Tag: thief

  • ಶನಿ ಮಹಾತ್ಮನ ಗೋಲಕ ಕದ್ದ – ಸಿಸಿಟಿವಿಯ ವಕ್ರದೃಷ್ಟಿಗೆ ಬಿದ್ದ

    ಶನಿ ಮಹಾತ್ಮನ ಗೋಲಕ ಕದ್ದ – ಸಿಸಿಟಿವಿಯ ವಕ್ರದೃಷ್ಟಿಗೆ ಬಿದ್ದ

    ಚಾಮರಾಜನಗರ: ಶನಿ ಮಹಾತ್ಮ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ಪ್ರವೇಶಿಸಿ ಗೋಲಕ ಕದ್ದಿದ್ದ ಕಳ್ಳನೋರ್ವ ಸಿಸಿಟಿವಿ ಕ್ಯಾಮೆರಾ ಮೂಲಕ ಸಿಕ್ಕಿ ಹಾಕಿಕೊಂಡು ಜೈಲು ಪಾಲಾಗಿದ್ದಾನೆ.

    Thief

    ಚಾಮರಾಜನಗರದ ಉಪ್ಪಾರ ಬಡಾವಣೆಯ ನಿವಾಸಿ ಮೋಹನ್‍ಕುಮಾರ್ (40) ಆರೋಪಿ ಎಂದು ಗುರುತಿಸಲಾಗಿದ್ದು, ಈತ ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರೀ ಚಾಮರಾಜೇಶ್ವರ ದೇವಸ್ಥಾನದ ಹಿಂಭಾಗ ಇರುವ ಶನಿ ದೇವರ ದೇವಸ್ಥಾನಕ್ಕೆ ಸೆಪ್ಟೆಂಬರ್ 8ರ ರಾತ್ರಿ ಬಂದಿದ್ದಾನೆ. ನಂತರ ಕಟಿಂಗ್ ಪ್ಲೇಯರ್ ಬಳಸಿ ಕಂಬಿ ಕಿತ್ತು ಗೋಲಕದಲ್ಲಿದ್ದ ಹಣವನ್ನು ದೋಚಿದ್ದಾನೆ. ಇದನ್ನೂ ಓದಿ: ಬೆರಗುಗೊಳಿಸುವಂತಹ ಮಹಿಳೆಯರ ಟಾಪ್ 5 ಬ್ಯಾಕ್ ನೆಕ್ ಡಿಸೈನ್ ಬ್ಲೌಸ್‍ಗಳು!

    Thief

    ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿಗೆ ಬೆಳಗ್ಗೆ ತಿಳಿದುಬಂದಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಮೋಹನ್ ಕುಮಾರ್ ಕಳ್ಳತನ ಮಾಡಿರುವ ಸತ್ಯ ಬಹಿರಂಗಗೊಂಡಿದೆ ಮತ್ತು ಸೆಪ್ಟೆಂಬರ್ 9 ರಂದು ಪಟ್ಟಣ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರು

    ಮೋಹನ್ ಕುಮಾರ್ ಕದ್ದಿದ್ದ ಗೋಲಕದ ಬೀಗ ಹೊಡೆಯಲಾಗದೇ ರಸ್ತೆಯಲ್ಲಿಯೇ ಎಸೆದು ಹೋಗಿದ್ದ. ಈ ಮಾಹಿತಿ ಪಡೆದ ಪೊಲೀಸರು ಗೋಲಕ ಪತ್ತೆ ಹಚ್ಚಿದ್ದಾರೆ. ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ವೇಳೆ ಮೋಹನ್ ಕುಮಾರ್ ಲಾಕ್‍ಡೌನ್‍ನಿಂದಾಗಿ ಜೇಬಲ್ಲಿ ಹಣವಿಲ್ಲದೆ ದೇವಸ್ಥಾನದ ಗೋಲಕ ಕದ್ದಿದ್ದೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

  • ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅಂದರ್ – ಆರು ಬೈಕ್ ವಶ

    ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅಂದರ್ – ಆರು ಬೈಕ್ ವಶ

    ನೆಲಮಂಗಲ: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದು, ಆರು ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ದಿನಕ್ಕೊಂದು ಬೈಕ್ ನಲ್ಲಿ ಓಡಾಡುವ ಬಯಕೆ, ಎಲ್ಲರಂತೆ ಬಿಂದಾಸ್ ಆಗಿ ಐಷಾರಾಮಿ ಜೀವನ ನಡೆಸುವ ಕಾಯಾಲಿ. ಇನ್ನೂ ಮೀಸೆ ಕೂಡ ಚಿಗುರದ ರಾಮನಗರ ಜಿಲ್ಲೆಯ ಸೋಲೂರು ಹೋಬಳಿಯ ರಂಗೇನಹಳ್ಳಿಯ 18 ವರ್ಷದ ಮನೋಜ್ ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಮನೋಜ್ ಬೈಕ್ ಕದ್ದು, ಸುತ್ತಾಡುವುದನ್ನು ತನ್ನ ಶೋಕಿಗೆ ಆಯ್ಕೆ ಮಾಡಿಕೊಂಡಿದ್ದ. ಇದನ್ನೂ ಓದಿ: ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ

    ನೆಲಮಂಗಲ ಟೌನ್ ಪೊಲೀಸ್ ಅಧಿಕಾರಿ ಕುಮಾರ್ ನೇತೃತ್ವದ ತಂಡ ಸುಮಾರು ದಿನಗಳಿಂದ ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿ ಪಡೆದು ಆರೋಪಿ ಮನೋಜ್ ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದು 1074 ಪಾಸಿಟಿವ್, 4 ಸಾವು – ಪಾಸಿಟಿವಿಟಿ ರೇಟ್ 0.63%ಕ್ಕೆ ಇಳಿಕೆ

    ಬಂಧಿತನಿಂದ 6 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

  • ಮಾತನಾಡುವುದಾಗಿ ವಂಚಿಸಿ ಮೊಬೈಲ್ ಜೊತೆ ಎಸ್ಕೇಪ್ ಆಗಿದ್ದವನಿಗೆ ಬಿತ್ತು ಗೂಸಾ

    ಮಾತನಾಡುವುದಾಗಿ ವಂಚಿಸಿ ಮೊಬೈಲ್ ಜೊತೆ ಎಸ್ಕೇಪ್ ಆಗಿದ್ದವನಿಗೆ ಬಿತ್ತು ಗೂಸಾ

    ಗದಗ: ತಂದೆ, ತಾಯಿ, ಅಣ್ಣ ಅಥವಾ ತಂಗಿಗೆ ಮಾತನಾಡಿ ಕೊಡುವುದಾಗಿ ವಂಚಿಸಿ ಮೊಬೈಲ್ ಸಮೇತ ಎಸ್ಕೇಪ್ ಆಗುತ್ತಿದ್ದ ಖದೀಮನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಕಲಾಮಂದಿರ ಬಳಿ ನಡೆದಿದೆ.

    Mobile Thief

    ನಗರದ ಎಸ್.ಎಂ ಕೃಷ್ಣಾ ಕಾಲೋನಿ ನಿವಾಸಿ ಯಮನೂರ ಗುಳ್ಳೆದಗುಡ್ಡ ಎಂಬ ಕಳ್ಳನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈತ 2 ದಿನದ ಹಿಂದೆ ನಗರದ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಬಳಿಯ ಉರ್ದು ಶಾಲೆಯ ಹತ್ತಿರ ಹೋಟೆಲ್ ವೊಂದರ ಮಹಿಳೆ ಬಳಿ ಮೊಬೈಲ್ ಪಡೆದಿದ್ದಾನೆ. ತಾಯಿ ಫೋನ್ ಮಾಡಬೇಕು, ಸ್ವಲ್ಪ ಫೋನ್ ಕೊಡಿ ಎಂದು ಕೇಳಿದ್ದಾನೆ. ಹೀಗಾಗಿ ಕರುಣೆಯಿಂದ ಮಹಿಳೆ ಮೊಬೈಲ್ ಕೊಟ್ಟ ಕೂಡಲೇ ಮಾತನಾಡುತ್ತಾ ಹಾಗೇ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ ಹೊದಿಸಿದ ಕುಟುಂಬಸ್ಥರ ವಿರುದ್ಧ FIR

    Mobile Thief

    ಇಂದು ಮಹಿಳೆ ಬೇರೊಂದು ಮೊಬೈಲ್ ಹಾಗೂ ಸಿಮ್ ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ಅಚಾನಕ್ ಆಗಿ ಕಳ್ಳ ಸಿಕ್ಕಿ ಹಾಕಿಕೊಂಡಿದ್ದಾನೆ. ಸಿಕ್ಕ ಮೊಬೈಲ್ ಖದೀಮನಿಗೆ ಮಹಿಳೆ ಹಿಡಿದು ಬಿಸಿ, ಬಿಸಿ ಕಜ್ಜಾಯ ನೀಡಿದ್ದಾಳೆ. ಎಸ್ಕೇಪ್ ಆಗುತ್ತಿದ್ದ ಕಳ್ಳನನ್ನು ಸ್ಥಳೀಯರು ಹಿಡಿದು ನಂತರ ಗದಗ ಶಹರ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಈ ವಂಚಕ ಹೀಗೆ ಅನೇಕರಿಗೆ ವಂಚಿಸಿ, ಮೊಬೈಲ್ ಎಸ್ಕೇಪ್ ಮಾಡುತ್ತಿದ್ದ ಎಂಬ ಸತ್ಯ ತಿಳಿದು ಬಂದಿದೆ. ಸದ್ಯ ಆರೋಪಿ ಗದಗದ ಶಹರ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ:ಶಾರೂಖ್, ನಯನ ತಾರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ರಾಣಾ ದಗ್ಗುಬಾಟಿ

  • ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ-ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಖದೀಮರ ಕೃತ್ಯ

    ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ-ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಖದೀಮರ ಕೃತ್ಯ

    ಶಿವಮೊಗ್ಗ: ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನಿಸಿದ ಘಟನೆ ನಗರದ ಕುವೆಂಪು ನಗರದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದಿದ್ದು, ಕಳ್ಳರು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಕುವೆಂಪು ನಗರದ ಮನೆಯೊಂದರಲ್ಲಿ ಮೂವರು ಖದೀಮರ ತಂಡವೊಂದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ್ದಾರೆ. ಮನೆಯ ಗೇಟ್ ತೆಗೆದುಕೊಂಡು ಒಳಗೆ ಪ್ರವೇಶಿಸಿ ಬಾಗಿಲು ತೆಗೆಯಲು ಯತ್ನಿಸಿದ್ದಾರೆ. ಆದರೆ ಬಾಗಿಲು ತೆಗೆಯಲು ಸಾಧ್ಯವಾಗದ ಕಾರಣ, ಹಗಲು ಹೊತ್ತು ಆಗಿದ್ದರಿಂದ ವಿಫಲ ಯತ್ನ ನಡೆಸಿ ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಅಡಿಕೆಗೆ ಬಂಪರ್ ಬೆಲೆ- ತೋಟದಲ್ಲಿಯೇ ಕಳ್ಳತನವಾಗುತ್ತಿದೆ ಅಡಿಕೆ

    ಮನೆಯ ಮಾಲೀಕರು ಮನೆಗೆ ವಾಪಾಸ್ ಬಂದ ನಂತರ ಸಿಸಿ ಕ್ಯಾಮರಾ ಪರಿಶೀಲಿಸಿದ ನಂತರ ಕಳ್ಳರು ಹೊಂಚು ಹಾಕಿದ ದೃಶ್ಯ ಬಹಿರಂಗವಾಗಿದೆ. ಈ ವಿಷಯ ಹೊರಗೆ ಬರುತ್ತಿದ್ದಂತೆ ಕುವೆಂಪು ನಗರ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಗಲು ಸಮಯದಲ್ಲಿಯೇ ಈ ರೀತಿ ಆದರೆ ಇನ್ನು ರಾತ್ರಿಯ ಸಮಯದಲ್ಲಿ ಹೇಗೆ ಎಂಬ ಭಯಭೀತಿಗೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಕಳೆದ ಆರು ತಿಂಗಳಲ್ಲಿ ಹಗಲಿನಲ್ಲಿಯೇ ಹಲವು ಕಳ್ಳತನ ಪ್ರಕರಣ ನಡೆದಿರುವ ಘಟನೆ ವರದಿಯಾಗಿವೆ. ಇಂತಹ ಬಡಾವಣೆಗಳಲ್ಲಿ ಪೊಲೀಸರು ಹೆಚ್ಚು ಗಸ್ತು ತಿರುಗುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

  • ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

    ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

    ಗದಗ: ದೇವಸ್ಥಾನಗಳಿಗೆ ಕನ್ನ ಹಾಕಿ ದೇವರುಗಳ ಮೂರ್ತಿ ಹಾಗೂ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಆಗಸ್ಟ್ 5 ಮತ್ತು 6 ರಂದು ಜಿಲ್ಲೆ ರೋಣ ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ ಹಾಗೂ ಬೆಳವಣಿಕಿ ಗ್ರಾಮದೇವತೆ ಕನ್ನಿಕಾ ಪರಮೇಶ್ವರಿ ದೇವಸ್ಥಾನಗಳಲ್ಲಿ ಸರಣಿ ಕಳ್ಳತನವಾಗಿತ್ತು. ಈ ಎರಡೂ ಕಳ್ಳತನವನ್ನು ಆರೋಪಿ ಸುಭಾಷ್ ಹರಣಶಿಕಾರಿ ಮಾಡಿದ್ದ ಎನ್ನಲಾಗುತ್ತಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂದೆಯೇ ಯುವಕನ ಮೇಲೆ ಹಲ್ಲೆ – 6 ಜನರ ಬಂಧನ

    ಖದೀಮ ಸುಭಾಷ್ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಿವಾಸಿ ಎನ್ನಲಾಗುತ್ತಿದೆ. ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅದೂ ದೊಡ್ಡ ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದ ಎನ್ನಲಾಗುತ್ತಿದೆ. ಹೀಗಾಗಿಯೇ ರೋಣ ವೀರಭದ್ರೇಶ್ವರನ ಬೆಳ್ಳಿ ಕೀರಿಟ, ಮೂರ್ತಿ, 4 ಅಡಿ 2 ಬೆತ್ತ ಹಾಗೂ ಕನ್ನಿಕಾ ಪರಮೇಶ್ವರಿಯ ಚಿನ್ನದ ಆಭರಣಗಳು, ಪೂಜೆಯ ಹಿತ್ತಾಳೆ, ತಾಮ್ರದ ಸಾಮಗ್ರಿಗಳು ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದ.

    ಈ ಬಗ್ಗೆ ರೋಣ ಸಿ.ಪಿ.ಐ ನೇತೃತ್ವದ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಸದ್ಯ ಆರೋಪಿಯನ್ನು ರೋಣ ಪೊಲೀಸರು ಬಂಧಿಸಿದ್ದಾರೆ. ಆದರೆ ಇವನ ಹಿಂದೆ ಇನ್ನಷ್ಟು ಜನ ಇರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತೀಶ್.ಎನ್ ತಿಳಿಸಿದ್ದಾರೆ.

  • ಬಸ್ ನಿಲ್ದಾಣದಲ್ಲಿ ಕಳ್ಳನ ಕೈಚಳಕ – ಕುಳಿತಿದ್ದ ಮಹಿಳೆ ಮಾಂಗಲ್ಯ ಕಿತ್ತ ಖದೀಮ

    ಬಸ್ ನಿಲ್ದಾಣದಲ್ಲಿ ಕಳ್ಳನ ಕೈಚಳಕ – ಕುಳಿತಿದ್ದ ಮಹಿಳೆ ಮಾಂಗಲ್ಯ ಕಿತ್ತ ಖದೀಮ

    ವಿಜಯಪುರ: ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತಿದ್ದ ಮಹಿಳೆ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಮಹಿಳೆ ಪಕ್ಕದಲ್ಲಿಯೇ ಹೊಂಚು ಹಾಕಿ ನಿಂತು ಮಾಂಗಲ್ಯಸರ ಕಿತ್ತುಕೊಂಡು ಖದೀಮ ಓಡಿ ಹೋಗಿದ್ದಾನೆ.

    women chain

    ಕದೀಮನ ಕೃತ್ಯ ಬಸ್ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಅಲ್ಲದೇ ಈ ಘಟನೆ ಸಪ್ಟೆಂಬರ್ 1 ರಂದು ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಇದನ್ನೂ ಓದಿ: ರಸ್ತೆ ಅಪಘಾತ, ದೇವನಕಟ್ಟಿಯ ಯೋಧ ಮುಂಬೈನಲ್ಲಿ ಸಾವು- ಸ್ವಗ್ರಾಮದಲ್ಲಿ ಅಂತಿಮ ನಮನ

    women chain

    38 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು ರೇಣುಕಾ ಪಾಟೀಲ್ ಆಗಿದ್ದು, ಇವರು ತಾಳಿಕೋಟೆಯಿಂದ ಯಾದಗಿರಿಯ ದೋರಹಳ್ಳಿಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸದ್ಯ ಈ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

  • ಕಳ್ಳನೆಂದು ಭಾವಿಸಿ ಅಮಾಯಕ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

    ಕಳ್ಳನೆಂದು ಭಾವಿಸಿ ಅಮಾಯಕ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

    ವಿಜಯಪುರ: ಕಳ್ಳನೆಂದು ಭಾವಿಸಿ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು

    thief

    ಇತ್ತೀಚೆಗೆ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಕಳ್ಳರ ಹಾವಳಿ ಕಂಡು ಬಂದಿದೆ. ಕಳ್ಳತನ ಮಾಡುವುದಕ್ಕೆ ಖದೀಮರ ತಂಡವೇ ಗ್ರಾಮಕ್ಕೆ ಬಂದಿದ್ದು, ಐವರು ಕಳ್ಳರು ಗ್ರಾಮದಲ್ಲಿ ತಿರುಗಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಆದರೆ ಕಳ್ಳರ ಕೈಗೆ ಏನು ಸಿಗದೇ ಕೊನೆಗೆ ಗ್ರಾಮದಿಂದ ಕಾಲು ಕಿತ್ತಿದ್ದಾರೆ. ಈ ವೇಳೆ ಕಳ್ಳರ ತಂಡದವನೆಂದು ಭಾವಿಸಿ ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಏಕಾಏಕಿ ಥಳಿಸಿ ನಂತರ ಆತನನ್ನು ಝಳಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    thief

    ಬಳಿಕ ಪೊಲೀಸರ ವಿಚಾರಣೆ ವೇಳೆ ವ್ಯಕ್ತಿ ಕಳ್ಳ ಅಲ್ಲ, ಬದಲಾಗಿ ಪೇಂಟರ್ ಎಂಬ ಸತ್ಯ ಬಹಿರಂಗಗೊಂಡಿದೆ. ಥಳಿತಕೊಳಗಾದ ವ್ಯಕ್ತಿ ಬಗ್ಗೆ ಮಾಹಿತಿ ಪಡೆದು ಕೊನೆಗೆ ಪೊಲೀಸರು ಬಿಟ್ಟು ಕಳಿಸಿದ್ದಾರೆ. ಇದೀಗ ಕಳ್ಳರ ಓಡಾಟದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ:ನೀನು ಹುಟ್ಟಿದ್ಮೇಲೆ ಸೌಂದರ್ಯ ಹಾಳಾಯ್ತು – ಚಪ್ಪಲಿಯಿಂದ ಮಗುವಿನ ಮೇಲೆ ತಾಯಿ ಹಲ್ಲೆ

  • ಇನ್ಸ್‌ಪೆಕ್ಟರ್‌ ಮಗನ ಸೈಕಲ್ ಕದ್ದ ಗ್ಯಾಂಗ್‍- ಜನ್ಮ ಜಾಲಾಡಿದ ಪೊಲೀಸರು

    ಇನ್ಸ್‌ಪೆಕ್ಟರ್‌ ಮಗನ ಸೈಕಲ್ ಕದ್ದ ಗ್ಯಾಂಗ್‍- ಜನ್ಮ ಜಾಲಾಡಿದ ಪೊಲೀಸರು

    ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಚಾಲಾಕಿ ಕಳ್ಳರ ಪುಡಿ ಗ್ಯಾಂಗೊಂದು ಪೊಲೀಸ್ ಇನ್ಸ್‌ಪೆಕ್ಟರ್‌ ಮಗನ ಸೈಕಲೊಂದನ್ನೇ ಕದ್ದೊಯ್ದಿದ್ದಾರೆ. ಪ್ರಕರಣ ಭೇದಿಸಿದ ಖಾಕಿ ಸೈಕಲ್ ಕಳ್ಳತನ ಗ್ಯಾಂಗ್‍ನ ಮೂವರನ್ನು ಬಂಧನ ಮಾಡಿದೆ. ಬಂಧಿತರು ಹಲವು ಸಮಯದಿಂದ ಈ ಸೈಕಲ್ ಕಳ್ಳತನವನ್ನೇ ಕಾಯಕವಾಗಿ ಮಾಡಿಕೊಂಡು ಬರ್ತಾ ಇದ್ದರು ಎಂದು ತನಿಖೆ ಸಂದರ್ಭ ಗೊತ್ತಾಗಿದೆ.

    ಬಂಧಿತರನ್ನು ಹಾವೇರಿ ಮೂಲದ ಹನುಮಂತ, ಶಿವಮೊಗ್ಗ ಮೂಲದ ಮಂಜುರಾಜ್, ಕುತ್ತಾರ್ ನಿವಾಸಿ ಶಂಕರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮಂಗಳೂರು ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಆ ಮೂವರು ಹೊರ ಜಿಲ್ಲೆಯ ಕಾರ್ಮಿಕರು ನಿಯತ್ತಾಗಿ ದುಡಿದು ಜೀವನ ಸಾಗಿಸುತ್ತಿದ್ದರು. ಆದರೆ ಕಳ್ಳತನ ಮಾಡಿ ಅಂದರ್ ಆಗಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಜೊತೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್

    ನಗರದ ಟ್ರಾಫಿಕ್ ಇನ್ಸ್‌ಪೆಕ್ಟರ್‌ರೊಬ್ಬರ ಪುತ್ರನ ಸೈಕಲ್ ಕದ್ದು ಇದೀಗ ತಗಲಾಕಿಕೊಂಡಿದ್ದಾರೆ. ಉರ್ವ ಸಮೀಪದ ಅಪಾಟ್ಮೆರ್ಂಟ್ ಒಂದರ ಕೆಲ ಭಾಗದಲ್ಲಿ ನಿಲ್ಲಿಸಿದ್ದ ಸೈಕಲನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು. ಕಳ್ಳತನದ ದೃಶ್ಯ ಸಿ.ಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಮೂವರನ್ನು ಬಂಧಿಸಿ, ಒಂಬತ್ತು ಸೈಕಲನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿ

    ಕಟ್ಟಡ ಕಾಮಗಾರಿ ಕೆಲಸಕ್ಕೆ ಅಪರೂಪಕ್ಕೆ ಹೋಗುತ್ತಿದ್ದರು. ಹೀಗಾಗಿ ಹಗಲು ಹೊತ್ತಿನಲ್ಲಿ ಇಸ್ಪೀಟ್ ಆಡುವುದು, ಪುಂಡು ಪೋಕರಿಗಳ ರೀತಿ ಓಡಾಟ ನಡೆಸಿ ರಾತ್ರಿ ವೇಳೆ ಎಣ್ಣೆ ಹೊಡೆದು ಮಲಗುವ ಕಾಯಕವನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದರು. ಮೋಜು ನಡೆಸುವುದಕ್ಕೆ ಹಣಕ್ಕಾಗಿ 20,30 ಸಾವಿರ ಬೆಲೆಯ ಸೈಕಲನ್ನು ಕದ್ದು 500, 1000 ರೂಪಾಯಿಗೆ ಮಾರಾಟ ಮಾಡುತಿದ್ರು. ಪ್ಲ್ಯಾಟ್ ಕೆಳಗೆ ನಿಲ್ಲಿಸುವ ಸೈಕಲ್‍ಗಳು ಇವರ ಟಾರ್ಗೆಟ್ ಆಗಿತ್ತು. ಸದ್ಯ ಒಂದು ಸೈಕಲ್ ಕಳ್ಳತನ ಪ್ರಕರಣ ಭೇದಿಸೋಕೆ ಹೋಗಿ ಒಂಬತ್ತು ಸೈಕಲ್ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ- 16 ಬೈಕ್ ವಶ

    ಸೈಕಲ್ ಮಾರಾಟದ ಸಂದರ್ಭ ಶುಭ್ರವಾದ ಬಟ್ಟೆ ಧರಿಸಿ ಹಣದ ಅಜೆರ್ಂಟ್ ಇದೆ ಎಂದು ನಂಬಿಸಿ ಸೈಕಲ್ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಕುಡಿದು ಮಜಾ ಮಾಡುತ್ತಿದ್ದರು. ಒಟ್ಟಿನಲ್ಲಿ ಇದೀಗ ಕಳ್ಳತನ ಮಾಡೋಕೆ ಹೋದ ಈ ಮೂವರು ಜೈಲು ಕಂಬಿ ಎಣಿಸುತ್ತಿದ್ದಾರೆ.

  • ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ- 16 ಬೈಕ್ ವಶ

    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ- 16 ಬೈಕ್ ವಶ

    – ಕಳ್ಳತನದ ಬೈಕ್ ಖರೀದಿಸಿದವರ ಮೇಲೂ ಕೇಸ್

    ಕೊಪ್ಪಳ: ಅಂತರ್ ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸಿದ್ದು, ಆರೋಪಿಯಿಂದ 16 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ವಿಜಯನಗರ ಜಿಲ್ಲೆಯ ವೆಂಕಟಾಪುರದ ಕೆ.ಮಂಜುನಾಥ ಬಂಧಿತ ಆರೋಪಿಯಾಗಿದ್ದಾನೆ. ವಾಹನಗಳ ತಪಾಸಣೆ ವೇಳೆ ಆರೋಪಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಅನುಮಾನಸ್ಪದವಾಗಿ ಓಡಿ ಹೋದ ವ್ಯಕ್ತಿಯನ್ನು ಬೆನ್ನತ್ತಿ ಹಿಡಿದು ವಿಚಾರಣೆ ಮಾಡಿದಾಗ ಬೈಕ್ ಕಳ್ಳತನ ಪ್ರಕರಣ ಹೊರ ಬಂದಿದೆ. ಇದನ್ನೂ ಓದಿ : KSRTC ಬಸ್‍ನಲ್ಲಿ ಕೋಳಿ ಪ್ರಯಾಣ- ಟಿಕೆಟ್ ಕೊಟ್ಟ ನಿರ್ವಾಹಕ

    ಬಂಧಿತ ಮಂಜುನಾಥನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೊಬ್ಬ ಆರೋಪಿ ಸಣ್ಣ ಬಸವನಗೌಡ ನನ್ನು ಹೊಸಪೇಟೆ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಸ್ನೇಹಿತ ಸಣ್ಣ ಬಸವನಗೌಡ ಜೊತೆ ಸೇರಿ ಕಳ್ಳತನ ಮಾಡಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ವಿವಿಧ ಕಡೆ ಒಟ್ಟು 16 ಬೈಕ್ ಮಾರಾಟ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.ಇದನ್ನೂ ಓದಿ : ರಶ್ಮಿಕಾ ಜೊತೆಗೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್

    ಕಳ್ಳತನ ಮಾಡಿರುವ ಬೈಕ್ ಎಂಬುದು ಗೊತ್ತಿದ್ದರೂ ಕಡಿಮೆ ಬೆಲೆಗೆ ವಾಹನ ಖರೀದಿ ಮಾಡಿದವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಪ್ಪಳ ನಗರ ಠಾಣೆ ಪೊಲೀಸರು ಸುಮಾರು 12 ಲಕ್ಷ ರೂಪಾಯಿ ಮೌಲ್ಯದ 16 ಬೈಕ್‍ಗಳನ್ನು ಖರೀದಿಸಿದ ವ್ಯಕ್ತಿಗಳಿಂದ ಜಪ್ತಿ ಮಾಡಿಕೊಂಡಿದ್ದಾರೆ.

    ಎಸ್‍ಪಿ ಟಿ.ಶ್ರೀಧರ ಅವರ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ಗೀತಾ ಬೆನಹಾಳ ನೇತೃತ್ವದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆ ಪಿಐ ಮಾರುತಿ ಗುಳ್ಳಾರಿ, ಪಿಎಸ್‍ಐ ಎಚ್. ನಾಗಪ್ಪ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಖಾಜಾಸಾಬ ಸುಭಾಸ ಸಜ್ಜನ್, ಗವಿಸಿದ್ದಪ್ಪ ಕೊಲ್ಲಿ, ದೇವೇಂದ್ರಪ್ಪ, ಹನುಮಂತಪ್ಪ ಶರಣಪ್ಪ, ಆನಂದ, ಬಸವರಾಜ್ ಕಾರ್ಯಾಚರಣೆ ನಡೆಸಿದ್ದಾರೆ.

  • ಚಿನ್ನ ಖರೀದಿ ನೆಪ-ಸರ ಕದ್ದು ಯುವಕ ಪರಾರಿ

    ಚಿನ್ನ ಖರೀದಿ ನೆಪ-ಸರ ಕದ್ದು ಯುವಕ ಪರಾರಿ

    ಚಿಕ್ಕಬಳ್ಳಾಪುರ: ಚಿನ್ನಾಭರಣ ಖರೀದಿ ನೆಪದಲ್ಲಿ ಚಿನ್ನದಂಗಡಿಗೆ ಬಂದ ಯುವಕನೊರ್ವ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನರೇಶ್ ಅವರ ಜ್ಯುವೆಲ್ಲರಿ ಶಾಪ್‍ನಲ್ಲಿ ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡಿರುವ ಯುವಕ ನೋಡ ನೋಡುತ್ತಲೇ ಸೈಲಂಟಾಗಿ ಚಿನ್ನದ ಸರ ತೆಗೆದುಕೊಂಡು ಪರಾರಿಯಾಗಿದ್ದಾನೆ. ಯುವಕ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾದ ನಂತರ ಅನುಮಾನಗೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಯುವಕನ ಕಳ್ಳತನ ಕೃತ್ಯ ಬಯಲಾಗಿದೆ. ಇದನ್ನೂ ಓದಿ:  ಭಾರತಕ್ಕೆ ಬರುವ ಅಫ್ಘಾನ್ನರಿಗೆ ತಾತ್ಕಾಲಿಕ ವೀಸಾ ವ್ಯವಸ್ಥೆ

    ಅಂಗಡಿಯಲ್ಲಿ ಚಿನ್ನದ ಖರೀದಿ ಮಾಡುತ್ತಿದ್ದ ಮಹಿಳೆಯರನ್ನ ವಿಚಾರಿಸಿದಾಗ ಯುವಕ ಅವರ ಸಂಬಂಧಿ ಅಲ್ಲ ಅಂತ ತಿಳಿದುಬಂದಿದೆ ಎನ್ನಲಾಗಿದೆ. ಈ ಸಂಬಂಧ ಯುವಕನಿಗಾಗಿ ಅಂಗಡಿ ಮಾಲೀಕ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.