Tag: Throne Alignment

  • ಇಂದು ಸಿಂಹಾಸನ ಜೋಡಣೆ ಕಾರ್ಯ – ಮೈಸೂರು ಅರಮನೆ ಅರ್ಧ ದಿನ ಪ್ರವಾಸಿಗರಿಗೆ ನಿರ್ಬಂಧ

    ಇಂದು ಸಿಂಹಾಸನ ಜೋಡಣೆ ಕಾರ್ಯ – ಮೈಸೂರು ಅರಮನೆ ಅರ್ಧ ದಿನ ಪ್ರವಾಸಿಗರಿಗೆ ನಿರ್ಬಂಧ

    ಮೈಸೂರು: ದಸರಾ (Dasara) ಹಿನ್ನೆಲೆಯಲ್ಲಿ ಅರಮನೆಯಲ್ಲಿ (Mysuru Palace) ಇಂದು ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ಮಂಗಳವಾರ ಮಧ್ಯಾಹ್ನದ ವರೆಗೆ ಅರಮನೆ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

    ರಾಜವಂಶ್ಥರು ನಡೆಸುವ ಧಾರ್ಮಿಕ ಕಾರ್ಯ ಖಾಸಗಿ ದರ್ಬಾರ್‌ಗಾಗಿ ಇಂದು ಸಿಂಹಾಸನ ಜೋಡಣೆ ಮಾಡಲಾಗುವುದು. ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ನಡೆಯಲಿದೆ. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?

    ಬೆ. 8:30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಚಿನ್ನದ ಸಿಂಹಾಸನದ ಬಿಡಿಭಾಗ ಹಾಗೂ ಬೆಳ್ಳಿಯ ಭದ್ರಾಸನದ ಬಿಡಿ ಭಾಗಗಳನ್ನ ದರ್ಬಾರ್ ಹಾಲ್‌ಗೆ ತಂದು ಜೋಡಣೆ ಮಾಡಲಾಗುವುದು.

    ಬೆಳ್ಳಿ ಭದ್ರಾಸನವನ್ನ ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗುವುದು. ಸಿಂಹಾಸನ ಜೋಡಣೆ ಕಾರ್ಯ ನಡೆಯುವ ವೇಳೆ ದರ್ಬಾಲ್ ಹಾಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮೆರಾಗೆ ಪರದೆ ಹಾಕಲಾಗುವುದು. ಇದನ್ನೂ ಓದಿ: ದಸರಾ ನಿಮಿತ್ತ ಸಿಡಿಮದ್ದು ತಾಲೀಮು – ವಿಚಲಿತಗೊಂಡ ಗಜಪಡೆಯ ಶ್ರೀಕಂಠ, ಹೇಮಾವತಿ

    ಸಿಂಹಾಸನ ಜೋಡಣೆ ಕಾರ್ಯದ ನಿಮಿತ್ತ ಬೆಳಗ್ಗೆಯೇ ದರ್ಬಾರ್ ಹಾಲ್‌ನಲ್ಲಿ ಗಣಪತಿ, ಚಾಮುಂಡಿ ಪೂಜೆ ಸೇರಿಂದತೆ ಕೆಲ ಹೋಮ ಹವನ ನಡೆಯಲಿದೆ. ಪೂಜೆ ಮುಗಿದ ಬಳಿಕ ಸಿಂಹಾಸನ ಬಿಡಿಭಾಗವನ್ನ ದರ್ಬಾರ್ ಹಾಲ್‌ಗೆ ತಂದು ಸಿಂಹಾಸನ ಜೋಡಣೆ ಮಾಡಲಾಗುವುದು.