Tag: thief

  • ಮದುವೆಯಲ್ಲಿ ಕಳ್ಳರ ಕೈಚಳಕ- ಕಣ್ಣಾಮುಚ್ಚಾಲೆ ಆಡುವ ನೆಪದಲ್ಲಿ ಚಿನ್ನಾಭರಣ ಕಳ್ಳತನ

    ಮದುವೆಯಲ್ಲಿ ಕಳ್ಳರ ಕೈಚಳಕ- ಕಣ್ಣಾಮುಚ್ಚಾಲೆ ಆಡುವ ನೆಪದಲ್ಲಿ ಚಿನ್ನಾಭರಣ ಕಳ್ಳತನ

    ಬೆಂಗಳೂರು: ಬಾಲಕನನ್ನು ಆಟವಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಆತನ ಮೈಮೇಲಿದ್ದ ಸುಮಾರು ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸಿದು ಪಾರಾರಿಯಾಗಿರುವ ಘಟನೆ ಬೆಂಗಳೂರಿನ ಮಾಗಡಿ ರೋಡ್‍ನಲ್ಲಿ ನಡೆದಿದೆ.

    ಬೆಂಗಳೂರಿನ ಮಾಗಡಿ ರೋಡ್‍ನಲ್ಲಿ  ಉದ್ಯಮಿ ರಾಘವೇಂದ್ರ, ತನ್ನ ಪತ್ನಿ ಮತ್ತು 6 ವರ್ಷದ ಪುತ್ರನೊಂದಿಗೆ ಸಂಬಂಧಿಕರ ಮನೆಗೆ ಮದುವೆಗೆ ಹೋಗಿದ್ದರು. ಕನ್ವೆನ್ಷನ್ ಹಾಲ್‌ನಲ್ಲಿ ಪೋಷಕರು ಬ್ಯುಜಿಯಾದಂತೆ, ಉದ್ಯಮಿ ಪುತ್ರ ಇತರೆ ಮಕ್ಕಳ ಜೊತೆಗೆ ಆಟವಾಡುತ್ತಿದ್ದ.

    ಈ ವೇಳೆ ಅಲ್ಲೇ ಇದ್ದ ಇಬ್ಬರು, ಅಪರಿಚಿತ ಯುವಕರು, ಕಣ್ಣಾಮುಚ್ಚಾಲೆ ಆಡೋಣ ಅಂತಾ ಬಾಲಕನನ್ನು ಕರೆದುಕೊಂಡು ಹೋದರು. ಕಣ್ಣಾಮುಚ್ಚಾಲೆ ಆಟವಾಡುವ ನೆಪದಲ್ಲಿ ಬಾಲಕನ ಮೈಮೇಲಿದ್ದ ಸುಮಾರು ಮೂರುವರೇ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸಿದು ಪರಾರಿ ಆಗಿದ್ದಾರೆ. ಇದನ್ನೂ ಓದಿ: ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

    ಪುತ್ರ ಆಳುತ್ತ ತನ್ನ ತಂದೆಯ ಬಳಿ ಬಂದಾಗ ಚಿನ್ನಭರಣ ಕಳವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತನಿಖೆ ವೇಳೆ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇಬ್ಬರು ಅಪರಿಚಿತ ಯುವಕರು ಮದುವೆ ಮಧ್ಯದಲ್ಲಿ ಬೈಕ್‍ನಲ್ಲಿ ಅನುಮಾನಸ್ಪದವಾಗಿ ಹೊರಗೆ ಹೋಗಿರುವ ದೃಶ್ಯ ಸೆರೆಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಕೆಂಪೇಗೌಡ, ಸಿದ್ದರೂಢ ಜಾತ್ರೆ – ಮೋದಿ `ವೋಕಲ್ ಫಾರ್ ಲೋಕಲ್’ ಮಂತ್ರವೂ ಸೇರ್ಪಡೆ

  • ಅಂತರ ಜಿಲ್ಲಾ ಕಳ್ಳ ಅರೆಸ್ಟ್ – 4,46,090 ರೂ. ವಶಕ್ಕೆ ಪಡೆದ ಪೊಲೀಸರು

    ಅಂತರ ಜಿಲ್ಲಾ ಕಳ್ಳ ಅರೆಸ್ಟ್ – 4,46,090 ರೂ. ವಶಕ್ಕೆ ಪಡೆದ ಪೊಲೀಸರು

    ವಿಜಯನಗರ: ಅಂತರ ಜಿಲ್ಲಾ ಕಳ್ಳನೊಬ್ಬನನ್ನು ಜಿಲ್ಲೆಯ ಕೂಡ್ಲಿಗಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಹೆಚ್. ಹನುಮಂತ (23) ಬಂಧಿತ ಆರೋಪಿ. ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಲ್ಲಿ ಎರಡು ಮನೆ ಕಳ್ಳತನವಾಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡವೊಂದನ್ನು ರಚಸಿ, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಗೆ ಚಿತ್ರಹಿಂಸೆ – 4 ಪೊಲೀಸ್ ಅಧಿಕಾರಿಗಳು ಅಮಾನತು

    ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಕೂಡ್ಲಿಗಿ ಪಟ್ಟಣದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೂಡ್ಲಿಗಿ ಪಟ್ಟಣದಲ್ಲಿ ಒಟ್ಟು ಮೂರು ಮನೆಗಳನ್ನು ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    ಆರೋಪಿಯಿಂದ ಒಟ್ಟು 93 ಗ್ರಾಂ. ಬಂಗಾರದ ಆಭರಣಗಳು, 103 ಗ್ರಾಂ. ಬೆಳ್ಳಿಯ ಆಭರಣಗಳು ಮತ್ತು 2,600 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ ಕಳುವುಗೈದ ಮೌಲ್ಯ 4,46,090 ರೂಪಾಯಿ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆರೋಪಿಯು ಸಿರುಗುಪ್ಪ ಠಾಣೆಯ ಪ್ರಕರಣದಲ್ಲಿ ಸಹ ಭಾಗಿಯಾಗಿರುವ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ. ತನಿಖೆ ನಂತರ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

  • ಆಭರಣ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನ – ಕಳ್ಳನ ಲಾಂಗ್ ಕಿತ್ತು ಕಳುಹಿಸಿದ ಮಾಲೀಕ

    ಆಭರಣ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನ – ಕಳ್ಳನ ಲಾಂಗ್ ಕಿತ್ತು ಕಳುಹಿಸಿದ ಮಾಲೀಕ

    ಬೆಂಗಳೂರು: ಒಡವೆ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ದರೋಡೆಗೆ ಯತ್ನಿಸಿದ ಕಳ್ಳನ ಲಾಂಗ್‍ನನ್ನು ಮಾಲೀಕನೇ ಕಿತ್ತು ಕಳುಹಿಸಿರುವ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ.

    ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಲಾಂಗ್ ತೆಗೆದುಕೊಂಡು ನೇರವಾಗಿ ಅಂಗಡಿಗೆ ನುಗ್ಗಿ, ಮಾಲೀಕನಿಗೆ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಆತಂಕಗೊಂಡ ಮಾಲೀಕ ಹಣ ನೀಡಲು ಮುಂದಾಗಿದ್ದಾನೆ. ಈ ವೇಳೆ ಹಣದ ಪೆಟ್ಟಿಗೆಗೆ ಆರೋಪಿಯೇ ಕೈ ಹಾಕಿ ಹಣ ದೋಚಲು ಯತ್ನಿಸಿದಾಗ, ಆತನ ಕೈಯಲ್ಲಿದ್ದ ಲಾಂಗ್‍ನನ್ನು ಅಂಗಡಿ ಮಾಲೀಕ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಿರುಚಾಡಲು ಪ್ರಾರಂಭಿಸಿದ್ದಾನೆ. ಇದನ್ನೂ ಓದಿ:  ಗಂಡನ ಜೊತೆ ಜಗಳ – ಸಾಯ್ತೀನಿ ಅಂತ ಕೆರೆಯಲ್ಲಿ ಕೂತ ಮಹಿಳೆ

    ಈ ವೇಳೆ ಸ್ಥಳದಲ್ಲಿಯೇ ನಿಂತಿದ್ದ ಪೌರ ಕಾರ್ಮಿಕ ಮಹಿಳೆ ಆರೋಪಿ ಕೈಯಲ್ಲಿ ಲಾಂಗ್ ಇದ್ದರೂ, ಹೆದರದೇ ಪೊರಕೆಯಲ್ಲಿ ಹೊಡೆಯಲು ಮುಂದಾಗಿದ್ದಾಳೆ. ಇದರಿಂದ ಭಯಭೀತನಾಗಿ ಆರೋಪಿ ವಾಹನದಲ್ಲಿ ಪರಾರಿಯಾಗಿದ್ದಾನೆ.

    ಸದ್ಯ ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಸಿದ್ಧಿಕ್ ಎಂದು ಗುರುತಿಸಲಾಗಿದೆ. ಇದೀಗ ಪುಲಕೇಶಿ ನಗರದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನನ್ನ ಶಿಕ್ಷಣಕ್ಕೆ ಸಹಾಯ ಮಾಡಿ – ಸಿಎಂ ನಿತೀಶ್ ಕುಮಾರ್‌ಗೆ ಸಾರ್ವಜನಿಕವಾಗಿ ಬಾಲಕನ ಮನವಿ

  • ಐನಾತಿ ಮನೆ ಕಳ್ಳಿ ಕೈಗೆ ಕೋಳ ತೊಡಿಸಿದ ಪೊಲೀಸರು

    ಐನಾತಿ ಮನೆ ಕಳ್ಳಿ ಕೈಗೆ ಕೋಳ ತೊಡಿಸಿದ ಪೊಲೀಸರು

    ಬೆಂಗಳೂರು: ವಿವಿಧ ಸಬೂಬು ಹೇಳಿಕೊಂಡು ಶ್ರೀಮಂತರ ಮನೆಗೆಳಿಗೆ ಎಂಟ್ರಿಯಾಗಿ ಮನೆ ಮಾಲೀಕರ ನಂಬಿಕೆ ಗಳಿಸಿಕೊಂಡು ದ್ರೋಹ ಎಸಗಿ ಬರುತ್ತಿದ್ದ ಐನಾತಿ ಕಳ್ಳಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಗ್ರೇಸಿ ಬಂಧಿತ ಐನಾತಿ ಕಳ್ಳಿ. ಗ್ರೇಸಿ ಬೆಂಗಳೂರಿನ ಶ್ರೀರಾಂಪುರದ ನಿವಾಸಿಯಾಗಿದ್ದು, ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ನಂತರ ವಿಲಾಸಿ ಜೀವನಕ್ಕೆ ಬಿದ್ದ ಗ್ರೇಸಿ ಮನೆ ಕಳ್ಳತನಕ್ಕೆ ಪ್ಲಾನ್ ಹಾಕಿಕೊಂಡಿದ್ದಳು. ರಾಜಾಜಿನಗರದ ಪ್ರಕಾಶ್ ನಗರದಲ್ಲಿರುವ ಮನೆಗೆ ಹೋಗಿ ಮನೆ ಕೆಲಸ ಕೇಳಿಕೊಂಡು ಹೋಗಿದ್ದಳು. ಮನೆ ಕೆಲಸಕ್ಕೆ ಮಾಲೀಕರು ಒಪ್ಪಿಕೊಂಡ ಮೇಲೆ ಕೆಲ ದಿನಗಳ ಕಾಲ ಕೆಲಸ ಮಾಡಿ ಮನೆ ಕೆಲಸದ ಜೊತೆಗೆ ಮನೆಯಲ್ಲಿರುವ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಳು. ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆಯಿಂದ ವಂಚನೆ

    ಘಟನೆ ಸಂಬಂಧ ಮನೆ ಮಾಲೀಕರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ಆರೋಪಿ ಗ್ರೇಸಿ ಬೈಕ್‍ನಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿ ಗ್ರೇಸಿಯನ್ನು ಬಂಧಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದ ಮೂರು ಲಕ್ಷ ಬೆಲೆ ಬಾಳುವ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಅಂಗಡಿ ದೋಚಿದ ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಕಳ್ಳ – ವೀಡಿಯೋ ವೈರಲ್

    ಅಂಗಡಿ ದೋಚಿದ ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಕಳ್ಳ – ವೀಡಿಯೋ ವೈರಲ್

    ಲಕ್ನೋ: ಹಾರ್ಡ್‍ವೇರ್ ಅಂಗಡಿಯನ್ನು ದರೋಡೆ ಮಾಡಿದ ನಂತರ ಕಳ್ಳರು ಡ್ಯಾನ್ಸ್ ಮಾಡಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ ಚಾ ಅಂಡೌಲಿ ಎಂಬಲ್ಲಿ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ನಿವಾಸದ ಬಳಿ ಶನಿವಾರ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಚಂದೌಲಿಯಲ್ಲಿ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ನಂತರ ಕಳ್ಳ ಅಂಗಡಿಯೊಳಗೆ ಡ್ಯಾನ್ಸ್ ಮಾಡಲು ಪ್ರಾರಂಭಿಸಿದನು. ಕಳ್ಳ ಖುಷಿಯಲ್ಲಿ ತೇಲಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಅವಳಿ ಮರಿಗಳಿಗೆ ಜನ್ಮ ಕೊಟ್ಟ ಕಾಡಾನೆ

    ಅಂಗಡಿಯೊಳಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಳೆದ ವಾರ ನಡೆದ ಸಂಪೂರ್ಣ ಘಟನೆ ಸೆರೆಯಾಗಿದೆ. ಮುಖವನ್ನು ಮುಚ್ಚಿಕೊಂಡು ಅಂಗಡಿಗೆ ಪ್ರವೇಶಿಸಿದ ಕಳ್ಳ, ತನಗೆ ಬೇಕಾದುದನ್ನು ಕದ್ದು, ಡ್ಯಾನ್ಸ್ ಮಾಡಿ ನಂತರ ಅಲ್ಲಿಂದ ನುಸುಳಿಕೊಂಡು ಹೋಗಿರುವ ದೃಶ್ಯಾವಳಿ ಸೆರೆಯಾಗಿದೆ.

    ಕಳ್ಳ ಎಲ್ಲ ನಗದನ್ನು ಎತ್ತಿಕೊಂಡು ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ ಎಂದು ಅಂಗಡಿ ಮಾಲೀಕ ಅಂಶು ಸಿಂಗ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಷಟರ್ ಮುರಿದಿರುವುದನ್ನು ನೋಡಿದ ಸಿಂಗ್ ಅಂಗಡಿ ತೆರೆದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಾಮಾನ್ಯವಾಗಿ ಸುರಕ್ಷತಾ ಕಾರಣಗಳಿಗಾಗಿ ಮತ್ತು ಕಳ್ಳರನ್ನು ಹೆದರಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲಾಗುತ್ತೆ. ಆದರೆ ಈ ಕಳ್ಳ ಯಾವುದನ್ನು ಲೆಕ್ಕಿಸಿಲ್ಲ. ಅಂಗಡಿಯೊಳಗಿದ್ದ ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದ ತಕ್ಷಣ ಡ್ಯಾನ್ಸ್ ಮಾಡತೊಡಗಿದ್ದಾನೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್

    ಅಕ್ಟೋಬರ್ 2018 ರಲ್ಲಿ ಅಹಮದಾಬಾದ್‍ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಐದು ಜನರ ಗ್ಯಾಂಗ್‍ನ ಕಳ್ಳರಲ್ಲಿ ಒಬ್ಬ ಎಲ್ಲವನ್ನು ದೋಚಿದ ನಂತರ ಸಿಸಿಟಿವಿ ಮುಂದೆ ಬಂದು ಡ್ಯಾನ್ಸ್ ಮಾಡಿದ್ದನು.

  • ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಎಗರಿಸಿದ ಖದೀಮರು

    ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಎಗರಿಸಿದ ಖದೀಮರು

    ಕೋಲಾರ: ವಾಕಿಂಗ್‍ಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದ ಬಳಿ ಇರುವ ಅಂಡರ್ ಪಾಸ್ ಬಳಿ ಈ ಇಂದು ಸಂಜೆ 6 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬೈಕ್ ನಿಲ್ಲಿಸಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿದ್ದಾರೆ. ಕೀಲುಕೋಟೆ ಬಡಾವಣೆಯ ಉಮಾದೇವಿ ಸುಮಾರು 2 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳೆದುಕೊಂಡವರು. ಇದನ್ನೂ ಓದಿ: ಬುಲ್ಡೋಜರ್ ಭಯಕ್ಕೆ ಬಿದ್ದು ಕಾರು ಕಳ್ಳರ ಬಗ್ಗೆ ಬಾಯ್ಬಿಟ್ಟ ಕಿಂಗ್‍ಪಿನ್

    ಸಂಜೆ ವೇಳೆಗೆ ಜನ ನಿಬಿಡ ಪ್ರದೇಶದಲ್ಲೇ ಈ ಪರಿಸ್ಥಿತಿ ಎದುರಾಗಿದ್ದು, ಸ್ಥಳದಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಕೋಲಾರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಕ್ಕನೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೆ ಹತ್ಯೆಗೈದ ಪತಿ

  • ಕಳ್ಳತನ ಮಾಡಲು ಹೋಗಿ ಬಾಲಕಿಯನ್ನ ಅಪಹರಿಸಿದ ಖತರ್ನಾಕ್ ಕಳ್ಳ

    ಕಳ್ಳತನ ಮಾಡಲು ಹೋಗಿ ಬಾಲಕಿಯನ್ನ ಅಪಹರಿಸಿದ ಖತರ್ನಾಕ್ ಕಳ್ಳ

    ಚಿಕ್ಕೋಡಿ: ಕಳ್ಳತನ ಮಾಡಲು ಹೋಗಿ ಪುಟ್ಟ ಬಾಲಕಿಯನ್ನೇ ಅಪಹರಣ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಬಂಧಿತ ಆರೋಪಿ. ಪ್ರಕರಣವನ್ನು 8 ಗಂಟೆಗಳಲ್ಲಿ ಪೊಲೀಸರು ಸರು ಭೇದಿಸಿದ್ದಾರೆ. ಅನಿಲ್ ಲಂಬುಗೋಳ ಕಳೆದ ರಾತ್ರಿ ಕಳ್ಳತನ ಮಾಡಲು ಸುರೇಶ್ ಕಾಂಬಳೆ ಮನೆಗೆ ನುಗ್ಗಿದ್ದ. ಟ್ರೆಸರಿ ಬಾಗಿಲನ್ನು ಮುರಿಯುವ ಸಂದರ್ಭದಲ್ಲಿ ಮನೆಯವರು ಎಚ್ಚೆತ್ತುಕೊಂಡಿದ್ದಾರೆ.

    ಈ ವೇಳೆ ಮನೆಯವರು ಜೋರಾಗಿ ಕಿರಿಚಾಡಿದ್ದಾರೆ. ಇದರಿಂದ ಭಯಗೊಂಡ ಅನಿಲ್, ಮನೆಯವರಿಗೆ ಮಗಳನ್ನು ಅಪಹರಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆದರೆ ಅಷ್ಟೋತ್ತಿಗಾಗಲೇ ಅಕ್ಕಪಕ್ಕದ ಮನೆಯವರು ಸೇರತೊಡಗಿದ್ದರು. ಇದರಿಂದಾಗಿ ಆರೋಪಿ ಅನಿಲ್ ಮನೆಯಲ್ಲಿ ಮಲಗಿದ್ದ 11 ವರ್ಷದ ಬಾಲಕಿಯನ್ನ ತನ್ನೊಡನೆ ಎತ್ತಿಕೊಂಡು ಅಪಹರಣ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

    ಕೂಡಲೇ ಗ್ರಾಮಸ್ಥರು ಈಡಿ ಗ್ರಾಮವನ್ನು ಹುಡುಕಿದ್ದಾರೆ. ಆದರೆ ಅನಿಲ್ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾತ್ರಿಯೇ ಅಂಕಲಿ ಪೊಲೀಸ್ ಠಾಣೆಗೆ ತೆರಳಿ, ಸುರೇಶ್ ಕುಟುಂಬ ಅನಿಲ್ ವಿರುದ್ಧ ದೂರು ದಾಖಲಿಸಿದ್ದರು. ಇನ್ನು ದೂರು ದಾಖಲಿಸಿಕೊಂಡು ರಾತ್ರಿಯೇ ಕಾರ್ಯಾಚರಣೆ ಇಳಿದಿದ್ದ ಅಂಕಲಿ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ಆರೋಪಿ ಅನಿಲ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ನಡೆದ ಎಂಟು ತಾಸಿನಲ್ಲಿಯೆ ಅನೀಲ್‍ನನ್ನು ಬಂಧಿಸಿದ್ದಾರೆ.

    ರಾತ್ರಿ ಅಪಹರಣ ಮಾಡಿದ್ದ ಬಾಲಕಿಯೊಡನೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮಕ್ಕೆ ತಮ್ಮ ಪರಿಚಯಸ್ಥರ ಮನೆಯಲ್ಲಿ ಅನಿಲ್ ಅವಿತು ಕುತಿದ್ದ. ಕಾರದಗಾ ಗ್ರಾಮಕ್ಕೆ ತೆರಳಿದ್ದ ಪೊಲೀಸರ 11 ವರ್ಷದ ಬಾಲಕಿಯನ್ನು ರಕ್ಷಿಸಿ ಹಾಗೂ ಅನಿಲ್ ಲಂಬುಗೋಳನನ್ನು ಬಂಧಿಸಿದ್ದಾರೆ. ಸದ್ಯ ಬಾಲಕಿಯನ್ನು ಚಿಕ್ಕೋಡಿ ಆಸ್ಪತ್ರೆ ದಾಖಲು ಮಾಡಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಪಿತೂರಿ ನಡೆಸಿದೆ: ಶ್ರೀನಿವಾಸ್ ಮಾನೆ

    crime

    ಆರೋಪಿ ಅನಿಲ್ ಈ ಹಿಂದೆಯೂ ಅನೇಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಜೈಲಿನಲ್ಲಿದ್ದಾಗ ಎರಡು ಬಾರಿ ಜೈಲಿನಿಂದಲೆ ಪರಾರಿಯಾಗಿ ಮತ್ತೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಅನಿಲ್ ಮತ್ತೆ ತನ್ನ ಹಳೆ ಚಾಳಿಯನ್ನೆ ಮುಂದುವರಿಸಿದ್ದು, ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಅಂಕಲಿ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಆರೋಪಿ ಅನೀಲ್‍ನನ್ನು ಬಂಧಿಸಿ ತನಿಖೆಯನ್ನ ಕೈಗೊಂಡಿದ್ದಾರೆ.

  • ಕುತ್ತಿಗೆ ತಿರುವಿ, ಕೊಂಬನ್ನು ಎಳೆದಾಡಿ ಕಾರ್ಕಳ ರಸ್ತೆಯಲ್ಲಿ ಗೋವು ಕಳ್ಳತನ

    ಕುತ್ತಿಗೆ ತಿರುವಿ, ಕೊಂಬನ್ನು ಎಳೆದಾಡಿ ಕಾರ್ಕಳ ರಸ್ತೆಯಲ್ಲಿ ಗೋವು ಕಳ್ಳತನ

    ಉಡುಪಿ: ಜಿಲ್ಲೆಯಲ್ಲಿ ಸದಾ ಚಾಲ್ತಿಯಲ್ಲಿರುವ ಗೋವು ಕಳ್ಳತನ ಇಂದೂ ಮುಂದುವರೆದಿದೆ. ಕಾರ್ಕಳ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಗೋವು ಕಳ್ಳತನವಾಗುತ್ತಿದ್ದು ಯುಗಾದಿ ದಿನವೂ ದುಷ್ಟರ ಅಟ್ಟಹಾಸ ಮುಂದುವರಿದಿದೆ.

    ಸರ್ಕಾರಕ್ಕೆ ಕಾನೂನು-ಸುವ್ಯವಸ್ಥೆಗೆ ಸವಾಲೆಸೆಯುವ ರೀತಿಯಲ್ಲಿ ರಾಜಾರೋಷವಾಗಿ ದನಕಳ್ಳತನವನ್ನು ದುಷ್ಕರ್ಮಿಗಳು ಉಡುಪಿ ಜಿಲ್ಲೆಯಲ್ಲಿ ಮುಂದುವರೆಸಿದ್ದಾರೆ. ಬೆಳಗ್ಗಿನ ಜಾವ 2.45ಕ್ಕೆ ದುಬಾರಿ ಕಾರಿನಲ್ಲಿ ಬಂದ ಗೋಕಳ್ಳರು ರಸ್ತೆ ಬದಿಯಲ್ಲಿದ್ದ ನಾಲ್ಕೈದು ದನಗಳನ್ನು ಕಳ್ಳತನ ಮಾಡಿದ್ದಾರೆ. ಈ ಪೈಕಿ ಒಂದು ದನ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಎಚ್‍ಡಿಕೆ ರಾಜಕೀಯ ಜೀವನವೇ ಒಂದು ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ: ಬಿಜೆಪಿ ಕಿಡಿ

    ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಗಳಿಗೆ ಕದೀಮರು ಹಿಂಡಿ ಆಸೆ ತೋರಿಸಿದ್ದಾರೆ. ಬಕೆಟ್‍ನಲ್ಲಿ ಇದ್ದ ಹಿಂಡಿಯನ್ನು ಹಸು ತಿನ್ನುವ ಸಂದರ್ಭ ಅಮಾನುಷವಾಗಿ ಕುತ್ತಿಗೆಯನ್ನು ತಿರುವಿ, ಕೊಂಬು ಹಿಡಿದು ಎಳೆದಾಡಿ ಕಾರಿನ ಹಿಂಬದಿ ಸಿಟಿಗೆ ಹಸುವನ್ನು ತುಂಬಿಸಿದ್ದಾರೆ. ಕ್ಷಣಮಾತ್ರದಲ್ಲಿ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಉಡುಪಿ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಗೋ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ನಗರದಲ್ಲಿ ಎಗ್ಗಿಲ್ಲದೆ ಗೋವು ದರೋಡೆ ಪ್ರಕರಣಗಳು ನಡೆಯುತ್ತಿದ್ದರೂ, ಪೊಲೀಸರು ಈವರೆಗೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಬಹಳ ಸಂಶಯಕ್ಕೆ ಕಾರಣವಾಗಿದೆ.

    ಮಾರಕಾಸ್ತ್ರಗಳನ್ನು ತೋರಿಸಿ, ಐಷಾರಾಮಿ ಕಾರುಗಳನ್ನು ಬಳಸಿ, ಗ್ರಾಮೀಣ ಪ್ರದೇಶದಲ್ಲಿರುವ ಮನೆಗಳಿಗೆ ಗೋಕಳ್ಳರು ದಾಳಿ ಮಾಡುತ್ತಿದ್ದಾರೆ. ಹಟ್ಟಿಗೆ ನುಗ್ಗಿ ದನಗಳನ್ನು ಕದ್ದೊಯ್ಯುತ್ತಿದ್ದಾರೆ. ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಹಲವು ಕಡೆ ಆಹೋರಾತ್ರಿ ಪ್ರತಿಭಟನೆಗಳು ನಡೆದರೂ, ಗೋ ಕಳ್ಳತನ ಮಾಡುವವರ ಬಗ್ಗೆ ನಿಖರ ಮಾಹಿತಿಯಿದ್ದರೂ ಕಠಿಣ ಕ್ರಮ ಕೈಗೊಳ್ಳದಿರುವ ದರ ಬಗ್ಗೆ ಬಲವಾದ ಸಂಶಯವಿದೆ. ರಕ್ಷಕ ವರ್ಗ ಕೂಡ ಇದರಲ್ಲಿ ಶಾಮಿಲ್ ಆಗಿರುವ ಬಗ್ಗೆ ಗುಮಾನಿ ಇದೆ ಎಂದು ಕಾರ್ಕಳದ ಹಿಂದೂಜಾಗರಣ ವೇದಿಕೆಯ ಕಾರ್ಯಕರ್ತ ಉಮೇಶ್ ಬಂಗ್ಲೆಗುಡ್ಡೆ ಹೇಳಿದ್ದಾರೆ.

    ಸರ್ಕಾರ, ಮತ್ತು ಪೊಲೀಸರ ವೈಫಲ್ಯತೆಗೆ ಹಿಂದೂ ಜಾಗರಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ಕಾರಿನಲ್ಲಿ ಸಾಗಾಟವಾಗುತ್ತಿದ್ದ ದನ, ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಘಟನೆ ಬಗ್ಗೆ ಈವರೆಗೆ ಪ್ರಕರಣ ದಾಖಲಾಗಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯನ್ನು ರಾಜ್ಯ ಸರ್ಕಾರ ಜಾರಿಗೆ ತಂದರೂ ಅದನ್ನು ಅನುಷ್ಠಾನ ಮಾಡದೇ ಇರುವುದು ವಿಪರ್ಯಾಸ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

  • ಕಳವುಗೈದ ಹಣದ ಹಂಚಿಕೆ ವಿಚಾರವಾಗಿ ಕಳ್ಳನನ್ನೇ ಕೊಂದ ಮತ್ತೊಬ್ಬ ಕಳ್ಳ

    ಕಳವುಗೈದ ಹಣದ ಹಂಚಿಕೆ ವಿಚಾರವಾಗಿ ಕಳ್ಳನನ್ನೇ ಕೊಂದ ಮತ್ತೊಬ್ಬ ಕಳ್ಳ

    ಚಿಕ್ಕಬಳ್ಳಾಪುರ: ಕಳ್ಳತನ ಮಾಡಿರುವ ಹಣ ಹಂಚಿಕೆ ವಿಚಾರವಾಗಿ ನಡೆದ ವಾಗ್ವಾದ ಮತ್ತೊಬ್ಬ ಕಳ್ಳನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರು ಮೂಲದ 35 ವರ್ಷದ ಸೈಯದ್ ಉಮರ್ ಕೊಲೆಯಾದವನು. ಇನ್ನೂ ಈತನ ಸ್ನೇಹಿತ ಜಾಫರ್ ತನ್ನ ಸಹಚರರಾದ ಶೌಕಾತ್ ಖಾನ್, ಮೌಲಾ, ಮುಬಾರಕ್ ಜೊತೆ ಸೇರಿ ಕೃತ್ಯ ಎಸಗಿದ್ದಾನೆ.

    BRIBE

    ಕಳವು ಪ್ರಕರಣದ 13,000 ಹಣವನ್ನು ಕೊಲೆಯಾದ ಉಮರ್, ಜಾಫರ್‌ಗೆ ಕೊಡಬೇಕಿತ್ತು. ಹೀಗಾಗಿ ಉಮರ್ ನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿದ ಜಾಫರ್ ಹಣಕ್ಕಾಗಿ ಒತ್ತಾಯಿಸಿದ್ದಾರೆ. ಈ ವೇಳೆ ಕೊಲೆಯಾದ ಉಮರ್, ಶಿಡ್ಲಘಟ್ಟ ಪಟ್ಟಣದಲ್ಲಿ ತನ್ನ ತಮ್ಮ ಸೈಯದ್ ಜಭೀ ಬಳೀ ಹಣ ಕೊಡಿಸುವುದಾಗಿ ಹೇಳಿ ಅಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಶಿಡ್ಲಘಟ್ಟಕ್ಕೆ ಬಂದಾಗ ಜಾಫರ್ ಬಳಿ ಬಂದ ಸೈಯದ್ ಜಭೀ ತನ್ನ ಬಳಿಯೂ ಹಣ ಇಲ್ಲ ಅಂತ ಹೇಳಿದ್ದಾನೆ. ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

    ಆಗ ಆತನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಜಾಫರ್ ಮತ್ತು ಅವನ ಸಹಚರರು ಕಾರಿನಲ್ಲಿ ನಂದಿಬೆಟ್ಟದ ಕ್ರಾಸ್‍ನ ನೀಲಗಿರಿ ತೋಪು ಬಳಿ ಕರೆದೊಯ್ದಿದ್ದಾರೆ. ಅಲ್ಲದೆ ಅಲ್ಲಿ ಇಬ್ಬರ ಮೇಲೂ ಹಲ್ಲೆ ಮಾಡುತ್ತಾರೆ. ತದನಂತರ ಅಲ್ಲಿಂದ ಶಿಡ್ಲಘಟ್ಟದ ಕಡೆಗೆ ಬರುವಾಗ ಮೂತ್ತೂರು ಗ್ರಾಮದ ಬಳಿ ಪೊಲೀಸರು ಹಿಂಬಾಲಿಸುತ್ತಿದ್ದಾರೆ ಅಂತ ತಿಳಿದು ಇಬ್ಬರನ್ನ ಕಾರಿನಿಂದ ಕೆಳಗಿಳಿಸಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಇದನ್ನೂ ಓದಿ: ತಂದೆಯ ಕ್ಲೋಸ್ ಫ್ರೆಂಡ್ ಹೇಳಿ ಶಾಲೆಯ ವಾಶ್‍ರೂಂನಲ್ಲೇ ಬಾಲಕಿಯ ಅತ್ಯಾಚಾರ!

    POLICE JEEP

    ಈ ವೇಳೆ ಹಲ್ಲೆಗೊಳಗಾಗಿದ್ದ ಉಮರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದು ತಮ್ಮ ಸೈಯದ್ ಜಭೀ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಜಾಫರ್ ಹಾಗೂ ಆತನ ಸಹಚರರಾದ ಶೌಕಾತ್ ಖಾನ್, ಮೌಲಾ, ಮುಬಾರಕ್‍ರನ್ನು ಬಂಧಿಸಿದ್ದಾರೆ.

  • 60 ಸೆಕೆಂಡ್‍ನಲ್ಲಿ ರಾಯಲ್ ಎನ್‍ಫೀಲ್ಡ್ ಕದಿಯೋದನ್ನು ತೋರಿಸಿಕೊಟ್ಟ ಖತರ್ನಾಕ್ ಕಳ್ಳ..!

    60 ಸೆಕೆಂಡ್‍ನಲ್ಲಿ ರಾಯಲ್ ಎನ್‍ಫೀಲ್ಡ್ ಕದಿಯೋದನ್ನು ತೋರಿಸಿಕೊಟ್ಟ ಖತರ್ನಾಕ್ ಕಳ್ಳ..!

    ನವದೆಹಲಿ: ರಾಯಲ್ ಎನ್‍ಫೀಲ್ಡ್ ಬೈಕ್ ಅನ್ನು ಕೇವಲ 60 ಸೆಕೆಂಡುಗಳಲ್ಲಿ ಕದಿಯುವುದು ಹೇಗೆ? ಎಂಬುವುದನ್ನು ಕಳ್ಳನೊಬ್ಬ ತನ್ನ ಕೈಚಳಕವನ್ನು ವೀಡಿಯೋವೊಂದರಲ್ಲಿ ತೋರಿಸಿದ್ದಾನೆ.

    2009ರಲ್ಲಿ ಪರಿಚಯಿಸಲಾದ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಶ್ರೀಮಂತರ ಬೈಕ್ ಎಂದೇ ಪ್ರತೀತಿ ಪಡೆದಿದೆ. ಎಲ್ಲಾ ವಯಸ್ಸಿನ ಜನರಲ್ಲಿ ಜನಪ್ರಿಯವಾದ ಈ ಬೈಕ್‍ಗೆ ಮಾರುಕಟ್ಟೆಯಲ್ಲೂ ಸಹ ಸಾಕಷ್ಟು ಬೇಡಿಕೆಯಿದೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ

    ರಾಯಲ್ ಎನ್‍ಫೀಲ್ಡ್ ಮೋಟಾರ್ ಸೈಕಲ್‍ಗಳು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ ಕಳ್ಳರ ನಡುವೆ ಜನಪ್ರಿಯ ಆಯ್ಕೆಯಾಗಿವೆ. ಈ ವೀಡಿಯೊದಲ್ಲಿರುವ ಕಳ್ಳನು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್‍ನ ಬೀಗವನ್ನು 60 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಹೇಗೆ ಒಡೆಯುವುದು ಎಂಬುದನ್ನು ತೋರಿಸಿದ್ದಾನೆ. ಇದನ್ನೂ ಓದಿ: ಮದ್ಯದ ಜೊತೆಗೆ ನೀರಿನ ಬಾಟ್ಲಿಗೆ ನಡೆದ ಗಲಾಟೆ ಕ್ಯಾಶಿಯರ್ ಕೊಲೆಯಲ್ಲಿ ಅಂತ್ಯ

     ವೀಡಿಯೋದಲ್ಲಿ ಏನಿದೆ..?
    ಕಳ್ಳ ಲಾಕ್ ಆಗಿರುವ ಕ್ಲಾಸಿಕ್ 350 ಅನ್ನು ಕದಿಯಲು 60 ಸೆಕೆಂಡ್‍ಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿದ್ದಾನೆ. ಕ್ಲಾಸಿಕ್ 350 ಅನ್ನು ಕೀ ಇಲ್ಲದೆ ಎಂಜಿನ್ ಅನ್ನು ಹೇಗೆ ಪ್ರಾರಂಭಿಸುವುದನ್ನು ಪೊಲೀಸರಿಗೆ ತೋರಿಸುತ್ತಿದ್ದಾನೆ. ಶಂಕಿತ ಕಳ್ಳನು ಪೊಲೀಸ್ ಕಸ್ಟಡಿಯಲ್ಲಿದ್ದು, ರಾಯಲ್ ಎನ್‍ಫೀಲ್ಡ್‌ನ ಬೀಗವನ್ನು ಹೇಗೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂಬುದನ್ನು ತನಿಖಾಧಿಕಾರಿಗಳು ಕುತೂಹಲದಿಂದ ನೋಡುತ್ತಿದ್ದಾರೆ.

    ಬೈಕ್‍ನ ಹ್ಯಾಂಡಲ್‍ನ್ನು ಯಾವ ದಿಕ್ಕಿನಲ್ಲಿ ಸವಾರ ಲಾಕ್ ಮಾಡಿರುತ್ತಾನೆಯೋ ಅದರ ವಿರುದ್ಧ ದಿಕ್ಕಿನಲ್ಲಿ ಕಳ್ಳನು ಬಲವಾಗಿ ಹ್ಯಾಂಡಲ್‌ಗೆ ಒದೆಯುತ್ತಾನೆ. ಹ್ಯಾಂಡಲ್ ಲಾಕ್ ಮುರಿದ ನಂತರ ಬ್ಯಾಟರಿ ಟರ್ಮಿನಲ್‍ಗಳಿಗೆ ಲಗತ್ತಿಸಲಾದ ಹೆಡ್‍ಲೈಟ್‍ನ ಹಿಂದೆ ಮರೆಮಾಡಲಾಗಿರುವ ಇಗ್ನಿಷನ್ ವೈರ್‌ನ್ನು ಮತ್ತು ಫ್ಯೂಸ್ ಕನೆಕ್ಟರ್ ಅನ್ನು ಕಳ್ಳನು ಕತ್ತರಿಸುತ್ತಾನೆ. ನಂತರದಲ್ಲಿ ಕತ್ತರಿಸಿದ ಆ ಎರಡು ಕೇಬಲ್‍ಗಳನ್ನು ಮರುಸಂಪರ್ಕಿಸಿದ ನಂತರ, ಕಳ್ಳನು ಬ್ಯಾಟರಿ ಚಾಲಿತ ಸ್ಟಾರ್ಟರ್‌ನೊಂದಿಗೆ ಬೈಕ್ ಅನ್ನು ಪ್ರಾರಂಭಿಸಿದನು. ಕೀ ಇಲ್ಲದೇ ಬೈಕ್ ಸ್ಟಾರ್ಟ್ ಮಾಡಿದ ಕಳ್ಳನ ಕೈಚಳಕವನ್ನು ನೋಡಿ ಪೊಲೀಸ್ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.