Tag: thinner

  • ಪೇಂಟ್‌ಗೆ ಬಳಸುವ ಥಿನ್ನರ್ ಕುಡಿದು 3ರ ಬಾಲಕ ಸಾವು

    ಪೇಂಟ್‌ಗೆ ಬಳಸುವ ಥಿನ್ನರ್ ಕುಡಿದು 3ರ ಬಾಲಕ ಸಾವು

    ರಾಯಚೂರು: ಪೇಂಟ್‌ಗೆ ಬಳಸುವ ಥಿನ್ನರ್ ಕುಡಿದು ಬಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು (Raichuru) ಜಿಲ್ಲೆ ಮಾನ್ವಿ ತಾಲ್ಲೂಕಿನ ಹಿರೆಕೊಟ್ನೇಕಲ್ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನು ಶಿವಾರ್ಜುನ ನಾಯಕ್(3) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಉದ್ಯೋಗ ಖಾತ್ರಿ | 150 ಮಾನವ ದಿನಗಳಿಗೆ ಏರಿಸದಿರುವುದು ಬೇಸರದ ಸಂಗತಿ – ಪ್ರಿಯಾಂಕ್ ಖರ್ಗೆ

    ಮೃತ ಬಾಲಕನ ಮನೆಯಲ್ಲಿ ಪೇಂಟ್‌ಗೆ ಕೆಲಸ ನಡೆಯುತ್ತಿತ್ತು. ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆ ಪೇಂಟ್‌ಗೆ ಕೆಲಸಕ್ಕಾಗಿ ಥಿನ್ನರ್ ತಂದಿದ್ದರು. ಈ ವೇಳೆ ಅಕಸ್ಮಾತ್ ಆಗಿ ಮನೆಯಲ್ಲಿಟ್ಟಿದ್ದ ಥಿನ್ನರ್‌ನ್ನು ಬಾಲಕ ಕುಡಿದಿದ್ದಾನೆ. ಅಸ್ವಸ್ಥಗೊಂಡಿದ್ದ ಆತನನ್ನು ಕೂಡಲೇ ಮಾನ್ವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.

    ಮಾನ್ವಿ (Manvi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಕೊಡವರ ಸಂಸ್ಕೃತಿ ಉಳಿವಿಗಾಗಿ ಪಾದಯಾತ್ರೆ – ಫೆ.7ರಂದು ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ

  • ನೀರೆಂದು ಭಾವಿಸಿ ಥಿನ್ನರ್ ಕುಡಿದಿದ್ದ ಬಾಲಕಿ 22 ದಿನದ ಹೋರಾಟದ ಬಳಿಕ ಸಾವು

    ನೀರೆಂದು ಭಾವಿಸಿ ಥಿನ್ನರ್ ಕುಡಿದಿದ್ದ ಬಾಲಕಿ 22 ದಿನದ ಹೋರಾಟದ ಬಳಿಕ ಸಾವು

    ಕಲಬುರಗಿ: ತಂದೆ ತಂದಿದ್ದ ಥಿನ್ನರನ್ನು ನೀರೆಂದು ಭಾವಿಸಿ ಕುಡಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 7ರ ಬಾಲಕಿ ಸೌಮ್ಯ 22 ದಿನಗಳ ನಂತರ ಮೃತಪಟ್ಟಿದ್ದಾಳೆ.

    ಜಿಲ್ಲೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮನೆಗೆ ಹಿಂದಿರುಗಿದ್ದ ಸೌಮ್ಯ, ಭಾನುವಾರ ಮತ್ತೆ ಏಕಾಏಕಿ ಅಸ್ವಸ್ಥಳಾಗಿದ್ದಳು. ತಕ್ಷಣ ಪೋಷಕರು ಬಾಲಕಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಇಂದು ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

    ಏನಿದು ಘಟನೆ?
    ಜೂನ್ 03 ರಂದು ಸೌಮ್ಯ ತಂದೆ ಮನೆಗೆ ಪೇಂಟಿಂಗ್ ಮಾಡಿಸಲು ತಂದಿದ್ದ ವಸ್ತುಗಳಲ್ಲಿದ್ದ ಥಿನ್ನರನ್ನು ನೀರೆಂದು ಸೇವಿದ್ದಳು. ಸೇರಿದಂತೆ ಇನ್ನಿತರ ಸಾಮಾಗ್ರಿಗಳಲ್ಲಿದ್ದ ಥಿನ್ನರ್ ಅನ್ನು ಬಾಲಕಿ ನೀರೆಂದು ಸೇವಿಸಿದ್ದಳು. ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿತ್ತು. ತಕ್ಷಣ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಸೌಮ್ಯಳನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಅವರು ಕೆಲ ದಿನಗಳ ಹಿಂದೇಯಷ್ಟೇ ಮನೆಗೆ ಹಿಂದಿರುಗಿದ್ದಳು.

  • ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ಕಲಬುರಗಿ: ಮನೆಗೆ ಹಚ್ಚುವ ಪೇಂಟ್‍ನಲ್ಲಿ ಮಿಕ್ಸ್ ಮಾಡುವ ಥಿನ್ನರ್ ಅನ್ನು ಕುಡಿಯುವ ನೀರೆಂದು ತಿಳಿದು ಬಾಲಕಿಯೋರ್ವಳು ಕುಡಿದು ತೀವ್ರ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಲಿಂಗನವಾಡಿ ಗ್ರಾಮದಲ್ಲಿ ನಡೆದಿದೆ.

    7 ವರ್ಷದ ಬಾಲಕಿ ಸೌಮ್ಯ ಅಸ್ವಸ್ಥಗೊಂಡು ಕಲಬುರಗಿಯ ಬಸವೇಶ್ಬರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ದಿನಗಳ ಹಿಂದೆ ಬಾಲಕಿ ತಂದೆ ರೇವಣಸಿದ್ದಪ್ಪರು ಮನೆಗೆ ಪೇಂಟಿಂಗ್ ಮಾಡಿಸಲು ನಗರಕ್ಕೆ ಬಂದು ಪೇಂಟ್, ಪೆಂಟ್ ಬ್ರಷ್, ಥಿನ್ನರ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ಮನೆಗೆ ತಂದಿದ್ದಾರೆ.

    ಈ ವೇಳೆ ಮಗಳು ಸೌಮ್ಯ ಅಪ್ಪನ ಬಳಿ ಬಂದು ನನಗೇ ಏನು ತಿನ್ನಲು ತಂದಿದಿಯಾ ಅಂತಾ ಕೇಳಿದ್ದಾಳೆ. ಆಗ ಅಪ್ಪ ಮಗಳನ್ನ ನಾ ಏನೂ ತಂದಿಲ್ಲ ಅಂತಾ ಹೇಳಿ ಹೊರಗಡೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಕಿಯು ಅಪ್ಪ ತಂದಿಟ್ಟಿದ್ದ ಬ್ಯಾಗ್ ತೆರೆದು ನೋಡಿದ್ದಾಳೆ. ಬ್ಯಾಗ್‍ನಲ್ಲಿದ್ದ ಥಿನ್ನರ್ ಬಾಟಲನ್ನು ಕುಡಿಯುವ ನೀರಿನ ಬಾಟಲ್ ಅಂತಾ ತಿಳಿದು ಗಳಗಳನೆ ಕುಡಿದಿದ್ದಾಳೆ.

    ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿದೆ. ಸದ್ಯ ಬಾಲಕಿಯು ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.