Tag: Thirst

  • ತಾನೇ ಎಷ್ಟು ಬೇಕೋ ಅಷ್ಟು ನೀರು ಸೇದಿಕೊಂಡು ಕುಡಿದ ಆನೆ- ವೀಡಿಯೋ ವೈರಲ್

    ತಾನೇ ಎಷ್ಟು ಬೇಕೋ ಅಷ್ಟು ನೀರು ಸೇದಿಕೊಂಡು ಕುಡಿದ ಆನೆ- ವೀಡಿಯೋ ವೈರಲ್

    ನವದೆಹಲಿ: ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇದಿಕೊಂಡು ಕುಡಿದಿರುವ ಅಪರೂಪದ ವೀಡಿಯೋ ಇದೀಗ ವೈರಲ್ ಆಗಿದೆ.

    ಜಲ ಶಕ್ತಿ ಸಚಿವಾಲಯ ಈ ವೀಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಬೋರ್‍ವೆಲ್ ಮುಂದೆ ಆನೆಯೊಂದು ತಾನೇ ನೀರು ಸೇದಿಕೊಂಡು ಕುಡಿಯುತ್ತಿದೆ. 26 ಸೆಕೆಂಡ್‍ನ ಈ ವೀಡಿಯೋದಲ್ಲಿ ಆನೆ ತನಗೆ ಬೇಕಾಗುಷ್ಟು ನೀರನ್ನು ಆನೆ ಪಂಪ್ ಮಾಡಿಕೊಳ್ಳುತ್ತದೆ. ಬಳಿಕ ಕೆಳಗಿರುವ ನೀರನ್ನು ಕುಡಿಯುತ್ತದೆ.

    ನೀರು ಕೆಳಗೆ ಬೀಳುತ್ತಿದ್ದಂತೆ ಆನೆ ನೀರು ಕುಡಿದು ದಣಿವಾರಿಸಿಕೊಳ್ಳತ್ತದೆ. ಈ ವೀಡಿಯೋ ನೋಡಿದ ಹಲವರು ವಿವಿಧ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ನೀರಿನ ಮಹತ್ವವನ್ನು ಆನೆ ಸಹ ತಿಳಿದಿದೆ. ಆದರೆ ಮನುಷ್ಯರು ನೈಸರ್ಗಿಕ ಸಂಪತ್ತಿನ ಕುರಿತು ಏಕೆ ಅರಿತಿಲ್ಲ? ನೀರನ್ನು ಉಳಿಸುವ ಕುರಿತು ನಾವು ಆನೆಯಿಂದ ಪಾಠ ಕಲಿಯಬೇಕಿದೆ ಎಂದು ಜಲ ಶಕ್ತಿ ಟ್ವಿಟ್ಟರ್ ನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 17 ಸಾವಿರ ಬಾರಿ ವೀಕ್ಷಣೆಗೊಳಪಟ್ಟಿದೆ. ಭಾರತೀಯ ಅರಣ್ಯ ಇಲಾಖೆಯ ರಮೇಶ್ ಪಾಂಡೆ ಸಹ ವೀಡಿಯೋ ಶೇರ್ ಮಾಡಿದ್ದಾರೆ. ನೀರು ಹಾಗೂ ಪ್ರಾಣಿಗಳು ಎರಡೂ ಬೆಲೆಬಾಳುವಂತಹವು. ಅವುಗಳ ಉಳಿವಿಗಾಗೀ ನಾವು ರಕ್ಷಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.

  • ಜಮೀನಿನ ಬೆಳೆಗೆ ಅಂತಾ ಬೋರ್ ಕೊರೆಸಿ ಪಕ್ಕದೂರಿನ ಜಲದಾಹ ನೀಗಿಸ್ತಿರೋ ಕೊಪ್ಪಳದ ಶಿವು

    ಜಮೀನಿನ ಬೆಳೆಗೆ ಅಂತಾ ಬೋರ್ ಕೊರೆಸಿ ಪಕ್ಕದೂರಿನ ಜಲದಾಹ ನೀಗಿಸ್ತಿರೋ ಕೊಪ್ಪಳದ ಶಿವು

    ಕೊಪ್ಪಳ: ಕೆರೆಯ ನೀರನ್ನು ಮಾರಿಕೊಂಡು ಹಣ ಗಳಿಸುವವರ ಮಧ್ಯೆ ನಮ್ಮ ಪಬ್ಲಿಕ್ ಹೀರೋ ತುಂಬಾ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಜಮೀನಿನಲ್ಲಿ ಬೆಳೆಗೆ ಅಂತಾ ಬೋರ್ ಕೊರೆಸಿದ್ರೆ ಇಂದು ಅದೇ ನೀರಿನಿಂದ ಪಕ್ಕದೂರಿನ ಜನರ ದಾಹ ನೀಗಿಸುತ್ತಿದ್ದಾರೆ.

    ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ನಿವಾಸಿ ಶಿವು ಮೋರನಾಳ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸರ್ಕಾರ, ಜನಪ್ರತಿನಿಧಿಗಳು ಮಾಡದೇ ಇರೋ ಕಾರ್ಯವನ್ನ ಶಿವು ಮಾಡ್ತಿದ್ದಾರೆ. ಬಿಸರಹಳ್ಳಿ ಗ್ರಾಮದಲ್ಲಿ ಎಲ್ಲೇ ಬೋರ್‍ವೆಲ್ ಕೊರೆಸಿದ್ರೂ ಫ್ಲೋರೈಡ್ ನೀರೇ ಸಿಗುತ್ತದೆ. ತಮ್ಮ ಜಮೀನಿನಲ್ಲಿ ಸಿಕ್ಕಿರೋ ಸಿಹಿನೀರನ್ನ 8 ಕಿ.ಮೀ. ದೂರದ ಬಿಸರಳ್ಳಿ ಜನರಿಗೆ ನಾಲ್ಕು ವರ್ಷದಿಂದ ನೀಡುತ್ತಿದ್ದಾರೆ.

    ತಮ್ಮ ಬೋರ್‍ವೆಲ್‍ಗೆ ಕಮರ್ಶಿಯಲ್ ಮೀಟರ್ ಅವಳಡಿಸಿ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಬಿಲ್ ಕಟ್ತಿದ್ದಾರೆ. ಬೋರ್‍ವೆಲ್ ಕೆಟ್ಟರೆ ತಮ್ಮ ದುಡ್ಡಿನಿಂದಲೇ ರೆಡಿ ಮಾಡಿಸುತ್ತಾರೆ. ಸರ್ಕಾರ ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಕ ಮಾಡಿದೆ. ಇದಕ್ಕೆ 3 ರಿಂದ 5 ರೂಪಾಯಿ ಕೊಡಬೇಕು. ಆದರೆ ಶಿವು ಅವರು ಮಾತ್ರ ಗ್ರಾಮಸ್ಥರಿಂದ ನಯಾಪೈಸೆ ಹಣವನ್ನು ತೆಗೆದುಕೊಳ್ಳುವುದಿಲ್ಲ.