Tag: Thug Life

  • ಕಮಲ್ `ಥಗ್‌ಲೈಫ್’ಗೆ ಗಾಯದ ಮೇಲೆ ಬರೆ, 25 ಲಕ್ಷ ದಂಡ!

    ಕಮಲ್ `ಥಗ್‌ಲೈಫ್’ಗೆ ಗಾಯದ ಮೇಲೆ ಬರೆ, 25 ಲಕ್ಷ ದಂಡ!

    ರ್ನಾಟಕದಲ್ಲಿ ಬ್ಯಾನ್‌ಗೆ ಒಳಗಾದ ಕಮಲ್ ಹಾಸನ್ ಅಭಿನಯದ `ಥಗ್‌ಲೈಫ್’ (Thug Life) ಚಿತ್ರ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದೆ. ಇದೀಗ ಗಾಯದ ಮೇಲೆ ಬರೆ ಎಳೆಸಿಕೊಳ್ಳುವ ಸ್ಥಿತಿಗೆ ಬಂದಿದೆ ಸಿನಿಮಾ ತಂಡ. ಮೊದಲೇ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಕಾರಣಕ್ಕೆ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಸೋತಿದೆ. ಈ ನಡುವೆ ಮಾತಿಗೆ ತಪ್ಪಿರುವುದರಿಂದ 25 ಲಕ್ಷ ರೂ. ದಂಡ ಅನುಭವಿಸುವಂತಾಗಿದೆ. ಕಾರಣ ಮಲ್ಟಿಪ್ಲೆಕ್ಸ್ಗಾಗಿ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆ. ಹೀಗಾಗಿ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ನಿಂದ ಭಾರಿ ದಂಡವನ್ನು ಎದುರಿಸುತ್ತಿದ್ದಾರೆ ಥಗ್‌ಲೈಫ್ ನಿರ್ಮಾಪಕರು.

    ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟು ಕ್ಷಮೆ ಕೇಳದೇ ಮೊಂಡುತನ ಮೆರೆದಿದ್ದ ಕಮಲ್ ಥಗ್‌ಲೈಫ್ ಚಿತ್ರ ಕರ್ನಾಟಕಕ್ಕೆ ಎಂಟ್ರಿ ಕೊಡಲೇ ಇಲ್ಲ. ಕೋರ್ಟ್‌ನಿಂದ ಕಮಲ್ ಅನುಮತಿ ಪಡೆದಿದ್ದರೂ ವಿತರಕರು ಮುಂದೆ ಬರದ ಕಾರಣಕ್ಕೆ ಕರ್ನಾಟಕದಲ್ಲಿ ತೆರೆ ಕಾಣಲಿಲ್ಲ. ಈ ನಡುವೆ ಭಾರೀ ಬಜೆಟ್‌ನಲ್ಲಿ ನಿರ್ಮಾಣವಾದ ಥಗ್‌ಲೈಫ್ ಹೀನಾಯವಾಗಿ ಸೋತಿದೆ ಎನ್ನಲಾಗಿದ್ದು, ಏಟಿನ ಮೇಲೆ ಏಟು ಎನ್ನುವಂತೆ ದಂಡ ಕಟ್ಟುವ ಸ್ಥಿತಿಗೆ ಬಂದಿದೆ.ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ರಿಲೀಸ್‌ಗೂ ಮುನ್ನ ಭಾರೀ ಪ್ರಚಾರದ ಹೊರತಾಗಿಯೂ ಥಗ್‌ಲೈಫ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರಾಶಾದಾಯಕ ಗಳಿಕೆಯನ್ನು ಕಂಡಿತ್ತು. ದೊಡ್ಡ ಸ್ಟಾರ್‌ಗಳನ್ನೊಳಗೊಂಡ ಟೀಮ್ ಇದ್ರೂ ಉತ್ತಮ ಪ್ರದರ್ಶನ ನೀಡೋದ್ರಲ್ಲಿ ಎಡವಿದೆ. ಹೀಗಾಗಿ ನಿರ್ಮಾಪಕರು ನಿರೀಕ್ಷೆಗಿಂತ ಬೇಗ ಚಿತ್ರವನ್ನು ಓಟಿಟಿ ಬಿಡುಗಡೆ ಮಾಡಲು ಯೋಜನೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಜೊತೆ ಚಿತ್ರತಂಡ ರಿಲೀಸ್ ಬಳಿಕ ಎಂಟು ವಾರಗಳ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಈ ಒಪ್ಪಂದವನ್ನು ಮೊಟಕುಗೊಳಿಸಲು ಚಿತ್ರತಂಡ ಯೋಜಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ತನ್ನ ನಿಯಮ ಉಲ್ಲಂಘಿಸಿದ ಥಗ್‌ಲೈಫ್‌ಗೆ ಭಾರೀ ದಂಡದ ಹೊಡೆತ ನೀಡಿದೆ.

    ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಚಿತ್ರಕ್ಕೆ ಷರತ್ತಿನ ಆಧಾರದ ಮೇಲೆ ಚಿತ್ರವನ್ನು ತಮ್ಮ ಚಿತ್ರಮಂದಿರಗಳಲ್ಲಿ ಸ್ಟ್ರೀಮ್‌ ಮಾಡಲು ಅವಕಾಶ ನೀಡಿತ್ತು. ಆದರೆ ಥಗ್‌ಲೈಫ್ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಜನರಿಲ್ಲದೆ ಥಿಯೇಟರ್‌ಗಳು ಬಣ ಬಣ ಎನ್ನುತ್ತಿದೆ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಕಲೆಕ್ಷನ್ ಇಲ್ಲದಿದ್ರೂ ಸುಮ್ಮನೆ ಬಾಡಿಗೆ ಕೊಟ್ಟು ಚಿತ್ರ ಪ್ರದರ್ಶನ ಮಾಡಬೇಕಾದ ದುಃಸ್ಥಿತಿ ಥಗ್‌ಲೈಫ್ ತಂಡಕ್ಕಿದೆ. ಹೀಗಾಗಿ ಮೊಟಕು ಮಾಡಿ ಓಟಿಟಿಗೆ ಕೊಡಲು ಟೀಮ್ ಯೋಜಿಸಿ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ಗೆ ಮನವಿ ಮಾಡಿಕೊಂಡಿತ್ತು. ಇದೀಗ ಒಪ್ಪಂದದ ಉಲ್ಲಂಘನೆಗಾಗಿ ನಿರ್ಮಾಪಕರಿಗೆ 25 ಲಕ್ಷ ರೂ.ಗಳ ಭಾರಿ ದಂಡವನ್ನು ವಿಧಿಸಿದೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್. ಆದ್ದರಿಂದ ಇದನ್ನ ಕಮಲ್ ಹಾಸನ್ ಹಠಕ್ಕಾಗಿ ತೆರುತ್ತಿರುವ ದಂಡ ಎನ್ನಬಹುದೇ?ಇದನ್ನೂ ಓದಿ: ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್ ಗೆಸ್ಟ್

  • ಥಗ್ ಲೈಫ್ ಸೋಲು – ಕ್ಷಮೆ ಕೇಳಿದ ನಿರ್ದೇಶಕ ಮಣಿರತ್ನಂ

    ಥಗ್ ಲೈಫ್ ಸೋಲು – ಕ್ಷಮೆ ಕೇಳಿದ ನಿರ್ದೇಶಕ ಮಣಿರತ್ನಂ

    ಮಲ್ ಹಾಸನ್ (Kamal Haasan) ಮತ್ತು ನಿರ್ದೇಶಕ ಮಣಿರತ್ನಂ ಕಾಂಬಿನೇಷನ್‌ನ ʻಥಗ್ ಲೈಫ್ʼ (Mani Ratnam) ಸಿನಿಮಾ ಕೊನೆಗೂ ಸೋಲನ್ನು ಒಪ್ಪಿಕೊಂಡಿದೆ. ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ನಾವು ಚಿತ್ರವನ್ನು ಕೊಡಲಿಲ್ಲ ಅಂತ ಸ್ವತಃ ಮಣಿರತ್ನಂ ಅವರೇ ಒಪ್ಪಿಕೊಂಡಿದ್ದಾರೆ. ಹೊಸ ಮಾದರಿಯ ಸಿನಿಮಾವನ್ನು ಕೊಡಲು ನಾವು ಪ್ರಯತ್ನಿಸಿದೆವು. ಆದರೆ, ಎಲ್ಲೋ ಹಾದಿ ತಪ್ಪಿದೆ ಅಂತಾನೂ ಅವರು ವಿನಮ್ರ ವಾಗಿ ಹೇಳಿಕೊಂಡಿದ್ದಾರೆ.

    ಥಗ್ ಲೈಫ್ಸ್ ಸಿನಿಮಾ ಟ್ರೈಲರ್ ಹಾಗೂ ಟೀಸರ್ ನೋಡಿದ್ದ ಪ್ರೇಕ್ಷಕರು, ಅತೀವ ನಿರೀಕ್ಷೆ ಇಟ್ಟುಕೊಂಡಿದ್ದರು. ಕಮಲ್ ಹಾಸನ್ ಮತ್ತು ಮಣಿರತ್ನಂ ಬರೋಬ್ಬರಿ 37 ವರ್ಷಗಳ ನಂತರ ಒಟ್ಟಾಗಿ ಸಿನಿಮಾ ಮಾಡಿದ್ದರಿಂದ ಬೇರೆ ರೀತಿಯ ಚಿತ್ರವನ್ನೇ ನಿರೀಕ್ಷೆ ಮಾಡಲಾಗಿತ್ತು. ಮತ್ತೊಂದು ನಾಯಗನ್ ರೀತಿಯ ಸಿನಿಮಾ ಆಗಿರಲಿದೆ ಅಂತ ನಂಬಿಕೊಂಡಿತ್ತು. ಆದರೆ, ಸಿನಿಮಾ ರಿಲೀಸ್ ನಂತರ ಎಲ್ಲವೂ ಹುಸಿಯಾಗಿತ್ತು. ಇದನ್ನೂ ಓದಿ: `ಥಗ್‌ಲೈಫ್’ ರಿಲೀಸ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರಿಂದ ನೋಟಿಸ್

    ಇದೀಗ ಥಗ್ ಲೈಫ್ ಸೋಲಿಗೆ ಕ್ಷಮೆ ಕೇಳಿದ್ದಾರೆ ನಿರ್ದೇಶಕ ಮಣಿರತ್ನಂ. ಥಗ್ ಲೈಫ್ ಬಗ್ಗೆ ಭಾರತವೇ ಅತೀ ನಿರೀಕ್ಷೆ ಹೊಂದಿತ್ತು. ಆದರೆ, ಜನರ ಮನಸ್ಸನ್ನು ಗೆಲ್ಲುವಲ್ಲಿ ʻಥಗ್ ಲೈಫ್ʼ ಸಿನಿಮಾ ಸೋತಿದೆ. ಜನರು ಅತೀ ನಿರೀಕ್ಷೆಯನ್ನು ಹೊಂದಿದ್ದರು. ನಾಯಗನ್ ರೀತಿಯ ಸಿನಿಮಾ ಆಗಲಿದೆ ಅಂತ ಕನಸು ಕಟ್ಟಿದ್ದರು. ಈ ಹಿಂದಿನ ಇತಿಹಾಸವನ್ನು ಸೃಷ್ಟಿಸುವಲ್ಲಿ ನಾವು ಎಡವಿದ್ದೆ. ಹೊಸ ಪ್ರಯತ್ನ ಮಾಡಿದೆವು. ಆದರೆ, ಅದು ಸರಿಯಾದ ದಾರಿಯಲ್ಲಿ ಇರಲಿಲ್ಲ ಅನಿಸತ್ತೆ. ಪ್ರೇಕ್ಷಕರಿಗೆ ನಿರಾಸೆ ಮಾಡಿದ್ದಕ್ಕೆ ಕ್ಷಮಿಸಿ’ ಅಂದಿದ್ದಾರೆ ಮಣಿರತ್ನಂ. ಇದನ್ನೂ ಓದಿ: ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

  • ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ನವದೆಹಲಿ: ನಟ ಕಮಲ್ ಹಾಸನ್ (Kamal Haasan) ಅಭಿನಯದ ‌’ಥಗ್ ಲೈಫ್’ (Thug Life) ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಗುಂಪು ಬೆದರಿಕೆಗಳಿಗೆ ಕಾನೂನಿನ ನಿಯಮವನ್ನು ಒತ್ತೆಯಾಗಿ ಇಡಲು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕೆಂದು ‘ಗೂಂಡಾಗಳ ಗುಂಪುಗಳು’ ನಿರ್ಧರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

    ಕನ್ನಡ ತಮಿಳಿನಿಂದ ಹುಟ್ಟಿತು ಎಂಬ ಕಮಲ್ ಹಾಸನ್ ಅವರ ಹೇಳಿಕೆ ಇತ್ತೀಚೆಗೆ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.‌ ಅವರ ಚಿತ್ರವನ್ನು ಬಹಿಷ್ಕರಿಸುವಂತೆ ಕರೆಗಳು ಬಂದಿದ್ದವು. ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸಮಸ್ಯೆಯನ್ನು ಪರಿಹರಿಸಲು ನಟ ಕ್ಷಮೆಯಾಚಿಸಬೇಕೆಂಬ ಸಲಹೆ ನೀಡಿತ್ತು.

    ಈ ಸಲಹೆ ವಿರುದ್ಧ ನಿರ್ಮಾಪಕರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ಪೀಠ ಹೈಕೋರ್ಟ್ ಸಲಹೆಯನ್ನು ಪ್ರಶ್ನಿಸಿತು. ಸಂಘಟನೆಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವನ್ನು ಟೀಕಿಸಿತು.

    ಕಾನೂನಿನ ನಿಯಮವು ಮೇಲುಗೈ ಸಾಧಿಸಬೇಕು ಎಂದ ಸುಪ್ರೀಂ ಕೋರ್ಟ್ (Supreme Court), ನಾವು ಇಂತಹ ಬೆಳವಣಿಗೆ ಅನುಮತಿಸಲು ಸಾಧ್ಯವಿಲ್ಲ. ಕಾನೂನಿನ ನಿಯಮವು ಯಾವುದೇ ವ್ಯಕ್ತಿಗೆ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡಬೇಕೆಂದು ಹೇಳುತ್ತದೆ. ಚಿತ್ರಮಂದಿರಗಳು ಸುಟ್ಟುಹೋಗುತ್ತವೆ ಎಂಬ ಭಯದಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಜನರು ಬಂದು ಚಿತ್ರವನ್ನು ನೋಡಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಪೀಠ ಹೇಳಿತು.

    ಒಬ್ಬರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂದ ಮಾತ್ರಕ್ಕೆ ಆ ಸಿನಿಮಾವನ್ನು ನಿಷೇಧಿಸಬೇಕು ಎಂದರ್ಥವಲ್ಲ. ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಸಿನಿಮಾ ಬಿಡುಗಡೆ ಮಾಡಬೇಕು ಎಂಬುದು ಕಾನೂನಿನ ನಿಯಮವಿದೆ. ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ತಡೆಯಲು ಜನಸಮೂಹಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಈ ವ್ಯವಸ್ಥೆಯಲ್ಲಿ ಏನೋ ತಪ್ಪಿದೆ. ಒಬ್ಬ ವ್ಯಕ್ತಿ ಹೇಳಿಕೆ ನೀಡುತ್ತಾನೆ ಮತ್ತು ಜನರು ಅದನ್ನು ಸುವಾರ್ತೆಯ ಸತ್ಯವೆಂದು ಭಾವಿಸುತ್ತಾರೆ. ಚರ್ಚೆ ನಡೆಯಲಿ! ಬೆಂಗಳೂರಿನ ಪ್ರಬುದ್ಧ ಜನರು ಕಮಲ‌ ಹಾಸನ್ ಏಕೆ ತಪ್ಪು, ಅವರು ಹೇಳುವುದು ಅಸಂಬದ್ಧ ಎಂದು ಹೇಳಲಿ.

    ಕರ್ನಾಟಕ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ನಿರ್ದೇಶನ ನೀಡಿ, ಬುಧವಾರದೊಳಗೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿತು. ಈ ವಿಷಯವನ್ನು ಗುರುವಾರ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೇಳಿ ಸಿನಿಮಾ‌ ಬಿಡುಗಡೆ ಮಾಡಬೇಕು ಎಂದು ಹೇಳಿದೆ.

  • ಖಡ್ಗ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್‌ ಹಾಸನ್‌ ಗರಂ

    ಖಡ್ಗ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್‌ ಹಾಸನ್‌ ಗರಂ

    ನಟ ಕಮಲ್‌ ಹಾಸನ್‌ (Kamal Haasan) ಅಭಿನಂದಿಸಲು ಬಂದ ಅಭಿಮಾನಿ ಮೇಲೆ ಗರಂ ಆದ ಪ್ರಸಂಗ ನಡೆದಿದೆ.

    ರಾಜ್ಯಸಭೆಗೆ ನಾಮಕರಣಗೊಂಡ ಹಿನ್ನೆಲೆ ಚೆನ್ನೈನಲ್ಲಿ (Chennai) ಎಂಎನ್‍ಎಂ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕಮಲ್‌ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ವೇದಿಕೆ ಮೇಲೆ ಖಡ್ಗದ ಗಿಫ್ಟ್ ಕೊಡಲು ಮುಂದಾಗಿದ್ದಾರೆ. ಇದು ಕಮಲ್‍ಗೆ ಇಷ್ಟ ಆಗಲಿಲ್ಲ. ಖಡ್ಗವನ್ನು ಹಿಡಿಯಲು ನಿರಾಕರಿಸಿದರು. ಇದನ್ನೂ ಓದಿ: ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ಎಚ್ಚರಿಕೆ ಕೊಟ್ಟರೂ ಅಭಿಮಾನಿ ಕೇಳಲಿಲ್ಲ. ಬಲವಂತವಾಗಿ ಖಡ್ಗ ನೀಡಲು ಮುಂದಾಗಿದ್ದಾನೆ. ಆಗ ಕಮಲ್‍ಗೆ ಕೋಪ ಬಂದು, ಗರಂ ಆಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ಕಮಲ್‌ ಹಾಸನ್‌ ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆಗೆ, ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಕಮಲ್‌ ಅಭಿನಯದ ಥಗ್‌ಲೈಫ್‌ ಚಿತ್ರ ರಿಲೀಸ್‌ಗೆ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಚಿತ್ರತಂಡ ಹೈಕೋರ್ಟ್‌ ಮೊರೆ ಹೋಗಿತ್ತು. ವಿಚಾರಣೆ ವೇಳೆ ಕನ್ನಡಿಗರ ಕ್ಷಮೆ ಕೇಳದ ಕಮಲ್‌ಗೆ ಹೈಕೋರ್ಟ್‌ ಚಾಟಿ ಬೀಸಿತ್ತು. ಬಳಿಕ ಥಗ್‌ಲೈಫ್ (Thug Life) ಬಿಡುಗಡೆ ಕುರಿತ ವಿಚಾರಣೆಯನ್ನು ಹೈಕೋರ್ಟ್ ಜೂ.20ಕ್ಕೆ ಮುಂದೂಡಿತ್ತು.

    ಶುಕ್ರವಾರ ವಿಚಾರಣೆ ನಡೆಸಿದ್ದ ನ್ಯಾ.ನಾಗಪ್ರಸನ್ನ ಅವರು, ಕಮಲ್ ಹಾಸನ್‌ಗೆ ಕ್ಷಮೆಯಾಚನೆ ಮತ್ತು ವಿವಾದ ಇತ್ಯರ್ಥ ಮಾಡಿಕೊಳ್ಳಲು ಒಂದು ವಾರ ಅವಕಾಶ ಕೋರಲಾಗಿತ್ತು. ಇನ್ನೂ ಕಮಲ್ ಹಾಸನ್ ಕ್ಷಮೆ ಕೇಳಲಿಲ್ವಾ? ಸುಪ್ರೀಂ ಕೋರ್ಟ್ ವಿಚಾರಣೆ ಏನಾಯ್ತು? ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಕಮಲ್ ಪರ ವಕೀಲರು ಕ್ಷಮೆ ಕೇಳಿಲ್ಲ, ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

  • ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

    ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

    ನವದೆಹಲಿ: ಕರ್ನಾಟಕದಲ್ಲಿ ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಪ್ರದರ್ಶನಗೊಳ್ಳುವ ಚಿತ್ರಮಂದಿರಗಳ ರಕ್ಷಣೆಗಾಗಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

    ಕರ್ನಾಟಕದ ಚಿತ್ರಮಂದಿರಗಳಲ್ಲಿ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಲನಚಿತ್ರ ಪ್ರದರ್ಶನಕ್ಕೆ ಬೆದರಿಕೆಗಳಿವೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು.

    ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠವು ಕರ್ನಾಟಕದ ರಂಗಭೂಮಿ ಸಂಘವು ಹೈಕೋರ್ಟ್‌ ಮೊರೆ ಹೋಗುವಂತೆ ಸೂಚಿಸಿದೆ.

    ಅರ್ಜಿದಾರರ ಪರ ಹಾಜರಾದ ವಕೀಲರು, ಕರ್ನಾಟಕದಲ್ಲಿ ಚಲನಚಿತ್ರ ಪ್ರದರ್ಶನವನ್ನು ವಿರೋಧಿಸಿ ಗಡಿನಾಡು ಗುಂಪುಗಳು ಬಹಿರಂಗ ಬೆದರಿಕೆ ಹಾಕಿವೆ. ಚಿತ್ರಮಂದಿರಗಳಿಗೆ ಬೆಂಕಿ ಇಡುವುದಾಗಿ ಬೆದರಿಕೆ ಒಡ್ಡಿವೆ ಎಂದು ವಾದಿಸಿದರು. ಆದರೆ, ಸುಪ್ರೀಂ ಕೋರ್ಟ್‌ ಪ್ರಕರಣವನ್ನು ತುರ್ತು ವಿಚಾರಣೆಗೆ ನಿರಾಕರಿಸಿದೆ.

    ಜೂನ್ 5 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಥಗ್ ಲೈಫ್ ಬಿಡುಗಡೆಯಾಗಿದೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ನೀಡಿ ಕಮಲ್‌ ಹಾಸನ್‌ ವಿವಾದಕ್ಕೆ ಗುರಿಯಾಗಿದ್ದಾರೆ. ಕರ್ನಾಟಕದಲ್ಲಿ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

  • ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL

    ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL

    ಟ ಕಮಲ್ ಹಾಸನ್ (Kamal Haasan) ಅಭಿನಯದ ಚಿತ್ರ `ಥಗ್ ಲೈಫ್’ (Thug Life) ಸುರಕ್ಷಿತವಾಗಿ ಬಿಡುಗಡೆಗೆ ಅವಕಾಶ ನೀಡಿ ಎಂದು ಸುಪ್ರೀಂಕೋರ್ಟ್‍ಗೆ (Supreme Court) ಪಿಐಎಲ್ ಸಲ್ಲಿಕೆಯಾಗಿದೆ.

    ಥಗ್ ಲೈಫ್ ಚಿತ್ರವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಕರ್ನಾಟಕ ವಿಫಲವಾಗಿದೆ ಎಂದು ಎತ್ತಿ ತೋರಿಸಲು ಈ ಪಿಐಎಲ್ ಸಲ್ಲಿಸಿರೋದಾಗಿ ವಕೀಲ ಅಥೇನಮ್ ವೇಲನ್ ಹೇಳಿಕೊಂಡಿದ್ದಾರೆ. ಕರ್ನಾಟಕದಲ್ಲಿ ಸಾಂವಿಧಾನಿಕ ಆಡಳಿತ ಕುಸಿತವಾಗಿದೆ. ಚಿತ್ರಮಂದಿರಗಳು, ನಾಗರಿಕರಿಗೆ ಬಹಿರಂಗವಾಗಿ ಬೆದರಿಕೆ ಹಾಕಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದು ಕಾನೂನಿನ ನಿಯಮವನ್ನು ಹಾಳು ಮಾಡುವ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

    ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿದ್ದ ಕಮಲ್ ಹಾಸನ್‍ಗೆ ತಮಿಳಿಗರೇ ತಕ್ಕಪಾಠ ಕಲಿಸಿದ್ದಾರೆ. ಥಗ್ ಲೈಫ್ ಸಿನಿಮಾ ಬಗ್ಗೆ ತಮಿಳಿಗರೇ ನೆಗೆಟಿವ್ ಕಮೆಂಟ್ ಮಾಡ್ತಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಎಂದು ಛೀಮಾರಿ ಹಾಕಿದ್ದಾರೆ.

    ಕನ್ನಡದ ಭಾಷೆಯ ಬಗ್ಗೆ ನಿರಾಧಾರ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿ ಕಮಲ್‌ ಹಾಸನ್‌ ಗುರಿಯಾಗಿದ್ದರು. ಇದರ ಬೆನ್ನಲ್ಲೇ ರಾಜ್ಯಾಧ್ಯಂತ ಕಮಲ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ‘ಥಗ್‌ಲೈಫ್’ ಚಿತ್ರ ರಿಲೀಸ್ ಮಾಡುವ ಕುರಿತು ಹೈಕೋರ್ಟ್ (High Court) ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಕಮಲ್‌ಗೆ ಫಿಲ್ಮ್‌ ಚೇಂಬರ್‌ ಬಳಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಅಲ್ಲದೇ ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಜೂನ್ 10ಕ್ಕೆ ಅರ್ಜಿ ವಿಚಾರಣೆ ಮುಂದೂಡಿತ್ತು. ಇದರಿಂದ ಕರ್ನಾಟಕದಲ್ಲಿ ಥಗ್‌ ಲೈಫ್‌ (Thug Life) ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆಯಾಗಿದೆ.

  • ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ

    ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ

    – ನ್ಯಾ. ನಾಗಪ್ರಸನ್ನ ಪೀಠದಲ್ಲಿ ವಿಚಾರಣೆ

    ಬೆಂಗಳೂರು: ಕರ್ನಾಟಕದಲ್ಲಿ `ಥಗ್‌ಲೈಫ್’ (Thuglife) ಸಿನಿಮಾ ರಿಲೀಸ್ ವಿಚಾರವಾಗಿ ಕಮಲ್ ಹಾಸನ್ (Kamal Haasan) ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿಮಾಗೆ ಬಿಗಿಭದ್ರತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇಂದು ನ್ಯಾ.ನಾಗಪ್ರಸನ್ನ ಪೀಠ ವಿಚಾರಣೆ ನಡೆಸಲಿದೆ.

    ನಟ ಕಮಲ್ ಹಾಸನ್ ಅವರ `ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂಬ ಹೇಳಿಕೆ ರಾಜ್ಯದಲ್ಲಿ ತ್ರೀವ ಆಕ್ರೋಶ ಹುಟ್ಟುಹಾಕಿದೆ. ಆದರೂ ಕೂಡ ಕ್ಷಮೆ ಕೇಳದೇ ಉದ್ಧಟತನ ತೋರುತ್ತಿದ್ದಾರೆ. ಇದೇ 5 ರಂದು ರಿಲೀಸ್ ಆಗಲಿರುವ `ಥಗ್‌ಲೈಫ್’ ಸಿನಿಮಾಗೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಸದ್ಯ ಇದೇ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನವಾಗಿದೆ.ಇದನ್ನೂ ಓದಿ: ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

    ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅನುಮತಿ ಕೋರಿ ಸಿಸಿಬಿ ಆದೇಶವನ್ನು ಎತ್ತಿ ಹಿಡಿದಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಚಲನಚಿತ್ರ ಬಿಡುಗಡೆಗೆ ನಿರ್ದೇಶನ ನೀಡಬೇಕು. ಅಲ್ಲದೇ ಚಿತ್ರ ಬಿಡುಗಡೆಯಾದ ಥಿಯೇಟರ್‌ಗಳಿಗೆ ಬಿಗಿಭದ್ರತೆಯನ್ನು ಒದಗಿಸಬೇಕು. ಬಿಗಿಭದ್ರತೆ ನೀಡಲು ಡಿಜಿ&ಐಜಿಪಿ ಅವರಿಗೆ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಬೇಕು ಅಂತ ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇಂದು ನ್ಯಾ.ನಾಗಪ್ರಸನ್ನ ಪೀಠ ವಿಚಾರಣೆ ನಡೆಸಲಿದ್ದು, ತೀರ್ಮಾನಕ್ಕಾಗಿ ಕಾದುನೋಡಬೇಕಿದೆ.

    ಏನಿದು ವಿವಾದ?
    ಮೇ 27ರಂದು `ಥಗ್ ಲೈಫ್’ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಈ ಕುರಿತು ಇತ್ತೀಚಿಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಅವರು, ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದು ಹೇಳಿದ್ದರು.

    ಅದಾದ ಬಳಿಕ ಮತ್ತೆ ಮಾತನಾಡಿದ್ದ ಕಮಲ್ ಹಾಸನ್, ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು.ಇದನ್ನೂ ಓದಿ: ಸತತ 2ನೇ ವರ್ಷ ರಜತ್‌ Vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

  • ʻಥಗ್‌ ಲೈಫ್‌ʼ ಸಿನಿಮಾಗೆ ಬ್ಯಾನ್‌ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

    ʻಥಗ್‌ ಲೈಫ್‌ʼ ಸಿನಿಮಾಗೆ ಬ್ಯಾನ್‌ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

    ‘ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡಿಲ್ಲದೇ ತಪ್ಪೇ ಮಾಡಿಲ್ಲ, ಕ್ಷಮೆಯೂ ಕೇಳಲ್ಲ ಎಂದು ಪಟ್ಟು ಹಿಡಿರೋ ನಟ ಕಮಲ್ ಹಾಸನ್‌ಗೆ (Kamal Haasan) ತಕ್ಕ ಪಾಠ ಕಲಿಸಲು ಕನ್ನಡಪರ ಸಂಘಟನೆ ಮುಂದಾಗಿದೆ. ಇದರಿಂದ ಜೂನ್ 5ರಂದು ರಿಲೀಸ್‌ಗೆ ಸಜ್ಜಾಗಿರುವ ‘ಥಗ್ ಲೈಫ್’ (Thug Life) ಚಿತ್ರದ ಪ್ರದರ್ಶನಕ್ಕೆ ಬ್ಯಾನ್ ಬಿಸಿ ತಟ್ಟಿದೆ. ಈ ನಡುವೆ ಚಿತ್ರಕ್ಕೆ ಅಡ್ಡಿಪಡಿದಂತೆ ನಟ ಕಮಲ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

    ಹೌದು. ʻಥಗ್‌ ಲೈಫ್‌ʼ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ತಮ್ಮ ಒಡೆತನದ ರಾಜಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆಯ ಸಿಇಒ ಮೂಲಕ ಕಮಲ್ ಹಾಸನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್‌ಗೆ ಕನ್ನಡದ ಪುಸ್ತಕ ನೀಡಿದ ರಂಜನಿ ರಾಘವನ್

    ಚಲನಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿ ಸಲ್ಲಿಕೆಯಾಗಿದ್ದು, ಮೇಲ್ವಿಚಾರಣೆ ಬಾಕಿಯಿದೆ. ಆದ್ರೆ ಈ ಬಗ್ಗೆ ಕಮಲ್‌ ಹಾಸನ್‌ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

    ದುಬೈನಲ್ಲಿರುವ ಕಮಲ್ ಹಾಸನ್ ಮಂಗಳವಾರ (ಜೂ.3) ಚೆನ್ನೈಗೆ ಬರಲಿದ್ದಾರೆ. ಆದರೆ, ಕ್ಷಮೆ ಕೇಳದ ಹೊರತು ಥಗ್ ಲೈಫ್ ಸಿನಿಮಾ ರಿಲೀಸ್‌ಗೆ ಅವಕಾಶ ಕೊಡೋದೇ ಇಲ್ಲ ಅಂತ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡಿದ್ರೆ ಬೆಂಗಳೂರು ಬಂದ್: ಪ್ರವೀಣ್ ಶೆಟ್ಟಿ ಎಚ್ಚರಿಕೆ

    ಇನ್ನೂ ಕಮಲ್‌ ಹಾಸನ್ ವಿರುದ್ಧ ಬಿಜೆಪಿಗರು ಕಿಡಿಕಾರಿದ್ರೆ, ಡಿಸಿಎಂ ಡಿಕೆ ಮಾತ್ರ ಸೌಹಾರ್ದಯುತವಾಗಿ ಬಾಳ್ಬೇಕು ಅಂತಿದ್ದಾರೆ. ಈ ಮಧ್ಯೆ, ಫಿಲ್ಮ್ ಚೇಂಬರ್‌ಗೆ ಶಿವರಾಮೇಗೌಡ ಬಣದ ಹೋರಾಟಗಾರರು ಮುತ್ತಿಗೆ ಯತ್ನ ನಡೆಸಿದ್ರು. ಇದನ್ನೂ ಓದಿ: I’m Loving It – ಕೊನೆಗೂ ಬ್ರೇಕಪ್ ಬಗ್ಗೆ ಮೌನಮುರಿದ ಸಿಡ್ನಿ ಸ್ವೀನಿ!

  • ‘ಥಗ್‌ ಲೈಫ್‌’ ಟೀಂ ಉದ್ಧಟತನ ಬಟಾಬಯಲು – ಕನ್ನಡ ಬಿಟ್ಟು 4 ಭಾಷೆಗಳಿಗೆ ಸಿನಿಮಾ ಡಬ್‌

    ‘ಥಗ್‌ ಲೈಫ್‌’ ಟೀಂ ಉದ್ಧಟತನ ಬಟಾಬಯಲು – ಕನ್ನಡ ಬಿಟ್ಟು 4 ಭಾಷೆಗಳಿಗೆ ಸಿನಿಮಾ ಡಬ್‌

    ಟ ಕಮಲ್‌ ಹಾಸನ್‌ (Kamal Haasan) ಕನ್ನಡ ಹೇಳಿಕೆ ವಿವಾದದ ಬೆನ್ನಲ್ಲೇ ‘ಥಗ್‌ ಲೈಫ್‌’ (Thug Life) ತಂಡವು ಮತ್ತೆ ಉದ್ದಟತನ ಪ್ರದರ್ಶಿಸಿದೆ.

    ಕನ್ನಡ ಹೊರತುಪಡಿಸಿ ನಾಲ್ಕು ಭಾಷೆಗಳಿಗೆ ನಿರ್ಮಾಪಕರು ಸಿನಿಮಾವನ್ನು ಡಬ್‌ ಮಾಡಿದ್ದಾರೆ. ತಮಿಳಿನಲ್ಲಿ ನೇರವಾಗಿ ಚಿತ್ರೀಕರಿಸಿ ತೆಲುಗು, ಹಿಂದಿ, ಮಲಯಾಳಂಗೆ ಸಿನಿಮಾವನ್ನು ಡಬ್‌ ಮಾಡಲಾಗಿದೆ. ಇದನ್ನೂ ಓದಿ: ಥಗ್‌ ಲೈಫ್ ಚಿತ್ರಕ್ಕೆ ʻಶುಗರ್‌ ಬೇಬಿʼ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಕನ್ನಡ ಕೈಬಿಟ್ಟು ಕರ್ನಾಟಕದಲ್ಲಿ ಇತರ ಭಾಷೆಯ ಚಿತ್ರ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗಿದೆ. ಬುಕ್ ಮೈ ಶೋನಲ್ಲಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ.

    ತಮಿಳು ಭಾಷೆಯಿಂದ ಕನ್ನಡ ಬಂದಿದ್ದು ಎಂದು ಈಚೆಗೆ ನಟ ಕಮಲ್‌ ಹಾಸನ್‌ ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ನಟನ ಹೇಳಿಕೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದನ್ನೂ ಓದಿ: ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್‌ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು

    ಕಮಲ್‌ ಹಾಸನ್‌ ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಟ ಕ್ಷಮೆಯಾಚಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದ್ದು, ನಟನ ಸಿನಿಮಾಗಳನ್ನು ಕರ್ನಾಟಕದ ಥಿಯೇಟರ್‌ಗಳಲ್ಲಿ ಬ್ಯಾನ್‌ ಮಾಡುವುದಾಗಿ ತಿಳಿಸಿದೆ.

    ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಥಗ್‌ ಲೈಫ್‌’ ಸಿನಿಮಾಗೂ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ. ಒಂದು ವೇಳೆ ಸಿನಿಮಾ ಪ್ರದರ್ಶನ ಮಾಡಿದರೆ, ಅಂತಹ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿವೆ. ಇದನ್ನೂ ಓದಿ: ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ

  • ಥಗ್‌ ಲೈಫ್ ಚಿತ್ರಕ್ಕೆ ʻಶುಗರ್‌ ಬೇಬಿʼ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಥಗ್‌ ಲೈಫ್ ಚಿತ್ರಕ್ಕೆ ʻಶುಗರ್‌ ಬೇಬಿʼ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಗ್‌ ಲೈಫ್ (Thug Life) ಚಿತ್ರ ಜೂನ್ 5 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆ ಹೊತ್ತಲ್ಲೇ ನಾಯಕಿಯಾಗಿ ನಟಿಸಿರುವ ತ್ರಿಷಾ (Trisha) ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿರುವ ಅವರು, ಈ ಚಿತ್ರಕ್ಕಾಗಿ 12 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

    ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಿಡುಗಡೆ ಸಮೀಪಿಸುತ್ತಿದ್ದು, ಚಿತ್ರತಂಡವು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ.

    ಚಿತ್ರದಲ್ಲಿ ʻಶುಗರ್ ಬೇಬಿʼಹಾಡಿಗೆ ತ್ರಿಷಾ ಅದ್ಭುತವಾಗಿ ಸೊಂಟ ಬಳುಕಿಸಿದ್ದಾರೆ. ಆದರೆ ಈ ಹಾಡು ಬಿಡುಗಡೆಯಾದಾಗ ವಿವಾದ ಆಗುತ್ತಾ ಎಂಬ ಚರ್ಚೆ ಹುಟ್ಟುಹಾಕಿತ್ತು. ಯಾಕಂದ್ರೆ ʻಶುಗರ್‌ ಬೇಬಿʼ ಪದ ಸಾಮಾನ್ಯವಾಗಿ ಹಣಕ್ಕಾಗಿ ವಯಸ್ಸಾದ ಪುರುಷನೊಂದಿಗೆ ಕಿರಿಯ ಯುವತಿ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ. ಇದರಿಂದ ಚಿತ್ರದಲ್ಲಿ ತ್ರಿಷಾ (Trisha) ಅವರನ್ನು ವಿವಾದಾತ್ಮಕ ಪಾತ್ರದಲ್ಲಿ ಚಿತ್ರಿಸಿರಬಹುದು ಎಂಬ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಹಾಡಿನ ಪ್ರೋಮೋ ಅನೇಕರ ಕುತೂಹಲ ಕೆರಳಿಸಿದೆ.

    ಮೇ 17 ರಂದು ಚಿತ್ರದ ಟ್ರೈಲರ್‌ ರಿಲೀಸ್‌ ಆಗಿತ್ತು. ಇದರಲ್ಲಿ ಕಮಲ್‌ ಹಾಸನ್‌ (Kamal Haasan) ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ ಮಾಡುವ ಸೀನ್‌ ಅಭಿಮಾನಿಗಳ ಕಾತರವನ್ನು ಹೆಚ್ಚಿಸಿತ್ತು. ಇನ್ನೂ ಸಿನಿ ರಸಿಕರ ಈ ಕಾತರ ತಣಿಯಲು ಜೂ.5ರ ವರೆಗೆ ಕಾಯಲೇ ಬೇಕಿದೆ.

    ಥಗ್‌ ಲೈಫ್‌ನಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಟ ಕಮಲ್ ಹಾಸನ್ ನಾಯಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಜೊತೆ ಸಿಂಬು, ತ್ರಿಷಾ, ಮತ್ತು ಅಭಿರಾಮಿ ಸೇರಿದಂತೆ ಪ್ರಮುಖ ನಟ ನಟಿಯರು ಚಿತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ತಗ್ ಲೈಫ್ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೂ ಚಿತ್ರದ ಪ್ರಮೋಷನ್‌ ವೇಳೆ ಬೆಂಗಳೂರಿನಲ್ಲಿ ಕಮಲ್‌ ಹಾಸನ್‌ ನೀಡಿದ್ದ ಕನ್ನಡ ವಿರೋಧಿ ಹೇಳಿಕೆಯಿಂದ, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಕಂಟಕ ತಂದೊಡ್ಡುವ ಆತಂಕ ಎದುರಾಗಿದೆ.