Tag: thrashes

  • ತಪ್ಪು ಮಾಡಿ ಅಮಾಯಕ ಯುವಕನಿಗೆ ರಾಡ್‍ನಿಂದ ಥಳಿಸಿದ ಮಹಿಳೆ!

    ತಪ್ಪು ಮಾಡಿ ಅಮಾಯಕ ಯುವಕನಿಗೆ ರಾಡ್‍ನಿಂದ ಥಳಿಸಿದ ಮಹಿಳೆ!

    ಚಂಡೀಗಢ: ಮಹಿಳೆಯೊಬ್ಬಳು ತಾನೇ ತಪ್ಪು ಮಾಡಿ, ಅಮಾಯಕ ಯುವಕನ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಪೊಲೀಸ್ ಬಂಧನದಲ್ಲಿದ್ದ ಆರೋಪಿ ಮಹಿಳೆ ಜಾಮೀನು ಪಡೆದು ಬಿಡುಗಡೆಯಾಗಿದ್ದಾಳೆ.

    ಮೊಹಾಲಿ ನಿವಾಸಿ ಶೀತಲ್ ಶರ್ಮಾ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿ. ಚಂಡೀಗಢ ನಿವಾಸಿ ನಿತೀಶ್ ಹಲ್ಲೆಗೆ ಒಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ನಿತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆಗಿದ್ದೇನು?:
    ಶೀತಲ್ ಟ್ರಿಬ್ಯೂನ್ ಚೌಕ್ ಬಳಿ ರ್ಯಾಶ್ ಆಗಿ ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಅದೇ ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದ ನಿತೀಶ್, ನಿಧಾನವಾಗಿ ಕಾರನ್ನು ರಿವರ್ಸ್ ಮಾಡುವಂತೆ ಬುದ್ಧಿ ಹೇಳಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಾಗ್ವಾದ ಆರಂಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಶೀತಲ್ ತನ್ನ ಕಾರಿನಲ್ಲಿದ್ದ ಕಬ್ಬಿಣದ ರಾಡ್ ತಂದು ನಿತೀಶ್‍ಗೆ ಥಳಿಸಿದ್ದಾಳೆ. ಶೀತಲ್ ವರ್ತನೆಯಿಂದ ಕೋಪಗೊಂಡ ನಿತೀಶ್ ಕೂಡ ಕೈಗೆ ಸಿಕ್ಕ ವಸ್ತುವಿನಿಂದ ಮಹಿಳೆಯ ಕಾರಿಗೆ ಹೊಡೆದು ಗಾಜನ್ನು ಪುಡಿ ಮಾಡಿದ್ದಾರೆ.

    ನಿತೀಶ್ ಹಾಗೂ ಶೀತಲ್ ಮಧ್ಯೆ ನಡೆಯುತ್ತಿದ್ದ ಗಲಾಟೆ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆಯ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

    ಈ ವಿಡಿಯೋವನ್ನು ಆಧಾರಿಸಿ ಪೊಲೀಸರು ಆರೋಪಿ ಶೀತಲ್‍ಳನ್ನು ಬಂಧಿಸಿ, ಐಪಿಸಿ ಸೆಕ್ಷನ್ 279 (ರ್ಯಾಸ್ ಡ್ರೈವಿಂಗ್), 323 (ಉದ್ದೇಶಪೂರ್ವಕವಾಗಿ ಹಲ್ಲೆ), 506 (ಜೀವ ಬೆದರಿಕೆ) ಮತ್ತು 336 (ಅನ್ಯರ ಜೀವಕ್ಕೆ ಅಪಾಯವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ಶೀತಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.

  • ಅಶ್ಲೀಲ ಮೆಸೇಜ್, ಕಾಲ್ ಕಿರಿಕಿರಿ – ಕಿಡ್ನಾಪ್ ಮಾಡಿ ಕಾಮುಕನಿಗೆ ಪಾಠ ಕಲಿಸಿದ ಟೆಕ್ಕಿ

    ಅಶ್ಲೀಲ ಮೆಸೇಜ್, ಕಾಲ್ ಕಿರಿಕಿರಿ – ಕಿಡ್ನಾಪ್ ಮಾಡಿ ಕಾಮುಕನಿಗೆ ಪಾಠ ಕಲಿಸಿದ ಟೆಕ್ಕಿ

    ಹೈದರಾಬಾದ್: ಮಹಿಳಾ ಟೆಕ್ಕಿಯೊಬ್ಬರು ತಮಗೆ ಕಾಟಕೊಡುತ್ತಿದ್ದ ಕಾಮುಕನನ್ನು ಕಿಡ್ನಾಪ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಕೆಲ ದಿನಗಳಿಂದ ವ್ಯಕ್ತಿಯೊಬ್ಬನು 24 ವರ್ಷದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಗೆ ಫೋನ್ ಮಾಡಿ, ಮೆಸೇಜ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತ ವಿಪರೀತ ಕಾಟ ಕೊಡುತ್ತಿದ್ದನು. ಮಹಿಳೆಯ ಗೆಳತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನು ಹೇಗೋ ಆಕೆಯ ಫೋನ್ ನಂಬರ್ ಪಡೆದು ಕಾಲ್ ಹಾಗೂ ಮೆಸೇಜ್ ಮಾಡಿ ಹಿಂಸೆ ನೀಡುತ್ತಿದ್ದನು.

    ಕಾಮುಕನ ಹಿಂಸೆಯಿಂದ ಬೇಸತ್ತಿದ್ದ ಮಹಿಳೆಯು ತನ್ನ ಸ್ನೇಹಿತೆಯರ ಸಹಾಯ ಪಡೆದು ಆ ಕಾಮುಕನಿಗೆ ಪಾಠ ಕಲಿಸಬೇಕು ಎಂದು ಫ್ಲಾನ್ ಮಾಡಿದ್ದರು. ಬಳಿಕ ಕಾಮುಕನಿಗೆ ಕರೆಮಾಡಿ ಸಿಕಂದರಾಬಾದ್ ಬಳಿ ಇರುವ ಕಾಲೇಜ್ ಹತ್ತಿರ ಬರಲು ಹೇಳಿದ್ದಾರೆ. ನಂತರ ಅಲ್ಲಿ ಆತನಿಗೆ ಹಿಗ್ಗಾ ಮುಗ್ಗಾ ಹೊಡೆದು ಕಿಡ್ನಾಪ್ ಮಾಡಿದ್ದಾರೆ. ಅಲ್ಲದೆ ನಿರ್ಜನ ಪ್ರದೇಶಕ್ಕೆ ಆತನನ್ನು ಕರೆದುಕೊಂಡು ಹೋಗಿ ಥಳಿಸಿದ್ದಾರೆ.

    ಆದ್ರೆ ತೀವ್ರ ಗಾಯಗೊಂಡಿದ್ದರೂ ಚಾಲಾಕಿ ಕಾಮುಕನು ಮಹಿಳೆಯಿಂದ ತಪ್ಪಿಸಿಕೊಂಡು ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವಿಷಯದ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಬಂದ ಪೊಲೀಸರು ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ವ್ಯಕ್ತಿಯ ಹೇಳಿಕೆ ಮೇಲೆ ಪೊಲೀಸರು ಮಹಿಳೆ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕಾನೂನನ್ನು ಉಲ್ಲಂಘಿಸಿ ಕಿಡ್ನಾಪ್ ಮಾಡಿ ಥಳಿಸಿದಕ್ಕೆ ಸದ್ಯ ಮಹಿಳಾ ಟೆಕ್ಕಿ ವಿರುದ್ಧ ಗೋಪಾಲ್‍ಪುರಂ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಕೊಲೆ ಪ್ರಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv