Tag: thief

  • ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದ ಆರೋಪಿಗಳು ಅಂದರ್

    ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದ ಆರೋಪಿಗಳು ಅಂದರ್

    ಯಾದಗಿರಿ: ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಆನಂದ ಹಾಗೂ ಆಶ್ವಿನಿ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಇವರು ತೆಲಂಗಾಣ ಮೂಲದವರಾಗಿದ್ದಾರೆ. ತಮ್ಮ ಸಂಬಂಧಿಕರ ಮಕ್ಕಳನ್ನು ಮೊಬೈಲ್ ಕಳ್ಳತನ ದಂಧೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಯಾರಿಗೂ ಅನುಮಾನ ಬಾರದಂತೆ ರೀತಿ ಮಕ್ಕಳಿಗೆ ಯಾವುದೇ ಶಿಕ್ಷೆಯಾಗುವುದಿಲ್ಲವೆಂದು ಅರಿತು ಈ ಗ್ಯಾಂಗ್ ತನ್ನ ಸಂಬಂಧಿಕರ ಮಕ್ಕಳನ್ನು ಮೊಬೈಲ್ ಕಳ್ಳತನ ಮಾಡಲು ಬಳಕೆ ಮಾಡಿಕೊಂಡಿದೆ. ಮೊಬೈಲ್ ಕಳ್ಳತನ ದಂಧೆ ಮೂಲಕ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡುತ್ತಿದ್ದರು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಆಫ್ಘಾನಿಸ್ತಾನದ ಮಹಿಳಾ ಮೇಯರ್

    ಮೊಬೈಲ್‍ಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಹೈದ್ರಾಬಾದ್‍ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೆಳಗಾವಿ, ಬಳ್ಳಾರಿ, ಬಾಗಲಕೋಟ ಮೊದಲಾದ ಭಾಗದಲ್ಲಿ ಆರೋಪಿಗಳಿಬ್ಬರು, ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದರು. ಆರೋಪಿಗಳು ಮೊಬೈಲ್ ಸಮೇತ ಕಾರ್ ಮೂಲಕ ತೆರಳುವಾಗ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ ಮುಂಭಾಗದಲ್ಲಿ ಕಾರ ನಿಲ್ಲಿಸಿದರು. ಈ ವೇಳೆ ಅನುಮಾನಗೊಂಡ ಯಾದಗಿರಿ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿತರಿಂದ 40 ವಿವಿಧ ಕಂಪನಿಯ ಮೊಬೈಲ್ ಹಾಗೂ ಕಳ್ಳತನ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಕಾರ್ ಜಪ್ತಿ ಮಾಡಲಾಗಿದೆ.

  • ನೋಡನೋಡುತ್ತಲೇ ಹಣ ಎಗರಿಸಿದ ಖತರ್ನಾಕ್ ಕಳ್ಳ – ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    ನೋಡನೋಡುತ್ತಲೇ ಹಣ ಎಗರಿಸಿದ ಖತರ್ನಾಕ್ ಕಳ್ಳ – ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    – ಬೈಕ್ ಸೈಡ್ ಬ್ಯಾಗ್ ನಲ್ಲಿದ್ದ 1 ಲಕ್ಷ ರೂ. ಹಣವನ್ನು ಎಗರಿಸಿ ಪರಾರಿ

    ಕೊಪ್ಪಳ: ಹಾಡ ಹಗಲೇ ಜನರ ಮಧ್ಯೆ ಪೆಟ್ರೋಲ್ ಬಂಕ್ ನಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಬೈಕಿನ ಸೈಡ್ ಬ್ಯಾಗ್ ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾನೆ.

    ಕೊಪ್ಪಳದ ಪೆಟ್ರೋಲ್ ಬಂಕ್‍ವೊಂದರಲ್ಲಿ ಈ ಘಟನೆ ನಡೆದಿದ್ದು, ಚಾಲಾಕಿ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚನ್ನಪ್ಪ ಹನುಮಗೌಡ ಪೊಲೀಸ್ ಪಾಟೀಲ್ ಹಣ ಕಳೆದುಕೊಂಡವರಾಗಿದ್ದಾರೆ.

    ಲಾಚನಕೇರಿಯ ಚನ್ನಪ್ಪ ಬುಧವಾರ ಒಂದು ಲಕ್ಷ ರುಪಾಯಿ ಹಣವನ್ನು ಬೈಕ್ ನ ಸೈಡ್ ಬ್ಯಾಗ್ ನಲ್ಲಿಟ್ಟುಕೊಂಡು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದರು. ಬ್ಯಾಗ್ ನಲ್ಲಿ ಹಣವಿರುವುದನ್ನು ಆ ಕಳ್ಳ ಹಿಂಬಾಲಿಸಿಕೊಂಡು ಬಂದು ಬೈಕ್ ಸವಾರನಿಗೆ ಗೊತ್ತಾಗದ ರೀತಿಯಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಹಣ ಕದ್ದೊಯ್ದಿದ್ದಾನೆ.

    ಜನರ ನಡುವೆಯೇ ಕಳ್ಳ ಕೈಚಳಕ ತೋರಿಸಿದ್ದು, ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು, ವಂಚಕರಿಂದ ಜಾಗರೂಕರಾಗಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ ನಂತರವೂ ಜನ ಮೈ ಮರೆಯುತ್ತಿದ್ದಾರೆ ಎಂಬುದಕ್ಕೆ ಇಂತಹ ಘಟನೆ ಸಾಕ್ಷಿಯಾಗಿದೆ. ಸದ್ಯ ಈ ಸಂಬಂಧ ಕೊಪ್ಪಳ ನಗರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಕಿಡ್ನಿ ವೈಫಲ್ಯದ ನಡುವೆಯೂ SSLCಯಲ್ಲಿ ಟಾಪರ್ ಆದ ವಿದ್ಯಾರ್ಥಿನಿ

  • ಕಳ್ಳತನ ಮಾಡಿ ಕ್ಷಮಿಸಿ ಎಂದು ಪತ್ರ ಬರೆದ ಕಳ್ಳ

    ಕಳ್ಳತನ ಮಾಡಿ ಕ್ಷಮಿಸಿ ಎಂದು ಪತ್ರ ಬರೆದ ಕಳ್ಳ

    ಭೋಪಾಲ್: ಪೊಲೀಸ್ ಅಧಿಕಾರಿಯ ಮನೆಯಲ್ಲಿ ಬೆಲೆಬಾಳುವ ವಸ್ತು ಕಳ್ಳತನ ಮಾಡಿದ ಕಳ್ಳ ಕ್ಷಮೆ ಪತ್ರ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂದ್ ನಗರದಲ್ಲಿ ನಡೆದಿದೆ. ಇದನ್ನೂ ಓದಿ:   15 ದಿನಗಳ ನಂತರ ಮತ್ತೆ ಲಾಕ್‍ಡೌನ್ ಮಾಡಬೇಕಾಗುತ್ತೆ,ಜನರೇ ಎಚ್ಚರ: ಬಿಎಸ್‍ವೈ

    ಕೊತ್ವಾಲ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ (ಎಎಸ್‍ಐ) ಕಮಲೇಶ್ ಕಟಾರೆ, ಛತ್ತೀಸ್‍ಗಢದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಭಿಂಡ್ ನಗರದಲ್ಲಿ ವಾಸಿಸುತ್ತಿದೆ. ಪೊಲೀಸರ ಪತ್ನಿ ಮತ್ತು ಅವರ ಮಕ್ಕಳು ಜೂನ್ 30 ರಂದು ಸಂಬಂಧಿಕರ ಮನೆಗೆ ತೆರಳಿದ್ದರು.

    ಮನೆಗೆ ಮರಳಿ ಬಂದಾಗ ಅವರ ಮನೆಯ ಬೀಗ ಮುರಿದು ಬಿದ್ದಿತ್ತು. ವಸ್ತುಗಳು ಎಲ್ಲೆಡೆ ಹರಡಿದ್ದವು. ಬಳಿಕ ಮನೆಯೊಳಗೆ ಸಿಕ್ಕ ಪತ್ರದಲ್ಲಿ ಕಳ್ಳ, ಕ್ಷಮಿಸಿ ಫ್ರೆಂಡ್, ಇದು ಅನಿವಾರ್ಯವಾಗಿತ್ತು. ನಾನು ಇದನ್ನು ಮಾಡದಿದ್ದರೆ, ನನ್ನ ಸ್ನೇಹಿತನು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದನು. ಚಿಂತಿಸಬೇಡಿ, ನಾನು ಹಣವನ್ನು ಪಡೆದ ತಕ್ಷಣ ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕಳ್ಳ ಬರೆದಿರುವ ಪತ್ರ ಸಿಕ್ಕಿದೆ. ಇದನ್ನೂ ಓದಿ:  ಪೊಲೀಸರಿಂದ ಪರಿಸರ ಪ್ರೇಮ – ಬೀಟ್‍ಗೊಂದು ಮರ ಅಭಿಯಾನ

    ಪೊಲೀಸರ ಪ್ರಕಾರ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಮತ್ತು ಕುಟುಂಬದ ಕೆಲವು ಪರಿಚಯಸ್ಥರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಕಳ್ಳನಿಗೆ ಕೈ ಕೊಟ್ಟ ಬೈಕ್ – ಮರಳಿ ತಂದು ಮಾಲೀಕನ ಮನೆ ಮುಂದೆ ನಿಲ್ಲಿಸಿದ

    ಕಳ್ಳನಿಗೆ ಕೈ ಕೊಟ್ಟ ಬೈಕ್ – ಮರಳಿ ತಂದು ಮಾಲೀಕನ ಮನೆ ಮುಂದೆ ನಿಲ್ಲಿಸಿದ

    ಕಲಬುರಗಿ: ಕಳ್ಳತನ ಮಾಡಿದ ಬೈಕ್ ಸ್ಟಾರ್ಟ್ ಆಗದಿದ್ದಾಗ ಕಳ್ಳನೊಬ್ಬ ಅದನ್ನು ವಾಪಸ್ ತಂದು ನಿಲ್ಲಿಸಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಆಗ್ರೋ ರಸ್ತೆಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಹಾದೇವ ಕಲಕೇರಿ ಎಂಬವರಿಗೆ ಸೇರಿದ ಬೈಕ್ ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕಳ್ಳತನ ಆಗಿತ್ತು. ನಂತರ ಒಂದಿಷ್ಟು ಮುಂದಕ್ಕೆ ತಳ್ಳಿಕೊಂಡು ಹೋದ ಕಳ್ಳನೋರ್ವ ಬೈಕ್ ಚಾಲನೆ ಮಾಡಲು ಪ್ರಯತ್ನಿಸಿದ್ದಾನೆ. ಬೈಕ್ ಸ್ಟಾರ್ಟ್ ಆಗದಿದ್ದಾಗ ವಾಪಸ್ ಅದನ್ನು ಬೈಕ್ ಮಾಲೀಕನ ಮನೆ ಮುಂದೆಯೇ ತಂದು ನಿಲ್ಲಿಸಿ ಹೋಗಿದ್ದಾನೆ.

    ಕಳ್ಳನ ಕರಾಮತ್ತು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಕಳೆದ ಕೆಲ ದಿನಗಳಿಂದ ಅಫಜಲಪುರ ಪಟ್ಟಣದಲ್ಲಿ ಬೈಕ್ ಗಳ ಕಳ್ಳತನಗಳು ಮರುಕಳಿಸುತ್ತಿದ್ದು, ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಡ್ ಕೆಳಗೆ ಸುರಂಗ ಮಾರ್ಗ – ವೀಡಿಯೋ ವೈರಲ್

  • ಅಂತರ್‌ಜಿಲ್ಲಾ ಮೊಬೈಲ್ ಫೋನ್ ಕಳ್ಳರ ಬಂಧನ

    ಅಂತರ್‌ಜಿಲ್ಲಾ ಮೊಬೈಲ್ ಫೋನ್ ಕಳ್ಳರ ಬಂಧನ

    ಹುಬ್ಬಳ್ಳಿ: ವಿವಿಧ ಕಂಪನಿಯ ಬೆಲೆಬಾಳುವ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರವೀಂದ್ರ ಬಸವರಾಜ ಭೋವಿ, ರಂಗಪ್ಪ ತಿಮ್ಮಣ್ಣ ಭೋವಿ ಹಾಗೂ ತುಮಕೂರು ಜಿಲ್ಲೆಯ ಪಾವಗಡದ ರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ.

    ಬಂಧಿತರಿಂದ 22 ವಿವಿದ ಕಂಪನಿಯ, 2,78,000 ರೂ. ಬೆಲೆಬಾಳುವ ಇತರೆ ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣಗಳನ್ನು ಭೇದಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ  ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರ ಲಾಬೂರಾಮ್ ಶ್ಲಾಘಿಸಿದ್ದಾರೆ.

  • ಜೈಲಿನಿಂದ ಬಂದ ದಿನವೇ ದೇವಾಲಯದ ಹುಂಡಿಗೆ ಕನ್ನ ಹಾಕಿದ ಖದೀಮ ಅರೆಸ್ಟ್

    ಜೈಲಿನಿಂದ ಬಂದ ದಿನವೇ ದೇವಾಲಯದ ಹುಂಡಿಗೆ ಕನ್ನ ಹಾಕಿದ ಖದೀಮ ಅರೆಸ್ಟ್

    – ತ್ರಿಶೂಲದಿಂದ ಹುಂಡಿ ಬೀಗ ಮುರಿದು ಕಳ್ಳತನ

    ಮಡಿಕೇರಿ: ಮೈಗಂಟಿಸಿಕೊಂಡ ಚಾಳಿ ಸುಟ್ರೂ ಹೋಗಲ್ಲಾ ಈ ಮಾತಿಗೆ ಪುಷ್ಠಿ ನೀಡುವಂತೆ ಕಳ್ಳನೊಬ್ಬ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ದೇವಾಲಯಕ್ಕೆ ಕನ್ನ ಹಾಕಿ ಸಿಕ್ಕಿ ಬಿದ್ದಿರುವ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದಲ್ಲಿ ನಡೆದಿದೆ.

    ಬಂಧಿತ ಆರೋಪಿ ಕಾರ್ತಿಕ್ ಆಗಿದ್ದಾನೆ. ಈತ ಈ ಹಿಂದೆ ಅಮ್ಮತ್ತಿಯ ಪುರೋಹಿತರೊಬ್ಬರ ಮನೆಗೆ ನುಗ್ಗಿ ಕಳ್ಳತನ ಮಾಡಿದ ಆರೋಪದಡಿ ಕಾರ್ತಿಕ್ ಬಂಧಿಯಾಗಿದ್ದ. ಇದೀಗ ಮತ್ತೆ ದೇವಾಲಯದ ಹುಂಡಿಗೆ ಕೈ ಹಾಕುವ ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ.

    ಕಳ್ಳತನದ ಆರೋಪದಡಿ ಕಾರ್ತಿಕ್ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಬಂಧಿಯಾಗಿದ್ದ ಆತ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರ ಬಂದವನೇ ಹೊಸ ಜೀವನದ ಕನಸು ಕಾಣುವ ಬದಲು ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮದ ಶ್ರೀಭಗವತಿ ದೇವಾಲಯಕ್ಕೆ ಕನ್ನ ಹಾಕುವ ಸ್ಕೆಚ್ ಹಾಕಿದ್ದಾನೆ.

    ರಾತ್ರಿ ದೇವಾಲಯದ ಆವರಣಕ್ಕೆ ನುಗ್ಗಿದ ಚೋರ ಅಲ್ಲಿದ್ದ ತ್ರಿಶೂಲದಿಂದ ಹುಂಡಿಯ ಬೀಗವನ್ನು ಮುರಿದು ಸಾವಿರಾರು ರೂ. ಕಾಣಿಕೆ ಹಣವನ್ನು ಚೀಲದಲ್ಲಿ ತುಂಬಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದನು. ಆದರೆ ಪೊಲೀಸರಿಗೆ ಕಳ್ಳನನ್ನು ಪತ್ತೆ ಹಚ್ಚುವ ಕಾರ್ಯ ಕಷ್ಟವೆನಿಸಲಿಲ್ಲ. ದೇವಾಲಯದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳಿಗೆ ದೇವಾಲಯಕ್ಕೆ ಕನ್ನ ಹಾಕಿದವನು ಜೈಲಿನಿಂದ ಬಿಡುಗಡೆಯಾದ ಕಾರ್ತಿಕ್ ಎನ್ನವುದು ಖಾತ್ರಿಯಾಗಿದೆ.

    ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಬಳಿಯಿಂದ ಸುಮಾರು 5,600 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇವಾಲಯ ಆಡಳಿತ ಮಂಡಳಿಗಳು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

  • ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ- ಖತರ್ನಾಕ್ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

    ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ- ಖತರ್ನಾಕ್ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

    ಕೋಲಾರ: ಖತರ್ನಾಕ್ ಕಳ್ಳನೊರ್ವ ಬನಿಯನ್ ಧರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಬಂದು ಥೇಟ್ ಸಿನಿಮಾ ಸ್ಟೈಲ್‍ನಲ್ಲಿ ಎರಡು ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ. ಕತರ್ನಾಕ್ ಕಳ್ಳನ ಕೈಚಳಕ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿಸಿ ಟಿವಿ ಆಧರಿಸಿ ಕಳ್ಳನ ಪತ್ತೆಗೆ ಕೋಲಾರ ನಗರ ಠಾಣೆ ಪೊಲೀಸರು ಮುಂದಾಗಿದ್ದಾರೆ.

    ಹೌದು ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ಕಳ್ಳತನವಾಗಿದೆ. ಅಂಗಡಿಗಳ ಶಟರ್ ಮುರಿದು ಕಳ್ಳತನ ಮಾಡಿರುವ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಾಳಮ್ಮ ಗುಡಿಯಲ್ಲಿರುವ ಸೂರ್ಯ ಗಾಮೆರ್ಂಟ್ಸ್ ಹಾಗೂ ಮದೀನಾ ಹಾರ್ಡ್ ವೇರ್ ಶಾಪ್‍ನಲ್ಲಿ ಕಳವು ಮಾಡಿರುವ ಆರೋಪಿ, ಸೂರ್ಯ ಗಾಮೆರ್ಂಟ್ಸ್‍ನಲ್ಲಿ 17 ಸಾವಿರ ರೂಪಾಯಿ ನಗದು ಹಾಗೂ ಲಕ್ಷಾಂತರ ರೂಪಾಯಿ ಬೆಲೆಯ ಬಟ್ಟೆ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

    ಮದೀನಾ ಹಾರ್ಡ್‍ವೇರ್ ಶಾಪ್‍ನಲ್ಲಿ ಟೂಲ್ ಕಿಟ್‍ಗಳನ್ನ ತೆಗೆದುಕೊಂಡು ಹೋಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಗಲ್‍ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ನಾರಾಯಣಗುರು ಮಂದಿರಕ್ಕೆ ನುಗ್ಗಿ ಹುಂಡಿ ಹೊತ್ತೊಯ್ದ ಕಳ್ಳರು

    ನಾರಾಯಣಗುರು ಮಂದಿರಕ್ಕೆ ನುಗ್ಗಿ ಹುಂಡಿ ಹೊತ್ತೊಯ್ದ ಕಳ್ಳರು

    – ಪೊಲೀಸರಿಗೆ ಸವಾಲಾಗಿದೆ ಕೇಸ್

    ಉಡುಪಿ: ಇಲ್ಲಿನ ನಾರಾಯಣಗುರು ಮಂದಿರಕ್ಕೆ ಕಳ್ಳರು ನುಗ್ಗಿ ಹುಂಡಿ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಇಲ್ಲದ ಕಾರಣ ಕಳ್ಳರ ಪತ್ತೆ ಪೊಲೀಸರಿಗೆ ಸವಾಲಾಗಿದೆ.

    ಕಾಪು ತಾಲೂಕು ಮೂಳೂರು ಬಿಲ್ಲವ ಸಂಘದ ನಾರಾಯಣಗುರು ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯನ್ನು ಒಡೆದು ನಗದು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅರ್ಚಕರು ಬೆಳಗ್ಗೆ ಪೂಜೆಗಾಗಿ ಆಗಮಿಸಿದ ವೇಳೆ ವಿಚಾರ ಬಯಲಾಗಿದೆ.

    ನಾರಾಯಣ ಗುರು ಸಂಘದ ಪ್ರಮುಖರು ಕಾಪು ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದ್ದಾರೆ. ಬೆರಳಚ್ಚು ತಜ್ಞರು ಕಳ್ಳರ ಜಾಡು ಹಿಡಿಯಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶ್ವಾನದಳ ಸ್ಥಳಕ್ಕೆ ಬರುವ ಸಾಧ್ಯತೆ ಇದ್ದು, ಸುತ್ತಮುತ್ತಲಿನ ನಿವಾಸಿಗಳ ಬಳಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

    ಸ್ಥಳೀಯ ಬಿಲ್ಲವ ಸಮುದಾಯದ ಮುಂದಾಳುಗಳಾದ ಪ್ರಮೋದ್ ಮತ್ತು ಪುರುಷೋತ್ತಮ್ ಮಾತನಾಡಿ, ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಬೇಕು. ಹುಂಡಿಯಲ್ಲಿ ಇದ್ದ ಹಣವು ಭಕ್ತರು ಗುರುಗಳಿಗೆ ಸಮರ್ಪಿಸಿದ್ದು, ಹಣದಲ್ಲಿ, ಹರಕೆ ರೂಪದಲ್ಲಿ ಹಾಕಿದ್ದ ವಸ್ತುಗಳಲ್ಲಿ ಭಕ್ತರ ಭಾವನೆ ಇದೆ. ಮಂದಿರಕ್ಕೆ ಸಿಸಿಟಿವಿ ಅಳವಡಿಸುವ ಅವಶ್ಯಕತೆ ಇದೆ ಎಂದರು.

  • ಕಾರು ಕದ್ದು ಮಹಿಳೆಗೆ ಉಪದೇಶ ಮಾಡಿದ ಖತರ್ನಾಕ್ ಕಳ್ಳ

    ಕಾರು ಕದ್ದು ಮಹಿಳೆಗೆ ಉಪದೇಶ ಮಾಡಿದ ಖತರ್ನಾಕ್ ಕಳ್ಳ

    ವಾಷಿಂಗ್ಟನ್: ರಸ್ತೆಯಲ್ಲಿ ಅನ್‍ಲಾಕ್ ಮಾಡಿದ್ದ ಕಾರಿನಲ್ಲಿ ಕುಳಿತಿದ್ದ ಮಗು ಮತ್ತು ಕಾರನ್ನು ಕದ್ದು ಕಳ್ಳ ಪರಾರಿಯಾಗಿದ್ದಾನೆ. ಬಳಿಕ ಮಗುವನ್ನು ಹಿಂದಿರುಗಿಸುವ ವೇಳೆ ಮಹಿಳೆಗೆ ಕಳ್ಳ ಉಪದೇಶ ಮಾಡಿರುವ ಘಟನೆ ಯುನೈಟೆಡ್ ಸ್ಟೇಟ್‍ನ ಒರೆಗಾನ್ ನಲ್ಲಿ ನಡೆದಿದೆ. ಇದೀಗ ಒರೆಗಾನ್ ಅಧಿಕಾರಿಗಳು ಕಳ್ಳನನ್ನು ಹುಡುಕಾಡುತ್ತಿದ್ದಾರೆ.

    ಮಾಂಸದ ಅಂಗಡಿ ಎದುರು ಕಾರನ್ನು ನಿಲ್ಲಿಸಿದ್ದಾಳೆ. ಅಲ್ಲದೆ ನಾಲ್ಕು ವರ್ಷದ ಪುಟ್ಟ ಟಿನ್ನಿ ಟಾಟ್ ಮಗುವನ್ನು ಕಾರಿನಲ್ಲಿ ಬಿಟ್ಟು ಸಮೀಪದ ಅಂಗಡಿಗೆ ಮಹಿಳೆ ತೆರಳಿದ್ದಾಳೆ. ಇದೇ ವೇಳೆ ಶಂಕಿತನೊಬ್ಬ ಅನ್‍ಲಾಕ್ ಮಾಡಿದ ಕಾರಿನೊಳಗೆ ಹತ್ತಿ ಶೀಘ್ರವಾಗಿ ಅರ್ಧ ಬ್ಲಾಕ್ ಲೂಪ್ ಮಾಡಿ ವಾಹವನ್ನು ಚಲಾಯಿಸಿದ್ದಾನೆ. ಕಾರಿನೊಳಗೆ ಮಗು ಇದೆ ಎಂಬುದನ್ನು ತಿಳಿದ ಬಳಿಕ ಮಿನಿ-ಮಾರ್ಟ್ ಸಮೀಪ ಮಗುವನ್ನು ಮಹಿಳೆಗೆ ಹಿಂದಿರುಗಿಸಿದ್ದಾನೆ.

    ಅರ್ಧ ದಾರಿಗೆ ಹೋದ ನಂತರ ಮಗು ಕಾರಿನಲ್ಲಿ ಇದೆ ಎಂದು ತಿಳಿದ ಕಳ್ಳ ಮಗುವನ್ನು ಮಹಿಳೆಗೆ ಹಿಂದಿರುಗಿಸುವ ಸಲುವಾಗಿ ಮತ್ತೆ ಅದೇ ಸ್ಥಳಕ್ಕೆ ಬಂದ್ದಾನೆ. ಆನ್ ಲಾಕ್ ಮಾಡಿದ ಕಾರಿನಲ್ಲಿ ಮಗುವನ್ನು ಒಬ್ಬಂಟಿಯಾಗಿ ಹಾಗೆಲ್ಲಾ ಬಿಡಬಾರದು ಎಂದು ಮಹಿಳೆಗೆ ಉಪದೇಶ ನೀಡಿ ಮಗುವನ್ನು ಎತ್ತಿಕೊಳ್ಳುವಂತೆ ಆದೇಶಿಸಿದ್ದಾನೆ. ಅಲ್ಲದೆ ಈ ವಿಚಾರವಾಗಿ ಪೊಲೀಸರಿಗೆ ಕರೆ ಮಾಡಿ ತಿಳಿಸುವುದಾಗಿ ಕಳ್ಳನೇ ಆಕೆಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಅಧಿಕಾರಿ ಮ್ಯಾಟ್ ಹೆಂಡರ್ಸನ್ ಹೇಳಿದ್ದಾರೆ.

    ವರದಿಯಲ್ಲಿ ಪೊಲೀಸರು ಇದರಲ್ಲಿ ಮಹಿಳೆಯ ಅಪರಾಧವೇನಿಲ್ಲ. ಮಗು ಗಲಾಟೆ ಮಾಡುತ್ತಿದೆ ಎಂದು ಕಾರಿನಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಆದರೆ ಅವಳು ಕಾರಿನ ಕೀಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಬೇಕಿತ್ತು ಎಂದು ತಿಳಿಸಿದರು.

    ಬಳಿಕ 10 ಮೈಲಿ ದೂರದ ಪೋರ್ಟ್ ಲಾಂಡ್ ಬಳಿ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದು, ತನಿಖೆ ವೇಳೆ ಕಳ್ಳನಿಗೆ ಸುಮಾರು 20 ರಿಂದ 30 ವರ್ಷ ವಯಸ್ಸಾಗಿದೆ. ಹಲವು ಬಣ್ಣಗಳನ್ನು ಹೊಂದಿರುವ ಮಾಸ್ಕ್ ಧರಿಸಿದ್ದನು ಎಂದು ತಿಳಿದು ಬಂದಿದ್ದು, ಸದ್ಯ ಪೊಲೀಸರು ಕಳ್ಳನ ಹುಡುಕಾಟದಲ್ಲಿದ್ದಾರೆ.

  • ಜೈಲಿನಲ್ಲಿ ಸಮೋಸಾ ಕದ್ದು ಗುದನಾಳದಲ್ಲಿಟ್ಕೊಂಡ- ವ್ಯಕ್ತಿಯ ಉತ್ತರಕ್ಕೆ ದಂಗಾದ ಪೊಲೀಸರು!

    ಜೈಲಿನಲ್ಲಿ ಸಮೋಸಾ ಕದ್ದು ಗುದನಾಳದಲ್ಲಿಟ್ಕೊಂಡ- ವ್ಯಕ್ತಿಯ ಉತ್ತರಕ್ಕೆ ದಂಗಾದ ಪೊಲೀಸರು!

    ಲಂಡನ್: ದೇಹದ ವಿವಿಧ ಭಾಗಗಳಲ್ಲಿ ಖದೀಮರು ಚಿನ್ನ ಸಾಗಾಟ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ, ಜೈಲಿನಲ್ಲಿ ತನಗೆ ನೀಡುವ ಆಹಾರ ಸಾಲುತ್ತಿಲ್ಲವೆಂದು ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟುಕೊಂಡು ಸಿಕ್ಕಿಬಿದ್ದ ಅಚ್ಚರಿಯ ಘಟನೆ ನಡೆದಿದೆ.

    ಹೌದು. ಇಂಗ್ಲೆಂಡ್‍ನ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು 2020ರಲ್ಲಿ ಬಂಧಿಸಿದ್ದವರ ಪಟ್ಟಿಯನ್ನು ತರಿಸಿ ಪರಿಶೀಲನೆ ನಡೆಸಿದರು. ವಿಚಿತ್ರ ಎಂದರೆ ಅದರಲ್ಲಿ ವ್ಯಕ್ತಿ ಒಬ್ಬ ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಿಕ್ಕಿಬಿದ್ದವನಾಗಿದ್ದಾನೆ.

    ಬರ್ಮಿಂಗ್‍ಹ್ಯಾಮ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾಗ ಶಂಕಿತನೊಬ್ಬ ತನ್ನ ಒಳ ಉಡುಪಿನಲ್ಲಿ ಸಮೋಸಾ ಇರಿಸಿಕೊಂಡಿದ್ದಾನೆ. ಈ ವೇಳೆ ಆತನನ್ನು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಪ್ರಶ್ನೆ ಮಾಡಿದಾಗ, ಜೈಲಿನಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟವಾಗಿಲ್ಲ. ಆ ಆಹಾರದಿಂದ ನನಗೆ ತೃಪ್ತಿಲ್ಲ. ಅಲ್ಲದೇ ಅವರು ನೀಡುತ್ತಿರುವ ಆಹಾರ ನನಗೆ ಸಾಲುತ್ತಿಲ್ಲ ಎಂದು ಸಮೋಸಾವನ್ನು ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ವ್ಯಕ್ತಿಯ ಉತ್ತರ ಕೇಳಿ ಪೊಲೀಸರೇ ಒಂದು ಬಾರಿ ದಂಗಾಗಿ ಹೋಗಿದ್ದಾರೆ.

    ಈ ಕುರಿತಂತೆ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸ್ ಕ್ರಿಮಿನಲ್ ಜಸ್ಟೀಸ್ ವಿಭಾಗದ ಇನ್ಸ್‍ಪೆಕ್ಟರ್ ಮಂಜ್ ಅಹಿರ್ ಮಾತನಾಡಿ, ನಾವು ಎಷ್ಟೋ ರೀತಿಯ ಘಟನೆಗಳನ್ನು ನೋಡಿದ್ದೇವೆ. ಆದ್ರೆ ನನ್ನ ಮನಸ್ಸಿಗೆ ನಾಟಿರುವ ಘಟನೆ ಅಂದ್ರೆ ಒಬ್ಬ ವ್ಯಕ್ತಿಯನ್ನು ಪರಿಶೀಲನೆ ಮಾಡಿದಾಗ ಆತ ತನ್ನ ಪೃಷ್ಠದ ನಡುವೆ ಸಮೋಸವನ್ನು ಅಡಗಿಸಿಟ್ಟುಕೊಂಡ ಘಟನೆ. ಆಹಾರವು ಪ್ರತಿಯೊಬ್ಬರಿಗೂ ಮುಖ್ಯ. ತನ್ನ ಹೊಟ್ಟೆಗಾಗಿ ಆತ ಸಮೋಸವನ್ನು ಕದಿಯಲು ಬಯಸಿದ್ದಾನೆ ಎಂದು ಹೇಳಿದರು.

    ಹೀಗೆ ಈ ವ್ಯಕ್ತಿ ಸಮೋಸಾವನ್ನು ಕದ್ದರೆ ಮತ್ತೊಬ್ಬ ವ್ಯಕ್ತಿ ವೆಸ್ಟ್ ಮಿಡ್ಲ್ಯಾಂಡ್ಸ್ ನ ಓಲ್ಡ್‍ಬರಿಯ ಕಸ್ಟಡಿಯಲ್ಲಿದ್ದಾಗ ಸಿಬ್ಬಂದಿಯಿಂದ ತಾನು ಪಡೆದ ಸೌಲಭ್ಯ ಹಾಗೂ ಆರೈಕೆಗಾಗಿ ಧನ್ಯವಾದ ಹೇಳಲು ಒಂದು ಚಾಕ್ಲೆಟ್ ಡಬ್ಬವನ್ನು ಅಧಿಕಾರಿಗಳಿಗೆ ಖರೀದಿಸಿ ನೀಡಿದ್ದಾನೆ.