Tag: thiruvananthapura

  • 7ನೇ ತರಗತಿ ವಿದ್ಯಾರ್ಥಿಯಿಂದ ಕೇರಳ ಸಿಎಂಗೆ  ಬೆದರಿಕೆ ಕರೆ

    7ನೇ ತರಗತಿ ವಿದ್ಯಾರ್ಥಿಯಿಂದ ಕೇರಳ ಸಿಎಂಗೆ ಬೆದರಿಕೆ ಕರೆ

    ತಿರುವನಂತಪುರ: ಅಪ್ರಾಪ್ತ ಬಾಲಕನೋರ್ವ (Minor) ಕೇರಳ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ (Pinarayi Vijayan) ಬೆದರಿಕೆ (Threat) ಹಾಕಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

    ಬುಧವಾರ ರಾತ್ರಿ ಕೇರಳ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ಗುರುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸರ್ಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರ ದುರ್ಮರಣ, 7 ಮಂದಿ ನಾಪತ್ತೆ

    ಈ ಕುರಿತು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಕರೆ ಮಾಡಿದಾತ 12 ವರ್ಷದ ಬಾಲಕ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಬಾಲಕನ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಬಾಲಕನ ಪೋಷಕರು, 7 ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗ ಮೊಬೈಲ್‌ನಲ್ಲಿ ಆಟವಾಡುವ ವೇಳೆ ಅಚಾತುರ್ಯವಾಗಿ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಪೋಷಕರ ಹೇಳಿಕೆ ಪೊಲೀಸರಿಗೆ ಸಮಂಜಸವೆನಿಸಲಿಲ್ಲ. ಆದ್ದರಿಂದ ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪಿಣರಾಯಿ ವಿಜಯನ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಬಿ) (ಪೊಲೀಸ್, ಅಗ್ನಿಶಾಮಕ ದಳ ಅಥವಾ ಇತರ ಯಾವುದೇ ಅಗತ್ಯ ಸೇವೆಯನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡುವುದು ಅಥವಾ ಸುಳ್ಳು ಎಚ್ಚರಿಕೆಗಳನ್ನು ನೀಡುವುದರೊಂದಿಗೆ ವ್ಯವಹರಿಸುತ್ತದೆ) ಮತ್ತು 120 (ಒ) (ಯಾವುದೇ ಸಂವಹನ ವಿಧಾನದ ಮೂಲಕ ಯಾವುದೇ ವ್ಯಕ್ತಿಗೆ ತೊಂದರೆ ಉಂಟುಮಾಡುವ ಬಗ್ಗೆ ವ್ಯವಹರಿಸುತ್ತದೆ) ಅಡಿಯಲ್ಲಿ ಬೆದರಿಕೆ ಹಾಕಲು ಬಳಸಿದ ಮೊಬೈಲ್ ಸಂಖ್ಯೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ತಿರುವನಂತಪುರ: ಕೇರಳದ ಶಿಕ್ಷಣ ಸಚಿವರಾದ ರವೀಂದ್ರನಾಥ್‍ರವರು ಪರಿಹಾರ ಸಾಮಗ್ರಿಗಳನ್ನು ಸ್ವತಃ ಹೆಗಲ ಮೇಲೆ ಹೊತ್ತುಕೊಂಡು ನಿರಾಶ್ರಿತ ಕೇಂದ್ರಗಳಿಗೆ ಸಾಗಿಸಿದ್ದಾರೆ.

    ತುರ್ತು ಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿ ಸಂದರ್ಭಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರು ಯಾವ ರೀತಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯ. ಇದೇ ರೀತಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭಗಳಲ್ಲಿ ಆಳುವ ಮಂದಿ ಹೇಗೆ ನಡ್ಕೋತಾರೆ ಅನ್ನೋದಕ್ಕೆ ಎರಡು ಉದಾಹರಣೆಗಳು ನಮ್ಮ ಮುಂದಿವೆ.

    ಕೇರಳದ ತ್ರಿಶೂರ್ ಜಿಲ್ಲೆಯ ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ಪರಿಹಾರ ಸಾಮಗ್ರಿಗಳು ಸಿಗದೇ ಜನ ನರಕ ಯಾತನೇ ಅನುಭವಿಸುತ್ತಿದ್ದರು. ಇದರ ಮಾಹಿತಿ ಪಡೆದ ರವೀಂದ್ರನಾಥ್‍ರವರು ಖುದ್ದು ಸ್ಥಳಕ್ಕೆ ಪರಿಹಾರ ಸಾಮಗ್ರಿಗಳ ಸಮೇತ ಭೇಟಿ ನೀಡಿದ್ದರು. ಈ ವೇಳೆ ಆಹಾರ ಸಾಮಾಗ್ರಿಗಳನ್ನು ತಮ್ಮ ಹೆಗಲ ಮೇಲೆಯೇ ಇಟ್ಟುಕೊಂಡು ನಿರಾಶ್ರಿತ ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಜನರ ಕಷ್ಟಕ್ಕೆ ಸಚಿವರು ಹೆಗಲು ಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಚಿವರನ್ನು ಜನ ಬಾಹುಬಲಿಯಂದೇ ಕರೆಯುತ್ತಿದ್ದಾರೆ.

    ಆದರೆ ಇದಕ್ಕೆ ಭಿನ್ನವಾದ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದ್ದು ದುರಾದೃಷ್ಟವೇ ಸರಿ, ಕಳೆದ ವಾರ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣನವರು ಹಾಸನ ಜಿಲ್ಲೆಯ ರಾಮನಾಥಪುರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ನಿರಾಶ್ರಿತರಿಗೆ ಪ್ರಾಣಿಗಳಿಗೆ ಎಸೆಯುವ ರೀತಿ ಬಿಸ್ಕೆಟ್ ಪ್ಯಾಕ್‍ಗಳನ್ನು ಎಸೆಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಎಂತಹುದೇ ಅನಿವಾರ್ಯ ಪರಿಸ್ಥಿತಿಯಲ್ಲಿದ್ದರು, ಆ ರೀತಿ ನಡೆದುಕೊಳ್ಳಬಾರದಿತ್ತೆಂದು ಸಾರ್ವಜನಿಕರು ಸಚಿವರ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳದಲ್ಲಿ ಮುಂದುವರಿದ ಮಳೆಯ ರೌದ್ರನರ್ತನ: ಮೃತರ ಸಂಖ್ಯೆ 97ಕ್ಕೆ ಏರಿಕೆ

    ಕೇರಳದಲ್ಲಿ ಮುಂದುವರಿದ ಮಳೆಯ ರೌದ್ರನರ್ತನ: ಮೃತರ ಸಂಖ್ಯೆ 97ಕ್ಕೆ ಏರಿಕೆ

    ತಿರುವನಂತಪುರ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಳೆಯಿಂದಾಗಿ ರಾಜ್ಯಾದ್ಯಂತ ಮೃತಪಟ್ಟವರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

    ಗುರುವಾರ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ 30 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೂ ಸುಮಾರು 97 ಮಂದಿ ಮಹಾಮಳೆಗೆ ಆಹುತಿಯಾಗಿದ್ದಾರೆ. ವರದಿಗಳ ಪ್ರಕಾರ ಅಧಿಕೃತವಾಗಿ ಸಾವನ್ನಪ್ಪಿರುವವರ ಸಂಖ್ಯೆ 97 ಆಗಿದೆ. ಆದರೆ ಅನಧಿಕೃತ ಮಾಹಿತಿಗಳ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ರಾಜ್ಯದಲ್ಲಿ ಕಂಡು ಕೇಳರಿಯದ ಮಳೆ ಸುರಿಯುತ್ತಿದ್ದು, ರಾಜ್ಯದ ಬಹುತೇಕ ನದಿಗಳು ತುಂಬಿದ ಪರಿಣಾಮ 26 ಜಲಾಶಯಗಳ ಪೈಕಿ 25 ಜಲಾಶಯಗಳಿಂದ ಭಾರೀ ಪ್ರಮಾಣ ನೀರನ್ನು ಹೊರಕ್ಕೆ ಬಿಡಲಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ಕೊಚ್ಚಿ ಅಂತರಾಷ್ಟ್ರೀಯ ನಿಲ್ದಾಣವನ್ನು ಆಗಸ್ಟ್ 26ರವರೆಗೆ ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೇ ದಕ್ಷಿಣ ರೈಲ್ವೇ ಹಾಗೂ ಕೊಚ್ಚಿ ಮೆಟ್ರೋ ಸಂಚಾರವು ಸಹ ತಾತ್ಕಾಲಿಕವಾಗಿ ಬಂದ್ ಆಗಿದೆ. ಈ ಮಧ್ಯೆ ರಾಜ್ಯದಲ್ಲಿ ಓಣಂ ಹಾಗೂ ಪ್ರವಾಹದ ಕಾರಣದಿಂದ ಆಗಸ್ಟ್ 26ರವರೆಗೆ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.

    ಗುರುವಾರದಿಂದಲೂ ಸರಾಸರಿ ಮಳೆಗಿಂತ ಸುಮಾರು 10 ಪಟ್ಟು ಮಳೆಯ ಪ್ರಮಾಣ ಹೆಚ್ಚಾಗಿದ್ದು, ಶುಕ್ರವಾರವೂ ಸಹ ಭಾರೀ ಮಳೆ ಸುರಿಯುತ್ತದೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಯ 3ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ!

    ಶಾಲೆಯ 3ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ!

    ತಿರುವನಂತಪುರ: ಕೇರಳದ ಖಾಸಗಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    15 ವರ್ಷದ ಗೌರಿ ನೇಹಾ ಕೇರಳದ ಕೊಲ್ಲಂನ ಟ್ರನಿಟಿ ಲೈಸಿಯಂ ಶಾಲೆಯಲ್ಲಿ ಓದುತ್ತಿದ್ದು, ಶುಕ್ರವಾರ ಮಧ್ಯಾಹ್ನ ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಇಂದು ಮೃತಪಟ್ಟಿದ್ದಾಳೆ ಅಂತ ವರದಿಯಾಗಿದೆ.

    ಏನಿದು ಘಟನೆ?: 13 ವರ್ಷದ ಸಹೋದರಿ ಕ್ಲಾಸಿನಲ್ಲಿ ಮಾತನಾಡಿದ್ದಕ್ಕೆ ಶಿಕ್ಷಕರೊಬ್ಬರು ಆಕೆಯನ್ನು ಹುಡುಗರ ಮಧ್ಯೆ ಕುಳಿತು ಪಾಠ ಕೇಳುವ ಶಿಕ್ಷೆ ನೀಡಿದ್ದರು. ಈ ರೀತಿ ಶಿಕ್ಷೆ ಕೊಟ್ಟ ವಿಚಾರವನ್ನು ಬಾಲಕಿ ತಾಯಿಗೆ ಹೇಳಿದ್ದಾಳೆ. ತಾಯಿ ಶಾಲೆಗೆ ಬಂದು ಈ ಕುರಿತು ಶಾಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಮಗಳಿಗೆ ಇನ್ನೊಂದು ಬಾರಿ ಈ ರೀತಿ ಶಿಕ್ಷೆ ನೀಡಿದರೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಈ ಘಟನೆಯ ನಂತರ ಮತ್ತೊಮ್ಮೆ ಈ ರೀತಿಯ ಪ್ರಕರಣ ನಡೆದು ಆಕೆ ಈ ವಿಚಾರವನ್ನು ಸಹೋದರಿಗೆ ತಿಳಿಸಿದ್ದಾಳೆ. ಇದಾದ ಬಳಿಕ ಬ್ರೇಕ್ ನಡುವೆ ಅಕ್ಕ ಈಗ ತಂಗಿ ಎಲ್ಲಿ ಕುಳಿತಿದ್ದಾಳೆ ಎನ್ನುವುದನ್ನು ಪರಿಶೀಲಿಸಲು ತರಗತಿಗೆ ಬರುತ್ತಿದ್ದಳು. ಅಕ್ಕ ತಂಗಿಯನ್ನು ನೋಡಲು ತರಗತಿಗೆ ಬರುವುದನ್ನು ನೋಡಿ ಉಳಿದ ವಿದ್ಯಾರ್ಥಿಗಳು ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿನಿ ಶಾಲೆಯ ಮೂರನೇಯ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

    ಸದ್ಯ ಇತರ ವಿದ್ಯಾರ್ಥಿಗಳು ಮೃತ ವಿದ್ಯಾರ್ಥಿನಿಯ ಶವವಿಟ್ಟು, ಬಾಲಕಿ ಸಾವಿಗೆ ಶಾಲಾ ಆಡಳಿತ ಮಂಡಳಿಯೇ ಕಾರಣವೆಂದು ಪ್ರತಿಭಟನೆ ನಡೆಸಿದರು. ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಪೊಲೀಸರು ಬಾಲಕಿಯ ಹೇಳಿಕೆಯನ್ನು ಪಡೆಯುವಲ್ಲಿ ವಿಫಲರಾಗಿದ್ದು, ತಂದೆಯ ಹೇಳಿಕೆಯನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  • ಪಾರ್ಕಲ್ಲಿ ಕುಳಿತಿದ್ದಕ್ಕೆ ಬೈದ ಮಹಿಳಾ ಪೇದೆಗಳಿಗೆ ಲವರ್ಸ್ ಬೆವರಿಳಿಸಿದ್ದು ಹೀಗೆ

    ಪಾರ್ಕಲ್ಲಿ ಕುಳಿತಿದ್ದಕ್ಕೆ ಬೈದ ಮಹಿಳಾ ಪೇದೆಗಳಿಗೆ ಲವರ್ಸ್ ಬೆವರಿಳಿಸಿದ್ದು ಹೀಗೆ

    ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರಂನ ನೇಪಿಯರ್ ಮ್ಯೂಸಿಯಂ ಪಾರ್ಕ್‍ನಲ್ಲಿ ಕುಳಿತಿದ್ದ ಪ್ರೇಮಿಗಳಿಗೆ ಅವಾಜ್ ಹಾಕಿದ್ದ ಮಹಿಳಾ ಪೇದೆಗಳಿಗೆ ಪ್ರೇಮಿಗಳು ಬೆವರಿಳಿಸಿದ ಘಟನೆ ನಡೆದಿದೆ.

    ಪಾರ್ಕ್‍ನಲ್ಲಿ ತಮ್ಮ ಪಾಡಿಗೆ ತಾವು ಕುಳಿತಿದ್ದ ಪ್ರೇಮಿಗಳ ಬಳಿ ಬಂದ ಮಹಿಳಾ ಪೇದೆಗಳು ನಿಮಗೆ ಮದ್ವೆಯಾಗಿದ್ಯಾ.. ಏನ್ ಮಾಡ್ತಿದ್ದೀರಿ… ಅಂತೆಲ್ಲಾ ಯುವತಿಯ ಬಳಿ ಅಸಂಬಂದ್ಧ ಪ್ರಶ್ನೆಗಳನ್ನು ಕೇಳಿ ನಡೀರಿ ಸ್ಟೇಷನ್‍ಗೆ ಎಂದು ದರ್ಪ ತೋರಿಸಿದ್ದಾರೆ. ಈ ವೇಳೆ ಸಿಟ್ಟುಗೊಂಡ ಪ್ರೇಮಿಗಳು ಮಹಿಳಾ ಪೇದೆ ವಿರುದ್ಧ ಬಿದ್ದು, ಏನ್ ನಾವ್ ಕಿಸ್ ಕೊಟ್ಕೊತಿದ್ದೀವಾ.. ಇನ್ನೊಂದು ಮಾಡ್ತಿದ್ದೀವಾ.. ಸುಮ್ನೆ ಜೊತೆಲಿ ಕುಳಿತಿದ್ವಿ.. ಇಲ್ಲಿ ನಮ್ಮ ತಪ್ಪೇನು ತೋರಿಸಿ ಎಂದಾಗ ಪೇದೆಗಳು ಗಪ್‍ಚುಪ್ ಆಗಿದ್ರು.

    ಇದನ್ನೆಲ್ಲ ಫೇಸ್‍ಬುಕ್ ಲೈವ್‍ನಲ್ಲಿ ತೋರಿಸಿದ್ದಾರೆ ಯುವ ಪ್ರೇಮಿಗಳು. ಆದ್ರೂ ಪಟ್ಟುಬಿಡದ ಆ ಮಹಿಳಾ ಪೇದೆ ಇಬ್ಬರು ಠಾಣೆಗೆ ಕರೆದೊಯ್ದು 200 ರೂಪಾಯಿ ದಂಡ ವಿಧಿಸಿದ್ದಾರೆ. ಮಾತ್ರವಲ್ಲದೇ ಐಪಿಸಿ ಸೆಕ್ಷನ್ 290 ಅಡಿಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಆದ್ರೆ ತಾವಿಬ್ಬರು ಶೀಘ್ರದಲ್ಲೇ ಮದುವೆಯಾಗೋದಾಗಿ ಯುವ ಪ್ರೇಮಿಗಳು ಹೇಳ್ಕೊಂಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಕೇರಳ ಪೊಲೀಸ್ ವರಿಷ್ಠಾಧಿಕಾರಿ ಲೋಕನಾಥ್ ಬೆಹರಾ ತನಿಖೆಗೆ ಆದೇಶಿಸಿದ್ದಾರೆ.

     

    https://www.facebook.com/100014370212588/videos/182350708920602/