Tag: ticket price hike

  • ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ; ರಾಜ್ಯ ಸರ್ಕಾರದಿಂದ ‘ಮಹಿಷಾಸುರ ಟ್ಯಾಕ್ಸ್’: ಜೋಶಿ ಕಿಡಿ

    ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ; ರಾಜ್ಯ ಸರ್ಕಾರದಿಂದ ‘ಮಹಿಷಾಸುರ ಟ್ಯಾಕ್ಸ್’: ಜೋಶಿ ಕಿಡಿ

    ನವದೆಹಲಿ: ಕರ್ನಾಟಕ ಸರ್ಕಾರ (Congress) ದಸರಾ ಹಬ್ಬದಲ್ಲಿ ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಪ್ರಯಾಣ ದರ ಹೆಚ್ಚಿಸುವ ಮೂಲಕ ‘ಮಹಿಷಾಸುರ ಟ್ಯಾಕ್ಸ್’ (Mahishasura Tax) ಹಾಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿ ಕಾರಿದ್ದಾರೆ.

    ‘ಬೆಂಗಳೂರು-ಮೈಸೂರು’ ಬಸ್ ಪ್ರಯಾಣ ದರ ಹೆಚ್ಚಿಸಿ ಜನರ ಪಾಲಿಗೆ ‘ಮಹಿಷಾಸುರ’ ಸರ್ಕಾರವಾಗಿದೆ. ಈಗಾಗಲೇ 48ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿದೆ. ಇದೀಗ ದಸರಾ ಹಬ್ಬಕ್ಕೂ ಮೊದಲೇ ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರವನ್ನೂ ಬರೋಬ್ಬರಿ 20-30 ರೂ. ಹೆಚ್ಚಿಸುವ ಮೂಲಕ ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೀದರ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು

    ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ರೀತಿ ಹಗಲು ದರೋಡೆಗೆ ಇಳಿದಿದೆ. ದುರಾಡಳಿತದ ಪರಮಾವಧಿ ಎಲ್ಲೆ ಮೀರಿದೆ. ಭರವಸೆಗಳನ್ನು ನಂಬಿ ಅಧಿಕಾರ ಕೊಟ್ಟ ಶ್ರೀಸಾಮಾನ್ಯರು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದಿದ್ದಾರೆ ಜೋಶಿ. ಇದನ್ನೂ ಓದಿ: ಪೊಲೀಸ್ ನೇಮಕಾತಿಗಳಿಗೆ ಪ್ರತ್ಯೇಕ ಶಾಶ್ವತ ವಯೋಮಿತಿ ಸಡಿಲಿಕೆ ಮಾಡ್ತೇವೆ – ಪರಮೇಶ್ವರ್

    ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ತಗ್ಗಿಸಿ ಪ್ರತಿಯೊಂದು ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಂಡಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ಗೋಳು ಹೊಯ್ದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೀಕ್‌ ಅವರ್‌ನಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಕಾರ್‌ನಲ್ಲಿ ಸಂಚರಿಸಿದ್ರೆ ಟ್ಯಾಕ್ಸ್‌?

    ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಸಾಮಾನ್ಯರ ಏಳಿಗೆ ಬಯಸಿ ಜಿಎಸ್‌ಟಿ ಇಳಿಸಿದರು. ತರುವಾಯ ಪ್ರತಿಯೊಂದು ವಸ್ತುಗಳನ್ನೂ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಆದರೆ, ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಬೆಲೆ ಏರಿಕೆಯಿಂದ ಬೀದಿಗೆ ತಳ್ಳುತ್ತಿದೆ ಎಂದು ಖಂಡಿಸಿದ್ದಾರೆ. ಇದನ್ನೂ ಓದಿ: ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

  • ನಾಳೆಯಿಂದ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯ- ಟಿಕೆಟ್ ದರ 10% ಹೆಚ್ಚಳ ಸಾಧ್ಯತೆ

    ನಾಳೆಯಿಂದ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯ- ಟಿಕೆಟ್ ದರ 10% ಹೆಚ್ಚಳ ಸಾಧ್ಯತೆ

    ಬೆಂಗಳೂರು: ಶನಿವಾರದಿಂದ ಮಹಾನಗರಿ ಬೆಂಗಳೂರಿನ ಮಂದಿಗೆ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯವಾಗಲಿದೆ.

    ಶನಿವಾರದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಯಲೇಚನಹಳ್ಳಿ-ಸಂಪಿಗೆ ರಸ್ತೆ ಮಾರ್ಗ ಲೋಕಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ 42.3 ಕಿಲೋ ಮೀಟರ್ ದೂರದ ಮೊದಲ ಹಂತದ ಮೆಟ್ರೋ ಸೇವೆ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಇಂದು ಮತ್ತು ನಾಳೆ ರಾಜಾಜಿನಗರದಿಂದ ಸಂಪಿಗೆ ರಸ್ತೆ ನಿಲ್ದಾಣವರೆಗೆ ಮೆಟ್ರೋ ಸಂಚಾರ ಇರಲ್ಲ.

    ಇದೇ ಹೊತ್ತಲ್ಲಿ ಟಿಕೆಟ್ ದರ ಶೇಕಡಾ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮೆಟ್ರೋದಿಂದ ಇದುವರೆಗೆ ಆಗಿರೋ ನಷ್ಟವನ್ನು ಸರಿದೂಗಿಸುವ ಸಲುವಾಗಿ ಪ್ರಯಾಣ ದರ ಏರಿಕೆಗೆ ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ 2011ರಲ್ಲಿ ಅಂದರೆ 6 ವರ್ಷಗಳ ಹಿಂದೆ ನಿಗದಿಪಡಿಸಿದ ದರವೇ ಚಾಲ್ತಿಯಲ್ಲಿದೆ. ಅದ್ರೆ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಸರ್ಕಾರಕ್ಕೆ 260 ಕೋಟಿ ರೂಪಾಯಿ ಹೊರೆಬೀಳ್ತಿದೆ ಎಂದು ಹೇಳಲಾಗಿದೆ.

    ನಾಗಸಂದ್ರದಿಂದ ಯಲೇಚನಹಳ್ಳಿಯವರೆಗೆ ಪ್ರಯಾಣ ದರ 60 ರೂಪಾಯಿಯಾಗಲಿದೆ. ಆರಂಭದ ನಿಲ್ದಾಣಗಳಲ್ಲಿ ಟಿಕೆಟ್ 2 ರಿಂದ 5 ರೂಪಾಯಿ ದುಬಾರಿಯಾಗಲಿದೆ.