Tag: thieves

  • ಧಾರವಾಡ | ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಕಳ್ಳರಿಬ್ಬರ ಕಾಲಿಗೆ ಗುಂಡೇಟು

    ಧಾರವಾಡ | ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಕಳ್ಳರಿಬ್ಬರ ಕಾಲಿಗೆ ಗುಂಡೇಟು

    ಧಾರವಾಡ: ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ್ದ ಇಬ್ಬರು ಕಳ್ಳರ ಕಾಲಿಗೆ ಫೈರಿಂಗ್ ಮಾಡಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

    ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬೈಕ್ ಮೇಲೆ ಹೊರಡಿದ್ದ ಯುವಕನನ್ನ ನಿಲ್ಲಿಸಿ ಹುಸೇನ್ ಎನ್ನುವವನ ಬಳಿ ಕಳ್ಳತನ ಮಾಡಲು ಯತ್ನಿಸಿದ್ದ. ಈ ಮಾಹಿತಿ ಮೇರೆಗೆ ಆತನನ್ನ ವಶಕ್ಕೆ ಪಡೆದು, ಆತನ ಸಹಚರರ ಬಳಿ ಕರೆದುಕೊಂಡು ಹೋದ ಪೊಲೀಸರ ಮೇಲೆಯೇ ಮತ್ತಿಬ್ಬರು ಕಳ್ಳರು ದಾಳಿ ಮಾಡಿದ್ದರು. ಈ ಹಿನ್ನೆಲೆ ಪೊಲೀಸರು ಕೂಡ ಇಬ್ಬರ ಮೇಲೆ ಪ್ರತಿ ದಾಳಿ ಮಾಡಿ ಬಂಧಿಸಿದ್ದರು. ಇದನ್ನೂ ಓದಿ: ನಕಲಿ ಬಿಲ್ ಪಾವತಿಗಾಗಿ ಹಿರಿಯ ಅಧಿಕಾರಿಗಳ ಕಿರುಕುಳ – ಮಹಿಳಾ ಎಂಜಿನಿಯರ್ ಸೂಸೈಡ್

    ಈ ವೇಳೆ ವಿಜಯ ಮತ್ತು ಮುಜಮ್ಮಿಲ್ ಎಂಬ ಕಳ್ಳರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡ ಪಿಎಸ್‌ಐ ಮಲ್ಲಿಕಾರ್ಜುನ ಹಾಗೂ ಪೊಲೀಸ್ ಪೇದೆ ಇಸಾಕ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಕನ್ನಡ ಮಾತಾಡಿ ಎಂದಿದ್ದಕ್ಕೆ ರೂಲ್ಸ್ ಇದೆಯಾ ಎಂದು ದರ್ಪ ಮೆರೆದ ಬ್ಯಾಂಕ್ ಸಿಬ್ಬಂದಿ

    ಈ ವೇಳೆ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ಬುಧವಾರ ರಾತ್ರಿ ಕಲಘಟಗಿ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಬಳಿ 3 ಜನ ಕಳ್ಳರು ಓರ್ವನನ್ನು ಅಡ್ಡಗಟ್ಟಿ, ಆತನ ಬೈಕ್ ಕಸಿದುಕೊಳ್ಳಲು ಯತ್ನಿಸಿದರು. ಆ ಕೆಲಸ ಆಗದೇ ಹೋದಾಗ ಅಲ್ಲಿಂದ 3 ಜನ ಪರಾರಿಯಾಗಿದ್ದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಧಾರವಾಡದ 3 ಠಾಣೆಯವರು ಚೆಕ್‌ಪೋಸ್ಟ್ ಹಾಕಿ, ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ – ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

    ಬೆಳಗ್ಗಿನ ಜಾವ ಹುಸೇನ್‌ಸಾಬ್ ಎಂಬಾತನನ್ನು ಹಿಡಿಯಲಾಗಿದ್ದು, ಈತ 35ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂತು. ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ಇನ್ನೋರ್ವ ಕಳ್ಳ ಇರುವ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋದ. ಅಲ್ಲಿ ಇಬ್ಬರು ಕಳ್ಳರು ಇದ್ದದ್ದು ಗೊತ್ತಾಯಿತು. ಈ ವೇಳೆ ಹುಸೇನ್‌ಸಾಬ್ ಪೊಲೀಸರನ್ನು ನೂಕಿ ಓಡಿದ್ದ. ಸ್ಥಳದಲ್ಲಿದ್ದ ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಎಂಬಾತನನ್ನು ನಮ್ಮ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಪೊಲೀಸರ ಮೇಲೆ ಅವರು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಮೂರು ಸುತ್ತು ಫೈರಿಂಗ್ ನಡೆಸಿದ್ದು, ಆರೋಪಿಗಳ ಕಾಲಿಗೆ ಗುಂಡು ತಾಗಿದೆ. ತಪ್ಪಿಸಿಕೊಂಡ ಹುಸೇನ್‌ಸಾಬ್ ಪತ್ತೆಗೆ ಹುಡುಕಾಟ ನಡೆಯುತ್ತಿದೆ. ಗಾಯಾಳುಗಳು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

  • ಜಗನ್ನಾಥ ರಥಯಾತ್ರೆಯಲ್ಲಿ ಸರಗಳ್ಳತನ – ನಾಲ್ವರು ಚಾಲಾಕಿ ಕಳ್ಳಿಯರ ಬಂಧನ

    ಜಗನ್ನಾಥ ರಥಯಾತ್ರೆಯಲ್ಲಿ ಸರಗಳ್ಳತನ – ನಾಲ್ವರು ಚಾಲಾಕಿ ಕಳ್ಳಿಯರ ಬಂಧನ

    ಬೆಂಗಳೂರು: ಜಾತ್ರೆ, ಸಮಾರಂಭಗಳಿದ್ದಾಗ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅನ್ನು ಬಾಣಸವಾಡಿ ಪೊಲೀಸರು (Banasawadi Police) ಬಂಧಿಸಿದ್ದಾರೆ.

    ಯಶೋಧಾ, ಗಾಯತ್ರಿ, ಆಶಾ ಮತ್ತು ಪ್ರಿಯಾ ಬಂಧಿತ ಕಳ್ಳಿಯರು. ಜೂನ್ 29ರಂದು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಗನ್ನಾಥ ರಥಯಾತ್ರೆ (Jagannath Rath Yatra) ನಡೆದಿತ್ತು. ನೂಕುನುಗ್ಗಲು ಹೆಚ್ಚಿದ ಕಾರಣ ಕಳ್ಳಿಯರಿಗೆ ಕಳ್ಳತನಕ್ಕೆ ಹೆಚ್ಚು ಅನುಕೂಲವಾಗಿತ್ತು. ಇದನ್ನೂ ಓದಿ: ಡಾಲರ್ ಎಕ್ಸ್‌ಚೇಂಜ್‌ಗೆ ಬಂದಾಗ 2 ಕೋಟಿ ರೂ. ದರೋಡೆ ನಾಟಕ – ದೂರುದಾರ ಸೇರಿ 15 ಮಂದಿ ಅರೆಸ್ಟ್!

    ಮಹಿಳೆಯರ ಚಿನ್ನದ ಸರ ಟಾರ್ಗೆಟ್ ಮಾಡಿದ್ದ ಐನಾತಿಗಳು 4 ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದರು. ಚಿನ್ನದ ಸರ ಕಳೆದುಕೊಂಡವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ – ಮಹಿಳೆ ಸಾವು

    ತನಿಖೆ ಕೈಗೊಂಡ ಪೊಲೀಸರು 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 14 ಲಕ್ಷ ಮೌಲ್ಯದ 140 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳು ಬೆಂಗಳೂರು ಅಷ್ಟೇ ಅಲ್ಲದೆ ಬೇರೆ-ಬೇರೆ ಜಿಲ್ಲೆಗಳಲ್ಲಿ ಕೈಚಳಕ ತೋರಿರುವುದು ಸಹ ತನಿಖೆಯಲ್ಲಿ ಬಯಲಾಗಿದೆ.

  • ನಟ ಅನುಪಮ್ ಖೇರ್ ಮುಂಬೈ ಕಚೇರಿಗೆ ನುಗ್ಗಿದ ಕಳ್ಳರು

    ನಟ ಅನುಪಮ್ ಖೇರ್ ಮುಂಬೈ ಕಚೇರಿಗೆ ನುಗ್ಗಿದ ಕಳ್ಳರು

    ಮುಂಬೈ: ನಗರದ ವೀರ ದೇಸಾಯಿ ರಸ್ತೆಯಲ್ಲಿರುವ ಅನುಪಮ್ ಖೇರ್ (Anupam Kher) ಅವರ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ.

    ಬೀಗ ಮುರಿದಿರುವ ಕಚೇರಿಯ ಮುಖ್ಯ ದ್ವಾರದ ವೀಡಿಯೋವನ್ನು ನಟ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬುಧವಾರ ರಾತ್ರಿ ವೀರ ದೇಸಾಯಿ ರಸ್ತೆಯಲ್ಲಿರುವ ನನ್ನ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಅಲ್ಲದೇ ಕೆಲವೊಂದು ದಾಖಲೆಗಳನ್ನು ಕದ್ದಿದ್ದಾರೆ ಎಂದಿದ್ದಾರೆ.

     

    View this post on Instagram

     

    A post shared by Anupam Kher (@anupampkher)

     

    ಇಬ್ಬರು ಕಳ್ಳರು ಆಟೋದಲ್ಲಿ ಕುಳಿತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ

    ಅನುಪಮ್ ಖೇರ್ ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಮುಂದಿನ ಅನುರಾಗ್ ಬಸು ಅವರ ಮುಂಬರುವ ಸಂಕಲನ ಚಿತ್ರ ‘ಮೆಟ್ರೋ…ಇನ್ ಡಿನೋ’ದಲ್ಲಿ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಸೇರಿದಂತೆ ಪ್ರತಿಭಾವಂತ ಪಾತ್ರವರ್ಗದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ ‘IB71’, ‘ದಿ ವ್ಯಾಕ್ಸಿನ್ ವಾರ್’, ‘ಕುಚ್ ಖಟ್ಟಾ ಹೋ ಜಯ್’ ಮತ್ತು ‘ಕಾಗಜ್ 2’ ನಲ್ಲಿ ಕಾಣಿಸಿಕೊಂಡಿದ್ದರು.

  • ಕಳ್ಳತನಕ್ಕೆ ಬಂದು ಹಣ, ಬಂಗಾರ ದೋಚಿದ್ದಲ್ಲದೇ ಊಟ ಮಾಡಿ ಹೋದ ಕಳ್ಳರು!

    ಕಳ್ಳತನಕ್ಕೆ ಬಂದು ಹಣ, ಬಂಗಾರ ದೋಚಿದ್ದಲ್ಲದೇ ಊಟ ಮಾಡಿ ಹೋದ ಕಳ್ಳರು!

    ಹಾವೇರಿ: ಮನೆಯೊಂದರಲ್ಲಿ ಕಳ್ಳತನಕ್ಕೆ (Theft) ಬಂದು ಚಿನ್ನಾಭರಣವನ್ನು ದೋಚಿದ್ದಲ್ಲದೇ ಅದೇ ಮನೆಯಲ್ಲಿ ಊಟವನ್ನೂ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೇಬೆನ್ನೂರು (Ranebennur) ತಾಲೂಕಿನ ಚೌಡಯ್ಯದಾನಪುರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪರಸಪ್ಪ ಎರೆಸೀಮೆ ಅವರ ಮನೆಯಲ್ಲಿ 10 ಗ್ರಾಂ ಬೆಳ್ಳಿಯ ಆಭರಣ, 10 ಗ್ರಾಂ ಚಿನ್ನದ ಆಭರಣ ಜೊತೆಗೆ 50 ಸಾವಿರ ರೂ. ಹಣ ದೊಚಿ ಕಳ್ಳರು (Thieves) ಪರಾರಿಯಾಗಿದ್ದಾರೆ. ಮನೆಯ ಸದಸ್ಯರು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಈ ವೇಳೆ ಮನೆಯ ಬಾಗಿಲನ್ನು ಗುದ್ದಲಿಯಿಂದ ಒಡೆದು, ಮನೆಯೊಳಗೆ ನುಗ್ಗಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಚಿನ್ನಾಭರಣವನ್ನು ಕದ್ದಿದ್ದಲ್ಲದೇ ಮನೆಯಲ್ಲಿ ತಯಾರಿಸಿಟ್ಟಿದ್ದ ಊಟವನ್ನು ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: KPSC ಬೋರ್ಡ್ ಮುಂದೆ ನೂರಾರು ಪತ್ರಗಳನ್ನು ಚೆಲ್ಲಿ ಅಭ್ಯರ್ಥಿ ಹೈಡ್ರಾಮಾ

    ಕಷ್ಟಪಟ್ಟು ದುಡಿದು ಮುಂದಿನ ಜೀವನಕ್ಕಾಗಿ ಇಟ್ಟುಕೊಂಡಿದ್ದ ಹಣ, ಒಡವೆಯನ್ನು ಖತರ್ನಾಕ್ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಕಳ್ಳರ ಚಲನವಲನಗಳು ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಸಿಪಿವೈ ಬಾವ ನಾಪತ್ತೆ ಪ್ರಕರಣ – ಕಾರು ಪತ್ತೆ, ಕಿಡ್ನ್ಯಾಪ್ ಶಂಕೆಗೆ ಪುಷ್ಠಿ ನೀಡಿದ ರಕ್ತದ ಕಲೆ!

  • ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

    ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

    ಗದಗ: ಮೆಣಸಿನಕಾಯಿಯನ್ನು (Chilli) ಕದ್ದ ಕಳ್ಳರಿಬ್ಬರಿಗೆ (Thieves) ಗ್ರಾಮಸ್ಥರು ಕದ್ದ ಮೆಣಸಿನಕಾಯಿಯನ್ನು ತಿನ್ನುವಂತೆ ಒತ್ತಾಯಿಸಿ, ಹಿಗ್ಗಾಮುಗ್ಗ ಧರ್ಮದೇಟು ನೀಡಿರುವ ಅಮಾನವೀಯ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

    ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಣ್ಣ ಅಂಗಡಿ ಹಾಗೂ ಮಂಜುನಾಥ ಗೌಡರ ಮೆಣಸಿನಕಾಯಿ ಕದ್ದ ಕಳ್ಳರು. ಮೆಣಸಿನಕಾಯಿಯನ್ನು ಕದ್ದಿರುವ ವಿಚಾರ ತಿಳಿಯುತ್ತಲೇ ಗ್ರಾಮಸ್ಥರು ಅವರಿಬ್ಬರನ್ನು ಹಿಡಿದು, ಕದ್ದ ಮೆಣಸಿನಕಾಯಿ ಮೂಟೆಯನ್ನು ಹೊರಿಸಿ, ಊರಿಡೀ ಮೆರವಣಿಗೆ ಮಾಡಿದ್ದಾರೆ.

    ಬಳಿಕ ಇಬ್ಬರಿಗೂ ಕದ್ದ ಮೆಣಸಿನಕಾಯಿಗಳನ್ನು ಸ್ಥಳದಲ್ಲೇ ತಿನ್ನುವಂತೆ ಒತ್ತಾಯಿಸಿದ್ದಾರೆ. ತಿನ್ನದೇ ಹೋದರೆ ಪೊಲೀಸರಿಗೆ ಕಂಪ್ಲೆಂಟ್ ಕೊಡುವುದಾಗಿ ಎಚ್ಚರಿಸಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ತಮ್ಮನ್ನು ಬಿಟ್ಟುಬಿಡುವಂತೆ ಗ್ರಾಮಸ್ಥರಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗ ತಲೆಗೆ ದೊಣ್ಣೆಯಿಂದ ಹೊಡೆದು ಪತ್ನಿ ಕೊಂದ ಪತಿ

    ಇಷ್ಟಾದರೂ ಬಿಡದ ಗ್ರಾಮಸ್ಥರು ಇಬ್ಬರಿಗೂ ಧರ್ಮದೇಟು ನೀಡಿ, ಕಂಬಕ್ಕೆ ಕಟ್ಟಿಹಾಕಿ, ಹಿಗ್ಗಾಮುಗ್ಗ ಥಳಿಸಿದ್ದಾರೆ. ಗ್ರಾಮಸ್ಥರು ಅಮಾನವೀಯವಾಗಿ ವರ್ತಿಸಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಕುಡಿದ ನಶೆಯಲ್ಲಿ ಟ್ರಕ್‌ನ ರೈಲ್ವೆ ಹಳಿಯಲ್ಲಿ ಬಿಟ್ಟ ಚಾಲಕ – ತಪ್ಪಿದ ಭಾರೀ ದುರಂತ

  • ರಕ್ತಚಂದನ ಸಾಗಿಸ್ತಿದ್ದ ಕಾರು ಭೀಕರ ಅಪಘಾತಕ್ಕೆ ಜಖಂ – ಪವಾಡವೆಂಬಂತೆ ಪಾರಾದ ಕಳ್ಳರು

    ರಕ್ತಚಂದನ ಸಾಗಿಸ್ತಿದ್ದ ಕಾರು ಭೀಕರ ಅಪಘಾತಕ್ಕೆ ಜಖಂ – ಪವಾಡವೆಂಬಂತೆ ಪಾರಾದ ಕಳ್ಳರು

    ಚಿಕ್ಕಬಳ್ಳಾಪುರ: ಅಕ್ರಮವಾಗಿ ರಕ್ತ ಚಂದನ (Red Sandalwood) ಸಾಗಿಸುತ್ತಿದ್ದ ಕಳ್ಳರ ಕಾರು ಭೀಕರ ಅಪಘಾತಕ್ಕೀಡಾಗಿ (Accident) ನಜ್ಜುಗುಜ್ಜಾಗಿದ್ದರೂ ಕಳ್ಳರು ಪವಾಡವೆಂಬಂತೆ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಡೆದಿದೆ.

    ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಸಾದಲಿ ಕ್ರಾಸ್ ಬಳಿ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ಕಾರು ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ಗುರುತೇ ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿ ಬಿದ್ದಿದೆ. ಕಾರಿನಲ್ಲಿದ್ದ ರಕ್ತಚಂದನ ಕಳ್ಳರಾದ ನಾಗರಾಜು, ನಾಗೇಂದ್ರ, ಶ್ರೀನಿವಾಸ್ ಮೂವರಿಗೂ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಋತುವಿನ ಸಮಸ್ಯೆ, 3 ದಿನ ಚಿಕಿತ್ಸೆ ಬಳಿಕ ಮಹಿಳೆ ಸಾವು – ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

    ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರೂ ಅದೃಷ್ಟವಶಾತ್ ಎಂಬಂತೆ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ 24 ರಕ್ತಚಂದನದ ತುಂಡುಗಳನ್ನು ಸೀಟಿನ ಕೆಳಭಾಗದಲ್ಲಿ ಇಟ್ಟುಕೊಂಡು ಸಾಗಿಸಲಾಗುತ್ತಿತ್ತು. ನೆರೆಯ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ರಕ್ತಚಂದನದ ತುಂಡುಗಳನ್ನ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ರಕ್ತಚಂದನದ ತುಂಡುಗಳನ್ನ ಪೇರೇಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಸಿಪಿಐ ನಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌ – ಲೋಕಸಭೆಗೆ ಹೆಚ್‌ಡಿಕೆ ಸ್ಪರ್ಧೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಳ್ಳರೆಂದು ಭಾವಿಸಿ ಮೂವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿತ – 10 ಜನರ ವಿರುದ್ಧ ಎಫ್‌ಐಆರ್

    ಕಳ್ಳರೆಂದು ಭಾವಿಸಿ ಮೂವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿತ – 10 ಜನರ ವಿರುದ್ಧ ಎಫ್‌ಐಆರ್

    ಚಿಕ್ಕೋಡಿ: ಕಳ್ಳರೆಂದು ಭಾವಿಸಿ ಮೂವರು ಯುವಕರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಸಾರ್ವಜನಿಕರು ಥಳಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ಬೆಳಗಿನ ಜಾವ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳ್ಳಂಬೆಳಗ್ಗೆ ಜೋಡಕುರಳಿ ಗ್ರಾಮಕ್ಕೆ ಬಂದಿದ್ದ ನಾಲ್ವರು ಯುವಕರನ್ನು ಗ್ರಾಮಸ್ಥರು ತಡೆದು ತಾವು ಯಾರೆಂದು ವಿಚಾರಿಸಿದ್ದಾರೆ. ಈ ವೇಳೆ ಒಬ್ಬ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ.

    ಆಗ ಇವರು ಕಳ್ಳರಿರಬೇಕೆಂದು ಭಾವಿಸಿದ ಗ್ರಾಮಸ್ಥರು ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಕಟ್ಟಿಗೆಯಿಂದ ಹೊಡೆದು, ಮುಖಕ್ಕೆ ಒದ್ದು ಮನಬಂದಂತೆ ಥಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಕಂಡಕ್ಟರ್ ದುರ್ಮರಣ

    ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರು ಯುವಕರ ರಕ್ಷಣೆ ಮಾಡಿದ್ದಾರೆ. ಸದ್ಯ ಮೂವರು ಯುವಕರನ್ನು ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಹಲ್ಲೆಗೊಳಗಾದ ಮೂವರು ಯುವಕರು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದವರು ಎಂಬುದು ತಿಳಿದು ಬಂದಿದೆ. ಯುವಕರ ಮೇಲೆ ಹಲ್ಲೆ ಮಾಡಿದ 10ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂಬುಲೆನ್ಸ್‌ನಲ್ಲಿಯೇ ಡ್ರೈವರ್, ಸಿಬ್ಬಂದಿಯಿಂದ ಮಹಿಳೆಗೆ ಹೆರಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೃದ್ಧರ ಮನೆಯಲ್ಲಿ ಕಳ್ಳತನಕ್ಕೆ ಬಂದು ಏನೂ ಸಿಗ್ಲಿಲ್ಲ ಅಂತ 500 ರೂ. ಇಟ್ಟು ಹೋದ ಕಳ್ಳರು

    ವೃದ್ಧರ ಮನೆಯಲ್ಲಿ ಕಳ್ಳತನಕ್ಕೆ ಬಂದು ಏನೂ ಸಿಗ್ಲಿಲ್ಲ ಅಂತ 500 ರೂ. ಇಟ್ಟು ಹೋದ ಕಳ್ಳರು

    ನವದೆಹಲಿ: ವೃದ್ಧರೊಬ್ಬರ ಮನೆಗೆ ಕಳ್ಳತನಕ್ಕೆಂದು ಬಂದು ಯೋಗ್ಯವಾದ ವಸ್ತು ಏನೂ ಸಿಗದಿದ್ದಾಗ ಕಳ್ಳರು (Thieves) 500 ರೂ. ಬಿಟ್ಟು ಹೋಗಿರುವ ವಿಚಿತ್ರ ಘಟನೆ ನವದೆಹಲಿಯ (New Delhi) ರೋಹಿಣಿಯ ಸೆಕ್ಟರ್ 8ರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಜುಲೈ 20ರಂದು ಮಧ್ಯರಾತ್ರಿ ನಡೆದಿದೆ. 80 ವರ್ಷದ ನಿವೃತ್ತ ಎಂಜಿನಿಯರ್ ಎಂ ರಾಮಕೃಷ್ಣ ಜುಲೈ 19ರಂದು ತಮ್ಮ ಪತ್ನಿಯೊಂದಿಗೆ ತಮ್ಮ ಮಗನನ್ನು ಭೇಟಿಯಾಗಲು ಗುರುಗ್ರಾಮಕ್ಕೆ ತೆರಳಿದ್ದರು. ಜುಲೈ 21ರಂದು ರಾಮಕೃಷ್ಣ ಅವರ ನೆರೆಹೊರೆಯವರು ಕರೆ ಮಾಡಿ, ತಮ್ಮ ಮನೆಗೆ ಕಳ್ಳರು ನುಗ್ಗಿದ್ದಾಗಿ ಮಾಹಿತಿ ನೀಡಿದ್ದಾರೆ.

    ತಕ್ಷಣ ಅವರು ತಮ್ಮ ಮನೆಗೆ ಧಾವಿಸಿದ್ದು, ಮುಖ್ಯ ಗೇಟ್‌ನ ಬೀಗ ಒಡೆದಿರುವುದು ಕಂಡುಬಂದಿದೆ. ಆದರೆ ಮನೆ ಒಳಗಡೆ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಅವರಿಗೆ ಗೇಟ್ ಬಳಿ 500 ರೂ. ನೋಟ್ ಬಿದ್ದಿರುವುದು ಕಂಡುಬಂದಿದೆ. ಇದನ್ನೂ ಓದಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಟಿ ಕೋಳಿ ಕಳ್ಳರು!

    ಈ ಬಗ್ಗೆ ರಾಮಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಟ್ಟಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಎನೂ ಸಿಗದ ಹಿನ್ನೆಲೆ ಕಳ್ಳರೇ 500 ರೂ. ಇಟ್ಟು ಹೋಗಿರಬಹುದು ಎಂದು ಅವರು ಶಂಕಿಸಿದ್ದಾರೆ.

    ಇದೀಗ ರಾಮಕೃಷ್ಣ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡಸಂಹಿತೆಯ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು ಜ್ಯುವೆಲರಿ ಅಂಗಡಿಗೆ ಕನ್ನ

    ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು ಜ್ಯುವೆಲರಿ ಅಂಗಡಿಗೆ ಕನ್ನ

    ಲಕ್ನೋ: ಅಂಗಡಿಯೊಂದರಿಂದ 10 ಅಡಿ ಸುರಂಗವನ್ನು ಚರಂಡಿ ಮೂಲಕ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು (Thieves) ದೋಚಿದ ಘಟನೆ ಉತ್ತರ ಪ್ರದೇಶದ  (Uttar Pradesh) ಮೀರತ್‍ನಲ್ಲಿ ನಡೆದಿದೆ.

    ಜ್ಯುವೆಲರಿ ಶೋ ರೂಮ್‌ (Jewellery Shop) ಮಾಲೀಕರು ವ್ಯಾಪಾರಕ್ಕಾಗಿ ಅಂಗಡಿಯನ್ನು ತೆರೆಯಲು ಬಂದಾಗ ಚರಂಡಿಯ ಮೂಲಕ ಸುರಂಗವೊಂದು (Tunnel) ಕೊರೆದಿರುವುದನ್ನು ಗಮನಿಸಿದರು. ಕಳ್ಳರು ಅಂಗಡಿಯೊಳಗೆ ಪ್ರವೇಶಿಸಲು ಡ್ರೈನ್‍ನ್ನು ಬಳಕೆ ಮಾಡಿಕೊಂಡು ಇಟ್ಟಿಗೆ ಹಾಗೂ ಮಣ್ಣನ್ನು ಕೆಡವಿದ್ದಾರೆ.

    ಅದಾದ ಬಳಿಕ ಅಂಗಡಿಯೊಳಗೆ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಆದರೆ ಚಿನ್ನಾಭರಣದ ನಿಖರವಾದ ಮೊತ್ತ ತಿಳಿದುಬಂದಿಲ್ಲ. ಇದನ್ನೂ ಓದಿ: ಶಾಸಕ ಶಾಮನೂರು ಕೊಟ್ಟ ಗಿಫ್ಟನ್ನು ರಸ್ತೆಗೆ ಎಸೆದು ಮಹಿಳೆಯರ ಆಕ್ರೋಶ

    ಘಟನೆ ಬಳಿಕ ಮೀರತ್ ಬುಲಿಯನ್ ಟ್ರೇಡರ್ಸ್ ಅಸೋಸಿಯೇಷನ್ ಸದಸ್ಯರು ಶೋರೂಮ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಗಲಾಟೆಯಾದ ಕೂಡಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಬೇಕೆಂಬುದು ನನ್ನ ಆಸೆ: ವರ್ತೂರು ಪ್ರಕಾಶ್

  • ಬೆಂಗ್ಳೂರಲ್ಲಿ ಐಫೋನ್ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್

    ಬೆಂಗ್ಳೂರಲ್ಲಿ ಐಫೋನ್ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್

    – 40 ಐಫೋನ್ ಸೇರಿ 110 ಫೋನ್ ವಶ

    ಬೆಂಗಳೂರು: ಐಫೋನ್ (iPhone) ಅಂದರೇನೇ ಒಂಥರಾ ಬ್ರ‍್ಯಾಂಡ್. ಕೆಲವರು ಕಷ್ಟನೊ, ಸುಖನೊ ಹೇಗೋ ಒಂದು ಐಫೋನ್ ತೆಗೆದುಕೊಂಡಿರುತ್ತಾರೆ. ಆದರೆ ಈ ಐಫೋನ್‌ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಖತರ್ನಾಕ್ ಟೀಂ ಒಂದು ಅರೆಸ್ಟ್ (Arrest) ಆಗಿದೆ.

    ಬಂಧಿತ ಕಳ್ಳರಿಂದ (Thieves) ಬರೋಬ್ಬರಿ 40 ಐಪೋನ್ ಸೇರಿ ಒಟ್ಟು 110 ಪೋನ್‌ಗಳನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿ ನಡೆಯುತ್ತಿದ್ದ ಮೊಬೈಲ್ ರಾಬರಿ ಗ್ಯಾಂಗ್‌ನಲ್ಲಿ ಇವರದ್ದೂ ಸಹ ಎತ್ತಿದ ಕೈ. ಡಿಸಿಪಿ ಶ್ರೀನಿವಾಸ್ ಗೌಡ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್, ಪಿಎಸ್‌ಐ ಪ್ರಕಾಶ್ ಹಾಗೂ ಕ್ರೈಂ ತಂಡದಿಂದ ಕಾರ್ಯಾಚರಣೆ ನಡೆಸಿ ಕಳ್ಳರಾದ ಮಹಮ್ಮದ್ ಸಕ್ಲೈನ್, ಸುಹೇಲ್, ಸಾಕೀಬ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆಗಳು

    ಬಂಧಿತರೆಲ್ಲರೂ ಬೆಂಗಳೂರಿನ ಗೋರಿಪಾಳ್ಯ ನಿವಾಸಿಗಳಾಗದ್ದು, ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಯಸ್ಸಾದ ವೃದ್ಧರಿಗೆ ಸೇರಬೇಕಾದ ಪಿಂಚಣಿ ವಯಸ್ಕರ ಜೇಬಿಗೆ – ಓರ್ವ ಅರೆಸ್ಟ್