Tag: Threads App

  • Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    ಮುಂಬೈ/ವಾಷಿಂಗ್ಟನ್‌: ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗರು (Cricketer) ಇತ್ತೀಚೆಗಷ್ಟೇ ಅನಾವರಣಗೊಂಡ ʻಥ್ರೆಡ್ಸ್‌ʼ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಷನ್‌ ʻಥ್ರೆಡ್ಸ್‌ʼ (Threads App) ಬಳಕೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

     

    Post by @rishabpant
    View on Threads

     

    ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ, ಟ್ವಿಟ್ಟರ್‌ಗೆ ಪ್ರಬಲ ಪೈಪೋಟಿ ನೀಡಲು ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊಸ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಶನ್ ‘ಥ್ರೆಡ್ಸ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೀಗ ಬಳಕೆದಾರರು ಈ ಹೊಸ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಲಾಗಿನ್‌ ಆಗುತ್ತಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಠಕ್ಕರ್ ಕೊಡಲು ಬಿಡುಗಡೆಯಾಯ್ತು ‘ಥ್ರೆಡ್ಸ್’ – 4 ಗಂಟೆಯಲ್ಲಿ 50 ಲಕ್ಷ ಸೈನ್ ಅಪ್

    ಥ್ರೆಡ್ಸ್ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಇದನ್ನು ಬಿಡುಗಡೆ ಮಾಡಿದ 4 ಗಂಟೆಗಳಲ್ಲಿ 50 ಲಕ್ಷ ಬಳಕೆದಾರರು ಸೈನ್ ಅಪ್ ಮಾಡಿದ್ದರು. ಇದೀಗ ಟೀಂ ಇಂಡಿಯಾದ ಸ್ಟಾರ್‌ ಆಟಗಾರರ ಟ್ವಿಟ್ಟರ್‌ ಬದಲಿಗೆ ಥ್ರೆಡ್ಸ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಟೀಂ ಇಂಡಿಯಾ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌, ಟ್ವಿಟ್ಟರ್‌ ಮುಖ್ಯಸ್ಥ ಎಲೋನ್‌ ಮಸ್ಕ್‌ಗೆ (Elon Musk) ಟಾಂಗ್‌ ಕೊಟ್ಟಿದ್ದಾರೆ.

    ಥ್ರೆಡ್ಸ್‌ಗೆ ಲಾಗಿನ್‌ ಆಗಿರುವ ಅಶ್ವಿನ್‌ ಎಲಾನ್‌ ಮಸ್ಕ್‌ ಸೇರಿಕೊಂಡಿದ್ದಾರಾ..? ಅವರಿನ್ನು ಸೇರಿಕೊಂಡಿಲ್ಲದಿದ್ದರೆ ಬೇಗನೆ ಸೇರುವುದು ಒಳ್ಳೆಯದು ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    ಮತ್ತೊಂದೆಡೆ ಭೀಕರ ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್‌ ಸಹ ʻಥ್ರೆಡ್ಸ್‌ʼ ಬಳಕೆದಾರರ ಸಮೂಹಕ್ಕೆ ಸೇರಿಕೊಂಡು ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಥ್ರೆಡ್ಸ್‌ ಸೇರಿರುವ ಎಲ್ಲರಿಗೂ ಸ್ವಾಗತ. ಪ್ರತಿಯೊಬ್ಬರು ಸಾಧ್ಯವಾದಷ್ಟು ಬೆಂಬಲಿಗರನ್ನು ಗಳಿಸಿ. ನಾವು ಇದನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಲು ಪ್ರಯತ್ನಿಸೋಣ ಎಂದು ಥ್ರೆಡ್ಸ್‌ ಪೋಸ್ಟ್‌ ಮೂಲಕ ಕರೆ ಕೊಟ್ಟಿದ್ದಾರೆ.

    ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ?
    ಥ್ರೆಡ್ಸ್‌ ಖಾತೆ ತೆರೆಯಬೇಕಾದರೆ ಇನ್ಸ್ಟಾಗ್ರಾಮ್‌ (Instagram) ಖಾತೆ ಬೇಕಾಗುತ್ತದೆ. ಥ್ರೆಡ್ಸ್‌ ಆಪ್‌ ಡೌನ್‌ಲೋಡ್‌ ಮಾಡಿದ ಕೂಡಲೇ ಇನ್‌ಸ್ಟಾದಿಂದ ಬಯೋ ಸೇರಿದಂತೆ ಫಾಲೋವರ್ಸ್‌ಗಳನ್ನು Import ಮಾಡಬೇಕಾ ಅಂತಾ ಕೇಳುತ್ತದೆ. ಬಳಕೆದಾರರು ಅನುಮತಿ ನೀಡಿದರೆ ಇನ್‌ಸ್ಟಾ ಬಯೋ ನಿಮ್ಮ ಪ್ರೊಫೈಲಿನಲ್ಲಿ ಬಂದಿರುತ್ತದೆ. ಇನ್‌ಸ್ಟಾ ಸ್ನೇಹಿತರ ಪೈಕಿ ಯಾರು ಥ್ರೆಡ್ಸ್‌ಗೆ ಜಾಯಿನ್‌ ಆಗಿದ್ದಾರೋ ಅವರನ್ನು ಇಲ್ಲಿ ಫಾಲೋ ಮಾಡಬಹುದು.

    ಥ್ರೆಡ್ಸ್‌ನಲ್ಲಿ ಎಲ್ಲಾ ಬಳಕೆದಾರರು 5 ನಿಮಿಷ ಉದ್ಧದ ವೀಡಿಯೋಗಳನ್ನು ಪೋಸ್ಟ್‌ ಮಾಡಬಹುದು. ನೀಲಿ ಬ್ಯಾಡ್ಜ್‌ ಇಲ್ಲದ ಟ್ವಿಟ್ಟರ್‌ ಬಳಕೆದಾರರು ಗರಿಷ್ಠ 2 ನಿಮಿಷ 20 ಸೆಕೆಂಡ್‌ ಉದ್ದದ ವೀಡಿಯೋ ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ.

    ಡ್ಸ್‌ನಲ್ಲಿ ಗರಿಷ್ಠ 500 ಪದಗಳನ್ನು ಬಳಸಿ ಪೋಸ್ಟ್‌ ಮಾಡಬಹುದು. ಟ್ವಿಟ್ಟರ್‌ನಲ್ಲಿ 280 ಪದಗಳಿಗೆ ಮಿತಿಯನ್ನು ನಿಗದಿ ಮಾಡಲಾಗಿದೆ. ಇನ್‌ಸ್ಟಾದಲ್ಲಿರುವ ಅಧಿಕೃತ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಇರುವಂತೆ ಇಲ್ಲೂ ಅದೇ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಅಟೋಮ್ಯಾಟಿಕ್‌ ಆಗಿ ಬಂದಿರುತ್ತದೆ. ಟ್ವಿಟ್ಟರ್‌ನಲ್ಲಿ ನೀಲಿ ಟಿಕ್‌ ಮಾರ್ಕ್‌ ಬೇಕಾದರೆ ದುಡ್ಡು ಪಾವತಿಸಬೇಕಾಗುತ್ತದೆ.

    ಸದ್ಯಕ್ಕೆ ಥ್ರೆಡ್ಸ್‌ನಲ್ಲಿ ಯಾವುದೇ ಜಾಹೀರಾತು ಪ್ರಕಟವಾಗುವುದಿಲ್ಲ. ಇನ್‌ಸ್ಟಾದಲ್ಲಿ ಯಾವೆಲ್ಲ ವಿಷಯಗಳಿಗೆ ಸೆನ್ಸರ್‌ ಮಾಡಲಾಗುತ್ತದೋ ಆ ಎಲ್ಲಾ ವಿಷಯಗಳನ್ನು ಇಲ್ಲೂ ಸೆನ್ಸರ್‌ ಮಾಡಲಾಗುತ್ತದೆ.

    ಥ್ರೆಡ್ಸ್‌ಗೆ ಒಮ್ಮೆ ಸೇರ್ಪಡೆಯಾದರೆ ಆ ಖಾತೆಯನ್ನು ಡಿಲೀಟ್‌ ಮಾಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಖಾತೆ ಡಿಲೀಟ್‌ ಮಾಡಬೇಕಾದರೆ ಇನ್‌ಸ್ಟಾ ಖಾತೆಯನ್ನೇ ಡಿಲೀಟ್‌ ಮಾಡಬೇಕಾಗುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಥ್ರೆಡ್ಸ್‌ ಖಾತೆಯನ್ನು ನಿಷ್ಕ್ರಿಯ ಮಾಡಬಹುದು. ಆದರೆ ಇನ್‌ಸ್ಟಾದ ಖಾತೆ ಡಿಲೀಟ್‌ ಮಾಡಿದರೆ ಮಾತ್ರ ಥ್ರೆಡ್ಸ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಸಾಧ್ಯ ಎಂದು ಪ್ರೈವೆಸಿ ಪಾಲಿಸಿಯಲ್ಲಿ ತಿಳಿಸಲಾಗಿದೆ.

    ಟ್ವಿಟ್ಟರ್‌ನಲ್ಲಿ ಬಳಕೆದಾರರು ಬೇರೆ ಟ್ವೀಟ್‌ ಲೈಕ್‌ ಮಾಡಿದರೆ ಅದು ಪ್ರತ್ಯೇಕ ಟ್ಯಾಬ್‌ನಲ್ಲಿ ಕಾಣುತ್ತದೆ. ಆದರೆ ಥ್ರೆಡ್ಸ್‌ನಲ್ಲಿ ಲೈಕ್‌ ಮಾಡಿದ್ದನ್ನು ನೋಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಪ್ರೊಫೈಲ್‌ ಫೋಟೋದ ಮೇಲ್ಭಾಗದಲ್ಲಿ ಇನ್‌ಸ್ಟಾಖಾತೆ ಕಾಣುತ್ತದೆ. ಇನ್‌ಸ್ಟಾ ಪ್ರೊಫೈಲ್‌ ಫೋಟೋದ ಕೆಳಭಾಗದಲ್ಲಿ ಥ್ರೆಡ್ಸ್‌ ಲಿಂಕ್‌ ಕಾಣುತ್ತದೆ. ಜೊತೆಗೆ ಥ್ರೆಡ್ಸ್‌ನಲ್ಲಿ ಫಾಲೋವರ್ಸ್‌ಗಳೊಂದಿಗೆ ಚಾಟ್‌ ಮಾಡುವ ಆಯ್ಕೆ ಇಲ್ಲ. ಬಳಕೆದಾರರ ಪ್ರೋಫೈಲ್‌ಗೆ ಹೋದ್ರೆ ಅದರಲ್ಲಿ ಇನ್ಸ್ಟಾಗ್ರಾಮ್‌ ಖಾತೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, ನೇರವಾಗಿ ಇನ್ಸ್ಟಾ ತೆರೆದುಕೊಳ್ಳುತ್ತದೆ. ಅಲ್ಲೇ ಚಾಟ್‌ ಆಯ್ಕೆಯನ್ನು ಬಳಸಬೇಕಾಗುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ವಾಷಿಂಗ್ಟನ್‌:‌ ಟ್ವಿಟ್ಟರ್‌ನಲ್ಲಿ (Twitter) ದಿನನಿತ್ಯದ ಪೋಸ್ಟ್‌ಗಳನ್ನ ಓದಲು ಮುಖ್ಯಸ್ಥ ಎಲೋನ್‌ ಮಸ್ಕ್‌ ಮಿತಿ ವಿಧಿಸಿದ ಬೆನ್ನಲ್ಲೇ ಟ್ವಿಟ್ಟರ್‌ಗೆ ಪರ್ಯಾಯವಾಗಿ ʻಥ್ರೆಡ್ಸ್‌ʼಮೈಕ್ರೋಬ್ಲಾಗಿಂಗ್‌ ಅಪ್ಲಿಕೇಶನ್‌ (Threads Microblogging App) ಪ್ರಾರಂಭಿಸಲು ಮೆಟಾ (Meta) ಪ್ಲ್ಯಾನ್‌ ಮಾಡಿದೆ.

    ಹೌದು. ಕಳೆದ ವರ್ಷದಿಂದ ಎಲೋನ್‌ ಮಸ್ಕ್‌ (Elon Musk) ಟ್ವಿಟ್ಟರ್‌ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗದುಕೊಂಡ ನಂತರ ಆಗುತ್ತಿರುವ ಸಮಸ್ಯೆಗಳ ಲಾಭ ಪಡೆಯಲು ಮೆಟಾ ಪ್ರಯತ್ನಿಸುತ್ತಿದೆ. ಟ್ವಿಟ್ಟರ್‌ ಬಳಕೆದಾರರು ಪರ್ಯಾಯ ವೇದಿಕೆಗಳನ್ನು ಹುಡುಕಲು ಪ್ರೇರೇಪಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    ಇದೀಗ ʻಥ್ರೆಡ್ಸ್‌ʼಎಂದು ಕರೆಯಲ್ಪಡುವ ಈ ಅಪ್ಲಿಕೇಶನ್‌ ಟ್ವಿಟ್ಟರ್‌ ನಂತೆಯೇ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಪಠ್ಯ ಆಧಾರಿತ ಪೋಸ್ಟ್‌ಗಳನ್ನ ಓದಬಹುದು, ಟ್ವಿಟ್ಟರ್‌ನಂತೆಯೇ ಲೈಕ್‌, ಕಾಮೆಂಟ್‌ ಹಾಗೂ ಶೇರ್‌ ಕೂಡ ಮಾಡಬಹುದು. ಜೊತೆಗೆ ನೆಚ್ಚಿನ ಬಳಕೆದಾರರನ್ನ ಫಾಲೋ ಮಾಡಬಹುದು. ಥ್ರೆಡ್ಸ್‌ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಶನ್‌ ಇದೇ ಗುರುವಾರ (ಜುಲೈ 6) ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಆಪಲ್‌ನ ಆ್ಯಪ್ ಸ್ಟೋರ್‌ಪಟ್ಟಿ ತಿಳಿಸಿದೆ.

    ಈ ಥ್ರೆಡ್ಸ್‌ ಅಪ್ಲಿಕೇಶನ್‌ ನಲ್ಲಿ (Threads App) ಟ್ವಿಟ್ಟರ್‌ನಂತೆಯೇ ಚರ್ಚಿಸಲು ಅವಕಾಶವಿದೆ. ಇಂದಿನ ಕಾಳಜಿ ವಹಿಸುವ ವಿಷಯಗಳಿಂದ ಹಿಡಿದು, ನಾಳೆ ಟ್ರೆಂಡ್‌ ಆಗುವ ಎಲ್ಲಾ ವಿಷಯಗಳನ್ನ ಚರ್ಚಿಸಬಹುದಾಗಿದೆ. ಶೀಘ್ರದಲ್ಲೇ ಈ ಆ್ಯಪ್ ಬಿಡುಗಡೆಯಾಗಲಿದ್ದು, ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದು ಆಪಲ್‌ನ ಆ್ಯಪ್ ಸ್ಟೋರ್‌ ಪಟ್ಟಿ ತಿಳಿಸಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಟ್ವಿಟ್ಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಒಂದು ದಿನಕ್ಕೆ ಟ್ವಿಟ್ಟರ್‌ನಲ್ಲಿ ಇಂತಿಷ್ಟೇ ಪೋಸ್ಟ್‌ಗಳನ್ನ ಓದಬಹುದು ಎಂಬ ಮಿತಿ ವಿಧಿಸಿ, ನಂತರ ಮತ್ತೆ ಹೆಚ್ಚಿಸಿದ್ದರು.

    ಕಳೆದ ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟ್ಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದರು. ಬಳಿಕ ಮಸ್ಕ್‌ ಬದಲಾವಣೆಯ ಅಸ್ತ್ರ ಹೂಡಿದ್ದರು. ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್‌ಗಳ (Twitter Posts) ಮೂಲಕ ಕೆರಳಿಸುವ ಪ್ರಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್‌ ಪ್ರತಿದಿನದ ಪೋಸ್ಟ್‌ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ. ಮುಂದೆ ಟ್ವಿಟ್ಟರ್‌ ಬಳಕೆದಾರರ ಪ್ರತಿಕ್ರಿಯೆ ನೋಡಿಕೊಂಡು ಬದಲಾವಣೆ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.

    ಮೊದಲಿಗೆ ವೆರಿಫೈ ಆದ ಖಾತೆಗಳಿಗೆ (Twitter Verified Accounts) ದಿನಕ್ಕೆ 6,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 600 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಬಳಕೆದಾರರು ದಿನಕ್ಕೆ 300 ಪೋಸ್ಟ್‌ಗಳನ್ನು ಓದಲು ಮಿತಿ ಇರುತ್ತದೆ ಎಂದು ಹೇಳಿದ್ದ ಮಸ್ಕ್‌ ಒಂದು ದಿನದ ನಂತರ ತಮ್ಮ ನಿಲುವನ್ನು ಬದಲಿಸಿದ್ದರು. ಇದನ್ನೂ ಓದಿ: Twitter ನಲ್ಲಿ ಪೋಸ್ಟ್‌ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್‌

    ಮತ್ತೊಂದು ಟ್ವೀಟ್‌ ಮಾಡಿ ಓದುವಿಕೆ ಮಿತಿಯಲ್ಲಿ ಕೊಂಚ ಮಾರ್ಪಾಡು ಮಾಡುವುದಾಗಿ ಘೋಷಿಸಿದರು. ವೆರಿಫೈ ಖಾತೆಗಳ ಮಿತಿಯನ್ನು 8,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 800 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಮಿತಿಯನ್ನು 400ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಈಗ 10k, 1k ಮತ್ತು 0.5k ಎಂದು ಮಸ್ಕ್‌ ಮತ್ತೊಂದು ಟ್ವೀಟ್‌ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]