Tag: Threat of murder

  • ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು: ಯಶ್‌ಪಾಲ್ ಸುವರ್ಣ

    ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು: ಯಶ್‌ಪಾಲ್ ಸುವರ್ಣ

    ಉಡುಪಿ: ನನಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು ಎಂದು ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ‌ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿರುವ ವಿಚಾರವಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಂದುತ್ವದ ವಿಚಾರದಲ್ಲಿ ಕೆಲಸ ಮಾಡುವಾಗ ಬೆದರಿಕೆಗಳು ಸಾಮಾನ್ಯ. ಧಮ್ಕಿ ಕೊಟ್ಟವನಿಗೆ ನನ್ನ ವ್ಯಾಲ್ಯೂಯೇಷನ್ ಎಷ್ಟು ಅಂತ ಗೊತ್ತಿಲ್ಲ. ಒಬ್ಬ ಮನುಷ್ಯನ ಬೆಲೆ ಎಷ್ಟು ಅಂತ ಗೊತ್ತಿದ್ದರೆ ಆತ ಬೆಲೆ ಕಟ್ಟುತ್ತಿರಲಿಲ್ಲ. ಧಮ್ಕಿ ಬಂತು ಅಂತ ನನ್ನ ಕೆಲಸದ ಶೈಲಿ ರಾಷ್ಟ್ರೀಯತೆ ಹಿಂದುತ್ವದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಲಕಿಯರಿಗೆ ರೈಫಲ್ ತರಬೇತಿ, ಸೂಸೈಡ್ ಬಾಂಬ್ ತರಬೇತಿ ನೀಡಿದ್ದೆ – ಐಸಿಸ್ ಸೇರಿದ್ದ ಶಿಕ್ಷಕಿಯಿಂದ ತಪ್ಪೊಪ್ಪಿಗೆ

    ಕಿಡಿಗೇಡಿಗಳು ಅವರ ತಲೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ತಲೆಗೆ 10 ಲಕ್ಷ ರೂಪಾಯಿ ಘೋಷಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು. ತಾಕತ್ ಇದ್ದರೆ ಅವರು ಎದುರು ಬಂದು ಮಾತಾಡಲಿ. ನನ್ನ ಜೀವನದಲ್ಲಿ ಇಂತದ್ದು ತುಂಬಾ ನೋಡಿದ್ದೇನೆ. ನಾನು ದೇಶದ್ರೋಹಿ ಚಟುವಟಿಕೆ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ನನಗೆ ದೋ ನಂಬರ್ ಬ್ಯುಸಿನೆಸ್ ಇಲ್ಲ ನಾನು ಯಾರದೋ ಅನ್ನದ ಬಟ್ಟಲಿಗೆ ಕೈಹಾಕಿ ತಿಂದಿಲ್ಲ ಎಂದು ಸಿಡಿದರು. ಇದನ್ನೂ ಓದಿ: ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

    court order law

    ಶಾಲೆಯ ಶಿಸ್ತು ಮತ್ತು ಕೋರ್ಟ್ ಆದೇಶ ಪಾಲಿಸಲು ನಾವು ಹಿಜಬ್‍ನ ವಿರುದ್ಧವೇ ನಿಲ್ಲುತ್ತೇವೆ. ಈ ವರ್ಷ ಕೂಡ 40ಕ್ಕೂ ಹೆಚ್ಚು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ನಾವು ಅಡ್ಮಿಶನ್ ಮಾಡಿಸಿಕೊಂಡಿದ್ದೇವೆ. ನಾವು ಹಿಜಬ್ ತೆಗೆದು ಕ್ಲಾಸಿಗೆ ಬರುತ್ತೇವೆ ಎಂದು ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.

    ಕಿಡಿಗೇಡಿಗಳು ಪ್ರಮೋದ್ ಮುತಾಲಿಕ್ ಅವರಿಗೂ ಬೆದರಿಕೆ ಹಾಕಿದ್ದಾರೆ. ನಾನು ಅವರ ಜೊತೆ ಮಾತನಾಡಿಲ್ಲ, ಮಾತನಾಡುತ್ತೇನೆ. ನನ್ನ ಸಿದ್ಧಾಂತ ದೇಶದ ವಿಚಾರದ ಹೋರಾಟ ಮಾಡುತ್ತೇನೆ. ನಾನು ಭಯಪಡುವ ಪ್ರಶ್ನೆಯೇ ಇಲ್ಲ. ಟೀಕೆ ಬೆದರಿಕೆ ಸಾಮಾಜಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗ ಎಂದರು.

  • ವಧು ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ ಅಂದ ಜಲಜಾ

    ವಧು ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ ಅಂದ ಜಲಜಾ

    ನೆಲಮಂಗಲ: ನಗರದ ವಧುವಿನ ಕಿಡ್ನಾಪ್ ಪ್ರಕರಣವು ಬೇರೆ ರೀತಿ ತಿರುವು ಪಡೆದುಕೊಂಡಿದ್ದು, ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ನಾನೇ ನನ್ನ ಅಪ್ಪ, ಅಣ್ಣನ ಜೊತೆಗೆ ಬಂದಿದ್ದೇನೆ ಎಂದು ಕಿಡ್ನಾಪ್ ಆದ ನವ ವಧುವೇ ಹೇಳಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಜಲಜ, ಗಂಗಾಧರಯ್ಯನ ಜೊತೆ ನಾನು ಮದುವೆಯಾಗಿದ್ದು, ಕೂಡ ಭಯ ಹಾಗೂ ಬಲವಂತದಿಂದಾಗಿದ್ದೇನೆ. ಈ ಹಿಂದೆ ಅವನು ನನ್ನ ಕುಟುಂಬಕ್ಕೆ ಆಸಿಡ್ ಹಾಕಿ ಕೊಲೆ ಮಾಡುವ ಬೆದರಿಕೆ ಹಾಕಿದ್ದನು. ಮದುವೆಯಾಗದಿದ್ದರೆ ನಿಮ್ಮ ಕುಟುಂಬಕ್ಕೆ ಆಸಿಡ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದನು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಆತ ನನ್ನ ಬಲವಂತವಾಗಿ ಕರೆದುಕೊಂಡು ಹೋಗಿದ್ದನು. ನಂತರದಲ್ಲಿ ಪ್ರತಿ ಗಂಟೆ ಗಂಟೆಗೆ ಜಾಗ ಮನೆ ಬದಲಾವಣೆ ಮಾಡುತಿದ್ದನು. ನನ್ನ ಅಪ್ಪ, ಅಮ್ಮ ಚೆನ್ನಾಗಿರಲಿ ಅನ್ನುವ ಒಂದೇ ಒಂದು ಕಾರಣಕ್ಕೆ ನಾನು ಆತನ ಜೊತೆಗಿದ್ದೇ. ಇಂದು ಮದುವೆಯಾಗಿ ಪೊಲೀಸ್ ಠಾಣೆಗೆ ನಾವು ಬಂದ ವೇಳೆ ವರನು ನನಗೆ ಚಿತ್ರಹಿಂಸೆ ಕೊಡುವ ಬಗ್ಗೆ ನಮ್ಮ ತಂದೆ ಸ್ನೇಹಿತರಿಗೆ ತಿಳಿಸಿದ್ದೇನು. ನನ್ನ ತಂದೆ ಬಂದಾಗ ನಾನೇ ಓಡಿಹೋಗಿ ಕಾರಲ್ಲಿ ಕುಳಿತೆ. ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ಅವರ ಕುಟುಂಬ ಸರಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ನಾನು ಅವನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದೆ. ಆದರೆ ಅವನು ಇಂತಹ ಲೋಫರ್ ಅಂತ ನನಗೆ ಗೊತ್ತಿರಲಿಲ್ಲ. ಅವನ ಫೋನ್ ನೋಡಿದ ಮೇಲೆ ಗೊತ್ತಾಯಿತು. ಅವನಿಗೆ ಈ ಮೊದಲು ಇಬ್ಬರು ಮೂವರ ಜೊತೆಗೆ ಸಂಬಂಧ ಇತ್ತು. ಅದನ್ನು ನೋಡಿದ ಮೇಲೆ ಮತ್ತೆ ವರನ ಕುಟುಂಬ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ನನ್ನನ್ನು ಕಿಡ್ನಾಪ್ ಮಾಡಲು ಯಾವುದೇ ಗೂಂಡಾಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.