Tag: Tibetan spiritual leader

  • ಟಿಬೆಟನ್‌ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ

    ಟಿಬೆಟನ್‌ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ

    ನವದೆಹಲಿ: ಟಿಬೆಟನ್‌ ಧರ್ಮಗುರು ದಲೈ ಲಾಮಾ (Tibetan Spiritual leader Dalai Lama) ಅವರಿಗೆ ಜೀವ ಬೆದರಿಕೆ ಇರುವುದರಿಂದ ಕೇಂದ್ರ ಸರ್ಕಾರವು ‘ಜೆಡ್‌’ ಶ್ರೇಣಿಯ ಭದ್ರತೆಯನ್ನು (Z Category Protection) ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿದೆ.

    89 ವರ್ಷದ ಆಧಾತ್ಮಿಕ ನಾಯಕನಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ವಿಐಪಿ ಭದ್ರತಾ ವಿಭಾಗಕ್ಕೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Manipur | ಬಿರೇನ್‌ ಸಿಂಗ್‌ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

    ದಲೈ ಲಾಮಾ ಅವರು ಹಿಮಾಚಲ ಪ್ರದೇಶ ಪೊಲೀಸರ ಭದ್ರತೆ ಹೊಂದಿದ್ದರು. ಆದ್ರೆ ದೆಹಲಿ ಮತ್ತು ಇತರ ಯಾವುದೇ ಸ್ಥಳಗಳಿಗೆ ಭೇಟಿ ನೀಡುವಾಗ ಪೊಲೀಸ್‌ ಭದ್ರತೆಯನ್ನು ವಿಸ್ತರಿಸಲಾಗುತ್ತಿತ್ತು. ಆದ್ರೆ ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಏಕರೂಪದ ಭದ್ರತೆಗೆ ಸೂಚನೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸುಮಾರು 30 ಸಿಆರ್‌ಪಿಎಫ್‌ ಕಮಾಂಡೋಗಳ ತಂಡವು ದಲೈ ಲಾಮಾಗೆ ರಕ್ಷಣೆ ನೀಡಲಿದೆ. ಅಲ್ಲದೇ ಮಣಿಪುರದ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರಿಗೂ ʻಜೆಡ್‌ʼ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೈಕಾಲು ಕಟ್ಟಿ, ಕಂಪಾಸ್‌ನಿಂದ ಚುಚ್ಚಿ ಚಿತ್ರಹಿಂಸೆ – ನರ್ಸಿಂಗ್‌ ಕಾಲೇಜಿನಲ್ಲಿ ರ‍್ಯಾಗಿಂಗ್‌ ಕ್ರೂರತೆಯ ವಿಡಿಯೋ ವೈರಲ್‌

  • ಭಾರೀ ಟೀಕೆಯ ಬಳಿಕ ಬಾಲಕನ ಬಳಿ ಕ್ಷಮೆ ಕೇಳಿದ ದಲೈ ಲಾಮಾ

    ಭಾರೀ ಟೀಕೆಯ ಬಳಿಕ ಬಾಲಕನ ಬಳಿ ಕ್ಷಮೆ ಕೇಳಿದ ದಲೈ ಲಾಮಾ

    ನವದೆಹಲಿ: ತನ್ನ ನಾಲಿಗೆಯನ್ನು ನೆಕ್ಕುವಂತೆ ಅಪ್ರಾಪ್ತ ಬಾಲಕನಿಗೆ (Boy) ಸೂಚಿಸಿ ಭಾರೀ ಟೀಕೆಗೆ ಒಳಗಾದ ಟಿಬೆಟಿಯನ್ ಆಧ್ಯಾತ್ಮ ನಾಯಕ ದಲೈ ಲಾಮಾ (Dalai Lama) ಇದೀಗ ಬಾಲಕ ಹಾಗೂ ಆತನ ಕುಟುಂಬದ ಬಳಿ ಕ್ಷಮೆ (Apology) ಕೇಳಿದ್ದಾರೆ.

    ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಸೂಚಿಸಿದ್ದರು. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಭಾರೀ ಟೀಗೆಗೆ ಒಳಗಾಗಿದ್ದರು. ಇದೀಗ ಬೌದ್ಧ ಧರ್ಮ ಗುರು ತನ್ನ ವರ್ತನೆ ಹಾಗೂ ಮಾತುಗಳಿಂದ ಬಾಲಕ ಹಾಗೂ ಆತನ ಕುಟುಂಬಕ್ಕೆ ನೋವಾಗಿರಬಹುದು ಎಂದು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

    ವೀಡಿಯೋದಲ್ಲೇನಿದೆ?
    ಅಪ್ರಾಪ್ತ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ. ಬಳಿಕ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ಭಾರೀ ಟೀಕೆಗೆ ದಲೈ ಲಾಮಾ ಗುರಿಯಾಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ತನ್ನ ವಿವಾದಿತ ವರ್ತನೆ ಬಗ್ಗೆ ತಿಳಿಸಿದ ದಲೈ ಲಾಮಾ, ನಾನು ಭೇಟಿಯಾಗುವ ಜನ ಹಾಗೂ ಮಕ್ಕಳೊಂದಿಗೆ ಮುಗ್ಧ ರೀತಿಯಲ್ಲಿ ಮತ್ತು ತಮಾಷೆಗಾಗಿ ಈ ರೀತಿ ವರ್ತಿಸುತ್ತೇನೆ. ಆದರೆ ನನ್ನ ವರ್ತನೆಗೆ ಬಾಲಕ ಹಾಗೂ ಆತನ ಕುಟುಂಬಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಂತೆ ನಾನು ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಗೆ ಮುಂದಾಗಿದ್ದೆ: ಇಮ್ರಾನ್ ಖಾನ್

  • ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ (Dalai Lama) ಅವರಿಗೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ (Boy) ತಮ್ಮ ನಾಲಿಗೆಗೆ (Tongue) ಮುತ್ತಿಟ್ಟು ನೆಕ್ಕುವಂತೆ ಸೂಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ವೀಡಿಯೋದಲ್ಲಿ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ. ಇದನ್ನೂ ಓದಿ: ರಾಹುಲ್‌ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುತ್ತೇನೆ: ಅಸ್ಸಾಂ ಸಿಎಂ

     

    ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದ್ದೇ ತಡ. ಎಲ್ಲೆಡೆ ಬೌದ್ಧ ಧರ್ಮ ಗುರುವಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಪ್ರಾಪ್ತ ಬಾಲಕನೊಂದಿಗೆ ದಲೈ ಲಾಮಾ ವರ್ತಿಸಿರುವ ರೀತಿಯನ್ನು ನೆಟ್ಟಿಗರು ಅಸಹ್ಯಕರ ಎಂದು ಕರೆದಿದ್ದಾರೆ.

    ದಲೈ ಲಾಮಾ ಸಾರ್ವಜನಿಕವಾಗಿ ಟೀಕೆಗೊಳಗಾಗಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಿದ್ದರೆ ಅವರು ಅತ್ಯಂತ ಆಕರ್ಷಕವಾಗಿರಬೇಕು ಎಂದು ಹೇಳಿ ವಿವಾದವನ್ನು ಎಳೆದುಕೊಂಡಿದ್ದರು. ಈ ಹೇಳಿಕೆಯಿಂದ ಅವರು ವಿಶ್ವದಾದ್ಯಂತ ಭಾರೀ ಟೀಕೆಗೆ ಒಳಗಾಗಿದ್ದರು. ಇದನ್ನೂ ಓದಿ: 20ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಕೊಕ್‌ – ಲಿಸ್ಟ್‌ನಲ್ಲಿ ಯಾರಿದ್ದಾರೆ?

  • 3 ವರ್ಷಗಳ ನಂತರ ದಲೈಲಾಮಾ ದೆಹಲಿಗೆ ಭೇಟಿ

    3 ವರ್ಷಗಳ ನಂತರ ದಲೈಲಾಮಾ ದೆಹಲಿಗೆ ಭೇಟಿ

    ನವದೆಹಲಿ: ಸತತ 3 ವರ್ಷಗಳ ನಂತರ ಟಿಬೆಟ್‌ ಧರ್ಮಗುರು ದಲೈಲಾಮಾ ಅವರು ದೆಹಲಿ ಭೇಟಿ ನೀಡಲಿದ್ದಾರೆ.

    ಲಡಾಖ್‌ನಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯದ ನಂತರ ದಲೈಲಾಮಾ ಅವರು ಶುಕ್ರವಾರ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಲಡಾಖ್ ಬೌದ್ಧ ಸಂಘ ತಿಳಿಸಿದೆ. ರಾಜಕೀಯ ನಾಯಕರೊಂದಿಗೆ ದಲೈಲಾಮಾ ಅವರು ಸಭೆ ನಡೆಸುವ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಇದನ್ನೂ ಓದಿ: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ- 3 ದಿನದೊಳಗೆ ಎರಡನೇ ಬಾರಿ ಅರೆಸ್ಟ್ ಆದ ಶಾಸಕ ರಾಜಾಸಿಂಗ್

    ಒಂದು ತಿಂಗಳು ವಾಸ್ತವ್ಯ ಹೂಡಿದ್ದ ಲಡಾಖ್‌ನಿಂದ ಆ.26ರಂದು ನಿರ್ಗಮಿಸಲಿದ್ದಾರೆ. ಲೇಹ್‌ನಿಂದ ವಿಮಾನದ ಮೂಲಕ ದೆಹಲಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಟಿಬೆಟಿಯನ್ನರು ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ನಿಜವಾದ ಸ್ವಾಯತ್ತತೆಯನ್ನು ಬಯಸುತ್ತಿದ್ದಾರೆ. ಲಡಾಕಿಗಳು ಮತ್ತೊಮ್ಮೆ ಲಾಸಾಗೆ ಭೇಟಿ ನೀಡುವ ಸಂದರ್ಭ ಶೀಘ್ರವೇ ಒದಗಿ ಬರಲಿದೆ ಎಂದು ಈಚೆಗೆ ದಲೈಲಾಮಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನೊಟೀಸ್‍ನಿಂದ ಬೇಜಾರು ಆಗಿಲ್ಲ, ಭಯನೂ ಆಗಿಲ್ಲ, ನಾನು ಕರೆಕ್ಟಾಗಿ ಇದ್ದೀನಿ: ಕೆಜಿಎಫ್ ಬಾಬು

    ಟಿಬೆಟಿಯನ್ ಮಾತನಾಡುವ ಪ್ರದೇಶಗಳಲ್ಲಿ ನಮ್ಮ ಅಸ್ತಿತ್ವ, ಭಾಷೆ ಮತ್ತು ಶ್ರೀಮಂತ ಬೌದ್ಧ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಕಾಳಜಿ ಹೊಂದಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]