Tag: Tibetan

  • ಮೌಂಟ್ ಎವರೆಸ್ಟ್‌ನಲ್ಲಿ ಭಾರಿ ಹಿಮಪಾತ – 1,000 ಜನ ಸಿಲುಕಿರುವ ಶಂಕೆ; 350 ಚಾರಣಿಗರ ರಕ್ಷಣೆ

    ಮೌಂಟ್ ಎವರೆಸ್ಟ್‌ನಲ್ಲಿ ಭಾರಿ ಹಿಮಪಾತ – 1,000 ಜನ ಸಿಲುಕಿರುವ ಶಂಕೆ; 350 ಚಾರಣಿಗರ ರಕ್ಷಣೆ

    ಕಠ್ಮಂಡು: ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನಲ್ಲಿ (Mount Everest) ತೀವ್ರ ಹಿಮಪಾತವಾದ (Blizzard) ಕಾರಣ ಟಿಬೆಟಿಯನ್ ಇಳಿಜಾರಿನ ಶಿಬಿರಗಳಲ್ಲಿ ಸುಮಾರು ಒಂದು ಸಾವಿರ ಪರ್ವತಾರೋಹಿಗಳು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

    ಪರ್ವತ ಪ್ರದೇಶವನ್ನು ತಲುಪುವ ಹಾದಿಯೂ ಹಿಮದಿಂದ ಮುಚ್ಚಿದ್ದು, ತೆರವಿಗೆ ನೂರಾರು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

    350 ಮಂದಿ ರಕ್ಷಣೆ
    ಹತ್ತಿರದ ಕುಡಾಂಗ್ ಪಟ್ಟಣದಲ್ಲಿ ಸುಮಾರು 350 ಮಂದಿಯನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಸ್ಥಳಕ್ಕೆ ತರಲಾಗಿದೆ. ಟಿಬೆಟ್‌ನ ಬ್ಲೂಸ್ಕೈ ತಂಡದ ಬೆಂಬಲದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಹವಾಮಾನ ವೈಪರೀತ್ಯದ ಹಿನ್ನೆಲೆ ಎವರೆಸ್ಟ್ ಪರ್ವತಾರೋಹಣಕ್ಕೆ ಟಿಕೆಟ್ ಕಾಯ್ದಿರಿಸುವಿಕೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: Bihar Election Dates 2025 | ಬೂತ್ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಲು ಸಹಾಯವಾಣಿ

  • 30 ದಿನಗಳ ವಿಶ್ರಾಂತಿಗಾಗಿ ಮೈಸೂರಿನ ಬೈಲಕುಪ್ಪೆಗೆ 14ನೇ ದಲೈಲಾಮ ಆಗಮನ!

    30 ದಿನಗಳ ವಿಶ್ರಾಂತಿಗಾಗಿ ಮೈಸೂರಿನ ಬೈಲಕುಪ್ಪೆಗೆ 14ನೇ ದಲೈಲಾಮ ಆಗಮನ!

    ಮಡಿಕೇರಿ: ಟಿಬೆಟಿಯನ್ನರ ಸಾಂಪ್ರದಾಯಿಕ ಧರ್ಮಗುರುಗಳಾದ 14ನೇ ದಲೈಲಾಮ (14th Dalai Lama) ಅವರು 30 ದಿನಗಳ ವಿಶ್ರಾಂತಿಗಾಗಿ ಬೈಲಕುಪ್ಪೆಯ ಟಿಬೆಟಿಯನ್‌ ಕ್ಯಾಂಪ್‌ಗೆ (Tibetan Camp) ಆಗಮಿಸಿದ್ದಾರೆ.

    ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ, ಬೈಲಕುಪ್ಪೆಯ 4ನೇ ಕ್ಯಾಂಪಿನಲ್ಲಿರುವ ಎಲಿಫ್ಯಾಡ್‌ಗೇ ಸುರಕ್ಷಿತವಾಗಿ ಬಂದಿಳಿದರು.

    ದಲೈಲಾಮ ಅವರು ಆಗಮಿಸುತ್ತಿದ್ದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟಿಬೇಟಿಯನ್ನರು, 6 ಕಿಮೀ ರಸ್ತೆ ಯುದ್ದಕ್ಕೂ ಟಿಬೆಟಿಯನ್ ಮಾದರಿಯ ಉಡುಪುಗಳನ್ನು ಧರಿಸಿ ಬೆಳಗ್ಗೆ 6 ಗಂಟೆಯಿಂದಲೇ ತಮ್ಮ ನೆಚ್ಚಿನ ಗುರುಗಳ ದರ್ಶನಕ್ಕೆ ಕಾದುಕುಳಿತಿದ್ದರು.

    ಜೆಡ್ ಪ್ಲಸ್ ಭದ್ರತೆ ಹೊಂದಿರುವ ದಲೈಲಾಮ ಅವರು ಆಗಮಿಸುತ್ತಿದ್ದಂತೆ, ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ಎಲಿಫ್ಯಾಡ್ ನಿಂದ ಕಾರಿನ ಮುಖಾಂತರ ಲಕ್ಷ್ಮಿಪುರ ಗ್ರಾಮದಲ್ಲಿರುವ ತಶಿಲಾಂಪು ದೇವಸ್ಥಾನಕ್ಕೆ ತೆರಳಿದರು. ಈ ವೇಳೆ ಬೌದ್ಧ ಬಿಕ್ಕುಗಳು ಬಗೆ-ಬಗೆಯ ಹೂಗಳನ್ನು ಚೆಲ್ಲುತ್ತಾ ಆತ್ಮೀಯವಾಗಿ ದೇವಸ್ಥಾನದ ಒಳಗೆ ಬರಮಾಡಿಕೊಂಡರು. ಇಲ್ಲಿನ ಸ್ಥಳೀಯ ಟಿಬೆಟಿಯನ್ನರು ಸಾಂಪ್ರದಾಯಿಕ ನೃತ್ಯಗಳನ್ನು ಸಹ ಮಾಡಿದ ದೃಶ್ಯ ಕಂಡುಬಂದಿತು.

    ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್‌ಪಿ ನಾಗೇಶ್, ಡಿವೈಎಸ್ಪಿ ಗೋಪಾಲಕೃಷ್ಣ, ವೃತ್ತ ನಿರೀಕ್ಷಕ ದೀಪಕ್, ಬೈಲಕುಪ್ಪೆ ಠಾಣಾಧಿಕಾರಿ ಅಜಯ್ ಕುಮಾರ್, ಸ್ಥಳೀಯ ಸೆಟಲ್ಮೆಂಟ್ ಅಧಿಕಾರಿಗಳಾದ ಗ್ಯಾಲಕ್, ಚಿಮ್ಮಿ ದೊರ್ಜಿ, ಟಿಡಿಎಲ್ ಸೊಸೈಟಿ ಅಧ್ಯಕ್ಷ ಜೋಡೆನ್, ಇಂಡೋ ಟಿಬೆಟಿಯನ್ ಫ್ರೆಂಡ್ಶಿಪ್ ಅಧ್ಯಕ್ಷ ಜವರೇಗೌಡ, ಸುತ್ತ ಮುತ್ತ ಟಿಬೆಟಿಯನ್ ದೇವಸ್ಥಾನದ ಹಿರಿಯ ಬೌದ್ಧ ಗುರುಗಳು ಇದ್ದರು.

  • ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ನವದೆಹಲಿ: ಉತ್ತರ ದೆಹಲಿಯಲ್ಲಿ (Delhi) ಟಿಬೆಟಿಯನ್ ನಿರಾಶ್ರಿತರು ವಾಸವಿದ್ದ ಸ್ಥಳದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಚೀನಾದ ಮಹಿಳೆಯನ್ನು (Chinese woman) ಪೊಲೀಸರು (Delhi Police) ಬಂಧಿಸಿರುವುದಾಗಿ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಮಹಿಳೆಯ ಗುರುತಿನ ಪತ್ರದಲ್ಲಿ ಆಕೆಯ ಹೆಸರು ಡೋಲ್ಮಾ ಲಾಮಾ ಎಂದು ಬರೆಯಲಾಗಿದೆ. ಆಕೆಯ ವಿಳಾಸ ನೇಪಾಳದ (Nepal) ರಾಜಧಾನಿ ಕಠ್ಮಂಡು ಎಂದು ತೋರಿಸಿದೆ. ಆದರೆ ಆಕೆಯ ನಿಜ ಹೆಸರು ಕೈ ರೂವೋ ಎಂದು ಪೊಲೀಸರು ತಿಳಿಸಿದ್ದಾರೆ.

    ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಬಳಿ ಇರುವ ಟಿಬೆಟಿಯನ್ ನಿರಾಶ್ರಿತರ ಕಾಲೋನಿ ಮಜ್ನು ಕಾ ತಿಲ್ಲಾದಲ್ಲಿ ಆಕೆ ವಾಸವಿದ್ದಳು. ಆಕೆ ಬೌದ್ಧ ಸನ್ಯಾಸಿಗಳಂತೆ ಸಾಂಪ್ರದಾಯಿಕ ಕೆಂಪು ನಿಲುವಂಗಿ ಧರಿಸಿಕೊಂಡು, ಕೂದಲನ್ನೂ ಚಿಕ್ಕದಾಗಿ ಕತ್ತರಿಸಿಕೊಂಡಿದ್ದಳು. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ, ಗಲಾಟೆಗೆ ಕರಪತ್ರ ಹಂಚಿಕೆ – PFI ಸಂಘಟನೆಯ ಕುತಂತ್ರ ಮತ್ತಷ್ಟು ಬಯಲು

    ಈ ಬಗ್ಗೆ ಮಹಿಳೆಯ ವಿದೇಶಿ ಪ್ರಯಾಣದ ದಾಖಲೆಗಳನ್ನು ಹುಡುಕಿದಾಗ ಆಕೆ 2019ರಲ್ಲಿ ಚೀನಾದ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಬಂದಿರುವುದು ತಿಳಿದುಬಂದಿದೆ. ಆಕೆಯನ್ನು ವಿಚಾರಿಸಿದಾಗ ಚೀನಾದ ಕಮ್ಯೂನಿಸ್ಟ್ ಪಕ್ಷದ ಕೆಲ ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಎಂದು ಹೇಳಿಕೊಂಡಿದ್ದಾಳೆ.

    ಮಹಿಳೆ ಇಂಗ್ಲಿಷ್, ಮ್ಯಾಂಡರಿನ್ ಹಾಗೂ ನೇಪಾಳಿ ಭಾಷೆಗಳನ್ನು ತಿಳಿದಿದ್ದಾಳೆ. ಆಕೆ ಬೇಹುಗಾರಿಕೆ ಕೆಲಸಗಳಲ್ಲಿ ಭಾಗಿಯಾಗಿದ್ದಾಳೆಯೇ ಎಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದಾರೆ. ಇದನ್ನೂ ಓದಿ: ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    Live Tv
    [brid partner=56869869 player=32851 video=960834 autoplay=true]

  • 2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    ಶಿಮ್ಲಾ: ಕೋವಿಡ್ ಸಾಂಕ್ರಾಮಿಕ ರೋಗ ಹರಡಿ ಮಾನವರು ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದು ಕಡಿಮೆಯಾಗಿತ್ತು. ಎರಡಕ್ಕೂ ಹೆಚ್ಚು ವರ್ಷಗಳಕಾಲ ಬೌದ್ಧ ಧರ್ಮ ಗುರು ದಲೈ ಲಾಮಾ (Dalai Lama) ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕೊರೊನಾ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು. ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

    ಟಿಬೆಟಿಯನ್ ದೇವಾಲಯದಲ್ಲಿ ಅನುಯಾಯಿಗಳಿಗೆ ‘ಜಟಕ’ ಕಥೆಗಳ ಕಿರು ಬೋಧನೆಯನ್ನು ನೀಡಿದರು. ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಸದಸ್ಯರು ಹಾಗೂ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ಸನ್ಯಾಸಿಗಳು ಮತ್ತು ಕೇಂದ್ರದ ಸದಸ್ಯರು ಸೇರಿದಂತೆ ಸಾವಿರಾರು ಟಿಬೆಟಿಯನ್ನರು, ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ (CTA), ಕೂಟದ ಭಾಗವಾಗಿದ್ದಾರೆ. (CTA) ಚಾರ್ಟರ್ ಆಫ್ ದಿ ಟಿಬೆಟಿಯನ್ಸ್ ಇನ್-ಎಕ್ಸೈಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    (CTA) ಸದಸ್ಯ ತೇನ್ಸಿಂಗ್ ಜಿಗ್ಮೆ ಮಾತನಾಡಿ, ಇದು ಅತ್ಯಂತ ಸುಂದರವಾದ ದಿನ. ನಾವು ಎರಡು ವರ್ಷಗಳ ನಂತರ ಅವರನ್ನು ನೋಡುತ್ತಿದ್ದೇವೆ. ಇದು ಇಂದಿನ ಅತ್ಯಂತ ಅದೃಷ್ಟದ ಸಂಗತಿಯಾಗಿದೆ. ಅವರು ಆರೋಗ್ಯವಾಗಿದ್ದಾರೆ ಆದ್ದರಿಂದ ನಾವು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು. ನಾವು ನಿಜವಾಗಿಯೂ ಸಂತೋಷವನ್ನು ಅನುಭವಿಸುತ್ತಿದ್ದೇವೆ ಮತ್ತು ಅವರ ಪವಿತ್ರತೆಯನ್ನು ಉತ್ತಮವಾಗಿ ನೋಡಲು ಆಶೀರ್ವದಿಸುತ್ತೇವೆ ಎಂದು ಹೇಳಿದ್ದಾರೆ.

  • ಮರಣಹೊಂದಿ ಹತ್ತು ದಿನ ಕಳೆದರೂ ಕೊಳೆಯದೇ ಉಳಿದ ಬೌದ್ಧ ಸನ್ಯಾಸಿ ದೇಹ

    ಮರಣಹೊಂದಿ ಹತ್ತು ದಿನ ಕಳೆದರೂ ಕೊಳೆಯದೇ ಉಳಿದ ಬೌದ್ಧ ಸನ್ಯಾಸಿ ದೇಹ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಟಿಬೇಟಿಯನ್ ಕಾಲೋನಿಯಲ್ಲಿ ಬೌದ್ಧ ಸನ್ಯಾಸಿಯೊಬ್ಬರು ಮೃತರಾಗಿ ಹತ್ತು ದಿನ ಕಳೆದರೂ ದೇಹ ಕೊಳೆಯದೇ ಯಥಾಸ್ಥಿತಿಯಲ್ಲಿರುವ ಮೂಲಕ ವಿಸ್ಮಯ ಮೂಡಿಸಿದೆ.

    ಕಾಲೋನಿಯ ನಂ.1 ಕ್ಯಾಂಪ್‍ನ ಶೇರ್ ಗಾಂದೇನ್ ಬೌದ್ಧ ಮಂದಿರದ ಹಿರಿಯ ಸನ್ಯಾಸಿ ಯಾಸಿ ಪೋಂಟ್ಸ್(90) ಸೆ. 9 ರಂದು ಕೊಠಡಿಯಲ್ಲಿ ಧ್ಯಾನದಲ್ಲಿ ಇರುವಾಗ ಮೃತರಾಗಿದ್ದರು. ಅವರ ದೇಹವನ್ನು ಅದೇ ಕೊಠಡಿಯಲ್ಲಿ ಹಾಗೆಯೇ ಇರಿಸಲಾಗಿದೆ. ಇದೀಗ ಹತ್ತು ದಿನ ಕಳೆದರೂ ಕೂಡ ಮೃತದೇಹದಲ್ಲಿ ನೀರು ಒಡೆಯುವುದಾಗಲಿ, ವಾಸನೆ ಬರುವುದಾಗಲಿ, ಕೊಳೆಯುವುದಾಗಲಿ ಆಗದೇ ಯಥಾಸ್ಥಿತಿಯಲ್ಲಿದ್ದು ಇದೀಗ ಅವರ ದೇಹಕ್ಕೆ ಕಿರಿಯ ಬೌದ್ಧ ಸನ್ಯಾಸಿಗಳು ದೀಪ ಬೆಳಗಿಸುವ ಮೂಲಕ ಪೂಜೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರೇಮ ವೈಫಲ್ಯ- ರೈಲ್ವೇ ಹಳಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

    ಈ ಸನ್ಯಾಸಿಯು ಕ್ಯಾಂಪ್‍ನಲ್ಲಿ ಇರುವ ಕಿರಿಯ ಸನ್ಯಾಸಿಗಳಿಗೆ ಧರ್ಮ ಭೋದನೆ ಮಾಡುತಿದ್ದರು. ಇದೀಗ ಅವರು ಮೃತಪಟ್ಟಿದ್ದರೂ ದೇಹ ಯಥಾಸ್ಥಿತಿಯಲ್ಲಿ ಇರುವುದರಿಂದ ದೇಹ ಕೊಳೆಯುವವರೆಗೂ ಅಂತ್ಯಸಂಸ್ಕಾರ ಮಾಡದಿರಲು ಟಿಬೇಟಿಯನ್ ಮುಖಂಡರು ತೀರ್ಮಾನಿಸಿದ್ದಾರೆ.

    ಅಂತ್ಯ ಸಂಸ್ಕಾರ ಹೇಗಿರುತ್ತೆ?
    ಬೌದ್ಧ ಸನ್ಯಾಸಿಗಳು ಮರಣ ಹೊಂದಿದ ನಂತರ ಅವರ ದೇಹವನ್ನು ಊರಿನ ದೂರದ ಬೆಟ್ಟ ಪ್ರದೇಶದಲ್ಲಿ ಇಡಲಾಗುತ್ತದೆ. ಆ ದೇಹವನ್ನು ರಣ ಹದ್ದುಗಳು ತಿನ್ನಲು ಬಿಡುವುದು ಟಿಬೇಟಿಯನ್‍ರ ಸಂಪ್ರದಾಯ. ಆದರೆ ಇಂದಿನ ದಿನದಲ್ಲಿ ಆ ರೀತಿಯಲ್ಲಿ ವ್ಯವಸ್ಥೆಗಳು ಇಲ್ಲದ ಕಾರಣ ದೇಹವನ್ನು ಹೂತು ಹಾಕಿ ಆ ಸ್ಥಳದಲ್ಲಿ ಮಂಟಪವನ್ನು ನಿರ್ಮಿಸುತ್ತಾರೆ. ಅಂತ್ಯ ಸಂಸ್ಕಾರದ ವೇಳೆ ಬೌದ್ಧ ಧರ್ಮದ ರಿವಾಜುಗಳ ಮೂಲಕ ಮೆರವಣಿಗೆ ಮಾಡಿ ನಂತರ ಜನರಿಗೆ ನಮಸ್ಕರಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನೂ ಓದಿ: ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂಪಾಯಿ

  • ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ

    ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ

    ನವದೆಹಲಿ: ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಕಗಳು ತಿಳಿಸಿವೆ.

    ಇತ್ತೀಚಿನ ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ, ಮುಂದಿನದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿಧರಿಸಿದೆ. ತನ್ನ ವಶದಲ್ಲಿರುವ ಟಿಬೆಟ್‍ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ ಎಂದು ಮೂಲಗಳು ತಿಳಿಸಿವೆ.

    ಪೂರ್ವ ಲಡಾಖ್ ಸಂಘರ್ಷದ ವೇಳೆ ಭಾರತ ತನ್ನ ಸೆಷಲ್ ಫ್ರಂಟಿಯರ್ಸ್ ಪಡೆಯನ್ನು ನಿಯೋಜಿಸಿತ್ತು. ವಲಸಿಗ ಟಿಬೆಟಿಯನ್ ಸಮುದಾಯದವರನ್ನೇ ಆಯ್ದು ರಚಿಸಿರುವ ಈ ಪಡೆ ಲಡಾಖ್‍ನ ಅತ್ಯಂತ ಸಂಕಷ್ಟಮಯ ವಾತಾವರಣವನ್ನೂ ಸುಲಭವಾಗಿ ಎದುರಿಸಬಲ್ಲದು. ಹೀಗಾಗಿಯೇ ಪೂರ್ವ ಲಡಾಖ್‍ನಲ್ಲಿ ಚೀನಾಯೋಧರು ಹಿನ್ನಡೆ ಅನುಭವಿಸಿದ್ದರು.

    ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಟಿಬೆಟ್ ಯುವಕರನ್ನು ಆಯ್ದು ಅವರಿಗೆ ವಿಶೆಷ ತರಬೇತಿ ನೀಡಿದ್ದ ಚೀನಾ, ಇದೀಗ ಇಂಥ ಯೋಧರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

  • ಸತ್ತು 7 ದಿನಗಳಾದ್ರೂ ಗುರುವಿನ ಆತ್ಮ ಜೀವಂತ, ಅನುಯಾಯಿಗಳಿಂದ ಶವವಿಟ್ಟು ಪೂಜೆ!

    ಸತ್ತು 7 ದಿನಗಳಾದ್ರೂ ಗುರುವಿನ ಆತ್ಮ ಜೀವಂತ, ಅನುಯಾಯಿಗಳಿಂದ ಶವವಿಟ್ಟು ಪೂಜೆ!

    ಕಾರವಾರ: ಧರ್ಮಗುರುಗಳು ಸಾವನ್ನಪ್ಪಿ ಏಳು ದಿನಗಳು ಕಳೆದ್ರೂ, ಅವರ ಆತ್ಮವಿನ್ನೂ ಜಾಗೃತವಾಗಿದೆ ಎಂಬ ಕಾರಣಕ್ಕೆ ಶವ ಸಂಸ್ಕಾರ ಮಾಡದೇ ಕೊಠಡಿಯೊಂದರಲ್ಲಿಟ್ಟು ಪೂಜೆ ಮಾಡಲಾಗ್ತಿತ್ತು.

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಗೆಲುಕ್ಪಾ ಪಂಗಡದ ಪ್ರಮುಖ ನಾಯಕ ಗೆಶೆ ಲೋಬ್ಸಂಗ್ ತೆಂಜಿನ್ (90) ಅವರು ಇದೇ ತಿಂಗಳು 21ರಂದು ಸಾವನ್ನಪ್ಪಿದ್ದರು. ಆದರೆ ಅವರ ಆತ್ಮ ದೇಹದಲ್ಲಿ ಜಾಗೃತವಾಗಿದೆ ಎಂಬ ಕಾರಣಕ್ಕೆ ಇಂದು ಅಂತ್ಯಸಂಸ್ಕಾರ ಮಾಡಲಾಗಿದೆ.

    ಇದೇ ತಿಂಗಳ 21 ರಂದು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವಯೋ ಸಹಜತೆಯಿಂದ ತೆಂಜಿನ್ ಮೃತಪಟ್ಟಿದ್ದರು. ನಂತರ ದೆಹಲಿಯಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಬಳಿ ಇರುವ ಟಿಬೇಟಿಯನ್ ನಿರಾಶ್ರಿತರ ಕಾಲೋನಿಗೆ ಮೃತದೇಹವನ್ನು ತರಲಾಗಿದ್ದು, ಧಾರ್ಮಿಕ ವಿಧಿ ಪೂರೈಸಲು ಅನುಯಾಯಿಗಳು ಮುಂದಾಗಿದ್ರು. ಆದ್ರೆ ಅವರ ದೇಹದಲ್ಲಿ ಆತ್ಮ ಜಾಗೃತವಾಗಿದೆ ಎಂದು ಹಿರಿಯ ಧರ್ಮ ಗುರುಗಳು ಹೇಳಿದ್ದರಿಂದ ಅಂತ್ಯಸಂಸ್ಕಾರವನ್ನು ಮುಂದೂಡಲಾಯ್ತು. ಇನ್ನು ಅವರ ದೇಹಕ್ಕೆ ಪೂಜೆ ಸಲ್ಲಿಸುವ ಮೂಲಕ ಆತ್ಮ ದೇಹದಿಂದ ಸಂಪೂರ್ಣ ಹೋದ ನಂತರವೇ ಶವ ಸಂಸ್ಕಾರದ ವಿಧಿಯನ್ನು ಪೂರೈಸಲು ತೀರ್ಮಾನಿಸಿ ಲಾಮಾ ಕ್ಯಾಂಪ್ ನ ನಂ.2 ಲೋಸಲಿಂಗ್ ಬೌದ್ಧ ಮಂದಿರದಲ್ಲಿ ಇಟ್ಟು ಪೂಜೆಗೈಯಲಾಗುತಿದ್ದು, ಇಂದು ದೇಹದಿಂದ ಆತ್ಮ ಹೊರಹೋಗಿರುವುದು ದೃಢಪಟ್ಟಿದ್ದರಿಂದಾಗಿ ಅಂತ್ಯಸಂಸ್ಕಾರದ ವಿಧಿ ಪೂರೈಸಲಾಯ್ತು ಎನ್ನಲಾಗಿದೆ.

    ಸಾಂದರ್ಭಿಕ ಚಿತ್ರ

    ಆತ್ಮವಿರುವುದು ತಿಳಿಯುವುದು ಹೇಗೆ?: ಟಿಬೇಟಿಯನ್‍ರಲ್ಲಿ ಯಾವುದೇ ಧರ್ಮ ಗುರುಗಳು ನಿಧನ ಹೊಂದಿದ್ರೆ ಅವರ ಮೈ ಬೆಚ್ಚಗಿದ್ದರೇ ಆಗ ಆತ್ಮ ಜಾಗೃತವಾಗಿರುತ್ತೆ ಅನ್ನೂ ನಂಬಿಕೆ ಇದೆ. ಹೀಗಾಗಿ ಯಾವುದೇ ಧರ್ಮಗುರುಗಳು ನಿಧನ ಹೊಂದಿದಾಗ ಅದನ್ನು ದೃಢಪಡಿಸಿಕೊಳ್ಳಲಾಗುತ್ತೆ. ಹೀಗೆ ದೃಢಪಡಿಸಿಕೊಳ್ಳುವ ಸಂದರ್ಭದಲ್ಲಿ ಗೆಶೆ ಲೋಬ್ಸಂಗ್ ತೆಂಜಿನ್ ರವರ ದೇಹ ಬಿಸಿಯಾಗಿತ್ತು. ಆದ್ದರಿಂದ ಕಾಲೋನಿಯ ಒಂದು ಕೋಣೆಯಲ್ಲಿ ಅವರ ಶವವನ್ನ ಮಲಗಿದ ಸ್ಥಿತಿಯಲ್ಲಿಟ್ಟು ದಿನಂಪ್ರತಿ ಪೂಜೆ ಸಲ್ಲಿಸಲಾಗುತಿತ್ತು. ಇಂದು ಅವರ ದೇಹದಲ್ಲಿ ತಣ್ಣಗಿನ ಅನುಭವವಾಗಿದ್ದು ದೇಹದಿಂದ ಆತ್ಮ ಹೊರಹೋಗಿರುವುದನ್ನ ಟಿಬೇಟಿಯನ್ ಕಾಲೋನಿಯ ದಲಾಯಿ ಲಾಮಾ ಕಚೇರಿಯ ಸ್ಥಳೀಯ ಪ್ರತಿನಿಧಿ ಕರ್ಮಾರವರು ದೃಢಪಡಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಟಿಬೇಟಿಯನ್‍ನ ಗೆಲುಕ್ಪಾ ಪಂಗಡದ ಗೆಶೆ ಲೋಬ್ಸಂಗ್‍ರವರು ಈ ಹಿಂದೆ ಇಂದಿರಾ ಗಾಂಧಿ ಸರ್ಕಾರದ ಕಾಲದಲ್ಲಿ ಟಿಬೇಟ್‍ನಿಂದ ಆಶ್ರಯ ಬಯಸಿ ಭಾರತಕ್ಕೆ ಬಂದು ಮುಂಡಗೋಡಿನ ನಿರಾಶ್ರಿತರ ಕಾಲೋನಿಯಲ್ಲಿ ವಾಸವಾಗಿದ್ದರು. ಅಪ್ಪಟ ದಲಾಯಿ ಲಾಮಾ ರವರ ಅನುಯಾಯಿಯಾಗಿರುವ ಇವರು ದೇಶ ವಿದೇಶಗಳನ್ನು ಸುತ್ತಿ ಬೌದ್ಧ ಧರ್ಮ ಪ್ರಚಾರದ ಜೊತೆಗೆ ಟಿಬೇಟಿಯನ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಹೀಗಾಗಿ ಟಿಬೇಟಿಯನ್‍ಗಳ ಅಚ್ಚುಮೆಚ್ಚಿನ ನಾಯಕರಾಗಿ, ಧರ್ಮಗುರುಗಳಾಗಿ ಅನೇಕ ಅನುಯಾಯಿಗಳನ್ನ ಸಂಪಾದಿಸಿದ್ದರು.

    ಸಾಂದರ್ಭಿಕ ಚಿತ್ರ

    ಹಿಂದೆಯೂ ನಡೆದಿತ್ತು: ಇನ್ನು ಈ ರೀತಿಯ ಘಟನೆ ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಲಾಮಾ ಕ್ಯಾಂಪ್ ನಂ.2 ರ ಲೋಸಲಿಂಗ ಬೌದ್ಧ ಮಠದ ಪಂಡಿತರಾದ ತಿಸುರ ರಿನಪೋಜೆ ಲೋಬಸಾಂಗ್ ನ್ಯೀಮಾ ರವರು ಮೃತಪಟ್ಟು 18 ದಿನ ಕಳೆದಿದ್ದರೂ ಸಹ ಅವರ ಮೃತದೇಹವನ್ನು ಇಡಲಾಗಿತ್ತು. ಆದರೆ ದೇಹದಿಂದ ಮಾತ್ರ ಯಾವುದೇ ವಾಸನೆ ಬಂದಿರಲಿಲ್ಲ. ನಂತರ ಹಿಮಾಚಲ ಪ್ರದೇಶದ ವೈದ್ಯರ ತಂಡ ಆಗಮಿಸಿ ಪರೀಕ್ಷೆ ನೆಡೆಸಿ 21 ದಿನದ ನಂತರ ಅಂತ್ಯ ಸಂಸ್ಕಾರ ಮಾಡಲಾಯ್ತು. ಹೀಗೆ ಬಹಳಷ್ಟು ವರ್ಷಗಳಿಂದ ಈ ರೀತಿಯ ಧರ್ಮ ಗುರುಗಳು ಸತ್ತಾಗ ಮೂರು ತಿಂಗಳವರೆಗೂ ಶವವನ್ನ ಇಟ್ಟು ಪೂಜಿಸಿದ ಘಟನೆಗಳಿವೆ ಎಂದು ಟಿಬೇಟೆಯನ್ನರು ಹೇಳುತ್ತಾರೆ.

    ಇನ್ನು ಈಗ ಮೃತಪಟ್ಟ ಧರ್ಮಗುರುಗಳ ಶವ ಕೆಡದೇ ಬಿಸಿಯಾಗಿದ್ದು ಮುಖದ ಮೇಲೆ ಬೆವರು ಕಾಣಿಸಿತಿತ್ತು. ಹೀಗಾಗಿ ಆತ್ಮ ದೇಹದಿಂದ ಹೊರಹೋಗಿಲ್ಲ ಎಂಬುದು ದೃಢಪಟ್ಟಿದ್ದು ಈ ಕಾರಣದಿಂದಾಗಿ ನಾವು ಅವರ ದೇಹವನ್ನು ಇರಿಸಿ ಏಳು ದಿನಗಳಿಂದ ಪೂಜೆಗೈದು ಇಂದು ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ ಎಂದು ಪಬ್ಲಿಕ್ ಟಿ.ವಿಗೆ ಟಿಬೇಟಿಯನ್ ಕಾಲೋನಿಯ ಬೌದ್ಧ ಸನ್ಯಾಸಿ ತುಪ್ತಿನ್ ಸಿರಿಂಗ್ ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ