ತಿರುವನಂತಪುರ: ಕೇರಳದ (Kerala) ಪಾಲಕ್ಕಾಡ್ (Palakkad) ಜಿಲ್ಲೆಯ ಶೋರನೂರ್‌ನಲ್ಲಿ (Shoranur) ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಶೊರನೂರ್ ಸೇತುವೆ ಬಳಿ ರೈಲ್ವೆ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದ ಕಾರ್ಮಿಕರಿಗೆ ಮಧ್ಯಾಹ್ನ 3:05ರ ಸುಮಾರಿಗೆ ನವದೆಹಲಿ-ತಿರುವನಂತಪುರ ರೈಲು ಡಿಕ್ಕಿ ಹೊಡೆದಿದೆ. ಕಾರ್ಮಿಕರು ರೈಲು (Train) ಬರುವುದನ್ನು ಗಮನಿಸದೇ ಇದ್ದುದರಿಂದ ಈ ಘಟನೆ ಸಂಭವಿಸಿರಬಹುದು. ಇದರ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ
ತಿರುವನಂತಪುರಂ: ಮಲಯಾಳಂನ ಖ್ಯಾತ ನಟ ಕೊಟ್ಟಾಯಂ ಪ್ರದೀಪ್ ಅಂತ ಕರೆಯಲ್ಪಡುವ ಪ್ರದೀಪ್ ಕೆ. ಆರ್ (61) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಪ್ರದೀಪ್ ಅವರು ಕೊಟ್ಟಾಯಂ ಎಂಬ ತಮ್ಮ ಸ್ಥಳೀಯ ಸ್ಥಳದ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದರು. ಜೂನಿಯರ್ ಕಲಾವಿದರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರು ರಂಗಭೂಮಿ ಮತ್ತು ದೂರದರ್ಶನ ಉದ್ಯಮದ ಭಾಗವಾಗಿದ್ದರು.
ಪ್ರದೀಪ್ ಅವರಿಗೆ ಇಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪ್ರದೀಪ್ ತಮ್ಮ ಶಾಲಾ ದಿನಗಳಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರು ಶಾಲೆ ಮತ್ತು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. 10 ನೇ ತರಗತಿಯಲ್ಲಿದ್ದಾಗ, ಅವರು ಎನ್‍ಎನ್ ಪಿಳ್ಳೈ ಅವರ ನಾಟಕದಲ್ಲಿ ಬಾಲ ಕಲಾವಿದರಾಗಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್
ಪ್ರದೀಪ್ ಅವರು ನಟನೆಯಲ್ಲದೇ ಎಲ್‍ಐಸಿ ಜೀವ ವಿಮಾ ನಿಗಮದ ಎಜೆಂಟ್ ಆಗಿ ಸಹ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ನಂತರವೂ ತಮ್ಮ ನಟನಾ ಪ್ರವೃತ್ತಿಯನ್ನು ಮುಂದುವರಿಸಿದ್ದರು. 90ರ ದಶಕದ ಆರಂಭದಲ್ಲಿ, ಟಿವಿ ಧಾರಾವಾಹಿಯೊಂದರಲ್ಲಿ ಸ್ಕ್ರೀನ್ ಟೆಸ್ಟ್‍ಗಾಗಿ ಅವರು ತಮ್ಮ ಮಗನ ಜೊತೆ ಹೋಗಿದ್ದರು. ಈ ವೇಳೆ ಧಾರಾವಾಹಿಯ ನಿರ್ಮಾಪಕರು ಅವರಿಗೆ ಅದೇ ಧಾರಾವಾಹಿಯಲ್ಲಿ ಪಾತ್ರವನ್ನು ನೀಡಿದ್ದರು. ಇದನ್ನೂ ಓದಿ: ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ
1999 ರಲ್ಲಿ ಅವರು ಹಿರಿಯ ಐ.ವಿ.ಶಶಿ ನಿರ್ದೇಶನದ ಚಲನಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದರು. ನಂತರ ಅವರು 70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರದೀಪ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ನಟಿಸಿರುವ ಸಣ್ಣ ಪಾತ್ರಗಳಿಂದಲೇ ಚಿತ್ರರಂಗದಲ್ಲಿ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಂಡಿದ್ದರು.
ಐವಿ ಶಶಿಯವರ ಈ ನಾಡು ಇನ್ನಲೇ ವರೇ (2001) ಅವರ ಮೊದಲ ಚಿತ್ರವಾಗಿದೆ. ಅವರು ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ 70ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಅವರ ಕೆಲವು ಪಾತ್ರಗಳು ಮತ್ತು ಸಂಭಾಷಣೆಗಳು ಇಂದಿಗೂ ಜನಪ್ರಿಯವಾಗಿವೆ.
ಗೌತಮ್ ಮೆನನ್ ಅವರ ವಿನೈತಾಂಡಿ ವರುವಾಯಾ ಮತ್ತು ಅದರ ಹಿಂದಿ, ತಮಿಳು ಮತ್ತು ತೆಲುಗು ರಿಮೇಕ್‍ಗಳ ಮೂಲಕ ಅವರು ಬೆಳಕಿಗೆ ಬಂದಿದ್ದರು. 2 ನೇ ಏಷ್ಯಾನೆಟ್ ಕಾಮಿಡಿ ಅವಾಡ್ರ್ಸ್ 2016 ರಲ್ಲಿ ವಿವಿಧ ಪಾತ್ರಗಳಿಗಾಗಿ ಪ್ರದೀಪ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂಬರುವ ಮೋಹನ್ ಲಾಲ್ ಅಭಿನಯದ ಚಿತ್ರ ‘ಆರಟ್ಟು’ ಅವರ ಕೊನೆಯ ಸಿನಿಮಾವಾಗಿದೆ.
ಗುರುವಾರದಂದು ಪ್ರದೀಪ್ ಅವರ ಅಂತ್ಯಕ್ರಿಯೆ ನಡೆಯಲಿದೆ, ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ತಿರುವನಂತಪುರಂ: ಸೇನಾ ಹೆಲಿಕಾಪ್ಟರ್ ಪತನಗೊಂಡು ಹುತಾತ್ಮರಾಗಿದ್ದ ಜೂನಿಯರ್ ವಾರಂಟ್ ಅಧಿಕಾರಿ ಪ್ರದೀಪ್ ಅವರ ಪತ್ನಿ ಕೇರಳದಲ್ಲಿ ಸರ್ಕಾರಿ ಸೇವೆಗೆ ಸೇರಿದ್ದಾರೆ.
ಕಳೆದ ಡಿಸೆಂಬರ್ 8 ರಂದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ ರಕ್ಷಣಾ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಜೂನಿಯರ್ ವಾರಂಟ್ ಅಧಿಕಾರಿ ಎ. ಪ್ರದೀಪ್ ಮೃತಪಟ್ಟಿದ್ದರು. ಈಗ ಪ್ರದೀಪ್ ಅವರ ಪತ್ನಿ ಶ್ರೀಲಕ್ಷ್ಮಿ ಅವರು ಸೋಮವಾರ ತ್ರಿಶ್ಯೂರ್‌ನಲ್ಲಿರುವ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸಲು ಸೇರಿದ್ದಾರೆ ಎಂದು ಕಂದಾಯ ಸಚಿವ ಕೆ ರಾಜನ್ ತಿಳಿಸಿದರು.
ದುರಂತದ ಬಳಿಕ ಡಿಸೆಂಬರ್ 15 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರೀಲಕ್ಷ್ಮಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಲು ನಿರ್ಧರಿಸಲಾಗಿತ್ತು.
ತಾಲೂಕು ಕಚೇರಿಗೆ ಆಗಮಿಸಿದ ರಾಜನ್ ಅವರು, ಗುಮಾಸ್ತ ಹುದ್ದೆಗೆ ತನ್ನ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ಶ್ರೀಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಮುಖಕ್ಕೆ ಧ್ವಜವನ್ನು ಎಸೆದ ವ್ಯಕ್ತಿ
ಹುದ್ದೆಗೆ ಬೇಕಾದ ಕೆಲ ಕಾಗದಗಳಿಗೆ ಸಹಿ ಮಾಡಿದ ನಂತರ ಲಕ್ಷ್ಮಿಯವರು ಕಣ್ಣೀರು ಹಾಕುತ್ತಾ ಮಾತನಾಡಿದ್ದು, ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ ಎಂದರು.
ಶ್ರೀಲಕ್ಷ್ಮಿ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯ ಸರ್ಕಾರವು ಅವರ ಕುಟುಂಬದ ಭರವಸೆ ಉಳಿಸಿಕೊಂಡಿದ್ದು, ಅವರಿಗೆ ಸರ್ಕಾರಿ ಕೆಲಸ ನೀಡಿದೆ ಎಂದು ರಾಜನ್ ಹೇಳಿದರು.
ಭಕ್ತಿಗೀತೆಗಳನ್ನು ಒಳಗೊಂಡಂತೆ ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ. ಅವರು ಈ ವರ್ಷದ ‘ಹರಿವರಾಸನಂ ಪ್ರಶಸ್ತಿ’ ಪಡೆದಿದ್ದರು. ರಂಗನಾಥ್ ಅವರು ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯವನ್ನು ಕಲಿತಿದ್ದಾರೆ. ಅವರ ಪತ್ನಿ ಬಿ ರಾಜಶ್ರೀ ಅವರು ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಶಿಕ್ಷಕಿಯಾಗಿದ್ದಾರೆ.
ರಂಗನಾಥ್ ಅವರು 1973ರಲ್ಲಿ ಬಿಡುಗಡೆಯಾದ ‘ಜೀಸಸ್’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಈ ಚಿತ್ರವನ್ನು ಪಿ.ಎ ಥಾಮಸ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ‘ಗಾಗುಲತಾ ಮಲಕಲೆ’ ಹಾಡನ್ನು ಅವರು ರಚಿಸಿದ್ದಾರೆ. ರಂಗನಾಥ್ ಅವರು 25ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ಬರೆದ ಹೆಚ್ಚಿನ ಹಾಡುಗಳನ್ನು ಪ್ರಸಿದ್ಧ ಗಾಯಕ ಕೆ.ಜೆ ಯೇಸುದಾಸ್ ಹಾಡಿದ್ದಾರೆ. ಇದನ್ನೂ ಓದಿ: ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ
ಅವರು ಪ್ರಿನ್ಸಿಪಲ್ ಒಲಿವಿಲ್, ಮಾಮಲಕಲ್ಕಪ್ಪುರತ್, ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್, ಆರಂತೆ ಮುಳ್ಳ ಕೊಚ್ಚು ಮುಲ್ಲಾ ಮತ್ತು ಇನ್ನೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 1984ರಲ್ಲಿ ತೆರೆಕಂಡ ಆರಾಂಟೆ ಮುಲ್ಲಾ ಕೊಚ್ಚು ಮುಲ್ಲಾ ಚಿತ್ರಕ್ಕೆ ಅವರು ರಚಿಸಿದ ಕತ್ತಿಲ್ ಕೊಡುಂ ಕಟ್ಟಿಲ್ ಹಾಡು ಜನಪ್ರಿಯತೆ ಗಳಿಸಿ ಇಂದಿಗೂ ಮಲೆಯಾಳಂನ ಕ್ಲಾಸಿಕ್ ಹಾಡುಗಳಲ್ಲಿ ಒಂದಾಗಿದೆ.
ಸಂಗೀತ ಸಂಯೋಜನೆಯ ಹೊರತಾಗಿ, ರಂಗನಾಥ್ ಅವರು 42 ಕ್ಕೂ ಹೆಚ್ಚು ರಂಗ ನಾಟಕಗಳನ್ನು ಬರೆದಿದ್ದಾರೆ. 25 ನೃತ್ಯ ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ಇತ್ತೀಚೆಗೆ ಬೈಬಲ್ ಆಧರಿಸಿ ಕರ್ನಾಟಕ ಸಂಗೀತದಲ್ಲಿ 10 ಹಾಡು ಬರೆದಿದ್ದರು.
ತಿರುವನಂತಪುರಂ: ಹಸುಗೂಸನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಉನ್ನಿಕೃಷ್ಣನ್ ಎಂದು ಗುರುತಿಸಲಾಗಿದೆ. ಈತ ತನ್ನ 40 ದಿನದ ಮಗುವನ್ನು ಪ್ರಿಪ್ಲಾನ್ ಮಾಡಿ ಕೆರೆಗೆ ಎಸೆಯುವ ಮೂಲಕ ಕೊಲೆ ಮಾಡಿದ್ದಾರೆ.
ನೆಡುಮಂಗಡು ಮೂಲದ ಚಿಂಜು ಮತ್ತು ಪಚಲೂರ್ ಮೂಲದ ಉನ್ನಿಕೃಷ್ಣನ್ ದಂಪತಿಗೆ ಮಗು ಇದಾಗಿದೆ. ಉನ್ನಿಕೃಷ್ಣನ್ ಚಿಂಜು ಮೊದಲ ಪತ್ನಿಯಾದರೆ, ಚಿಂಜುಗೆ ಇದು ಎರಡನೇಯ ಮದುವೆಯಾಗಿತ್ತು. ಸತಿ-ಪತಿ ಮಧ್ಯೆ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಉನ್ನಿಕೃಷ್ಣನ್ ಮಗುವನ್ನು ಕೊಲೆ ಮಾಡಲು ಪೂರ್ವ ಯೋಜನೆ ಹಾಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಪತಿ ಹಾಗೂ ಮಗುವಿನ ಜೊತೆ ಚಿಂಜು ತನ್ನ ಪೋಷಕರು ಮನೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಉನ್ನಿಕೃಷ್ಣನ್ ಮಗುವನ್ನು ಎತ್ತಿಕೊಂಡು ಹೋಗಿ ಕೆರೆಗೆ ಎಸೆದಿದ್ದಾನೆ.
ಇತ್ತ ಎಲ್ಲಿ ಹುಡುಕಿದರೂ ಮಗು ಸಿಗದಾಗ ಗಾಬರಿಗೊಂಡ ಚಿಂಜು ಪೊಲೀಸರಿಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಗುವಿನ ಪತ್ತೆಗೆ ಬಲೆ ಬೀಸಿದ್ದರು. ಅಲ್ಲದೆ ಮಗುವಿನ ತಂದೆ ಉನ್ನಿಕೃಷ್ಣನ್ ನನ್ನೇ ವಿಚಾರಣೆಗೆ ಒಳಪಡಿಸಿದರು.
ಈ ವೇಳೆ ಪೊಲೀಸ್ ಅಧಿಕಾರಿಗಳ ಬಳಿ ಸುಳ್ಳು ಹೇಳಿದ್ದಾನೆ. ಆದರೆ ಈತ ಕೆರೆ ಬಳಿ ಹೋಗಿದ್ದನ್ನು ಸ್ಥಳೀಯರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಉನ್ನಿಕೃಷ್ಣನ್ ಸಿಕ್ಕಿಬಿದ್ದಿದ್ದಾನೆ. ಮರುದಿನ ನಸುಕಿನ ಜಾವ 2 ಗಂಟೆ ಸುಮಾರಿಗೆ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಬಳಿಕ ಶವವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ತಿರುವನಂತಪುರಂ: ಕಳ್ಳತನದ ಆರೋಪ ಮಾಡಿ ವ್ಯಕ್ತಿಯೋರ್ವನನ್ನು ಏಳು ಮಂದಿಯ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ, ಆತನ ಮರ್ಮಾಂಗವನ್ನೇ ಸುಟ್ಟು ಕೊಲೆಗೈದ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.
ತಿರುವಲ್ಲಂ ಜಿಲ್ಲೆಯ ನಿವಾಸಿ ಅಜೀಶ್ ಮೃತ ದುರ್ದೈವಿ. ತಂಪನೂರು ಪ್ರದೇಶದ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೋರ್ವ ಮಲಗಿದ್ದ ವೇಳೆ ಆತನ ಪರ್ಸ್ ಕಳವು ಮಾಡಲಾಗಿತ್ತು. ಆದರೆ ಆ ಪರ್ಸನ್ನು ಅಜೀಶ್ ಕದ್ದಿದ್ದಾನೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಗುಂಪೊಂದು ಆತನನ್ನು ಥಳಿಸಿ, ಆತನ ಮರ್ಮಾಂಗವನ್ನು ಸುಟ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಪರಿಣಾಮ ಅಜೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಲ್ಲದೆ ಜನರು ಅಜೀಶ್‍ನನ್ನು ಹೊಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಸಂತ್ರಸ್ತನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಜನರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಈ ವಿಡಿಯೋ ಪೊಲೀಸರ ಕೈತಲುಪಿದ್ದು, ಇದರ ಮೂಲಕವೇ ಸಂತ್ರಸ್ತನನ್ನು ಕೊಂದ ಐವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಬಂಧಿಸಿದ್ದಾರೆ. ಅಲ್ಲದೆ ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ನಾಸೀರ್, ದಿನೇಶ್ ವರ್ಗಿಸ್, ಅರ್ಜುನ್, ಸಜನ್ ಮತ್ತು ರಾಬಿನ್‍ಸನ್ ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಮೃತ ವ್ಯಕ್ತಿಯ ಮರ್ಮಾಂಗದ ಶೇ.40ರಷ್ಟು ಭಾಗ ಸುಟ್ಟು ಹೋಗಿದೆ. ಅದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂ: ಚಾಲಕನೊಬ್ಬ ಕಾಲೇಜು ಯುವತಿಯರಿಗೆ ಚಲಿಸುತ್ತಿರುವಾಗಲೇ ಬಸ್ ಗೇರ್ ಚೇಂಜ್ ಮಾಡಲು ಹೇಳಿಕೊಟ್ಟು ಫಜೀತಿಗೆ ಸಿಲುಕಿದ ಘಟನೆ ಕೇರಳದಲ್ಲಿ ನಡೆದಿದೆ.
ಚಾಲಕ ಯುವತಿಯರಿಗೆ ಗೇರ್ ಚೇಂಜ್ ಮಾಡುವುದನ್ನು ಹೇಳಿಕೊಡುತ್ತಿರುವಾಗ ಬಸ್ಸಿನಲ್ಲಿದ್ದ ಇತರರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋ ವೈರಲಾದ ಬೆನ್ನಲ್ಲೇ ಬಸ್ ಚಾಲಕನ ಲೈಸನ್ಸ್ ನ್ನು 6 ತಿಂಗಳುಗಳ ಕಾಲ ಅಮಾನತು ಮಾಡಲಾಗಿದೆ.
ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಸ್ ಕೇರಳ, ಗೋವಾ ಟ್ರಿಪ್ ಹೊರಟಿತ್ತು. ಈ ವೇಳೆ ಚಾಲಕ ವಿದ್ಯಾರ್ಥಿನಿಯರಿಗೆ ಖುಷಿಯಿಂದಲೇ ಗೇರ್ ಬದಲಾವಣೆ ಮಾಡುವುದನ್ನು ಹೇಳಿಕೊಟ್ಟು ಇದೀಗ ಕೆಲಸ ಕಳೆದುಕೊಂಡಿದ್ದಾನೆ.
28 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಚಾಲಕನ ಪಕ್ಕದಲ್ಲೇ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಸಂಚಾರ ಪರಿಸ್ಥಿತಿ ಗಮನಿಸಿ ಚಾಲಕ ಗೇರ್ ಬದಲಿಸುವಂತೆ ಹೇಳಿಕೊಡುತ್ತಾನೆ. ಯುವತಿಯರು ಕೂಡ ಚಾಲಕನ ನಿರ್ದೇಶನದಂತೆ ಪದೇ ಪದೇ ಗೇರ್ ಬದಲಾಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರ್ ಟಿಓ ಅಧಿಕಾರಗಳ ಗಮನಕ್ಕೆ ಬಂದಿದ್ದು, ಕೂಡಲೇ ಅವರು 6 ತಿಂಗಳುಗಳ ಕಾಲ ಚಾಲಕನ ಚಾಲನಾ ಪರವಾನಗಿಯನ್ನು ಅಮಾನತು ಮಾಡಿದ್ದಾರೆ.
ಚಾಲಕನನ್ನು ವಯನಾಡಿನ ಎಂ ಶಾಜಿ ಎಂದು ಗುರುತಿಸಲಾಗಿದೆ. ಕಲ್ಪೆಟ್ಟ ಆರ್ ಟಿಓ ಅಧಿಕಾರಿ ಬಿಜು ಜೇಮ್ಸ್ ಶಾಜಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಯ ಬಳಿಕ ಅಜಾಗರೂಕತೆ ವಾಹನ ಚಾಲನೆ ಮಾಡಿದ್ದಕ್ಕಾಗಿ 6 ತಿಂಗಳು ಲೈಸೆನ್ಸ್ ಅಮಾನತು ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.