Tag: thief

  • ದರೋಡೆ ಸಮಯದಲ್ಲಿ ಕಿಚಡಿ ಮಾಡಿ ಸಿಕ್ಕಿಬಿದ್ದ ಕಳ್ಳ

    ದರೋಡೆ ಸಮಯದಲ್ಲಿ ಕಿಚಡಿ ಮಾಡಿ ಸಿಕ್ಕಿಬಿದ್ದ ಕಳ್ಳ

    ದಿಸ್ಪುರ್: ಮನೆಯೊಂದರಲ್ಲಿ ದರೋಡೆ ನಡೆಸಲು ಹೋಗಿದ್ದ ಕಳ್ಳನಿಗೆ ಹಸಿವೆಯಾಗಿದ್ದ ಕಾರಣ ಅಡುಗೆ ಮನೆಯಲ್ಲಿ ಕಿಚಡಿ ಬೇಯಿಸಲು ಹೋಗಿ ಸಿಕ್ಕಿ ಬಿದ್ದಿರುವ ಹಾಸ್ಯಕರ ಘಟನೆ ಗುವಾಹಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಕಳ್ಳ ರಾತ್ರಿ ಹೊತ್ತು ಮನೆಯೊಂದಕ್ಕೆ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಹಸಿದಿದ್ದ ಆತ ಮನೆಯ ಅಡುಗೆ ಮನೆಗೆ ಹೋಗಿ ಕಿಚಡಿ ಬೇಯಿಸಲು ಪ್ರಾರಂಭಿಸಿದ್ದಾನೆ. ಅಡುಗೆ ಮನೆಯಿಂದ ಬರುತ್ತಿದ್ದ ಶಬ್ಧವನ್ನು ಆಲಿಸಿದ ಮನೆಯವರು ತಕ್ಷಣ ಎಚ್ಚೆತ್ತುಕೊಂಡು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಎತ್ತರದ ಆದಿಗುರು ಶಂಕರಚಾರ್ಯರ ಪ್ರತಿಮೆ ಸ್ಥಾಪನೆ!

    ಸ್ಥಳೀಯರು ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಈ ಹಾಸ್ಯಕರ ದರೋಡೆಯ ಘಟನೆಯನ್ನು ಅಸ್ಸಾಂ ಪೊಲೀಸರು ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಆಹಾರ ಕಳ್ಳನ ಕುತೂಹಲಕಾರಿ ಪ್ರಕರಣ! ಆಹಾರ ನಿಮ್ಮ ಆರೋಗ್ಯಕ್ಕೆ ಪ್ರಯೋಜನ ಉಂಟುಮಾಡುತ್ತದೆಯಾದರೂ ಕಳ್ಳತನದ ಸಮಯದಲ್ಲಿ ಕಿಚಡಿ ಬೇಯಿಸುವುದು ನಿಮ್ಮ ಯೋಗಕ್ಷೇಮಕ್ಕೆ ಹಾನಿಯುಂಟುಮಾಡುತ್ತದೆ. ಕಳ್ಳನನ್ನು ಬಂಧಿಸಲಾಗಿದೆ. ಹಾಗೂ ಗುವಾಹಟಿ ಪೊಲೀಸರು ಅವನಿಗೆ ಬಿಸಿ ಊಟವನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಟ್ಟಿಟ್ಟರ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್‌ ಹರಡುತ್ತೆ, ಬೂಸ್ಟರ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ

  • ಮೊಬೈಲ್ ಕಳ್ಳನ ಬಂಧನ- 6 ಲಕ್ಷ 68 ಸಾವಿರ ಮೌಲ್ಯದ 55 ಮೊಬೈಲ್ ವಶ

    ಮೊಬೈಲ್ ಕಳ್ಳನ ಬಂಧನ- 6 ಲಕ್ಷ 68 ಸಾವಿರ ಮೌಲ್ಯದ 55 ಮೊಬೈಲ್ ವಶ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಮೊಬೈಲ್ ಕಳ್ಳತನ ನಡೆಸಿದ್ದ ಖದೀಮನನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಭದ್ರಾವತಿಯ ನಿವಾಸಿ ಸೈಯದ್ ಅಲ್ವಿ (25) ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಹಲವೆಡೆಗಳಲ್ಲಿ ಕಳ್ಳತನ ಮಾಡಿದ್ದ ಮೊಬೈಲ್‌ಗಳನ್ನು ಮೂವರು ಕಳ್ಳರು ಭದ್ರಾವತಿಯ ಸಂತೆ ಮೈದಾನದ ಆವರಣದಲ್ಲಿ ಹಂಚಿಕೆ ಮಾಡಿಕೊಳ್ಳುತ್ತಿದ್ದರು. 6 ಲಕ್ಷದ 68 ಸಾವಿರ ರೂ ಮೌಲ್ಯದ ವಿವಿಧ ಕಂಪನಿಗಳ ಸುಮಾರು 55 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಕೊರೊನಾ ಟೈಮ್‍ನಲ್ಲಿ ಮದುವೆ ಕ್ಯಾನ್ಸಲ್ ಮಾಡಿದ್ರೆ ಸಿಗಲಿದೆ 10 ಲಕ್ಷ!

    POLICE JEEP

    ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಇಬ್ಬರು ಆರೋಪಿಗಳ ತಪ್ಪಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆಯಲು ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಭದ್ರಾವತಿಯ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್

  • ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    ಬಳ್ಳಾರಿ: ತಾಯಿ ಮಗಳು ಇಬ್ಬರು ಸೇರಿ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿರುವ ಘಟನೆ ಗಣಿ ನಾಡಿನಲ್ಲಿ ನಡೆದಿದೆ.

    ಸಾಮಾನ್ಯವಾಗಿ ಮಕ್ಕಳು ಕಳ್ಳತನ ಮಾಡಿದರೆ, ತಪ್ಪು ದಾರಿ ಹಿಡಿದರೆ ಹೆತ್ತವರು ಮಕ್ಕಳನ್ನು ಸರಿದಾರಿಗೆ ತರಬೇಕು. ಆದರೆ ಬಳ್ಳಾರಿ ಇನ್ ಫ್ಯಾಂಟ್ರಿ ರಸ್ತೆಯಲ್ಲಿ ಇರುವ ಸೂಪರ್ ಮಾರ್ಕೆಟ್‌ನಲ್ಲಿ ವ್ಯತಿರಿಕ್ತ ಎನ್ನುವಂತೆ ಮಗಳಿಗೆ ತಾಯಿ ಕಳ್ಳತನ ಮಾಡಲು ಸಾಥ್ ಕೊಟ್ಟಿದ್ದಾಳೆ. ಇವರಿಬ್ಬರು ವಸ್ತುಗಳ ಖರೀದಿ ನೆಪದಲ್ಲಿ ಅಂಗಡಿ ಒಳಗೆ ಬಂದಿದ್ದಾರೆ.

    ಬಳಿಕ ತಮಗೆ ಬೇಕಾದ ವಸ್ತುಗಳನ್ನು ಹುಡುಕಿದ್ದಾರೆ. ಹುಡುಕಾಟ ನೆಪದಲ್ಲಿ ಬೇಕಾದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ತಾಯಿ ಬೇಕಾದ ವಸ್ತುಗಳನ್ನು ಕದ್ದು ಮಗಳ ಬಳಿ ನೀಡಿದ್ದಾರೆ. ಆಗ ಮಗಳು ಅದನ್ನು ಬಟ್ಟೆಯಲ್ಲಿ ಹಾಕಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

    ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅಂಗಡಿಯಲ್ಲಿ ಹಾಕಲಾದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಇದು ಮೊದಲನೇ ಬಾರಿ ಮಾಡಿದ ಕಳ್ಳತನವಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ತಿಂಗಳ ಡಿ. 17ರಂದು ಇದೇ ರೀತಿ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ್ದರು. ನಂತರ ಮರುದಿನ ಅವರೇ ಅದೇ ಅಂಗಡಿಗೆ ಬಂದು ಮತ್ತೊಂದು ಸಾರಿ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    ಈ ಬಗ್ಗೆ ಅಂಗಡಿ ಮಾಲೀಕರು ಬಳ್ಳಾರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತಾಯಿ, ಮಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.

  • ಮೊಬೈಲ್ ಕದಿಯಲು ರೋಗಿಯಾದ ಕಳ್ಳ – ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಮೊಬೈಲ್ ಕದಿಯಲು ರೋಗಿಯಾದ ಕಳ್ಳ – ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಚಿತ್ರದುರ್ಗ: ರೋಗಿಯ ನೆಪದಲ್ಲಿ ಕಳ್ಳನೋರ್ವ ಆಸ್ಪತ್ರೆಗೆ ದಾಖಲಾಗಿ ಮೊಬೈಲ್ ಕದ್ದು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

    ರಾತ್ರಿ ವೇಳೆ ಹಿರಿಯೂರಿನ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯದ ನೆಪದಲ್ಲಿ ದಾಖಲಾಗಿದ್ದ ಕಳ್ಳ ರೋಗಿಯಂತೆ ಬೆಡ್ ಮೇಲೆ ಮಲಗಿ ಪಕ್ಕದ ಬೆಡ್‍ನಲ್ಲಿದ್ದ ರೋಗಿಯ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಕಳ್ಳನ ಬೆಡ್ ಪಕ್ಕದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಯೋಗೇಶ್  ಮಲಗಿದ್ದ ವೇಳೆ‌ ಬೆಳಗಿನ ಜಾವ ಮೊಬೈಲ್ ಎಗರಿಸಿ ಕಳ್ಳ ಎಸ್ಕೇಪ್ ಆಗಿದ್ದಾನೆ. ಆದರೆ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಹಾಗೂ ಸೌಲಭ್ಯಗಳ ಬಗ್ಗೆ ಮೂಗು ಮುರಿಯುತ್ತಿದ್ದ ರೋಗಿಗಳಿಗೆ ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳರ ಹಾವಳಿ ಶುರುವಾಗಿದೆ. ಕಳ್ಳನ ಕೈಚಳಕದಿಂದ ರೋಗಿಗಳಲ್ಲಿ ಭಾರೀ ಆತಂಕ ಮನೆ ಮಾಡಿದೆ. ಈ ಪ್ರಕರಣ ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:  ವಿದ್ಯಾರ್ಥಿನಿಯರಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗಲು ಶಿಕ್ಷಕ ಯತ್ನ

  • ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

    ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

    ಜೈಪುರ್: ಬೆಳ್ಳಿ ಕಾಲು ಗೆಜ್ಜೆಗಾಗಿ ಮಹಿಳೆಯ ಕಾಲನ್ನು ಹಂತಕರು ಕತ್ತರಿಸಿ ಕಳ್ಳತನ ಮಾಡಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯ ಜಮ್ವಾ ರಾಮಗಢದಲ್ಲಿ ನಡೆದಿದೆ.

    ಗೀತಾ ದೇವಿ ಶರ್ಮಾ(55) ಮೃತ ಮಹಿಳೆಯಾಗಿದ್ದಾಳೆ. ದರೋಡೆಕೋರರು ಆಕೆಯ ಕಾಲಿನಲ್ಲಿದ್ದ ಬೆಳ್ಳಿಯ ಗೆಜ್ಜೆಗಳನ್ನು ತೆಗೆಯಲಾಗದೆ ಪಾದಗಳನ್ನೇ ಕತ್ತರಿಸಿದ್ದಾರೆ. ಕಳ್ಳರು ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಓಡಿಹೋಗುವ ಮುನ್ನ ಮನೆಯ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೊಂದು ಆಕೆಯ ಸರ, ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ.

    ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಹಣವನ್ನು ಬಾಚಿಕೊಂಡಿದ್ದಾರೆ. ನಂತರ ಶಬ್ದ ಕೇಳಿ ಮನೆಯತ್ತ ಬರುತ್ತಿದ್ದ ಆಕೆ ಮೇಲೆ ಹೊಲದಲ್ಲೇ ದಾಳಿ ಮಾಡಿದ ದರೋಡೆಕೋರರು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಆಕೆಯನ್ನು ಕೊಲೆ ಮಾಡಿ ಓಡಿಹೋಗುವಾಗ ಕೆಳಗೆ ಬಿದ್ದಿದ್ದ ಆಕೆಯ ಕಾಲಿನಲ್ಲಿದ್ದ ಬೆಳ್ಳಿ ಗೆಜ್ಜೆ ಅವರ ಕಣ್ಣಿಗೆ ಬಿದ್ದಿದೆ. ಹೀಗಾಗಿ ಮಹಿಳೆಯ ಕಾಲು ಕತ್ತರಿಸಿ ಗೆಜ್ಜೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಸಂತ್ರಸ್ತೆಯ ಕುಟುಂಬವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೋರಿದೆ. ಹಾಗೇ ರಾಜಸ್ಥಾನ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಕೋರಿದೆ. ನನ್ನ ತಾಯಿ ಇಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಯಾರು ದಾಳಿ ಮಾಡಿದರು ಎಂದು ನಮಗೆ ತಿಳಿದಿಲ್ಲ. ತನಿಖೆಗಳ ಬಗ್ಗೆ ಪೊಲೀಸರು ನಮಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.

  • ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ- 4ಲಕ್ಷ ಮೌಲ್ಯದ ಸ್ವತ್ತುಗಳು ವಶ

    ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ- 4ಲಕ್ಷ ಮೌಲ್ಯದ ಸ್ವತ್ತುಗಳು ವಶ

    ಕಾರವಾರ : ಚಿನ್ನದಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು 4ಲಕ್ಷ ಮೌಲ್ಯದ ಸ್ವತ್ತುಗಳು ವಶಕ್ಕೆ ಪಡೆಯಲಾಗಿದೆ.

    ಸೆಪ್ಟೆಂಬರ್ 17 ರಂದು ಶಿರಸಿ ನಗರದ ರತ್ನದೀಪ ಜ್ಯುವೆಲರಿ ಶಾಪ್ ನಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ಕಳ್ಳತನ ಮಾಡಿದ್ದ ಪ್ರಕರಣವನ್ನು ಶಿರಸಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ: ಕನ್ಹಯ್ಯ ಕುಮಾರ್

    ಬೆಳವಾಗಿಯ ನಾವೇಕರ ಗಲ್ಲಿಯ ನಿಲೇಶ್ ರೇವಣಕರ (32) ಹಾಗೂ ಕಾರವಾರದ ಹಬ್ಬುವಾಡದ ರಾಘವೇಂದ್ರ ದೈವಜ್ಞ (35) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ನಿಲೇಶ್ ರತ್ನದೀಪ ಜ್ಯುವೆಲರ್ಸನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು, ಚಿನ್ನದ ಸರವನ್ನು ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದ. ಇದು ಅಂಗಡಿಯ ಸಿಸಿಟಿಯಲ್ಲಿ ದಾಖಲಾಗಿತ್ತು. ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

    ಬಂಧಿತ ಆರೋಪಿಗಳಿಂದ ಪೊಲೀಸರು 22.28 ಗ್ರಾಂ ಬಂಗಾರದ ತೂಕದ ಚಿನ್ನದ ಎರಡು ಸರ ಹಾಗೂ ಮಾರುತಿ ಸ್ವಿಪ್ಟ್ ಕಾರು ಸೇರಿ ಒಟ್ಟೂ 4ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ಪಿಎಸ್‍ಐ ರಾಜಕುಮಾರ, ಪಿಎಸ್‍ಐ ಮೋಹಿನಿ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಚೇತನ್ ಕುಮಾರ್, ಕೊಟೇಶ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

  • ಚಿನ್ನ, ಬೆಳ್ಳಿ, ಹಣ ಬಿಟ್ಟು ಫ್ಲವರ್ ಪಾಟ್ ಕದ್ದೊಯ್ದ ಕಳ್ಳ

    ಚಿನ್ನ, ಬೆಳ್ಳಿ, ಹಣ ಬಿಟ್ಟು ಫ್ಲವರ್ ಪಾಟ್ ಕದ್ದೊಯ್ದ ಕಳ್ಳ

    ಹಾಸನ: ಹಾಸನದಲ್ಲೊಬ್ಬ ಕಳ್ಳ ಚಿನ್ನ, ಬೆಳ್ಳಿ, ಹಣ ಬಿಟ್ಟು ಫ್ಲವರ್ ಪಾಟ್ ಕದಿಯುತ್ತಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:  ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ

    Thief Flower Pot

    ರಾತ್ರಿ ವೇಳೆ ನಿಧಾನವಾಗಿ ಮನೆಯ ಕಾಂಪೌಂಡ್ ಆವರಣಕ್ಕೆ ಬರುವ ಕಳ್ಳ, ಒಳಗೆ ಮಲಗಿರುವ ಮನೆಯವರಿಗೆ ತಿಳಿಯದಂತೆ ಫ್ಲವರ್ ಪಾಟ್ ಕದ್ದು ಪರಾರಿಯಾಗಿದ್ದಾನೆ. ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಒಂದನೇ ಹಂತದಲ್ಲಿರುವ ಸುಮಾರು ಮೂರು ಮನೆಯಲ್ಲಿ ಕಳ್ಳತನ ನಡೆದಿದೆ. ಕಳ್ಳರು ಒಂದೇ ದಿನ ಸುಮಾರು ಮೂವತ್ತಕ್ಕೂ ಹೆಚ್ಚು ಫ್ಲವರ್ ಪಾಟ್ ಕದ್ದೊಯ್ದಿದ್ದಾರೆ.

    Thief Flower Pot

    ಬೆಳಗಿನ ಜಾವ 3.41ರ ಸಮಯದಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ಮಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದಷ್ಟು ಬೇಗ ಪಾಟ್ ಕಳ್ಳರನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಪೆನ್‍ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಇದನ್ನೂ ಓದಿ:  ತಪ್ಪು ಕಲ್ಪನೆಗಳಿಂದ ಭಾರತ್ ಬಂದ್ ಕರೆ ನೀಡಲಾಗಿದೆ: ಲಕ್ಷ್ಮಣ್ ಸವದಿ

  • ಮನೆಯ ಹಂಚು ತೆಗೆದು ಚಿನ್ನ, ಟಿವಿ ಕದ್ದೊಯ್ದ ಖತರ್ನಾಕ್ ಕಳ್ಳರು

    ಮನೆಯ ಹಂಚು ತೆಗೆದು ಚಿನ್ನ, ಟಿವಿ ಕದ್ದೊಯ್ದ ಖತರ್ನಾಕ್ ಕಳ್ಳರು

    ಹಾಸನ: ಮನೆಯ ಹಂಚು ತೆಗೆದು ಕೆಳಗಿಳಿದ ಕಳ್ಳರು ಚಿನ್ನ ಮತ್ತು ಟಿವಿ ಕದ್ದೊಯ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.  ಇದನ್ನೂ ಓದಿ: 100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    ಬೇಲೂರು ತಾಲೂಕಿನ ಬೊಮ್ಮಡಿಹಳ್ಳಿ ಗ್ರಾಮದ ಶಿವಣ್ಣಗೌಡ ಅಂಗಡಿಯಲ್ಲಿ ಮಲಗಿದ್ದರು. ಇನ್ನೂ ಅಂಗಡಿಗೆ ಹೊಂದಿಕೊಂಡಿದ್ದ ಮನೆಯಲ್ಲಿ ಅವರ ಪತ್ನಿ ಪ್ರೇಮ(58) ಮಲಗಿಕೊಳ್ಳುತ್ತಾರೆ. ಈ ವೇಳೆ ಭಾನುವಾರ ಮಧ್ಯರಾತ್ರಿ ಸುಮಾರು 2 ಅಥವಾ 3 ಗಂಟೆಯ ಸಮಯದಲ್ಲಿ ಪ್ರೇಮ ಒಬ್ಬರೆ ಮಲಗಿದ್ದಾಗ, ಮನೆಯ ಮೇಲ್ಛಾವಣಿಯ ಹಂಚುಗಳನ್ನು ಇಳಿಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲಿನ ಲಾರಿ, ಅಂಬುಲೆನ್ಸ್ ನಡುವೆ ಭೀಕರ ಅಪಘಾತ- ಉರುಳಿ ಬಿದ್ದ ಈಚರ್

    ನಂತರ ಮಲಗಿದ್ದ ಪ್ರೇಮರವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತಾಳಿಯೊಂದಿಗಿದ್ದ ಚಿನ್ನದ ಸರ ಕಟ್ ಮಾಡಿಕೊಂಡು, ಮನೆಯಲ್ಲಿದ್ದ ಟಿವಿಯೊಂದನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ಬೇಲೂರು ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ.  ಇದನ್ನೂ ಓದಿ: ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳೆನು ಗೊತ್ತಾ?

  • ಎಟಿಎಂ ಒಡೆದು ಹಾಕಿ 15 ಲಕ್ಷ ದೋಚಿದ ಖದೀಮರು

    ಎಟಿಎಂ ಒಡೆದು ಹಾಕಿ 15 ಲಕ್ಷ ದೋಚಿದ ಖದೀಮರು

    ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಎಟಿಎಂಗೆ ಎಂಟ್ರಿ ಕೊಟ್ಟ ಇಬ್ಬರು ಕಳ್ಳರು ಎಟಿಎಂ ಯಂತ್ರ ಒಡೆದು ಹಾಕಿ ಸರಿ ಸುಮಾರು 15 ಲಕ್ಷ ಹಣ ದೋಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಕ್ರಾಸ್‍ನಲ್ಲಿ ನಡೆದಿದೆ.  ಇದನ್ನೂ ಓದಿ: ಹಾಸನದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ – ಮಷಿನ್‍ ಸಂಪೂರ್ಣ ಜಖಂ

    ATM

    ಗ್ರಾಮದ ಎಸ್‍ಬಿಎಂ ಎಟಿಎಂ ಸೆಂಟರ್ ನಲ್ಲಿ ಘಟನೆ ನಡೆದಿದ್ದು, ಮುಸುಕುಧಾರಿಗಳಾಗಿ ಬಂದ ದರೋಡೆಕೋರರು ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿ ಕೃತ್ಯ ನಡೆಸಿದ್ದಾರೆ. ಬೆಳಿಗ್ಗೆ ಹಣ ಡ್ರಾ ಮಾಡಲು ಬಂದ ಗ್ರಾಹಕರು ಬ್ಯಾಂಕ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದು, ಬ್ಯಾಂಕ್ ಮ್ಯಾನೇಜರ್ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  ಇದನ್ನೂ ಓದಿ: ಸಿಸಿಟಿವಿ ಧ್ವಂಸಗೊಳಿಸಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

    ATM

    ಇತ್ತೀಚೆಗಷ್ಟೇ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ್ ಗ್ರಾಮದಲ್ಲಿ ಎಸ್‌ಬಿಐ ಬ್ಯಾಂಕ್ ನ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ಮಾಡಿ ಹಣ ಸಿಗದೇ ದರೋಡೆಕೋರ ಬರಿಗೈಯಲ್ಲಿ ತೆರಳಿದ್ದನು. ಇನ್ನೂ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳತನ ಮಾಡಲು ಬಂದಿದ್ದ ಕಳ್ಳ ಸಿಸಿಟಿವಿ ಗಮನಿಸಿದ ಬಳಿಕ ಎಚ್ಚರಗೊಂಡು ಸಿಸಿಟಿವಿಯನ್ನು ಧ್ವಂಸ ಮಾಡಿ ಅಲ್ಲಿಂದ ಪರಾರಿಯಾಗಿದ್ದನು.

  • ಕಳ್ಳ ಅರೆಸ್ಟ್ 13 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಕಳ್ಳ ಅರೆಸ್ಟ್ 13 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಬೆಂಗಳೂರು/ಆನೇಕಲ್: ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಮನೆಕಳ್ಳನನ್ನು ಬಂಧಿಸಿದ್ದಾರೆ.

    ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 13 ಲಕ್ಷ ಮೌಲ್ಯದ 150 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಾನೂ ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ಎಸಿಪಿ ಪವನ್ ಕುಮಾರ್ ರವರ ಮಾರ್ಗದಶನದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್, ಸಬ್ ಇನ್ಸ್ ಪೆಕ್ಟರ್ ಪಿ.ಮಂಜುನಾಥ್, ಅಪರಾಧ ಸಿಬ್ಬಂದಿ ಪ್ರಕರಣವನ್ನು ಬೇಧಿಸಿದ್ದು ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.