Tag: Thugs of Hindostan

  • ಮೈ ಜುಮ್ಮೆನ್ನಿಸುವ, ಥ್ರಿಲ್ ಕಥಾನಕವುಳ್ಳ ‘ಥಗ್ಸ್ ಆಫ್ ಹಿಂದೋಸ್ತಾನ್’ ಟ್ರೇಲರ್ ಔಟ್

    ಮೈ ಜುಮ್ಮೆನ್ನಿಸುವ, ಥ್ರಿಲ್ ಕಥಾನಕವುಳ್ಳ ‘ಥಗ್ಸ್ ಆಫ್ ಹಿಂದೋಸ್ತಾನ್’ ಟ್ರೇಲರ್ ಔಟ್

    -ಅಮಿತಾಬ್, ಅಮೀರ್ ನಟನಗೆ ಪ್ರೇಕ್ಷಕ ಫಿದಾ

    ಮುಂಬೈ: ಬಾಲಿವುಡ್‍ನ ಬಹುನೀರಿಕ್ಷಿತ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ರೋಮಾಂಚನಕಾರಿ ಟ್ರೇಲರ್ ಇಂದು ರಿಲೀಸ್ ಆಗಿದೆ. ಟ್ರೇಲರ್ ನೋಡಿದವರು ಮಾತ್ರ ಒಂದು ಕ್ಷಣ ಥ್ರಿಲ್‍ಗೆ ಒಳಗಾಗೋದು ಖಂಡಿತ. ಐತಿಹಾಸಿಕ ಕಥೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಬಹು ತಾರಾಗಣವನ್ನು ಹೊಂದಿದೆ.

    ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿ ಅಂಗಳದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಟ್ರೇಲರ್ ಆ್ಯಕ್ಷನ್ ಸೀನ್‍ಗಳಿಂದ ಭರಪೂರವಾಗಿದ್ದು, ಅಮಿತಾಬ್ ಬಚ್ಚನ್‍ರ ಸಾಹಸ ದೃಶ್ಯಗಳು ಜನರನ್ನು ಸೆಳೆಯುವಲ್ಲಿ ಯಶ್ವಸಿಯಾಗುವಲ್ಲಿ ಸಫಲವಾಗುತ್ತಿದೆ. ಉಳಿದಂತೆ ಫಾತಿಮಾ, ಕತ್ರಿನಾ ಕೈಫ್ ಸಹ ಟ್ರೇಲರ್ ನಲ್ಲಿ ಮಿಂಚಿದ್ದಾರೆ. ಟ್ರೇಲರ್ ನಲ್ಲಿ ಕೆಲವೇ ಸೆಕೆಂಡ್‍ನಲ್ಲಿ ಕಾಣಿಸುವ ಕತ್ರೀನಾ ಸೊಂಟ ಬಳಸುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

    ಥಗ್ಸ್ ಆಫ್ ಹಿಂದೋಸ್ತಾನ್ ಚಿತ್ರತಂಡ ಆರಂಭದಲ್ಲಿ ಪಾತ್ರಗಳ ಪರಿಚಯವನ್ನು ರಿವೀಲ್ ಮಾಡುತ್ತಾ ಬಂದಿತ್ತು. ಈ ಹಿಂದೆ ಬಾಹುಬಲಿ ಚಿತ್ರದ ಟ್ರೇಲರ್ ಎಷ್ಟು ನಿರೀಕ್ಷೆಗಳನ್ನು ಅಭಿಮಾನಿಗಳಲ್ಲಿ ಮೂಡಿಸಿತ್ತೋ? ಅಷ್ಟೆ ಕುತೂಹಲವನ್ನು ಹುಟ್ಟು ಹಾಕಿದೆ. ಚಿತ್ರದ ಗ್ರಾಫಿಕ್ಸ್ ವರ್ಕ್ ಆಕರ್ಷಿಣಿಯವಾಗಿದ್ದು, ನೋಡುಗರನ್ನು ಸೆಳೆಯುತ್ತಿದೆ. ಪಿರಂಗಿ ಪಾತ್ರದಲ್ಲಿ ಅಮಿರ್ ಖಾನ್ ನಟಿಸಿದ್ರೆ, ಕತ್ರಿನಾ ನೃತ್ಯಗಾರ್ತಿ ಪಾತ್ರದಲ್ಲಿ ನಟಿಸಿದ್ದಾರೆ.

    ಅಮಿರ್ ಖಾನ್ ಸಿನಿಮಾ ಅಂದ್ರೆ ಸಾಕು ವೀಕ್ಷಕರಲ್ಲಿ ಒಂದು ಕುತೂಹಲ ಹುಟ್ಟುಹಾಕಿರುತ್ತದೆ. ಪ್ರತಿಬಾರಿಯೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಮಿರ್ ತುಂಬಾ ವಿಭಿನ್ನ ಕಥೆಯನ್ನು ಆರಿಸಿಕೊಳ್ಳುತ್ತಾರೆ. ಟ್ರೇಲರ್ ಈಗ ಥಗ್ಸ್ ಆಫ್ ಹಿಂದೋಸ್ತಾನ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಥಗ್ಸ್ ಆಫ್ ಹಿಂದೋಸ್ತಾನ್‍ದಲ್ಲಿ ಫಾತಿಮಾ ಸನಾ ಶೇಖ್, ಶಶಾಂಕ್ ಅರೋರಾ, ಮೊಹಮ್ಮದ್ ಝೀಶಾನ್, ಆಯುಬ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದೇ ನವೆಂಬರ್ 8ರಂದು ದೀಪಾವಳಿಗೆ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರ ಏಕಕಾಲದಲ್ಲಿ ಹಿಂದಿ, ತೆಲಗು ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸಿನಿಮಾಗಾಗಿ ಕಣ್ಣಿನ ಹುಬ್ಬನ್ನೇ ಶೇವ್ ಮಾಡಿಸಿಕೊಂಡ್ರಾ ದಂಗಲ್ ನಟಿ ಫಾತಿಮಾ ಸನಾ ಶೇಕ್

    ಸಿನಿಮಾಗಾಗಿ ಕಣ್ಣಿನ ಹುಬ್ಬನ್ನೇ ಶೇವ್ ಮಾಡಿಸಿಕೊಂಡ್ರಾ ದಂಗಲ್ ನಟಿ ಫಾತಿಮಾ ಸನಾ ಶೇಕ್

    ಮುಂಬೈ: ದಂಗಲ್ ನಟಿ ಫಾತಿಮಾ ಸನಾ ಶೇಕ್ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಬಾಲಿವುಡ್‍ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

     

    ಇತ್ತೀಚೆಗೆ ಫಾತಿಮಾ ಮುಂಬೈನಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ತೆಗೆಯಲಾಗಿದ್ದು, ನಟಿಯ ಕಣ್ಣಿನ ಹುಬ್ಬು ಭಾಹಶಃ ಶೇವ್ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಫಾತಿಮಾ ಸಹನಟರಾದ ಆಮಿರ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ ಜೊತೆ ಫೋಟೋಗಳಿಗೆ ಪೋಸ್ ನೀಡಿದ್ದು, ಇದರಲ್ಲಿಯೂ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿರೋದನ್ನ ಕಾಣಬಹುದು. ಚಿತ್ರದ ಸೆಟ್‍ನಲ್ಲಿ ತೆಗೆಯಲಾದ ಫೋಟೋಗಳನ್ನ ಫಾತಿಮಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಫಾತಿಮಾ ಹುಬ್ಬನ್ನು ಶೇವ್ ಮಾಡಿಸಿರಬಹುದು ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡ್ತಿದೆ.

    https://www.instagram.com/p/Be2XgWVnkRs/?utm_source=ig_embed

    ಕೆಲವು ದಿನಗಳ ಹಿಂದೆ ಫಾತಿಮಾ, ಕತ್ರೀನಾ ಹಾಗೂ ಆಮಿರ್ ಹಾಡೊಂದರ ಚಿತ್ರೀಕರಣದ ವೇಳೆ ತೆಗೆದ ಫೋಟೋ ಲೀಕ್ ಆಗಿತ್ತು. ಈ ಹಿಂದೆ ಚಿತ್ರದಲ್ಲಿನ ಆಮಿರ್ ಖಾನ್ ಲುಕ್ ನ ಫೋಟೋ ಕೂಡ ಲೀಕ್ ಆಗಿತ್ತು. ಚಿತ್ರದ ಬಗ್ಗೆ ಗುಟ್ಟು ಬಿಟ್ಟು ಕೊಡದ ಚಿತ್ರತಂಡ ಫೋಟೋಗಳು ಲೀಕ್ ಆದ ಬಳಿಕ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಸೆಟ್‍ನಲ್ಲಿ ಫೋನ್ ನಿಷೇಧಿಸಲಾಗಿತ್ತು. ಹಾಗೂ ಸೆಟ್‍ಗೆ ಭೇಟಿ ನೀಡುವವರಿಗೂ ನಿರ್ಬಂಧವಿತ್ತು.

    https://www.instagram.com/p/Be2bPc4Hai_/?taken-by=fatimasanashaikh

     ಥಗ್ಸ್ ಆಫ್ ಹೊಂದೊಸ್ತಾನ್ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದು, ಇದೇ ವರ್ಷ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಧೂಮ್ 3 ನಿರ್ದೇಶಕ ವಿಜಯ್ ಕೃಷ್ಣ ಈ ಚಿತ್ರದ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್‍ನಲ್ಲಿ ಚಿತ್ರ ಮೂಡಿಬಂದಿದೆ. 1839ರ ‘ಕನ್ಫೆಷನ್ಸ್ ಆಫ್ ಎ ಥಗ್’ ಎಂಬ ಕಾದಂಬರಿಯನ್ನ ಆಧರಿಸಿದ ಚಿತ್ರವಾಗಿದೆ.

  • ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕೆ ಕತ್ರಿನಾ ಭರ್ಜರಿ ತಯಾರಿ

    ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕೆ ಕತ್ರಿನಾ ಭರ್ಜರಿ ತಯಾರಿ

    ಮುಂಬೈ: ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಖಾನ್‍ಗೆ ಜೋಡಿಯಾಗಿ ಗೆಲುವಿನ ಮೆಟ್ಟಿಲೇರಿದ ಕತ್ರಿನಾ ಕೈಫ್ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

    ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರವು 1839 ರ ‘ಕನ್‍ಫೆಶನ್ ಆಫ್ ಎ ಥಗ್’ ಎಂಬ ಕಾದಂಬರಿ ಆಧಾರಿತ ಚಿತ್ರವಾಗಿದೆ. ಇದರಲ್ಲಿ ಆಮೀರ್ ಖಾನ್‍ರ ಜೊತೆ ಮೊಟ್ಟ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ತೆರೆ ಹಂಚಿಕೊಂಡಿದ್ದಾರೆ. ದಂಗಲ್ ಖ್ಯಾತಿಯ ಫಾತಿಮಾ ಸನಾ ಶೇಕ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

     

    ಕತ್ರಿನಾ ಬಾಲಿವುಡ್ ನಲ್ಲಿ ತಮ್ಮ ಅದ್ಭುತ ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಚಿತ್ರಕ್ಕಾಗಿ ಕತ್ರಿನಾ ಡ್ಯಾನ್ಸರ್ ಪ್ರಭುದೇವ ಅವರಿಂದ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಎಲ್ಲರ ಹುಬ್ಬೆರಿಸುವಂತೆ ಗಾಳಿಯಲ್ಲಿ ತೇಲುವ ರೀತಿಯಲ್ಲಿ ಮತ್ತು ಜಿಮ್ನಾಸ್ಟಿಕ್ ಮಾದರಿಯಲ್ಲಿ ಕತ್ರಿನಾ ಡಾನ್ಸ್ ಮಾಡಿದ್ದಾರೆ. ಕತ್ರಿನಾ ಕೈಫ್ ತಮ್ಮ ನೃತ್ಯಾಭ್ಯಾಸದ ವಿಡಿಯೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಚಿತ್ರದಲ್ಲಿ ಕತ್ರಿನಾ ಕೈಫ್, ಫಾತಿಮಾ ಶೇಕ್ ತೆರೆಯನ್ನು ಹಂಚಿಕೊಂಡಿದ್ದಾರೆ. ತಾವು ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುತ್ತಿರುವುದರ ಬಗ್ಗೆ ನಟಿ ಫಾತಿಮಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಆಮೀರ್ ಮತ್ತು ಅಮಿತಾಬ್ ಅವರ ಫಸ್ಟ್ ಲುಕ್ ನೋಡಿ ಮೆಚ್ಚುಗೆ ನೀಡಿದ ಜನರು ನಾಯಕಿಯರ ಫಸ್ಟ್ ಲುಕ್‍ಗಾಗಿ ಕಾಯುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿಜಯ್ ಕೃಷ್ಣ ಆಚಾರ್ಯ ಆಕ್ಷನ್-ಕಟ್ ಹೇಳಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರ ನವೆಂಬರ್ 7ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

  • ಅಮೀರ್ ನಟನೆಯ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಸೆಟ್ ಗೆ ಭಾರೀ ಭದ್ರತೆ

    ಅಮೀರ್ ನಟನೆಯ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಸೆಟ್ ಗೆ ಭಾರೀ ಭದ್ರತೆ

    ಮುಂಬೈ: ದಂಗಲ್ ಚಿತ್ರದ ಯಶಸ್ಸಿನ ನಂತರ ಅಮೀರ್ ಖಾನ್ ತಮ್ಮ ಮುಂದಿನ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಸೆಟ್ ಗೆ ಭಾರೀ ಭದ್ರತೆಯನ್ನು ಪಡೆದುಕೊಂಡಿದ್ದಾರೆ.

    ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಅಮೀರ್‍ಗೆ ಬೇಸರ ತಂದಿದೆ. ತಮ್ಮ ಡ್ರೀಮ್ ಪ್ರಾಜೆಕ್ಟ್ ಗೆ ಮತ್ತಷ್ಟು ಹಾನಿ ಮಾಡಿಕೊಳ್ಳಲು ಇಚ್ಛಿಸದ ಅಮೀರ್ ಸಿನಿಮಾ ಸೆಟ್ ಗೆ ಹೆಚ್ಚಿನ ಭದ್ರತೆ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ.

    ಈ ಸಿನಿಮಾದಲ್ಲಿ ಜನರಿಗೆ ಕುತೂಹಲ ಮೂಡಿಸಲು ಅಮೀರ್ ಖಾನ್ ಅಸಾಧ್ಯವಾದುದ್ದನ್ನು ಸಾಧ್ಯವನ್ನಾಗಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್, ಫಾತಿಮಾ ಸನಾ ಶೇಕ್, ಜಾಕಿ ಶ್ರಾಫ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ. ಸಿನಿಮಾ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ವಿಜಯ್ ಕೃಷ್ಣನ್ ಆಚಾರ್ಯ ಅವರ ನಿರ್ದೇಶನವಿದೆ.