Tag: Thousand Crores

  • ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಹಿಂದಿಯ ಬಿಗ್ ಬಾಸ್ ಶೋ ನಡೆಸುವುದಕ್ಕಾಗಿ ಸಲ್ಮಾನ್ ಖಾನ್ (Salman Khan) ಭಾರೀ ಮೊತ್ತದ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಬಾಲಿವುಡ್ ಅಂಗಳಲ್ಲಿ ಸಖತ್ ಸದ್ದು ಮಾಡಿತ್ತು. ಅದೊಂದು ದೊಡ್ಡ ಮೊತ್ತದ ಸಂಭಾವನೆ ಆಗಿರುವ ಕಾರಣದಿಂದಾಗಿ, ಉಳಿದ ಭಾಷೆಯಲ್ಲಿ ಬಿಗ್ ಬಾಸ್ ನಡೆಸಿಕೊಡುವ ಸಿಲಿಬ್ರಿಟಿಗಳು ಇನ್ನೆಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಸಲ್ಮಾನ್.

    ಬಿಗ್ ಬಾಸ್ (Bigg Boss) ಶೋ ನಡೆಸುವುದಕ್ಕಾಗಿ ಸಲ್ಮಾನ್ ಸಾವಿರ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಅವರಿಗೂ ತಲುಪಿದೆ. ಈ ಸುದ್ದಿ ಓದಿ ಸ್ವತಃ ಸಲ್ಮಾನ್ ಬೆಚ್ಚಿ ಬಿದ್ದಿದ್ದಾರೆ. ಐಟಿ ದಾಳಿ ಮಾಡಿಸಲು ಯಾರಾದರೂ ಹುನ್ನಾರ ನಡೆಸಿದ್ದಾರಾ? ಎಂದು ತಮಾಷೆ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸಲ್ಮಾನ್, ತಾವು ಈವರೆಗೂ ಸಾವಿರ ಕೋಟಿ ದುಡ್ಡನ್ನೇ ನೋಡಿಲ್ಲ. ಇನ್ನು ಸಂಭಾವನೆ ಪಡೆಯುವುದು ದೂರದ ಮಾತು ಅಂದಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಈಗ ಹರಿದಾಡುತ್ತಿರುವ ಸಾವಿರ ಕೋಟಿ ಸಂಭಾವನೆಯಲ್ಲಿ (Salary) ಕಾಲು ಭಾಗದ ಹಣ ಬಂದರೆ ಅದೇ ನನಗೆ ಸಾವಿರ ಕೋಟಿ. ಆದರೆ, ಅದು ಸಾಧ್ಯವಿಲ್ಲವೆ? ನನಗೂ ಸಾವಿರ ಕೋಟಿ ಸಂಭಾವನೆ ಪಡೆಯಬೇಕು ಎನ್ನುವ ಆಸೆಯಿದೆ. ಅಂಥದ್ದೊಂದು ಕಾಲ ಯಾವಾಗ ಕೂಡಿ ಬರುತ್ತದೆಯೋ ಕಾದು ನೋಡಬೇಕು ಎಂದು ಅವರು ಮಾತನಾಡಿದ್ದಾರೆ. ಸಾವಿರ ಕೋಟಿ ಸಂಭಾವನೆಯನ್ನು ಪಡೆಯುತ್ತೇನೆ ಎನ್ನುವುದು ಸುಳ್ಳು ಎಂದೂ ಅವರು ತಿಳಿಸಿದ್ದಾರೆ.

    salman

    ಕಳೆದ ಕೆಲವು ಸೀಸನ್ ಗಳಿಂದಲೂ ಈ ಸಾವಿರ ಕೋಟಿ (Thousand Crores) ಲೆಕ್ಕಾಚಾರದ ಸುದ್ದಿ ಹೈಪ್ ಪಡೆಯುತ್ತಲೇ ಇತ್ತು. ಈವರೆಗೂ ಈ ಕುರಿತಾಗಿ ಸಲ್ಮಾನ್ ಪ್ರತಿಕ್ರಿಯಿಸಿರಲಿಲ್ಲ. ಈ ಬಾರಿ ಆ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ಸತ್ಯವನ್ನೂ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸಾವಿರ ಕೋಟಿ ಸಂಭಾವನೆಯನ್ನು ಪಡೆಯುವ ಆಸೆಯನ್ನೂ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]