Tag: thothapuri

  • ತೋತಾಪುರಿ ಹಾಡಿನ ಸಂಭ್ರಮಕ್ಕಿಲ್ಲ ಬ್ರೇಕ್- ಗಲ್ಫ್ ಕನ್ನಡಿಗರೊಂದಿಗೆ ನಡೆಯಲಿದೆ ವರ್ಚ್ಯುಯಲ್ ಸೆಲೆಬ್ರೇಶನ್.!!

    ತೋತಾಪುರಿ ಹಾಡಿನ ಸಂಭ್ರಮಕ್ಕಿಲ್ಲ ಬ್ರೇಕ್- ಗಲ್ಫ್ ಕನ್ನಡಿಗರೊಂದಿಗೆ ನಡೆಯಲಿದೆ ವರ್ಚ್ಯುಯಲ್ ಸೆಲೆಬ್ರೇಶನ್.!!

    ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ರಿಲೀಸ್ ಆಗಿದ್ದೇ ಆಗಿದ್ದು, ಎಲ್ಲೇ ಹೋದ್ರು ಈ ಹಾಡಿನದ್ದೇ ಕಾರುಬಾರು. ಮಿಲಯನ್ ಗಟ್ಟಲೇ ಮನಸ್ಸುಗಳ ಕದ ತಟ್ಟಿರುವ ಈ ಹಾಡಿನ ಸೆಲೆಬ್ರೇಶನ್‌ಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಯಾರ್ ಕೇಳಿದ್ರು ‘ಬಾಗ್ಲು ತೆಗೆ ಮೇರಿ ಜಾನ್’ ಹಾಡಿನ ಜಪವನ್ನೇ ಮಾಡುತ್ತಿದ್ದಾರೆ.

    ಟೀಂ ತೋತಾಪುರಿಗಂತೂ ಈ ಗೆಲುವು ಎಲ್ಲಿಲ್ಲದ ಖುಷಿ ತಂದು ಕೊಟ್ಟಿದೆ. ಅದೇ ಖುಷಿಯಲ್ಲಿ ಈ ಹಾಡಿನ ಸಂಭ್ರಮದ ತೇರನ್ನು ಎಳೆಯಲು ಆರಂಭಿಸಿತ್ತು. ಮೊದಲಿಗೆ ಅನಿವಾಸಿ ಕನ್ನಡಿಗರೊಂದಿಗೆ ನಡೆದ ವರ್ಚ್ಯುಯಲ್ ಕಾರ್ಯಕ್ರಮ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಇದೀಗ ಗಲ್ಫ್ ಕನ್ನಡಿಗರೊಂದಿಗೆ ಸ್ಪೆಶಲ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು ಮಾಡಿದೆ. ಇದನ್ನೂ ಓದಿ: ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

    ಹೌದು ಅಂತಹದ್ದೊಂದು ದೊಡ್ಡ ಕ್ರೇಜ್ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸೃಷ್ಟಿಸಿದೆ. ಕೇವಲ ಕರುನಾಡು ಮಾತ್ರವಲ್ಲದೇ ದೇಶ ವಿದೇಶದಲ್ಲಿರುವ ಕನ್ನಡಿಗರ ಹೃದಯಕ್ಕೆ ಈ ಹಾಡು ಲಗ್ಗೆ ಇಟ್ಟಿತ್ತು. ಅಷ್ಟಕ್ಕೆ ನಿಲ್ಲದೇ ಇದೀಗ ದುಬೈ ಕನ್ನಡಿಗರ ಹೃದಯವನ್ನೂ ಕದ್ದಿದೆ. ಅಲ್ಲಿನ ಕನ್ನಡಿಗರು ಹಾಡನ್ನು ರಿಪೀಟ್ ಮೂಡ್‌ನಲ್ಲಿ ಕೇಳುತ್ತಿದ್ದಾರೆ. ಇಂತಹದೊಂದು ಕ್ರೇಜ್ ಹುಟ್ಟುಹಾಕಿರುವ ಹಾಡಿನ ಸಂಭ್ರಮವನ್ನು ಅಲ್ಲಿನವರೊಂದಿಗೆ ಸೆಲೆಬ್ರೇಟ್ ಮಾಡಬೇಕೆಂಬುದು ಚಿತ್ರತಂಡದ ಮಹದಾಸೆ. ಅದಕ್ಕೆಂದೇ ಫೆಬ್ರವರಿ 25ರಂದು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಮೋನಿಫಿಕ್ಸ್ ಆಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವರ್ಚ್ಯುಯಲ್ ಕಾರ್ಯಕ್ರಮ ಹಮ್ಮಿಕೊಂಡಿದೆ ಚಿತ್ರತಂಡ. ಈ ಕಾರ್ಯಕ್ರಮದಲ್ಲಿ ಕುವೈತ್, ಒಮನ್, ಬಹ್ರೇನ್, ಕತಾರ್‌ನಲ್ಲಿರುವ ಕನ್ನಡಿಗರು ಭಾಗಿಯಾಗಿ ನವರಸ ನಾಯಕ ಜಗ್ಗೇಶ್ ಜೊತೆ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ಸುರೇಶ್ ಆರ್ಟ್ಸ್, ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್‌ನಡಿ ನಿರ್ಮಾಣವಾದ ಈ ಚಿತ್ರಕ್ಕೆ ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನವಿದೆ. ಕೆ.ಎ ಸುರೇಶ್ ಬಂಡವಾಳ ಹೂಡಿದ್ದಾರೆ. ನವರಸ ನಾಯಕನಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದು, ಡಾಲಿ ಧನಂಜಯ್, ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

  • ಒಂದೇ ವೇದಿಕೆಯಲ್ಲಿ ನವರಸ ನಾಯಕ ಹಾಗೂ ವಿದೇಶಿ ಕನ್ನಡಿಗರು: ಗ್ರ್ಯಾಂಡ್ ಸಕ್ಸಸ್ ಕಂಡ ವರ್ಚ್ಯುಯಲ್ ಕಾರ್ಯಕ್ರಮ..!!

    ಒಂದೇ ವೇದಿಕೆಯಲ್ಲಿ ನವರಸ ನಾಯಕ ಹಾಗೂ ವಿದೇಶಿ ಕನ್ನಡಿಗರು: ಗ್ರ್ಯಾಂಡ್ ಸಕ್ಸಸ್ ಕಂಡ ವರ್ಚ್ಯುಯಲ್ ಕಾರ್ಯಕ್ರಮ..!!

    ವರಸ ನಾಯಕ ಜಗ್ಗೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ‘ತೋತಾಪುರಿ’ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಸಿಕ್ಕಾಗಿದೆ, ಸಾಕಷ್ಟು ಕ್ರೇಜ್ ಕೂಡ ಸೃಷ್ಟಿಯಾಗಿದೆ. ಅದರ ಜೊತೆಗೆ ಬಾಗ್ಲು ತೆಗಿ ಮೇರಿ ಜಾನ್ ಸೂಪರ್ ಡೂಪರ್ ಹಿಟ್ ಆಗಿದೆ. ಈ ಖುಷಿಯನ್ನು ಸೆಲೆಬ್ರೇಟ್ ಮಾಡಲು ಅನಿವಾಸಿ ಕನ್ನಡಿಗರು ನವರಸ ನಾಯಕನ ಜೊತೆ ಒಟ್ಟಾಗಿದ್ದು ಈಗ ನಯಾ ಸಮಾಚಾರ. ಎಸ್, ವಿದೇಶದಲ್ಲಿರುವ ಕನ್ನಡಿಗರು, ಜಗ್ಗೇಶ್ ಅಭಿಮಾನಿಗಳು ಇಂದು ಗ್ರ್ಯಾಂಡ್ ವರ್ಚ್ಯುಯಲ್ ಕಾಮಿಡಿ ಕಾರ್ಯಕ್ರಮ ಹಮ್ಮಿಕೊಂಡು ನವರಸ ನಾಯಕ ಜಗ್ಗೇಶ್ ಜೊತೆ ಮಾತುಕತೆ ನಡೆಸಿದ್ದಾರೆ.

    ‘ಗ್ರ್ಯಾಂಡ್ ವರ್ಚ್ಯುಯಲ್ ಕಾಮಿಡಿ’ ಹೆಸರಿಗೆ ತಕ್ಕಂತೆ ಸಖತ್ ಅದ್ಧೂರಿಯಾಗಿ ನೆರವೇರಿದ್ದು, ಬೃಹತ್ ಸೆಟ್ ನಲ್ಲಿ ಅರಳಿದ ಎಲ್ ಇ ಡಿ ಪರದೆ ಮೇಲೆ ಒಂದು ಕಡೆ ನವರಸ ನಾಯಕ ಜಗ್ಗೇಶ್ ತಮ್ಮ ಸಿನಿ ಜರ್ನಿಯ ಅದ್ಭುತ ಘಟನೆಗಳನ್ನು ಅಭಿಮಾನಿಗಳ ಮುಂದೆ ತೆರೆದಿಡಲು ಸಜ್ಜಾಗಿದ್ರೆ, ಇತ್ತ ವಿವಿಧ ದೇಶಗಳ ಕನ್ನಡ ಮನಸ್ಸುಗಳು ಖ್ಯಾತ ನಟನ ಸಿನಿ ಜರ್ನಿಯ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿದ್ರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಜಗ್ಗೇಶ್ ತೋತಾಪುರಿ ಸಿನಿಮಾ, ತಮ್ಮ ಫ್ಯಾಮಿಲಿ, ಕನ್ನಡ ಭಾಷೆ, ಹೋರಾಟ, ಡಾ.ರಾಜ್‌ಕುಮಾರ್‌ ಅವರೊಂದಿಗಿನ ಒಡನಾಟ, ಪುನೀತ್ ರಾಜ್ ಕುಮಾರ್ ಜೊತೆ ಸಾಗಿದ ದಿನಗಳನ್ನು ಮೆಲುಕು ಹಾಕಿದರು.

    ಡ್ರೀಮ್ ಮೀಡಿಯಾ ಕೆನಡ ಆಯೋಜಿಸಿದ್ದ ಈ ವರ್ಚ್ಯುಯಲ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ನವರಸ ನಾಯಕನ ಜೊತೆ ಮಾತುಕತೆ ನಡೆಸಿ ಸಂತಸಪಟ್ಟಿದ್ದಾರೆ.

    ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ತೋತಾಪುರಿ’ ಸಿನಿಮಾ ಬಿಡುಗಡೆಗೆ ಸಕಲ ತಯಾರಿಯಲ್ಲಿದ್ದು, ಈ ನಡುವೆ ಈ ಚಿತ್ರದ ಬಾಗ್ಲು ತೆಗಿ ಮೇರಿ ಜಾನ್ ಸಾಂಗ್ ಆರು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ಸಖತ್ ವೈರಲ್ ಕೂಡ ಆಗಿದೆ. ಸಾಂಗ್ ಭರ್ಜರಿ ಸಕ್ಸಸ್ ಆಗಿರೋದು, ಈ ಖುಷಿಯನ್ನು ವಿದೇಶಿ ಕನ್ನಡಿಗರು ಸೆಲೆಬ್ರೇಟ್ ಮಾಡಿರೋದು ಇಡೀ ಟೀಂಗೆ ಹೊಸ ಎನರ್ಜಿ ನೀಡಿದೆ. ನಿರ್ಮಾಪಕ ಕೆ.ಎ. ಸುರೇಶ್ ಮೋನಿಫ್ಲಿಕ್ಸ್ ಸ್ಟುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರದಲ್ಲಿ ನಾಯಕ ನಟಿಯಾಗಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಡಾಲಿ ಧನಂಜಯ್, ಸುಮನ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಚಿತ್ರದ ತಾರಾ ಬಳಗವೇ ಇದೆ.

  • ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

    ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

    ಸ್ಯಾಂಡಲ್ ವುಡ್ ಅಂಗಳದಲ್ಲಿ ‘ತೋತಾಪುರಿ’ ಸಿನಿಮಾ ಬಝ್ ಜೋರಾಗಿದೆ. ಸಿನಿಮಾ ಬಿಡುಗಡೆಗಾಗಿ ಕಾಯುವಿಕೆಯೂ ಹೆಚ್ಚಾಗಿದೆ. ಅದರಲ್ಲೂ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಬಿಡುಗಡೆಯಾದ ಮೇಲೆ ‘ತೋತಾಪುರಿ’ ಸಿನಿಮಾ ಮೇಲಿನ ಟಾಕ್ ಸಿಕ್ಕಾಪಟ್ಟೆ ಜೋರಾಗಿದೆ. ಸೋಶಿಯಲ್ ಮೀಡಿಯಾ ಅಂಗಳವಿರಲಿ, ಗಾಂದೀನಗರದ ಗಲ್ಲಿ ಇರಲಿ, ಇನ್ಸ್ಟಾಗ್ರಾಮ್ ರೀಲ್ಸ್ ಇರಲಿ ಎಲ್ಲೆಲ್ಲೂ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನದ್ದೇ ಕಾರುಬಾರು. ಅದೆಷ್ಟರ ಮಟ್ಟಿಗೆ ಅಂದ್ರೆ ಕೊರೊನಾ ಮೂರನೇ ಅಲೆ ಬಂದು ಚಳಿ ಜ್ವರದಿಂದ ಬಳಲಿ ಬೆಂಡಾಗಿದ್ದವರಿಗೆ ಈ ಹಾಡು ಒಂದ್ ರೀತಿ ರಿಲ್ಯಾಕ್ಸೇಷನ್ ಡೋಸ್ ಕೊಟ್ಟಂಗಿದೆ. ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರ ಮೊಗದ ಮೇಲೂ ನಗು ತರಿಸುತ್ತಿರುವ ಈ ಹಾಡಿನ ಗಮ್ಮತ್ತೇ ಹಂಗಿದೆ.

    ಹೀಗೆ ಎಲ್ಲೆಡೆ ವೈರಲ್ ಆಗಿ, ಟ್ರೆಂಡ್ ಆಗಿ, ಕುಣಿಸುತ್ತಿರುವ, ಕಚಗುಳಿ ಇಡ್ತಿರುವ ಹಾಡಿಗೀಗ ಬರೋಬ್ಬರಿ ಆರು ಲಕ್ಷ ವೀಕ್ಷಣೆ ಕಂಡ ಸಂಭ್ರಮ. ಇದು ಈ ಹಾಡಿನ ತಾಕತ್ತು ಹಾಗೂ ಜನರು ಎಷ್ಟರ ಮಟ್ಟಿಗೆ ಇಷ್ಟಪಟ್ಟಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಕೆಲವರಂತೂ ಸಾಂಗ್ ಕಂಡು ಸಿನಿಮಾ ಪಕ್ಕಾ ಹಿಟ್ ಎಂದು ಭವಿಷ್ಯ ಕೂಡ ನುಡಿಯುತ್ತಿದ್ದಾರೆ. ಹೀಗೆ ಸೂಪರ್ ಡೂಪರ್ ಹಿಟ್ ಆಗಿರೋ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಕೇಳೋಕೆ ಮಾತ್ರವಲ್ಲ ನೋಡೋಕೂ ಅಷ್ಟೇ ಚೆಂದ. ಮುರಳಿ ಮಾಸ್ಟರ್ ಕಲರ್ ಫುಲ್ ಕೊರಿಯೋಗ್ರಫಿ, ಕ್ಯಾಚಿ ಲಿರಿಕ್ಸ್, ಅನೂಪ್ ಸೀಳಿನ್ ಸಂಗೀತ, ಗಾಯನ ಎಲ್ಲವೂ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದೆ. ಒಟ್ನಲ್ಲಿ, ಒಂದು ಹಾಡು ಗೆಲ್ಲೋಕೆ, ಜನ್ರ ಮನ್ಸು ಗೆಲ್ಲೋಕೆ ಏನೆಲ್ಲಾ ಬೇಕೋ ಅದೆಲ್ಲ ಅಚ್ಚುಕಟ್ಟಾಗಿ ಬೆರೆತಿರೋ ಈ ಹಾಡು ತೋತಾಪುರಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿರೋದಂತೂ ಸುಳ್ಳಲ್ಲ. ಇದನ್ನೂ ಓದಿ: ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ

    ವಿಜಯಪ್ರಸಾದ್ ಸಿನಿಮಾ ಅಂದ್ರೆ ಕಾಮಿಡಿ ಕಚಗುಳಿಗೆ ಬರವಿಲ್ಲ, ನವರಸ ನಾಯಕ ಜಗ್ಗೇಶ್ ಇದ್ದ ಮೇಲೇ ನಗುವಿಗೆ ಬ್ರೇಕ್ ಇಲ್ಲ. ಈ ಎರಡು ಕಾಂಬಿನೇಶನ್ ನೀರ್ ದೋಸೆಯಲ್ಲಿ ಕೊಟ್ಟ ನಗುವಿನ ಟಾನಿಕ್ ಮತ್ತೊಮ್ಮೆ ಕೊಡಲು ಸಜ್ಜಾಗಿರುವ ಚಿತ್ರವೇ ‘ತೋತಾಪುರಿ’. ಫುಲ್ ಪ್ಯಾಕ್ಡ್ ಎಂಟಟೈನ್ಮೆಂಟ್ ನೀಡಲು ಟೀಂ ತೋತಾಪುರಿ ಸಜ್ಜಾಗಿದ್ದು ಡಾಲಿ ಧನಂಜಯ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್, ದತ್ತಣ್ಣ ಹೀಗೆ ಹಲವು ಸ್ಟಾರ್ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ‘ಅಮ್ಮನ ಮಡಿಲು ಸ್ವರ್ಗ’ – ಅಮ್ಮನ ಜೊತೆ ಫೋಟೋ ಶೇರ್ ಮಾಡಿದ ಸಲ್ಲು

    ಸ್ಯಾಂಡಲ್ ವುಡ್ ಪ್ಯಾಶನೇಟ್ ಪ್ರೊಡ್ಯುಸರ್ ಕೆ.ಎ. ಸುರೇಶ್ ಈ ಚಿತ್ರವನ್ನು ಮೋನಿಫ್ಲಿಕ್ಸ್ ಸುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ ಎರಡು ಸೀಕ್ವೆಲ್ ನಲ್ಲಿ ತೆರೆಗೆ ಬರಲು ರೆಡಿಯಾಗಿರುವ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

  • ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ತ್ತೊಂದು ಸೆನ್ಸೇಷನ್ ಹಿಟ್ ಕೊಡೋದಕ್ಕೆ ಸಕಲ ಸಜ್ಜಾಗಿದ್ದಾರೆ ನವರಸ ನಾಯಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ. ಈ ಕಾಂಬಿನೇಶನ್ ನೀರ್ ದೋಸೆಯಲ್ಲಿ ಮಾಡಿದ್ದ ಮ್ಯಾಜಿಕ್ ಎಲ್ಲರಿಗೂ ಗೊತ್ತೇ ಇದೆ. ಅದಕ್ಕಿಂತ ಡಬಲ್ ಧಮಾಕ ಮನರಂಜನೆ ಉಣಬಡಿಸಲು ‘ತೋತಾಪುರಿ’ ಮೂಲಕ ಪ್ರೇಕ್ಷಕರೆದುರು ಬರ್ತಿರೋದು ಗೊತ್ತಿರುವ ವಿಷ್ಯ. ಆದರೆ ಇದೀಗ ಸಿನಿಮಾ ಕೆಲಸ ಮುಗಿಸಿ ಪ್ರಚಾರ ಕಾರ್ಯ ಶುರು ಹಚ್ಚಿಕೊಂಡಿರುವ ನಿರ್ದೇಶಕ ವಿಜಯ ಪ್ರಸಾದ್   ಸಿನಿಮಾ ತಂಡ ಚಿತ್ರದ ಬಹು ನಿರೀಕ್ಷಿತ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಟೀಸರ್ ಝಲಕ್ ತೋರಿಸಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಚಿತ್ರತಂಡ ಈಗ ಪೂರ್ತಿ ವೀಡಿಯೋ ಹಾಡನ್ನೇ ಬಿಡುಗಡೆ ಮಾಡಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಎನ್ನುವ ಅದಿತಿ ಪ್ರಭುದೇವ ‘ಸ್ವಲ್ಪ ತಡಿ ಮೇರಿ ಜಾನ್’ ಎನ್ನುವ ಜಗ್ಗೇಶ್ ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ. ವಿಜಯ ಪ್ರಸಾದ್ ಸಾಹಿತ್ಯ ಕೃಷಿ, ಅನೂಪ್ ಸೀಳಿನ್ ಸಂಗೀತ, ಮುರಳಿ ಮಾಸ್ಟರ್ ಕೊರಿಯೋಗ್ರಫಿ ಹಾಡಿನ ಹೈಲೈಟ್ ಆದ್ರೆ, ಜಗ್ಗೇಶ್ ಎಕ್ಸ್ ಪ್ರೆಶನ್, ಅದಿತಿ ಪ್ರಭುದೇವ ಕ್ಯೂಟ್‌ನೆಸ್‌ ಬಾಗ್ಲು ತೆಗಿ ಮೇರಿ ಜಾನ್ ಎನರ್ಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಜಿಎಫ್ ಖ್ಯಾತಿಯ ಸಿಂಗರ್ ಅನನ್ಯ ಭಟ್, ವ್ಯಾಸರಾಜ್ ಸೋಸಲೆ, ಸುಪ್ರಿಯ ರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಒಟ್ಟಿನಲ್ಲಿ ಕೇಳೋಕು, ನೋಡೋಕು ಚೆಂದ ಎನಿಸಿಕೊಂಡಿರುವ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಟ್ರೆಂಡಿಂಗ್‌ನಲ್ಲಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ನಲವತ್ತೆಂಟು ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಮತ್ತಷ್ಟು ಮೆಚ್ಚುಗೆಯತ್ತ ಸಾಗುತ್ತಿದೆ.

     

     

    ಜಗ್ಗೇಶ್ ಸಿನಿಮಾ ಅಂದ್ರೆ ಅಲ್ಲಿ ಎಂಟಟೈನ್ಮೆಂಟ್ ಅನ್ನೋದಕ್ಕೆ ಕೊರತೆ ಇರೋದಿಲ್ಲ. ನವರಸ ನಾಯಕನ ಹಾವಭಾವ ನೋಡೋದೆ ಒಂದು ಮನರಂಜನೆ. ಈ ಸಿನಿಮಾದಲ್ಲಿ ನೆಕ್ಸ್ಟ್ ಲೆವೆಲ್ ಮನರಂಜನೆಯ ರಸದೌತಣ ನೀಡಲು ಜಗ್ಗೇಶ್ ರೆಡಿಯಾಗಿದ್ದಾರೆ. ಇವರ ಜೊತೆ ನಿರ್ದೇಶಕ ವಿಜಯಪ್ರಸಾದ್ ಜೊತೆಯಾದ ಮೇಲಂತೂ ಕೇಳೋದೇ ಬೇಡ ಅಷ್ಟು ಕಾಮಿಡಿ ಫ್ಯಾಕ್ಟರ್ ಸಿನಿಮಾದಲ್ಲಿ ಇರುತ್ತೆ. ಅಂತಹದ್ದೇ ಕಾಮಿಡಿ ಎಳೆಯನ್ನಿಟ್ಟುಕೊಂಡು ಸ್ಟ್ರಾಂಗ್ ಮೆಸೇಜ್ ನೀಡೋದಕ್ಕೆ ಈ ಹಿಟ್ ಜೋಡಿ ‘ತೋತಾಪುರಿ’ಯೊಂದಿಗೆ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.

     

    ಮೋನಿಫ್ಲಿಕ್ಸ್ ಸುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡಿಗಡೆ ಮಾಡಲು ರೆಡಿಯಾಗಿದ್ದಾರೆ. ಎರಡು ಸೀಕ್ವೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ಕೈಚಳಕವಿದೆ. ದತ್ತಣ್ಣ, ಸುಮನ್ ರಂಗನಾಥ್, ಡಾಲಿ ಧನಂಜಯ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ.

  • ಅಧಿಕೃತವಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ ‘ತೋತಾಪುರಿ’ ಚಿತ್ರತಂಡ

    ಅಧಿಕೃತವಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ ‘ತೋತಾಪುರಿ’ ಚಿತ್ರತಂಡ

    ‘ತೋತಾಪುರಿ’..ನವರಸ ನಾಯಕ ಜಗ್ಗೇಶ್ ಅಭಿನಯದ ಸ್ಯಾಂಡಲ್‍ವುಡ್ ಅಂಗಳದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ವಿಭಿನ್ನ ಟೈಟಲ್ ಮೂಲಕವೇ ಸಿಕ್ಕಾಪಟ್ಟೇ ಕುತೂಹಲ ಹುಟ್ಟುಹಾಕಿದ್ದ ತೋತಾಪುರಿ ಚಿತ್ರತಂಡ ಆನಂತರ ಚಿತ್ರೀಕರಣದಲ್ಲಿ ನಿರತವಾಗಿತ್ತು. ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ. ಇಲ್ಲಿಯವರೆಗೂ ಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್ ಆಗಲಿ, ಫಸ್ಟ್ ಲುಕ್ ಆಗಲಿ ಅಧಿಕೃತವಾಗಿ ಬಿಡುಗಡೆ ಮಾಡದ ಚಿತ್ರತಂಡ ಇಂದು ಅಧಿಕೃತವಾಗಿ ‘ತೋತಾಪುರಿ’ ಚಿತ್ರದ ಟೈಟಲ್ ಲಾಂಚ್ ಮಾಡಿದೆ.

    ನೀರ್ ದೋಸೆ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಹಿಟ್ ಕಾಂಬೀನೇಷನ್ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ ಪ್ರಸಾದ್ ಜೋಡಿ. ನಾಲ್ಕು ವರ್ಷದ ನಂತರ ಒಂದಾಗಿರುವ ಈ ಜೋಡಿ ‘ತೋತಾಪುರಿ’ ಸಿನಿಮಾ ಮೂಲಕ ಮತ್ತೊಮ್ಮೆ ಹೈವೋಲ್ಟೇಜ್ ಕಾಮಿಡಿಯ ರಸದೌತಣ ಪ್ರೇಕ್ಷಕರಿಗೆ ಉಣಬಡಿಸಲಿದೆ. ನೀರ್ ದೋಸೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ದ ಸಿನಿರಸಿಕರು ಮತ್ತೊಮ್ಮೆ ಇವರಿಬ್ಬರ ಕಾಂಬೀನೇಷನ್‍ನಲ್ಲಿ ಬರ್ತಿರುವ ‘ತೋತಾಪುರಿ’ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

    ‘ತೋತಾಪುರಿ’ ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಲಾಕ್‍ಡೌನ್‍ಗೂ ಮೊದಲೇ ಮೊದಲ ಭಾಗದ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಎರಡನೇ ಭಾಗದ ಚಿತ್ರೀಕರಣವನ್ನು ಈಗಾಗಲೇ ಕಂಪ್ಲೀಟ್ ಮಾಡಿದೆ. ಈ ಮೂಲಕ ಬಿಡುಗಡೆಗೂ ಮುನ್ನವೇ ಎರಡೂ ಸೀಕ್ವೆಲ್‍ಗಳ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಮೊದಲ ಸಿನಿಮಾ ಎಂಬ ದಾಖಲೆಯನ್ನು ‘ತೋತಾಪುರಿ’ ಚಿತ್ರ ತನ್ನದಾಗಿಸಿಕೊಂಡಿದೆ. ‘ತೋತಾಪುರಿ’ ಚಿತ್ರದ ವಿಶೇಷ ಅಂದ್ರೆ ಅದು ಟ್ಯಾಗ್‍ಲೈನ್. ಟ್ಯಾಗ್‍ಲೈನ್ ಚಿತ್ರದ ಹೈಲೈಟ್ ಅಂದ್ರೂ ತಪ್ಪಾಗೋದಿಲ್ಲ. ಅಂದ್ಹಾಗೆ ಮೊದಲ ಭಾಗಕ್ಕೆ ಚಿತ್ರತಂಡ ‘ತೊಟ್ ಕೀಳ್ಬೇಕಷ್ಟೇ’ ಎಂಬ ಟ್ಯಾಗ್‍ಲೈನ್ ನೀಡಿದೆ.

    ಚಿತ್ರದಲ್ಲಿ ರೈತನ ಪಾತ್ರದಲ್ಲಿ ಜಗ್ಗೇಶ್ ಅಭಿನಯಿಸಿದ್ದು ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರಂತೆ. ನಾಯಕಿ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದು, ಮುಸ್ಲಿಂ ಯುವತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ಖ್ಯಾತ ಕಲಾವಿದರ ದಂಡು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳೀನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ‘ತೋತಾಪುರಿ’ ಚಿತ್ರಕ್ಕಿದೆ.