Tag: threaten

  • ಬಿಜೆಪಿ ಪರ ಕೆಲ್ಸ ಮಾಡಿದ್ರೆ ಕೊಲೆ ಬೆದರಿಕೆ- ಕಾರ್ಯಕರ್ತನ ಮೇಲೆ ಜೆಡಿಎಸ್ ನವರಿಂದ ಹಲ್ಲೆ

    ಬಿಜೆಪಿ ಪರ ಕೆಲ್ಸ ಮಾಡಿದ್ರೆ ಕೊಲೆ ಬೆದರಿಕೆ- ಕಾರ್ಯಕರ್ತನ ಮೇಲೆ ಜೆಡಿಎಸ್ ನವರಿಂದ ಹಲ್ಲೆ

    ಬೀದರ್: ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಬಿಜೆಪಿ ಪರ ಕೆಲಸ ಮಾಡಿದ್ರೆ ಕೊಲೆ ಮಾಡುವುದಾಗಿ ಜೆಡಿಎಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಭಾಲ್ಕಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಿಕೆ ಸಿದ್ರಾಮ್ ಬೆಂಬಲಿಗ ಭಾಲ್ಕಿ ವೈಜನಾಥಾ ಸಗಾರೆ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ತಡರಾತ್ರಿ ಮನೆಗೆ ಹೋಗುವಾಗ ಕೆಲ ಜೆಡಿಎಸ್ ಅಭ್ಯರ್ಥಿ ಬೆಂಬಲಿಗರು ಹಲ್ಲೆ ಮಾಡಿರುವುದಾಗಿ ಬಿಜೆಪಿ ಕಾರ್ಯಕರ್ತ ಆರೋಪಿಸಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಬೆಂಬಲಿಗರು ಹಲ್ಲೆ ನಡೆಸಿರುವುದಾಗಿ ಆರೋಪ ವ್ಯಕ್ತವಾಗಿದ್ದು, ಈ ಸಂಬಂಧ ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆತ್ಮಹತ್ಯೆಗೆ ಕಾರಣ ಬರೆದ ಡೈರಿ ಹೊಟ್ಟೆಗೆ ಸಿಕ್ಕಿಸಿಕೊಂಡು ಯುವಕ ನೇಣಿಗೆ ಶರಣು

    ಆತ್ಮಹತ್ಯೆಗೆ ಕಾರಣ ಬರೆದ ಡೈರಿ ಹೊಟ್ಟೆಗೆ ಸಿಕ್ಕಿಸಿಕೊಂಡು ಯುವಕ ನೇಣಿಗೆ ಶರಣು

    ಮಂಡ್ಯ: ಪ್ರಿಯತಮೆಯನ್ನು ಆಕೆಯ ಪೋಷಕರು ತನ್ನಿಂದ ದೂರ ಮಾಡಿದ್ದಾರೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ನಾಯಿಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಿಂಗೇಗೌಡರ ಮಗ ಮಹೇಶ್(37) ಆತ್ಮಹತ್ಯೆಗೆ ಶರಣಾದ ಯುವಕ. ಮಹೇಶ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ಪೋಷಕರಿಗೆ ತಿಳಿದ ಬಳಿಕ ಅವರು ತಮ್ಮ ಮಗಳ ಜೊತೆ ಮಾತುಕತೆ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಯುವತಿಯನ್ನು ಆಕೆಯ ಪೋಷಕರು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಇಬ್ಬರು ಪರಸ್ಪರ ಸಿಗದಂತೆ ದೂರ ಮಾಡಿದ್ದರು. ಇದರಿಂದ ಮನನೊಂದ ಮಹೇಶ್ ತಮ್ಮ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ವಿಚಾರವನ್ನು ಯುವಕ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಆ ಡೈರಿಯನ್ನು ತನ್ನ ಹೊಟ್ಟೆಗೆ ಸಿಕ್ಕಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರೇಯಸಿಯ ಪೋಷಕರ ಜೀವ ಬೆದರಿಕೆಯ ಭಯದಿಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಆತನ ಪೋಷಕರು ಆರೋಪಿಸುತ್ತಿದ್ದಾರೆ.

    ಕೆಆರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.