Tag: Thothapuri 2

  • ‘ತೋತಾಪುರಿ 2’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್

    ‘ತೋತಾಪುರಿ 2’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್

    ವರಸ ನಾಯಕ ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ 2’ ಸಿನಿಮಾದ ಟ್ರೈಲರ್ (Trailer) ಅನ್ನು ಇಂದು ನಟ ಶಿವರಾಜ್ ಕುಮಾರ್ (Shivaraj Kumar) ಬಿಡುಗಡೆ ಮಾಡಿದರು. ಜೊತೆಗೆ ಅಭಿಮಾನಿಗಳಿಗೆ ಗಣೇಶ್ ಹಬ್ಬ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತೋತಾಪುರಿ ಸಿನಿಮಾದ ನಿರ್ಮಾಪಕ ಸುರೇಶ್ ಅವರ ಜೊತೆಗಿನ ಬಾಂಧವ್ಯವನ್ನೂ ನೆನಪಿಸಿಕೊಂಡರು ಶಿವಣ್ಣ.

    ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಧನಂಜಯ್, ಜಗ್ಗೇಶ್, ಅದಿತಿ ಪ್ರಭುದೇವ್, ಸುಮನ್ ರಂಗನಾಥ್ ಅವರ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾದ ಝಲಕ್ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ. ಹಾಸ್ಯ, ಎಮೋಷನ್ ಜೊತೆಗೊಂದು ಅದ್ಭುತ ಸಂದೇಶವನ್ನು ಈ ಸಿನಿಮಾ ನೀಡಲಿದೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ.

    ಸಿದ್ಲಿಂಗು ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈಗಾಗಲೇ ಒಂದು ತೋತಾಪುರಿಯನ್ನು ಪ್ರೇಕ್ಷಕರಿಗೆ ತಿನ್ನಿಸಿದ್ದಾರೆ. ಮತ್ತೊಂದು ತೋತಾಪುರಿ ತಿನ್ನಿಸಲು ರೆಡಿ ಮಾಡಿಕೊಂಡಿದ್ದಾರೆ. ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ’ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ತೋತಾಪುರಿ ಸಿನಿಮಾವನ್ನು ಜನರು ಮೆಚ್ಚಿಕೊಂಡ ಬೆನ್ನಲ್ಲೇ ತೋತಾಪುರಿ 2 (Thothapuri 2) ಸಿನಿಮಾವನ್ನು ಟ್ರೈಲರ್ ರಿಲೀಸ್ ಆಗಿದೆ.

    ಕೆ.ಎ.ಸುರೇಶ್ (KA Suresh) ಆರ್ಟ್ಸ್ ಬ್ಯಾನರ್ ಅಡಿಯಲ್ಲಿ  ಈ ಸಿನಿಮಾ ನಿರ್ಮಾಣಗೊಂಡಿದ್ದು, ನೀರ್ ದೋಸೆ ಚಿತ್ರದ ಯಶಸ್ವೀ ತಂಡ ಮತ್ತೊಮ್ಮೆ `ತೋತಾಪುರಿ’ಯ ಮೂಲಕ ಒಂದಾಗಿರೋದು ವಿಶೇಷ. ನಿರ್ದೇಶಕ ವಿಜಯಪ್ರಸಾದ್ (Vijay Prasad) ಅವರ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ (Jaggesh), ದತ್ತಣ್ಣ, ಸುಮನ್ ರಂಗನಾಥ್ ಮತ್ತೆ ಒಂದಾಗಿದ್ದಾರೆ. ಇದಲ್ಲದೆ ಉದ್ಯಮಿಯ ಪಾತ್ರದಲ್ಲಿ ಡಾಲಿ ಧನಂಜಯ ಮತ್ತು ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇದನ್ನೂ ಓದಿ:ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ

    ನಿರ್ಮಾಪಕ ಕೆ ಎ ಸುರೇಶ್ ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ಭರವಸೆ ಈ ಚಿತ್ರ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ತಂಡದ ಬಗ್ಗೆಯೇ ದೊಡ್ಡ ನಿರೀಕ್ಷೆ ಉದ್ಭವವಾಗಿದೆ. ಕನ್ನಡ ಚಿತ್ರ ರಂಗದಲ್ಲಿ ಯಶಸ್ಸನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಿರ್ಮಾಪಕ ಕೆ ಎ ಸುರೇಶ್ `ತೋತಾಪುರಿ’. ಚಿತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ (Dhananjay),  ಜಗ್ಗೇಶ್ ಜೊತೆಯಾಗಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ.

    ನವರಸ ನಾಯಕ ಜಗ್ಗೇಶ್ ಅವರ ಚಿತ್ರಜೀವನದಲ್ಲಿ ಇದೇ ಮೊದಲ ಬಾರಿಗೆ 100ಕ್ಕೂ ಹೆಚ್ಚು ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ಕೆ ಎ ಸುರೇಶ್ `ರಾಜು ಕನ್ನಡ ಮೀಡಿಯಂ’ ಚಿತ್ರದ ಯಶಸ್ಸಿನ ನಂತರ ಒಂದು ಭರವಸೆ ಮೂಡಿಸುವ ತಂಡದ ಜೊತೆ ಹಣ ಹೂಡಿದ್ದಾರೆ. ವಿಜಯಪ್ರಸಾದ್ `ಸಿದ್ಲಿಂಗು’ ಸಿನಿಮಾದಲ್ಲಿ ಟೀಚರ್ ಆಗಿದ್ದ ಸುಮನ್ ರಂಗನಾಥ್ ಈ ಚಿತ್ರದಲ್ಲೂ ಪ್ರಮುಖ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ನಂಜೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆ.18ಕ್ಕೆ ಜಗ್ಗೇಶ್-ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ’ 2 ಟ್ರೈಲರ್ ರಿಲೀಸ್

    ಸೆ.18ಕ್ಕೆ ಜಗ್ಗೇಶ್-ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ’ 2 ಟ್ರೈಲರ್ ರಿಲೀಸ್

    ವರಸ ನಾಯಕ ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ 2’ ಸಿನಿಮಾದ ಟ್ರೈಲರ್ ಇದೇ ಸೆಪ್ಟೆಂಬರ್ 18ರಂದು ರಿಲೀಸ್ ಆಗಲಿದೆ. ನಟ ಶಿವರಾಜ್ ಕುಮಾರ್ (Shivaraj Kumar) ಈ ಟ್ರೈಲರ್ (Trailer) ರಿಲೀಸ್ ಮಾಡಲಿದ್ದು, ಗಣೇಶ್ ಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಲಿದೆ.

    ಸಿದ್ಲಿಂಗು ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈಗಾಗಲೇ ಒಂದು ತೋತಾಪುರಿಯನ್ನು ಪ್ರೇಕ್ಷಕರಿಗೆ ತಿನ್ನಿಸಿದ್ದಾರೆ. ಮತ್ತೊಂದು ತೋತಾಪುರಿ ತಿನ್ನಿಸಲು ರೆಡಿ ಮಾಡಿಕೊಂಡಿದ್ದಾರೆ. ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ’ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ತೋತಾಪುರಿ ಸಿನಿಮಾವನ್ನು ಜನರು ಮೆಚ್ಚಿಕೊಂಡ ಬೆನ್ನಲ್ಲೇ ತೋತಾಪುರಿ 2 (Thothapuri 2) ಸಿನಿಮಾವನ್ನು ಟ್ರೈಲರ್ ರಿಲೀಸ್ ಮಾಡಲು ನಿರ್ಮಾಪಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಮೊದಲ ಪೋಸ್ಟರ್ (Poster) ಈಗಾಗಲೇ ರಿಲೀಸ್ ಆಗಿದೆ.

    ಕೆ.ಎ.ಸುರೇಶ್ (KA Suresh) ಆರ್ಟ್ಸ್ ಬ್ಯಾನರ್ ಅಡಿಯಲ್ಲಿ  ಈ ಸಿನಿಮಾ ನಿರ್ಮಾಣಗೊಂಡಿದ್ದು, ನೀರ್ ದೋಸೆ ಚಿತ್ರದ ಯಶಸ್ವೀ ತಂಡ ಮತ್ತೊಮ್ಮೆ `ತೋತಾಪುರಿ’ಯ ಮೂಲಕ ಒಂದಾಗಿರೋದು ವಿಶೇಷ. ನಿರ್ದೇಶಕ ವಿಜಯಪ್ರಸಾದ್ (Vijay Prasad) ಅವರ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ (Jaggesh), ದತ್ತಣ್ಣ, ಸುಮನ್ ರಂಗನಾಥ್ ಮತ್ತೆ ಒಂದಾಗಿದ್ದಾರೆ. ಇದಲ್ಲದೆ ಉದ್ಯಮಿಯ ಪಾತ್ರದಲ್ಲಿ ಡಾಲಿ ಧನಂಜಯ ಮತ್ತು ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇದನ್ನೂ ಓದಿ:ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

    ನಿರ್ಮಾಪಕ ಕೆ ಎ ಸುರೇಶ್ ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ಭರವಸೆ ಈ ಚಿತ್ರ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ತಂಡದ ಬಗ್ಗೆಯೇ ದೊಡ್ಡ ನಿರೀಕ್ಷೆ ಉದ್ಭವವಾಗಿದೆ. ಕನ್ನಡ ಚಿತ್ರ ರಂಗದಲ್ಲಿ ಯಶಸ್ಸನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಿರ್ಮಾಪಕ ಕೆ ಎ ಸುರೇಶ್ `ತೋತಾಪುರಿ’. ಚಿತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ (Dhananjay),  ಜಗ್ಗೇಶ್ ಜೊತೆಯಾಗಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ.

    ನವರಸ ನಾಯಕ ಜಗ್ಗೇಶ್ ಅವರ ಚಿತ್ರಜೀವನದಲ್ಲಿ ಇದೇ ಮೊದಲ ಬಾರಿಗೆ 100ಕ್ಕೂ ಹೆಚ್ಚು ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ಕೆ ಎ ಸುರೇಶ್ `ರಾಜು ಕನ್ನಡ ಮೀಡಿಯಂ’ ಚಿತ್ರದ ಯಶಸ್ಸಿನ ನಂತರ ಒಂದು ಭರವಸೆ ಮೂಡಿಸುವ ತಂಡದ ಜೊತೆ ಹಣ ಹೂಡಿದ್ದಾರೆ. ವಿಜಯಪ್ರಸಾದ್ `ಸಿದ್ಲಿಂಗು’ ಸಿನಿಮಾದಲ್ಲಿ ಟೀಚರ್ ಆಗಿದ್ದ ಸುಮನ್ ರಂಗನಾಥ್ ಈ ಚಿತ್ರದಲ್ಲೂ ಪ್ರಮುಖ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ನಂಜೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

    `ಎರಡನೇ ಮದುವೆ’, `ಗೋವಿಂದಾಯ ನಮಃ’, ಶ್ರಾವಣಿ ಸುಬ್ರಮಣಿ, ಆರ್ ಎಕ್ಸ್ ಸೂರಿ, ಶಿವಲಿಂಗ ಮತ್ತು ರಾಜು ಕನ್ನಡ ಮೀಡಿಯಂ ನಂತರ  `ತೋತಾಪುರಿ’, ‘ತೋತಾಪುರಿ 2’ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಸುರೇಶ್  ಈ  ಸಿನಿಮಾವನ್ನು ಯಾವಾಗ ರಿಲೀಸ್ ಮಾಡುತ್ತಾರೋ ಕಾದು ನೋಡಬೇಕಿದೆ.