Tag: thumb

  • ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಗಾಂಧೀನಗರ: ಕ್ರಿಕೆಟ್ (Cricket) ಆಡುತ್ತಿದ್ದ ಸಂದರ್ಭ ದಲಿತ ಬಾಲಕನೊಬ್ಬ (Dalit Boy) ಚೆಂಡನ್ನು (Ball) ಮುಟ್ಟಿದ್ದಕ್ಕೆ ಗಲಾಟೆ ನಡೆದು, ಇದನ್ನು ಪ್ರಶ್ನಿಸಿದ ದಲಿತ ವ್ಯಕ್ತಿಯ (Dalit Man)  ಹೆಬ್ಬೆರಳನ್ನೇ ( ಕತ್ತರಿಸಿರುವ ವಿಕೃತ ಘಟನೆ ಗುಜರಾತ್‌ನಲ್ಲಿ ನಡೆದಿದೆ.

    ಗುಜರಾತ್‌ನ ಪಟಾನ್ ಜಿಲ್ಲೆಯ ಗ್ರಾಮಸ್ಥರು ಭಾನುವಾರ ಶಾಲೆಯೊಂದರ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ.

    ಈ ವಿಚಾರ ತಿಳಿದ ಬಾಲಕನ ಸಂಬಂಧಿ ಧೀರಜ್ ಪರ್ಮಾರ್ ಗ್ರಾಮಸ್ಥರಲ್ಲಿ ಬಾಲಕನಿಗೆ ನಿಂದಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕ್ಷಣಕ್ಕೆ ಗಲಾಟೆಯನ್ನು ಇತ್ಯರ್ಥಗೊಳಿಸಲಾಯಿತಾದರೂ ಬಳಿಕ ಸಂಜೆ 7 ಜನರ ಗುಂಪು ಹರಿತವಾದ ಆಯುಧಗಳೊಂದಿಗೆ ಬಂದು ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ಇದೀಗ ಘಟನೆ ಬಗ್ಗೆ ಪೊಲೀಸರು ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ

  • ರೈಲ್ವೆ ಉದ್ಯೋಗದ ಆಸೆಗೆ ತನ್ನ ಹೆಬ್ಬೆರಳಿನ ಚರ್ಮ ತೆಗೆದು ಸ್ನೇಹಿತನಿಗೆ ಅಂಟಿಸಿ ಸಿಕ್ಕಿಬಿದ್ದ

    ರೈಲ್ವೆ ಉದ್ಯೋಗದ ಆಸೆಗೆ ತನ್ನ ಹೆಬ್ಬೆರಳಿನ ಚರ್ಮ ತೆಗೆದು ಸ್ನೇಹಿತನಿಗೆ ಅಂಟಿಸಿ ಸಿಕ್ಕಿಬಿದ್ದ

    ಗಾಂಧಿನಗರ: ರೈಲ್ವೇ ಉದ್ಯೋಗ ಪಡೆಯುವ ಪ್ರಯತ್ನದಲ್ಲಿ ವ್ಯಕ್ತಿಯೋರ್ವ ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ನೀರಿಗೆ ಅದ್ದಿ ತನ್ನ ಸ್ನೇಹಿತನ ಬೆರಳಿಗೆ ಅಂಟಿಸಿ ಉದ್ಯೋಗಕ್ಕಾಗಿ ಅಕ್ರಮ ನಡೆಸಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಆಗಸ್ಟ್ 22 ರಂದು ಗುಜರಾತ್‍ನ ವಡೋದರಾ ನಗರದಲ್ಲಿ ನಡೆದ ರೈಲ್ವೇ ನೇಮಕಾತಿ ಪರೀಕ್ಷೆಗೆ ಮೊದಲು ಬಯೋಮೆಟ್ರಿಕ್ ಮೂಲಕ ಪರಿಶೀಲನೆ ಕಾರ್ಯ ನಡೆದಿತ್ತು. ಇದೇ ವೇಳೆ ಪರೀಕ್ಷಾ ಮೇಲ್ವಿಚಾರಕರು ಸ್ಯಾನಿಟೈಸರ್ ಅನ್ನು ಬೆರಳಿನ ಮೇಲೆ ಸಿಂಪಡಿಸಿದಾಗ ಕೈಗೆ ಅಂಟಿಸಿದ್ದ ಹೆಬ್ಬೆರಳಿನ ಚರ್ಮವು ಉದುರಿ ಕೆಳಗೆ ಬಿದ್ದಿದೆ. ಇದೀಗ ಈ ಸಂಬಂಧ ಬಿಹಾರದ ಮುಂಗೇರ್ ಜಿಲ್ಲೆಯ ಮನೀಶ್ ಕುಮಾರ್ ಮತ್ತು ಆತನ ಸ್ನೇಹಿತ ರಾಜಗುರುಗುಪ್ತಾ ನನ್ನು ವಡೋದರಾ ಪೊಲೀಸರು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್‍ಎಂ ವರೋಟಾರಿಯಾ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕಿದೆ: ಚಕ್ರವರ್ತಿ ಸೂಲಿಬೆಲೆ

    ಇಬ್ಬರು ತಮ್ಮ 20ನೇ ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆಗಸ್ಟ್ 22 ರಂದು ಇಲ್ಲಿನ ಲಕ್ಷ್ಮೀಪುರ ಪ್ರದೇಶದ ಕಟ್ಟಡವೊಂದರಲ್ಲಿ ರೈಲ್ವೆ ‘ಡಿ’ ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಏರ್ಪಡಿಸಿತ್ತು. ಈ ಪರೀಕ್ಷೆಗೆ 600ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಇದನ್ನೂ ಓದಿ: ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ

    ಪರೀಕ್ಷೆಯಲ್ಲಿ ಯಾವುದೇ ರೀತಿಯ ಮೋಸ ಆಗದಿರುವಂತೆ ತಡೆಗಟ್ಟಲು ಎಲ್ಲಾ ಅಭ್ಯರ್ಥಿಗಳು ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು. ಹೀಗಾಗಿ ಪರೀಕ್ಷೆಗೂ ಮುನ್ನ ಬಯೋಮೆಟ್ರಿಕ್ ಸಾಧನದ ಮೂಲಕ ಅವರ ಆಧಾರ್ ಡೇಟಾದೊಂದಿಗೆ ಹೊಂದಾಣಿಕೆ ಮಾಡಲಾಯಿತು. ಈ ವೇಳೆ ಸಾಧನವು ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ನೋಂದಾಯಿಸಲು ವಿಫಲವಾಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಮನೀಶ್ ಕುಮಾರ್ ಎಂದು ಹೆಸರು ತೋರಿಸಿಲ್ಲ. ಇದೇ ವೇಳೆ ಅಭ್ಯರ್ಥಿ ತನ್ನ ಎಡಗೈಯನ್ನು ಪ್ಯಾಂಟ್‍ನ ಜೇಬಿನೊಳಗೆ ಇಟ್ಟು ಹೆಬ್ಬೆರಳಿನಲ್ಲಿದ್ದ ಚರ್ಮವನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಮೇಲ್ವಿಚಾರಕರು ಎಡಗೈ ಹೆಬ್ಬೆರಳಿಗೆ ಸ್ಯಾನಿಟೈಸರ್ ಸಿಂಪಡಿಸಿದಾಗ, ಅದರ ಮೇಲೆ ಅಂಟಿಸಲಾದ ಚರ್ಮವು ಉದುರಿ ಹೋಗಿದೆ ಎಂದು ತಿಳಿಸಿದ್ದಾರೆ.

    ನಂತರ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜ್ಯಗುರು ಗುಪ್ತ, ತನ್ನ ಸ್ನೇಹಿತ ಮನೀಶ್ ಕುಮಾರ್‍ಗಾಗಿ ಪರೀಕ್ಷೆ ಬರೆಯಲು ಬಂದಿರುವುದಾಗಿ ತಿಳಿಸಿದ್ದಾನೆ. ರಾಜ್ಯಗುರು ಗುಪ್ತ ಓದುವುದರಲ್ಲಿ ಬುದ್ಧಿವಂತನಾಗಿದ್ದರಿಂದ ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಮನೀಶ್ ಕುಮಾರ್, ತನ್ನ ಬದಲು ಪರೀಕ್ಷೆ ಬರೆಯಲು ರಾಜುಗುಪ್ತನನ್ನು ಕಳುಹಿಸಲು ಆಲೋಚಿಸಿದ್ದ. ಹೀಗಾಗಿ ಪರೀಕ್ಷೆಗೂ ಒಂದು ದಿನಕ್ಕೂ ಮುನ್ನ ಮನೀಶ್ ಕುಮಾರ್ ಬಿಸಿ ನೀರಿಗೆ ತನ್ನ ಕೈ ಅದ್ದಿ, ನಂತರ ಬ್ಲೇಡ್ ಮೂಲಕ ಚರ್ಮವನ್ನು ತೆಗೆದು ಗುಪ್ತಾ ಎಡ ಹೆಬ್ಬೆರಳಿಗೆ ಅಂಟಿಸಿದ್ದನು. ಆದರೆ ಬಯೋಮ್ಯಾಟ್ರಿಕ್ಸ್ ವೇಳೆ ಹೆಬ್ಬೆರಳು ಉದುರಿ ಹೋಗಿದ್ದನ್ನು ಕಂಡ ಅಧಿಕಾರಿಗಳು ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪೂರ್ಣ ನಾಟಕ ಬಹಿರಂಗಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಹಾಡಹಗಲೇ ಮಾರಕಾಸ್ತ್ರಗಳಿಂದ ರೇಷ್ಮೆ ವ್ಯಾಪಾರಿ ಮೇಲೆ ಅಟ್ಯಾಕ್ – ಹೆಬ್ಬೆರಳು ಕಟ್

    ಹಾಡಹಗಲೇ ಮಾರಕಾಸ್ತ್ರಗಳಿಂದ ರೇಷ್ಮೆ ವ್ಯಾಪಾರಿ ಮೇಲೆ ಅಟ್ಯಾಕ್ – ಹೆಬ್ಬೆರಳು ಕಟ್

    ಚಿಕ್ಕಬಳ್ಳಾಪುರ: ಹಾಡಹಗಲೇ ರೇಷ್ಮೆ ವ್ಯಾಪಾರಿಯ ಬೈಕ್ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ, ರೇಷ್ಮೆ ವ್ಯಾಪಾರಿಯ ಎಡಗೈನ ಹೆಬ್ಬೆರಳು ಸಂಪೂರ್ಣ ಕಟ್ ಮಾಡಿದ್ದಾರೆ. ಅದೃಷ್ಟವಶಾತ್ ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ವ್ಯಾಪಾರಿ ಪ್ರಾಣ ಉಳಿಸಿಕೊಂಡಿದ್ದಾನೆ.

    ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರೇಷ್ಮೆ ವ್ಯಾಪಾರಿ ಫೈರೋಜ್‍ನ ಬೈಕ್ ಅನ್ನು ಹಿಂಬಾಲಿಸಿಕೊಂಡು ಮತ್ತೊಂದು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಂದಿದ್ದಾರೆ. ಈ ವೇಳೆ ಅಜಾದ್ ನಗರದಲ್ಲಿ ಫೈರೋಜ್ ಮೇಲೆ ಲಾಂಗ್‍ನಿಂದ ಏಕಾಏಕಿ ಕಿಡಿಗೇಡಿಗಳು ಅಟ್ಯಾಕ್ ಮಾಡಿದ್ದಾರೆ. ಆದರೆ ಅದೃಷ್ಟವಶಾತ್ ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ಪರಾರಿಯಾದ ಫೈರೋಜ್ ಜೀವ ಉಳಿಸಿಕೊಂಡಿದ್ದಾನೆ. ಇದನ್ನೂ ಓದಿ: ಭಟ್ಕಳದಲ್ಲಿ ಗುಡ್ಡ ಕುಸಿತ – ನಾಲ್ವರು ಸಾವು, ಮೂವರ ಶವ ಹೊರತೆಗೆದ ರಕ್ಷಣಾ ಸಿಬ್ಬಂದಿ

    ಘಟನೆಯಲ್ಲಿ ಫೈರೋಜ್ ಹೆಬ್ಬೆರೆಳು ಕಟ್ ಆಗಿದ್ದು, ಹೆಬ್ಬೆರಳು ಜೋಡಣೆ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು, ಚಪ್ಪಲಿಗಳು ಹಾಗೂ ದುಷ್ಕರ್ಮಿಗಳ ಸ್ಟಾರ್ ಸಿಟಿ ಬೈಕ್ ಪತ್ತೆಯಾಗಿದ್ದು, ಬೈಕ್ ವಶಪಡಿಸಿಕೊಂಡಿರುವ ಪೊಲೀಸರು ಇದೀಗ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕಾಗದ ರಹಿತವಾದ ಕೇರಳದ 3 ಕೋರ್ಟ್‌ – ಆ.1ರಿಂದ ಕೇರಳ ಹೈಕೋರ್ಟ್‌ನಲ್ಲೂ ಚಾಲನೆ

    ಕಳೆದ ಒಂದೂವರೆ ವರ್ಷದ ಹಿಂದೆ ಶಿಡ್ಲಘಟ್ಟ ನಗರ ಠಾಣೆಯ ಎದುರು ಹಳೇ ದ್ವೇಷದ ಹಿನ್ನೆಲೆ ಅಮ್ಜದ್ ಎಂಬಾತನನ್ನು ಖಲಂಧರ್ ಎಂಬಾತ ಕೊಲೆ ಮಾಡಿದ್ದ. ಇದೀಗ ದಾಳಿಗೆ ಒಳಗಾದ ಫೈರೋಜ್ ಕೊಲೆಯಾಗಿದ್ದ ಅಮ್ಜದ್‍ನ ಇಬ್ಬರೂ ಸ್ನೇಹಿತರಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗೆ ಇರುವ ಖಲಂಧರ್‌ನೇ ಈ ಕೃತ್ಯ ಮಾಡಿಸಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

    ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

    ಲಕ್ನೋ: ಬಿಲ್ ಪಾವತಿಸಲು ಹೇಳಿದ್ದಕ್ಕೆ ಬಾರ್ ಮಾಲೀಕನ ಕೈ ಹೆಬ್ಬೆರಳು ಕಚ್ಚಿದ ವಿಚಿತ್ರ ಘಟನೆಯೊಂದು ಮುಜಫ್ಪರ್ ನಗರದಲ್ಲಿ ನಡೆದಿದೆ.

    ಒಂದು ದಿನ ಸುನೀಲ್ ಕುಮಾರ್ ತನ್ನ ಗೆಳಯನೊಂದಿಗೆ ಬಾರ್‍ಗೆ ಹೋಗಿದ್ದಾನೆ. ಕಂಠಪೂರ್ತಿ ಕುಡಿದಿದ್ದಾರೆ. ಬಿಲ್ ಪಾವತಿ ಮಾಡಲು ಮಾಲೀಕ ತಿಳಿಸಿದಾಗ ಖ್ಯಾತೆ ತೆಗೆದಿದ್ದಾರೆ. ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಬಾರ್ ಮಾಲೀಕ ಅಶೋಕ್ ಕುಮಾರ್ ಜೊತೆಗೆ ಜಗಳ ಆರಂಭಿಸಿದ್ದಾನೆ. ಈ ಜಗಳ ವಿಕೋಪಕ್ಕೆ ಹೋಗಿದೆ.  ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

    ಸಿಟ್ಟಿಗೆದ್ದ ಸುನೀಲ್ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ್ದಾನೆ. ಸುನೀಲ್ ಕುಮಾರ್ ಹಾಗೂ ಅವನ ಗೆಳೆಯನನ್ನು ಬಂಧಿಸಲಾಗಿದೆ. ಬಾರ್ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತನಿಖೆ ಮಾಡುತ್ತೇವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!