Tag: Thursday

  • ಇಂದು 35,297 ಪಾಸಿಟಿವ್, 517 ಸಾವು – 34,057 ಜನ ಡಿಸ್ಚಾರ್ಜ್

    ಇಂದು 35,297 ಪಾಸಿಟಿವ್, 517 ಸಾವು – 34,057 ಜನ ಡಿಸ್ಚಾರ್ಜ್

    ಬೆಂಗಳೂರು: ಬುಧವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಗಿಂತ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 35,297 ಹೊಸ ಪ್ರಕರಣಗಳು ವರದಿಯಾಗಿದೆ.

    ರಾಜ್ಯದಲ್ಲಿ ಇಂದು ಕೊರೊನಾದಿಂದ 344 ಮಂದಿ ಮೃತಪಟ್ಟಿದ್ದು, ಇಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 20,712ಕ್ಕೆ ಏರಿಕೆಯಾಗಿದೆ.

    ಇಂದು ಆಸ್ಪತ್ರೆಯಿಂದ 34,057 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.27.64 ಮತ್ತು ಮರಣ ಪ್ರಮಾಣ ಶೇ.0.97ರಷ್ಟಿದೆ. ಇಂದು 1,27,668 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 68,658 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,09,76,189 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 15,191 ಹೊಸ ಪ್ರಕರಣಗಳು ವರದಿಯಾಗಿದ್ದು, 161 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,59,565 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 520, ಬಳ್ಳಾರಿ 1,865, ಬೆಳಗಾವಿ 713, ಬೆಂಗಳೂರು ಗ್ರಾಮಾಂತರ 10,79 ಬೆಂಗಳೂರು ನಗರ 15,191, ಬೀದರ್ 257, ಚಾಮರಾಜನಗರ 842, ಚಿಕ್ಕಬಳ್ಳಾಪುರ 354, ಚಿಕ್ಕಮಗಳೂರು 445, ಚಿತ್ರದುರ್ಗ 292, ದಕ್ಷಿಣ ಕನ್ನಡ 812, ದಾವಣಗೆರೆ 494, ಧಾರವಾಡ 737, ಗದಗ 430, ಹಾಸನ 792, ಹಾವೇರಿ 160, ಕಲಬುರಗಿ 497, ಕೊಡಗು 425, ಕೋಲಾರ 488, ಕೊಪ್ಪಳ 437, ಮಂಡ್ಯ 1,153, ಮೈಸೂರು 1,260, ರಾಯಚೂರು 170, ರಾಮನಗರ 518, ಶಿವಮೊಗ್ಗ 880, ತುಮಕೂರು 1,798, ಉಡುಪಿ 891, ಉತ್ತರ ಕನ್ನಡ 791, ವಿಜಯಪುರ 331 ಮತ್ತು ಯಾದಗಿರಿಯಲ್ಲಿ 675 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಗುರುವಾರವೇ ಬಜೆಟ್ ಮಂಡಿಸುತ್ತಿರೋದು ಯಾಕೆ..?

    ಗುರುವಾರವೇ ಬಜೆಟ್ ಮಂಡಿಸುತ್ತಿರೋದು ಯಾಕೆ..?

    ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾದ ಬಳಿಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಬಜೆಟ್ ಮಂಡಿಸಲಿದ್ದಾರೆ. ಸಾಮನ್ಯವಾಗಿ ಹಿಂದಿನ ಸರ್ಕಾರಗಳು ಶುಕ್ರವಾರ ಬಜೆಟ್ ಮಂಡಿಸಲಾಗುತ್ತಿತ್ತು. ಶನಿವಾರ ಮತ್ತು ಭಾನುವಾರ ಬಜೆಟ್ ಪುಸ್ತಕ ಓದಲು ಅನಕೂಲವಾಗಲಿ ಎಂಬ ಉದ್ದೇಶದಿಂದ ಮಂಡನೆ ಮಾಡಲಾಗುತ್ತಿತ್ತು.

    ಎಲ್ಲದಕ್ಕೂ ವಾಸ್ತು ಮತ್ತು ಮುಹೂರ್ತ ನೋಡುವ ಸಚಿವ ಹೆಚ್.ಡಿ.ರೇವಣ್ಣ ಬಜೆಟ್ ಮಂಡನೆಗೂ ಮುನ್ನವೇ ಶಾಸ್ತ್ರ ಕೇಳಿದ್ದರಂತೆ. ಶುಕ್ರವಾರ ಅಷ್ಟಮಿ ತಿಥಿ ಇರುವ ಕಾರಣ ಶುಭ ಕಾರ್ಯವನ್ನ ಈ ದಿನ ಮಾಡಲು ಮುಂದಾಗುವುದಿಲ್ಲ. ಜುಲೈ 5ರಂದು ಸಪ್ತಮಿ ತಿಥಿ ಪೂರ್ವಾಭದ್ರ ನಕ್ಷತ್ರದ ಕನ್ಯಾ ಲಗ್ನದ ಶುಭ ಘಳಿಗೆಯಲ್ಲಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಹಿಂದೆಯೂ ರಾಹುಕಾಲದ ಬಳಿಕವೇ ಹೆಚ್.ಡಿ.ರೇವಣ್ಣ ಪ್ರಮಾಣ ವಚನ ಸ್ವೀಕರಿಸಿದ್ದರು. ಎರಡು ದಿನಗಳ ಹಿಂದೆ ಹಾಸನದಲ್ಲಿ ಕಟ್ಟಡ ಶಂಕು ಸ್ಥಾಪನೆ ವೇಳೆ ವಾಸ್ತು ಪ್ರಕಾರ ಪೂಜೆ ಮಾಡುತ್ತಿಲ್ಲ ಎಂದು ಅರ್ಚಕರಿಗೆ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ತೀವ್ರ ಕುತೂಹಲವನ್ನು ಹುಟ್ಟು ಹಾಕಿದ್ದು, ಯಾವ ಪ್ರಮಾಣದಲ್ಲಿ ರೈತರ ಸಾಲಮನ್ನ ಮಾಡಲಾಗುತ್ತೆ ಎಂದು ನಿರೀಕ್ಷೆಯನ್ನು ಮೂಡಿಸಿದೆ.

  • 353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

    353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

    ಬೆಂಗಳೂರು: 1664ರ ಬಳಿಕ ಇದೇ ಮೊದಲ ಬಾರಿಗೆ ಖಗೋಳ ಕೌತುಕ ನಡೆಯಲಿದ್ದು, ಗುರುವಾರ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

    ಹೌದು, ಬರೋಬ್ಬರಿ 353 ವರ್ಷಗಳ ನಂತರ ಶನಿ, ರವಿ ಸಮಾಗಮವಾಗಲಿದೆ. ಖಗೋಳಶಾಸ್ತ್ರದ ಪ್ರಕಾರ ಗುರುವಾರ ಅಪಾಯಕಾರಿಯಾಗಿದ್ದು, ನಾಳೆ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.

    ಡಿಸೆಂಬರ್ 21 ಅತ್ಯಂತ ಕಡಿಮೆ ಹಗಲಿನ ದಿನವಾಗಿದ್ದು, ರವಿ, ಶನಿ ಜೊತೆಯಾಗಿ ಸಂಚಾರ ಮಾಡುವ ಕಾರಣ ಬಹಳ ಅಪಾಯಕಾರಿ ದಿನ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.

    ಜ್ಯೋತಿಷಿಗಳು ಹೇಳೋದು ಏನು?
    ಇದು ಅತಿ ವಿರಾಳವಾದ ದಿನವಾಗಿದ್ದು, ನಾಳೆ ಕಷ್ಟಕ್ಕೆ ಸಿಲುಕಿದರೆ ಇನ್ನು 1 ವರ್ಷ ಪರಿಣಾಮ ಅನುಭವಿಸಬೇಕಾಗುತ್ತದೆ. ಇನ್ನೊಂದು ವರ್ಷ ಶನಿ ಕಾಡುತ್ತಲೇ ಇರುತ್ತಾನೆ. ಮನೆಯಲ್ಲಿ ಅಗ್ನಿ ಆಕಸ್ಮಿಕ ಹೆಚ್ಚಾಗಿ ಸಂಭವಿಸುತ್ತದೆ. ಅಪಘಾತಗಳು ಜಾಸ್ತಿ ಆಗುತ್ತವೆ. ಮನೆಯಲ್ಲಿನ ಹಿರಿಯರು ದೈವಾಧೀನರಾಗುತ್ತಾರೆ. ಈ ಎಲ್ಲ ಕಾರಣಕ್ಕಾಗಿ ಯಾವುದೇ ಹೊಸ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    https://www.youtube.com/watch?v=E1FfyUkMeUY