Tag: Threat calls

  • ವಿದೇಶಗಳಿಂದ ರಘುಪತಿ ಭಟ್‌ಗೆ ನಿರಂತರವಾಗಿ ಬರುತ್ತಿವೆ ಬೆದರಿಕೆ ಕರೆ

    ವಿದೇಶಗಳಿಂದ ರಘುಪತಿ ಭಟ್‌ಗೆ ನಿರಂತರವಾಗಿ ಬರುತ್ತಿವೆ ಬೆದರಿಕೆ ಕರೆ

    ಉಡುಪಿ: ಹಿಜಬ್ ವಿವಾದಕ್ಕೆ ಸಂಬಂಧಿಸಿ ವಿದೇಶಗಳಿಂದ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಗೃಹ ಸಚಿವರಿಗೆ ಶಾಸಕ ರಘುಪತಿ ಭಟ್ ಅವರು ಮೌಖಿಕವಾಗಿ ಮಾಹಿತಿ ನೀಡಿದರು.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಬ್ಬಿ ಸೌಂಡ್‌ಗೆ ನಾನು ಹೆದರಲ್ಲ. ಇಂತಹ ಹಲವು ಬೆದರಿಕೆಗಳನ್ನು ನಾವು ತುಂಬಾ ನೋಡಿದ್ದೇವೆ. ಉಡುಪಿ ಜಿಲ್ಲೆಯ ಮುಸಲ್ಮಾನರಿಂದ ಒಂದೂ ಪ್ರತಿರೋಧ ಬಂದಿಲ್ಲ. ಉಡುಪಿ ಹಾಗೂ ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ಬಾಲ್ಯದಿಂದಲೇ ಇಂಥ ಹಲವು ಬೆದರಿಕೆಗಳು ನಾನು ನೋಡಿದ್ದೇನೆ. ಉಡುಪಿಯ ಮುಸ್ಲಿಂ ಒಕ್ಕೂಟ, ಖಾಜಿಗಳು ನನಗೆ ಬೆಂಬಲ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಘಟನೆ ಕುರಿತು ಉಡುಪಿ ಎಸ್ಪಿ ವಿಷ್ಣುವರ್ಧನ್ ಫೋನ್ ಮಾಡಿದ್ದಾರೆ. ನನಗೆ ಭದ್ರತೆ ಬೇಡ, ನನಗೆ ದೇವರಿದ್ದಾರೆ ಅವರೇ ನನ್ನ ಭದ್ರತೆ ನೋಡಿಕೊಳ್ಳುತ್ತಾರೆ. ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯುರಿಟಿ ಗಾರ್ಡ್. ಉಡುಪಿಯ ಯಾವುದೇ ಒಬ್ಬ ವ್ಯಕ್ತಿ, ಒಂದು ಸಂಘಟನೆಯಿಂದ ಬೆದರಿಕೆ ಬಂದಿಲ್ಲ. ಹೈದರಾಬಾದ್‌ನಿಂದ ಫೋನ್ ಕರೆ ಮಾಡಿ ಒಬ್ಬ ಹುಚ್ಚ ಮಾತನಾಡಿದ್ದಾನೆ. ಅವನಿಗೆ ಇಪ್ಪತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

    ಹಿಜಬ್ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಕಾಲ್ ಮೂಲಕ ಬೆದರಿಸುತ್ತಿದ್ದಾರೆ. ಹೈದರಾಬಾದ್‌ನಿಂದ ಫೋನ್ ವಾಟ್ಸಪ್, ಫೇಸ್ಬುಕ್ ಮೂಲಕ ಥ್ರೆಟ್ ಹಾಕುತ್ತಿದ್ದಾರೆ. ಆದರೆ ನಾನು ಯೂನಿಫಾರ್ಮ್ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಚರ್ಚೆ ಮಾಡಿಲ್ಲ ಮಾತನಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ: ಜಾವೇದ್ ಅಖ್ತರ್

    ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ಮನೆಗೆ ಭದ್ರತೆ ನೀಡಲಾಗುದ್ದು, ಗನ್ ಮ್ಯಾನ್ ಭದ್ರತೆಯನ್ನು ಪೊಲೀಸ್ ಇಲಾಖೆ ಒದಗಿಸಿದೆ.

  • ತಮಿಳು ನಾಮಫಲಕ ಕಿತ್ತು ಹಾಕಿದ್ದಕ್ಕೆ ವಿದೇಶದಿಂದ ಬೆದರಿಕೆ ಕರೆ : ವಾಟಾಳ್

    ತಮಿಳು ನಾಮಫಲಕ ಕಿತ್ತು ಹಾಕಿದ್ದಕ್ಕೆ ವಿದೇಶದಿಂದ ಬೆದರಿಕೆ ಕರೆ : ವಾಟಾಳ್

    ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ತಮಿಳು ನಾಮಫಲಕ ಕಿತ್ತು ಹಾಕಿದ್ದಕ್ಕೆ ತಮಿಳರಿಂದ ನನಗೆ ನೂರಾರು ಬೆದರಿಕೆ ಕರೆಗಳು ಬರುತ್ತಿವೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

    ಕಳೆದ ವಾರ ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸಿ ಚಾಮರಾಜನಗರದ ನಡುರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಅವರು ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ಸ್ಥಳದಲ್ಲಿ ಹಾಕಿದ್ದ ತಮಿಳ ನಾಮಫಲಕಗಳನ್ನು ಕಿತ್ತು ಹಾಕಿದ್ದರು.

    ಈ ಪ್ರತಿಭಟನೆಯ ಬಳಿಕ ತನಗೆ ಕೆನಡಾ, ಅಮೆರಿಕ, ಮಲೇಶಿಯ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

    ನಾನು ಯಾವ ಬೆದರಿಕೆಗೂ ಮಣಿಯುವುದಿಲ್ಲ, ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ, ನನ್ನ ಹೋರಾಟ ಮುಂದುವರಿಸುತ್ತೇನೆ. ಜೊತೆಗೆ ಅವರೆಲ್ಲರ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.

    ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟದ ಮುಂದುವರಿದ ಭಾಗವಾಗಿ ಫೆಬ್ರುವರಿ 13 ರಂದು ಚಾಮರಾಜನಗರ ಜಿಲ್ಲೆಯ ಪುಣಜನೂರು ಬಳಿ ಕರ್ನಾಟಕ ತಮಿಳುನಾಡು ಗಡಿ ಬಂದ್ ಮಾಡಲಾಗುವುದು ಎಂದು ಹೇಳಿದರು.