ್ರ ಅವಕಾಶ ನೀಡಿತ್ತು. ಈಗ ಕೊರೊನಾ ಪೂರ್ವ ಎಲ್ಲ ನಿಯಮಗಳನ್ನು ಜಾರಿ ತರಲು ಇಲಾಖೆ ಹಂತ ಹಂತವಾಗಿ ಕಾರ್ಯಪ್ರವೃತ್ತವಾಗುತ್ತಿದೆ.

  • ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ದರ 3 ಸಾವಿರ ರೂ.

    ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ದರ 3 ಸಾವಿರ ರೂ.

    ಅಹ್ಮದಾಬಾದ್: ಬಹು ನಿರೀಕ್ಷಿತ ಬುಲೆಟ್ ರೈಲು ಯೋಜನೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಇದೀಗ ಹೈ ಸ್ಪೀಡ್ ರೈಲು ಪ್ರಯಾಣದ ಅಂದಾಜು ದರವನ್ನೂ ಸಹ ಪ್ರಕಟಿಸಲಾಗಿದೆ.

    ಮುಂಬೈ-ಅಹ್ಮದಾಬಾದ್ ನಡುವೆ ಸಂಚರಿಸಲಿರುವ ಹೈ ಸ್ಪೀಡ್ ರೈಲಿನ ದರ ಅಂದಾಜು 3 ಸಾವಿರ ರೂ. ಇರಲಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೋರೇಷನ್ ಲಿ.(ಎನ್‍ಎಚ್‍ಎಸ್‍ಆರ್‍ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಗೆ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಈಗಾಗಲೇ 622 ಹೆಕ್ಟೇರ್ (ಶೇ.45ರಷ್ಟು)ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಉಳಿದ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬುಲೆಟ್ ರೈಲು ಯೋಜನೆಗೆ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಇದರಲ್ಲಿ ಖಾಸಗಿ, ಸರ್ಕಾರಿ, ಅರಣ್ಯ ಮತ್ತು ರೈಲ್ವೇ ಭೂಮಿ ಒಳಗೊಂಡಿದೆ. ಈವರೆಗೆ 622 ಹೆಕ್ಟೇರ್(ಶೇ.45) ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಡಿಸೆಂಬರ್ 2023ರ ಗಡುವು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ಕಾಮಗಾರಿ ಪೂರ್ಣಗೊಂಡ ನಂತರ ಪ್ರತಿ ದಿನ ಬುಲೆಟ್ ರೈಲು 70 ಟ್ರಿಪ್ ಸಂಚರಿಸಲಿದ್ದು, ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಕಾರ್ಯನಿರ್ವಹಿಸಲಿದೆ. ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಟೆಂಡರ್ ನೀಡಲಾಗಿದೆ. ಮಾರ್ಚ್ 2020ರೊಳಗೆ ನಿರ್ಮಾಣ ಕಾರ್ಯಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

    ಈ ಪ್ಯಾಕೇಜ್‍ಗಳಲ್ಲಿ ವಾಪಿ ಮತ್ತು ವಡೋದರಾ ನಡುವೆ 237 ಕಿ.ಮೀ. ಸೇತುವೆ ನಿರ್ಮಾಣ ಹಾಗೂ ವಡೋದರಾ ಮತ್ತು ಅಹ್ಮದಾಬಾದ್ ನಡುವೆ 87ಕಿ.ಮೀ. ಇನ್ನೊಂದು ಪ್ಯಾಕೇಜ್ ಗುರುತಿಸಲಾಗಿದೆ. ಈ ಯೋಜನೆಯನ್ನು ಒಟ್ಟು 27 ಪ್ಯಾಕೇಜ್‍ಗಳಾಗಿ ವಿಂಗಡಿಸಿದ್ದು, ಮಹಾರಾಷ್ಟ್ರದಲ್ಲಿ ಸಮುದ್ರದೊಳಗಿನ ಸುರಂಗ ಮಾರ್ಗ ಸೇರಿದಂತೆ ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಈಗಾಗಲೇ ಟೆಂಡರ್ ನೀಡಿದ್ದೇವೆ ಎಂದು ಖರೆ ವಿವರಿಸಿದರು.

    ಪ್ರಸ್ತುತ ಇಡೀ ಯೋಜನೆಯ ಅಂದಾಜು ವೆಚ್ಚ 1.08 ಲಕ್ಷ ಕೋಟಿ ರೂ.ಗಳಾಗಿದೆ. ಡಿಸೆಂಬರ್ 2022ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಭೂಸ್ವಾಧಿನದ ಕುರಿತು ಕೆಲವು ರೈತರಲ್ಲಿ ಅಸಮಾಧಾನ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ರೈತರು ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.

    ಗುಜರಾತ್‍ನಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಿದ್ದ ಸುಮಾರು 5,300 ಖಾಸಗಿ ಪ್ಲಾಟ್‍ಗಳಲ್ಲಿ ಈಗಾಗಲೇ 2,600 ಪ್ಲಾಟ್‍ಗಳನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಗುಜರಾತ್‍ನ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ, 4,000 ದೊಡ್ಡ ಮರಗಳನ್ನು ಕತ್ತರಿಸುವ ಬದಲು ಸ್ಥಳಾಂತರಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ನಗರದ ಪ್ರಸ್ತುತ ರೈಲ್ವೆ ನಿಲ್ದಾಣಗಳಲ್ಲೇ ಅಹ್ಮದಾಬಾದ್‍ನ ಹೈ ಸ್ಪೀಡ್ ರೈಲ್ವೆ ನಿಲ್ದಾಣದ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿವೆ. ಈಗಿರುವ ರೈಲ್ವೇ ಮಾರ್ಗಗಳ ಮೇಲೆಯೇ ಬುಲೆಟ್ ರೈಲು ನಿಲ್ದಾಣವನ್ನು ನಿರ್ಮಿಸಲಾಗುವುದು. ಅಹ್ಮದಾಬಾದ್-ಮುಂಬೈ ನಡುವೆ ಬುಲೆಟ್ ರೈಲು ಒಟ್ಟು 508 ಕಿ.ಮೀ. ಸಂಚರಿಸಲಿದ್ದು, 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

    2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆದರೆ ರೈತರು ಈ ಯೋಜನೆ ವಿರುದ್ಧ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಕೆಲ ಸಮಯ ಅಡ್ಡಿಯಾಗಿತ್ತು.

    ಮುಂಬೈ ಅಹ್ಮದಾಬಾದ್ ಮಧ್ಯೆ 508.5 ಕಿ.ಮೀ ಅಂತರವಿದ್ದು ಗಂಟೆಗೆ 320 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ. ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

  • ಚುನಾವಣೆ, ಹಬ್ಬದ ದಿನಗಳಲ್ಲಿ ಬಸ್ ದರ ಏರಿಸಿದ್ರೆ ರಹದಾರಿಯೇ ರದ್ದು!

    ಚುನಾವಣೆ, ಹಬ್ಬದ ದಿನಗಳಲ್ಲಿ ಬಸ್ ದರ ಏರಿಸಿದ್ರೆ ರಹದಾರಿಯೇ ರದ್ದು!

    ಬೆಂಗಳೂರು: ಹಬ್ಬ, ವೀಕೆಂಡ್ ಲಾಂಗ್ ಲೀವ್ ಸಿಕ್ಕಿದೆ ಎಂದು ನಗರದಿಂದ ಸ್ವಗ್ರಾಮಕ್ಕೆ ತೆರಳುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಬಸ್ ದರ ಹೆಚ್ಚಳ ಮಾಡುತ್ತಿದ್ದ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆಯ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.

    ಪ್ರಯಾಣಿಕರ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಯದ್ವಾತದ್ವ ದರ ಹೆಚ್ಚಳ ಮಾಡುವ ಆಗಿಲ್ಲ ಎಂದು ಆರ್ ಟಿಒ ಕಮಿಷನರ್ ಹೇಳಿದ್ದು, ಎಲ್ಲಾ ಖಾಸಗಿ ಬಸ್‍ಗಳ ಮೇಲೆ ಇಲಾಖೆ ನಿಗಾ ವಹಿಸಿರುತ್ತದೆ. ಒಂದು ಸಮಯ ಶೇ.10 ಕ್ಕಿಂತ ಹೆಚ್ಚಿನ ದರ ಏರಿಸಿದರೆ ರಹದಾರಿಯನ್ನೇ ರದ್ದು ಮಾಡುವುದಾಗಿ ಆರ್ ಟಿಓ ಕಮಿಷನರ್ ಇಕ್ಕೇರಿ ಹೇಳಿದ್ದಾರೆ.

    ಲೋಕಸಭಾ ಮತದಾನಕ್ಕಾಗಿ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ ಖಾಸಗಿ ಬಸ್ ಮಾಲೀಕರು ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದರು. ಅಲ್ಲದೇ 2ನೇ ಮತದಾನ ನಡೆಯುವ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೂ ಬಸ್ ಟಿಕೆಟ್ ದರ ಮತ್ತಷ್ಟು ದುಬಾರಿಯಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು.

  • ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಬೆಂಗಳೂರು: ಗಣೇಶ ಹಬ್ಬಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿಯವರು ಹೆಚ್ಚಳ ಮಾಡುವ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳಿಗೆ ಹೆಚ್ಚು ಬಸ್ ಸೇವೆ ಒದಗಿಸಿ ಅಂತ ಸೂಚನೆ ನೀಡಿದ್ದೇನೆ. ಅಗತ್ಯ ಇರುವ ಜಿಲ್ಲೆಗಳಿಗೆ ಸರ್ಕಾರದಿಂದಲೇ ಹೆಚ್ಚು ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುತ್ತದೆ ಎಂದರು.

     

    40 ಸ್ಲೀಪರ್ ಕೋಚ್ ಬಸ್: ನೂತನವಾಗಿ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ ಎಂದು ತಮ್ಮಣ್ಣ ತಿಳಿಸಿದರು. ಖಾಸಗಿಯವರು ಸ್ಲೀಪರ್ ಕೋಚ್ ನಲ್ಲಿ ಹೆಚ್ಚು ಹಣ ಪಡೆಯುತ್ತಿರುವ ಆರೋಪಗಳು ಕೇಳಿ ಬರ್ತಿವೆ. ಹೀಗಾಗಿ ನಾವೇ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. ಅಗತ್ಯ ಇರುವ ಬೆಂಗಳೂರಿನ ಕಡೆ ಸ್ಲೀಪರ್ ಕೋಚ್ ಬಸ್ ಸಂಚಾರ ವ್ಯವಸ್ಥೆ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದರು.

    ಎಲೆಕ್ಟ್ರಿಕಲ್ ಬಸ್ ಸಂಬಂಧ ಇನ್ನು ಯಾವುದೇ ನಿರ್ಧಾರವಾಗಿಲ್ಲ. 80 ಬಸ್ ಖರೀದಿ ವಿಚಾರ ಪರಿಶೀಲನೆ ಹಂತದಲ್ಲಿದೆ. ಖಾಸಗಿ ಅವರಿಗೆ ನೀಡಬೇಕಾ ಅಥವಾ ಏನು ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಬೇಕಿದೆ. ಖಾಸಗಿ ಅವರಿಗೆ ಕೊಡಬೇಕು ಅನ್ನೋದು ಹಿಂದಿನ ಸರ್ಕಾರದ ನಿರ್ಧಾರ. ಈ ಬಗ್ಗೆ ಸೂಕ್ತವಾದ ಅಧ್ಯಯನ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

    ಅಗತ್ಯ ಇಲ್ಲದ ಕಡೆ ಇರೋ ಬಸ್ ಗಳನ್ನ ಕಡಿತ ಮಾಡಿ ಅಗತ್ಯ ಇರೋ ಕಡೆ ಬಸ್ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳಿಗೆ ಈ ಸಂಬಂಧ ವರದಿ ನೀಡಲು ಸೂಚಿಸಿದ್ದೇನೆ. ಒಂದೇ ರೂಟ್ ನಲ್ಲಿ ಎರಡೆರಡು ಬಸ್ ಅವಶ್ಯಕತೆ ಇಲ್ಲದೆ ಇದ್ದರೂ ಓಡಾಡುತ್ತಿವೆ. ಹೀಗಾಗಿ ಅಂತಹ ಕಡೆ ಬಸ್ ಕಡಿಮೆ ಮಾಡಿ ಅವಶ್ಯಕತೆ ಇರೋ ಕಡೆ ಬಸ್ ಸೇವೆ ಒದಗಿಸುತ್ತೇವೆ. ಎಲ್ಲಾ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಕ್ರಮವಹಿಸಿ ಬಸ್ ಸೇವೇ ಒದಗಿಸುತ್ತೇವೆ ಅಂತ ಸಚಿವರು ತಿಳಿಸಿದರು.

    ಬಸ್ ಪಾಸ್ ಚರ್ಚೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಜೊತೆ ಮಾತನಾಡಲಾಗಿದೆ. ಎಸ್ ಸಿ/ಎಸ್ ಟಿ ಇಲಾಖೆಯ ಹಣದಲ್ಲಿ 25% ಹಣವನ್ನು ಬಳಕೆ ಮಾಡುವ ಕುರಿತು ಚರ್ಚೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಇದಕ್ಕೆ ಒಪ್ಪಿದ್ದಾರೆ. ಸಿಎಂ ಜೊತೆ ಚರ್ಚೆ ಮಾಡಿ ಇನ್ನೊಂದು ವಾರದಲ್ಲಿ ಪಾಸ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವರು ಹೇಳಿದರು.

    ಖಾಸಗಿ ಬಸ್ ಮಾಫಿಯಾ ಲಾಬಿ ತಡೆಯಲು 70 ವರ್ಷಗಳಿಂದ ಸಾಧ್ಯವಾಗಿಲ್ಲ. ಮೂರು ತಿಂಗಳಿಗೆ ಮಾಫಿಯಾ ನಿಯಂತ್ರಣ ಸಾಧ್ಯವಿಲ್ಲ. ದರ ಕಡಿಮೆಗೊಳಿಸಿ ಖಾಸಗಿಯವರಿಗೆ ಪೈಪೋಟಿ ನೀಡುವ ಪ್ಲಾನ್ ಸರ್ಕಾರದ್ದು. ಖಾಸಗಿ ಬಸ್ ಸ್ಥಳಾಂತರ ವಿಚಾರ ಸರ್ಕಾರದ ಮುಂದಿದೆ. ಪೀಣ್ಯದಲ್ಲಿರುವ ಖಾಸಗಿ ಬಸ್ ನಿಲ್ದಾಣ ಬದಲಾವಣೆ ಬಗ್ಗೆ ಮಾಲೀಕರ ಜತೆ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಮ್ಮಣ್ಣ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ

    ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ

    ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳ ಲೂಟಿಗೆ ಕೊನೆಗೂ ಕಡಿವಾಣ ಬಿದ್ದಿದೆ. ಸಿನಿಮಾ ಟಿಕೆಟ್‍ಗೆ ಸರ್ಕಾರ ಗರಿಷ್ಠ ಬೆಲೆ ನಿಗದಿಪಡಿಸಿದ್ದು, ಈ ಆದೇಶ ಮಂಗಳವಾರದಿಂದಲೇ ಜಾರಿಗೆ ಬಂದಿದ್ದರೂ ಮನರಂಜನಾ ತೆರಿಗೆ ಸೇರಿ ಟಿಕೆಟ್ ಬೆಲೆ ಎಷ್ಟಿರಲಿದೆ ಎಂಬ ಗೊಂದಲವಿತ್ತು. ಈಗ ಆ ಗೊಂದಲಕ್ಕೆ ಬ್ರೇಕ್ ಬಿದ್ದಿದೆ.

    ಸರ್ಕಾರದ ಆದೇಶಿಸಿರುವಂತೆ ಒಂದು ಟಿಕೆಟ್‍ಗೆ 200 ರೂ. ದರದ ಜೊತೆಗೆ 64 ರೂ. ಮನರಂಜನಾ ತೆರಿಗೆ ನಿಗದಿ ಮಾಡಲಾಗಿದೆ. ಬೆಂಗಳೂರಿನ ಬಿನ್ನಿಮಿಲ್ ಬಳಿ ಇರುವ ಇಟಿಎ ಮಾಲ್, ಮನರಂಜನಾ ತೆರಿಗೆ ವಿಧಿಸಿ ಟಿಕೆಟ್ ಮಾರಾಟ ಮಾಡ್ತಿದೆ. ಇಟಿಎ ಮಾಲ್‍ನಲ್ಲಿ ಸಿನಿಮಾದ ಒಂದು ಟಿಕೆಟ್‍ಗೆ 264 ರೂಪಾಯಿ ನಿಗದಿ ಮಾಡಲಾಗಿದೆ. ಬುಧವಾರದಂದು ಇದೇ ಮಾಲ್ ಒಂದು ಟಿಕೆಟ್‍ಗೆ 350 ರೂಪಾಯಿ ನಿಗದಿ ಮಾಡಿತ್ತು. ಅಲ್ಲದೆ ಇನ್ನೂ ಅನೇಕ ಮಾಲ್‍ಗಳಲ್ಲಿ ಗೋಲ್ಡ್ ಕ್ಲಾಸ್ ಹೊರತುಪಡಿಸಿ ಉಳಿದ ಟಿಕೆಟ್‍ಗೆ 264 ರೂ. ನಗದಿ ಮಾಡಲಾಗಿದೆ.

    ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಫಿಕ್ಸ್ ಆಗಿದ್ದು, ಮಂಗಳವಾರದಂದೇ ಅಧಿಕೃತ ಆದೇಶ ಜಾರಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿದ್ದು, ಎಲ್ಲ ಭಾಷೆಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ.

    ಆದೇಶದಲ್ಲಿ ಏನಿದೆ?
    ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಿತ್ರವನ್ನು ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉಲ್ಲೇಖಿಸಲಾಗಿದೆ.

    ಐ-ಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಜೊತೆಗೆ ಗೋಲ್ಡ್ ಕ್ಲಾಸ್ ಗೂ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಪ್ರತಿ ಚಿತ್ರಮಂದಿರದಲ್ಲೂ ಗೋಲ್ಡ್ ಕ್ಲಾಸ್ ಶೇ.10 ರಷ್ಟು ಸೀಟುಗಳನ್ನು ಮೀರಬಾರದು ಎನ್ನುವ ಅಂಶ ಆದೇಶದಲ್ಲಿದೆ.

    ಸಿಎಂ ಸಿದ್ದರಾಮಯ್ಯ ಸೋಮವಾರ ಯಶವಂತಪುರದಲ್ಲಿರುವ ಒರಾಯನ್ ಮಾಲ್‍ನಲ್ಲಿ 1050 ರೂ. ನೀಡಿ ಬಾಹುಬಲಿ ಸಿನಿಮಾ ವೀಕ್ಷಿಸಿದ್ದರು. ಬಜೆಟ್ ನಲ್ಲಿ 200 ರೂ. ಗರಿಷ್ಟ ದರ ನಿಗದಿ ಪಡಿಸಿ 1050 ರೂ. ನೀಡಿ ಟಿಕೆಟ್ ಖರೀದಿ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಜೆಟ್ ನಲ್ಲಿ ನೀವೇ ಗರಿಷ್ಟ ದರ ಫಿಕ್ಸ್ ಮಾಡಿ ದುಬಾರಿ ಟಿಕೆಟ್ ನೀಡಿ ಸಿನಿಮಾ ವೀಕ್ಷಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಜನರ ಮತ್ತು ಮಾಧ್ಯಮಗಳಿಂದ ಟೀಕೆ ಜಾಸ್ತಿಯಾಗುತ್ತಿದ್ದಂತೆ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಅಧಿಕೃತವಾಗಿ ಈ ಆದೇಶವನ್ನು ಪ್ರಕಟಿಸಿದೆ.

    ಇದನ್ನೂ ಓದಿ: 1050 ರೂ. ಕೊಟ್ಟು ಬಾಹುಬಲಿ ಚಿತ್ರ ವೀಕ್ಷಣೆ – ಸಿಎಂ ವಿರುದ್ಧ ವಿಜಯಪ್ರಸಾದ್ ಗರಂ

    ಏಪ್ರಿಲ್ 26 ರಂದು 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ದರ 200 ರೂ. ನಿಗದಿಪಡಿಸುವುದರ ಜೊತೆ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನಕ್ಕೆ 2 ಶೋಗಳನ್ನು ಕನ್ನಡ ಚಿತ್ರ ಪ್ರದರ್ಶಿಸಲು ನಾಳೆ ಅಥವಾ ನಾಡಿದ್ದು ಸರ್ಕಾರಿ ಆದೇಶ ಮಾಡಲಾಗುವುದು. ಹಾಗೆಯೇ, ಪ್ರೈಮ್ ಸಮಯದಲ್ಲಿ ಕನ್ನಡ ಚಿತ್ರಗಳಿಗಾಗಿ ಎರಡು ಶೋಗಳನ್ನ ಮೀಸಲಿಡಬೇಕು ಎಂದು ಕೂಡ ಆದೇಶಿಸುವುದಾಗಿ ತಿಳಿಸಿದ್ದರು.

    ಸಿಎಂ ಈ ಹೇಳಿಕೆಯ ಬಳಿಕ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಏ. 26ರಂದು ಫಿಲಂ ಚೇಂಬರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಬಜೆಟ್‍ನಲ್ಲಿ ಘೋಷಣೆಯಾಗಿರುವ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಿರುವ ಆದೇಶ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಸಹಿ ಮಾಡಿದ್ದಾರೆ. ಗುರುವಾರ ಈ ಪತ್ರ ವಾಣಿಜ್ಯ ಮಂಡಳಿಗೆ ತಲುಪಲಿದೆ. ಪತ್ರ ಬಂದ ತಕ್ಷಣವೇ ಏಕರೂಪ ದರ ಜಾರಿಯಾಗಲಿದೆ ಎಂದು ತಿಳಿಸಿದ್ದರು. ಆದರೆ ಇವರಿಬ್ಬರು ಹೇಳಿಕೆ ನೀಡಿದ್ದರೆ ವಿನಾಃ ಆದೇಶ ಮಾತ್ರ ಜಾರಿಯಾಗಿರಲಿಲ್ಲ.

    ದರ ಕಡಿಮೆಯಾಗಿದ್ದು ಯಾಕೆ?: 
    ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಸಿನಿಮಾಗೆ ಹೆಚ್ಚು ದರದ ಟಿಕೆಟ್ ನಿಗದಿ ಮಾಡುವ ಕಾರಣ ಜನ ಥಿಯೇಟರ್ ಗಳಿಗೆ ಬರುತ್ತಿಲ್ಲ. ಒಂದೊಂದು ಮಾಲ್ ನಲ್ಲಿ ಬೇರೆ ಬೇರೆ ರೀತಿಯ ದರವಿದೆ. ಹೀಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿ ಏಕರೂಪದ ದರವನ್ನು ತರಬೇಕು ಎಂದು ಆಗ್ರಹಿಸಿ ಜನ ಮತ್ತು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಆಂದೋಲನವನ್ನು ನಡೆಸಿದ್ದರು. ತಮಿಳುನಾಡಿನಲ್ಲಿ ಗರಿಷ್ಠ 120 ರೂ. ಟಿಕೆಟ್, ಆಂಧ್ರಪ್ರದೇಶದಲ್ಲಿ ಗರಿಷ್ಠ 150 ರೂ. ನಿಗದಿಯಾಗಿರುವಾಗ ನಮ್ಮಲ್ಲಿ ಯಾಕೆ ದರವನ್ನು ನಿಗದಿ ಮಾಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

    ಒತ್ತಡ ಜಾಸ್ತಿ ಆಗುತ್ತಿದ್ದಂತೆ ಸರ್ಕಾರ ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ 17 ಜನರ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಟೈಂನಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗ ಮುಂದಾಗಿದೆ.